ಡೆಲಿವರಿ ದಿನವೆ ಎಡವಟ್ಟು: ಶೋರೂಂನಿಂದ ಸೀದಾ ಗುಜರಿಗೆ
ಆಟೋಮೊಬೈಲ್ಸ್
- 1 year, 1 month, 29 days ago
ಒಂದು ಕಾಲದಲ್ಲಿ ಶ್ರೀಮಂತರಿಗೆ ಮಾತ್ರ ಕಾರು ಖರೀದಿಸಲು ಸಾಧ್ಯ ಎಂಬ ಊಹೆ ಈಗ ಬದಲಾಗಿದೆ. ಪ್ರಸ್ತುತ ಭಾರತದಲ್ಲಿ ಹಲವು ಕಾರು ಕಂಪನಿಗಳು ಕೈಗೆಟುಕುವ ಬೆಲೆಯಲ್ಲಿ ಮಾರಾಟ ಮಾಡುತ್ತಿವೆ. ಜೊತೆಗೆ ಡೌನ್ ಪೇಮೆಂಟ್ ಇಎಂಐ ಆಯ್ಕೆ ಕೂಡ ಸಿಗುತ್ತಿರುವುದರಿಂದ ಇತ್ತೀಚಿನ ದಿನಗಳಲ್ಲಿ ಹೊಸ ಕಾರು ಖರೀದಿಸುವುದು ಪ್ರತಿಯೊಬ್ಬರ ಕನಸಾಗುತ್ತಿದೆ. ಈ ಕಸನು ಬಹುತೇಕರು ನನಸು ಮಾಡಿಕೊಳ್ಳುವುದು ಸಹ ಸುಲಭವಾಗುತ್ತಿದೆ. ಆದರೆ ಹೊಸ ಕಾರನ್ನು ಇನ್ನೇನು ಡೆಲಿವರಿ ಪಡೆಯಬೇಕು ಎಂದುಕೊಳ್ಳುವಷ್ಟರಲ್ಲಿ ಅದಕ್ಕೆ ಅಪಘಾತ ನಡೆದರೆ ಹೇಗಿರುತ್ತೆ? ಊಹಿಸಲೇ ಭಯಾನಕವಾಗಿದೆ ಅಲ್ಲವೇ.. ಇಂಥಹದ್ದೇ ಘಟನೆಯೊಂದು ನಡೆದಿದ್ದು, ಹೊಚ್ಚ ಹೊಸ ಕಾರು ಜಖಂಗೊಂಡಿದೆ. ದೇಶಾದ್ಯಂತ ಆಫ್ ರೋಡ್ ಕಿಂಗ್ ಎಂದು ಹೆಸರು ಮಾಡಿರುವ ಮಹೀಂದ್ರಾ ಥಾರ್ (Mahindra Thar) ಡೀಲರ್‌ಶಿಪ್‌ನಲ್ಲಿ ಡೆಲಿವರಿ ಪಡೆಯುವ ಮುನ್ನವೇ ಅಪಘಾತಕ್ಕೊಳಗಾಗಿ ಸಂಪೂರ್ಣ ಹಾನಿಯಾಗಿದೆ. ದೆಹಲಿಯಲ್ಲಿ ಈ ಘಟನೆ ನಡೆದಿದ್ದು, ದಂಪತಿಯೊಂದು ಹೊಚ್ಚ ಹೊಸ ಮಹೀಂದ್ರಾ ಥಾರ್ ಡೆಲಿವರಿ ಪಡೆಯುವಾಗ ಅನಿರೀಕ್ಷಿತವಾಗಿ ಡೀಲರ್‌ಶಿಪ್‌ನ ಮೊದಲ ಮಹಡಿಯಿಂದ ಉರುಳಿ ಕೆಳಗೆ ಬಿದ್ದಿದೆ.