5-ಸೀಟರ್, 6 ಲಕ್ಷ.. 20.38 ಕಿ.ಮೀ ಮೈಲೇಜ್.. ನೂತನ ರೆನಾಲ್ಟ್ ಕೈಗರ್..

ನೂತನ 2025ರ ರೆನಾಲ್ಟ್ ಕೈಗರ್ ಫೇಸ್‌ಲಿಫ್ಟ್ (Renault Kiger Facelift) ಕಾರನ್ನು ಭಾನುವಾರ ಬಿಡುಗಡೆಗೊಳಿಸಲಾಯಿತು. ಇದೊಂದು ಎಸ್‌ಯುವಿಯಾಗಿದ್ದು, ರೂ.6.29 ಲಕ್ಷದಿಂದ ರೂ.11.29 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. ಪೆಟ್ರೋಲ್ ಎಂಜಿನ್ ಪಡೆದಿದ್ದು, 19.83 ರಿಂದ 20.38 ಕಿ.ಮೀವರೆಗೆ ಮೈಲೇಜ್ ನೀಡುತ್ತದೆ. 5 ಆಸನಗಳನ್ನು ಹೊಂದಿದೆ. 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಫುಲ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ರೇರ್ ಎಸಿ ವೆಂಟ್‌ಗಳು ಮತ್ತು ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಯಾಣಿಕರ ರಕ್ಷಣೆಗಾಗಿ 6-ಏರ್‌ಬ್ಯಾಗ್‌ಗಳನ್ನು ತನ್ನದಾಗಿಸಿಕೊಂಡಿದೆ. ನೀವು ಇದೇ 'ಕೈಗರ್'ಗೆ ಪರ್ಯಾಯವಾಗಿ ಈ 3 ಕಾರುಗಳನ್ನು ಖರೀದಿ ಮಾಡಬಹುದು. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

6-ಸೀಟರ್.. 26 ಕಿ.ಮೀ ಮೈಲೇಜ್, 11.93 ಲಕ್ಷ.. ಈ ಜನಪ್ರಿಯ..

ಮಾರುತಿ ಸುಜುಕಿ ಎಕ್ಸ್ಎಲ್6 (Maruti Suzuki XL6) ವಿಶ್ವಾಸಾರ್ಹ ಎಂಪಿವಿಯಾಗಿದೆ. ಇದನ್ನು ಪ್ರೀಮಿಯಂ ನೆಕ್ಸಾ ಡೀಲರ್‌ಶಿಪ್‌ ಮೂಲಕ ಮಾರಾಟಗೊಳಿಸಲಾಗುತ್ತದೆ. ಇದು ಆಕರ್ಷಕವಾದ ವಿನ್ಯಾಸ ಹಾಗೂ ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಆದರೂ ಈ ಕಾರಿನ ಮಾರಾಟ ಸಂಖ್ಯೆ ದಿನದಿಂದ ದಿನಕ್ಕೆ ಕುಸಿತವಾಗುತ್ತಿದೆ. ಅದು ಈ ಜುಲೈ ತಿಂಗಳಲ್ಲೂ ಮುಂದಿವರಿದಿದೆ. ಒಟ್ಟು 2,146 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಇದರೊಂದಿಗೆ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 26.58% ಇಳಿಕೆಯಾಗಿದೆ. 2024ರ ಇದೇ ಅವಧಿಯಲ್ಲಿ 2,923 ಯುನಿಟ್‌ಗಳನ್ನು ಮಾರಲಾಗಿತ್ತು.

ಇಂಡಿಯನ್ ಮೋಟಾರ್‌ಸೈಕಲ್ ಸ್ಕೌಟ್ ಲೈನ್ಅಪ್ ಬಿಡುಗಡೆ

ಅಮೆರಿಕಾ ಮೂಲದ ಮೋಟಾರ್‌ಸೈಕಲ್ ತಯಾರಕ ಕಂಪನಿಯಾದ 'ಇಂಡಿಯನ್', ತನ್ನ ಹೊಸ 2025 ಇಂಡಿಯನ್ ಸ್ಕೌಟ್ ಲೈನ್‌ಅಪ್‌ನ ಎಂಟು ವಿಶಿಷ್ಟ ಮಾಡಲ್‌ಗಳು, ಮೂರು ಬಹುಮುಖ ಟ್ರಿಮ್ ಹಂತಗಳು ಮತ್ತು 100 ಕ್ಕೂ ಹೆಚ್ಚು ಅಕ್ಸೆಸೊರಿಗಳ ಸಮಗ್ರ ಶ್ರೇಣಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಕೇವಲ ರೂ.12.99 ಲಕ್ಷದಿಂದ (ಎಕ್ಸ್ - ಶೋರೂಂ) ಪ್ರಾರಂಭವಾಗುವ ಹೊಸ ಸ್ಕೌಟ್ ಲೈನ್‌ಅಪ್‌ನೊಂದಿಗೆ, ಕೊನೆಗೂ ಭಾರತಕ್ಕೆ ಎಂಟ್ರಿ ಕೊಟ್ಟಿದೆ. ಪ್ರೀಮಿಯಂ ಅಮೇರಿಕನ್ ಎಂಜಿನಿಯರಿಂಗ್ ಮತ್ತು ಸ್ಪಷ್ಟ ವಿನ್ಯಾಸವನ್ನು ಭಾರತೀಯ ಸವಾರರಿಗೆ ಪರಿಚಯಿಸುತ್ತಿರುವುದಾಗಿ ಕಂಪನಿ ಹೇಳಿದೆ.

Renault: 5-ಸೀಟರ್.. ಲಕ್ಷುರಿ ಫೀಚರ್‌ನ ಹೊಸ ರೆನಾಲ್ಟ್ ಡಸ್ಟರ್..

ಫ್ರಾನ್ಸ್ ಮೂಲಕ ರೆನಾಲ್ಟ್ (Renault) ವಿಶ್ವಾಸಾರ್ಹ ವಾಹನ ತಯಾರಕ ಕಂಪನಿಯಾಗಿ ಹೊರಹೊಮ್ಮಿದೆ. ಭಾನುವಾರ ನಡೆದ ಅದ್ದೂರಿ ಸಮಾರಂಭದಲ್ಲಿ ಹೊಚ್ಚ ಹೊಸ 2025ರ 'ಕೈಗರ್ ಫೇಸ್‌ಲಿಫ್ಟ್' ಎಸ್‌ಯುವಿಯನ್ನು ಮಾರಾಟಕ್ಕೆ ತರಲಾಗಿದೆ. ಇದೇ ಕಾರ್ಯಕ್ರಮದಲ್ಲಿ ಮುಂಬರುವ ತಿಂಗಳಲ್ಲಿ ದೇಶೀಯವಾಗಿ ಹೊಚ್ಚ ಹೊಸ 'ಡಸ್ಟರ್' ಕಾರನ್ನು ಬಿಡುಗಡೆ ಮಾಡುವುದಾಗಿ ಕಂಪನಿಯೇ ಘೋಷಣೆ ಮಾಡಿದೆ. ಬನ್ನಿ, ನೂತನ ಎಸ್‌ಯುವಿಯ ಬೆಲೆ ಎಷ್ಟಿರಲಿದೆ.. ವಿಶೇಷತೆಗಳೇನು ಎಂಬುದರ ಕುರಿತಂತೆ ಎಲ್ಲ ವಿವರಗಳನ್ನು ತಿಳಿಯೋಣ.
Advertisement

ಬಿಡುಗಡೆಗೆ ಸಜ್ಜಾಗಿವೆ 5 ಹೊಸ ಎಸ್‌ಯುವಿಗಳು: ಮಾರುತಿ, ಟಾಟಾ, ಹ್ಯುಂಡೈ

2025 ರಲ್ಲಿ ಹೊಸ ವಿನ್ಯಾಸ ಮತ್ತು ಹೊಸ ವೈಶಿಷ್ಟ್ಯಗಳೊಂದಿಗೆ ಐದು ಹೊಸ ಎಸ್‌ಯುವಿಗಳು ಬಿಡುಗಡೆಗೆ ಸಜ್ಜಾಗುತ್ತಿವೆ. ಈ ಎಸ್‌ಯುವಿಗಳು ಗಮನಾರ್ಹ ವಿನ್ಯಾಸ ನವೀಕರಣಗಳು, ಸುಧಾರಿತ ತಂತ್ರಜ್ಞಾನ ಮತ್ತು ಸೌಕರ್ಯದೊಂದಿಗೆ ಮುಂಬರುವ ತಿಂಗಳುಗಳಲ್ಲಿ ಬಿಡುಗಡೆಯಾಗಲಿವೆ. ಮಾರುತಿ ಸುಜುಕಿ, ಹ್ಯುಂಡೈ ಮತ್ತು ಟಾಟಾ ಮೋಟಾರ್ಸ್ ನಂತಹ ಕಂಪನಿಗಳು ತಮ್ಮ ಹೊಸ ಎಸ್‌ಯುವಿಗಳನ್ನು ಬಿಡುಗಡೆ ಮಾಡಲಿವೆ. ಇವುಗಳಲ್ಲಿ ಕೆಲವು ಸಂಪೂರ್ಣವಾಗಿ ಹೊಸ ಮಾದರಿಗಳಾಗಿದ್ದರೆ, ಕೆಲವು ಪ್ರಮುಖ ವಿನ್ಯಾಸ ಮತ್ತು ವೈಶಿಷ್ಟ್ಯ ನವೀಕರಣಗಳನ್ನು ಪಡೆಯಲಿವೆ. ಈ ಮುಂಬರುವ ಎಸ್‌ಯುವಿಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳೋಣ.

306 ಕಾರುಗಳೊಂದಿಗೆ ಏಷ್ಯಾದ ಅತಿದೊಡ್ಡ ರಂಗೋಲಿ ವಿನ್ಯಾಸ

ಕೇರಳದಲ್ಲಿ ಅದ್ದೂರಿಯಾಗಿ ಆಚರಿಸುವ ಓಣಂ ಹಬ್ಬದ ಸಂಭ್ರಮಾಚರಣೆಯಲ್ಲಿ, JSW MG ಮೋಟಾರ್ ಏಷ್ಯಾದ ಅತಿದೊಡ್ಡ 'ಕಾರ್ಕಳಂ' (ಕಾರುಗಳೊಂದಿಗೆ ವಿನ್ಯಾಸಗೊಳಿಸಿದ ಆಕೃತಿ) ಅನ್ನು ರಚಿಸುವ ಮೂಲಕ ಐತಿಹಾಸಿಕ ಮೈಲಿಗಲ್ಲು ಸಾಧಿಸಿದೆ. ಸಂಪೂರ್ಣವಾಗಿ ಕಾರುಗಳಿಂದ ತಯಾರಿಸಿದ ಅದ್ಭುತ ಪೂಕಳಂ (ಹೂವಿನ ರಂಗೋಲಿ) ಎಲ್ಲರ ಗಮನಸೆಳೆದಿದೆ. ಕೇರಳದ ಕೊಚ್ಚಿಯ ಗ್ರ್ಯಾಂಡ್ ಹಯಾತ್ ಬೋಲ್ಗಟ್ಟಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ 306 ಕಾರುಗಳು ಭಾಗವಹಿಸಿದ್ದವು. ಈ ಸಾಧನೆಯು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಅನ್ನು ಪ್ರವೇಶಿಸಿದೆ ಎಂದು ಎಂಜಿ ಮೋಟಾರ್ ತಿಳಿಸಿದೆ.

Honda Activa: ಹೋಂಡಾ ಆಕ್ಟಿವಾಗಾಗಿ ಶೋರೂಂ ಮುಂದೆ ಕ್ಯೂ ನಿಂತ..

ದೇಶೀಯ ದ್ವಿಚಕ್ರ ವಾಹನ (Two Wheeler) ಮಾರುಕಟ್ಟೆಯಲ್ಲಿ ಹೋಂಡಾ ಆಕ್ಟಿವಾ (Honda Activa) ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುವ ಸ್ಕೂಟರ್ ಆಗಿ ಹೊರಹೊಮ್ಮಿದೆ. ಇದು ಅಚ್ಚುಕಟ್ಟಾದ ವಿನ್ಯಾಸ ಹಾಗೂ ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಪೆಟ್ರೋಲ್ ಮತ್ತು ಎಲೆಕ್ಟ್ರಿಕ್ ಪವರ್‌ಟ್ರೇನ್‌ ಆಯ್ಕೆಯಲ್ಲಿಯೂ ಸಿಗುತ್ತದೆ. ಗ್ರಾಹಕರು ಕೂಡ ಇಷ್ಟಪಟ್ಟು ತೆಗೆದುಕೊಳ್ಳುತ್ತಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ 'ಆಕ್ಟಿವಾ' ಸ್ಕೂಟರ್ ಈ ಜುಲೈ ತಿಂಗಳು ಭಾರೀ ಸಂಖ್ಯೆಯಲ್ಲಿಯೂ ಮಾರಾಟಗೊಂಡಿದೆ. ಒಟ್ಟು 2,37,413 ಯುನಿಟ್‌ಗಳನ್ನು ವಿತರಣೆ ಮಾಡಲಾಗಿದೆ. ಇದರೊಂದಿಗೆ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 21.37% ಪ್ರಗತಿಯಾಗಿದೆ. 2024ರ ಇದೇ ಅವಧಿಯಲ್ಲಿ 1,95,604 ಯುನಿಟ್‌ಗಳನ್ನು ಮಾರಲಾಗಿತ್ತು.

TVS: 1 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಹೊಸ ಟಿವಿಎಸ್ ಇವಿ

ಟಿವಿಎಸ್ (TVS) ಮೋಟಾರ್‌ ಈಗಾಗಲೇ ತನ್ನ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್‌ನೊಂದಿಗೆ ಇವಿ ವಿಭಾಗದಲ್ಲಿ ಮುನ್ನುಗ್ಗುತ್ತಿದೆ. ಇದೀಗ ತನ್ನ ಎಲೆಕ್ಟ್ರಿಕ್ ವಿಭಾಗವನ್ನು ವಿಸ್ತರಿಸುವ ಸಲುವಾಗಿ ಇದೇ ತಿಂಗಳು 28 ರಂದು ಹೊಸ ಇವಿ ಸ್ಕೂಟರ್ ಬಿಡುಗಡೆ ಮಾಡಲು ಸಜ್ಜಾಗಿದೆ ಎಂದು HT Auto ವರದಿ ಮಾಡಿದೆ. ಅಧಿಕೃತ ಬಿಡುಗಡೆಯ ಸಮಯದಲ್ಲಿ ಸ್ಕೂಟರ್ ಕುರಿತ ಪೂರ್ಣ ವಿಶೇಷಣಗಳು ಮತ್ತು ನಿಜವಾದ ಸ್ಕೂಟರ್ ಚಿತ್ರಗಳನ್ನು ಬಹಿರಂಗಪಡಿಸಲಾಗುತ್ತದೆ. ಈ ಹೊಸ ಸ್ಕೂಟರ್ ಪ್ರವೇಶದೊಂದಿಗೆ TVS ತನ್ನ EV ವ್ಯಾಪ್ತಿಯನ್ನು ಮೊದಲ ಬಾರಿಗೆ ಖರೀದಿದಾರರು ಮತ್ತು ಗ್ರಾಮೀಣ ಮಾರುಕಟ್ಟೆಗಳಲ್ಲಿ ವಿಸ್ತರಿಸುವ ಗುರಿಯನ್ನು ಹೊಂದಿದೆ.
Advertisement

ನಿನ್ನೆ ಬಿಡುಗಡೆ.. 5-ಸೀಟರ್, 6.29 ಲಕ್ಷದ ಹೊಸ Renault Kiger..

ನಿನ್ನೆಯಷ್ಟೇ ಹೊಚ್ಚ ಹೊಸ 2025ರ ರೆನಾಲ್ಟ್ ಕೈಗರ್ ಫೇಸ್‌ಲಿಫ್ಟ್ (Renault Kiger Facelift) ಎಸ್‌ಯುವಿಯನ್ನು ಮಾರಾಟಕ್ಕೆ ತರಲಾಯಿತು. ಇದು ಆಕರ್ಷಕವಾದ ವಿನ್ಯಾಸ ಹಾಗೂ ಹತ್ತಾರು ನವೀನ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಉತ್ತಮವಾದ ಕಾರ್ಯಕ್ಷಮತೆಗೂ ಹೆಸರುವಾಸಿಯಾಗಿದೆ. ಕೈಗೆಟುಕುವ ಬೆಲೆಯಲ್ಲಿಯೂ ಲಭ್ಯವಿದೆ. ನಾವಿಲ್ಲಿ ಈ ನೂತನ ಎಸ್‌ಯುವಿಯ ದರ ಮತ್ತು ವಿಶೇಷತೆಗಳ ಕುರಿತಂತೆ ಪ್ರಮುಖಾಂಶಗಳು ಏನೆಂಬುದನ್ನು ತಿಳಿಸಿಕೊಟ್ಟಿದ್ದೇವೆ.

ಹೊಸ ಹೀರೋ ಗ್ಲಾಮರ್ X ನಲ್ಲಿ ಪ್ರೀಮಿಯಂ ಫೀಚರ್

ಕ್ರೂಸ್ ಕಂಟ್ರೋಲ್ ವೈಶಿಷ್ಟ್ಯದೊಂದಿಗೆ ಬರಲಿರುವ ಭಾರತದಲ್ಲಿ ಅತ್ಯಂತ ಕೈಗೆಟುಕುವ 125 ಸಿಸಿ ಮೋಟಾರ್‌ಸೈಕಲ್ ಆಗಿ ಹೀರೋ ಗ್ಲಾಮರ್ ಎಕ್ಸ್ ಇತ್ತೀಚೆಗೆ ಬಿಡುಗಡೆಯಾಗಿದೆ. ಇದರ ಡ್ರಮ್ ವೇರಿಯೆಂಟ್ ಬೆಲೆಯು ರೂ. 89,999 ಮತ್ತು ಡಿಸ್ಕ್ ವೇರಿಯೆಂಟ್ ಬೆಲೆಯು ರೂ. 99,999 (ಎರಡೂ ಎಕ್ಸ್-ಶೋರೂಂ) ಇದೆ. ಪ್ರಮುಖ ಹೈಲೈಟ್ ಎಂದರೆ ಟಾಪ್ - ಸ್ಪೆಕ್ ಡಿಸ್ಕ್ ಟ್ರಿಮ್‌ನಲ್ಲಿ ಕ್ರೂಸ್ ಕಂಟ್ರೋಲ್ ನೀಡಲಾಗಿದೆ, ಇದು ಸಾಮಾನ್ಯವಾಗಿ KTM 390 ಡ್ಯೂಕ್ ಮತ್ತು TVS ಅಪಾಚೆ RR 310 ನಂತಹ ಪ್ರೀಮಿಯಂ ಬೈಕ್‌ಗಳಲ್ಲಿ ಕಂಡುಬರುವ ಫೀಚರ್ ಆಗಿದೆ.

Mahindra: ಪುಲ್ ಡಿಮ್ಯಾಂಡ್.. ಮುಗಿಬಿದ್ದ ಜನ, ಕೇವಲ 135..

ಈಚೆಗೆ ಮಹೀಂದ್ರಾ ಬಿಇ 6 ಬ್ಯಾಟ್‌ಮ್ಯಾನ್ ಎಡಿಷನ್ (Mahindra BE 6 Batman Edition) ಕಾರನ್ನು ಮಾರಾಟಕ್ಕೆ ತರಲಾಗಿತ್ತು. ಇದೊಂದು ಎಲೆಕ್ಟ್ರಿಕ್ ಎಸ್‌ಯುವಿಯಾಗಿದೆ. ಸ್ಟ್ಯಾಂಡರ್ಡ್ 'ಬಿಇ 6'ಗೆ ಹೋಲಿಸಿದರೆ, ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆಗಳನ್ನು ಪಡೆದುಕೊಂಡಿದೆ. ಅದರ ಹೊರತಾಗಿ ವೈಶಿಷ್ಟ್ಯಗಳು ಹೆಚ್ಚು-ಕಮ್ಮಿ ಹಾಗೆಯೇ ಇವೆ. ಸ್ವಲ್ಪ ಮಟ್ಟಿಗೆ ದುಬಾರಿ ಬೆಲೆಯನ್ನು ಹೊಂದಿದೆ. ಸದ್ಯ, ಇದೇ ಕಾರಿನ ಬುಕ್ಕಿಂಗ್‌ನಲ್ಲಿ ಹೊಸದೊಂದು ಇತಿಹಾಸ ನಿರ್ಮಾಣವಾಗಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

Renault: 20 Km ಮೈಲೇಜ್.. 6.29 ಲಕ್ಷ.. ಹೊಸ ರೆನಾಲ್ಟ್ ಕೈಗರ್..

ಬಹುನಿರೀಕ್ಷಿತ 2025ರ ರೆನಾಲ್ಟ್ ಕೈಗರ್ ಫೇಸ್‌ಲಿಫ್ಟ್ (Renault Kiger Facelift) ಭಾನುವಾರ ಅದ್ದೂರಿಯಾಗಿ ಬಿಡುಗಡೆಗೊಂಡಿದೆ. ಇದೊಂದು ಎಸ್‌ಯುವಿಯಾಗಿದೆ. ಹಳೆಯ ಕೈಗರ್‌ಗೆ ಹೋಲಿಕೆ ಮಾಡಿದರೆ, ಹೊಸ ಕಾರು ವಿನ್ಯಾಸ ಹಾಗೂ ವೈಶಿಷ್ಟ್ಯಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ಪಡೆದುಕೊಂಡಿದೆ. ಅತ್ಯಂತ ಕಡಿಮೆ ಬೆಲೆಯಲ್ಲಿಯೂ ಮಾರಾಟಕ್ಕೆ ಬಂದಿದೆ. ಬನ್ನಿ, ನೂತನ ಎಸ್‌ಯುವಿಯ ದರ ಹಾಗೂ ವಿಶೇಷತೆಗಳ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.
Advertisement

ಇತ್ತೀಚೆಗೆ ಬಿಡುಗಡೆಯಾದ ಎರಡು ಯಮಹಾ ಹೈಬ್ರಿಡ್ ಸ್ಕೂಟರ್‌ಗಳ ವಿಶೇಷತೆ

2025 ರ ಯಮಹಾ ಫ್ಯಾಸಿನೊ 125 Fi ಹೈಬ್ರಿಡ್ ಮತ್ತು ರೇಝಡ್ಆರ್ 125 Fi ಹೈಬ್ರಿಡ್ ಅನ್ನು ಸ್ಮಾರ್ಟ್ ತಂತ್ರಜ್ಞಾನ ಮತ್ತು ಹೊಸ ರೋಮಾಂಚಕ ಬಣ್ಣ ಆಯ್ಕೆಗಳೊಂದಿಗೆ ಇತ್ತೀಚೆಗೆ ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಹೊಸ ಅಪ್‌ಡೇಟ್‌ಗಳ ಮೂಲಕ ಅವುಗಳ ಆಕರ್ಷಣೆ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸಲಾಗಿದೆ. ಒಟ್ಟಾರೆ ಸವಾರರಿಗೆ ಹೆಚ್ಚು ಸಂಪರ್ಕಿತ, ಸೊಗಸಾದ ಮತ್ತು ಕ್ರಿಯಾತ್ಮಕ ಸವಾರಿ ಅನುಭವವನ್ನು ನೀಡಲಿವೆ. ಎರಡೂ ಸ್ಕೂಟರ್‌ಗಳು ಈ ಬಾರಿ ಇನ್ನೂ ಯಾವೆಲ್ಲಾ ವಿಶೇಷತೆಗಳನ್ನು ಒಳಗೊಂಡಿವೆ ಎಂಬುದನ್ನು ಇಲ್ಲಿ ನೋಡೋಣ.

ಮಾರುತಿಯ ನಂ.1 SUV: ಜನಮನ ಗೆದ್ದಿದೆ... ಫುಲ್ ಡಿಮ್ಯಾಂಡ್

2025 ರಲ್ಲಿ ಮಾರುತಿ ಬ್ರೆಝಾ ತನ್ನ ವಿಭಾಗದಲ್ಲಿ ಹೆಚ್ಚು ಮಾರಾಟವಾದ ಕಾಂಪ್ಯಾಕ್ಟ್ SUV ಆಗಿ ಗುರ್ತಿಸಿಕೊಂಡಿದೆ. ವಿಶೇಷವಾಗಿ ಜುಲೈ 2025 ರಲ್ಲಿ 14,065 ಯುನಿಟ್‌ ಕಾರುಗಳ ಮಾರಾಟದೊಂದಿಗೆ ಪ್ರಾಬಲ್ಯ ಸಾಧಿಸಿದೆ. ಭಾರತದಲ್ಲಿ ಇದರ ದೀರ್ಘಕಾಲದ ಉಪಸ್ಥಿತಿ ಮತ್ತು ಟೈಯರ್ 2 ಹಾಗೂ ಟೈಯರ್ 3 ನಗರಗಳಲ್ಲಿ ಮಾರುತಿಯ ಬಲವಾದ ಬ್ರ್ಯಾಂಡ್ ಪರಿಚಿತತೆಯು ಈ ಜನಪ್ರಿಯತೆಗೆ ಗಮನಾರ್ಹವಾಗಿ ಕೊಡುಗೆ ನೀಡುತ್ತದೆ. ಖರೀದಿದಾರರು ಬ್ರೆಝಾವನ್ನು ಅದರ ವಿಶಾಲತೆ, ಪ್ರಾಯೋಗಿಕತೆ, ಹೆಚ್ಚಿನ ಮೈಲೇಜ್, ವಿಶ್ವಾಸಾರ್ಹತೆ ಮತ್ತು ಹೆಚ್ಚಿನ ಮರುಮಾರಾಟ ಮೌಲ್ಯ ಹೊಂದಿರುವುದರಿಂದ ಹೆಚ್ಚಾಗಿ ಖರೀದಿಸುತ್ತಿದ್ದಾರೆ.

1 ಲೀ.ಗೆ 90 ಕಿಮೀ ಮೈಲೇಜ್! ಫುಲ್ ಟ್ಯಾಂಕ್‌ನಲ್ಲಿ 700 ಕಿಮೀಗೂ..

ಬಜಾಜ್ ಪ್ಲಾಟಿನಾ (Bajaj Platina) ಜನಪ್ರಿಯ ಬೈಕ್ ಆಗಿದೆ. ದಿನಬಳಕೆಗೆ ಹೆಚ್ಚು ಸೂಕ್ತವಾಗಿದ್ದು, ಬೆಂಗಳೂರು ಸೇರಿದಂತೆ ಹೆಚ್ಚಿನ ಸಂಚಾರ ದಟ್ಟಣೆವಿರುವ ನಗರಗಳಲ್ಲಿ ಆಫೀಸ್‌ಗೆ ಹೋಗುವವರು ಬಳಕೆ ಮಾಡಬಹುದು. ನೀವು ಹೊಸದೊಂದು ಮೋಟಾರ್‌ಸೈಕಲ್‌ನ್ನು ಖರೀದಿಸಲು ಆಲೋಚಿಸಿದ್ದೀರಾ.. ಹಾಗಾದರೆ, 'ಪ್ಲಾಟಿನಾ'ವನ್ನು ತೆಗೆದುಕೊಳ್ಳಬಹುದು. ಇದು ಪ್ಲಾಟಿನಾ 100 ಹಾಗೂ ಪ್ಲಾಟಿನಾ 110 ಎಂಬ ರೂಪದಲ್ಲಿ ಸಿಗುತ್ತದೆ. ನಾವಿಲ್ಲಿ ಈ ಬೈಕ್‌ನ ಆನ್-ರೋಡ್ ಬೆಲೆ, ಇಎಂಐ, ಕಾರ್ಯಕ್ಷಮತೆ ಹಾಗೂ ವೈಶಿಷ್ಟ್ಯಗಳ ಕುರಿತಂತೆ ಒಂದಷ್ಟು ವಿವರಗಳನ್ನು ತಿಳಿಸಿಕೊಟ್ಟಿದ್ದೇವೆ.

ಗೌರಿ ಗಣೇಶ ಹಬ್ಬ: ನಿಮ್ಮ ಸುಂದರ ಕುಟುಂಬಕ್ಕೆ ಈ ಕಾರುಗಳು..

ಗೌರಿ ಗಣೇಶ ಹಬ್ಬಕ್ಕೆ ಅತ್ಯುತ್ತಮ ಕುಟುಂಬ ಕಾರುಗಳನ್ನು ಅನ್ವೇಷಿಸಿ. ನಿಮ್ಮ ಪ್ರಯಾಣಕ್ಕಾಗಿ ಟೊಯೋಟಾ ರುಮಿಯನ್ ಮತ್ತು ಮಾರುತಿ ಸುಜುಕಿ ಎರ್ಟಿಗಾದಂತಹ ಉನ್ನತ ಆಯ್ಕೆಗಳನ್ನು ಅನ್ವೇಷಿಸಿ.
Advertisement

ಡೆಲಿವರಿ ಪಡೆಯಲು ಕ್ಯೂ ನಿಂತ ಜನ: ಈ ಕಾರಿಗೆ ಫುಲ್ ಡಿಮ್ಯಾಂಡ್

ಪ್ರಮುಖ ವಾಹನ ತಯಾರಕ ಕಂಪನಿಯಾಗಿರುವ ಸ್ಕೋಡಾ, ಇತ್ತೀಚೆಗೆ ತನ್ನ ಕಾರುಗಳ ಉತ್ತಮ ಮಾರಾಟ ಕಾಣುತ್ತಿದೆ. ದೇಶದೆಲ್ಲೆಡೆ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದೆ. ಅದರಲ್ಲೂ ಇತ್ತೀಚೆಗೆ ಬಿಡುಗಡೆಯಾಗಿರುವ ಕೈಲಾಕ್ ಕಾರಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ಪಕ್ಕದ ರಾಜ್ಯದಲ್ಲಿ ಒಂದೇ ದಿನದಲ್ಲಿ ಬರೋಬ್ಬರಿ 200 ಕಾರುಗಳನ್ನು ಡೆಲಿವರಿ ನೀಡಲಾಗಿದೆ. ವರ್ಷದಿಂದ ವರ್ಷಕ್ಕೆ ರಾಕೆಟ್ ವೇಗದಲ್ಲಿ ಬೆಳವಣಿಗೆ ಕಾಣುತ್ತಿರುವ ಸ್ಕೋಡಾ ಕಂಪನಿಯು ಗ್ರಾಹಕರ ಆದ್ಯತೆಗಳನ್ನು ಕೊನೆಗೂ ಅರ್ಥಮಾಡಿಕೊಂಡಿದೆ. ಅಷ್ಟಕ್ಕೂ ಈ ಬೃಹತ್ ಡೆಲಿವರಿಗಳು ನಡೆದಿರುವುದು ಎಲ್ಲಿ? ಯಾವ ಕಾರಿಗೆ ಈ ಮಟ್ಟದ ಬೇಡಿಕೆ ವ್ಯಕ್ತವಾಗಿದೆ, ಬನ್ನಿ ನೋಡೋಣ.

5-ಸೀಟರ್.. ಈ ಬಂಡೆಯಂತ TATA ಕಾರಿಗೆ ಫುಲ್ ಡಿಮ್ಯಾಂಡ್..

ಟಾಟಾ ಹ್ಯಾರಿಯರ್ (Tata Harrier) ಜನಪ್ರಿಯ ಎಸ್‌ಯುವಿಯಾಗಿದೆ. ಇದು ತುಂಬಾ ಅಚ್ಚುಕಟ್ಟಾದ ವಿನ್ಯಾಸ ಮತ್ತು ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಈ ಜುಲೈನಲ್ಲೂ 'ಹ್ಯಾರಿಯರ್' ಕಾರು ಭಾರೀ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಒಟ್ಟು 2,216 ಯುನಿಟ್‌ಗಳನ್ನು ಗ್ರಾಹಕರಿಗೆ ವಿತರಣೆ ಮಾಡಲಾಗಿದೆ. ಇದರೊಂದಿಗೆ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 11% ಪ್ರಗತಿಯಾಗಿದೆ. 2024ರ ಇದೇ ಅವಧಿಯಲ್ಲಿ 1,991 ಯುನಿಟ್‌ಗಳನ್ನು ಮಾರಲಾಗಿತ್ತು.

Bajaj Chetak: ದೊಡ್ಡ ಸವಾಲನ್ನು ಮೆಟ್ಟಿನಿಂತ ದೇಶೀಯ ಬಜಾಜ್

ಚೀನಾ ಸರ್ಕಾರವು ಅಪರೂಪದ ಆಯಸ್ಕಾಂತ ಖನಿಜಗಳ (Rare-earth magnet) ನ್ನು ವಿಶ್ವದ ಹಲವು ದೇಶಗಳಿಗೆ ರಫ್ತು ಮಾಡುತ್ತದೆ. ಇದು ಆಮದು ಮಾಡಿಕೊಳ್ಳುವ ದೇಶಗಳಲ್ಲಿ ಭಾರತವು ಒಂದಾಗಿದೆ. ಇತ್ತೀಚೆಗೆ ಚೀನಾ ಸರ್ಕಾರ ಈ ಅಪರೂಪದ ಆಯಸ್ಕಾಂತ ಖನಿಜಗಳ ರಫ್ತಿಗೆ ನಿಷೇಧ ಹೇರಿತ್ತು, ಇದರಿಂದ ಭಾರತ ಮಾತ್ರವಲ್ಲದೆ ವಿಶ್ವ ಆಟೋಮೊಬೈಲ್ ಉದ್ಯಮಕ್ಕೆ ಆತಂಕ ಶುರುವಾಗಿತ್ತು. ಈ ಖನಿಜಗಳಿಲ್ಲದೆ ಎಲೆಕ್ಟ್ರಿಕ್ ವಾಹನಗಳ ತಯಾರಿಕೆ, ಎಲೆಕ್ಟ್ರಾನಿಕ್ ಉಪಕರಣಗಳ ಉತ್ಪಾದನೆ ಮತ್ತು ಇತರ ತಾಂತ್ರಿಕ ಕ್ಷೇತ್ರಗಳು ಕುಂಠಿತಗೊಳ್ಳಲಿವೆ ಎಂಬ ಭಯ ಶುರುವಾಗಿತ್ತು.

5-ಸೀಟರ್.. ಟಾಟಾ ಕರ್ವ್‌ಗೆ ಚೆಕ್‌ಮೇಟ್.. ಸಿಟ್ರನ್ ಬಸಾಲ್ಟ್..

ಫ್ರೆಂಚ್ ವಾಹನ ತಯಾರಕ ಕಂಪನಿ ಸಿಟ್ರನ್, ಭಾರತದ ಕಾರು ಮಾರುಕಟ್ಟೆಯಲ್ಲಿ ಗಟ್ಟಿಯಾಗಿ ಬೇರೂರಲು ಪ್ರಯತ್ನಿಸುತ್ತಿದೆ. ಅದರ ಭಾಗವಾಗಿ 'ಸಿಟ್ರನ್ 2.0 ಸ್ಟ್ರಾಟರ್ಜಿ' ಹೆಸರಿನ ಬ್ಯುಸಿನೆಸ್ ಮಾಡೆಲ್‌ನ್ನು ಘೋಷಣೆ ಮಾಡಿದ್ದು, ಹೊಸ ರೂಪದಲ್ಲಿ 'ಸಿ3ಎಕ್ಸ್' ಹ್ಯಾಚ್‌ಬ್ಯಾಕ್‌ನ್ನು ಬಿಡುಗಡೆಗೊಳಿಸಿದೆ. ಶೀಘ್ರದಲ್ಲೇ ನೂತನ 'ಬಸಾಲ್ಟ್ ಎಕ್ಸ್' ಎಸ್‌ಯುವಿಯನ್ನು ಮಾರಾಟಕ್ಕೆ ತರಲಿದೆ. ಅದಕ್ಕಾಗಿ ಕಂಪನಿಯು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದೆ. ಬನ್ನಿ, ಆ ಕುರಿತಂತೆ ಹೆಚ್ಚಿನ ವಿವರಗಳನ್ನು ತಿಳಿಯೋಣ.
Advertisement

ಭಾರತದಲ್ಲಿ ಹೊಸ ಟಿವಿಎಸ್ ಕಿಂಗ್ ಎಚ್‌ಡಿ ಇವಿ ಕಾರ್ಗೋ ಬಿಡುಗಡೆ

ಪ್ರಮುಖ ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ತಯಾರಕ ಕಂಪನಿಯಾಗಿರುವ ಟಿವಿಎಸ್ ಮೋಟಾರ್, ನಗರ ಮತ್ತು ಅರೆ-ನಗರಗಳ ಲಾಜಿಸ್ಟಿಕ್ಸ್ ವಿಭಾಗದಲ್ಲಿ ಟಿವಿಎಸ್ ಕಿಂಗ್ ಕಾರ್ಗೋ HD ಇವಿಯನ್ನು ಬಿಡುಗಡೆ ಮಾಡಿದೆ. ಟಿವಿಎಸ್ ಕಿಂಗ್ ಕಾರ್ಗೋ HD ಅತ್ಯಾಧುನಿಕ ತಂತ್ರಜ್ಞಾನ, ದೃಢವಾದ ವಿನ್ಯಾಸ, ಕಾರ್ಯಕ್ಷಮತೆ ಮತ್ತು ವಿಶ್ವಾಸಾರ್ಹತೆಯನ್ನು ಹೊಂದಿದೆ. ಹಾಗೆಯೇ ಕಂಪನಿಯು ಟಿವಿಎಸ್ ಕಿಂಗ್ ಕಾರ್ಗೋ HD ಸಿಎನ್‌ಜಿ ವೇರಿಯೆಂಟ್ ಅನ್ನು ಸಹ ಪ್ರದರ್ಶಿಸಿದೆ, ಇದನ್ನ 2025 ರ ಅಂತ್ಯದ ಮೊದಲು ಬಿಡುಗಡೆ ಮಾಡಲಾಗುವುದು ಎಂದು ಕಂಪನಿ ಹೇಳಿದೆ.

7-ಸೀಟರ್.. ಅತಿ ಶೀಘ್ರದಲ್ಲೇ ದೊಡ್ಡ ಗಾತ್ರದ ಹೊಸ ಮಾರುತಿ ಎರ್ಟಿಗಾ..

ಮಾರುತಿ ಸುಜುಕಿ ಎರ್ಟಿಗಾ (Maruti Suzuki Ertiga) ವಿಶ್ವಾಸಾರ್ಹ ಎಂಪಿವಿ ಎಂದೇ ಹೆಸರುವಾಸಿಯಾಗಿದೆ. ಇದು ಅಚ್ಚುಕಟ್ಟಾದ ವಿನ್ಯಾಸ ಹಾಗೂ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ಪ್ರತಿ ತಿಂಗಳು 15,000 ಯುನಿಟ್ 'ಎರ್ಟಿಗಾ' ಕಾರುಗಳು ಮಾರಾಟವಾಗುತ್ತಿವೆ. ಈ ಎಂಪಿವಿಯನ್ನು ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗಿಸಲು ಕಂಪನಿಯು ಮುಂದಾಗಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

Hyundai: ಹೊಸ ಆಯ್ಕೆಯಲ್ಲಿ ಬಂತು ಜನಪ್ರಿಯ ಹ್ಯುಂಡೈ ಎಕ್ಸ್‌ಟರ್‌..

ಹ್ಯುಂಡೈ ಎಕ್ಸ್‌ಟರ್‌ (Hyundai Exter) ವಿಶ್ವಾಸಾರ್ಹ ಮೈಕ್ರೋ ಎಸ್‌ಯುವಿಯಾಗಿದೆ. ಆದರೂ ಮಾರಾಟ ಸಂಖ್ಯೆ ದಿನದಿಂದ ದಿನಕ್ಕೆ ಕುಸಿತವಾಗುತ್ತಿದೆ. ಜುಲೈನಲ್ಲಿ ಕೇವಲ 5,075 ಯುನಿಟ್‌ಗಳನ್ನು ಮಾತ್ರ ಮಾರಾಟ ಮಾಡಲಾಗಿದೆ. ಇನೇನು ಗೌರಿ-ಗಣೇಶ, ದಸರಾ ಹಾಗೂ ದೀಪಾವಳಿ ಹಬ್ಬಗಳು ಬರಲಿದ್ದು, ಈ ಎಕ್ಸ್‌ಟರ್‌ನ್ನು ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗಿಸಲು ಕಂಪನಿಯು ಮುಂದಾಗಿದೆ. ಅದಕ್ಕಾಗಿ 'ಪ್ರೊ ಪ್ಯಾಕ್' ಹೆಸರಿನ ಲಿಮಿಟೆಡ್ ಎಡಿಷನ್ ಸ್ಟೈಲಿಂಗ್ ಪ್ಯಾಕೇಜ್‌ನ್ನು ಪರಿಚಯಿಸಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಮಹೀಂದ್ರಾದ ಹೊಸ ಕಾರಿಗೆ ಫುಲ್ ಡಿಮ್ಯಾಂಡ್.. ಪ್ರಿ-ಬುಕ್ಕಿಂಗ್ ಶುರು..

ಇದೇ ಆಗಸ್ಟ್ 14ರಂದು ನೂತನ ಮಹೀಂದ್ರಾ ಬಿಇ 6 ಬ್ಯಾಟ್‌ಮ್ಯಾನ್ ಎಡಿಷನ್ (Mahindra BE 6 Batman Edition) ಎಲೆಕ್ಟ್ರಿಕ್ ಎಸ್‌ಯುವಿಯನ್ನು ಅದ್ದೂರಿಯಾಗಿ ಮಾರಾಟಕ್ಕೆ ತರಲಾಗಿತು. ಈ ಕಾರು ಹೊರಭಾಗದಲ್ಲಿ ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಒಳಗೊಂಡಿದೆ. ಅದು ನೋಡುಗರ ಕಣ್ಣು ಕುಕ್ಕುವಂತಿದೆ. ಸದ್ಯ ಹೊಸ 'ಬ್ಯಾಟ್‌ಮ್ಯಾನ್ ಎಡಿಷನ್'ಗೆ ಗ್ರಾಹಕರಿಂದ ನೀರಿಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ. ನೂತನ 'ಮಹೀಂದ್ರಾ ಬಿಇ 6 ಬ್ಯಾಟ್‌ಮ್ಯಾನ್ ಎಡಿಷನ್'ಗೆ ಎಲ್ಲಿಲ್ಲದ ಬೇಡಿಕೆ ಬಂದಿದ್ದು, ಉತ್ಪಾದನೆ ಪ್ರಮಾಣವು 3 ಪಟ್ಟು ಹೆಚ್ಚಳಗೊಂಡಿದೆ. ಒಟ್ಟು 999 ಯುನಿಟ್‌ಗಳನ್ನು ತಯಾರಿಸಲು ಕಂಪನಿಯು ನಿರ್ಧರಿಸಿದೆ. ಈ ಮೊದಲು ಕೇವಲ 300 ಯುನಿಟ್‌ಗಳನ್ನು ಮಾತ್ರ ಉತ್ಪಾದನೆ ಮಾಡುವುದಾಗಿ ಘೋಷಣೆ ಮಾಡಿತ್ತು.
Advertisement

45 Km ಮೈಲೇಜ್.. ಸಿಟಿಗೆ Suzuki Access 125 ಪರ್ಫೆಕ್ಟ್ ಸ್ಕೂಟರ್..

ಬೆಂಗಳೂರಿನಂತಹ ಮಹಾನಗರಗಳಲ್ಲಿ ದಿನನಿತ್ಯ ಕೆಲಸಕ್ಕೆ ತೆರಳುವವರಿಗೆ ಸುಜುಕಿ ಆಕ್ಸೆಸ್ 125 (Suzuki Access 125) ಸ್ಕೂಟರ್ ಅತ್ಯುತ್ತಮವಾದ ಆಯ್ಕೆಯಾಗಲಿದೆ. ಇದನ್ನು 2006ರಲ್ಲಿ ಮೊದಲ ಬಾರಿಗೆ ಬಿಡುಗಡೆಗೊಳಿಸಲಾಯಿತು. ಈ ಸ್ಕೂಟರ್ 125 ಸಿಸಿ ವಿಭಾಗದಲ್ಲಿ ತನ್ನದೇಯಾದ ಛಾಪನ್ನು ಮೂಡಿಸಿದ್ದು, ಎಲ್ಲ ವರ್ಗದ ಗ್ರಾಹಕರಿಗೂ ಕೈಗೆಟುಕುವಂತಿದೆ. ನಾವಿಲ್ಲಿ ಈ ಸ್ಕೂಟರ್‌ನ ಬೆಲೆ, ವಿನ್ಯಾಸ, ಮೈಲೇಜ್ ಮತ್ತು ವೈಶಿಷ್ಟ್ಯಗಳ ಕುರಿತಂತೆ ಎಲ್ಲ ವಿವರಗಳನ್ನು ತಿಳಿಸಿಕೊಟ್ಟಿದ್ದೇವೆ.