ಬಡವರಿಗೆ ಪರ್ಫೆಕ್ಟ್ ಕಾರಿದು.. 33 ಕಿ.ಮೀ ಮೈಲೇಜ್, 3.50 ಲಕ್ಷ..

ಮಾರುತಿ ಸುಜುಕಿ ಎಸ್-ಪ್ರೆಸ್ಸೊ (Maruti Suzuki S-Presso) ಎಂಟ್ರಿ ಲೆವೆಲ್ ಹ್ಯಾಚ್‌ಬ್ಯಾಕ್ ಆಗಿದೆ. ಇದು ಆಕರ್ಷಕವಾಗಿರುವ ವಿನ್ಯಾಸವನ್ನು ಒಳಗೊಂಡಿದ್ದು, ಕಣ್ಮನ ಸೆಳೆಯುವ ವಿವಿಧ ವೈಶಿಷ್ಟ್ಯಗಳಿಗೂ ಸಾಕ್ಷಿಯಾಗಿದೆ. ಕನಿಷ್ಠ ರೂ.3.50 ಲಕ್ಷ ಹಾಗೂ ಗರಿಷ್ಠ ರೂ.5.25 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ನೀವು ನೂತನ ಕಾರೊಂದನ್ನು ಖರೀದಿ ಮಾಡಲು ಆಲೋಚಿಸಿದ್ದೀರಾ.. ಹಾಗಾದರೆ, 'ಎಸ್-ಪ್ರೆಸ್ಸೊ' ಅತ್ಯುತ್ತಮ ಆಯ್ಕೆಯಾಗಲಿದೆ. ಇಲ್ಲಿ ದೇಶದ 5 ಪ್ರಮುಖ ನಗರಗಳಲ್ಲಿ ಈ ಹ್ಯಾಚ್‌ಬ್ಯಾಕ್‌ನ ಸ್ಟ್ಯಾಂಡರ್ಡ್ ಮಾಡೆಲ್ ಹೊಂದಿರುವ ಆನ್-ರೋಡ್ ಬೆಲೆ ಹಾಗೂ ಇಎಂಐ ಕುರಿತಂತೆ ಒಂದಷ್ಟು ವಿವರಗಳನ್ನು ತಿಳಿಸಿಕೊಟ್ಟಿದ್ದೇವೆ.

VinFast: ಸದ್ದಿಲ್ಲದೇ ಹೊಸ ಬ್ರ್ಯಾಂಡ್ ವಿನ್‌ಫಾಸ್ಟ್‌ನ VF6 & VF7..

ವಿಯೆಟ್ನಾಂ ಮೂಲದ ವಿನ್‌ಫಾಸ್ಟ್‌ (VinFast) ಜನಪ್ರಿಯ ವಾಹನ ತಯಾರಕ ಕಂಪನಿಯಾಗಿದೆ. ಇದೇ ಸೆಪ್ಟೆಂಬರ್ ತಿಂಗಳಲ್ಲಿ ಹೊಚ್ಚ ಹೊಸ ವಿಎಫ್6 ಹಾಗೂ ವಿಎಫ್7 ಎಲೆಕ್ಟ್ರಿಕ್ ಎಸ್‌ಯುವಿಯನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಿತ್ತು. ಈಗ ಮೊದಲ ಬ್ಯಾಚ್‍ನ ಕಾರುಗಳ ವಿತರಣೆ ಶುರು ಮಾಡಲಾಗಿದ್ದು, ನೂತನ ಎಸ್‌ಯುವಿಗಳನ್ನು ಕೊಚ್ಚಿ ಹಾಗೂ ಜೈಪುರ ಸೇರಿದಂತೆ ವಿವಿಧ ನಗರಗಳ ಗ್ರಾಹಕರಿಗೂ ತಲುಪಿಸಲಾಗುತ್ತಿದೆ. ಅವರು ಕೂಡ ಖುಷಿ ಖುಷಿಯಾಗಿ ವಿಎಫ್6 & ವಿಎಫ್7 ಕಾರುಗಳನ್ನು ಮನೆಗೆ ಕೊಂಡೊಯ್ಯುತ್ತಿದ್ದಾರೆ. ಅದಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲೂ ಹರಿದಾಡುತ್ತಿವೆ.

34 Km ಮೈಲೇಜ್.. 5-ಸೀಟರ್, ಬೆಲೆಯೂ ಕಮ್ಮಿ.. ಆದ್ರೂ ಈ ಮಾರುತಿ ಕಾರು..

ಮಾರುತಿ ಸುಜುಕಿ ಸೆಲೆರಿಯೊ (Maruti Suzuki Celerio) ಪ್ರಮುಖ ಹ್ಯಾಚ್‌ಬ್ಯಾಕ್ ಆಗಿದೆ. ಇದು ತುಂಬಾ ಅಚ್ಚುಕಟ್ಟಾದ ವಿನ್ಯಾಸ ಹೊಂದಿದ್ದು, ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ. ಆದರೂ ಕಾರಿನ ಮಾರಾಟ ಸಂಖ್ಯೆ ದಿನದಿಂದ ದಿನಕ್ಕೆ ಕುಸಿತವಾಗಿದೆ. ಸೆಪ್ಟೆಂಬರ್ ತಿಂಗಳಲ್ಲೂ ಅದು ಮುಂದುವರಿದಿದೆ. ಒಟ್ಟು 1,033 ಯುನಿಟ್‌ಗಳನ್ನು ಮಾತ್ರ ಗ್ರಾಹಕರಿಗೆ ವಿತರಣೆ ಮಾಡಲಾಗಿದೆ. 2024ರ ಇದೇ ಅವಧಿಯಲ್ಲಿ 3,241 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಈ ಅಂಕಿಅಂಶವನ್ನು ವಿಶ್ಲೇಷಣೆ ಮಾಡಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ -68% ಇಳಿಮುಖವಾಗಿದೆ.

MG ZS EV: 5-ಸೀಟರ್.. ಹಬ್ಬದ ಋತುವಿನಲ್ಲಿ ಖರೀದಿಸಿ ಎಂಜಿ ಜಡ್ಎಸ್..

ದಸರಾ ಹಾಗೂ ದೀಪಾವಳಿ ಹಬ್ಬಗಳು ಮುಗಿದಿದ್ದು, ಇನೇನು ಜನವರಿಯಲ್ಲಿ ಸಂಕ್ರಾಂತಿ ಹಬ್ಬವು ಬರಲಿದೆ. ನೀವು ವಾರಾಂತ್ಯ ಹಾಗೂ ರಜಾದಿನಗಳಲ್ಲಿ ದೂರದ ಊರುಗಳಿಗೆ ಪ್ರಯಾಣಿಸಲು ಸಾಧ್ಯವಾಗುವಂತೆ ಹೊಚ್ಚ ಹೊಸ ಕಾರೊಂದನ್ನು ಖರೀದಿ ಮಾಡಲು ಆಲೋಚಿಸಿದ್ದೀರಾ.. ಹಾಗಾದರೆ, ಎಂಜಿ ಜಡ್ಎಸ್ ಇವಿ (MG ZS EV) ಅತ್ಯುತ್ತಮ ಆಯ್ಕೆಯಾಗಲಿದೆ. ಇದು ಪರಿಸರ ಸ್ನೇಹಿಯಾಗಿ ಎಸ್‌ಯುವಿಯಾಗಿದ್ದು, ಪ್ರತಿಯೊಂದು ಪ್ರವಾಸವನ್ನು ಸುಗಮ ಹಾಗೂ ಶಾಂತವಾಗಿರುತ್ತದೆ.
Advertisement

ICE, ಹೈಬ್ರಿಡ್‌, ಎಲೆಕ್ಟ್ರಿಕ್ ಮೂರು ವಿಭಾಗಗಳಲ್ಲಿ ಎಂಜಿ ಮೋಟಾರ್

ಪ್ರಮುಖ ವಾಹನ ತಯಾರಕ ಕಂಪನಿಯಾಗಿರುವ ಎಂಜಿ ಮೋಟಾರ್ (MG Motor) ತನ್ನ ಪೋರ್ಟ್‌ಫೋಲಿಯೊದಲ್ಲಿ ಇಂಧನ ಚಾಲಿತ (ICE) ವಾಹನಗಳು, ಹೈಬ್ರಿಡ್‌ಗಳು ಮತ್ತು ಎಲೆಕ್ಟ್ರಿಕ್ ವಾಹನಗಳು (EV ಗಳು) ಒಟ್ಟಿಗೆ ಇರುವುದನ್ನು ಮುಂದುವರಿಸುತ್ತದೆ ಎಂದು ದೃಢಪಡಿಸಿದೆ. ಇದು ವಿದ್ಯುದ್ದೀಕರಣಕ್ಕೆ ಸಂಪೂರ್ಣ ಬದಲಾವಣೆಗಿಂತ ಸಹಬಾಳ್ವೆಯನ್ನು ಒತ್ತಿಹೇಳುತ್ತದೆ. ಸದ್ಯ ಎಂಜಿ ಮೋಟಾರ್‌ನ ಎಲೆಕ್ಟ್ರಿಕ್ ವಾಹನಗಳು ಹೆಚ್ಚು ಮಾರಾಟ ಕಾಣುತ್ತಿವೆ. ಹಾಗೆಂದು ICE ವಾಹನಗಳನ್ನು ಕಡೆಗಣಿಸುವುದಿಲ್ಲ, ಇದರ ಜೊತೆಗೆ EV ಶ್ರೇಣಿಯ ಮೇಲೂ ಬಲವಾಗಿ ಗಮನಹರಿಸುವುದಾಗಿ ಹೇಳಿಕೊಂಡಿದೆ.

90 ಕಿ.ಮೀ ಮೈಲೇಜ್! 65,000.. ಈ ಬೈಕ್​ ಖರೀದಿಸಲು ಮುಗಿಬಿದ್ದ..

ಬಜಾಜ್ ಪ್ಲಾಟಿನಾ (Bajaj Platina) ಮಧ್ಯಮ ವರ್ಗದ ಗ್ರಾಹಕರ ನೆಚ್ಚಿನ ಬೈಕ್ ಆಗಿದ್ದು, ದಿನನಿತ್ಯದ ಬಳಕೆಗೆ ಹೆಚ್ಚು ಸೂಕ್ತವಾಗಿದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಈ ಈ ಸೆಪ್ಟೆಂಬರ್ ತಿಂಗಳಲ್ಲೂ 'ಪ್ಲಾಟಿನಾ' ದೊಡ್ಡ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಸರಿ ಸುಮಾರು 62,260 ಯುನಿಟ್‌ಗಳನ್ನು ಗ್ರಾಹಕರಿಗೆ ವಿತರಿಸಲಾಗಿದೆ. 2024ರ ಇದೇ ಅವಧಿಯಲ್ಲಿ 49,774 ಯುನಿಟ್‌ಗಳನ್ನು ಮಾರಲಾಯಿತ್ತು. ಈ ಅಂಕಿಸಂಖ್ಯೆಯನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 25.09% ಬೆಳವಣಿಗೆಯಾಗಿದೆ.

Diesel Cars: ಅಗ್ಗದ ಬೆಲೆಗೆ ಸಿಗುವ 5 ಪ್ರಮುಖ ಡೀಸೆಲ್ ಕಾರುಗಳಿವು..

ಹೊಸ ಕಾರು ಖರೀದಿ ಮಾಡಬೇಕೆಂಬುದು ಹಲವರ ಕನಸಾಗಿರುತ್ತದೆ. ಅದರಲ್ಲೂ ಡೀಸೆಲ್ ಕಾರುಗಳು (Diesel Cars) ಉತ್ತಮವಾದ ಕಾರ್ಯಕ್ಷಮತೆಯಿಂದಲೂ ಮನೆ ಮಾತಾಗಿವೆ. ಕಟ್ಟುನಿಟ್ಟಿನ 'ಬಿಎಸ್6' ಎಮಿಷನ್ ಮಾನದಂಡಗಳು ಜಾರಿಯಾದ ಬಳಿಕ, ಅನೇಕ ವಾಹನ ತಯಾರಕ ಕಂಪನಿಗಳು ಈ ಕಾರುಗಳ ಉತ್ಪಾದನೆಯನ್ನೇ ಹಂತ ಹಂತವಾಗಿ ಸ್ಥಗಿತಗೊಳಿಸಿವೆ. ಆದರೂ ಒಂದಷ್ಟು ಕಂಪನಿಗಳು ಮಾತ್ರ ಮಾರಾಟಗೊಳಿಸುತ್ತಿದೆ. ನಾವಿಲ್ಲಿ ಅಗ್ಗದ ದರದಲ್ಲಿ ಗ್ರಾಹಕರ ಖರೀದಿಗೆ ಲಭ್ಯವಿರುವ 5 ಪ್ರಮುಖ ಡೀಸೆಲ್ ಕಾರುಗಳ ವಿಶೇಷತೆಗಳ ಕುರಿತಂತೆ ಸಂಕ್ಷಿಪ್ತವಾಗಿ ತಿಳಿಸಿಕೊಟ್ಟಿದ್ದೇವೆ.

ಸ್ಪೋರ್ಟಿ ಸ್ಟೈಲಿಷ್ 125 ಸಿಸಿ ಬೈಕ್ ಇದು... ವಿಭಾಗದಲ್ಲಿಯೇ ಬೆಸ್ಟ್

2025 ಟಿವಿಎಸ್ ರೈಡರ್ 125 ಜನಪ್ರಿಯ 125 ಸಿಸಿ ಪ್ರಯಾಣಿಕ ಮೋಟಾರ್‌ಸೈಕಲ್ ಆಗಿದ್ದು, ಇದರ ಬೆಲೆಯು ರೂ. 80,500 ರಿಂದ ರೂ. 95,600 ರವರೆಗೆ ಎಕ್ಸ್ - ಶೋರೂಂ ಬೆಲೆಯನ್ನು ಹೊಂದಿದೆ. ಸ್ಥಳವನ್ನು ಅವಲಂಬಿಸಿ ಆನ್ - ರೋಡ್ ಬೆಲೆಗಳು ಸುಮಾರು ರೂ. 99,000 ದಿಂದ ರೂ. 1.19 ಲಕ್ಷದವರೆಗೆ ಇರುತ್ತವೆ. ಇದು ಮುಂಭಾಗ ಮತ್ತು ಹಿಂಭಾಗದ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿರುವ ಹೊಸ ಡ್ಯುಯಲ್-ಡಿಸ್ಕ್ ಮಾಡಲ್‌ಗಳು, ಸಿಂಗಲ್ - ಚಾನೆಲ್ ಎಬಿಎಸ್, ವರ್ಧಿತ ಸುರಕ್ಷತೆ ಮತ್ತು ಪರ್ಫಾಮೆನ್ಸ್‌ಗಾಗಿ ಅಗಲವಾದ ಟೈರ್‌ಗಳನ್ನು ಒಳಗೊಂಡಂತೆ 7 ವೇರಿಯೆಂಟ್‌ಗಳಲ್ಲಿ ಲಭ್ಯವಿದೆ.
Advertisement

TATA: ಅತಿ ಶೀಘ್ರದಲ್ಲೇ ಹೊಸ ಟಾಟಾ ಸಿಯೆರಾ ಎಸ್‌ಯುವಿ ಬಿಡುಗಡೆ..

ನವೆಂಬರ್ ಮೊದಲ ಅಥವಾ ಎರಡನೇ ವಾರದಲ್ಲಿ ಹೊಚ್ಚ ಹೊಸ ಟಾಟಾ ಸಿಯೆರಾ (Tata Sierra) ಎಸ್‌ಯುವಿಯಾಗಿ ಅದ್ದೂರಿಯಾಗಿ ಬಿಡುಗಡೆಯಾಗುವ ಎಲ್ಲ ಲಕ್ಷಣಗಳಿವೆ. ಇದು ರೂ.11 ಲಕ್ಷದಿಂದ ರೂ.20 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿರುವ ನಿರೀಕ್ಷೆಯಿದೆ. 1.5-ಲೀ. ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್, 1.5-ಲೀ. ಟರ್ಬೊಚಾರ್ಜ್ಡ್ ಪೆಟ್ರೋಲ್, 1.5-ಲೀ. ಟರ್ಬೊ ಡೀಸೆಲ್ ಎಂಜಿನ್‌ನ್ನು ಹೊಂದಿರಲಿದೆ. ಜೊತೆಗೆ ಎಲೆಕ್ಟ್ರಿಕ್ ಪವರ್‌ಟ್ರೇನ್‌ ಆಯ್ಕೆಯಲ್ಲಿಯೂ ಮಾರಾಟಕ್ಕೆ ಬರಬಹುದು ಎನ್ನಲಾಗಿದೆ. 5 ಆಸನಗಳನ್ನು ಒಳಗೊಂಡಿರಲಿದೆ. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಸನ್‌ರೂಫ್, 6 ಏರ್‌ಬ್ಯಾಗ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಹಾಗೂ 360 ಡಿಗ್ರಿ ಕ್ಯಾಮೆರಾ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದುಕೊಡಿರುವ ಸಾಧ್ಯತೆಯಿದೆ.

ಬೆಂಗಳೂರು - ಮುಂಬೈ ನಡುವೆ ಹೊಸ ಸೂಪರ್‌ಫಾಸ್ಟ್ ರೈಲು

ಬೆಂಗಳೂರು ಮತ್ತು ಮುಂಬೈ ನಡುವೆ ಹೊಸ ಸೂಪರ್‌ಫಾಸ್ಟ್ ರೈಲನ್ನು ಪರಿಚಯಿಸಲು ಜೋರು ತಯಾರಿ ನಡೆಯುತ್ತಿದೆ. ಈ ರೈಲು, ಪ್ರಯಾಣದ ಸಮಯವನ್ನು 6 ಗಂಟೆಗಳಷ್ಟು ಕಡಿಮೆ ಮಾಡಲಿದ್ದು, ಒಟ್ಟಾರೆ ಪ್ರಯಾಣದ ಸಮಯವನ್ನು 23 ಗಂಟೆಗಳಿಂದ 18 ಗಂಟೆಗಳಿಗೆ ಇಳಿಸಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಮಧ್ಯ ಕರ್ನಾಟಕದ ಮೂಲಕ ಹುಬ್ಬಳ್ಳಿ, ದಾವಣಗೆರೆ, ಬೆಳಗಾವಿ ಮತ್ತು ತುಮಕೂರು ಮುಂತಾದ ಮಾರ್ಗಗಳ ಮೂಲಕ ಚಲಿಸುವ ಹೊಸ ರೈಲು, ಪ್ರಯಾಣಿಕರಿಗೆ ವೇಗವಾದ ಮತ್ತು ಹೆಚ್ಚು ಅನುಕೂಲಕರ ಸಂಪರ್ಕ ಆಯ್ಕೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ.

Hero: ಶೋರೂಂ ಮುಂದೆ ಸಾಲು ಕಟ್ಟಿದ ಗ್ರಾಹಕರು.. 70 ಕಿ.ಮೀ ಮೈಲೇಜ್..

ಹೀರೋ ಸ್ಪ್ಲೆಂಡರ್‌ (Hero Splendor) ನಂಬರ್ 1 ಬೈಕ್ ಆಗಿದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಈ ಸೆಪ್ಟೆಂಬರ್ ತಿಂಗಳಲ್ಲೂ 'ಸ್ಪ್ಲೆಂಡರ್‌' ಭಾರೀ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಒಟ್ಟು 3,82,383 ಯುನಿಟ್‌ಗಳನ್ನು ಗ್ರಾಹಕರಿಗೆ ವಿತರಣೆ ಮಾಡಲಾಗಿದೆ. 2024ರ ಇದೇ ಅವಧಿಯಲ್ಲಿ 3,75,886 ಯುನಿಟ್‌ಗಳನ್ನು ಮಾರಲಾಯಿತ್ತು. ಈ ಅಂಕಿಅಂಶವನ್ನು ವಿಶ್ಲೇಷಣೆ ಮಾಡಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ (YoY) ಶೇಕಡ 1,73% ಪ್ರಗತಿಯಾಗಿದೆ.

ಹೊಸ ಹ್ಯುಂಡೈ ಸ್ಟೈಲಿಷ್ SUV ಅನಾವರಣ: ಬುಕಿಂಗ್ ಪ್ರಾರಂಭ

ಹುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (HMIL) ಇಂದು ತನ್ನ ಬಹುನಿರೀಕ್ಷಿತ ಕಾಂಪ್ಯಾಕ್ಟ್ ಎಸ್‌ಯುವಿಯಾದ ಹೊಚ್ಚ ಹೊಸ ಹುಂಡೈ ವೆನ್ಯೂ (VENUE) ಅನ್ನು ಬಹಿರಂಗಪಡಿಸಿದೆ. ಈ ಕಾರಿಗಾಗಿ ಬುಕಿಂಗ್ ‌ಗಳನ್ನು ಕೂಡ ತೆರೆದಿರುವುದಾಗಿ ಘೋಷಿಸಿದೆ. ಆಸಕ್ತ ಗ್ರಾಹಕರು ಭಾರತದಾದ್ಯಂತದ ಯಾವುದೇ ಹುಂಡೈ ಡೀಲರ್‌ಶಿಪ್‌ನಲ್ಲಿ ರೂ. 25,000 ಆರಂಭಿಕ ಬುಕಿಂಗ್ ಮೊತ್ತದೊಂದಿಗೆ ಹೊಚ್ಚ ಹೊಸ ಹುಂಡೈ ವೆನ್ಯೂ ಅನ್ನು ಬುಕ್ ಮಾಡಬಹುದು. ಹೊಸ ಹುಂಡೈ ವೆನ್ಯೂ ನವೆಂಬರ್ 04, 2025 ರಂದು ಬಿಡುಗಡೆಯಾಗಲಿದೆ.
Advertisement

ಪೆಟ್ರೋಲ್ ಬೇಡ.. 900 ಕಿ.ಮೀ ಮೈಲೇಜ್, 1 ರೂಪಾಯಿ ಖರ್ಚಿಲ್ಲ..

ಯಾವುದೇ ವಾಹನ ಓಡಲು ಇಂಧನ ತುಂಬಾ ಅವಶ್ಯಕ. ಅದರಲ್ಲೂ ಪೆಟ್ರೋಲ್, ಡೀಸೆಲ್ ಅಥವಾ ಸಿಎನ್‌ಜಿ ಗ್ಯಾಸ್ ಬೇಕೇ ಬೇಕು. ಸದ್ಯ, ಒಂದೆಡರು ವರ್ಷಗಳಿಂದ ವಿದ್ಯುತ್ (ಎಲೆಕ್ಟ್ರಿಕ್) ಚಾಲಿತ ವಾಹನಗಳು ಕೂಡ ಭಾರೀ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ. ಪೆಟ್ರೋಲ್/ ಡೀಸೆಲ್ (Petrol/ Diesel) ಬೆಲೆ ದುಬಾರಿಯಾಗಿದ್ದು, ಪರಿಸರಕ್ಕೂ ಮಾರಕವಾಗಿದೆ. ಹೀಗಾಗಿ, ಪರ್ಯಾಯ ಇಂಧನಗಳ ಬಳಕೆ ಕುರಿತಂತೆ ಹಲವು ಸಂಶೋಧನೆಗಳು ನಡೆಯುತ್ತಿವೆ. ಇವೆಲ್ಲದರ ನಡುವೆ ಇರಾನ್ ದೇಶದ ವಿಜ್ಞಾನಿಯೊಬ್ಬರು ನೀರಿನಿಂದ ಚಲಿಸಬಲ್ಲ ಕಾರನ್ನು ಆವಿಷ್ಕರಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ 2 ವರ್ಷಗಳ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಮತ್ತೊಮ್ಮೆ ವೈರಲ್ ಆಗುತ್ತಿದೆ.

ಅತ್ಯಂತ ಅಗ್ಗದ ಬೆಲೆಯ ರಾಯಲ್ ಎನ್‌ಫೀಲ್ಡ್ ಬೈಕ್

2025 ರ ರಾಯಲ್ ಎನ್‌ಫೀಲ್ಡ್ ಹಂಟರ್ 350 ಭಾರತದಲ್ಲಿ ಅತ್ಯಂತ ಕೈಗೆಟುಕುವ ಮತ್ತು ವೈಶಿಷ್ಟ್ಯ-ಭರಿತ 350 ಸಿಸಿ ಬೈಕ್‌ಗಳಲ್ಲಿ ಒಂದಾಗಿದೆ. ಜಿಎಸ್‌ಟಿ 2.0 ದರ ಕಡಿತದಿಂದಾಗಿ ಬೆಲೆ ನವೀಕರಿಸಲಾಗಿದೆ. ಬೇಸ್‌ ರೆಟ್ರೊ ವೇರಿಯೆಂಟ್ ಎಕ್ಸ್-ಶೋರೂಂ ಬೆಲೆ ಈಗ ರೂ. 1,37,640 ರಿಂದ ಟಾಪ್ ಮೆಟ್ರೋ ರೆಬೆಲ್ ವೇರಿಯೆಂಟ್ ರೂ. 1,67,000 (ಎಕ್ಸ್‌ ಶೋರೂಂ) ವರೆಗೆ ಇದೆ. ಆನ್-ರೋಡ್ ಬೆಲೆಗಳು ನಗರವನ್ನು ಅವಲಂಬಿಸಿ ರೂ. 2.14 ಲಕ್ಷದವರೆಗೆ ಇದೆ. 2025 ರಲ್ಲಿ ರಾಯಲ್ ಎನ್‌ಫೀಲ್ಡ್ ಹಂಟರ್ 350 ಯಾವೆಲ್ಲ ಅಪ್‌ಡೇಟ್‌ಗಳನ್ನು ಪಡೆದಿದೆ ನೋಡೋಣ.

Honda Activa: ನಂ.1.. ಆದರೂ ಹೋಂಡಾ ಆಕ್ಟಿವಾ ಸ್ಕೂಟರ್ ಖರೀದಿಸಲು..

ಹೋಂಡಾ ಆಕ್ಟಿವಾ (Honda Activa) ನಂಬರ್ 1 ಸ್ಕೂಟರ್ ಆಗಿದೆ. ಇದನ್ನು ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಆದರೂ ಈ ಸ್ಕೂಟರ್ ಮಾರಾಟ ಸಂಖ್ಯೆ ದಿನದಿಂದ ದಿನಕ್ಕೆ ಕುಸಿತವಾಗುತ್ತಿದೆ. ಅದು ಈ ಸೆಪ್ಟೆಂಬರ್ ತಿಂಗಳಲ್ಲೂ ಮುಂದುವರಿದೆ. ಒಟ್ಟು 2,37,716 ಯುನಿಟ್‌ಗಳನ್ನು ಗ್ರಾಹಕರಿಗೆ ವಿತರಿಸಲಾಗಿದೆ. 2024ರ ಇದೇ ಅವಧಿಯಲ್ಲಿ 2,62,316 ಯುನಿಟ್‌ಗಳನ್ನು ಮಾರಲಾಯಿತ್ತು. ಈ ಅಂಕಿಸಂಖ್ಯೆಯನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ (YoY) ಶೇಕಡ 9.37% ಇಳಿಮುಖವಾಗಿದೆ. ಹಾಗೆಯೇ ಇದೇ ಆಗಸ್ಟ್‌ನಲ್ಲಿ 2,44,271 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಈ ಮೂಲಕ ತಿಂಗಳಿಂದ ತಿಂಗಳ (MoM) ಮಾರಾಟವು ಶೇಕಡ 2.68% ಕುಂಠಿತವಾಗಿದೆ.

ಸ್ಪೋರ್ಟಿ ಲುಕ್, ಸಖತ್ ಫೀಚರ್ಸ್ ಇದ್ದರು ಯಾರೂ ಖರೀದಿಸುತ್ತಿಲ್ಲ

ಭಾರತದಲ್ಲಿ 'ಸ್ಕೋಡಾ ಕೈಲಾಕ್' ಕಾರು ಸಬ್-4 ಮೀಟರ್‌ ಎಸ್‌ಯುವಿ ವಿಭಾಗದಲ್ಲಿ ಮುಂಚೂಣಿಯಲ್ಲಿದ್ದು, ಇದೇ ವಿಭಾಗದಲ್ಲಿ ಹೆಸರು ಮಾಡಿರುವ 'ಕಿಯಾ ಸೈರಸ್' ಕಾರು ಸದ್ಯ ಮಾರಾಟದಲ್ಲಿ ಗಣನೀಯ ಕುಸಿತ ಕಂಡಿದೆ. 2025 ರ ಮೊದಲ ಎಂಟು ತಿಂಗಳ ಹೊತ್ತಿಗೆ, ಕೈಲಾಕ್ ಸುಮಾರು 34,588 ಯೂನಿಟ್‌ ಕಾರುಗಳನ್ನು ಮಾರಾಟ ಮಾಡಿದ್ದರೆ, ಸರಾಸರಿ ಮಾಸಿಕ ಮಾರಾಟ 4,000 ಯೂನಿಟ್‌ಗಳಿಗೆ ಹತ್ತಿರವಾಗಿದೆ. ಈ ಮೂಲಕ ಸ್ಕೋಡಾ ಕೈಲಾಕ್ ಶೇ3.4 ವಿಭಾಗದ ಪಾಲನ್ನು ಹೊಂದಿರುವ ಬಲವಾದ ಸ್ಥಾನವನ್ನು ಪಡೆದುಕೊಂಡಿದೆ.
Advertisement

TATA: ಇನ್ನು 2 ವಾರದಲ್ಲಿ ಹೊಸ ಟಾಟಾ ಕಾರು ಬಿಡುಗಡೆ?

ಟಾಟಾ ಮೋಟಾರ್ಸ್ (Tata Motors), ದಶಕಗಳ ಬಳಿಕ, ಹೊಸ ರೂಪದಲ್ಲಿ 'ಸಿಯೆರಾ' ಎಸ್‌ಯುವಿಯನ್ನು ಬಿಡುಗಡೆಗೊಳಿಸಲು ತಯಾರಿ ಮಾಡಿಕೊಳ್ಳುತ್ತಿದೆ. ಎಲ್ಲವು ಅಂದುಕೊಂಡಂತೆ ನಡೆದರೆ, ಈ ಕಾರು ನವೆಂಬರ್ ಮೊದಲ ಅಥವಾ ಎರಡನೇ ವಾರದಲ್ಲಿ ಮಾರಾಟಕ್ಕೂ ಬರಲಿದೆ. ಇದು ತುಂಬಾ ಚೆನ್ನಾಗಿರುವ ವಿನ್ಯಾಸ ಹೊಂದಿರಲಿದ್ದು, ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿರಲಿದೆ. ಕೈಗೆಟುಕುವ ದರದಲ್ಲೂ ಪರಿಚಯಿಸಬಹುದು. ಬನ್ನಿ, ನೂತನ 'ಸಿಯೆರಾ'ದ ಬೆಲೆ ಎಷ್ಟಿರಲಿದೆ.. ವಿಶೇಷತೆಗಳೇನು ಎಂಬುದರ ಕುರಿತಂತೆ ಪ್ರಮುಖಾಂಶಗಳು ಏನೆಂಬುದನ್ನು ತಿಳಿಯೋಣ.

ಅಂತರಾಷ್ಟ್ರೀಯ ಮಾರುಕಟ್ಟೆ ಪ್ರವೇಶಿಸಿದ ಹೀರೋ ಮೋಟೋಕಾರ್ಪ್

ಪ್ರಮುಖ ಮೋಟಾರ್‌ಸೈಕಲ್‌ ಮತ್ತು ಸ್ಕೂಟರ್‌ಗಳ ತಯಾರಕರಾದ ಹೀರೋ ಮೋಟೋಕಾರ್ಪ್, ಯುನೈಟೆಡ್ ಕಿಂಗ್‌ಡಮ್‌ಗೆ ಅಧಿಕೃತ ಪ್ರವೇಶವನ್ನು ಇಂದು ಘೋಷಿಸಿದೆ. ಇದು ಕಂಪನಿಯ 51 ನೇ ಅಂತರರಾಷ್ಟ್ರೀಯ ಮಾರುಕಟ್ಟೆ ಪ್ರವೇಶವಾಗಿದೆ, ಇದು ಯುರೋಪಿನಾದ್ಯಂತ ತನ್ನ ಹೆಜ್ಜೆಗುರುತನ್ನು ಬಲಪಡಿಸುತ್ತದೆ. ಈ ಪ್ರದೇಶದಲ್ಲಿ ಹೆಚ್ಚಿನ ಕಾರ್ಯಕ್ಷಮತೆಯ ಮೋಟಾರ್‌ಸೈಕಲ್‌ಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ವಿನ್ಯಾಸಗೊಳಿಸಲಾದ ಬಹು ನಿರೀಕ್ಷಿತ ಹಂಕ್ 440 ಅನ್ನು ಬಿಡುಗಡೆ ಮಾಡಲಾಗಿದೆ. ಇದು ಯುನೈಟೆಡ್ ಕಿಂಗ್‌ಡಮ್‌ಗೆ ಹೀರೋ ಮೋಟೋಕಾರ್ಪ್‌ನ ಪ್ರವೇಶದ ನಿರ್ಣಾಯಕ ಮೈಲಿಗಲ್ಲನ್ನು ಸೂಚಿಸುತ್ತದೆ.

ಬೈಕ್‌ನಷ್ಟೆ ಮೈಲೇಜ್ ನೀಡುವ ಅತ್ಯಂತ ಅಗ್ಗದ ಬೆಲೆಯ ಟಾಪ್-5 CNG ಕಾರು

ಅಕ್ಟೋಬರ್ 2025 ರ ಹೊತ್ತಿಗೆ ಭಾರತದಲ್ಲಿ ಅತ್ಯುತ್ತಮ ಮೈಲೇಜ್ ಹೊಂದಿರುವ ಟಾಪ್ 5 CNG ಕಾರುಗಳು ಹೆಚ್ಚಾಗಿ ಮಾರುತಿ ಸುಜುಕಿ ಮಾಡಲ್‌ಗಳಾಗಿವೆ. ಇವು ಪ್ರತಿ ಕೆ.ಜಿ CNG ಗೆ 34.43 ಕಿ.ಮೀ ನಿಂದ 27 ಕಿ.ಮೀ ಮೈಲೇಜ್ ನೀಡುತ್ತವೆ. ನಗರ ಚಾಲನೆ ಮತ್ತು ಕಡಿಮೆ ಚಾಲನಾ ವೆಚ್ಚದಿಂದಾಗಿ ಈ ಕಾರುಗಳು ಹೆಚ್ಚು ಬೇಡಿಕೆಯಲ್ಲಿವೆ. ಈ CNG ಕಾರುಗಳು ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳಿಗೆ ಹೋಲಿಸಿದರೆ ಇಂಧನ ಉಳಿತಾಯವನ್ನು ನೀಡುತ್ತವೆ. 2025 ರಲ್ಲಿ ನಗರ ಅನುಕೂಲತೆಯ ಮೇಲೆ ಕೇಂದ್ರೀಕರಿಸುವ ಭಾರತೀಯ ಖರೀದಿದಾರರಿಗೆ ಬೆಸ್ಟ್ ಆಯ್ಕೆಯಾಗಿವೆ.

30 Km ಮೈಲೇಜ್.. 6 ಲಕ್ಷ, ಈ ಟೊಯೊಟಾ ಕಾರನ್ನು ಖರೀದಿಸಬೇಕೇ..

ಟೊಯೊಟಾ ಗ್ಲಾನ್ಜಾ (Toyota Glanza) ಜಗಮೆಚ್ಚಿದ ಹ್ಯಾಚ್‌ಬ್ಯಾಕ್ ಎಂದೇ ಹೆಸರುವಾಸಿಯಾಗಿದೆ. ಇದು ನೋಡಲು ತುಂಬಾ ಚೆನ್ನಾಗಿದ್ದು, ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಕನಿಷ್ಠ ರೂ.6.39 ಲಕ್ಷ ಹಾಗೂ ಗರಿಷ್ಠ ರೂ.9.15 ಲಕ್ಷ (ಎಕ್ಸ್-ಶೋರೂಂ - ಬೆಂಗಳೂರು) ದರವನ್ನು ಪಡೆದಿದೆ. ನೀವು ಹೊಚ್ಚ ಹೊಸ ಕಾರೊಂದನ್ನು ಮನೆಗೆ ತರಲು ಪ್ಲ್ಯಾನ್ ಮಾಡಿದ್ದೀರಾ.. ಹಾಗಾದರೆ, 'ಗ್ಲಾನ್ಜಾ' ಅತ್ಯುತ್ತಮ ಆಯ್ಕೆಯಾಗಲಿದೆ. ನಾವಿಲ್ಲಿ ಈ ಹ್ಯಾಚ್‌ಬ್ಯಾಕ್‌ನ ಆನ್-ರೋಡ್ ಬೆಲೆ (On-Road Price) ಹಾಗೂ ಇಎಂಐ (EMI) ಕುರಿತಂತೆ ಪ್ರಮುಖ ವಿವರಗಳನ್ನು ತಿಳಿಸಿಕೊಟ್ಟಿದ್ದೇವೆ.
Advertisement

ಭಾರತ ನಿರ್ಮಿತ SUV ಖರೀದಿಗೆ ಆಸ್ಟ್ರೇಲಿಯಾದಲ್ಲಿ ಮುಗಿಬಿದ್ದ ಜನ

ಮಾರುತಿ ಸುಜುಕಿಯ 5 - ಡೋರ್ ಜಿಮ್ನಿ SUV ಇತ್ತೀಚೆಗೆ (2023 ರಲ್ಲಿ) ರಫ್ತು ಪ್ರಾರಂಭವಾದಾಗಿನಿಂದ ವಿಶ್ವಾದ್ಯಂತ 1 ಲಕ್ಷಕ್ಕೂ ಹೆಚ್ಚು ಯೂನಿಟ್‌ ಕಾರುಗಳನ್ನು ರಫ್ತು ಮಾಡುವ ಮೂಲಕ ಮಹತ್ವದ ಮೈಲಿಗಲ್ಲನ್ನು ದಾಟಿದೆ. ಭಾರತದಲ್ಲಿ ಪ್ರತ್ಯೇಕವಾಗಿ ತಯಾರಿಸಲ್ಪಟ್ಟ ಜಿಮ್ನಿ 5 - ಡೋರ್ ಎಸ್‌ಯುವಿ ಜಪಾನ್, ಮೆಕ್ಸಿಕೊ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ಚಿಲಿಯಂತಹ ಪ್ರಮುಖ ಮಾರುಕಟ್ಟೆಗಳು ಸೇರಿದಂತೆ 100 ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡಲಾಗುತ್ತದೆ. ಈ ಜಿಮ್ನಿ ಕಾರು ಫ್ರಾಂಕ್ಸ್ ಕ್ರಾಸ್‌ಒವರ್ SUV ನಂತರ ಮಾರುತಿ ಸುಜುಕಿಯ ಎರಡನೇ ಅತಿ ಹೆಚ್ಚು ರಫ್ತು ಮಾಡಲಾದ ಮಾಡಲ್‌ ಆಗಿದೆ.

29 ಕಿ.ಮೀ ಮೈಲೇಜ್.. 10.50 ಲಕ್ಷ, ಸದ್ದಿಲ್ಲದೇ ಹೊಸ ಮಾರುತಿ..

ಕಳೆದ ತಿಂಗಳಷ್ಟೇ ನೂತನ ಮಾರುತಿ ಸುಜುಕಿ ವಿಕ್ಟೋರಿಸ್ (Maruti Suzuki Victoris) ಎಸ್‌ಯುವಿಯನ್ನು ಮಾರಾಟಕ್ಕೆ ತರಲಾಗಿತ್ತು. ಈ ಕಾರು ಬಿಡುಗಡೆಯಾದ ಕೆಲವೇ ದಿನಗಳಲ್ಲಿ 25,000 ಬುಕ್ಕಿಂಗ್‌ಗಳನ್ನು ಪಡೆದುಕೊಂಡಿತ್ತು. ಅದೇ ರೀತಿಯಲ್ಲಿ ಸೆಪ್ಟೆಂಬರ್ ತಿಂಗಳು ಗ್ರಾಹಕರು ಕೂಡ 'ವಿಕ್ಟೋರಿಸ್'ನ್ನು ಮುಗಿಬಿದ್ದು ಖರೀದಿ ಮಾಡಿದ್ದರು. ಒಟ್ಟು 4,261 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಸದ್ಯ, ಇದೇ ಮೊದಲ ಬಾರಿಗೆ ಕಂಪನಿಯು ಈ ಎಸ್‌ಯುವಿಯ ಆಯ್ದ ರೂಪಾಂತರಗಳಲ್ಲಿ (ವೇರಿಯೆಂಟ್) ವೈಶಿಷ್ಟ್ಯವೊಂದನ್ನು ಕೈಬಿಟ್ಟಿದೆ ಎಂದು ವರದಿಯಾಗಿದೆ. ಬನ್ನಿ.. ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ರೀಲ್ಸ್ ಹುಚ್ಚು: ರೈಲಿಗೆ ಬಲಿಯಾದ ಬಾಲಕ... ಮೊಬೈಲ್‌ನಿಂದ ಜೀವ ಬಿಟ್ಟ

ಹದಿಹರೆಯದ ಯುವಕ - ಯುವತಿಯರು ಅಪ್ರಾಪ್ತ ಬಾಲಕ - ಬಾಲಕಿಯರು ಸೋಷಿಯಲ್ ಮೀಡಿಯಾದಲ್ಲಿ ಖ್ಯಾತಿ ಗಳಿಸಲು ತಮ್ಮ ಪ್ರಾಣವನ್ನು ಪಣಕ್ಕಿಡುವ ಹುಚ್ಚಾಟಕ್ಕೆ ಮುಂದಾಗುತ್ತಿದ್ದಾರೆ. ರೈಲ್ವೆ ಹಳಿಗಳ ಬಳಿ ಅತಿಕ್ರಮಣ ಮಾಡುವುದು, ಅಪಾಯಕಾರಿ ಸ್ಟಂಟ್‌ಗಳನ್ನು ಮಾಡುವ ಕಾನೂನುಬಾಹಿರ ಚಟುವಟಿಕೆಗಳು ಹೆಚ್ಚಾಗಿವೆ. ಒಡಿಶಾದ ಪುರಿ ಜಿಲ್ಲೆಯಲ್ಲಿ ನಡೆದ ಭೀಕರ ಅಪಘಾತದಲ್ಲಿ, ರೈಲ್ವೆ ಹಳಿಗಳ ಬಳಿ ಇನ್‌ಸ್ಟಾಗ್ರಾಮ್ ರೀಲ್ ಚಿತ್ರೀಕರಣ ಮಾಡುತ್ತಿದ್ದಾಗ ವೇಗವಾಗಿ ಬಂದ ರೈಲಿಗೆ ಬಿಸ್ವಜಿತ್ ಸಾಹು ಎಂಬ 15 ವರ್ಷದ ಬಾಲಕ ಬಲಿಯಾಗಿದ್ದಾನೆ. ಈ ಘಟನೆ ಇಲ್ಲಿನ ಚಂದನ್‌ಪುರ ಬಳಿಯ ಜನಕದೈಪುರ ರೈಲ್ವೆ ಮೇಲ್ಸೇತುವೆಯಲ್ಲಿ ಸಂಭವಿಸಿದೆ.

Suzuki: 64 ಕಿ.ಮೀ ಮೈಲೇಜ್.. 80,000 ರೂಪಾಯಿ, ಸುಜುಕಿ ಆಕ್ಸೆಸ್..

ಸುಜುಕಿ ಆಕ್ಸೆಸ್ 125 (Suzuki Access 125) ವಿಶ್ವಾಸಾರ್ಹ ಸ್ಕೂಟರ್ ಆಗಿದೆ. ಇದು ದಿನಬಳಕೆಗೆ ಹೆಚ್ಚು ಸೂಕ್ತವಾಗಿದೆ. ನೋಡುಗರ ಕಣ್ಣು ಕುಕ್ಕುವಂತಹ ವಿನ್ಯಾಸ ಹೊಂದಿದ್ದು, ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದಿದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಈ ಸೆಪ್ಟೆಂಬರ್ ತಿಂಗಳಲ್ಲೂ 'ಆಕ್ಸೆಸ್ 125' ಸ್ಕೂಟರ್ ಭಾರೀ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಒಟ್ಟು 72,238 ಯುನಿಟ್‌ಗಳನ್ನು ಗ್ರಾಹಕರಿಗೆ ವಿತರಣೆ ಮಾಡಲಾಗಿದೆ. 2024ರ ಇದೇ ಅವಧಿಯಲ್ಲಿ 53,715 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ ಅಂಶವನ್ನು ವಿಶ್ಲೇಷಣೆ ಮಾಡಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 34.48% ಪ್ರಗತಿಯಾಗಿದೆ.
Advertisement

ಪವರ್‌ಫುಲ್‌ ಬ್ಯಾಟರಿ, ಖರ್ಚಿಲ್ಲದೆ ಸುಧೀರ್ಘ ಪ್ರಯಾಣ

ನೀವು ಭಾರತದಲ್ಲಿ ಬಲವಾದ ಕಾರ್ಯಕ್ಷಮತೆ, ಉತ್ತಮ ರೇಂಜ್ ಮತ್ತು ಆಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡ ಕೈಗೆಟುಕುವ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಹುಡುಕುತ್ತಿದ್ದರೆ, ಅಕ್ಟೋಬರ್ 2025 ರ ಹೊತ್ತಿಗೆ, ರೂ. 1 ಲಕ್ಷಕ್ಕಿಂತ ಕಡಿಮೆ ಬೆಲೆಯ ಭಾರತದಲ್ಲಿ ಲಭ್ಯವಿರುವ ಟಾಪ್ 5 ಎಲೆಕ್ಟ್ರಿಕ್ ಸ್ಕೂಟರ್‌ಗಳು ಇಲ್ಲಿವೆ. ಇವು ನಗರ ಪ್ರಯಾಣಿಕರು ಮತ್ತು ಪರಿಸರ ಪ್ರಜ್ಞೆಯ ಸವಾರರಿಗೆ ಶಕ್ತಿಶಾಲಿ ಕಾರ್ಯಕ್ಷಮತೆ, ಪ್ರಭಾವಶಾಲಿ ರೇಂಜ್ ಮತ್ತು ಹಣಕ್ಕೆ ಉತ್ತಮ ಮೌಲ್ಯವನ್ನು ನೀಡುತ್ತವೆ. ಪ್ರಸ್ತುತ ಲಭ್ಯವಿರುವ ಅತ್ಯುತ್ತಮ ಐದು ಎಲೆಕ್ಟ್ರಿಕ್ ಸ್ಕೂಟರ್‌ಗಳ ಪಟ್ಟಿ ಇಲ್ಲಿದೆ.