TATA: ಅಖಾಡಕ್ಕೆ ಟಾಟಾದ ಹೊಸ ಹುಲಿ..

ಟಾಟಾ ಮೋಟಾರ್ಸ್ (Tata Motors) ವಿಶ್ವಾಸಾರ್ಹ ವಾಹನ ತಯಾರಕ ಕಂಪನಿಯಾಗಿ ಹೊರಹೊಮ್ಮಿದೆ. ದೇಶೀಯವಾಗಿ 1991 ರಲ್ಲಿ ಮೊದಲ ಬಾರಿಗೆ 'ಸಿಯೆರಾ' ಕಾರನ್ನು ಪರಿಚಯಿಸಲಾಗಿತ್ತು. ಅಂದಿಗೆ ಜನಪ್ರಿಯ ಎಸ್‌ಯುವಿಯಾಗಿ ಹೊರಹೊಮ್ಮಿತ್ತು. ಸರಿ ಸುಮಾರು 1 ದಶಕಗಳ ಕಾಲ ಭಾರೀ ಸಂಖ್ಯೆಯಲ್ಲಿ ಮಾರಾಟವಾಗಿತ್ತು. ಆದರೆ, 2003 ರಲ್ಲಿ ನಾನಾ ಕಾರಣಗಳಿಗೆ ಈ ಕಾರಿನ ಮಾರಾಟವನ್ನು ಸ್ಥಗಿತಗೊಳಿಸಲಾಯಿತ್ತು. ಸದ್ಯ, ಇದೇ 'ಸಿಯೆರಾ' ಹೊಸ ರೂಪದಲ್ಲಿ ಬಿಡುಗಡೆಗೊಳ್ಳಲು ಹಣಿಯಾಗಿದೆ.

ರೆನಾಲ್ಟ್ ಬ್ರಹ್ಮಾಸ್ತ್ರ ಬಿಡುಗಡೆಗೆ ಸಜ್ಜು: ಪಕ್ಕಾ ಮಾರುಕಟ್ಟೆ ಶೇಕ್

ಫ್ರೆಂಚ್ ಕಾರು ತಯಾರಕ ರೆನಾಲ್ಟ್ ಗ್ರೂಪ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ರೆನಾಲ್ಟ್ ಇಂಡಿಯಾ, ಇಂದು ಅಧಿಕೃತವಾಗಿ ತನ್ನ ಬಹುನಿರೀಕ್ಷಿತ ಹೊಸ ಎಸ್‌ಯುವಿ ಐಕಾನಿಕ್ - ಡಸ್ಟರ್ (Renault Duster) ನ ಪರಂಪರೆಯನ್ನು ಮುಂದುವರಿಸುವುದಾಗಿ ಘೋಷಿಸಿದೆ. ಹೌದು, ರೆನಾಲ್ಟ್ ಅಧಿಕೃತವಾಗಿ ಭಾರತದಲ್ಲಿ ತನ್ನ ಐಕಾನಿಕ್ ಡಸ್ಟರ್ ಎಸ್‌ಯುವಿಯನ್ನು ಜನವರಿ 26, 2026 ರ ಗಣರಾಜ್ಯೋತ್ಸವಕ್ಕೆ ಅದ್ದೂರಿಯಾಗಿ ಅನಾವರಣಗೊಳಿಸುವುದಾಗಿ ಹೇಳಿದೆ. ಈ ಘೋಷಣೆಯು ಭಾರತೀಯ ಆಟೋಮೋಟಿವ್ ಉತ್ಸಾಹಿಗಳಿಗೆ ಮಹತ್ವದ ಕ್ಷಣವಾಗಿದ್ದು, ಕಂಪನಿಯು "ಎಸ್‌ಯುವಿಯನ್ನು ಪುನರ್ವಿಮರ್ಶಿಸಲು" ಗ್ರಾಹಕರನ್ನು ಆಹ್ವಾನಿಸುತ್ತಿರುವುದಾಗಿ ಪ್ರಕಟಣೆಯಲ್ಲಿ ಹೇಳಿದೆ.

226 ಕಿ.ಮೀ ಮೈಲೇಜ್: ಬೆಲೆಯೂ ಅಗ್ಗ! ಇನ್ನು 4 ತಿಂಗಳಲ್ಲಿ..

ಟಿವಿಎಸ್ ಮೋಟಾರ್ (TVS Motor), ವಿಶ್ವಾಸಾರ್ಹ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಹೊರಹೊಮ್ಮಿದೆ. ದೇಶೀಯವಾಗಿ ಜೂಪಿಟರ್ (Jupiter) ಸ್ಕೂಟರ್‌ನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಗ್ರಾಹಕರು ಕೂಡ ನಾ ಮುಂದು - ತಾಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಇದೇ ಸ್ಕೂಟರ್‌ನ್ನು 'ಸಿಎನ್‌ಜಿ' ರೂಪದಲ್ಲೂ ಬಿಡುಗಡೆಗೊಳಿಸಲು ಕಂಪನಿಯು ಎಲ್ಲ ರೀತಿಯ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ. ಅತಿ ಶೀಘ್ರದಲ್ಲೇ 'ಜೂಪಿಟರ್ ಸಿಎನ್‌ಜಿ'ಯನ್ನು ಪರಿಚಯಿಸಲಾಗುತ್ತದೆ. ಬನ್ನಿ.. ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ದ್ವಿಚಕ್ರ - ತ್ರಿಚಕ್ರ ವಾಹನಗಳಿಗೆ ಫಾಸ್ಟ್-ಚಾರ್ಜಿಂಗ್ ಬಿಡುಗಡೆ

EV ಚಾರ್ಜಿಂಗ್ ಮೂಲಸೌಕರ್ಯ ಒದಗಿಸುವಲ್ಲಿ ಪ್ರಮುಖ ಕಂಪನಿಯಾಗಿರುವ ಇವ್ಯಾಂಪ್ (EVamp), ಭಾರತದ ಅತಿದೊಡ್ಡ EV ವಿಭಾಗಗಳಲ್ಲಿನ ಎರಡು ನಿರ್ಣಾಯಕ ಸವಾಲುಗಳನ್ನು ನಿವಾರಿಸಲು ವಿನ್ಯಾಸಗೊಳಿಸಲಾದ LECCS (ಲೈಟ್ ಎಲೆಕ್ಟ್ರಿಕ್ ಕಂಬೈನ್ಡ್ ಚಾರ್ಜಿಂಗ್ ಸಿಸ್ಟಮ್) ಚಾರ್ಜರ್‌ಗಳನ್ನು ಅನಾವರಣಗೊಳಿಸಿದೆ. ಇದಕ್ಕಾಗಿ ಪ್ರಮುಖ ಚಾರ್ಜ್ ಪಾಯಿಂಟ್ ಆಪರೇಟರ್‌ಗಳ (CPOs) ಸಹಯೋಗದೊಂದಿಗೆ ದೊಡ್ಡ ಪ್ರಮಾಣದ ನಿಯೋಜನೆಗಳನ್ನು ಪ್ರಾರಂಭಿಸಲಿದೆ. ಮುಂದಿನ 12 ತಿಂಗಳುಗಳಲ್ಲಿ, ಕಂಪನಿಯು ಪಶ್ಚಿಮ, ದಕ್ಷಿಣ ಮತ್ತು ಉತ್ತರ ಭಾರತದಾದ್ಯಂತ ವಿಸ್ತರಿಸುವ ಗುರಿಯನ್ನು ಹೊಂದಿರುವುದಾಗ ತಿಳಿಸಿದೆ.
Advertisement

ಸರ್.. ಇದು ಟಾಟಾ ನ್ಯಾನೋ ಅಲ್ಲ, ಅತಿ ಶೀಘ್ರದಲ್ಲೇ ಹೊಸ..

ವಿಯೆಟ್ನಾಂ ಮೂಲದ ವಿನ್‌ಫಾಸ್ಟ್ (VinFast), ಜಾಗತಿಕ ಮಟ್ಟದಲ್ಲಿ ಪ್ರಖ್ಯಾತ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ಇದೇ ಸೆಪ್ಟೆಂಬರ್‌ನಲ್ಲಿ ನೂತನ ವಿಎಫ್6 & ವಿಎಫ್7 ಎಲೆಕ್ಟ್ರಿಕ್ ಎಸ್‌ಯುವಿಗಳನ್ನು ಮಾರಾಟಕ್ಕೆ ತಂದಿತ್ತು. ಈಗ ಮೊದಲ ಬ್ಯಾಚ್‍ನ ಕಾರುಗಳ ವಿತರಣೆಯನ್ನು ಪ್ರಾರಂಭಿಸಿದೆ. ಸದ್ಯ, ಕಂಪನಿಯು ಮತ್ತೊಂದು ನೂತನ ಕಾರನ್ನು ಬಿಡುಗಡೆಗೊಳಿಸಲು ತಯಾರಿ ಮಾಡಿಕೊಳ್ಳುತ್ತಿದೆ. ಎಲ್ಲವು ಅಂದುಕೊಂಡಂತೆ ನಡೆದರೆ, ಶೀಘ್ರದಲ್ಲೇ 'ವಿಎಫ್3' ಹೆಸರಿನ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್‌ನ್ನು ಪರಿಚಯಿಸಲಾಗುತ್ತದೆ.

ಸರ್ಕಾರಿ ಅನುಮೋದಿತ ಹೊಸ 7-ಸೀಟರ್ CNG ಕಾರು ಬಿಡುಗಡೆ

ಕಿಯಾ ಕಂಪನಿಯು ಭಾರತದಲ್ಲಿ ಕ್ಯಾರೆನ್ಸ್ MPV ಗಾಗಿ CNG ಆಯ್ಕೆಯನ್ನು ಬಿಡುಗಡೆ ಮಾಡಿದೆ, ಇದರ ಬೆಲೆ ರೂ. 11.77 ಲಕ್ಷ (ಎಕ್ಸ್-ಶೋರೂಂ) ದಿಂದ ಪ್ರಾರಂಭವಾಗುತ್ತದೆ. ಇದನ್ನು ಲೊವಾಟೋ ಡೀಲರ್-ಫಿಟೆಡ್ CNG ಕಿಟ್ ಆಗಿ ನೀಡಲಾಗುತ್ತಿದೆ. ಹೊಸ CNG ಕಿಟ್ ಸರ್ಕಾರಿ ಅನುಮೋದನೆ ಮತ್ತು 3 ವರ್ಷಗಳು ಅಥವಾ 1 ಲಕ್ಷ ಕಿಲೋಮೀಟರ್‌ಗಳವರೆಗೆ (ಯಾವುದು ಮೊದಲೋ ಅದು) ಮಾನ್ಯವಾಗಿರುವ ಮೂರನೇ ವ್ಯಕ್ತಿಯ ವಾರೆಂಟಿಯೊಂದಿಗೆ ಬರುತ್ತದೆ. ಈ CNG ಆಯ್ಕೆಯು ಹೆಚ್ಚಾಗಿ ಫ್ಲೀಟ್ ಆಪರೇಟರ್‌ಗಳು ಮತ್ತು ಭಾರತದಲ್ಲಿ ಇಂಧನ-ಸಮರ್ಥ ಮತ್ತು ವೈಶಿಷ್ಟ್ಯ-ಸಮೃದ್ಧ MPV ಯನ್ನು ಹುಡುಕುತ್ತಿರುವವರಿಗೆ ಬೆಸ್ಟ್ ಆಯ್ಕೆಯಾಗಿದೆ.

Royal Enfield: ಬೆಲೆ ಇಳಿಕೆ.. ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಗೆ..

ರಾಯಲ್ ಎನ್‌ಫೀಲ್ಡ್ (Royal Enfield) ಜಗಮೆಚ್ಚಿದ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಮನೆ ಮಾತಾಗಿದೆ. ಜಿಎಸ್‌ಟಿ ಪರಿಷ್ಕರಣೆ ಬಳಿಕ, ಕಂಪನಿಯ ಮೋಟಾರ್‌ಸೈಕಲ್‌ಗಳ ಬೆಲೆ ಇಳಿಕೆಯಾಗದೆ. ಇದು ವರವಾಗಿದ್ದು, ಈ ಸೆಪ್ಟೆಂಬರ್ ತಿಂಗಳು 'ರಾಯಲ್ ಎನ್‌ಫೀಲ್ಡ್' ಬೈಕ್‌ಗಳು ಭಾರೀ ಸಂಖ್ಯೆಯಲ್ಲಿ ಮಾರಾಟಗೊಂಡಿವೆ. ಒಟ್ಟು 1,13,573 ಯುನಿಟ್‌ಗಳನ್ನು ಗ್ರಾಹಕರಿಗೆ ವಿತರಣೆ ಮಾಡಲಾಗಿದೆ. 2024ರ ಇದೇ ಅವಧಿಯಲ್ಲಿ 79,326 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿಸಂಖ್ಯೆಯನ್ನು ವಿಶ್ಲೇಷಣೆ ಮಾಡಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 43% ಪ್ರಗತಿಯಾಗಿದೆ.

Ducati: ಡುಕಾಟಿ ಮಲ್ಟಿಸ್ಟ್ರಾಡಾ V2 ಮೋಟಾರ್‌ಸೈಕಲ್ ಬಿಡುಗಡೆ

ಐಷಾರಾಮಿ ಮೋಟಾರ್‌ಸೈಕಲ್ ಬ್ರಾಂಡ್ ಡುಕಾಟಿ ಇಂದು ಹೊಚ್ಚ ಹೊಸ 2025 ಮಲ್ಟಿಸ್ಟ್ರಾಡಾ V2 (2025 Multistrada V2) ಅನ್ನು ಬಿಡುಗಡೆ ಮಾಡಿದೆ. ಇದು ಟ್ವಿನ್-ಸಿಲಿಂಡರ್ ಎಂಜಿನ್‌ನ ಬಹುಮುಖತೆಯನ್ನು ಇಷ್ಟಪಡುವವರಿಗಾಗಿ ವಿಶೇಷವಾಗಿ ವಿನ್ಯಾಸಗೊಂಡಿದ್ದು, ಎಲ್ಲಾ ರೀತಿಯ ರಸ್ತೆಗಳಲ್ಲಿ ಉಲ್ಲಾಸಕರ ಸವಾರಿ ಅನುಭವ ನೀಡುತ್ತದೆ. ಇದು ತನ್ನ ವಿಭಾಗದಲ್ಲಿಯೇ ಮುಂದುವರಿದ ತಂತ್ರಜ್ಞಾನ, ಅತ್ಯಾಧುನಿಕ ರೈಡರ್ ಅಸಿಸ್ಟ್‌ಗಳು ಮತ್ತು ಸಾಟಿಯಿಲ್ಲದ ಪವರ್ ಹೊಂದಿದೆ ಎಂದು ಕಂಪನಿ ಹೇಳಿದೆ.
Advertisement

ಕಲ್ಲುಬಂಡೆಯಂತಹ ಕಾರಿದು.. 9.66 ಲಕ್ಷ, ಆದ್ರೂ ಈ TATA SUV..

ಟಾಟಾ ಕರ್ವ್ (Tata Curvv) ಪ್ರಮುಖ ಕೂಪೆ ಎಸ್‌ಯುವಿಯಾಗಿದೆ. ಇದು ತುಂಬಾ ಅಚ್ಚುಕಟ್ಟಾದ ವಿನ್ಯಾಸ ಹೊಂದಿದ್ದು, ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಆದರೂ ಈ ಕಾರಿನ ಮಾರಾಟ ಸಂಖ್ಯೆ ದಿನದಿಂದ ದಿನಕ್ಕೆ ಕುಸಿತವಾಗುತ್ತಿದೆ. ಅದು ಈ ಸೆಪ್ಟೆಂಬರ್ ತಿಂಗಳಲ್ಲೂ ಮುಂದುವರಿದಿದೆ. ಒಟ್ಟು 1,566 ಯುನಿಟ್‌ಗಳನ್ನು ಮಾತ್ರ ಗ್ರಾಹಕರಿಗೆ ವಿತರಿಸಲಾಗಿದೆ. 2024ರ ಇದೇ ಅವಧಿಯಲ್ಲಿ4,763 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿಅಂಶಗಳನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ -67.12 ಇಳಿಮುಖವಾಗಿದೆ.

7-ಸೀಟರ್.. ಬೆಲೆ ಮೊದಲೇ ಅಗ್ಗ, ಭರ್ಜರಿ ಮೈಲೇಜ್.. ಮಿಡಲ್ ಕ್ಲಾಸ್..

ಭಾರತದಲ್ಲಿ ಮಧ್ಯಮ ವರ್ಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದು, ತಮ್ಮ ಕುಟುಂಬಕ್ಕಾಗಿ ಹೊಚ್ಚ ಹೊಸ ಕಾರು ಖರೀದಿಸಬೇಕೆಂಬ ಬಹುದೊಡ್ಡ ಆಸೆಯಿರುತ್ತದೆ. ನೀವು ನೂತನ ಕಾರೊಂದನ್ನು ಮನೆಗೆ ತರಲು ಆಲೋಚಿಸಿದ್ದೀರಾ.. ಹಾಗಾದರೆ, ಕಿಯಾ ಕ್ಯಾರೆನ್ಸ್ ಕ್ಲಾವಿಸ್, ಮಾರುತಿ ಸುಜುಕಿ ಎರ್ಟಿಗಾ, ಟೊಯೊಟಾ ರೂಮಿಯನ್, ರೆನಾಲ್ಟ್ ಟ್ರೈಬರ್ ಹಾಗೂ ಮಾರುತಿ ಸುಜುಕಿ ಇಕೋ ಎಂಪಿವಿಗಳು ಅತ್ಯುತ್ತಮ ಆಯ್ಕೆಯಾಗಲಿವೆ. ನಾವಿಲ್ಲಿ ಈ ಕಾರುಗಳ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಸಂಕ್ಷಿಪ್ತವಾಗಿ ತಿಳಿಸಿಕೊಟ್ಟಿದ್ದೇವೆ.

ಮಾರುಕಟ್ಟೆ ಶೇಕ್ ಮಾಡಲು 5 ಹೊಸ SUV ಗಳು ಬಿಡುಗಡೆಗೆ ಸಜ್ಜು

2025 ರ ಕೊನೆಯಲ್ಲಿ ಮತ್ತು 2026 ರ ಆರಂಭದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲು ಟಾಪ್ - 5 ಎಸ್‌ಯುವಿಗಳು ಸಜ್ಜಾಗಿವೆ. ಈ ಮಾಡಲ್‌ಗಳು ಆಕರ್ಷಕ ಸ್ಟೈಲಿಂಗ್, ಫೀಚರ್ - ಪ್ಯಾಕ್ಡ್ ಇಂಟೀರಿಯರ್ ಮತ್ತು ಬಲವಾದ ಸುರಕ್ಷತಾ ರೇಟಿಂಗ್‌ನೊಂದಿಗೆ ಬರುವ ನಿರೀಕ್ಷೆಯಿದೆ. ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ರೂ. 10 ಲಕ್ಷದಿಂದ ರೂ. 12 ಲಕ್ಷ (ಎಕ್ಸ್ - ಶೋರೂಂ)ದೊಳಗೆ ದರವಿರಲಿದೆ. ಮುಂಬರಲಿರುವ ಈ ಕೈಗೆಟುಕುವ ಬೆಲೆಯ ಎಸ್‌ಯುವಿಗಳು ಯಾವುವು? ಅವುಗಳ ವಿಶೇಷತೆಗಳೇನು ಎಂಬುದನ್ನು ಇಲ್ಲಿ ತಿಳಿಯೋಣ.

ಓಲಾ ಎಲೆಕ್ಟ್ರಿಕ್ ಹೈಪರ್ ಸರ್ವಿಸ್

ಓಲಾ ಎಲೆಕ್ಟ್ರಿಕ್ (Ola Electric) ಇಂದು ಭಾರತದಲ್ಲಿ ತನ್ನ ಹೈಪರ್ ಸರ್ವೀಸ್ ಅನ್ನು ಮುಕ್ತ ವೇದಿಕೆಯಾಗಿ ವಿಸ್ತರಿಸುವುದಾಗಿ ಘೋಷಿಸಿದೆ. ಮೊದಲ ಬಾರಿಗೆ, ಓಲಾದ ನಿಜವಾದ ಬಿಡಿಭಾಗಗಳು, ರೋಗನಿರ್ಣಯ ಪರಿಕರಗಳು (Diagnostic tools) ಮತ್ತು ಸರ್ವೀಸ್ ತರಬೇತಿ ಮಾಡ್ಯೂಲ್‌ಗಳನ್ನು ಅದರ ಗ್ರಾಹಕರಿಗೆ ಮಾತ್ರವಲ್ಲದೆ ದೇಶಾದ್ಯಂತ ಸ್ವತಂತ್ರ ಗ್ಯಾರೇಜ್‌ಗಳು, ಮೆಕ್ಯಾನಿಕ್ ‌ಗಳು ಮತ್ತು ಫ್ಲೀಟ್ ಆಪರೇಟರ್‌ ಗಳಿಗೂ ಲಭ್ಯವಾಗುವಂತೆ ಮಾಡಲಾಗುತ್ತದೆ ಎಂದು ಓಲಾ ಪ್ರಕಟಣೆಯಲ್ಲಿ ತಿಳಿಸಿದೆ.
Advertisement

Mahindra: ಮಹೀಂದ್ರಾದಿಂದ ಹೊಸ SUVಗಳ ಬಿಡುಗಡೆಗೆ ಸಿದ್ಧತೆ

ಆನಂದ್ ಮಹೀಂದ್ರಾ ಮಾಲೀಕತ್ವದ ಮಹೀಂದ್ರಾ & ಮಹೀಂದ್ರಾ (Mahindra & Mahindra) ಜನಮೆಚ್ಚಿದ ವಾಹನ ತಯಾರಕ ಕಂಪನಿಯಾಗಿದೆ. ದೇಶೀಯವಾಗಿ ಹಲವು ಇಂಧನ ಹಾಗೂ ಎಲೆಕ್ಟ್ರಿಕ್ ಚಾಲಿತ ಕಾರುಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಸದ್ಯ, ಕಂಪನಿಯು ವಿವಿಧ ನೂತನ ಎಸ್‌ಯುವಿಗಳನ್ನು ಬಿಡುಗಡೆಗೊಳಿಸಲು ಕೂಡ ತಯಾರಿ ಮಾಡಿಕೊಳ್ಳುತ್ತಿದೆ. ಎಲ್ಲವು ಅಂದುಕೊಂಡಂತೆ ನಡೆದರೆ, 2026ರಲ್ಲಿ ಹೊಸ ತಲೆಮಾರಿನ ಎಕ್ಸ್‌ಯುವಿ 3ಎಕ್ಸ್ಒ ಹಾಗೂ 2027ರಲ್ಲಿ ಮಿನಿ ಸ್ಕಾರ್ಪಿಯೋವನ್ನು ಪರಿಚಯಿಸಲಿದೆ. ಬನ್ನಿ.. ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಅರಮನೆಯಂತಹ ಐಷಾರಾಮಿ ಕಾರು ಡೆಲಿವರಿ ಪಡೆದ ಪ್ರಸಿದ್ಧ ಗಾಯಕ

ತಮ್ಮ ಭಾವಪೂರ್ಣ ರಾಗಗಳು ಮತ್ತು ಪವರ್‌ ಹೌಸ್ ಪ್ರದರ್ಶನಗಳಿಗೆ ಹೆಸರುವಾಸಿಯಾದ ಪ್ರಸಿದ್ಧ ಸಂಯೋಜಕ ಮತ್ತು ಗಾಯಕ ಶಂಕರ್ ಮಹಾದೇವನ್ ಅವರು, ಎಂಜಿ ಮೋಟಾರ್‌ನ ಐಷಾರಾಮಿ ಕಾರಾಗಿರುವ MG M9 ಎಲೆಕ್ಟ್ರಿಕ್ ಕಾರನ್ನು ಡೆಲಿವರಿ ಪಡೆದು ಮನೆಗೆ ತಂದಿದ್ದಾರೆ. MG M9 ಮಹಾದೇವನ್ ಅವರ ಕ್ರಿಯಾತ್ಮಕ ವ್ಯಕ್ತಿತ್ವವನ್ನು ಸಂಪೂರ್ಣವಾಗಿ ಪ್ರತಿಬಿಂಬಿಸುತ್ತದೆ. ಈ ಕಾರು ಸಂಪ್ರದಾಯ ಮತ್ತು ತಂತ್ರಜ್ಞಾನ, ಸೃಜನಶೀಲತೆ ಮತ್ತು ವರ್ಗದ ಸರಾಗ ಸಮ್ಮಿಳನದ ಪ್ರತೀಕವಾಗಿದೆ. ಕಾರಿನ ಪ್ಲಶ್ ಇಂಟೀರಿಯರ್, ಕಮಾಂಡಿಂಗ್ ವಿನ್ಯಾಸ ಮತ್ತು ಅತ್ಯಾಧುನಿಕ ವೈಶಿಷ್ಟ್ಯಗಳು ಐಷಾರಾಮಿ ಅನುಭವವನ್ನು ನೀಡುತ್ತವೆ.

29 Km ಮೈಲೇಜ್.. ಫುಲ್ ಡಿಮ್ಯಾಂಡ್, ಹೊಸ ಮಾರುತಿ ವಿಕ್ಟೋರಿಸ್‌ಗೆ.

ಮಾರುತಿ ಸುಜುಕಿ ವಿಕ್ಟೋರಿಸ್ (Maruti Suzuki Victoris) ಪ್ರಮುಖ ಎಸ್‌ಯುವಿಯಾಗಿದೆ. ಸೆ.16 ರಂದು ಈ ಕಾರನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಲಾಗಿತ್ತು. 4,261 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿದೆ. ಇದು ರೂ.10.50 ಲಕ್ಷದಿಂದ ರೂ.19.99 ಲಕ್ಷ (ಎಕ್ಸ್-ಶೋರೂಂ) ದರವನ್ನು ಹೊಂದಿದೆ. 1.5-ಲೀ. ಮೈಲ್ಡ್ ಹೈಬ್ರಿಡ್ ಪೆಟ್ರೋಲ್, 1.5-ಲೀ. ಸ್ಟ್ರಾಂಗ್ ಹೈಬ್ರಿಡ್ (ಪೆಟ್ರೋಲ್+ಎಲೆಕ್ಟ್ರಿಕ್) ಹಾಗೂ 1.5-ಲೀ. ಸಿಎನ್‌ಜಿ ಎಂಜಿನ್‌ನ್ನು ಪಡೆದಿದೆ. 21 ರಿಂದ 29 ಕಿ.ಮೀವರಗೆ ಮೈಲೇಜ್ ಕೊಡುತ್ತದೆ. 5 ಆಸನಗಳನ್ನು ಒಳಗೊಂಡಿದೆ. 10.1 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಸನ್‌ರೂಫ್ ಹಾಗೂ ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಗಾಗಿ 6 ಏರ್‌ಬ್ಯಾಗ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಹಾಗೂ 360 ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ.

ಬಡವರ ಬಂಡಿ: ಸ್ಪೋರ್ಟಿ ಲುಕ್, 63 ಕಿ.ಮೀ ಮೈಲೇಜ್: ಆಧುನಿಕ ಫೀಚರ್ಸ್

2025 ಹೋಂಡಾ SP 125 (2025 Honda SP 125) ಭಾರತದಲ್ಲಿ ಹೆಚ್ಚು ಮಾರಾಟವಾಗುವ 125cc ಪ್ರಯಾಣಿಕ ಬೈಕ್ ಆಗಿದ್ದು, ಆಧುನಿಕ ತಂತ್ರಜ್ಞಾನ, ಅತ್ಯುತ್ತಮ ಮೈಲೇಜ್ ಮತ್ತು ತೊಂದರೆ ಮುಕ್ತ ನಗರ ಸವಾರಿಗೆ ಬೆಸ್ಟ್ ಆಯ್ಕೆಯಾಗಿದೆ. ಇದು ಬಜೆಟ್ ಬೆಲೆಯಲ್ಲಿ ಸುರಕ್ಷತೆ - ಪ್ರಜ್ಞೆಯುಳ್ಳ ಸವಾರರಿಗೂ ಸೂಕ್ತ ಆಯ್ಕೆಯಾಗಿದ್ದು, ವಿಶ್ವಾಸಾರ್ಹತೆ ಮತ್ತು ಪ್ರೀಮಿಯಂ ಪ್ರಯಾಣಿಕ ಅನುಭವವನ್ನು ನೀಡುತ್ತದೆ. ಪ್ರಸ್ತುತ ಎರಡು ವೇರಿಯೆಂಟ್‌ಗಳು ಮತ್ತು ಐದು ಆಧುನಿಕ ಬಣ್ಣಗಳ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ.
Advertisement

Toyota: 550 Km ರೇಂಜ್.. 5-ಸೀಟರ್, ಅತಿ ಶೀಘ್ರದಲ್ಲೇ ಟೊಯೊಟಾ..

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (Toyota Kirloskar Motor) ಜಗಮೆಚ್ಚಿದ ವಾಹನ ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಮೊಟ್ಟ ಮೊದಲ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲು ತಯಾರಿ ಮಾಡಿಕೊಳ್ಳುತ್ತಿದೆ. ಎಲ್ಲವು ಅಂದುಕೊಂಡಂತೆ ನಡೆದರೆ, ಅತಿ ಶೀಘ್ರದಲ್ಲೇ ಹೊಚ್ಚ ಹೊಸ ಅರ್ಬನ್ ಕ್ರೂಸರ್ ಇವಿ (Urban Cruiser EV) ಅದ್ದೂರಿಯಾಗಿ ಮಾರಾಟಕ್ಕೂ ಬರಲಿದೆ. ಬನ್ನಿ. ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಭಾರತದಲ್ಲಿ ಕಡಿಮೆ ಬೆಲೆಗೆ ಸಿಗುವ ಅತ್ಯುತ್ತಮ ಮೈಲೇಜ್ ಕಾರುಗಳು

2025 ರಲ್ಲಿ ಭಾರತದಲ್ಲಿ ರೂ.7 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಮೈಲೇಜ್ ನೀಡುವ ಕಾರುಗಳಲ್ಲಿ ಮಾರುತಿ ಸುಜುಕಿ ಹಾಗೂ ಟಾಟಾನ ಜನಪ್ರಿಯ ಕಾರುಗಳುಗಳು ಪ್ರಮುಖ ಪಾತ್ರ ವಹಿಸುತ್ತವೆ. ಮುಖ್ಯವಾಗಿ ಹ್ಯಾಚ್‌ಬ್ಯಾಕ್ ಮತ್ತು ಕಾಂಪ್ಯಾಕ್ಟ್ ಸೆಡಾನ್ ವಿಭಾಗಗಳಲ್ಲಿ ಇವು ಹೆಚ್ಚಿನ ಇಂಧನ ದಕ್ಷತೆ ಮತ್ತು ಕೈಗೆಟುಕುವ ಬೆಲೆಯನ್ನು ಹೊಂದಿವೆ. ಲೀಟರ್‌ಗೆ ಕನಿಷ್ಟ 20.52 ಕಿ.ಮೀ ಮೈಲೇಜ್ ನೀಡುತ್ತವೆ. ಭಾರತದಲ್ಲಿ ಪ್ರಸ್ತುತ ನಮಗೆ ಲಭ್ಯವಿರುವ ಕಡಿಮೆ ಬೆಲೆಗೆ ಸಿಗುವ ಬೆಸ್ಟ್ ಮೈಲೇಜ್ ಕಾರುಗಳ ಪಟ್ಟಿ ಇಲ್ಲಿದೆ.

65 ಕಿ.ಮೀ ಮೈಲೇಜ್.. ಬರೀ 63,000, ಈ ಜನಪ್ರಿಯ ಹೋಂಡಾ ಬೈಕ್‌ಗೆ..

ಹೋಂಡಾ ಶೈನ್ (Honda Shine) ಜಗಮೆಚ್ಚಿದ ಬೈಕ್ ಆಗಿದೆ. ನಗರ ಹಾಗೂ ಗ್ರಾಮೀಣ ಪ್ರದೇಶದ ಗ್ರಾಹಕರು ನಾ ಮುಂದು - ತಾ ಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಈ ಸೆಪ್ಟೆಂಬರ್ ತಿಂಗಳಲ್ಲೂ 'ಶೈನ್' ಭಾರೀ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಒಟ್ಟು 1,85,059 ಯುನಿಟ್‌ಗಳನ್ನು ಗ್ರಾಹಕರಿಗೆ ವಿತರಣೆ ಮಾಡಲಾಗಿದೆ. 2024ರ ಇದೇ ಅವಧಿಯಲ್ಲಿ 181,835 ಯುನಿಟ್‌ಗಳನ್ನು ಮಾರಲಾಯಿತ್ತು. ಈ ಅಂಕಿಸಂಖ್ಯೆಯನ್ನು ವಿಶ್ಲೇಷಣೆ ಮಾಡಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 1.77% ಬೆಳವಣಿಗೆಯಾಗಿದೆ.

10 ಲಕ್ಷಕ್ಕಿಂತ ಕಡಿಮೆ ಬೆಲೆಯ ಪವರ್‌ಫುಲ್ ಡೀಸೆಲ್ ಕಾರುಗಳು

ಮಾರುತಿ ಸುಜುಕಿಯಂತಹ ಪ್ರಮುಖ ವಾಹನ ತಯಾರಕರು ತಮ್ಮ ಶ್ರೇಣಿಯಿಂದ ಡೀಸೆಲ್ ಎಂಜಿನ್‌ಗಳನ್ನು ಹಂತಹಂತವಾಗಿ ತೆಗೆದುಹಾಕುತ್ತಿದ್ದರೂ, ಡೀಸೆಲ್ ಕಾರುಗಳಿಗೆ ಇನ್ನೂ ಕೆಲವರು ಬೇಡಿಕೆಯಿಡುತ್ತಿದ್ದಾರೆ. ದೇಶದ ಪ್ರಯಾಣಿಕ ವಾಹನ ಮಾರುಕಟ್ಟೆಯ ಅನೇಕ ಪ್ರಮುಖ ಕಂಪನಿಗಳು ಸಣ್ಣ ಮತ್ತು ಕೈಗೆಟುಕುವ ಡೀಸೆಲ್ ಕಾರುಗಳನ್ನು ಭಾರತದಲ್ಲಿ ಸ್ಥಗಿತಗೊಳಿಸಿದ್ದಾರೆ. ಆದರೂ, ಮಹೀಂದ್ರಾ, ಟಾಟಾ ಮೋಟಾರ್ಸ್ ಮುಂತಾದ ಕೆಲವು ಕಾರು ತಯಾರಕರು ಇನ್ನೂ ಭಾರತದಲ್ಲಿ ಡೀಸೆಲ್ ಕಾರುಗಳನ್ನು ರೂ.10 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. 2025 ರಲ್ಲಿ ಭಾರತದಲ್ಲಿ ಲಭ್ಯವಿರುವ ಟಾಪ್ 5 ಅತ್ಯಂತ ಕೈಗೆಟುಕುವ ಡೀಸೆಲ್ SUV ಕಾರುಗಳು ಇಲ್ಲಿವೆ.
Advertisement

ಸ್ಪೋರ್ಟಿ ಲುಕ್... ಹೆಚ್ಚಿನ ಮೈಲೇಜ್... ಬಜಾಜ್ ಪಲ್ಸರ್ NS125

2025 ಬಜಾಜ್ ಪಲ್ಸರ್ NS125 ತನ್ನ ಸ್ಪೋರ್ಟಿ ಪರ್ಫಾಮೆನ್ಸ್, ಆಧುನಿಕ ತಂತ್ರಜ್ಞಾನ ಮತ್ತು 125 ಸಿಸಿ ವಿಭಾಗದಲ್ಲಿ ಮೌಲ್ಯಯುತ ವೈಶಿಷ್ಟ್ಯಗಳನ್ನು ಹೊಂದಿದೆ. ಅಲ್ಲದೆ ಹೊಸ ಅಪ್‌ಡೇಟ್‌ಗಳೊಂದಿಗೆ 125 ಸಿಸಿ ವಿಭಾಗದಲ್ಲಿ, ಬಜಾಜ್ ಪಲ್ಸರ್ NS125 ಮೋಟಾರ್‌ಸೈಕಲ್ ಈಗ ಬ್ಲೂಟೂತ್ ಮತ್ತು ABS ನಂತಹ ಆಧುನಿಕ ತಂತ್ರಜ್ಞಾನದ ನವೀಕರಣಗಳೊಂದಿಗೆ TVS ರೈಡರ್ 125, ಹೀರೋ ಎಕ್ಸ್‌ಟ್ರೀಮ್ 125R, ಮತ್ತು ಹೋಂಡಾ SP125 ನಂತಹ ಬೈಕ್‌ಗಳಿಗೆ ಪ್ರಮುಖ ಪ್ರತಿಸ್ಪರ್ಧಿಯಾಗಿದೆ. ಈ ಬೈಕ್ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಹೊಸ ಕಾರು ಕಂಪನಿಯ ಜೋರು: ಡೆಲಿವರಿ ಆರಂಭ

ವಿನ್‌ಫಾಸ್ಟ್ (VinFast) ತನ್ನ ಎಲೆಕ್ಟ್ರಿಕ್ ಎಸ್‌ಯುವಿಗಳಾದ ವಿಎಫ್6 ಮತ್ತು ವಿಎಫ್7 ಕಾರುಗಳ ವಿತರಣೆಯನ್ನು ಭಾರತದಲ್ಲಿ ಪ್ರಾರಂಭಿಸಿದೆ. ಎರಡೂ ಮಾಡಲ್‌ಗಳನ್ನು ತಮಿಳುನಾಡಿನ ತೂತುಕುಡಿಯಲ್ಲಿರುವ ವಿನ್‌ಫಾಸ್ಟ್ ಸ್ಥಾವರದಲ್ಲಿ ಸ್ಥಳೀಯವಾಗಿ ಜೋಡಿಸಲಾಗುತ್ತದೆ. ಇದು ಭಾರತವನ್ನು ಕಂಪನಿಯ 17ನೇ ಜಾಗತಿಕ ಮಾರುಕಟ್ಟೆಯನ್ನಾಗಿ ಮಾಡಿದೆ. ಭಾರತದ ಬೆಳೆಯುತ್ತಿರುವ EV ಮಾರುಕಟ್ಟೆಯಲ್ಲಿ ಹಿಡಿತ ಸಾಧಿಸಲು ಈ ಎರಡು ಮಾಡಲ್‌ಗಳ ಬೆಲೆಯನ್ನು ಆಕ್ರಮಣಕಾರಿಯಾಗಿ ನಿಗದಿಪಡಿಸಿದೆ, VF6 ಕೈಗೆಟುಕುವ ಬೆಲೆ ಮತ್ತು ರೇಂಜ್ ಮೇಲೆ ಕೇಂದ್ರೀಕರಿಸುತ್ತದೆ ಮತ್ತು VF7 ಪ್ರೀಮಿಯಂ ಮಧ್ಯಮ ಗಾತ್ರದ ಎಲೆಕ್ಟ್ರಿಕ್ SUV ವಿಭಾಗವನ್ನು ಗುರಿಯಾಗಿರಿಸಿಕೊಂಡಿದೆ.

ಭಾರತದಲ್ಲಿ ಸ್ಕೂಟರ್‌ಗಳ ಕಿಂಗ್: 25 ವರ್ಷಗಳಿಂದ ನಂ.1 ಸ್ಥಾನ

ಭಾರತದಲ್ಲಿ ಸ್ಕೂಟರ್ ವಿಭಾಗವನ್ನು ಆಳುತ್ತಿರುವ ಏಕೈಕ ವಾಹನವೆಂದರೆ ಹೋಂಡಾ ಆಕ್ಟಿವಾ (Honda Activa), ಇದು ಬಿಡುಗಡೆಯಾದಾಗಿನಿಂದ ಇಲ್ಲಿಯವರೆಗೆ ಮಾರುಕಟ್ಟೆಯಲ್ಲಿ ನಂ.1 ಸ್ಕೂಟರ್ ಆಗಿ ಮುಂದುವರೆಯುತ್ತಿದೆ. ಈ ಸ್ಕೂಟರ್ ಮಾರುಕಟ್ಟೆಗೆ ಬಂದು 25 ವರ್ಷಗಳಾಗಿದ್ದು, ಇಂದಿಗೂ ತನ್ನ ಬೇಡಿಕೆಯಲ್ಲಿ ಕುಸಿತ ಕಂಡಿಲ್ಲ. ನೀವು ಕೂಡ ಹೋಂಡಾ ಆಕ್ಟಿವಾ ಸ್ಕೂಟರ್ ಖರೀದಿಸಲು ಪ್ಲಾನ್ ಮಾಡುತ್ತಿದ್ದರೆ ಸದ್ಯ 2025 ರ ಹೋಂಡಾ ಆಕ್ಟಿವಾ 125 ಬಗ್ಗೆ ತಿಳಿದುಕೊಳ್ಳಬೇಕಾದ ಪ್ರಮುಖ ವಿಷಯಗಳು ಇಲ್ಲಿವೆ.
Advertisement

2025ರ ಅತ್ಯಂತ ನಿರೀಕ್ಷಿತ 5 ಹೊಸ SUVಗಳಿವು: ಹ್ಯುಂಡೈ, ಟಾಟಾ..

2025 ಮುಕ್ತಾಯಗೊಳ್ಳಲು ಎರಡೇ ತಿಂಗಳು ಬಾಕಿಯಿದೆ. ನೂತನ ಕಾರುಗಳನ್ನು ಬಿಡುಗಡೆಗೊಳಿಸುವ ಸಂಬಂಧ ಜನಪ್ರಿಯ ವಾಹನ ತಯಾರಕ ಕಂಪನಿಗಳಾದ ಹ್ಯುಂಡೈ, ಟಾಟಾ, ಮಾರುತಿ ಕಿಯಾ ಹಾಗೂ ಮಹೀಂದ್ರಾ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಈ ಕಂಪನಿಗಳಿಂದ 5 ಪ್ರಮುಖ ಎಸ್‌ಯುವಿಗಳು ಮಾರಾಟಕ್ಕೆ ಬರಲಿವೆ. ಒಂದಕ್ಕಿಂದ ಒಂದು ಚೆನ್ನಾಗಿರಲಿದ್ದು, ಹತ್ತಾರು ವೈಶಿಷ್ಟ್ಯಗಳಿಗೂ ಸಾಕ್ಷಿಯಾಗಿರಲಿವೆ. ಬನ್ನಿ.. ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.