ಬಡವರು ತೆಗೆದುಕೊಳ್ಳಬಹುದು.. 33+ ಕಿ.ಮೀ ಮೈಲೇಜ್, GST ಪರಿಷ್ಕರಣೆ..

ಸೆ.22 ರಿಂದ ಪರಿಷ್ಕೃತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರಗಳು ಜಾರಿಗೊಂಡಿವೆ. 1200-ಸಿಸಿ ವರೆಗಿನ ಪೆಟ್ರೋಲ್, ಎಲ್‌ಪಿಜಿ, ಸಿಎನ್‌ಜಿ & 1500-ಸಿಸಿ ವರೆಗಿನ ಡೀಸೆಲ್ ಎಂಜಿನ್‌ನ್ನು ಹೊಂದಿರುವ ಕಾರುಗಳ ಖರೀದಿ ಮೇಲಿನ ಜಿಎಸ್‌ಟಿ ಪ್ರಮಾಣವನ್ನು ಶೇಕಡ 28% ರಿಂದ 18%ಗೆ ಇಳಿಕೆಯಾಗಿದೆ. ಜೊತೆಗೆ ಶೇಕಡ 1-3% ವರೆಗೆ ಹೆಚ್ಚುವರಿಯಾಗಿ ವಿಧಿಸುವ ಸೆಸ್‌ನ್ನು ತೆಗೆದು ಹಾಕಲಾಗಿದೆ. ಇದರ ಸಂಪೂರ್ಣ ಲಾಭವನ್ನು ವಾಹನ ತಯಾರಕ ಕಂಪನಿಗಳು ಗ್ರಾಹಕರಿಗೆ ವರ್ಗಾಯಿಸಿವೆ. ನಾವಿಲ್ಲಿ 33 ಕಿ.ಮೀಗೂ ಅಧಿಕ ಮೈಲೇಜ್ ನೀಡಬಲ್ಲ ರೂ.5 ಲಕ್ಷದೊಳಗೆ ಲಭ್ಯವಿರುವ ಪ್ರಮುಖ ಐದು ಕಾರುಗಳ ಕುರಿತಂತೆ ಸಂಕ್ಷಿಪ್ತವಾಗಿ ತಿಳಿಸಿಕೊಟ್ಟಿದ್ದೇವೆ.

ಸ್ಕೂಟರ್‌ಗಳ ಎಸ್‌ಯುವಿ 'ರಿವರ್ ಇಂಡೀ ಜೆನ್ 3' ಬಿಡುಗಡೆ: ಬೆಲೆಯಷ್ಟು?

ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ 'ರಿವರ್', ತನ್ನ ಜನಪ್ರಿಯ 'ಇಂಡೀ' ಸ್ಕೂಟರ್‌ನ ಜೆನ್ 3 ಮಾಡಲ್ ಅನ್ನು ರೂ. 1.46 ಲಕ್ಷಕ್ಕೆ (ಎಕ್ಸ್-ಶೋರೂಂ) ಬಿಡುಗಡೆ ಮಾಡಿದೆ. ಇದು ದೈನಂದಿನ ಪ್ರಾಯೋಗಿಕತೆ, ಸುಧಾರಿತ ಸುರಕ್ಷತೆ ಮತ್ತು ತಂತ್ರಜ್ಞಾನದ ನವೀಕರಣಗಳ ಮೇಲೆ ಕೇಂದ್ರೀಕರಿಸುವ ರಿವರ್‌ನ ಜನಪ್ರಿಯ ಸಿಟಿ ಇ-ಸ್ಕೂಟರ್ ಆಗಿದೆ. ಉಪಯುಕ್ತತೆ ಮತ್ತು ತಾಂತ್ರಿಕ ಏಕೀಕರಣವನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ಹಲವಾರು ನವೀಕರಣಗಳನ್ನು ಈ ಸ್ಕೂಟರ್ ಪಡೆದುಕೊಂಡಿದೆ. ಇದನ್ನು ಬ್ರ್ಯಾಂಡ್‌ನ ವೆಬ್‌ಸೈಟ್‌ನಲ್ಲಿ ಅಥವಾ ಸ್ಥಳೀಯ ಡೀಲರ್‌ಶಿಪ್‌ನಲ್ಲಿ ಬುಕ್‌ ಮಾಡಿಕೊಳ್ಳಬಹುದು.

2025 ಮಹೀಂದ್ರಾ ಥಾರ್ 3-ಡೋರ್ ಫೇಸ್‌ಲಿಫ್ಟ್ ಬಿಡುಗಡೆ

Explore the Mahindra Thar 3-Door Facelift (2025) in India: design updates, features, engine options, and expected price. | ಭಾರತದಲ್ಲಿ ಮಹೀಂದ್ರಾ ಥಾರ್ 3-ಡೋರ್ ಫೇಸ್‌ಲಿಫ್ಟ್ (2025): ವಿನ್ಯಾಸ ನವೀಕರಣಗಳು, ವೈಶಿಷ್ಟ್ಯಗಳು, ಎಂಜಿನ್ ಆಯ್ಕೆಗಳು ಮತ್ತು ನಿರೀಕ್ಷಿತ ಬೆಲೆಯನ್ನು ಅನ್ವೇಷಿಸಿ.

27 Km ಮೈಲೇಜ್.. 6-ಆಸನಗಳು, 5 ಲಕ್ಷ, ಈ ಪ್ರಖ್ಯಾತ ಕಾರಿನ ಹೊಸ..

ಮಾರುತಿ ಸುಜುಕಿ ಇಕೋ (Maruti Suzuki Eeco) ಪ್ರಮುಖ ಎಂಪಿವಿಯಾಗಿ ಹೊರಹೊಮ್ಮಿದೆ. ಸೆ.22 ರಿಂದ ಪರಿಷ್ಕೃತ ಜಿಎಸ್‌ಟಿ ತೆರಿಗೆ ದರಗಳು ಜಾರಿಗೊಂಡಿವೆ. ಇದರ ಸಂಪೂರ್ಣ ಪ್ರಯೋಜವು 'ಇಕೋ' ಕಾರಿಗೂ ದೊರೆಯುತ್ತಿದ್ದು, ರೂ.68,000 ವರೆಗೆ ಬೆಲೆ ಇಳಿಕೆಯಾಗಿದೆ. ಕನಿಷ್ಠ ರೂ.5.21 ಲಕ್ಷ ಹಾಗೂ ಗರಿಷ್ಠ ರೂ.6.36 ಲಕ್ಷ ಎಕ್ಸ್-ಶೋರೂಂ ದರವನ್ನು ಪಡೆದಿದೆ. ನೀವು ಅಧಿಕ ಆಸನಗಳನ್ನು ಹೊಂದಿರುವ ಹೊಚ್ಚ ಹೊಸ ಕಾರೊಂದನ್ನು ಖರೀದಿ ಮಾಡಲು ಆಲೋಚಿಸಿದ್ದೀರಾ.. ಹಾಗಾದರೆ, 'ಇಕೋ' ಅತ್ಯುತ್ತಮ ಆಯ್ಕೆಯಾಗಲಿದೆ. ನಾವಿಲ್ಲಿ ಇದೇ ಎಂಪಿವಿಯ ಆನ್-ರೋಡ್ ಬೆಲೆ (On-Road Price) ಹಾಗೂ ಇಎಂಐ (EMI) ಕುರಿತಂತೆ ಒಂದಷ್ಟು ಪ್ರಮುಖ ವಿವರಗಳನ್ನು ತಿಳಿಸಿಕೊಟ್ಟಿದ್ದೇವೆ.
Advertisement

ಅಗ್ಗದ ಬೆಲೆಗೆ ಪ್ರೀಮಿಯಂ ಕಾರು ಬಿಡುಗಡೆ

ಫ್ರೆಂಚ್ ಕಾರು ತಯಾರಕರಾದ ಸಿಟ್ರನ್ ಕಂಪನಿಯು ಭಾರತದಲ್ಲಿ ಹೊಸ ಏರ್‌ಕ್ರಾಸ್ ಎಕ್ಸ್ (Citroen Aircross X) ಅನ್ನು ಬಿಡುಗಡೆ ಮಾಡಿದೆ. ಡಿಸೈನ್, ಸೌಕರ್ಯ ಮತ್ತು ನಾವೀನ್ಯತೆಯನ್ನು ಬಯಸುವ ಆಧುನಿಕ ಭಾರತೀಯ ಕುಟುಂಬಗಳಿಗಾಗಿ ಈ ಕಾರನ್ನು ವಿನ್ಯಾಸಗೊಳಿಸಲಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಕಂಪನಿಯ ಹೊಸ ಬಸಾಲ್ಟ್ Xನ ಯಶಸ್ಸಿನ ಮೇಲೆ ನಿರ್ಮಿಸಲಾದ ಹೊಸ ಏರ್‌ಕ್ರಾಸ್ X, ನಾವೀನ್ಯತೆಯನ್ನು ಪ್ರತಿನಿಧಿಸುವ ಸಿಟ್ರನ್ ಎಕ್ಸ್-ಸೀರೀಸ್ ಅನ್ನು ಬಲಪಡಿಸುತ್ತದೆ ಎಂದು ಕಂಪನಿ ಹೇಳಿದೆ. ಹೊಸ ಕಾರಿನ ಫೀಚರ್ಸ್, ಬೆಲೆ ಸೇರಿದಂತೆ ಹೆಚ್ಚಿನ ಮಾಹಿತಿ ಇಲ್ಲಿದೆ.

Suzuki: ದಸರಾದಿಂದ ಶುಕ್ರದೆಸೆ.. ಸುಜುಕಿ ಟೂ-ವೀಲರ್‌ಗಳಿಗೆ..

ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ (Suzuki Motorcycle India), ವಿಶ್ವಾಸಾರ್ಹ ದ್ವಿಚಕ್ರ ವಾಹನ (Two Wheeler) ತಯಾರಕ ಕಂಪನಿಯಾಗಿ ಹೊರಹೊಮ್ಮಿದೆ. ದೇಶೀಯವಾಗಿ ವಿವಿಧ ಸ್ಕೂಟರ್ ಹಾಗೂ ಬೈಕ್‌ಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಈ ಸೆಪ್ಟೆಂಬರ್ ತಿಂಗಳಲ್ಲೂ ಕಂಪನಿಯ ದ್ವಿಚಕ್ರ ವಾಹನಗಳು ಭಾರೀ ಸಂಖ್ಯೆಯಲ್ಲಿ ಮಾರಾಟಗೊಂಡಿವೆ. ಬರೋಬ್ಬರಿ 1,23,550 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಣೆ ಮಾಡಲಾಗಿದೆ. 2024ರ ಇದೇ ಅವಧಿಯಲ್ಲಿ 99,185 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿಸಂಖ್ಯೆಯನ್ನು ವಿಶ್ಲೇಷಣೆ ಮಾಡಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 25% ಪ್ರಗತಿಯಾಗಿದೆ.

Mahindra Thar: ಬಲಿಷ್ಠ ಮಹೀಂದ್ರಾ ಥಾರ್ 3-ಡೋರ್ ಫೇಸ್‌ಲಿಫ್ಟ್..

ಭಾರತದ ಮಾರುಕಟ್ಟೆಯಲ್ಲಿಂದು 2025ರ ಹೊಚ್ಚ ಹೊಸ ಮಹೀಂದ್ರಾ ಥಾರ್ 3-ಡೋರ್ ಫೇಸ್‌ಲಿಫ್ಟ್ (Mahindra Thar 3-Door Facelift) ಕಾರು ಅದ್ದೂರಿಯಾಗಿ ಬಿಡುಗಡೆಗೊಂಡಿದೆ. ಇದೊಂದು ಆಫ್-ರೋಡ್ ಎಸ್‌ಯುವಿಯಾಗಿದೆ. ವಿನ್ಯಾಸ ಹಾಗೂ ವೈಶಿಷ್ಟ್ಯದಲ್ಲಿ ಸಾಕಷ್ಟು ಬದಲಾವಣೆಗಳನ್ನು ಪಡೆದುಕೊಂಡಿದ್ದು, ಹಲವು ನವೀಕರಣಗಳಿಗೂ ಸಾಕ್ಷಿಯಾಗಿದೆ. ಕೈಗೆಟುಕುವ ಬೆಲೆಯಲ್ಲಿಯೂ ಮಾರಾಟಕ್ಕೆ ಬಂದಿದೆ. ಬನ್ನಿ, ಈ ನೂತನ ಕಾರಿನ ದರವೆಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

ಮಾರುತಿ ಕಾರುಗಳಿಗೆ ಫುಲ್ ಡಿಮ್ಯಾಂಡ್: ಹಬ್ಬಕ್ಕೆ ಬೆಲೆ ಇಳಿಕೆ ಘೋಷಣೆ

ಮಾರುತಿ ಸುಜುಕಿ ಸೆಪ್ಟೆಂಬರ್ ತಿಂಗಳಲ್ಲಿ ದಾಖಲೆ ಮಟ್ಟದ ದೇಶೀಯ ಮಾರಾಟ ಹಾಗೂ ರಫ್ತುಗಳನ್ನು ಸಾಧಿಸಿದೆ. ಸ್ವಿಫ್ಟ್, ಬಲೆನೊ, ಡಿಜೈರ್ ಮತ್ತು ಬ್ರೆಝಾದಂತಹ ಪ್ರತಿ ಬಾರಿಯ ಅತ್ಯುತ್ತಮ ಮಾರಾಟ ಕಾಣುವ ಮಾಡಲ್‌ಗಳಿಗೆ ವಿದೇಶಗಳಲ್ಲಿಯೂ ಬೇಡಿಕೆ ಹೆಚ್ಚಾಗಿದೆ. ಸೆಪ್ಟೆಂಬರ್ 2025 ರಲ್ಲಿ ಮಾರುತಿ ಸುಜುಕಿಯ ರಫ್ತುಗಳು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿವೆ. ಕೈಗೆಟುಕುವ ಬೆಲೆ, ಇಂಧನ - ಸಮರ್ಥ ವಾಹನಗಳೊಂದಿಗೆ ಆಫ್ರಿಕಾ, ಲ್ಯಾಟಿನ್ ಅಮೆರಿಕ ಮತ್ತು ಏಷ್ಯಾದಾದ್ಯಂತ ಉದಯೋನ್ಮುಖ ಮಾರುಕಟ್ಟೆಗಳನ್ನು ಗುರಿಯಾಗಿಸಿಕೊಂಡು ಕಂಪನಿಯು ತನ್ನ ರಫ್ತು ವಿಭಾಗದಲ್ಲಿ ಸ್ಥಿರವಾದ ಬೆಳವಣಿಗೆ ಕಾಯ್ದುಕೊಂಡಿದೆ.
Advertisement

682 Km ರೇಂಜ್.. 5-ಸೀಟರ್, ಈ ಬಾಹುಬಲಿ Mahindra SUV..

ಮಹೀಂದ್ರಾ ಬಿಇ 6 (Mahindra BE 6) ಪ್ರಖ್ಯಾತ ಎಲೆಕ್ಟ್ರಿಕ್ ಎಸ್‌ಯುವಿಯಾಗಿದೆ. ವಿದೇಶಿ ಕಂಪನಿ ಕಾರುಗಳಿಗೆ ಸವಾಲೆಸೆಯುವ ರೀತಿಯಲ್ಲಿ ಅತ್ಯಾಧುನಿಕವಾದ ವಿನ್ಯಾಸ ಹೊಂದಿದೆ. ಜೊತೆಗೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಎಲ್ಲ ವರ್ಗದ ಗ್ರಾಹಕರ ನೆಚ್ಚಿನ ಕಾರಾಗಿ ಹೊರಹೊಮ್ಮಿದೆ. ನೀವು ಹೊಚ್ಚ ಹೊಸ ಎಸ್‌ಯುವಿವೊಂದನ್ನು ಮನೆಗೆ ತರಲು ಆಲೋಚಿಸಿದ್ದೀರಾ.. ಹಾಗಾದರೆ 'ಬಿಇ 6' ಅತ್ಯುತ್ತಮವಾದ ಆಯ್ಕೆಯಾಗಲಿದೆ. ನಾವಿಲ್ಲಿ ಈ ಕಾರಿನ ಬೆಲೆ ಹಾಗೂ ವಿಶೇಷತೆಗಳ ಕುರಿತ ಪ್ರಮುಖಾಂಶಗಳು ಏನೆಂಬುದನ್ನು ತಿಳಿಸಿಕೊಟ್ಟಿದ್ದೇವೆ.

ದಾಖಲೆ ಮಟ್ಟದಲ್ಲಿ ಹೋಂಡಾ ಕಾರುಗಳ ಮಾರಾಟ

ಭಾರತದಲ್ಲಿ ಪ್ರೀಮಿಯಂ ಕಾರುಗಳ ಪ್ರಮುಖ ತಯಾರಕರಾದ ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ (HCIL) ಸೆಪ್ಟೆಂಬರ್ 2025 ರಲ್ಲಿ ಒಟ್ಟು 8,096 ಯುನಿಟ್‌ ಕಾರುಗಳ ಮಾರಾಟವನ್ನು ದಾಖಲಿಸಿದೆ. ಕಂಪನಿಯ ದೇಶೀಯ ಮಾರಾಟವು 5,303 ಯುನಿಟ್‌ ಕಾರುಗಳಾಗಿದ್ದು, ರಫ್ತು 2,793 ಯುನಿಟ್‌ಗಳಷ್ಟಿದೆ. ಕಂಪನಿಯು ಕಳೆದ ವರ್ಷ ಇದೆ ಅವಧಿಯಲ್ಲಿ ಅಂದರೆ ಸೆಪ್ಟೆಂಬರ್ 2024 ರಲ್ಲಿ ದೇಶೀಯ ಮಾರಾಟದಲ್ಲಿ 5,675 ಯುನಿಟ್‌ ಕಾರುಗಳನ್ನು ಮಾರಾಟ ಮಾಡಿದರೆ, 5,239 ಯುನಿಟ್‌ ಕಾರುಗಳನ್ನು ರಫ್ತು ಮಾಡಿದೆ.

29 Km ಮೈಲೇಜ್.. 10.50 ಲಕ್ಷ, ಜನಮನ ಗೆದ್ದ ಹೊಸ ಮಾರುತಿ SUV..

ಸೆ.15ರಂದು ಹೊಸ ಮಾರುತಿ ಸುಜುಕಿ ವಿಕ್ಟೋರಿಸ್ (Maruti Suzuki Victoris) ಕಾರನ್ನು ಮಾರಾಟಕ್ಕೆ ತರಲಾಗಿತ್ತು. ಇದು ಕಾಂಪ್ಯಾಕ್ಟ್ ಎಸ್‌ಯುವಿಯಾಗಿದೆ. ಉತ್ತಮವಾದ ವಿನ್ಯಾಸ ಮತ್ತು ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ. ಅರೆನಾ ಡೀಲರ್‌ಶಿಪ್ ಮೂಲಕ ಗ್ರಾಹಕರ ಖರೀದಿ ಲಭ್ಯವಿದೆ. ಆಸಕ್ತರು ರೂ.11,000 ಮುಂಗಡ ಹಣವನ್ನು ಪಾವತಿವುದರೊಂದಿಗೆ ಕಂಪನಿಯ ಅಧಿಕೃತ ವೆಬ್‌ಸೈಟ್ ಅಥವಾ ಸಮೀಪದ ಶೋರೂಂಗೆ ಭೇಟಿ ನೀಡಿ, ಆರ್ಡರ್ ಮಾಡಬಹುದು.

ಎಸ್‌ಪಿವೈಎಂಗೆ ಕಸ್ಟಮೈಸ್ ಮಾಡಿದ ಹೆಕ್ಟರ್ ಆಂಬ್ಯುಲೆನ್ಸ್ ಕೊಡುಗೆ

ಡೆಹ್ರಾಡೂನ್ ಜಿಲ್ಲೆಯ ಹಿರಿಯರ ಆರೈಕೆ ತುರ್ತು ಪರಿಸ್ಥಿತಿಗಳನ್ನು ಪೂರೈಸಲು ಜೆಎಸ್‌ಡಬ್ಲ್ಯೂ ಎಂಜಿ ಮೋಟಾರ್ (JSW MG Motor), ವಿಶೇಷವಾಗಿ ವಿನ್ಯಾಸಗೊಳಿಸಲಾದ ಹೆಕ್ಟರ್ ಆಂಬ್ಯುಲೆನ್ಸ್ ಅನ್ನು SPYM (ಸೊಸೈಟಿ ಫಾರ್ ಪ್ರಮೋಷನ್ ಆಫ್ ಯೂತ್ ಅಂಡ್ ಮಾಸಸ್) ಗೆ ಹಸ್ತಾಂತರಿಸಿದೆ. ಎಸ್‌ಪಿವೈಎಂ ಸಾಮಾಜಿಕ ಕಲ್ಯಾಣದಲ್ಲಿ 40 ವರ್ಷಗಳಿಗೂ ಹೆಚ್ಚಿನ ಅನುಭವವನ್ನು ಹೊಂದಿದ್ದು, ವೃದ್ಧರು, ಮಹಿಳೆಯರು, ಮಕ್ಕಳು ಮತ್ತು ಮಾದಕ ದ್ರವ್ಯ ಸೇವನೆಯಿಂದ ಪ್ರಭಾವಿತರಾದ ವ್ಯಕ್ತಿಗಳಂತಹ ದುರ್ಬಲ ಗುಂಪುಗಳ ಮೇಲೆ ಕೇಂದ್ರೀಕರಿಸಿದೆ.
Advertisement

TATA: ಟಾಟಾ ಕಾರುಗಳಿಗೆ ಮನಸೋತ ಗ್ರಾಹಕರು.. 24 ಕಿ.ಮೀ ಮೈಲೇಜ್..

ಟಾಟಾ ಮೋಟಾರ್ಸ್ (Tata Motors) ವಿಶ್ವಾಸಾರ್ಹ ವಾಹನ ತಯಾರಕ ಕಂಪನಿಯಾಗಿದೆ. ಈಗಾಗಲೇ ಪರಿಷ್ಕೃತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರಗಳು ಜಾರಿಗೊಂಡಿವೆ. ಕಂಪನಿಯ ಕಾರುಗಳಿಗೆ ಶುಕ್ರದೆಸೆ ಶುರುವಾಗಿದ್ದು, ಈ ಸೆಪ್ಟೆಂಬರ್ ತಿಂಗಳು ಭಾರೀ ಸಂಖ್ಯೆಯಲ್ಲಿ ಮಾರಾಟಗೊಂಡಿವೆ. ಸರಿ ಸುಮಾರು 60,907 ಯುನಿಟ್‌ಗಳನ್ನು ಗ್ರಾಹಕರಿಗೆ ವಿತರಣೆ ಮಾಡಲಾಗಿದೆ. 2024ರ ಇದೇ ಸೆಪ್ಟೆಂಬರ್‌ನಲ್ಲಿ 41,313 ಯುನಿಟ್‌ಗಳನ್ನು ಮಾರಲಾಗಿದೆ. ಈ ಅಂಕಿಸಂಖ್ಯೆಯನ್ನು ವಿಶ್ಲೇಷಣೆ ಮಾಡಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ (YoY) ಶೇಕಡ 47% ಬೆಳವಣಿಗೆಯಾಗಿದೆ.

ಬಲವಾದ ಮಾರಾಟ ಬೆಳವಣಿಗೆ: ಹಬ್ಬದ ಸೀಸನ್‌ನಲ್ಲಿ ಧೂಳೆಬ್ಬಿಸಿದ ಹೀರೋ

ಅತಿದೊಡ್ಡ ಮೋಟಾರ್‌ಸೈಕಲ್‌ಗಳು ಮತ್ತು ಸ್ಕೂಟರ್‌ಗಳ ತಯಾರಕ ಕಂಪನಿಯಾದ ಹೀರೋ ಮೋಟೋಕಾರ್ಪ್, ಹಬ್ಬದ ಋತುವಿಗೆ ಬಲವಾದ ಆರಂಭವನ್ನು ಘೋಷಿಸಿದ್ದು, ಸೆಪ್ಟೆಂಬರ್ 2025 ರಲ್ಲಿ 6,87,220 ಯುನಿಟ್‌ ವಾಹನಗಳನ್ನು ರವಾನಿಸಿದೆ. ಈ ವೇಗವು ಹಿಂದಿನ ವರ್ಷದ ಸೆಪ್ಟೆಂಬರ್‌ನಲ್ಲಿ ಮಾರಾಟವಾದ 6,37,050 ಯುನಿಟ್‌ ವಾಹನಗಳಿಗೆ ಹೋಲಿಸಿದರೆ ಶೇ8 ರಷ್ಟು ಬೆಳವಣಿಗೆಯನ್ನು ಸೂಚಿಸುತ್ತದೆ. ಹಬ್ಬದ ಉತ್ಸಾಹ ಮತ್ತು ಹೊಸ GST ಪ್ರಯೋಜನಗಳ ಸಂಯೋಜನೆಯು ಬುಕಿಂಗ್ ಮತ್ತು ವಿಚಾರಣೆಗಳಲ್ಲಿ ತೀವ್ರ ಏರಿಕೆಗೆ ಕಾರಣವಾಗಿದೆ ಎಂದು ಕಂಪನಿ ತಿಳಿಸಿದೆ.

ವರವಾದ ಜಿಎಸ್‌ಟಿ, ಹ್ಯುಂಡೈ ಕಾರುಗಳು ಬಿಸಿ ಜಿಲೇಬಿಯಂತೆ ಸೇಲ್ಸ್..

ಹುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (Hyundai Motor India Limited), ಪ್ರಮುಖ ಕಾರು ತಯಾರಕ ಕಂಪನಿಯಾಗಿದೆ. ಈಗಾಗಲೇ ಪರಿಷ್ಕೃತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರಗಳು ಜಾರಿಗೊಂಡಿದೆ. ಕಂಪನಿಯ ಕಾರುಗಳಿಗೆ ವಿಪರೀತ ಬೇಡಿಕೆ ಸೃಷ್ಟಿಯಾಗಿದ್ದು, ಸೆಪ್ಟೆಂಬರ್ ತಿಂಗಳಲ್ಲಿ ಭಾರೀ ಸಂಖ್ಯೆಯಲ್ಲಿ ಮಾರಾಟಗೊಂಡಿವೆ. ಸರಿ ಸುಮಾರು 70,347 ಯುನಿಟ್‌ಗಳನ್ನು ಗ್ರಾಹಕರಿಗೆ ವಿತರಿಸಲಾಗಿದೆ. 2024ರ ಇದೇ ಅವಧಿಯಲ್ಲಿ 64,201 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿಸಂಖ್ಯೆಯನ್ನು ವಿಶ್ಲೇಷಣೆ ಮಾಡಿದಾಗ ಮಾರಾಟ ಪ್ರಮಾಣವು ವರ್ಷದಿಂದ ಶೇಕಡ 10% ಪ್ರಗತಿಯಾಗಿದೆ.

ಮಹೀಂದ್ರಾ ವಾಹನಗಳ ಮಾರಾಟ ಕಂಡು ಪ್ರತಿಸ್ಪರ್ಧಿಗಳಿಗೆ ಶಾಕ್

ಭಾರತದ ಪ್ರಮುಖ ವಾಹನ ತಯಾರಕ ಕಂಪನಿಗಳಲ್ಲಿ ಒಂದಾದ ಮಹೀಂದ್ರಾ, ಇಂದು ಸೆಪ್ಟೆಂಬರ್ 2025 ರಲ್ಲಿ 1,00,298 ವಾಹನಗಳನ್ನು ಮಾರಾಟ ಮಾಡಿದೆ, ರಫ್ತು ಸೇರಿದಂತೆ ಶೇ16 ರಷ್ಟು ಹೆಚ್ಚಳವನ್ನು ಘೋಷಿಸಿದೆ. ಒಟ್ಟು 1,00,298 ವಾಹನ ಮಾರಾಟದಲ್ಲಿ ಎಸ್‌ಯುವಿಗಳು, ಎಲ್‌ಸಿವಿಗಳು (
Advertisement

GST ಪರಿಷ್ಕರಣೆ.. Toyota ಕಾರುಗಳಿಗೆ ಫುಲ್ ಡಿಮ್ಯಾಂಡ್..

ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (Toyota Kirloskar Motor) ಜಗಮೆಚ್ಚಿದ ವಾಹನ ತಯಾರಕ ಕಂಪನಿಯಾಗಿದೆ. ಈಗಾಗಲೇ ಪರಿಷ್ಕೃತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರಗಳು ಜಾರಿಗೊಂಡಿವೆ. ಅದರ ಪರಿಣಾಮ ಕಂಪನಿಯ ಕಾರುಗಳಿಗೆ ಭಾರೀ ಬೇಡಿಕೆ ಬಂದಿದ್ದು, ಈ ಸೆಪ್ಟೆಂಬರ್ ತಿಂಗಳು ದೊಡ್ಡ ಸಂಖ್ಯೆಯಲ್ಲಿ ಮಾರಾಟಗೊಂಡಿವೆ. ಬರೋಬ್ಬರಿ 31,091 ಯುನಿಟ್‌ಗಳನ್ನು ಗ್ರಾಹಕರಿಗೆ ವಿತರಣೆ ಮಾಡಲಾಗಿದೆ. 2024ರ ಇದೇ ಸೆಪ್ಟೆಂಬರ್‌ನಲ್ಲಿ 26,847 ಯುನಿಟ್‌ಗಳನ್ನು ಮಾರಲಾಗಿದೆ. ಈ ಅಂಕಿಸಂಖ್ಯೆಯನ್ನು ವಿಶ್ಲೇಷಣೆ ಮಾಡಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 16% ಪ್ರಗತಿಯಾಗಿದೆ.

ಹಬ್ಬಕ್ಕೆ ಭಾರೀ ದರ ಕಡಿತ: ಜನ ಮುಗಿಬಿದ್ದು ಖರೀದಿ

ಸೆಪ್ಟೆಂಬರ್ 2025 ರಲ್ಲಿ JSW MG ಮೋಟಾರ್ ಇಂಡಿಯಾ 6,728 ಯುನಿಟ್‌ ಕಾರುಗಳ ಮಾಸಿಕ ಮಾರಾಟವನ್ನು ವರದಿ ಮಾಡಿದೆ. ಇದು ಸೆಪ್ಟೆಂಬರ್ 2024 ರಲ್ಲಿ ಮಾರಾಟವಾದ 5,021 ಯುನಿಟ್‌ಗಳಿಗೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ ಶೇ34 ರಷ್ಟು (YoY) ಬೆಳವಣಿಗೆಯನ್ನು ಸಾಧಿಸಿದೆ. ಇತ್ತೀಚಿನ GST ಕಡಿತ ಮತ್ತು ನವರಾತ್ರಿ ಹಬ್ಬದ ಆರಂಭದಿಂದ ಕಂಪನಿಯ ಬೆಳವಣಿಗೆಗೆ ಬೆಂಬಲ ದೊರೆತಿದೆ. ಇವೆರಡೂ ಗ್ರಾಹಕರ ಭಾವನೆಯನ್ನು ಹೆಚ್ಚಿಸಿ ಬಲವಾದ ಮಾರಾಟದ ವೇಗವನ್ನು ಒದಗಿಸಿವೆ. JSW MG ಮೋಟಾರ್ ಇಂಡಿಯಾದ ICE ಮತ್ತು EV ಎರಡೂ ಮಾಡಲ್‌ಗಳು ಈ ಗಮನಾರ್ಹ ಸಾಧನೆಗೆ ಕೊಡುಗೆ ನೀಡಿವೆ.

20 Km ಮೈಲೇಜ್.. ಜನಪ್ರಿಯ Kia Syros ಬೆಲೆ ರೂ.1.86 ಲಕ್ಷ ಇಳಿಕೆ..

ಕಿಯಾ ಸೈರಸ್ (Kia Syros) ಜನಪ್ರಿಯ ಎಸ್‌ಯುವಿಯಾಗಿದೆ. ಸೆ.22 ರಿಂದ ಪರಿಷ್ಕೃತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರಗಳು ಜಾರಿಯಾಗಿವೆ. ಈ ಕಾರಿನ ದರವು ರೂ.1.86 ಲಕ್ಷ ಇಳಿಕೆಯಾಗಿದೆ. ಕನಿಷ್ಠ ರೂ.8.67 ಲಕ್ಷ ಹಾಗೂ ಗರಿಷ್ಠ ರೂ.15.94 ಲಕ್ಷ ಎಕ್ಸ್-ಶೋರೂಂ ದರವನ್ನು ಪಡೆದಿದೆ. ನೀವು ಹೊಚ್ಚ ಹೊಸ ಕಾರೊಂದನ್ನು ಕೊಂಡುಕೊಳ್ಳಲು ಪ್ಲ್ಯಾನ್ ಮಾಡಿದ್ದೀರಾ.. ಹಾಗಾದರೆ 'ಸೈರಸ್' ಅತ್ಯುತ್ತಮವಾದ ಆಯ್ಕೆಯಾಗಲಿದೆ. ನಾವಿಲ್ಲಿ ಇದೇ ಎಸ್‌ಯುವಿಯ ಆನ್-ರೋಡ್ ಬೆಲೆ (On-Road Price) ಮತ್ತು ಇಎಂಐ (EMI) ಕುರಿತಂತೆ ಪ್ರಮುಖ ವಿವರಗಳನ್ನು ತಿಳಿಸಿಕೊಟ್ಟಿದ್ದೇವೆ.

ಹೀರೋ ಡೆಸ್ಟಿನಿ 110 vs ಹೋಂಡಾ ಆಕ್ಟಿವಾ 110: ಅಗ್ಗದ ಸ್ಕೂಟರ್ ಯಾವುದು

ಭಾರತದ 110 ಸಿಸಿ ಸ್ಕೂಟರ್ ವಿಭಾಗದಲ್ಲಿ ದೀರ್ಘಕಾಲದಿಂದ ಪ್ರಾಬಲ್ಯ ಹೊಂದಿರುವ ಹೋಂಡಾ ಆಕ್ಟಿವಾ 110 ಸ್ಕೂಟರ್‌ಗೆ ಇತ್ತೀಚೆಗೆ ಬಿಡುಗಡೆಯಾಗಿರುವ ಹೀರೋ ಡೆಸ್ಟಿನಿ 110 ಪ್ರಬಲ ಪ್ರತಿಸ್ಪರ್ಧಿಯಾಗಿ ಹೊರಹೊಮ್ಮಿದೆ. ಆಕರ್ಷಕ ಬೆಲೆ, ಯೋಗ್ಯ ಕಾರ್ಯಕ್ಷಮತೆ ಮತ್ತು ಆಧುನಿಕ ವೈಶಿಷ್ಟ್ಯಗಳ ಆಕರ್ಷಕ ಮಿಶ್ರಣವನ್ನು ನೀಡುತ್ತಾ ಭಾರೀ ಡಿಮ್ಯಾಂಡ್ ಪಡೆದುಕೊಳ್ಳುತ್ತಿದೆ. ಬಜೆಟ್ ಮತ್ತು ಸಮಕಾಲೀನ ವೈಶಿಷ್ಟ್ಯಗಳಿಗೆ ಆದ್ಯತೆ ನೀಡುವ ಖರೀದಿದಾರರಿಗೆ, ಹೀರೋ ಡೆಸ್ಟಿನಿ 110 ಆಕರ್ಷಕ ಪ್ಯಾಕೇಜ್ ಆಗಿದೆ. ಹಾಗಾದ್ರೆ ನಿಜವಾಗಿಯೂ ಹೋಂಡಾ ಆಕ್ಟಿವಾ 110 ಸ್ಕೂಟರ್‌ಗಿಂತ ಉತ್ತಮವಾಗಿದೆಯೇ ಬನ್ನಿ ತಿಳಿಯೋಣ.
Advertisement

32.85 Km ಮೈಲೇಜ್.. 5 ಲಕ್ಷದ ಈ ಮಾರುತಿ ಕಾರಿಗಾಗಿ ಜನರು ಶೋರೂಂ..

ಮಾರುತಿ ಸುಜುಕಿ ಸ್ವಿಫ್ಟ್ (Maruti Suzuki Swift) ಜಗಮೆಚ್ಚಿದ ಹ್ಯಾಚ್‌ಬ್ಯಾಕ್‌ ಎಂದೇ ಹೆಸರುವಾಸಿಯಾಗಿದೆ. ಪ್ರತಿ ತಿಂಗಳು ಭಾರೀ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ಸೆ.22 ರಿಂದ ಪರಿಷ್ಕೃತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರಗಳು ಅಧಿಕೃತವಾಗಿ ಜಾರಿಗೊಂಡಿವೆ. ಇದರ ಸಂಪೂರ್ಣ ಪ್ರಯೋಜನಗಳು 'ಸ್ವಿಫ್ಟ್' ಕಾರಿಗೂ ಲಭ್ಯವಿದೆ. ಸರಿ ಸುಮಾರು ರೂ.84,600 ವರೆಗೆ ಬೆಲೆ ಇಳಿಕೆಯಾಗಿದೆ. ನಾವಿಲ್ಲಿ ಈ ಹ್ಯಾಚ್‌ಬ್ಯಾಕ್‌ನ ಪ್ರತಿಯೊಂದು ರೂಪಾಂತರಗಳ (ವೇರಿಯೆಂಟ್) ಹೊಸ 'ಎಕ್ಸ್-ಶೋರೂಂ' ದರ ಎಷ್ಟಾಗಿದೆ ಎಂಬುದರ ಕುರಿತಂತೆ ಸಂಪೂರ್ಣವಾಗಿ ತಿಳಿಸಿಕೊಟ್ಟಿದ್ದೇವೆ.

ಹೊಸ ಸುಜುಕಿ V-Strom SX 250 ಅಡ್ವೆಂಚರ್ ಮೋಟಾರ್‌ಸೈಕಲ್ ವಿಶೇಷತೆಗಳು

ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ತನ್ನ ಜನಪ್ರಿಯ V-Strom SX 250 ಅಡ್ವೆಂಚರ್ ಮೋಟಾರ್‌ಸೈಕಲ್ ಅನ್ನು 2025 ರ ಮಾದರಿ ವರ್ಷಕ್ಕೆ ಹೊಸ ಬಣ್ಣಗಳ ಪ್ಯಾಲೆಟ್‌ನೊಂದಿಗೆ ರಿಫ್ರೆಶ್ ಮಾಡಿ ಬಿಡುಗಡೆ ಮಾಡಿದೆ. ಹಬ್ಬದ ಋತುವಿಗೆ ಸರಿಯಾಗಿ ತನ್ನ ಆಕರ್ಷಣೆಯನ್ನು ಹೆಚ್ಚಿಸಿದ್ದು, ನವೀಕರಿಸಿದ V-Strom SX ಈಗ ಬೈಕ್‌ನ ಸ್ಪರ್ಧಾತ್ಮಕ ಬೆಲೆಯಲ್ಲಿ ಯಾವುದೇ ಬದಲಾವಣೆಯಿಲ್ಲದೆ ನಾಲ್ಕು ಗಮನಾರ್ಹವಾದ ಡ್ಯುಯಲ್-ಟೋನ್ ಪೇಂಟ್ ಸ್ಕೀಮ್‌ಗಳನ್ನು ನೀಡುತ್ತದೆ. ಇದು ರೂ. 1.98 ಲಕ್ಷ (ಎಕ್ಸ್-ಶೋರೂಂ ದೆಹಲಿ) ಬೆಲೆಯ ಅದೇ ದರದಲ್ಲಿ ಖರೀದಿಗೆ ಲಭ್ಯವಿದೆ.

ಬೆಂಗಳೂರಿನಲ್ಲಿ ಒಬ್ಬನೇ ಪ್ರಯಾಣಿಸುವ ಕಾರುಗಳಿಗೆ ತೆರಿಗೆ..

ಬೆಂಗಳೂರು (Bengaluru) ಐಟಿ ಹಬ್ ಆಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯ ಹಾಗೂ ಹೊರ ರಾಜ್ಯಗಳ ಜನರು ಬಂದು ನೆಲೆಸಿದ್ದಾರೆ. ರಸ್ತೆಗಳು ಇಕ್ಕಟ್ಟಾಗಿದ್ದು, ವಾಹನಗಳ ಸಂಖ್ಯೆ ವಿಪರೀತವಾಗಿ ಅಧಿಕಗೊಂಡಿದೆ. ಸಂಚಾರ ದಟ್ಟಣೆ ಎಂಬುದು ಬಹುದೊಡ್ಡ ಸಮಸ್ಯೆಯಾಗಿದೆ. ಇದನ್ನು ಪರಿಹರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಶ್ರಮಿಸುತ್ತಿದೆ. ಸದ್ಯ, ಪೀಕ್ ಅವರ್‌ನಲ್ಲಿ ಒಬ್ಬರೇ ಕಾರಿನಲ್ಲಿ ಸಂಚರಿಸಿದರೆ ತೆರಿಗೆ ವಿಧಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

Tvs Jupiter: ಆಫೀಸ್‌ಗೆ ಹೋಗಲು ಬೆಸ್ಟ್ ಚಾಯ್ಸ್.. 53 ಕಿ.ಮೀ..

ಸೆ.22 ರಿಂದ ದೇಶಾದ್ಯಂತ ಪರಿಷ್ಕೃತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರಗಳು ಜಾರಿಗೊಂಡಿವೆ. 350 ಸಿಸಿ ವರೆಗಿನ ಎಂಜಿನ್ ಸಾಮರ್ಥ್ಯವಿರುವ ಸಾಮಾನ್ಯ ದ್ವಿಚಕ್ರ ವಾಹನಗಳ (ಸ್ಕೂಟರ್ & ಬೈಕ್‌ಗಳು) ಖರೀದಿ ಮೇಲೆ ವಿಧಿಸುತ್ತಿದ್ದ ಜಿಎಸ್‌ಟಿ ಪ್ರಮಾಣವನ್ನು ಶೇಕಡ 28% ರಿಂದ 18%ಗೆ ಇಳಿಸಲಾಗಿದೆ. ಅದರ ಸಂಪೂರ್ಣ ಲಾಭವು ಟಿವಿಎಸ್ ಜೂಪಿಟರ್ (Tvs Jupiter) ಸ್ಕೂಟರ್‌ಗೂ ಲಭ್ಯವಿದೆ. ನಾವಿಲ್ಲಿ ಈ ಗಾಡಿಯ ಪ್ರತಿಯೊಂದು ರೂಪಾಂತರಗಳ (ವೇರಿಯೆಂಟ್) ಹೊಸ 'ಎಕ್ಸ್-ಶೋರೂಂ' ದರ ಎಷ್ಟಾಗಿದೆ ಎಂಬುದರ ಕುರಿತಂತೆ ಸಂಪೂರ್ಣವಾಗಿ ವಿವರಿಸಿದ್ದೇವೆ.
Advertisement

ಹೊಸದಾಗಿ ಬಿಡುಗಡೆಯಾದ ಹೋಂಡಾ CB350C ಸ್ಪೆಷಲ್ ಎಡಿಷನ್ ವಿಶೇಷತೆಗಳು

2025 ರಲ್ಲಿ ಬಿಡುಗಡೆಯಾದ ಹೋಂಡಾ CB350C ಸ್ಪೆಷಲ್ ಎಡಿಷನ್, ಕ್ಲಾಸಿಕ್ ಸ್ಟೈಲಿಂಗ್ ಅನ್ನು ಹೈ ಪರ್ಫಾಮೆನ್ಸ್ ಮತ್ತು ಆಧುನಿಕ ತಂತ್ರಜ್ಞಾನದೊಂದಿಗೆ ಸಂಯೋಜಿಸುವ ಪ್ರೀಮಿಯಂ ರೆಟ್ರೊ - ಪ್ರೇರಿತ ಮೋಟಾರ್‌ಸೈಕಲ್ ಆಗಿದೆ. ಇದರ ಬೆಲೆಯು ರೂ. 2.02 ಲಕ್ಷ (ಎಕ್ಸ್-ಶೋರೂಂ) ವಿದ್ದು, ಇದು ಹೋಂಡಾದ CB350C ಶ್ರೇಣಿಯಲ್ಲಿ ಅಗ್ರ ಟ್ರಿಮ್ ಆಗಿ ನಿಂತಿದೆ, ಇದು ವಿಂಟೇಜ್ ಮೋಡಿ ಮತ್ತು ಸಮಕಾಲೀನ ವೈಶಿಷ್ಟ್ಯಗಳ ಮಿಶ್ರಣವನ್ನು ಬಯಸುವ ಸವಾರರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ. ಈ ಮೋಟಾರ್‌ಸೈಕಲ್ ಕುರಿತ ಟಾಪ್ ವಿಶೇಷತೆಗಳು ಇಲ್ಲಿವೆ.