ಸ್ವಾಮಿ ಅಯ್ಯಪ್ಪನ ಸನ್ನಿಧಿಯಲ್ಲಿ ರಾಷ್ಟ್ರಪತಿಗಳು ಬಳಸಿದ ಕಾರಿನ..

ಕೇರಳದ ಪತ್ತನಂತಿಟ್ಟ ಜಿಲ್ಲೆಯಲ್ಲಿರುವ ಶಬರಿಮಲೆ ಪ್ರಸಿದ್ದ ಯಾತ್ರಾ ಕ್ಷೇತ್ರವಾಗಿದೆ. ಅಯ್ಯಪ್ಪ ಸ್ವಾಮಿ ದರ್ಶನಕ್ಕಾಗಿ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ. ಸಾಮಾನ್ಯವಾಗಿ ನಡೆದುಕೊಂಡು ಅಥವಾ ಡೋಲಿಗಳ ನೆರವಿನಿಂದ ಯಾತ್ರಿಕರು ಶ್ರೀಕ್ಷೇತ್ರಕ್ಕೆ ತೆರಳುತ್ತಾರೆ. ಆದರೆ ಬುಧವಾರ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು, ಫೋರ್ಸ್ ಗೂರ್ಖಾ ಕಾರಿನಲ್ಲಿ ರಸ್ತೆ ಮಾರ್ಗವಾಗಿ ದೇಗುಲವನ್ನು ತಲುಪಿದ್ದಾರೆ. ಈ ಮೂಲಕ ವಾಹನದಲ್ಲಿ ಅಯ್ಯಪ್ಪ ಸನ್ನಿಧಾನಕ್ಕೆ ತೆರಳಿದ ದೇಶದ ಮೊದಲ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಅವರ ಆರೋಗ್ಯ ಹಾಗೂ ಭದ್ರತೆಯ ಹಿತದೃಷ್ಟಿಯಿಂದ ಈ ಕಾರನ್ನು ಬಳಕೆ ಮಾಡಲಾಗಿದೆ ಎಂದು ವರದಿಯಾಗಿದೆ.

iGo: ಪುಟ್ಟ ವಾಹನದಲ್ಲಿ ದೊಡ್ಡ ತಂತ್ರಜ್ಞಾನ

ಸಾಂಪ್ರದಾಯಿಕ ತ್ರಿ-ಚಕ್ರ ವಾಹನಗಳಿಗಿಂತ ಭಿನ್ನವಾಗಿ, iGo ನ ಟ್ರೈಕ್‌ಗಳು (ಪುಟ್ಟ ತ್ರಿ-ಚಕ್ರ ವಾಹನ) ಸಾಕಷ್ಟು ನಯವಾದವು, ಇವುಗಳಿಗೆ ಮೋಟಾರ್‌ಸೈಕಲ್‌ಗಳಂತೆ ಪರವಾನಗಿ ಬೇಕಿಲ್ಲ, ಪಾರ್ಕಿಂಗ್ ಸ್ಥಳದ ಅಗತ್ಯವೂ ಇಲ್ಲ. ಇವು ದೈನಂದಿನ ಬಳಕೆಯನ್ನು ಸುರಕ್ಷಿತ ಮತ್ತು ಹೆಚ್ಚು ಆನಂದದಾಯಕವಾಗಿಸಲು ಭವಿಷ್ಯದ ಎಂಜಿನಿಯರಿಂಗ್ ಅನ್ನು ನೈಜ-ಪ್ರಪಂಚದ ಪ್ರಾಯೋಗಿಕತೆಯೊಂದಿಗೆ ಸಂಯೋಜಿಸುತ್ತವೆ. ಇಂತಹ ಆಕರ್ಷಕ ವಾಹನವನ್ನು ಸ್ಮಾರ್ಟ್ ಮೊಬಿಲಿಟಿ ಬ್ರ್ಯಾಂಡ್ ಆಗಿರುವ ಐಗೋವೈಸ್ ಮೊಬಿಲಿಟಿ (iGo) ಪರಿಚಯಿಸಿದ್ದು, ಇತ್ತೀಚೆಗಷ್ಟೆ ಪ್ರೀ-ಬುಕಿಂಗ್ ತೆರೆದಿದೆ. ಇದನ್ನು ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಬುಕ್ ಮಾಡಬಹುದು. ಈ ಪುಟ್ಟ ತ್ರಿ-ಚಕ್ರ ವಾಹನದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

25 ಕಿ.ಮೀ ಮೈಲೇಜ್.. 8 ಲಕ್ಷ, ಆದರೂ ಈ ಜನಪ್ರಿಯ ಮಾರುತಿ ಕಾರನ್ನು..

ಮಾರುತಿ ಸುಜುಕಿ ಬ್ರೆಝಾ (Maruti Suzuki Brezza) ಪ್ರಮುಖ ಕಾಂಪ್ಯಾಕ್ಟ್ ಎಸ್‌ಯುವಿಯಾಗಿದೆ. ಇದನ್ನು ಅರೆನಾ ಡೀಲರ್‌ಶಿಪ್‌ ಮೂಲಕ ಮಾರಾಟಗೊಳಿಸಲಾಗುತ್ತದೆ. ಅದಕ್ಕೆ ತಕ್ಕಂತೆ ಅತ್ಯಾಧುನಿಕವಾದ ವಿನ್ಯಾಸ ಹಾಗೂ ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಆದರೂ 'ಬ್ರೆಝಾ' ಮಾರಾಟ ಸಂಖ್ಯೆ ದಿನದಿಂದ ದಿನಕ್ಕೆ ಕುಸಿತವಾಗುತ್ತಿದೆ. ಈ ಸೆಪ್ಟೆಂಬರ್ ತಿಂಗಳಲ್ಲೂ ಅದು ಮುಂದುವರಿದಿದೆ. 10,173 ಯುನಿಟ್‌ಗಳನ್ನು ಮಾತ್ರ ಗ್ರಾಹಕರಿಗೆ ವಿತರಿಸಲಾಗಿದೆ. 2024ರ ಇದೇ ಅವಧಿಯಲ್ಲಿ 15322 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿಸಂಖ್ಯೆಯನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ -33.61% ಇಳಿಕೆಯಾಗಿದೆ.

Ultraviolette: ಬೆಂಗಳೂರಿನ ವಜ್ರ.. ಹೊಸ ಅಲ್ಟ್ರಾವೈಲೆಟ್ ಎಕ್ಸ್47..

ಬೆಂಗಳೂರಿನ ಅಲ್ಟ್ರಾವೈಲೆಟ್ ಆಟೋಮೋಟಿವ್ (Ultraviolette Automotive) ಪ್ರಖ್ಯಾತ ಎಲೆಕ್ಟ್ರಿಕ್ ದ್ವಿಚಕ್ರ ವಾಹನ (Electric Two Wheeler) ತಯಾರಕ ಕಂಪನಿಯಾಗಿದೆ. ಸೆಪ್ಟೆಂಬರ್‌ನಲ್ಲಿ ಹೊಚ್ಚ ಹೊಸ 'ಎಕ್ಸ್47' ಹೆಸರಿನ ಇ-ಬೈಕ್‌ನ್ನು ಅದ್ದೂರಿಯಾಗಿ ಮಾರಾಟಕ್ಕೂ ತಂದಿತ್ತು. ಇದು ಬಿಡುಗಡೆಗೊಂಡ 24 ಗಂಟೆಗಳಲ್ಲಿಯೇ 3000ಕ್ಕೂ ಅಧಿಕ ಸಂಖ್ಯೆಯಲ್ಲಿ ಬುಕ್ಕಿಂಗ್‌ಗಳನ್ನು ಪಡೆದುಕೊಂಡಿತ್ತು. ಸದ್ಯ ಈ ಮೋಟಾರ್‌ಸೈಕಲ್‌ನ ವಿತರಣೆಯನ್ನು ಶುರು ಮಾಡಲಾಗಿದೆ. ಈಚೆಗೆ ಇದೇ ಬೈಕ್‌ನ ಒಂದಷ್ಟು ಮಾಡೆಲ್‌ಗಳನ್ನು ಫ್ಯಾಕ್ಟರಿಯ ಅಸೆಂಬ್ಲಿ ಲೈನ್‌ನಿಂದ ಹೊರತರುತ್ತಿರುವ ವಿಡಿಯೋವನ್ನು ಕೂಡ ಸಾಮಾಜಿಕ ಜಾಲತಾಣದಲ್ಲಿ ಕಂಪನಿಯು ಹಂಚಿಕೊಂಡಿತ್ತು.
Advertisement

20 ಕಿ.ಮೀ ಮೈಲೇಜ್.. 5.76 ಲಕ್ಷ, 5-ಸೀಟರ್.. ಈ ಹೊಸ ಕಾರಿಗೆ ಮನಸೋತ..

ರೆನಾಲ್ಟ್ ಕೈಗರ್ (Renault Kiger) ಪ್ರಮುಖ ಎಸ್‌ಯುವಿಯಾಗಿದೆ. ಆಗಸ್ಟ್‌ನಲ್ಲಿ ಈ ಕಾರನ್ನು 'ಫೇಸ್‌ಲಿಫ್ಟ್' ರೂಪದಲ್ಲಿ ಮಾರಾಟಕ್ಕೆ ತರಲಾಗಿತ್ತು. ಇದು ತುಂಬಾ ಅಚ್ಚುಕಟ್ಟಾದ ವಿನ್ಯಾಸ ಹೊಂದಿದ್ದು, ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಈ ಸೆಪ್ಟೆಂಬರ್ ತಿಂಗಳು 'ಕೈಗರ್' ಭಾರೀ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಒಟ್ಟು 1,166 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಿಸಲಾಗಿದೆ. 2024ರ ಇದೇ ಅವಧಿಯಲ್ಲಿ 988 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿಸಂಖ್ಯೆಯನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 18.02% ಬೆಳವಣಿಗೆಯಾಗಿದೆ.

ಬಡವರ ಬಂಡಿ.. 21 ಕಿ.ಮೀ ಮೈಲೇಜ್, 5.35 ಲಕ್ಷ.. ಈ Maruti Car..

ಮಾರುತಿ ಸುಜುಕಿ ಇಗ್ನಿಸ್ (Maruti Suzuki Ignis) ಜನಮೆಚ್ಚಿದ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಎಂದೇ ಮನೆ ಮಾತಾಗಿದೆ. ಇದು ಅತ್ಯಾಕರ್ಷಕವಾದ ವಿನ್ಯಾಸ ಹೊಂದಿದ್ದು, ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಅದಕ್ಕೆ ತಕ್ಕಂತೆ ಸ್ಪರ್ಧಾತ್ಮಕ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ನೀವು ನೂತನ ಕಾರೊಂದನ್ನು ಮನೆಗೆ ತರಲು ಆಲೋಚಿಸಿದ್ದೀರಾ.. ಹಾಗಾದರೆ 'ಇಗ್ನಿಸ್' ಅತ್ಯುತ್ತಮವಾದ ಆಯ್ಕೆಯಾಗಲಿದೆ. ಇಲ್ಲಿ ಈ ಹ್ಯಾಚ್‌ಬ್ಯಾಕ್‌ನ ಬೆಲೆ, ವಿನ್ಯಾಸ, ಕಾರ್ಯಕ್ಷಮತೆ ಮತ್ತು ವೈಶಿಷ್ಟ್ಯಗಳ ಕುರಿತ ಪ್ರಮುಖಾಂಶಗಳು ಏನೆಂಬುದನ್ನು ತಿಳಿಸಿಕೊಟ್ಟಿದ್ದೇವೆ.

Bajaj Chetak: ಸದ್ದಿಲ್ಲದೇ ಹೊಸ ಬಜಾಜ್ ಚೇತಕ್ ಇ-ಸ್ಕೂಟರ್..

ಬಜಾಜ್ ಚೇತಕ್ (Bajaj Chetak) ಜಗಮೆಚ್ಚಿದ ಎಲೆಕ್ಟ್ರಿಕ್ ಸ್ಕೂಟರ್ ಎಂದೇ ಹೆಸರುವಾಸಿಯಾಗಿದೆ. ದೇಶೀಯವಾಗಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಇದು ಚೇತಕ್ 3501, ಚೇತಕ್ 3502, ಚೇತಕ್ 3503 ಹಾಗೂ ಚೇತಕ್ 3001 ಎಂಬ ಆಯ್ಕೆಯಲ್ಲಿಯೂ ಲಭ್ಯವಿದೆ. ಸದ್ಯ, 'ಚೇತಕ್'ನ್ನು ಹೊಸ ರೂಪದಲ್ಲಿ ಮಾರಾಟಕ್ಕೆ ತರಲು ಕಂಪನಿಯು ತಯಾರಿ ಮಾಡಿಕೊಳ್ಳುತ್ತಿದೆ. ಬನ್ನಿ.. ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

28 ಕಿ.ಮೀ ಮೈಲೇಜ್, 10.95 ಲಕ್ಷ.. ಈ ಕಲ್ಲು ಬಂಡೆಯಂತಹ ಟೊಯೊಟಾ..

ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ (Toyota Urban Cruiser Hyryder), ಪ್ರಖ್ಯಾತ ಎಸ್‌ಯುವಿಯಾಗಿ ಹೊರಹೊಮ್ಮಿದೆ. ಇದು ರೂ.10.95 ಲಕ್ಷದಿಂದ ರೂ.19.76 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. ಅತ್ಯುತ್ತಮವಾದ ವಿನ್ಯಾಸವನ್ನು ಹೊಂದಿದೆ. ಗೇಮಿಂಗ್ ಗ್ರೇ, ಸ್ಪೋರ್ಟಿನ್ ರೆಡ್, ಮಿಡ್‌ನೈಟ್ ಬ್ಲ್ಯಾಕ್ & ಸ್ಪೀಡಿ ಬ್ಲೂ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ. 1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್, 1.5-ಲೀಟರ್ ಹೈಬ್ರಿಡ್ (ಪೆಟ್ರೋಲ್+ಎಲೆಕ್ಟ್ರಿಕ್) ಹಾಗೂ 1.5-ಲೀಟರ್ ಸಿಎನ್‌ಜಿ ಎಂಜಿನ್‌ನ್ನು ಪಡೆದಿದೆ. 19 ರಿಂದ 27.97 ಕಿ.ಮೀವರೆಗೆ ಮೈಲೇಜ್ ನೀಡುತ್ತದೆ. 5 ಆಸನಗಳನ್ನು ಒಳಗೊಂಡಿದೆ. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (9 ಇಂಚು), ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಹಾಗೂ ಸನ್‌ರೂಫ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಗಾಗಿ 6 ಏರ್‌ಬ್ಯಾಗ್‌ಗಳು, ವಿಎಸ್‌ಸಿ (ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್) ಮತ್ತು 360 ಡಿಗ್ರಿ ಕ್ಯಾಮೆರಾವನ್ನು ತನ್ನದಾಗಿಸಿಕೊಂಡಿದೆ.
Advertisement

ಬ್ರೆಸಿಲ್‌ನಲ್ಲಿ ಕಳಪೆ ಗುಣಮಟ್ಟ: ಭಾರತದಲ್ಲಿ 4-ಸ್ಟಾರ್ ರೇಟಿಂಗ್

ಲ್ಯಾಟಿನ್ ಅಮೆರಿಕಾ ಮಾರುಕಟ್ಟೆಗಾಗಿ ಬ್ರೆಜಿಲ್‌ನಲ್ಲಿ ಉತ್ಪಾದಿಸಲಾದ 'ಸಿಟ್ರನ್ ಬಸಾಲ್ಟ್'‌ಗೆ ಲ್ಯಾಟಿನ್ NCAP (ಲ್ಯಾಟಿನ್ ಹೊಸ ಕಾರು ಮೌಲ್ಯಮಾಪನ ಕಾರ್ಯಕ್ರಮ) 0-ಸ್ಟಾರ್ ಸುರಕ್ಷತಾ ರೇಟಿಂಗ್ ನೀಡಿದೆ. ಆದರೆ ಭಾರತದಲ್ಲಿ ಮಾರಾಟವಾಗುವ ಅದೇ ಕಾರಿಗೆ 4 - ಸ್ಟಾರ್ ಭಾರತ್ NCAP (ಭಾರತ್ ಹೊಸ ಕಾರು ಮೌಲ್ಯಮಾಪನ ಕಾರ್ಯಕ್ರಮ) ರೇಟಿಂಗ್ ನೀಡಲಾಗಿದೆ. ಅಂದರೆ ಲ್ಯಾಟಿನ್ ಅಮೆರಿಕಾ ಮಾರುಕಟ್ಟೆಗಳಲ್ಲಿ ಕಳಪೆ ಗುಣಮಟ್ಟದ ಸಿಟ್ರನ್ ಬಸಾಲ್ಟ್ ಕಾರುಗಳು ಮಾರಾಟವಾಗುತ್ತಿವೆ. ಒಂದೇ ಮಾಡಲ್ ವಿವಿಧ ದೇಶಗಳಲ್ಲಿ ನಿರ್ಮಾಣ ಗುಣಮಟ್ಟವನ್ನು ಕಳೆದುಕೊಳ್ಳುವುದಕ್ಕೆ ಕಾರಣವೇನು? ಬನ್ನಿ ತಿಳಿಯೋಣ. ಮಾರುಕಟ್ಟೆ ಸುರಕ್ಷತಾ ನಿಯಮಗಳು ಮತ್ತು ಮಾನದಂಡಗಳು: ಭಾರತ್ NCAP (ಭಾರತ) ಮತ್ತು ಲ್ಯಾಟಿನ್ NCAP (ಲ್ಯಾಟಿನ್ ಅಮೇರಿಕಾ) ಪರೀಕ್ಷಾ ಪ್ರೋಟೋಕಾಲ್‌ಗಳು ಮತ್ತು ಕನಿಷ್ಠ ಸುರಕ್ಷತಾ ಅವಶ್ಯಕತೆಗಳಲ್ಲಿ ಭಿನ್ನವಾಗಿವೆ. ಭಾರತಕ್ಕೆ ಹೋಲಿಸಿದರೆ ಲ್ಯಾಟಿನ್ ಅಮೆರಿಕಾದಲ್ಲಿ ಕಡಿಮೆ ಸುರಕ್ಷತಾ ವಿಶೇಷಣಗಳನ್ನು ನೀಡುತ್ತಿರುವುದರಿಂದ ಸ್ಟೆಲ್ಲಾಂಟಿಸ್ (ಸಿಟ್ರನ್ ಮಾತೃ ಕಂಪನಿ) ಈಗಾಗಲೇ ಟೀಕೆಗಳನ್ನು ಎದುರಿಸಿದೆ, ಇದು ತಯಾರಕರ ಆದ್ಯತೆಗಳು ಮತ್ತು ನಿಯಂತ್ರಕ ಚೌಕಟ್ಟುಗಳಲ್ಲಿನ ಅಸಮಾನತೆಯನ್ನು ಪ್ರತಿಬಿಂಬಿಸುತ್ತದೆ. ​

ಇನ್ನು ಗ್ರಾಹಕರು ಸಾಲು ಕಟ್ಟುವರು.. ಶೀಘ್ರ ಮಾರುತಿ, ಟಾಟಾ..

ವಿಶ್ವದಲ್ಲೇ ಭಾರತವು ಅತಿದೊಡ್ಡ ವಾಹನ ಮಾರುಕಟ್ಟೆಯನ್ನು ಹೊಂದಿದೆ. ಪ್ರತಿ ತಿಂಗಳು ಒಂದಿಲ್ಲೊಂದು ಕಂಪನಿಯ ಹೊಚ್ಚ ಹೊಸ ಕಾರುಗಳು ಬಿಡುಗಡೆಯಾಗುತ್ತಲೇ ಇರುತ್ತವೆ. ಜನಪ್ರಿಯ ವಾಹನ ತಯಾರಕರಾದ ಮಾರುತಿ ಸುಜುಕಿ, ಟಾಟಾ ಮೋಟಾರ್ಸ್ ಹಾಗೂ ಮಹೀಂದ್ರಾ ಕಂಪನಿಗಳು ಸಹ ನೂತನ ಕಾರುಗಳನ್ನು ಬಿಡುಗಡೆಗೊಳಿಸಲು ತಯಾರಿ ಮಾಡಿಕೊಳ್ಳುತ್ತಿವೆ. ಎಲ್ಲವು ಅಂದುಕೊಂಡಂತೆ ನಡೆದರೆ, ಈ ಮೂರು ಜಬರ್ದಸ್ತ್ ಕಾರುಗಳು ಅತಿ ಶೀಘ್ರದಲ್ಲೇ ಮಾರಾಟಕ್ಕೂ ಬರಲಿವೆ. ಬನ್ನಿ.. ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

TATA: ಮನಸೋತ ಗ್ರಾಹಕರು, ಹಬ್ಬದ ಪ್ರಯುಕ್ತ 1 ಲಕ್ಷ ಟಾಟಾ ಕಾರುಗಳು..

ಟಾಟಾ ಮೋಟಾರ್ಸ್ (Tata Motors) ಜಗಮೆಚ್ಚಿದ ವಾಹನ ತಯಾರಕ ಕಂಪನಿ ಎಂದೇ ಹೆಸರುವಾಸಿಯಾಗಿದೆ. ದೇಶೀಯವಾಗಿ ಹಲವು ಕಾರುಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಈ ಹಬ್ಬದ ಋತು ಕಂಪನಿಗೆ ವರವಾಗಿದ್ದು, ದೊಡ್ಡ ಸಂಖ್ಯೆಯಲ್ಲಿ ಹ್ಯಾಚ್‌ಬ್ಯಾಕ್ ಹಾಗೂ ಎಸ್‌ಯುವಿಗಳನ್ನು ಖರೀದಿದಾರರಿಗೆ ವಿತರಣೆ ಮಾಡಿದೆ. ಬನ್ನಿ.. ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ದೈತ್ಯ ಮಹೀಂದ್ರಾ ಫೇಸ್‌ಲಿಫ್ಟ್ ಕಾರಿನ ಮೇಲೆ ಎಲ್ಲರ ಕಣ್ಣು

2026ರ ಆರಂಭದಲ್ಲಿ ಅಥವಾ ಮಧ್ಯಭಾಗದಲ್ಲಿ ಬಿಡುಗಡೆಯಾಗಲಿರುವ ಮಹೀಂದ್ರಾ ಸ್ಕಾರ್ಪಿಯೊ-N ಫೇಸ್‌ಲಿಫ್ಟ್ ಎಸ್‌ಯುವಿ, ಸದ್ಯ ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಭಾರೀ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಕೆಲವು ಮೂಲಗಳ ಪ್ರಕಾರ 2026 ರ ಭಾರತ್ ಮೊಬಿಲಿಟಿ ಆಟೋ ಎಕ್ಸ್‌ಪೋದಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಈ ದೈತ್ಯ ಎಸ್‌ಯುವಿಯ ಪರೀಕ್ಷೆ ಜೋರಾಗಿ ನಡೆಯುತ್ತಿದೆ. ಭಾರೀ ಮರೆಮಾಚುವಿಕೆಯನ್ನು ಹೊಂದಿರುವ ಕೆಲವು ಸ್ಪೈ ಶಾಟ್‌ಗಳು ಕಾರನ್ನು ಬಹುತೇಕ ಬಹಿರಂಗಪಡಿಸುತ್ತಿವೆ. ಸದ್ಯ ಆಟೋ ವಲಯದಲ್ಲಿ ಕಾರಿನ ಬಗ್ಗೆ ಹರಿದಾಡುತ್ತಿರುವ ಪ್ರಮುಖ ವಿಷಯಗಳನ್ನು ನೋಡೋಣ.
Advertisement

ಅಗ್ಗದ 7-ಸೀಟರ್ ಕಾರಿದು.. 20 ಕಿ.ಮೀ ಮೈಲೇಜ್, ಈ ರೆನಾಲ್ಟ್..

ರೆನಾಲ್ಟ್ ಟ್ರೈಬರ್ (Renault Triber) ಪ್ರಮುಖ ಎಂಪಿವಿಯಾಗಿ ಹೊರಹೊಮ್ಮಿದೆ. ಇದು ತುಂಬಾ ಅಚ್ಚುಕಟ್ಟಾದ ವಿನ್ಯಾಸ ಹೊಂದಿದ್ದು, ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಈ ಸೆಪ್ಟೆಂಬರ್ ತಿಂಗಳಲ್ಲೂ ಇದೇ 'ಟ್ರೈಬರ್' ಕಾರು ಭಾರೀ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಒಟ್ಟು 2,587 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಣೆ ಮಾಡಲಾಗಿದೆ. 2024ರ ಇದೇ ಅವಧಿಯಲ್ಲಿ 1,538 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿಸಂಖ್ಯೆಯನ್ನು ವಿಶ್ಲೇಷಣೆ ಮಾಡಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 68.21% ಪ್ರಗತಿಯಾಗಿದೆ.

ಪಟಾಕಿಗಳಿಂದ ನಿಮ್ಮ ವಾಹನಗಳನ್ನು ಸುರಕ್ಷಿತವಾಗಿರಿಸಲು ಟಾಪ್-5 ಸಲಹೆಗಳು

ಈ ದೀಪಾವಳಿಯಂದು ಪಟಾಕಿಗಳು ಆಕಾಶವನ್ನು ಬೆಳಗಿಸುತ್ತಿದ್ದಂತೆ, ಹಬ್ಬದ ಆಚರಣೆಗಳ ಸುತ್ತಲೂ ನಿಲ್ಲಿಸಲಾದ ಕಾರುಗಳು ಮತ್ತು ಬೈಕ್ ‌ಗಳಿಗೆ ಅವು ಅಪಾಯಗಳನ್ನು ಉಂಟುಮಾಡಬಹುದು. ವಾಹನಗಳನ್ನು ಬುದ್ಧಿವಂತಿಕೆಯಿಂದ ಪಾರ್ಕಿಂಗ್ ಮಾಡುವುದು, ರಕ್ಷಣೆಯನ್ನು ಬಲಪಡಿಸುವುದು ಮತ್ತು ಜಾಗರೂಕರಾಗಿರುವುದು - ಬೆಳಕಿನ ಹಬ್ಬದ ಉದ್ದಕ್ಕೂ ನಿಮ್ಮ ಕಾರು ಅಥವಾ ಬೈಕನ್ನು ಸುರಕ್ಷಿತವಾಗಿರಿಸುವುದು ತುಂಬಾ ಮುಖ್ಯ. ಈ ಹಬ್ಬದ ಹಾನಿ ಮತ್ತು ಪಟಾಕಿ ಸ್ಫೋಟದಿಂದ ನಿಮ್ಮ ವಾಹನವನ್ನು ರಕ್ಷಿಸಲು ಐದು ಪ್ರಾಯೋಗಿಕ ಮಾರ್ಗಗಳು ಇಲ್ಲಿವೆ ಬನ್ನಿ ನೋಡೋಣ.

83 Km ಮೈಲೇಜ್.. 69,300 ರೂಪಾಯಿ, ಹೊಸ ಟಿವಿಎಸ್ ಸ್ಟಾರ್ ಸಿಟಿ..

ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ (TVS Star City Plus) ಪ್ರಖ್ಯಾತ ಮೋಟಾರ್‌ಸೈಕಲ್ ಆಗಿದೆ. ಇದು ರೂ.69,300 ರಿಂದ ರೂ.72,900 (ಎಕ್ಸ್-ಶೋರೂಂ) ಬೆಲೆಯಲ್ಲಿ ಗ್ರಾಹಕರ ಖರೀದಿಗೆ ಲಭ್ಯವಿದೆ. ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಹೊಂದಿದೆ. ಬ್ಲ್ಯಾಕ್-ರೆಡ್, ಗ್ರೇ-ಬ್ಲ್ಯಾಕ್, ಬ್ಲ್ಯಾಕ್- ಬ್ಲೂ, ಬ್ಲೂ-ಸಿಲ್ವರ್ ಹಾಗೂ ಬ್ಲ್ಯಾಕ್-ಗ್ರೀನ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ. 109 ಸಿಸಿ ಪೆಟ್ರೋಲ್ ಎಂಜಿನ್ ಒಳಗೊಂಡಿದ್ದು, 83 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ. ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್ ಹಾಗೂ ಯುಎಸ್‌ಬಿ ಚಾರ್ಜಿಂಗ್ ಸಾಕೆಟ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. ಸವಾರರ ರಕ್ಷಣೆಗಾಗಿ ಡಿಸ್ಕ್/ ಡ್ರಮ್ ಬ್ರೇಕ್‌ಗಳನ್ನು ತನ್ನದಾಸಿಕೊಂಡಿದೆ.

Tata: ಮಾರಾಟದಲ್ಲಿ ನಂ.1 ಕಾರಿದು... ರಗಡ್ ಲುಕ್‌ನಲ್ಲಿ ಬಿಡುಗಡೆ

ಟಾಟಾ ನೆಕ್ಸಾನ್ ಸೆಪ್ಟೆಂಬರ್ 2025 ರಲ್ಲಿ ಬರೋಬ್ಬರಿ 22,500 ಯೂನಿಟ್‌ ಕಾರುಗಳಿಗಿಂತ ಹೆಚ್ಚಿನ ಮಾಸಿಕ ಮಾರಾಟವನ್ನು ಸಾಧಿಸಿದೆ. ಈ ಯಶಸ್ಸನ್ನು ಆಚರಿಸಲು, ಟಾಟಾ ಕಂಪನಿಯು ಪೆಟ್ರೋಲ್, ಡೀಸೆಲ್ ಮತ್ತು CNG ಆಯ್ಕೆಗಳಲ್ಲಿ ರೂ. 12.44 ಲಕ್ಷದಿಂದ ಪ್ರಾರಂಭವಾಗುವ ವಿಶೇಷವಾದ Red #DARK ಎಡಿಷನ್ ಅನ್ನು ಬಿಡುಗಡೆ ಮಾಡಿದೆ. ಈ ಟಾಟಾ ನೆಕ್ಸಾನ್ ರೆಡ್ ಡಾರ್ಕ್ ಎಡಿಷನ್ ಉನ್ನತ-ಶ್ರೇಣಿಯ ಸೌಕರ್ಯ, ಸುರಕ್ಷತೆ ಮತ್ತು ADAS ತಂತ್ರಜ್ಞಾನದೊಂದಿಗೆ ಬರುತ್ತದೆ. ಇದು ಈ ಹಬ್ಬದ ಋತುವಿನಲ್ಲಿ ಭಾರತದಲ್ಲಿ ಅತ್ಯಂತ ವೈಶಿಷ್ಟ್ಯ-ಭರಿತ ಕಾಂಪ್ಯಾಕ್ಟ್ SUV ಗಳಲ್ಲಿ ಒಂದಾಗಿದೆ. ಇದರ ಬಗ್ಗೆ ತಿಳಿದುಕೊಳ್ಳಬೇಕಾದ ಪ್ರಮುಖ ವಿಷಯಗಳು ಇಲ್ಲಿವೆ.
Advertisement

TATA: ಶೋರೂಂ ಮುಂದೆ ಗ್ರಾಹಕರು ಸಾಲು ಕಟ್ಟುವರು..

ನಂಬಿಕೆಗೆ ಮತ್ತೊಂದು ಹೆಸರೇ ಟಾಟಾ ಮೋಟಾರ್ಸ್ (Tata Motors) ಎಂದು. ಅಷ್ಟರಮಟ್ಟಿಗೆ ಕಂಪನಿಯು ಜನಪ್ರಿಯತೆ ಗಳಿಸಿದೆ. ದೇಶೀಯ ಮಾರುಕಟ್ಟೆಯಲ್ಲಿ ಹಲವು ಹೊಚ್ಚ ಹೊಸ ಕಾರುಗಳನ್ನು ಬಿಡುಗಡೆಗೊಳಿಸಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಬಹುಮುಖ್ಯವಾಗಿ 1991 ರಿಂದ 2003 ರವರೆಗೆ ಮಾರಾಟಗೊಂಡಿದ್ದ 'ಸಿಯೆರಾ' ಎಸ್‌ಯುವಿಯನ್ನು ನವೀನ ರೂಪದಲ್ಲಿ ಪರಿಚಯಿಸಲಿದೆ. ಎಲ್ಲವು ಅಂದುಕೊಂಡಂತೆ ನಡೆದರೆ, ಮುಂದಿನ ತಿಂಗಳೇ ಈ ಕಾರು ರಸ್ತೆಗಿಳಿಯಲಿದೆ.

ದೀಪಾವಳಿಗೆ ಹೊಸ ಬೈಕ್ ಖರೀದಿಸುತ್ತೀರಾ?

ಈ ದೀಪಾವಳಿಗೆ ನೀವು ಹೊಸ ಬೈಕ್ ಅಥವಾ ಸ್ಕೂಟರ್ ಖರೀದಿಸುತ್ತಿದ್ದರೆ, ನಿಮ್ಮ ವಾಹನ ದೋಷರಹಿತ ಮತ್ತು ತೊಂದರೆ-ಮುಕ್ತವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಸಂಪೂರ್ಣ ಪೂರ್ವ-ವಿತರಣಾ ತಪಾಸಣೆ (PDI) ನಡೆಸುವುದು ಅತ್ಯಗತ್ಯ. ಡೀಲರ್‌ಶಿಪ್‌ನಿಂದ ವಿತರಣೆಯನ್ನು ತೆಗೆದುಕೊಳ್ಳುವ ಮೊದಲು ಪೂರ್ಣಗೊಳಿಸಬೇಕಾದ ಎಂಟು ನಿರ್ಣಾಯಕ ಪರಿಶೀಲನೆಗಳು ಇಲ್ಲಿವೆ. ಈ ತಪಾಸಣೆಗಳನ್ನು ಶಾಂತವಾಗಿ ಮತ್ತು ವ್ಯವಸ್ಥಿತವಾಗಿ ನಡೆಸುವ ಮೂಲಕ, ಖರೀದಿದಾರರು ಗುಪ್ತ ದೋಷಗಳನ್ನು ತಪ್ಪಿಸಬಹುದು, ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬಹುದು ಮತ್ತು ಈ ಹಬ್ಬದಲ್ಲಿ ನೆಮ್ಮದಿಯಿಂದ ತಮ್ಮ ಹೊಸ ವಾಹನ ಡೆಲಿವರಿಯನ್ನು ಪಡೆಯಬಹುದು.

ಹೊಸ ಕಾರು ಖರೀದಿಸಿದ ಯುವರಾಜ..11.4 ಕಿ.ಮೀ ಮೈಲೇಜ್, 5-ಸೀಟರ್..

ಭಾರತದಲ್ಲಿ ಹಲವಾರು ರಾಜಮನೆತನಗಳಿದ್ದು, ಈಗಲೂ ವಿಲಾಸಿ ಜೀವನ ನಡೆಸುತ್ತಿದ್ದಾರೆ. ಇತ್ತೀಚೆಗೆ ಗುಜರಾತ್‌ನ ರಾಜ್‌ಕೋಟ್‌ ಸಂಸ್ಥಾನದ ಯುವರಾಜ ಜೈದೀಪ್ ಸಿನ್ಹಾ ಜಡೇಜಾ (Jaideep Sinh Jadeja) ಹೊಚ್ಚ ಹೊಸ ಜೀಪ್ ರಾಂಗ್ಲರ್ ವಿಲ್ಲಿಸ್ 41 (Jeep Wrangler Willys 41) ಆಫ್-ರೋಡ್ ಎಸ್‌ಯುವಿಯನ್ನು ಖರೀದಿ ಮಾಡಿದ್ದಾರೆ. ನೂತನ ಕಾರನ್ನು ವಿತರಣೆ ಪಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗುತ್ತಿದೆ.

ಹೀರೋ ಪ್ಯಾಶನ್ ಪ್ಲಸ್ VS ಹೀರೋ ಸ್ಪ್ಲೆಂಡರ್ ಪ್ಲಸ್: ಯಾವುದು ಬೆಸ್ಟ್?

ಹೀರೋ ಪ್ಯಾಶನ್ ಪ್ಲಸ್ (Hero Passion Plus) ಮತ್ತು ಹೀರೋ ಸ್ಪ್ಲೆಂಡರ್ ಪ್ಲಸ್ (Hero Splendor Plus) ಎರಡೂ ಬೈಕ್‌ಗಳು 100cc ವಿಭಾಗದಲ್ಲಿ ಒಂದೇ ರೀತಿಯ ಪರ್ಫಾಮೆನ್ಸ್‌ನೊಂದಿಗೆ ಬರುವ ಪ್ರಬಲ ಸ್ಪರ್ಧಿಗಳಾಗಿವೆ. ಒಂದೇ ಬ್ರಾಂಡ್ ಆಗಿದ್ದರೂ, ಅವುಗಳ ವಿಭಾಗವು 100cc ಆಗಿರುವುದರಿಂದ ಪ್ರತಿಸ್ಪರ್ಧಿಗಳಾಗಿ ನಿಲ್ಲುತ್ತವೆ. ಇವರಡರಲ್ಲಿ ಯಾವುದು ಬೆಸ್ಟ್ ಎಂಬುದು ವೈಶಿಷ್ಟ್ಯಗಳು, ಡಿಸೈನ್, ಮೈಲೇಜ್ ಮತ್ತು ಬಜೆಟ್ ಪರಿಗಣನೆಗಳನ್ನು ಅವಲಂಬಿಸಿರುತ್ತದೆ. ಯಾವುದನ್ನು ಆರಿಸಬೇಕೆಂದು ನಿರ್ಧರಿಸಲು ನಿಮಗೆ ಸಹಾಯ ಮಾಡಲು 2025 ರ ಹೀರೋ ಪ್ಯಾಶನ್ ಪ್ಲಸ್ ಮತ್ತು ಹೀರೋ ಸ್ಪ್ಲೆಂಡರ್ ಪ್ಲಸ್ 100cc ಬೈಕ್‌ಗಳ ವಿವರವಾದ ಹೋಲಿಕೆ ಇಲ್ಲಿದೆ.
Advertisement

30 ಕಿ.ಮೀ ಮೈಲೇಜ್.. 5.99 ಲಕ್ಷ, ಈ ಜನಪ್ರಿಯ Maruti Car ಖರೀದಿಸಲು..

ಮಾರುತಿ ಸುಜುಕಿ ಬಲೆನೊ (Maruti Suzuki Baleno), ಪ್ರಮುಖ ಹ್ಯಾಚ್‌ಬ್ಯಾಕ್ ಆಗಿ ಹೊರಹೊಮ್ಮಿದೆ. ಈ ಕಾರು ತುಂಬಾ ಅಚ್ಚುಕಟ್ಟಾದ ವಿನ್ಯಾಸ ಹೊಂದಿದ್ದು, ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಆದರೂ ಸೆಪ್ಟೆಂಬರ್ ತಿಂಗಳು ಇದೇ 'ಬಲೆನೊ' ಮಾರಾಟ ಸಂಖ್ಯೆ ಕುಸಿತವಾಗಿದೆ. 13,173 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಿಸಲಾಗಿದೆ. 2024ರ ಇದೇ ಅವಧಿಯಲ್ಲಿ 14,292 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಈ ಅಂಕಿ-ಸಂಖ್ಯೆಯನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 7.83% ಇಳಿಕೆಯಾಗಿದೆ.

TATA: ಸಿದ್ಧರಾಗಿ.. ಕಲ್ಲು ಬಂಡೆಯಂತಹ 3 ಹೊಸ ಟಾಟಾ ಕಾರುಗಳು..

ಟಾಟಾ ಮೋಟಾರ್ಸ್ (Tata Motors) ಜಗಮೆಚ್ಚಿದ ಕಾರು ತಯಾರಕ ಕಂಪನಿಯಾಗಿದೆ. ದೇಶೀಯವಾಗಿ ಟಿಯಾಗೊ, ಪಂಚ್, ನೆಕ್ಸಾನ್‌, ಹ್ಯಾರಿಯರ್, ಸಫಾರಿ ಸೇರಿದಂತೆ ವಿವಿಧ ಹ್ಯಾಚ್‌ಬ್ಯಾಕ್ & ಎಸ್‌ಯುವಿಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಸದ್ಯ 3 ಹೊಚ್ಚ ಹೊಸ ಕಾರುಗಳನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಲು ಕಂಪನಿಯು ಎಲ್ಲ ರೀತಿಯ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ. ಬನ್ನಿ.. ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಯಮಹಾ ದೀಪಾವಳಿ ಆಫರ್: ರೂ. 20,000 ವರೆಗೆ ಬೆಲೆ ಇಳಿಕೆ

ಕರ್ನಾಟಕದೆಲ್ಲೆಡೆ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿರುವ ಈ ಸಂದರ್ಭದಲ್ಲಿ ಯಮಹಾ ಕಂಪನಿಯು ತನ್ನ ಗ್ರಾಹಕರಿಗೆ ವಿಶೇಷ ಆಫರ್‌ಗಳನ್ನು ಘೋಷಿಸಿದೆ. ಈ ಶುಭ ಸಂದರ್ಭದಲ್ಲಿ ಗ್ರಾಹಕರ ಸಂಭ್ರಮ ಹೆಚ್ಚಿಸುವ ನಿಟ್ಟಿನಲ್ಲಿ ಯಮಹಾ ತನ್ನ ಜನಪ್ರಿಯ ಮೋಟಾರ್‌ ಸೈಕಲ್‌ಗಳು ಮತ್ತು ಸ್ಕೂಟರ್‌ಗಳ ಮೇಲೆ ಜಿಎಸ್‌ಟಿ ಲಾಭಗಳು, ವಿಮೆ ಆಫರ್‌ಗಳು ಮತ್ತು ಕ್ಯಾಶ್‌ ಬ್ಯಾಕ್‌ ಒದಗಿಸುವ ಮೂಲಕ ಹಲವಾರು ವಿಶೇಷ ಆಫರ್ ಗಳನ್ನು ನೀಡುತ್ತಿದೆ. ಹಾಗಾಗಿ ಯಮಹಾವನ್ನು ಮನೆಗೆ ತೆಗೆದುಕೊಂಡು ಹೋಗಲು ಇದು ಸೂಕ್ತ ಸಮಯವಾಗಿದೆ.

ಕರ್ನಾಟಕ ಪೊಲೀಸರಿಗೆ ದುಬಾರಿ ಹೋಂಡಾ ಸಿಬಿ350 ಬೈಕ್‌ಗಳ ಹಸ್ತಾಂತರ

ಭಾರತದ ಎಲ್ಲಾ ಹೋಂಡಾ ಸಮೂಹದ ಕಂಪನಿಗಳ ಸಿಎಸ್‌ಆ‌ರ್ ಅಂಗವಾದ ಹೋಂಡಾ ಇಂಡಿಯಾ ಫೌಂಡೇಶನ್ (HIF), ತನ್ನ 'ಸಡಕ್ ಸಹಾಯಕ್: ಸುರಕ್ಷಿತ್ ಮಾರ್ಗ, ಸುರಕ್ಷಿತ್ ಜೀವನ್' ಯೋಜನೆಯ ಭಾಗವಾಗಿ ಕರ್ನಾಟಕ ಪೊಲೀಸರಿಗೆ 50 ವಿಶೇಷವಾಗಿ ಸುಸಜ್ಜಿತ ಕ್ವಿಕ್ ರೆಸ್ಪಾನ್ಸ್ ಟೀಮ್ (QRT) ವಾಹನಗಳನ್ನು ಹಸ್ತಾಂತರಿಸಿದೆ. ಈ ಉಪಕ್ರಮವು ಹೆಚ್‌ಐಎಫ್‌ನ ವಿಶಾಲವಾದ ರಸ್ತೆ ಸುರಕ್ಷತೆ ಮತ್ತು ಸಮುದಾಯ ಕಲ್ಯಾಣ ಕಾರ್ಯಕ್ರಮದ ಭಾಗವಾಗಿದ್ದು, ರಾಜ್ಯಾದ್ಯಂತ ಸುರಕ್ಷಿತ ರಸ್ತೆಗಳನ್ನು ರಚಿಸುವ ಮತ್ತು ಸಾರ್ವಜನಿಕ ಸುರಕ್ಷತಾ ಕಾರ್ಯವಿಧಾನಗಳನ್ನು ಬಲಪಡಿಸುವ ಗುರಿಯನ್ನು ಹೊಂದಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.
Advertisement

ಹಬ್ಬದ ಎಫೆಕ್ಟ್ - GST ಇಳಿಕೆ: ಒಂದೇ ದಿನದಲ್ಲಿ 1 ಲಕ್ಷ ಕಾರುಗಳು

ಭಾರತದಲ್ಲಿ ಆಚರಿಸಲಾಗುವ ದೊಡ್ಡ ಹಬ್ಬಗಳಲ್ಲಿ ಧಂತೇರಸ್ ಕೂಡ ಒಂದು, ಈ ಹಬ್ಬ ದಕ್ಷಿಣ ಭಾರತದಲ್ಲಿ ಅಷ್ಟೇನು ಆಚರಿಸದಿದ್ದರೂ ಉತ್ತರ ಭಾರತದಲ್ಲಿ ಹೆಚ್ಚಾಗಿ ಆಚರಿಸಲಾಗುತ್ತದೆ. ಧನತ್ರಯೋದಶಿ ಎಂದೂ ಕರೆಯಲ್ಪಡುವ ಧಂತೇರಸ್' ದೀಪಾವಳಿ ಹಬ್ಬಕ್ಕೆ ಒಂದು ದಿನ ಮುಂಚಿತವಾಗಿ ಆಚರಿಸಲಾಗುತ್ತದೆ. ಇದು ಸಂಪತ್ತು, ಆರೋಗ್ಯ ಮತ್ತು ಸಮೃದ್ಧಿಯನ್ನು ಸಂಕೇತಿಸುತ್ತದೆ. ಸಂಪತ್ತು ಮತ್ತು ಸಮೃದ್ಧಿಯನ್ನು ಸಂಕೇತಿಸುವ ಈ ದಿನದಂದು ಚಿನ್ನ, ಬೆಳ್ಳಿ ಅಥವಾ ಹೊಸ ವಾಹನಗಳನ್ನು ಖರೀದಿಸುವುದು ಶುಭವೆಂದು ಪರಿಗಣಿಸಲಾಗಿದೆ. ಇದು ಆಟೋ ಉದ್ಯಮಕ್ಕೆ ಭರ್ಜರಿ ಲಾಭ ತಂದುಕೊಟ್ಟಿದ್ದು, 1,00,000 ಕ್ಕೂ ಹೆಚ್ಚು ಕಾರುಗಳು ಮಾರಾಟವಾಗಿವೆ ಎಂದು ಉದ್ಯಮದ ಮೂಲಗಳು ತಿಳಿಸಿವೆ.