TVS: 93,800 ರೂಪಾಯಿ.. ಪ್ರಖ್ಯಾತ ಟಿವಿಎಸ್ ಬೈಕ್‌ನ ಹೊಸ ವೇರಿಯೆಂಟ್..

ಭಾರತದ ಮಾರುಕಟ್ಟೆಯಲ್ಲಿಂದು ಟಿವಿಎಸ್ ರೈಡರ್ (TVS Raider) ಮೋಟಾರ್‌ಸೈಕಲ್‌ನ ಹೊಚ್ಚ ಹೊಸ ರೂಪಾಂತರವಾದ 'ಡುಯಲ್ ಡಿಸ್ಕ್ ಬ್ರೇಕ್'ನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಲಾಗಿದೆ. ಇದು ಸ್ಪೋರ್ಟಿ ಕಮ್ಯೂಟರ್ ಬೈಕ್ ಆಗಿದ್ದು, ಹತ್ತಾರು ನವೀನ ವೈಶಿಷ್ಟ್ಯಗಳನ್ನು ಹೊಂದಿದೆ. ಜೊತೆಗಿದು ಗರಿಷ್ಠ ಸುರಕ್ಷತೆಗೂ ಸಾಕ್ಷಿಯಾಗಿದೆ. ಬನ್ನಿ, ಈ ನೂತನ ರೂಪಾಂತರದ ಬೆಲೆ (Price), ಕಾರ್ಯಕ್ಷಮತೆ (Performance) ಹಾಗೂ ವೈಶಿಷ್ಟ್ಯಗಳ (Features) ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

ಕ್ಷೌರಿಕನಿಂದ ಕೋಟ್ಯಾಧಿಪತಿ.. ಬಹುಕೋಟಿ ಬೆಲೆಯ Range Rover..

ಬೆಂಗಳೂರಿನ ರಮೇಶ್ ಬಾಬು (Ramesh Babu) ವೃತ್ತಿಯಲ್ಲಿ ಕ್ಷೌರಿಕರಾಗಿದ್ದಾರೆ. ಜೀವನದಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದು, ಯಶಸ್ಸಿನ ಮೆಟ್ಟಿಲನ್ನು ಒಂದೊಂದಾಗಿ ಏರುತ್ತಾ ಬಂದಿದ್ದಾರೆ. 'ಬಿಲಿಯನೇರ್ ಕ್ಷೌರಿಕ' ಎಂದೇ ಖ್ಯಾತಿ ಗಳಿಸಿದ್ದಾರೆ. ಟ್ರಾವೆಲ್ಸ್ ಬ್ಯುಸಿನೆಸ್ ನಡೆಸುತ್ತಿದ್ದು, ಐಷಾರಾಮಿ ಕಾರುಗಳನ್ನು ಬಾಡಿಗೆ ನೀಡುತ್ತಾರೆ. ರೋಲ್ಸ್ ರಾಯ್ಸ್ ಘೋಸ್ಟ್, ಮರ್ಸಿಡಿಸ್ ಮೇಬ್ಯಾಕ್, ಮರ್ಸಿಡಿಸ್ ಬೆಂಜ್ ಜಿ-ವ್ಯಾಗನ್, ಲ್ಯಾಂಡ್ ರೋವರ್ ಡಿಫೆಂಡರ್ 130 ಹಾಗೂ ಬಿಎಂಡಬ್ಲ್ಯೂ ಐ7 ಸೇರಿದಂತೆ 200ಕ್ಕೂ ಹೆಚ್ಚು ಕಾರುಗಳನ್ನು ಹೊಂದಿದ್ದಾರೆ.

Mahindra Bolero: ಬೆಲೆಯೂ ಅಗ್ಗ.. ಹೊಸ ಮಹೀಂದ್ರಾ ಬೊಲೆರೊ..

Explore the new Mahindra Bolero B8 2025 launched in India. Know about its features, price, and specifications. | ಭಾರತದಲ್ಲಿ ಬಿಡುಗಡೆಯಾದ ಹೊಸ ಮಹೀಂದ್ರ ಬೊಲೆರೊ ಬಿ8 2025 ಅನ್ನು ಅನ್ವೇಷಿಸಿ. ಇದರ ವೈಶಿಷ್ಟ್ಯಗಳು, ಬೆಲೆ ಮತ್ತು ವಿಶೇಷಣಗಳ ಬಗ್ಗೆ ತಿಳಿಯಿರಿ.

ಮಹೀಂದ್ರಾ ಬೊಲೆರೊ ನಿಯೋ ಫೇಸ್‌ಲಿಫ್ಟ್ ಬಿಡುಗಡೆ

Mahindra Bolero Neo facelift launched in India with updated styling, new tech, and enhanced comfort. Prices start from ₹9 lakh. | ನವೀಕರಿಸಿದ ಶೈಲಿ, ಹೊಸ ತಂತ್ರಜ್ಞಾನ ಮತ್ತು ಹೆಚ್ಚಿದ ಸೌಕರ್ಯದೊಂದಿಗೆ ಭಾರತದಲ್ಲಿ ಮಹೀಂದ್ರ ಬೊಲೆರೊ ನಿಯೋ ಫೇಸ್‌ಲಿಫ್ಟ್ ಬಿಡುಗಡೆಯಾಗಿದೆ. ಬೆಲೆಗಳು ₹9 ಲಕ್ಷದಿಂದ ಪ್ರಾರಂಭವಾಗುತ್ತವೆ.
Advertisement

Mahindra: 7-ಸೀಟರ್.. 7.99 ಲಕ್ಷ, ಹೊಸ ಮಹೀಂದ್ರಾ ಬೊಲೆರೊ..

ದೇಶೀಯ ಮಾರುಕಟ್ಟೆಯಲ್ಲಿಂದು 2025ರ ಮಹೀಂದ್ರಾ ಬೊಲೆರೊ ಫೇಸ್‌ಲಿಫ್ಟ್ (Mahindra Bolero Facelift) ಎಸ್‌ಯುವಿಯನ್ನು ಬಿಡುಗಡೆಗೊಳಿಸಲಾಗಿದೆ. ಇದು ಹಳೆಯ ಬೊಲೆರೊಗೆ ಹೋಲಿಕೆ ಮಾಡಿದರೆ, ವಿನ್ಯಾಸ ಹಾಗೂ ವೈಶಿಷ್ಟ್ಯಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ಪಡೆದುಕೊಂಡಿದೆ. ಅತಿ ಕಡಿಮೆ ಬೆಲೆಯಲ್ಲಿಯೂ ಗ್ರಾಹಕರ ಖರೀದಿಗೆ ಲಭ್ಯವಿದೆ. ಬನ್ನಿ, ಈ ಹೊಚ್ಚ ಹೊಸ ಕಾರಿನ ದರವೆಷ್ಟು ಹಾಗೂ ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

ಹೊಸ ಮಹೀಂದ್ರಾ ಫೇಸ್‌ಲಿಫ್ಟ್ ಎಸ್‌ಯುವಿ ಬಿಡುಗಡೆ

ಭಾರತದ ಪ್ರಮುಖ SUV ತಯಾರಕರಾದ ಮಹೀಂದ್ರಾ, ಇಂದು ಹೊಸ 2025 ಬೊಲೆರೊ ನಿಯೋ ಫೇಸ್‌ಲಿಫ್ಟ್ ಮಾಡಲ್ ಬಿಡುಗಡೆ ಮಾಡಿದೆ. ಇದರ ಬೆಲೆ ರೂ. 8.49 ಲಕ್ಷ (ಎಕ್ಸ್ ಶೋ ರೂಂ) ದಿಂದ ಪ್ರಾರಂಭವಾಗುತ್ತದೆ. ಈ ಬಿಡುಗಡೆಯೊಂದಿಗೆ, ಬೊಲೆರೊ ಸಂಸ್ಕರಿಸಿದ ಡಿಸೈನ್, ವರ್ಧಿತ ಸೌಕರ್ಯ ಮತ್ತು ಆಧುನಿಕ ವೈಶಿಷ್ಟ್ಯಗಳೊಂದಿಗೆ ತನ್ನ ಸಾಂಪ್ರದಾಯಿಕ ಆಕರ್ಷಣೆಯನ್ನು ಮುಂದುವರೆಸಿದೆ. ಗದ್ದಲದ ಬೀದಿಗಳಿಂದ ಹಿಡಿದು ಒರಟಾದ ಗ್ರಾಮೀಣ ಭೂಪ್ರದೇಶಗಳವರೆಗೆ ವೈವಿಧ್ಯಮಯ ರಸ್ತೆಗಳಲ್ಲಿ ಮುನ್ನುಗ್ಗುವ ಈ ಎಸ್‌ಯುವಿ, ಅಸಾಧಾರಣ ಹೊಂದಾಣಿಕೆ ಮತ್ತು ಮೌಲ್ಯವನ್ನು ನೀಡುತ್ತದೆ ಎಂದು ಕಂಪನಿ ಹೇಳಿದೆ.

ಎರಡು ಟ್ರಯಾಂಫ್ ಬೈಕ್‌ಗಳ ಮೇಲೆ ರೂ. 16,000 ಬೆಲೆ ಇಳಿಕೆ

120 ವರ್ಷಗಳಿಗೂ ಹೆಚ್ಚು ಮೋಟಾರ್‌ಸೈಕ್ಲಿಂಗ್ ಪರಂಪರೆಯನ್ನು ಹೊಂದಿರುವ ಟ್ರಯಂಫ್ ಮೋಟಾರ್‌ಸೈಕಲ್ಸ್, ಇಂದು ತನ್ನ ಪ್ರಮುಖ ಸ್ಪೀಡ್ 400 ಮತ್ತು ಸ್ಪೀಡ್ T4 ಮೋಟಾರ್‌ಸೈಕಲ್‌ಗಳ ಬೆಲೆ ಇಳಿಕೆಯನ್ನು ಘೋಷಿಸಿದೆ. ಸ್ಪೀಡ್ ಸಿರೀಸ್ ಟ್ರಯಂಫ್‌ನ ಭಾರತದ ಪೋರ್ಟ್‌ಫೋಲಿಯೊದಲ್ಲಿ ವೇಗವಾಗಿ ಬೆಳೆಯುತ್ತಿರುವ ಸಿರೀಸ್ ಆಗಿದ್ದು, ಆರ್ಥಿಕ ವರ್ಷ 2023-24 ರಿಂದ ಮಾಸಿಕ ಮಾರಾಟವು ಬಹುತೇಕ ದ್ವಿಗುಣಗೊಂಡಿದೆ. ಇವು 400ಸಿಸಿ ಮೋಟಾರ್‌ಸೈಕಲ್‌ಗಳಾಗಿದ್ದು, ಹೊಸ ಜಿಎಸ್‌ಟಿ ನಿಯಮಗಳ ಪ್ರಕಾರ 350 ಸಿಸಿಗಿಂತ ಹೆಚ್ಚಿನ ಮೋಟಾರ್‌ಸೈಕಲ್‌ಗಳ ಮೇಲಿನ ಜಿಎಸ್‌ಟಿ ಶೇ 40ಕ್ಕೆ ಏರಿದೆ. ಆದರೂ ಕಂಪನಿ ಬೆಲೆ ಇಳಿಕೆ ಮಾಡಿರುವುದು ವಿಶೇಷ.

ಫುಲ್ ಡಿಮ್ಯಾಂಡ್‌ನ ಟಾಟಾ ನೆಕ್ಸಾನ್ ನೀವು ಖರೀದಿಸಬೇಕೆ?

ಭಾರತದ ಪ್ರಮುಖ ಕಾರು ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್, ದೇಶದಲ್ಲಿ ಭಾರೀ ಬೇಡಿಕೆಯೊಂದಿಗೆ ಮುನ್ನುಗ್ಗುತ್ತಿದೆ. ಅದರಲ್ಲೂ ಕಂಪನಿಯ ಬಹುಬೇಡಿಕೆಯ ಕಾರೊಂದು ಇತ್ತೀಚಿನ ವರ್ಷಗಳಲ್ಲಿ ತುಂಬಾ ಮಾರಾಟ ಕಾಣುತ್ತಿದೆ. ಮಾರುತಿ ಸುಜುಕಿ, ಮಹೀಂದ್ರಾ ಮತ್ತು ಹುಂಡೈ ಬ್ರಾಂಡ್‌ಗಳ ಜನಪ್ರಿಯ ಕಾರುಗಳನ್ನು ಮಾರಾಟದಲ್ಲಿ ಮೀರಿಸಿ, ಬರೋಬ್ಬರಿ 22,573 ಟಾಟಾ ನೆಕ್ಸಾನ್ ಕಾರುಗಳು ಮಾರಾಟವಾಗಿವೆ. ಈ ಕಾರು ಜನರಲ್ಲಿ ಹೆಚ್ಚು ಜನಪ್ರಿಯತೆ ಪಡೆಯುತ್ತಿದ್ದು, ಇದನ್ನು ಖರೀದಿಸುವ ಮುನ್ನ ಗ್ರಾಹಕರು ಪರೀಶೀಲಿಸಬೇಕಾದ ಪ್ರಮುಖಾಂಶಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇವೆ.
Advertisement

ಶೋರೂಂ ಮುಂದೆ ಸಾಲು ಕಟ್ಟಿದ ಗ್ರಾಹಕರು! 33 Km ಮೈಲೇಜ್..

ಮಾರುತಿ ಸುಜುಕಿ ಡಿಜೈರ್ (Maruti Suzuki Dzire) ಜಗಮೆಚ್ಚಿದ ಸೆಡಾನ್‌ ಆಗಿದೆ. ಇದು ನೋಡುಗರ ಕಣ್ಣು ಕುಕ್ಕುವಂತಹ ವಿನ್ಯಾಸ ಹೊಂದಿದ್ದು, ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಕೈಗೆಟುಕುವ ಬೆಲೆಯೂ ಸಿಗುತ್ತದೆ. ಸದ್ಯ, ಈ ಸೆಪ್ಟೆಂಬರ್ ತಿಂಗಳಲ್ಲಿ ದೇಶೀಯವಾಗಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಗೊಂಡ ಪ್ರಮುಖ 5 ಕಾರುಗಳ ಪಟ್ಟಿ ಪ್ರಕಟಗೊಂಡಿದೆ. ಅದರಲ್ಲೂ ಇದೇ 'ಡಿಜೈರ್' ಎರಡನೇ ಸ್ಥಾನದಲ್ಲಿದೆ. ಸರಿ ಸುಮಾರು 20,038 ಯುನಿಟ್‌ಗಳನ್ನು ಗ್ರಾಹಕರಿಗೆ ವಿತರಣೆ ಮಾಡಲಾಗಿದೆ. ಮೊದಲ ಸ್ಥಾನವನ್ನು ಟಾಟಾ ನೆಕ್ಸಾನ್ (22,573 ಯುನಿಟ್‌ಗಳು) ತನ್ನದಾಯಿಸಿಕೊಂಡಿದೆ.

Tata: ಹಬ್ಬದ ಎಫೆಕ್ಟ್: ಗಗನ ಮುಟ್ಟಿದ ಟಾಟಾ ನೆಕ್ಸಾನ್ ಮಾರಾಟ

ಸೆಪ್ಟೆಂಬರ್ 2025 ರಲ್ಲಿ, ಟಾಟಾ ನೆಕ್ಸಾನ್ (Tata Nexon) ಭಾರತದ ಅತ್ಯುತ್ತಮ ಮಾರಾಟವಾದ ಪ್ರಯಾಣಿಕ ವಾಹನವಾಗುವ ಮೂಲಕ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಮಾರುತಿ ಸುಜುಕಿ, ಮಹೀಂದ್ರಾ ಮತ್ತು ಹುಂಡೈ ಬ್ರಾಂಡ್‌ಗಳ ಜನಪ್ರಿಯ ಕಾರುಗಳನ್ನು ಮಾರಾಟದಲ್ಲಿ ಮೀರಿಸಿದೆ. 22,573 ಯುನಿಟ್‌ ಕಾರುಗಳ ಗಮನಾರ್ಹ ಮಾರಾಟ ಪ್ರಮಾಣದೊಂದಿಗೆ, ನೆಕ್ಸಾನ್ ಟಾಟಾ ಪ್ರಯಾಣಿಕ ವಾಹನ ವಿಭಾಗದಲ್ಲಿ ಹೊಸ ಮಾಸಿಕ ದಾಖಲೆಯನ್ನು ಸ್ಥಾಪಿಸಿದೆ. ಹೆಚ್ಚು ಸ್ಪರ್ಧಾತ್ಮಕ ಭಾರತೀಯ ಕಾಂಪ್ಯಾಕ್ಟ್ SUV ವಿಭಾಗದಲ್ಲಿ ತನ್ನ ಪ್ರಬಲ ಸ್ಥಾನವನ್ನು ಬಲಪಡಿಸಿಕೊಂಡಿದೆ.

Thar: 9.99 ಲಕ್ಷ.. ಹೊಸ ಮಹೀಂದ್ರಾ ಥಾರ್‌ಗೆ ಬದಲಿ ಆಯ್ಕೆಯಾಗಬಲ್ಲ..

ಇತ್ತೀಚೆಗೆ 2025ರ ನೂತನ ಮಹೀಂದ್ರಾ ಥಾರ್ 3-ಡೋರ್ ಫೇಸ್‌ಲಿಫ್ಟ್ (Mahindra Thar 3-Door Facelift) ಆಫ್-ರೋಡ್ ಎಸ್‌ಯುವಿಯನ್ನು ಬಿಡುಗಡೆಗೊಳಿಸಲಾಯಿತು. ಇದು ಕನಿಷ್ಠ ರೂ.9.99 ಲಕ್ಷ ಹಾಗೂ ಗರಿಷ್ಠ ರೂ.16.25 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. 2-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್, 1.5-ಲೀಟರ್ ಡೀಸೆಲ್ ಹಾಗೂ 2.2-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ. 15 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ. 4 ಆಸನಗಳನ್ನು ಒಳಗೊಂಡಿದೆ. 10.25 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 4 ಸ್ಪೀಕರ್‌ ಸೌಂಡ್ ಸಿಸ್ಟಮ್, ಸ್ಲೈಡಿಂಗ್ ಆರ್ಮ್‌ರೆಸ್ಟ್ ಹಾಗೂ ಟೈಪ್-ಸಿ ಯುಎಸ್‌ಬಿ ಪೋರ್ಟ್‌ಗಳು ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಗಾಗಿ ಡುಯಲ್ ಏರ್‌ಬ್ಯಾಗ್‌ಗಳನ್ನು ತನ್ನಾಗಿಸಿಕೊಂಡಿದೆ. ಇದೇ ಹೊಸ 'ಥಾರ್‌'ಗೆ ಈ 3 ಎಸ್‌ಯುವಿಗಳು ಪರ್ಯಾಯ ಆಯ್ಕೆಯಾಗಬಲ್ಲವು. ಬನ್ನಿ.. ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಕಂಪನಿಯ ಕಷ್ಟಕ್ಕೆ ಹೆಗಲು ಕೊಟ್ಟ ಕಾರಿದು

ಜನಪ್ರಿಯ ಕಾರು ತಯಾರಕ ಕಂಪನಿಯಾಗಿರುವ ಸ್ಕೋಡಾ, 2025 ರ ಮೂರನೇ ತ್ರೈಮಾಸಿಕದಲ್ಲಿ ದಾಖಲೆಯ ಮಾರಾಟ ಬೆಳವಣಿಗೆಯನ್ನು ದಾಖಲಿಸಿದೆ. ಜುಲೈನಿಂದ ಸೆಪ್ಟೆಂಬರ್ ನಡುವೆ 17,161 ವಾಹನಗಳನ್ನು ಮಾರಾಟ ಮಾಡಿದೆ. ಈ ಪ್ರಭಾವಶಾಲಿ ಕಾರ್ಯಕ್ಷಮತೆಗೆ ಕಾರಣ ಬ್ರ್ಯಾಂಡ್‌ನ ಮೊದಲ ಸಬ್ - 4 ಮೀಟರ್ SUV ಸ್ಕೋಡಾ ಕೈಲಾಕ್ ಆಗಿದೆ. ಇದು ಬಿಡುಗಡೆಯಾದಾಗಿ (2024 ಡಿಸೆಂಬರ್)ನಿಂದ ಇಲ್ಲಿಯವರೆಗೆ 34,500 ಯುನಿಟ್‌ ಕಾರುಗಳು ಮಾರಾಟವಾಗಿವೆ. ಸ್ಕೋಡಾ ಕೈಲಾಕ್ 2025 ರಲ್ಲಿ ಕಂಪನಿಯ ಪ್ರಮುಖ ಬೆಳವಣಿಗೆಯ ಕಾರಾಗಿ ಹೊರಹೊಮ್ಮಿದೆ.
Advertisement

ಹೊಸ ಬೆಳಗಾವಿ ನಗರ ಸಾರಿಗೆ ಬಸ್ ನಿಲ್ದಾಣ ಉದ್ಘಾಟಣೆ

ಹೊಸ ಬೆಳಗಾವಿ ನಗರ ಸಾರಿಗೆ ಬಸ್ ನಿಲ್ದಾಣವನ್ನು ಅಕ್ಟೋಬರ್ 4, 2025 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಅಭಿವೃದ್ಧಿಪಡಿಸಲಾದ ಈ ಬಸ್ ಟರ್ಮಿನಲ್, 49.20 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ನೂತನ ನಗರ ಸಾರಿಗೆ ಬಸ್ ನಿಲ್ದಾಣ ಸೌಲಭ್ಯವು ಸುಮಾರು 8,383 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿದ್ದು, ಬಹು ಮಹಡಿಗಳನ್ನು ಒಳಗೊಂಡಿದೆ. ಬೆಳಗಾವಿ ನಗರದ ಬೆಳೆಯುತ್ತಿರುವ ಸಾರಿಗೆ ಅಗತ್ಯಗಳನ್ನು ಪೂರೈಸಲು ಆಧುನಿಕ ಸಾರಿಗೆ - ವಾಣಿಜ್ಯ ಕೇಂದ್ರವಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ.

ನಾಳೆ ಎರಡು ಹೊಸ ಮಹೀಂದ್ರಾ ಎಸ್‌ಯುವಿಗಳು ಬಿಡುಗಡೆ ಸಜ್ಜು

ಮಹೀಂದ್ರಾ ಬೊಲೆರೊ (Mhindra Bolero) ಮತ್ತು ಬೊಲೆರೊ ನಿಯೋ (Bolero Neo) ಫೇಸ್‌ಲಿಫ್ಟ್ ಎಸ್‌ಯುವಿಗಳು ನಾಳೆ (ಅಕ್ಟೋಬರ್ 6, 2025) ಭಾರತದಲ್ಲಿ ಬಿಡುಗಡೆಗೆ ಸಜ್ಜಾಗಿವೆ. 2021 ರ ಚೊಚ್ಚಲ ಪ್ರವೇಶದ ನಂತರ ಬೊಲೆರೊ ನಿಯೋಗೆ ಇದು ಮೊದಲ ಪ್ರಮುಖ ನವೀಕರಣವಾಗಿದೆ, ಆದರೆ ಕ್ಲಾಸಿಕ್ ಬೊಲೆರೊಗೆ, ಈ ಫೇಸ್‌ಲಿಫ್ಟ್ ಅದರ ಪ್ರಸ್ತುತ ಪೀಳಿಗೆಗೆ ಕೊನೆಯ ನವೀಕರಣವಾಗಿರಬಹುದು ಎಂದು ಹೇಳಲಾಗುತ್ತಿದೆ. ಹಾಗಾದ್ರೆ ನಾಳೆ ಬಿಡುಗಡೆಯಾಗಲಿರುವ ಈ ಮಾಡಲ್‌ಗಳಲ್ಲಿ ನಿರೀಕ್ಷಿತ ಅಪ್‌ಡೇಟ್‌ಗಳನ್ನು ಇಲ್ಲಿ ನೋಡೋಣ.

ಕೈಗೆಟುಕುವ ಬೆಲೆಯ ಟಾಪ್-5 ಡೀಸೆಲ್ ಎಂಜಿನ್ 7-ಸೀಟರ್ ಎಸ್‌ಯುವಿಗಳು

2025 ರಲ್ಲಿ, ಡೀಸೆಲ್ ಚಾಲಿತ 7-ಸೀಟರ್ ಎಸ್‌ಯುವಿಗಳು ಭಾರತದಲ್ಲಿ ಜನಪ್ರಿಯ ಆಯ್ಕೆಯಾಗಿ ಉಳಿದಿವೆ, ವಿಶೇಷವಾಗಿ ಇಂಧನ ದಕ್ಷತೆ ಮತ್ತು ವಿಶಾಲವಾದ ಇಂಟೀರಿಯರ್‌ಗೆ ಆದ್ಯತೆ ನೀಡುವ ಕುಟುಂಬ ಪ್ರಯಾಣಿಕರಲ್ಲಿ ಭಾರೀ ಜನಪ್ರಿಯತೆ ಪಡೆಯುವತ್ತಿವೆ. ಪೆಟ್ರೋಲ್ ಮತ್ತು ಎಲೆಕ್ಟ್ರಿಕ್ ಎಸ್‌ಯುವಿಗಳಲ್ಲಿ ಹೆಚ್ಚುತ್ತಿರುವ ಆಸಕ್ತಿಯ ಹೊರತಾಗಿಯೂ, ಲಾಂಗ್ ಡ್ರೈವ್‌ಗಳು ಮತ್ತು ಒರಟು ಭೂಪ್ರದೇಶಗಳಿಗೆ ಡೀಸೆಲ್ ಕಾರುಗಳು ಗ್ರಾಹಕರಲ್ಲಿ ಗಮನಾರ್ಹ ಸ್ಥಾನವನ್ನು ಪಡೆದಿವೆ. ಪ್ರಸ್ತುತ ಲಭ್ಯವಿರುವ ಕೈಗೆಟುಕುವ 7-ಸೀಟರ್ ಡೀಸೆಲ್ ಎಸ್‌ಯುವಿಗಳಲ್ಲಿ, ಬೆಲೆಗೆ ತಕ್ಕ ಮೌಲ್ಯವನ್ನು ನೀಡುವ ಪ್ರಮುಖ ಮಾಡಲ್‌ಗಳ ಪಟ್ಟಿ ಇಲ್ಲಿದೆ.

ಭಾರತದಲ್ಲಿ ಐಷಾರಾಮಿ ಕಾರುಗಳ ಮಾರಾಟ ಜೋರು

ಜರ್ಮನ್ ಐಷಾರಾಮಿ ಕಾರು ತಯಾರಕ ಕಂಪನಿಯಾದ ಆಡಿ, 2025 ರ ಮೊದಲ ಒಂಬತ್ತು ತಿಂಗಳುಗಳಲ್ಲಿ 3,197 ಯುನಿಟ್‌ ಕಾರುಗಳನ್ನು ಮಾರಾಟ ಮಾಡಿರುವುದಾಗಿ ಘೋಷಿಸಿದೆ. ಗ್ರಾಹಕರ ಮೇಲೆ ಪರಿಣಾಮ ಬೀರಿದ ರಾಜಕೀಯ ಬೆಳವಣಿಗೆಗಳು ಮತ್ತು ವರ್ಷವಿಡೀ ವಿನಿಮಯ ದರಗಳ ಪ್ರತಿಕೂಲ ಚಲನೆಯೊಂದಿಗೆ ಸಂಕೀರ್ಣ ಮಾರುಕಟ್ಟೆ ವಾತಾವರಣವನ್ನು ಬ್ರ್ಯಾಂಡ್ ನಿಭಾಯಿಸಿರುವುದಾಗಿ ತಿಳಿಸಿದೆ. ಹಬ್ಬದ ಋತುವಿನ ಬೇಡಿಕೆ ಮತ್ತು GST 2.0 ನಂತರದ ಗ್ರಾಹಕರ ಆಸಕ್ತಿಯ ಹೆಚ್ಚಳವು ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಮಾರಾಟದ ವೇಗವನ್ನು ಮರಳಿ ತರುವ ನಿರೀಕ್ಷೆಯಿದೆ ಎಂದು ಆಡಿ ವಿಶ್ವಾಸ ವ್ಯಕ್ತಪಡಿಸಿದೆ.
Advertisement

ರಗಡ್ ಲುಕ್‌ನಲ್ಲಿ ಮೊನ್ನೆಯಷ್ಟೆ ಬಿಡುಗಡೆಯಾದ 7-ಸೀಟರ್: ರೂ.8.29 ಲಕ್ಷ

ಜನಪ್ರಿಯ ಫ್ರೆಂಚ್ ಕಾರು ತಯಾರಕ ಸಿಟ್ರನ್, ತನ್ನ ಹೊಸ ಏರ್‌ಕ್ರಾಸ್ ಎಕ್ಸ್ (Aircross X) ಅನ್ನು ಭಾರತದಲ್ಲಿ ರೂ.8.29 ಲಕ್ಷ (ಎಕ್ಸ್-ಶೋರೂಂ) ಪರಿಚಯಾತ್ಮಕ ಬೆಲೆಯಲ್ಲಿ ಇತ್ತೀಚೆಗೆ ಬಿಡುಗಡೆ ಮಾಡಿದೆ. ಇದು ಸ್ಮಾರ್ಟ್, ಪ್ರೀಮಿಯಂ ಮತ್ತು ವಿಶಾಲವಾದ ಕುಟುಂಬ-ಆಧಾರಿತ SUV ಆಗಿ ಸ್ಥಾನ ಪಡೆದಿದ್ದು, ಭಾರತೀಯ ಖರೀದಿದಾರರಿಗೆ ಸೂಕ್ತವಾದ ವೈಶಿಷ್ಟ್ಯಗಳನ್ನು ಒದಗಿಸಲಿದೆ. ಏರ್‌ಕ್ರಾಸ್ X 5 - ಅಥವಾ 7 - ಆಸನಗಳ ಆಯ್ಕೆಗಳು ಮತ್ತು ದೊಡ್ಡ 511- ಲೀಟರ್ ಬೂಟ್ ಸ್ಪೇಸ್‌ನೊಂದಿಗೆ ವಿಶಾಲವಾದ ಆಸನ ಸಂರಚನೆಗಳನ್ನು ನೀಡುತ್ತದೆ. ಈ ಕಾರು ಕುರಿತ ಪ್ರಮುಖ ಮುಖ್ಯಾಂಶಗಳು ಇಲ್ಲಿವೆ.

ಸದ್ದಿಲ್ಲದೇ ಹೊಸ ಎಲೆಕ್ಟ್ರಿಕ್ ಕಾರಿನ ಪರೀಕ್ಷೆ.. 225 ಕಿ.ಮೀ ರೇಂಜ್..

ರೆನಾಲ್ಟ್ (Renault), ವಿಶ್ವಾಸಾರ್ಹ ವಾಹನ ತಯಾರಕ ಕಂಪನಿಯಾಗಿ ಹೊರಹೊಮ್ಮಿದೆ. ದೇಶೀಯವಾಗಿ ಕ್ವಿಡ್, ಕೈಗರ್ ಹಾಗೂ ಟ್ರೈಬರ್ ಕಾರುಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಎಲೆಕ್ಟ್ರಿಕ್ ವಾಹನ ವಿಭಾಗವನ್ನು ಪ್ರವೇಶಿಸಲು ಕೂಡ ಹಣಿಯಾಗುತ್ತಿದೆ. ವಿದೇಶಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಕಂಪನಿಯ ಒಡೆತನದ ಡೇಸಿಯಾ ಸ್ಪ್ರಿಂಗ್ ಇವಿಯನ್ನು 'ಕ್ವಿಡ್ ಇವಿ' ರೂಪದಲ್ಲಿ ಬಿಡುಗಡೆಗೊಳಿಸಲು ತಯಾರಿ ಮಾಡಿಕೊಳ್ಳುತ್ತಿದೆ. ಸದ್ಯ, ಇದೇ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್‌ ಪ್ರಾಯೋಗಿಕ ಸಂಚಾರ ನಡೆಸುವಾಗ ಮತ್ತೊಮ್ಮೆ ಕ್ಯಾಮೆರಾ ಕಣ್ಣಿಗೆ ಸೆರೆ ಸಿಕ್ಕಿದೆ. ಆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗಿದೆ.

Expressway: ಕರ್ನಾಟಕದಲ್ಲಿ 3 ಹೊಸ ಎಕ್ಸ್‌ಪ್ರೆಸ್‌ವೇಗಳು..

ದೇಶದ ಪ್ರಗತಿಗೆ ರಸ್ತೆಗಳು ಮಹತ್ವದ ಪಾತ್ರ ವಹಿಸುತ್ತಿವೆ. ಕೇಂದ್ರ ಸರ್ಕಾರವು ವೇಗವಾಗಿ ಎಕ್ಸ್‌ಪ್ರೆಸ್‌ವೇಗಳನ್ನು ಅಧಿವೃದ್ದಿಪಡಿಸುತ್ತಿದೆ. ಕರ್ನಾಟಕದಲ್ಲೂ ಹಲವು ಹೆದ್ದಾರಿಗಳು ನಿರ್ಮಾಣ ಹಂತದಲ್ಲಿವೆ. ಬೆಂಗಳೂರು-ಚೆನ್ನೈ ಹಾಗೂ ಬೆಂಗಳೂರು-ವಿಜಯವಾಡ ಎಕ್ಸ್‌ಪ್ರೆಸ್‌ವೇಗಳ ನಿರ್ಮಾಣ ಕೆಲಸಗಳು ಭರದಿಂದ ಸಾಗುತ್ತಿವೆ. ಬೆಂಗಳೂರು-ಪುಣೆ ಎಕ್ಸ್‌ಪ್ರೆಸ್‌ವೇ ಕಾಮಗಾರಿ ಸಂಬಂಧ ವಿಸ್ತೃತ ಯೋಜನಾ ವರದಿಗೆ (ಡಿಪಿಆರ್) ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರಗಳು ಒಪ್ಪಿಗೆ ಸೂಚಿಸಿದ್ದು, ಕೇಂದ್ರ ಸರ್ಕಾರದಿಂದ ಅಂತಿಮ ಅನುಮೋದನೆ ಬಾಕಿಯಿದೆ.

Hero Splendor EV: 99,000 ರೂಪಾಯಿ.. ಹೀರೋ ಸ್ಪ್ಲೆಂಡರ್..

ನಗರ ಹಾಗೂ ಗ್ರಾಮೀಣ ಭಾಗದ ಜನರ ನೆಚ್ಚಿನ ಮೋಟಾರ್‌ಸೈಕಲ್‌ ಆಗಿ ಹೀರೋ ಸ್ಪ್ಲೆಂಡರ್ (Hero Splendor) ಜನಪ್ರಿಯವಾಗಿದೆ. ದಶಕಗಳಿಂದಲೂ ಮಾರಾಟದಲ್ಲಿ ನಂ.1 ಸ್ಥಾನದಲ್ಲಿದ್ದು, ಬಡ ಮತ್ತು ಮಧ್ಯಮ ವರ್ಗದ ಗ್ರಾಹಕರು ನಾ ಮುಂದು - ತಾ ಮುಂದು ಎಂಬಂತೆ ಕೊಂಡುಕೊಳ್ಳುತ್ತಿದ್ದಾರೆ. ಇದು ಅಗ್ಗದ ದರದಲ್ಲೂ ಖರೀದಿಗೆ ಲಭ್ಯವಿದೆ. ವಿಶೇಷವಾಗಿ ಪಟ್ಟಣ ಪ್ರದೇಶಗಳಲ್ಲಿ ಕಚೇರಿ ಕೆಲಸಕ್ಕೆ ತೆರುಳುವವರು ಮತ್ತು ಆಹಾರ ಸಾಮಾಗ್ರಿ ಡೆಲಿವರಿ ಮಾಡುವರು ಈ ಬೈಕ್‌ನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ. ಅದೇ ರೀತಿಯಲ್ಲಿ ಹಳ್ಳಿಗಳಲ್ಲಿ ಕೃಷಿಕರ ಮಿತ್ರ ಎಂದೇ 'ಸ್ಪ್ಲೆಂಡರ್' ಖ್ಯಾತಿ ಗಳಿಸಿದ್ದು, ಕಚ್ಚಾ ರಸ್ತೆಗಳಲ್ಲಿಯೂ ಜಮೀನಿನಿಂದ ಮನೆಗಳಿಗೆ ಕ್ವಿಂಟಾಲ್‌ಗಟ್ಟಲೆ ಲಗೇಜ್‌ನ್ನು ಸುಲಭವಾಗಿ ಸಾಗಾಟ ಮಾಡಬಹುದಾಗಿದೆ.
Advertisement

ಆಫೀಸ್‌ಗೆ ತೆರಳುವವರಿಗೆ ಬೆಸ್ಟ್.. 1 ಲೀ. ಪೆಟ್ರೋಲ್‌ಗೆ 90 ಕಿ.ಮೀ..

ಬಜಾಜ್ ಪ್ಲಾಟಿನಾ (Bajaj Platina) ಜಗಮೆಚ್ಚಿದ ಬೈಕ್ ಆಗಿದ್ದು, ದಿನಬಳಕೆಗೆ ಹೆಚ್ಚು ಸೂಕ್ತವಾಗಿದೆ. ಸೆ.22 ರಿಂದ ಪರಿಷ್ಕೃತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರಗಳು ಅಧಿಕೃತವಾಗಿ ಜಾರಿಗೊಂಡಿವೆ. ಇದರ ಸಂಪೂರ್ಣ ಪ್ರಯೋಜನವು 'ಪ್ಲಾಟಿನಾ' ಮೋಟಾರ್‌ಸೈಕಲ್‌ಗೂ ಲಭ್ಯವಿದೆ. ಹಳೆಯ ದರಗಳಿಗೆ ಹೋಲಿಕೆ ಮಾಡಿದರೆ, ಈ ಬೈಕ್ ಬೆಲೆಯೂ ರೂ.5000 ದಷ್ಟು ಇಳಿಕೆಯಾಗಿದೆ. ನಾವಿಲ್ಲಿ ಈ ಮೋಟಾರ್‌ಸೈಕಲ್‌ನ ಹೊಸ 'ಎಕ್ಸ್-ಶೋರೂಂ' ದರ ಎಷ್ಟಾಗಿದೆ ಎಂಬುದರ ಕುರಿತಂತೆ ಸಂಪೂರ್ಣವಾಗಿ ತಿಳಿಸಿಕೊಟ್ಟಿದ್ದೇವೆ.

ನಿನ್ನೆಯಷ್ಟೇ ಬಿಡುಗಡೆ: 4-ಸೀಟರ್.. ಬೆಲೆಯೂ ಕಮ್ಮಿ, ಹೊಸ Mahindra..

ನಿನ್ನೆ 2025ರ ನೂತನ ಮಹೀಂದ್ರಾ ಥಾರ್ 3-ಡೋರ್ ಫೇಸ್‌ಲಿಫ್ಟ್ (Mahindra Thar 3-Door Facelift) ಆಫ್-ರೋಡ್ ಎಸ್‌ಯುವಿಯನ್ನು ಮಾರಾಟಕ್ಕೆ ತರಲಾಗಿದೆ. ಇದು ತುಂಬಾ ಚೆನ್ನಾಗಿರುವ ವಿನ್ಯಾಸ ಹಾಗೂ ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಜೊತೆಗೆ ಸ್ಪರ್ಧಾತ್ಮಕ ದರದಲ್ಲೂ ಲಭ್ಯವಿದೆ. ಇದಕ್ಕೆ ಫೋರ್ಸ್ ಗೂರ್ಖಾ ಹಾಗೂ ಮಾರುತಿ ಸುಜುಕಿ ಜಿಮ್ನಿಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಿವೆ. ನಾವಿಲ್ಲಿ ಈ ಹೊಚ್ಚ ಹೊಸ ಕಾರಿನ ಬೆಲೆ ಹಾಗೂ ವಿಶೇಷತೆಗಳ ಕುರಿತ ಪ್ರಮುಖಾಂಶಗಳು ಏನೆಂಬುದನ್ನು ತಿಳಿಸಿಕೊಟ್ಟಿದ್ದೇವೆ.

ರೈತರಿಗಾಗಿ 8 ಹೊಸ ಟ್ರ್ಯಾಕ್ಟರ್‌ಗಳ ಬಿಡುಗಡೆ

ಮಹೀಂದ್ರಾ ಮತ್ತು ಗುಜರಾತ್ ಸರ್ಕಾರದ ಜಂಟಿ ಉದ್ಯಮವಾದ ಗ್ರೋಮ್ಯಾಕ್ಸ್ ಅಗ್ರಿ ಎಕ್ವಿಪ್ಮೆಂಟ್ ಲಿಮಿಟೆಡ್, 4WD ಮತ್ತು 2WD ವಿಭಾಗಗಳಲ್ಲಿ 8 ಹೊಸ ಟ್ರಾಕ್ಟರ್‌ಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ 50 HP ಗಿಂತ ಕಡಿಮೆ ಇರುವ ಭಾರತದ ಮೊದಲ ಕಾರ್ಖಾನೆ-ಹೊಂದಾಣಿಕೆಯ ಕ್ಯಾಬಿನ್ ಸರಣಿಯೂ ಸೇರಿದೆ. ಗ್ರೋಮ್ಯಾಕ್ಸ್‌ನ ಶಕ್ತಿಶಾಲಿ ಮತ್ತು ಇಂಧನ-ಸಮರ್ಥ ಡೀಸೆಲ್ ಎಂಜಿನ್‌ಗಳು ಮತ್ತು ವಿಶ್ವ ದರ್ಜೆಯ ಗೇರ್ ಬಾಕ್ಸ್ ತಂತ್ರಜ್ಞಾನದಿಂದ ನಡೆಸಲ್ಪಡುವ ಈ ಹೊಸ ಟ್ರಾಕ್ಟರ್‌ಗಳು ಅತ್ಯುತ್ತಮ ಕಾರ್ಯಕ್ಷಮತೆಯನ್ನು ಹೊಂದಿವೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

26.99 ಕಿ.ಮೀ ಮೈಲೇಜ್.. 5-ಸೀಟರ್, ಈ Tata SUV ಬೆಲೆ ರೂ.85,000..

ಟಾಟಾ ಪಂಚ್ (Tata Punch) ವಿಶ್ವಾಸಾರ್ಹ ಮೈಕ್ರೋ ಎಸ್‌ಯುವಿಯಾಗಿದೆ. ಪ್ರತಿ ತಿಂಗಳು ಭಾರೀ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ಸೆ.22 ರಿಂದ ಪರಿಷ್ಕೃತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರಗಳು ಅಧಿಕೃತವಾಗಿ ಜಾರಿಗೊಂಡಿವೆ. ಇದರ ಸಂಪೂರ್ಣ ಲಾಭವು 'ಪಂಚ್' ಕಾರಿಗೂ ಲಭ್ಯವಿದೆ. ಬರೋಬ್ಬರಿ ರೂ.85,000 ವರೆಗೆ ಬೆಲೆ ಇಳಿಕೆಯಾಗಿದೆ. ನಾವಿಲ್ಲಿ ಈ ಎಸ್‌ಯುವಿಯ ಪ್ರತಿಯೊಂದು ರೂಪಾಂತರಗಳ (ವೇರಿಯೆಂಟ್) ಹೊಸ 'ಎಕ್ಸ್-ಶೋರೂಂ' ದರ ಎಷ್ಟಾಗಿದೆ ಎಂಬುದರ ಕುರಿತಂತೆ ಸಂಪೂರ್ಣವಾಗಿ ತಿಳಿಸಿಕೊಟ್ಟಿದ್ದೇವೆ.
Advertisement

ಬಡವರು ತೆಗೆದುಕೊಳ್ಳಬಹುದು.. 33+ ಕಿ.ಮೀ ಮೈಲೇಜ್, GST ಪರಿಷ್ಕರಣೆ..

ಸೆ.22 ರಿಂದ ಪರಿಷ್ಕೃತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರಗಳು ಜಾರಿಗೊಂಡಿವೆ. 1200-ಸಿಸಿ ವರೆಗಿನ ಪೆಟ್ರೋಲ್, ಎಲ್‌ಪಿಜಿ, ಸಿಎನ್‌ಜಿ & 1500-ಸಿಸಿ ವರೆಗಿನ ಡೀಸೆಲ್ ಎಂಜಿನ್‌ನ್ನು ಹೊಂದಿರುವ ಕಾರುಗಳ ಖರೀದಿ ಮೇಲಿನ ಜಿಎಸ್‌ಟಿ ಪ್ರಮಾಣವನ್ನು ಶೇಕಡ 28% ರಿಂದ 18%ಗೆ ಇಳಿಕೆಯಾಗಿದೆ. ಜೊತೆಗೆ ಶೇಕಡ 1-3% ವರೆಗೆ ಹೆಚ್ಚುವರಿಯಾಗಿ ವಿಧಿಸುವ ಸೆಸ್‌ನ್ನು ತೆಗೆದು ಹಾಕಲಾಗಿದೆ. ಇದರ ಸಂಪೂರ್ಣ ಲಾಭವನ್ನು ವಾಹನ ತಯಾರಕ ಕಂಪನಿಗಳು ಗ್ರಾಹಕರಿಗೆ ವರ್ಗಾಯಿಸಿವೆ. ನಾವಿಲ್ಲಿ 33 ಕಿ.ಮೀಗೂ ಅಧಿಕ ಮೈಲೇಜ್ ನೀಡಬಲ್ಲ ರೂ.5 ಲಕ್ಷದೊಳಗೆ ಲಭ್ಯವಿರುವ ಪ್ರಮುಖ ಐದು ಕಾರುಗಳ ಕುರಿತಂತೆ ಸಂಕ್ಷಿಪ್ತವಾಗಿ ತಿಳಿಸಿಕೊಟ್ಟಿದ್ದೇವೆ.