ಬಡವರ ಬಂಧು.. 34 ಕಿ.ಮೀ ಮೈಲೇಜ್, 4 ಲಕ್ಷ.. 5-ಸೀಟರ್, ಈ ಮಾರುತಿ..

ಮಾರುತಿ ಸುಜುಕಿ ಆಲ್ಟೊ ಕೆ10 (Maruti Suzuki Alto K10), ಜನಮೆಚ್ಚಿದ ಹ್ಯಾಚ್‌ಬ್ಯಾಕ್ ಆಗಿದೆ. ಇದು ತುಂಬಾ ಅಚ್ಚುಕಟ್ಟಾದ ವಿನ್ಯಾಸ ಹಾಗೂ ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದ್ದು, ಮಧ್ಯಮ ವರ್ಗದ ಗ್ರಾಹಕರು ಕೂಡ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಆದರೂ ಈ ಆಗಸ್ಟ್ ತಿಂಗಳು 'ಆಲ್ಟೊ ಕೆ10' ಕಾರಿನ ಮಾರಾಟ ಸಂಖ್ಯೆ ಇಳಿಮುಖವಾಗಿದೆ. ಒಟ್ಟು 5,520 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಣೆ ಮಾಡಲಾಗಿದೆ. 2024ರ ಇದೇ ಅವಧಿಯಲ್ಲಿ 8,546 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ ಸಂಖ್ಯೆಯನ್ನು ವಿಶ್ಲೇಷಣೆ ಮಾಡಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ -35.41% ಕುಸಿತವಾಗಿದೆ.

Mahindra: ಮಹೀಂದ್ರಾ XUV700 ಮೇಲೆ ರೂ.1.43 ಲಕ್ಷ ಕಡಿತ

ದೊಡ್ಡ SUV ಗಳಿಗೆ GST ಮತ್ತು ಪರಿಹಾರ ಸೆಸ್ ಕಡಿತಗೊಳಿಸಿದ ನಂತರ ಮಹೀಂದ್ರಾ XUV700 ಬೆಲೆಗಳು ಈಗ ರೂ.1.43 ಲಕ್ಷದವರೆಗೆ ಇಳಿದಿದೆ. XUV700 ನಂತಹ SUV ಗಳ GST ದರವನ್ನು ಶೇ48 ರಿಂದ 40 ಕ್ಕೆ ಇಳಿಸಲಾಗಿದೆ, ಇದರ ಪರಿಣಾಮವಾಗಿ ಎಲ್ಲಾ ವೇರಿಯೆಂಟ್‌ಗಳ ಮೇಲೆ ಗಮನಾರ್ಹ ಉಳಿತಾಯವಾಗಲಿದೆ. ಬೇಸ್‌ MX ಟ್ರಿಮ್ ಮೇಲೆ ಸುಮಾರು ರೂ. 88,900 ದಿಂದ ಟಾಪ್ - ಎಂಡ್ AX7 ಲಕ್ಸರಿ ಮೇಲೆ ರೂ. 1.43 ಲಕ್ಷದವರೆಗೆ ಬೆಲೆ ಇಳಿಕೆಯಾಗಿದೆ. ಸಂಪೂರ್ಣ ವೇರಿಯೆಂಟ್‌ವಾರು ವಿವರ ಇಲ್ಲಿದೆ.

ರಿಷಬ್ ಶೆಟ್ಟಿ ನೆಚ್ಚಿನ ಲಕ್ಸುರಿ Toyota ಕಾರು..

ನಟ ರಿಷಬ್ ಶೆಟ್ಟಿ (Rishab Shetty) ನಟಿಸಿ, ಅಕ್ಟಿನ್ ಕಟ್ ಹೇಳಿರುವ 'ಕಾಂತಾರ' ಪ್ರೀಕ್ವೆಲ್‌ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ತೆರೆಗೆ ಬರಲು ಸಿದ್ಧವಾಗಿದೆ. ಅಕ್ಟೋಬರ್ 2 ರಂದು ಬಿಡುಗಡೆಯಾಗಲಿದೆ. ಬಹುಮುಖ ಪ್ರತಿಭೆಯಾಗಿರುವ ರಿಷಬ್ ಶೆಟ್ಟಿ ಅವರಿಗೆ ಭಾರೀ ಸಂಖ್ಯೆಯಲ್ಲಿ ಅಭಿಮಾನಿ ಬಳಗವು ಇದೆ. ಕಳೆದ ಏಪ್ರಿಲ್ ತಿಂಗಳು ಅವರು, ನೂತನ ಟೊಯೊಟಾ ವೆಲ್‌ಫೈರ್ (Toyota Vellfire) ಎಂಪಿವಿ ಖರೀದಿ ಮಾಡಿದ್ದರು. ಅದಕ್ಕೆ ಸಂಬಂಧಿಸಿದ ಹಲವು ಫೋಟೋಗಳು ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗಿದ್ದವು. ನಾವಿಲ್ಲಿ ಈ ಕಾರಿನ ಬೆಲೆ, ಕಾರ್ಯಕ್ಷಮತೆ ಹಾಗೂ ವಿಶೇಷತೆಗಳ ಕುರಿತಂತೆ ಸಂಪೂರ್ಣವಾಗಿ ತಿಳಿಸಿಕೊಟ್ಟಿದ್ದೇವೆ.

2026 ಕವಾಸಕಿ ZX-10R ಬೆಲೆ ಏರಿಕೆಯೊಂದಿಗೆ ಬಿಡುಗಡೆ: ವಿಶೇಷತೆಗಳೇನು?

2026 ಕವಾಸಕಿ ZX-10R ಭಾರತದಲ್ಲಿ ಬಿಡುಗಡೆಯಾಗಿದ್ದು, ಈಗ ಇದರ ಬೆಲೆಯು ರೂ. 19.49 ಲಕ್ಷ (ಎಕ್ಸ್-ಶೋರೂಂ) ಇದೆ. ಇದು ಹಿಂದಿನ 2025 ಮಾಡಲ್‌ಗಿಂತ ರೂ. 99,000 ರಷ್ಟು ಹೆಚ್ಚಾಗಿದೆ. 2025 ಮತ್ತು 2026 ಎರಡೂ ಮಾಡಲ್‌ಗಳನ್ನು ಪ್ರಸ್ತುತ ಮಾರಾಟದಲ್ಲಿ ಇಡಲಾಗಿದೆ, ಈಗಿರುವ 2025 ಮಾಡಲ್‌ ಹೆಚ್ಚಿನ ಪವರ್‌ ನೀಡುತ್ತದೆ. ಹಳೆಯ ಸ್ಟಾಕ್ ತೆರವುಗೊಳಿಸಲು ರಿಯಾಯಿತಿಯಲ್ಲಿ ಇದನ್ನು ಸಂಗ್ರಹಿಸಲಾಗಿದೆ ಎಂದು ವರದಿಯಾಗಿದೆ. 2026 ಕವಾಸಕಿ ZX-10R ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
Advertisement

Tata Nano ಅಲ್ಲ.. ಬೆಲೆಯೂ ಕಮ್ಮಿ, ಅತಿ ಶೀಘ್ರದಲ್ಲೇ..

ವಿಯೆಟ್ನಾಂ ಮೂಲದ ವಿನ್‌ಫಾಸ್ಟ್ (VinFast), ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ವಾಹನ ತಯಾರಕ ಕಂಪನಿ ಎಂದೇ ಹೆಸರುವಾಸಿಯಾಗಿದೆ. ಕಳೆದ ವಾರವಷ್ಟೇ ದೇಶೀಯ ಮಾರುಕಟ್ಟೆಯಲ್ಲಿ ನೂತನ ವಿಎಫ್6 & ವಿಎಫ್7 ಎಲೆಕ್ಟ್ರಿಕ್ ಎಸ್‌ಯುವಿಗಳನ್ನು ಬಿಡುಗಡೆಗೊಳಿಸಿತ್ತು. ಈ ಕಾರುಗಳು ಸ್ಪರ್ಧಾತ್ಮಕ ಬೆಲೆಯಲ್ಲಿಯೂ ಖರೀದಿಗೆ ಲಭ್ಯವಿವೆ. ಸದ್ಯ, ಕಂಪನಿಯು 3ನೇ ಎಲೆಕ್ಟ್ರಿಕ್ ಕಾರಾಗಿ 'ವಿಎಫ್3'ನ್ನು ಮಾರಾಟಕ್ಕೆ ತರಲು ಎಲ್ಲ ರೀತಿಯ ಸಿದ್ದತೆಯನ್ನು ಮಾಡಿಕೊಳ್ಳುತ್ತಿದೆ ಎನ್ನಲಾಗಿದೆ. ಬನ್ನಿ.. ಈ ಕಾರಿಗೆ ನಿರೀಕ್ಷಿತ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

CEAT: ಭಾರತದ ಪ್ರಮುಖ ಟೈರ್ ಬ್ರಾಂಡ್ ಸಿಯೆಟ್ ಬೆಲೆ ಇಳಿಕೆ ಘೋಷಣೆ

ಭಾರತ ಸರ್ಕಾರ ಇತ್ತೀಚೆಗೆ ಘೋಷಿಸಿದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸುಧಾರಣೆಗಳ ಪ್ರಯೋಜನಗಳನ್ನು ಗ್ರಾಹಕರಿಗೆ ವರ್ಗಾಯಿಸಲು ಸಿಯೆಟ್ (CEAT) ಲಿಮಿಟೆಡ್ ಇಂದು ತನ್ನ ಸಂಪೂರ್ಣ ಶ್ರೇಣಿಯ ಟೈರ್‌ಗಳ ಮೇಲೆ ಬೆಲೆ ಕಡಿತವನ್ನು ಘೋಷಿಸಿದೆ. ಕಂಪನಿಯು ತನ್ನ ಚಾನೆಲ್ ಮತ್ತು ಗ್ರಾಹಕರಿಗೆ ಹೊಸ ಬೆಲೆಗಳ ಪ್ರಯೋಜನವನ್ನು ವರ್ಗಾಯಿಸಲಿದೆ. ಹೊಸ ಬೆಲೆಗಳು ಸೆಪ್ಟೆಂಬರ್ 22, 2025 ರಿಂದ ಜಾರಿಗೆ ಬರಲಿವೆ ಎಂದು ಸಿಯೆಟ್ ಕಂಪನಿ ಹೇಳಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

Suzuki: ಎಲ್ಲವು ಚೆನ್ನಾಗಿದೆ.. ಆದ್ರೂ ಸದ್ದಿಲ್ಲದೇ ಈ ಶಕ್ತಿಶಾಲಿ..

ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ (Suzuki Motorcycle India), ಜನಪ್ರಿಯ ಬೈಕ್ ಕಟಾನಾ (Katana) ಮಾರಾಟವನ್ನು ಸ್ಥಗಿತಗೊಳಿಸಿದೆ. ಕಂಪನಿಯು ತನ್ನ ಅಧಿಕೃತ ವೆಬ್‌ಸೈಟ್‌ನಿಂದ ಈ ಮೋಟಾರ್‌ಸೈಕಲ್‌ನ ಕುರಿತ ಎಲ್ಲ ವಿವರಗಳನ್ನು ತೆಗೆದು ಹಾಕಿದೆ. ಇದರೊಂದಿಗೆ ಡೀಲರ್‌ಶಿಪ್‌ಗಳು ಕೂಡ ಬುಕ್ಕಿಂಗ್ ತೆಗೆದುಕೊಳ್ಳುವುದನ್ನು ನಿಲ್ಲಿಸಿವೆ ಎಂದು ವಿವಿಧ ಮಾಧ್ಯಮಗಳು ವರದಿ ಮಾಡಿವೆ. ಬನ್ನಿ, 'ಕಟಾನಾ' ಬೈಕ್ ಮಾರಾಟದಿಂದ ದೂರವಾಗಲು ಕಾರಣವೇನು.. ಏನೆಲ್ಲಾ ವಿಶೇಷತೆಗಳನ್ನು ಹೊಂದಿತ್ತು ಎಂಬುದರ ಕುರಿತಂತೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಯೋಣ.

ಸುರಕ್ಷಿತ ಕಾರು ಎಂದರೆ ಕೇವಲ 6 ಏರ್‌ಬ್ಯಾಗ್‌ಗಳು ಅಲ್ಲ

ಮಾರುತಿ ಸುಜುಕಿ ಪ್ರಸ್ತುತ ಭಾರತದಲ್ಲಿ 14 ಕಾರುಗಳು ಮತ್ತು ಸುಮಾರು 140 ವೇರಿಯೆಂಟ್‌ಗಳಲ್ಲಿ ಪ್ರಮಾಣಿತ ವೈಶಿಷ್ಟ್ಯವಾಗಿ ಆರು ಏರ್‌ಬ್ಯಾಗ್‌ಗಳನ್ನು ನೀಡುತ್ತಿದ್ದು, ಪ್ರಯಾಣಿಕ ವಾಹನಗಳ ಅತಿದೊಡ್ಡ ಪೋರ್ಟ್‌ಫೋಲಿಯೊವನ್ನು ಹೊಂದಿರುವ ಹೆಗ್ಗಳಿಕೆಯನ್ನು ಪಡೆದಿದೆ. ಈ 14 ಕಾರುಗಳು ಕಂಪನಿಯ ಒಟ್ಟು ದೇಶೀಯ ಮಾರಾಟದಲ್ಲಿ ಶೇ97 ಕ್ಕಿಂತ ಹೆಚ್ಚಿನ ಪಾಲನ್ನು ಪಡೆದುಕೊಂಡಿವೆ. ಆದರೆ, ಸುರಕ್ಷತೆಯು ಹೆಚ್ಚಿನ ಏರ್‌ಬ್ಯಾಗ್‌ಗಳ ಬಗ್ಗೆ ಮಾತ್ರವಲ್ಲ ಎಂದು ಮಾರುತಿ ಒತ್ತಿಹೇಳುತ್ತದೆ. ಕಂಪನಿಯು ಏರ್‌ಬ್ಯಾಗ್‌ಗಳನ್ನು ಮೀರಿ ಸಕ್ರಿಯ ಮತ್ತು ನಿಷ್ಕ್ರಿಯ ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿರುವ ಸಮಗ್ರ ಸುರಕ್ಷತಾ ವಿಧಾನವನ್ನು ಎತ್ತಿ ತೋರಿಸಿದೆ.
Advertisement

ಗಟ್ಟಿಮುಟ್ಟಾದ ಕಾರಿದು.. 27.97 ಕಿ.ಮೀ ಮೈಲೇಜ್, 11 ಲಕ್ಷ.. ಈ Toyota

ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ (Toyota Urban Cruiser Hyryder) ಜನಮೆಚ್ಚಿದ ಎಸ್‌ಯುವಿಯಾಗಿ ಹೊರಹೊಮ್ಮಿದೆ. ಅತ್ಯಾಧುನಿಕವಾದ ವಿನ್ಯಾಸ ಹಾಗೂ ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಈ ಆಗಸ್ಟ್ ತಿಂಗಳಲ್ಲೂ 'ಹೈರೈಡರ್' ದೊಡ್ಡ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಬರೋಬ್ಬರಿ 9854 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಣೆ ಮಾಡಲಾಗಿದೆ. 2024ರ ಇದೇ ಅವಧಿಯಲ್ಲಿ 4,385 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿಅಂಶವನ್ನು ವಿಶ್ಲೇಷಣೆ ಮಾಡಿದಾಗ ಮಾರಾಟ ಪ್ರಮಾವು ವರ್ಷದಿಂದ ವರ್ಷಕ್ಕೆ ಶೇಕಡ 124.52% ಪ್ರಗತಿಯಾಗಿದೆ.

ಮೊನ್ನೆಯಷ್ಟೆ ಬಿಡುಗಡೆ: ಕೇವಲ 54 ಸಾವಿರ ಬೆಲೆ

ಝೀಲಿಯೊ ಇ (ZELIO E) ಮೊಬಿಲಿಟಿ ಭಾರತದಲ್ಲಿ ಮುಂದಿನ ಪೀಳಿಗೆಯ ಗ್ರೇಸಿ (Gracyi) ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮೊನ್ನೆಯಷ್ಟೆ ಬಿಡುಗಡೆ ಮಾಡಿದೆ. ಇದು ಮೂರು ವೇರಿಯೆಂಟ್‌ಗಳಲ್ಲಿ ಲಭ್ಯವಿದ್ದು, ಬೆಲೆಯು ರೂ. 54,000 (ಎಕ್ಸ್ - ಶೋರೂಂ) ದಿಂದ ರೂ. 66,000 (ಎಕ್ಸ್ - ಶೋರೂಂ) ವರಗೆ ಇದೆ. ಭಾರತದಲ್ಲಿ ಬೆಳೆಯುತ್ತಿರುವ ಇವಿ ಮಾರುಕಟ್ಟೆಯಲ್ಲಿ, ಸಮತೋಲನ ಶ್ರೇಣಿ, ಕೈಗೆಟುಕುವ ಬೆಲೆ, ಸುರಕ್ಷತೆ ಮತ್ತು ದೈನಂದಿನ ನಗರ ಸವಾರಿಗಳಿಗೆ ಆಧುನಿಕ ವೈಶಿಷ್ಟ್ಯಗಳಲ್ಲಿ ಬಲವಾದ ಎಲೆಕ್ಟ್ರಿಕ್ ಸ್ಕೂಟರ್ ಆಯ್ಕೆಯಾಗಿದೆ. ಈ ಸ್ಕೂಟರ್ ಕುರಿತ ಹೆಚ್ಚಿನ ವಿವರಗಳು ಇಲ್ಲಿವೆ.

ಫೋಕ್ಸ್‌ವ್ಯಾಗನ್ ಕಾರುಗಳ ಮೇಲೆ ಭಾರೀ ಬೆಲೆ ಇಳಿಕೆ

ಫೋಕ್ಸ್‌ವ್ಯಾಗನ್ ಇಂಡಿಯಾ ಸಂಪೂರ್ಣ ಜಿಎಸ್‌ಟಿ ದರ ಕಡಿತ ಪ್ರಯೋಜನಗಳನ್ನು ಗ್ರಾಹಕರಿಗೆ ವರ್ಗಾಯಿಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ. ಪರಿಷ್ಕೃತ ಬೆಲೆಗಳು ಸೆಪ್ಟೆಂಬರ್ 22, 2025 ರಿಂದ ಜಾರಿಗೆ ಬರಲಿವೆ. ತನ್ನ ವರ್ಟಸ್, ಟೈಗುನ್ ಮತ್ತು ಟಿಗುವಾನ್ ಮೇಲೆ ಜಿಎಸ್‌ಟಿ ದರ ಕಡಿತ ಪ್ರಯೋಜನಗಳು ಅನ್ವಯವಾಗುತ್ತವೆ. ನಿಮ್ಮ ಆಯ್ಕೆಯ ಮಾದರಿಯ ನಿಖರವಾದ ಬೆಲೆ ವಿವರಗಳು ಮತ್ತು ನಿರ್ದಿಷ್ಟ ಪ್ರಯೋಜನಗಳಿಗಾಗಿ, ದಯವಿಟ್ಟು ನಿಮ್ಮ ಹತ್ತಿರದ ಅಧಿಕೃತ ವೋಕ್ಸ್‌ವ್ಯಾಗನ್ ಶೋ ರೂಂ ಅನ್ನು ಸಂಪರ್ಕಿಸಿ ಎಂದು ಕಂಪನಿ ಹೇಳಿದೆ.

ಬಡವರ ನೆಚ್ಚಿನ ಕಾರಿದು.. 5 ಲಕ್ಷ, 34 ಕಿ.ಮೀ ಮೈಲೇಜ್.. ಆದ್ರೂ..

ಮಾರುತಿ ಸುಜುಕಿ ವ್ಯಾಗನ್ಆರ್ (Maruti Suzuki WagonR) ಜಗಮೆಚ್ಚಿದ ಹ್ಯಾಚ್‌ಬ್ಯಾಕ್ ಎಂದೇ ಹೆಸರುವಾಸಿಯಾಗಿದೆ. ಇದು ಹೆಚ್ಚು ಅತ್ಯಾಧುನಿಕವಾದ ವಿನ್ಯಾಸ ಹೊಂದಿದ್ದು, ಹತ್ತಾರು ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ. ಆದರೂ ಈ ಆಗಸ್ಟ್ ತಿಂಗಳಲ್ಲಿ 'ವ್ಯಾಗನ್ಆರ್' ಮಾರಾಟ ಸಂಖ್ಯೆ ಇಳಿಮುಖವಾಗಿದೆ. ಒಟ್ಟು 14,552 ಯುನಿಟ್‌ಗಳನ್ನು ಗ್ರಾಹಕರಿಗೆ ವಿತರಣೆ ಮಾಡಲಾಗಿದೆ. 2024ರ ಇದೇ ಅವಧಿಯಲ್ಲಿ 16,450 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿಸಂಖ್ಯೆಯನ್ನು ವಿಶ್ಲೇಷಣೆ ಮಾಡಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ -11.54% ಕುಸಿತವಾಗಿದೆ.
Advertisement

Maruti: 26 ಕಿ.ಮೀ ಮೈಲೇಜ್: ಭಾರತದ ಬೆಸ್ಟ್ 7-ಸೀಟರ್

ಮಾರುತಿ ಸುಜುಕಿಯ ಎರ್ಟಿಗಾ (Maruti suzuki Ertiga) ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ತನ್ನ ಭದ್ರಕೋಟೆಯನ್ನು ಮುಂದುವರೆಸಿದೆ. ಆಗಸ್ಟ್ 2025 ರಲ್ಲಿ ಬರೋಬ್ಬರಿ 18,445 ಯುನಿಟ್‌ ಕಾರುಗಳ ಮಾರಾಟದೊಂದಿಗೆ ದೇಶದ ಅತ್ಯುತ್ತಮ ಮಾರಾಟವಾದ ಕಾರಾಗಿ ಹೊರಹೊಮ್ಮಿದೆ. ಈ ಅಂಕಿ ಅಂಶವು ಬಹು - ಉಪಯುಕ್ತ ವಾಹನದ (MUV) ನಿರಂತರ ಜನಪ್ರಿಯತೆಯನ್ನು ಪ್ರದರ್ಶಿಸುವುದಲ್ಲದೆ, ಏಳು ಆಸನಗಳ ಆಯ್ಕೆಗಳ ಕಡೆಗೆ ವಿಶಾಲವಾದ ಗ್ರಾಹಕ ಬದಲಾವಣೆಯನ್ನು ಪ್ರತಿಬಿಂಬಿಸುತ್ತದೆ. ವಿಶೇಷವಾಗಿ ದೊಡ್ಡ ಕುಟುಂಬಗಳು ಮತ್ತು ಟ್ಯಾಕ್ಸಿ ವಿಭಾಗವು ವಿಶ್ವಾಸಾರ್ಹ, ಇಂಧನ - ಸಮರ್ಥ ಕಾರುಗಳನ್ನು ಹುಡುಕುತ್ತಿದ್ದು, ಎರ್ಟಿಗಾ ಬೆಸ್ಟ್ ಆಯ್ಕೆಯಾಗಿ ನಿಲ್ಲುತ್ತಿದೆ.

ಅಗ್ಗದ ಮಾರುತಿ ಕಾರು ಖರೀದಿಸಿದ ಪ್ರಮುಖ ನಟ.. ಬೆಲೆ ಎಷ್ಟು,

ಬಾಲಿವುಡ್ ಹಾಗೂ ಟಾಲಿವುಡ್ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಹರ್ಷವರ್ಧನ್ ರಾಣೆ (Harshvardhan Rane) ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ. ತಮ್ಮದೇಯಾದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. 2010ರಲ್ಲಿ ತೆಲುಗಿನಲ್ಲಿ ತೆರೆಕಂಡ 'ಥಕಿತಾ ಥಕಿತಾ' ಚಿತ್ರದ ಮೂಲಕ ಬೆಳ್ಳಿ ತೆರೆಗೆ ಎಂಟ್ರಿ ಕೊಟ್ಟಿದ್ದರು. ಇದರೊಂದಿಗೆ ರವಿ ತೇಜ ನಟನೆಯ ಬೆಂಗಾಲ್ ಟೈಗರ್ ಹಾಗೂ ನಯನತಾರಾ ಮುಖ್ಯ ಭೂಮಿಕೆಯಲ್ಲಿದ್ದ ಅನಾಮಿಕ ಸಿನಿಮಾದಲ್ಲೂ ಕಾಣಿಸಿಕೊಂಡಿದ್ದರು. ಹಿಂದಿಯ ಪಲ್ಟನ್ ಚಿತ್ರ ಹರ್ಷವರ್ಧನ್ ಅವರಿಗೆ ದೊಡ್ಡ ಮಟ್ಟದ ಖ್ಯಾತಿಯನ್ನು ತಂದುಕೊಂಡಿತ್ತು.

ಹಬ್ಬಕ್ಕೆ ಮೆಗಾ ಫೆಸ್ಟಿವ್ ಉತ್ಸವ ಘೋಷಿಸಿದ ಒಬೆನ್: 35,000 ಪ್ರಯೋಜನ

ಭಾರತದ ಪ್ರಮುಖ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ತಯಾರಕರಾದ ಒಬೆನ್ ಎಲೆಕ್ಟ್ರಿಕ್ (Oben Electric), ಇಂದು 'ಮೆಗಾ ಫೆಸ್ಟಿವ್ ಉತ್ಸವ' (Mega Festive Utsav) ವನ್ನು ಘೋಷಿಸಿದೆ. ಇದು ಕಂಪನಿಯ ಪ್ರಮುಖ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳಾದ ರೋರ್ ಇಝಡ್ ಸಿಗ್ಮಾ ಮತ್ತು ರೋರ್ ಇಝಡ್ (Rorr EZ Sigma and Rorr EZ) ಬೈಕ್‌ಗಳ ಮೇಲೆ ಹಬ್ಬದ ವಿಶೇಷ ಆಫರ್‌ಗಳ ರಾಷ್ಟ್ರವ್ಯಾಪಿ ಕಾರ್ಯಕ್ರಮವಾಗಿದೆ. ಇದರಡಿ ರೂ. 35,000 ವರೆಗಿನ ವಿಶೇಷ ಗ್ರಾಹಕ ಪ್ರಯೋಜನಗಳನ್ನು ನೀಡಲಾಗುತ್ತಿದೆ. ಈ ಆಫರ್ ನಗರ ಸವಾರರಿಗೆ ಪ್ರೀಮಿಯಂ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳನ್ನು ಹೆಚ್ಚು ಕೈಗೆಟುಕುವಂತೆ ಮಾಡುತ್ತದೆ.

1 ಲೀಟರ್‌ಗೆ 90 ಕಿ.ಮೀ ಮೈಲೇಜ್, 70,000 ರೂಪಾಯಿ.. ಆಫೀಸ್‌ಗೆ..

ಬೆಂಗಳೂರು, ಮುಂಬೈ, ಚೆನ್ನೈ, ಹೈದರಾಬಾದ್ ಹಾಗೂ ದೆಹಲಿಯಂತಹ ಮಹಾನಗರಗಳಲ್ಲಿ ಪ್ರತಿನಿತ್ಯ ಕೆಲಸಕ್ಕೆ ತೆರಳುವುದು ತುಂಬಾ ಕಷ್ಟದ ಕೆಲಸ. ಅದರಲ್ಲೂ ಬೈಕ್‌ಗಳು ತೀರಾ ಅನಿವಾರ್ಯವಾಗಿವೆ. ನೀವು ಹೊಚ್ಚ ಹೊಸ ಮೋಟಾರ್‌ಸೈಕಲ್‌ವೊಂದನ್ನು ತೆಗೆದುಕೊಳ್ಳಲು ಆಲೋಚಿಸಿದ್ದೀರಾ.. ಹಾಗಾದರೆ, ಬಜಾಜ್ ಪ್ಲಾಟಿನಾ 100 (Bajaj Platina 100) ಅತ್ಯುತ್ತಮವಾದ ಆಯ್ಕೆಯಾಗಲಿದೆ. ನಾವಿಲ್ಲಿ ಈ ಬೈಕ್‌ನ ಬೆಲೆ, ಕಾರ್ಯಕ್ಷಮತೆ ಹಾಗೂ ವೈಶಿಷ್ಟ್ಯಗಳ ಕುರಿತಂತೆ ಸಂಪೂರ್ಣವಾಗಿ ತಿಳಿಸಿಕೊಟ್ಟಿದ್ದೇವೆ.
Advertisement

VE ವಾಣಿಜ್ಯ ವಾಹನಗಳ ಬೆಲೆ ಇಳಿಕೆ ಘೋಷಣೆ: 6 ಲಕ್ಷದವರೆಗೆ ದರ ಕಡಿತ

VE ವಾಣಿಜ್ಯ ವಾಹನಗಳು (VECV) ಇಂದು ಪರಿಷ್ಕೃತ GST ದರಗಳ ಸಂಪೂರ್ಣ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸುವುದಾಗಿ ಘೋಷಿಸಿದೆ. ನವರಾತ್ರಿಯ ಶುಭ ಆರಂಭದೊಂದಿಗೆ, ಸೆಪ್ಟೆಂಬರ್ 22, 2025 ರಿಂದ ಹೊಸ ವಾಹನಗಳನ್ನು ಖರೀದಿಸುವ ಐಚರ್ ಗ್ರಾಹಕರು ಐಚರ್‌ನ ಆಧುನಿಕ ಮತ್ತು ಇಂಧನ - ಸಮರ್ಥ ಟ್ರಕ್ ‌ಗಳು ಮತ್ತು ಬಸ್‌ಗಳ ಶ್ರೇಣಿಯ ಮೇಲೆ ಬೆಲೆಗಳು ಕಡಿಮೆಯಾಗಲಿವೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ. ಒಟ್ಟಾರೆ ಬ್ರಾಂಡ್‌ನ ಯಾವ ವಿಭಾಗದ ಮೇಲೆ ಎಷ್ಟು ಬೆಲೆ ಇಳಿಕೆಯಾಗಿದೆ ಎಂಬುದನ್ನು ಇಲ್ಲಿ ತಿಳಿಯೋಣ.

Tata Nexon EV: ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಮತ್ತಷ್ಟು..

ಟಾಟಾ ಮೋಟಾರ್ಸ್ ಒಡೆತನದ ಟಾಟಾ.ಇವಿ (Tata.ev), ಅತ್ಯಂತ ಜನಪ್ರಿಯ ಎಲೆಕ್ಟ್ರಿಕ್ ಎಸ್‌ಯುವಿ ಎಂದೇ ಹೆಸರುವಾಸಿಯಾಗಿರುವ 'ನೆಕ್ಸಾನ್ ಇವಿ'ಯನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಇದು ಸಖತ್ ಸ್ಟೈಲಿಶ್ ಆಗಿದ್ದು, ಭಾರೀ ಬೇಡಿಕೆಯನ್ನು ಪಡೆದುಕೊಂಡಿದೆ. ಗ್ರಾಹಕರು ಕೂಡ ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ. ಇದೇ ಕಾರು ಸುರಕ್ಷತೆಗಾಗಿ ಗ್ಲೋಬಲ್ ಎನ್‌ಸಿಎಪಿ (Global NCAP) ಮತ್ತು ಭಾರತ್ ಎನ್‌ಸಿಎಪಿ (Bharat NCAP) ಪರೀಕ್ಷೆಯಲ್ಲಿ 5-ಸ್ಟಾರ್ ರೇಟಿಂಗ್‌ನ್ನು ಪಡೆದಿದೆ.

ಸ್ಮಾರ್ಟ್ ಅಪ್‌ಡೇಟ್‌ಗಳೊಂದಿಗೆ ಬಿಡುಗಡೆಯಾಗಿರುವ ನೆಕ್ಸಸ್ ವಿಶೇಷತೆಗಳು

ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಬ್ರಾಂಡ್ ಆಗಿರುವ ಆಂಪಿಯರ್ (Ampere), ಮೊನ್ನೆಯಷ್ಟೆ ನಡೆದ 2025 ರ ವಿಶ್ವ ಇವಿ ದಿನದಂದು ತನ್ನ ನೆಕ್ಸಸ್ ಸ್ಕೂಟರ್‌ಗೆ ಪ್ರಮುಖ ಮುಂದಿನ ಪೀಳಿಗೆಯ ತಂತ್ರಜ್ಞಾನ ನವೀಕರಣಗಳನ್ನು ಪರಿಚಯಿಸಿದೆ. ಫುಲ್ ಸ್ಕ್ರೀನ್ ನ್ಯಾವಿಗೇಷನ್, ಕನೆಕ್ಟೆಡ್ ಡ್ಯಾಶ್‌ಬೋರ್ಡ್ ಮತ್ತು ದೈನಂದಿನ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ವರ್ಧಿತ ಸುರಕ್ಷತೆಯಂತಹ ಸುಧಾರಿತ ಡಿಜಿಟಲ್ ವೈಶಿಷ್ಟ್ಯಗಳನ್ನು ಪರಿಚಯಿಸಿದೆ. ಈ ಮೂಲಕ ಪ್ರತಿ ಸವಾರಿಯು ಸ್ಮಾರ್ಟ್, ಸುರಕ್ಷಿತ ಮತ್ತು ಹೆಚ್ಚು ಆಕರ್ಷಕವಾಗಿಸುತ್ತದೆ ಎಂದು ಕಂಪನಿ ಹೇಳಿದೆ.

21 Km ಮೈಲೇಜ್, 5-ಸೀಟರ್.. ಈ ರಣ ಹದ್ದಿನಂತಹ Hyundai Suv ಕೊಳ್ಳಲು..

ಹ್ಯುಂಡೈ ಕ್ರೆಟಾ (Hyundai Creta) ಜಗಮೆಚ್ಚಿದ ಎಸ್‌ಯುವಿಯಾಗಿ ಹೊರಹೊಮ್ಮಿದೆ. ಇದು ತುಂಬಾ ಅಚ್ಚುಕಟ್ಟಾದ ವಿನ್ಯಾಸ ಹಾಗೂ ಹಲವು ನವೀನ ವೈಶಿಷ್ಟ್ಯಗಳನ್ನು ಹೊಂದಿದೆ. ಗ್ರಾಹಕರು ಸಹ ಮುಗಿಬಿದ್ದು ಕೊಂಡುಕೊಳ್ಳುತ್ತಿದ್ದಾರೆ. ಸದ್ಯ, ಈ 2025ರ ಆಗಸ್ಟ್ ತಿಂಗಳ ಪ್ರಮುಖ 10 ಕಾರುಗಳ ಮಾರಾಟದ ವರದಿ ಪ್ರಕಟಗೊಂಡಿದೆ. 'ಕ್ರೆಟಾ' ಮಾರಾಟ ಸಂಖ್ಯೆಯಲ್ಲಿ ಕುಸಿತವಾಗಿದೆ. ಆದರೂ ಮೂರನೇ ಸ್ಥಾನದಲ್ಲಿದೆ. ಒಟ್ಟು 15,925 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿದೆ. 2024ರ ಇದೇ ಅವಧಿಯಲ್ಲಿ 16,762 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿಸಂಖ್ಯೆಯನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ -5% ಇಳಿಕೆಯಾಗಿದೆ. ಮೊದಲ ಸ್ಥಾನದಲ್ಲಿ ಮಾರುತಿ ಸುಜುಕಿ ಎರ್ಟಿಗಾ (18,445 ಯುನಿಟ್) ಹಾಗೂ ಎರಡನೇ ಸ್ಥಾನದಲ್ಲಿ ಮಾರುತಿ ಸುಜುಕಿ ಡಿಜೈರ್ (16,509 ಯುನಿಟ್) ಇದೆ.
Advertisement

33 Km ಮೈಲೇಜ್.. 6 ಲಕ್ಷ, 5-ಸೀಟರ್.. ಮಾರುತಿ ಶೋರೂಂ ಮುಂದೆ ಕ್ಯೂ..

ಮಾರುತಿ ಸುಜುಕಿ ಡಿಜೈರ್ (Maruti Suzuki Dzire) ವಿಶ್ವಾಸಾರ್ಹ ಸೆಡಾನ್‌ ಎಂದೇ ಹೆಸರುವಾಸಿಯಾಗಿದೆ. ಇದು ತುಂಬಾ ಅಚ್ಚುಕಟ್ಟಾದ ವಿನ್ಯಾಸ ಹಾಗೂ ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಅಗ್ಗದ ದರದಲ್ಲೂ ಸಿಗುತ್ತದೆ. ಗ್ರಾಹಕರು ಕೂಡ ನಾ ಮುಂದು - ತಾಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಈ ಆಗಸ್ಟ್ ತಿಂಗಳು ಕೂಡ 'ಡಿಜೈರ್' ಭಾರೀ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಒಟ್ಟು 16,509 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಣೆ ಮಾಡಲಾಗಿದೆ. 2024 ಇದೇ ಅವಧಿಯಲ್ಲಿ 10,627 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಈ ಅಂಕಿಸಂಖ್ಯೆಯನ್ನು ವಿಶ್ಲೇಷಣೆ ಮಾಡಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 55.35% ಪ್ರಗತಿಯಾಗಿದೆ.

19 Km ಮೈಲೇಜ್.. 7.95 ಲಕ್ಷ, ಹೊಸ Citroen Basalt Xಗೆ..

ನೂತನ ಸಿಟ್ರನ್ ಬಸಾಲ್ಟ್ ಎಕ್ಸ್ (Citroen Basalt X) ಕಾರು ಕೆಲವೇ ದಿನಗಳ ಹಿಂದೆಯಷ್ಟೇ ಬಿಡುಗಡೆಗೊಂಡಿದೆ. ಇದು ಕೂಪೆ ಎಸ್‌ಯುವಿಯಾಗಿದೆ. ರೂ.7.95 ಲಕ್ಷದಿಂದ ರೂ.12.90 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ & 1.2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ನ್ನು ಒಳಗೊಂಡಿದೆ. 19 ಕಿ.ಮೀ ವರೆಗೆ ಮೈಲೇಜ್ ಕೊಡುತ್ತದೆ. ಅತ್ಯಾಧುನಿಕವಾದ ವಿನ್ಯಾಸವನ್ನು ಹೊಂದಿದೆ. 5 ಆಸನಗಳನ್ನು ತನ್ನದಾಗಿಸಿಕೊಂಡಿದೆ. ಹೆಚ್ಚಿನ ಲಗೇಜ್ ತೆಗೆದುಕೊಂಡು ಹೋಗಲು 470 ಲೀಟರ್‌ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಪಡೆದಿದೆ.

ಸಿಟ್ರನ್ ಕಾರುಗಳ ಬೆಲೆ ಇಳಿಕೆ ಘೋಷಣೆ: ಬರೋಬ್ಬರಿ 2.7 ಲಕ್ಷ ಕಡಿತ

ಸಿಟ್ರನ್ ಇಂಡಿಯಾ ಇಂದು ತನ್ನ ಸಂಪೂರ್ಣ ಕಾರುಗಳಾದ್ಯಂತ ಗ್ರಾಹಕರಿಗೆ ಇತ್ತೀಚಿನ ಜಿಎಸ್‌ಟಿ ಕಡಿತದ ಪ್ರಯೋಜನಗಳನ್ನು ಸಂಪೂರ್ಣವಾಗಿ ವರ್ಗಾಯಿಸುವುದಾಗಿ ಘೋಷಿಸಿದೆ. ಈ ಪರಿಷ್ಕೃತ ದರಗಳು ಸೆಪ್ಟೆಂಬರ್ 22, 2025 ರಿಂದ ಜಾರಿಗೆ ಬರಲಿವೆ. ಬಸಾಲ್ಟ್ ಎಕ್ಸ್ ಮತ್ತು ಸಿ3ಎಕ್ಸ್ ಶ್ರೇಣಿಯ ಅತ್ಯಂತ ಸ್ಪರ್ಧಾತ್ಮಕ ಉಡಾವಣಾ ಬೆಲೆಯ ಹಿನ್ನೆಲೆಯಲ್ಲಿ, ಪ್ರಯಾಣಿಕ ವಾಹನಗಳಾದ್ಯಂತ ತೆರಿಗೆಗಳನ್ನು ತರ್ಕಬದ್ಧಗೊಳಿಸುವ ಹೊಸ ಜಿಎಸ್‌ಟಿ ರಚನೆಯು ಎಲ್ಲಾ ಸಿಟ್ರನ್ ಮಾದರಿಗಳಲ್ಲಿ ಗಣನೀಯ ಬೆಲೆ ಇಳಿಕೆಗಳನ್ನು ಕಾಣಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಯಮಹಾ ದ್ವಿಚಕ್ರ ವಾಹನಗಳ ಬೆಲೆ ಭಾರೀ ಇಳಿಕೆ: ರೂ. 17,000 ವರೆಗೆ

ಯಮಹಾ ಮೋಟಾರ್ (ಐವೈಎಂ) ಪ್ರೈ. ಲಿಮಿಟೆಡ್ ಇಂದು ತನ್ನ ದ್ವಿಚಕ್ರ ವಾಹನಗಳ ಮೇಲೆ ಜಿಎಸ್‌ಟಿ ಪರಿಷ್ಕರಣೆಯ ಸಂಪೂರ್ಣ ಲಾಭವನ್ನು ತನ್ನ ಗ್ರಾಹಕರಿಗೆ ಒದಗಿಸುವುದಾಗಿ ಘೋಷಿಸಿದ್ದು, ಈ ಬೆಲೆ ಕಡಿತವು ಸೆಪ್ಟೆಂಬರ್ 22, 2025 ರಿಂದ ಜಾರಿಗೆ ಬರಲಿದೆ. 350 ಸಿಸಿ ವರೆಗಿನ ಮೋಟಾರ್‌ಸೈಕಲ್‌ಗಳ ಮೇಲಿನ ಜಿಎಸ್‌ಟಿ ದರವನ್ನು 28% ರಿಂದ 18% ಕ್ಕೆ ಇಳಿಸಲಾಗಿದೆ. ಈ ವರ್ಗಕ್ಕೆ ಸೇರುವ ಯಮಹಾದ ಸಂಪೂರ್ಣ ದ್ವಿಚಕ್ರ ವಾಹನಗಳ ಪೋರ್ಟ್‌ಫೋಲಿಯೊ ಹೊಸ ತೆರಿಗೆ ದರಕ್ಕೆ ಅನುಗುಣವಾಗಿ ಬೆಲೆ ಕಡಿತವನ್ನು ಕಾಣಲಿದೆ.
Advertisement

ಡೆಲಿವರಿ ದಿನವೆ ಎಡವಟ್ಟು: ಶೋರೂಂನಿಂದ ಸೀದಾ ಗುಜರಿಗೆ

ಒಂದು ಕಾಲದಲ್ಲಿ ಶ್ರೀಮಂತರಿಗೆ ಮಾತ್ರ ಕಾರು ಖರೀದಿಸಲು ಸಾಧ್ಯ ಎಂಬ ಊಹೆ ಈಗ ಬದಲಾಗಿದೆ. ಪ್ರಸ್ತುತ ಭಾರತದಲ್ಲಿ ಹಲವು ಕಾರು ಕಂಪನಿಗಳು ಕೈಗೆಟುಕುವ ಬೆಲೆಯಲ್ಲಿ ಮಾರಾಟ ಮಾಡುತ್ತಿವೆ. ಜೊತೆಗೆ ಡೌನ್‌ ಪೇಮೆಂಟ್ ಇಎಂಐ ಆಯ್ಕೆ ಕೂಡ ಸಿಗುತ್ತಿರುವುದರಿಂದ ಇತ್ತೀಚಿನ ದಿನಗಳಲ್ಲಿ ಹೊಸ ಕಾರು ಖರೀದಿಸುವುದು ಪ್ರತಿಯೊಬ್ಬರ ಕನಸಾಗುತ್ತಿದೆ. ಈ ಕಸನು ಬಹುತೇಕರು ನನಸು ಮಾಡಿಕೊಳ್ಳುವುದು ಸಹ ಸುಲಭವಾಗುತ್ತಿದೆ. ಆದರೆ ಹೊಸ ಕಾರನ್ನು ಇನ್ನೇನು ಡೆಲಿವರಿ ಪಡೆಯಬೇಕು ಎಂದುಕೊಳ್ಳುವಷ್ಟರಲ್ಲಿ ಅದಕ್ಕೆ ಅಪಘಾತ ನಡೆದರೆ ಹೇಗಿರುತ್ತೆ? ಊಹಿಸಲೇ ಭಯಾನಕವಾಗಿದೆ ಅಲ್ಲವೇ.. ಇಂಥಹದ್ದೇ ಘಟನೆಯೊಂದು ನಡೆದಿದ್ದು, ಹೊಚ್ಚ ಹೊಸ ಕಾರು ಜಖಂಗೊಂಡಿದೆ. ದೇಶಾದ್ಯಂತ ಆಫ್ ರೋಡ್ ಕಿಂಗ್ ಎಂದು ಹೆಸರು ಮಾಡಿರುವ ಮಹೀಂದ್ರಾ ಥಾರ್ (Mahindra Thar) ಡೀಲರ್‌ಶಿಪ್‌ನಲ್ಲಿ ಡೆಲಿವರಿ ಪಡೆಯುವ ಮುನ್ನವೇ ಅಪಘಾತಕ್ಕೊಳಗಾಗಿ ಸಂಪೂರ್ಣ ಹಾನಿಯಾಗಿದೆ. ದೆಹಲಿಯಲ್ಲಿ ಈ ಘಟನೆ ನಡೆದಿದ್ದು, ದಂಪತಿಯೊಂದು ಹೊಚ್ಚ ಹೊಸ ಮಹೀಂದ್ರಾ ಥಾರ್ ಡೆಲಿವರಿ ಪಡೆಯುವಾಗ ಅನಿರೀಕ್ಷಿತವಾಗಿ ಡೀಲರ್‌ಶಿಪ್‌ನ ಮೊದಲ ಮಹಡಿಯಿಂದ ಉರುಳಿ ಕೆಳಗೆ ಬಿದ್ದಿದೆ.