ಅಪ್ಪ ರಾಘಣ್ಣನ ಜನ್ಮದಿನ.. ದುಬಾರಿ ಟೊಯೊಟಾ ಇನ್ನೋವಾ ಕಾರನ್ನು...

ನಟ, ನಿರ್ಮಾಪಕ ರಾಘವೇಂದ್ರ ರಾಜ್‌ಕುಮಾರ್ (Raghavendra Rajkumar), ಇದೇ ಆಗಸ್ಟ್ 15ಕ್ಕೆ 60ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ತಂದೆ ಡಾ.ರಾಜ್‌ಕುಮಾರ್, ಅಣ್ಣ ಶಿವರಾಜ್ ರಾಜ್‌ಕುಮಾರ್‌ರಂತೆಯೇ 'ಚಿರಂಜೀವಿ ಸುಧಾಕರ' ಸಿನಿಮಾ ಮೂಲಕ ಬೆಳ್ಳಿ ತೆರೆಗೂ ಪಾದಾರ್ಪಣೆ ಮಾಡಿದರು. ಅವರು ನಟಿಸಿದ್ದ ಗಜಪತಿ ಗರ್ವಭಂಗ ಹಾಗೂ ನಂಜುಂಡಿ ಕಲ್ಯಾಣ ಚಿತ್ರಗಳು ಕೂಡ ಪ್ರೇಕ್ಷಕರ ಮನ ಗೆದ್ದವು. ನಂತರದಲ್ಲಿ ತಮ್ಮದೇ ಸಿನಿಮಾ ನಿರ್ಮಾಣ ಸಂಸ್ಥೆಯಾದ 'ವಜ್ರೇಶ್ವರಿ ಕಂಬೈನ್ಸ್'ನ ಜವಾಬ್ದಾರಿಯನ್ನು ವಹಿಸಿಕೊಂಡರು.

ಕರ್ನಾಟಕ ಬೈಕ್ ಟ್ಯಾಕ್ಸಿ ಸವಾರರಿಗೆ ಅಭಯ ನೀಡಿದ ರಾಹುಲ್ ಗಾಂಧಿ

ಕರ್ನಾಟಕ ಬೈಕ್ ಟ್ಯಾಕ್ಸಿ ವೆಲ್ಫೇರ್ ಅಸೋಸಿಯೇಷನ್ ​​(ಬಿಟಿಎ) ನಿಯೋಗವೊಂದು ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರನ್ನು ಸಂಸತ್ತಿನ ಸಂಕೀರ್ಣದಲ್ಲಿ ಭೇಟಿಯಾಗಿ, ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ಸೇವೆಗಳನ್ನು ಸ್ಥಗಿತಗೊಳಿಸಿರುವುದರಿಂದ ಆರು ಲಕ್ಷಕ್ಕೂ ಹೆಚ್ಚು ಸವಾರರು ಆದಾಯವಿಲ್ಲದೆ ಸಂಕಷ್ಟಕ್ಕೆ ಸಿಲುಕಿರುವ ಬಗ್ಗೆ ನೋವನ್ನು ತೋಡಿಕೊಂಡಿದ್ದಾರೆ. ಇದಕ್ಕೆ ರಾಹುಲ್ ಗಾಂಧಿ ಪ್ರತಿಕ್ರಿಯಿಸಿ, ಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವರೊಂದಿಗೆ ಈಗಾಗಲೇ ಮಾತನಾಡಿದ್ದೇನೆ. ಕರ್ನಾಟಕದ ಕಾಂಗ್ರೆಸ್ ನಾಯಕತ್ವವು ಈ ಸಮಸ್ಯೆಯನ್ನು ತುರ್ತಾಗಿ ಪರಿಹರಿಸಲು ಸೂಚಿಸಿದ್ದೇನೆ ಎಂದು ಭರವಸೆ ನೀಡಿರುವುದಾಗಿ ನಿಯೋಗವು ಪ್ರಕಟಣೆಯಲ್ಲಿ ತಿಳಿಸಿದೆ.

17 ಕಿ.ಮೀ ಮೈಲೇಜ್, 12 ಲಕ್ಷ.. ಇದು ಹುಲಿಯಂತಹ ಕಾರಿದು..

ಮಾರುತಿ ಸುಜುಕಿ ಜಿಮ್ನಿ (Maruti Suzuki Jimny) ವಿಶ್ವಾಸಾರ್ಹ ಆಫ್-ರೋಡ್ ಎಸ್‌ಯುವಿಯಾಗಿದೆ. ಇದು ಅತ್ಯಾಕರ್ಷಕವಾದ ವಿನ್ಯಾಸ ಹಾಗೂ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಆದರೂ ಈ ಕಾರಿನ ಮಾರಾಟ ಸಂಖ್ಯೆ ದಿನದಿಂದ ದಿನಕ್ಕೆ ಕುಸಿತವಾಗುತ್ತಿದೆ. ಅದು ಜುಲೈನಲ್ಲೂ ಮುಂದುವರಿದಿದ್ದು, ಕೇವಲ 362 ಯುನಿಟ್‌ಗಳನ್ನು ಮಾತ್ರ ಮಾರಾಟಗೊಳಿಸಲಾಗಿದೆ. 2024ರ ಇದೇ ಅವಧಿಯಲ್ಲಿ 2429 ಯುನಿಟ್‌ಗಳನ್ನು ಮಾರಲಾಗಿತ್ತು. ಇದರೊಂದಿಗೆ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ -85.10% ಇಳಿಮುಖವಾಗಿದೆ.

ಈ ಜನಪ್ರಿಯ ರೆನಾಲ್ಟ್ ಕಾರಿಗೆ ಹೊಸ ರೂಪ.. ಭಾನುವಾರವೇ ಬಿಡುಗಡೆ..

ರೆನಾಲ್ಟ್ ಕಿಗರ್ (Renault Kiger) ವಿಶ್ವಾಸಾರ್ಹ ಎಸ್‌ಯುವಿ ಎಂದೇ ಹೆಸರುವಾಸಿಯಾಗಿದೆ. ಈ ಕಾರು ಮಾರಾಟಕ್ಕೆ ಬಂದು ನಾಲ್ಕು ವರ್ಷಗಳಿವೆ. ಸದ್ಯ ನವೀಕರಣಕ್ಕೆ ಒಳಪಟ್ಟ ಫೇಸ್‌ಲಿಫ್ಟ್ ಮಾಡೆಲ್‌ನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಲು ಕಂಪನಿಯು ಅಂತಿಮ ಹಂತದ ತಯಾರಿ ಮಾಡಿಕೊಳ್ಳುತ್ತಿದೆ. ಇದೇ ಭಾನುವಾರದಂದು (ಆಗಸ್ಟ್ 24) ಹೊಸ ರೂಪದ 'ಕಿಗರ್' ಎಸ್‌ಯುವಿಯನ್ನು ಪರಿಚಯಿಸಲಾಗುತ್ತದೆ. ಬನ್ನಿ, ನೂತನ ಕಾರಿನ ನಿರೀಕ್ಷಿತ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಒಂದಷ್ಟು ವಿವರಗಳನ್ನು ತಿಳಿಯೋಣ.
Advertisement

ಬೆಂಗಳೂರಿನಲ್ಲಿ ಒಂದೇ ದಿನ 8 ಕಾರುಗಳ ಡೆಲಿವರಿ: ಫುಲ್ ಡಿಮ್ಯಾಂಡ್!

ಬೆಂಗಳೂರು ಸೆಂಟ್ರಲ್‌ನಲ್ಲಿರುವ JSW MG ಮೋಟಾರ್‌ನ ಐಷಾರಾಮಿ ಶೋರೂಂ ಆಗಿರುವ ಎಂಜಿ ಸೆಲೆಕ್ಟ್ (MG SELECT) ನಲ್ಲಿ, ಹೊಸ ಎಲೆಕ್ಟ್ರಿಕ್ ಸ್ಪೋರ್ಟ್ ಕಾರಾಗಿರುವ 'ಎಂಜಿ ಸೈಬರ್‌ಸ್ಟರ್‌'ನ ಎಂಟು ಯೂನಿಟ್‌ಗಳನ್ನು ಗ್ರಾಹಕರಿಗೆ ಡೆಲಿವರಿ ನೀಡಿರುವುದಾಗಿ ಕಂಪನಿ ತಿಳಿಸಿದೆ. ಎಂಜಿ ಸೈಬರ್‌ಸ್ಟರ್‌ (MG Cyberster) ನ ಕೀಲಿಗಳನ್ನು JSW MG ಮೋಟಾರ್ ಇಂಡಿಯಾದ ನಿರ್ದೇಶಕ ಪಾರ್ಥ್ ಜಿಂದಾಲ್ ಹಸ್ತಾಂತರಿಸಿದರು. ಈ ಕಾರನ್ನು ಇತ್ತೀಚೆಗಷ್ಟೆ ಕಂಪನಿಯು ಭಾರತದಲ್ಲಿ ಬಿಡುಗಡೆ ಮಾಡಿತ್ತು, ದೇಶಾದ್ಯಂತ ಉತ್ತಮ ಬೇಡಿಕೆ ವ್ಯಕ್ತವಾಗಿದ್ದು, ಇದೀಗ ಒಟ್ಟಿಗೆ ಎಂಟು ಕಾರುಗಳನ್ನು ಬೆಂಗಳೂರಿನಲ್ಲಿ ಡೆಲಿವರಿ ನೀಡಿರುವುದು ವಿಶೇಷ.

ಬಡವನು ಬಂಡಿ: Honda QC1 ಇ-ಸ್ಕೂಟರ್‌ಗೆ ಫುಲ್ ಡಿಮ್ಯಾಂಡ್..

ಹೋಂಡಾ ಮೋಟಾರ್‌ಸೈಕಲ್ & ಸ್ಕೂಟರ್ ಇಂಡಿಯಾ, ಇದೇ ವರ್ಷಾರಂಭದಲ್ಲಿ ತೆರೆಕಂಡ ಭಾರತ್ ಮೊಬಿಲಿಟಿ ಎಕ್ಸ್‌ಪೋದಲ್ಲಿ ಕ್ಯೂಸಿ1 ಮತ್ತು ಆಕ್ಟಿವಾ ಇ ಹೆಸರಿನ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸಿತು. ಈ ಮೂಲಕ ದೇಶೀಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ (Electric Two Wheeler) ಮಾರುಕಟ್ಟೆಯನ್ನು ಅಧಿಕೃತವಾಗಿ ಪ್ರವೇಶಿಸಿತು. ಸದ್ಯ 'ಕ್ಯೂಸಿ1' ಸ್ಪರ್ಧಾತ್ಮಕ ಸಂಖ್ಯೆಯಲ್ಲಿ ಮಾರಾಟಗೊಳುತ್ತಿದೆ. ಆದರೆ, ಆಕ್ಟಿವಾ ಇ ಖರೀದಿ ಮಾಡಲು ಗ್ರಾಹಕರು ನಿರಾಸಕ್ತಿ ತೋರಿಸುತ್ತಿದ್ದಾರೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

Mahindra: ಈ ಫೀಚರ್ ಪಡೆದ ವಿಶ್ವದ ಮೊದಲ ಕಡಿಮೆ ಬೆಲೆಯ ಮಹೀಂದ್ರಾ ಕಾರು

ಭಾರತದ ಪ್ರಮುಖ SUV ತಯಾರಕರಾದ ಮಹೀಂದ್ರಾ (Mahindra) ಕಂಪನಿಯು, ತನ್ನ ಹೊಸ XUV 3XO ಎಸ್‌ಯುವಿಯ REVX A ವೇರಿಯೆಂಟ್ ಒಳಗೆ 'ಡಾಲ್ಬಿ ಅಟ್ಮೋಸ್' (Dolby Atmos) ಅನ್ನು ನೀಡುತ್ತಿರುವುದಾಗಿ ಘೋಷಿಸಿದೆ. ಈ ಮೂಲಕ ರೂ. 12 ಲಕ್ಷಕ್ಕಿಂತ ಕಡಿಮೆ (ಎಕ್ಸ್-ಶೋರೂಂ) ಬೆಲೆಯಲ್ಲಿ ಡಾಲ್ಬಿ ಅಟ್ಮೋಸ್ ಪಡೆದುಕೊಂಡಿರುವ ವಿಶ್ವದ ಮೊದಲ SUV ಎಂದು ಮಹೀಂದ್ರಾ ತಿಳಿಸಿದೆ. ಮೂಲತಃ ಸಿನಿಮಾಕ್ಕಾಗಿ ರಚಿಸಲಾದ ಡಾಲ್ಬಿ ಅಟ್ಮೋಸ್, ಈಗ ಕಾರಿನಲ್ಲೂ ಅದೇ ರೀತಿಯ ಮನರಂಜನೆಯನ್ನು ಒದಗಿಸಲಿದೆ.

28 Km ಮೈಲೇಜ್.. 7.89 ಲಕ್ಷ, 6 ಏರ್‌ಬ್ಯಾಗ್‌.. ವಿಶ್ವಾಸಾರ್ಹ..

ಟೊಯೊಟಾ ಅರ್ಬನ್ ಕ್ರೂಸರ್ ಟೈಸರ್ (Toyota Urban Cruiser Taisor) ಜನಪ್ರಿಯ ಎಸ್‌ಯುವಿಯಾಗಿ ಹೊರಹೊಮ್ಮಿದೆ. ಇತ್ತೀಚೆಗೆ ಈ ಕಾರಿನ ಎಲ್ಲ ರೂಪಾಂತರಗಳನ್ನು (ವೇರಿಯೆಂಟ್) 6-ಏರ್‌ಬ್ಯಾಗ್‌ನೊಂದಿಗೆ ನವೀಕರಿಸಿಯು ಮಾರಾಟಕ್ಕೆ ತರಲಾಗಿತ್ತು. ಸದ್ಯ ಹೊಸ ಟೈಸರ್ ರೂ.7.89 ಲಕ್ಷದಿಂದ ರೂ.13.19 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್, 1-ಲೀಟರ್ ಟರ್ಬೊ ಪೆಟ್ರೋಲ್ ಹಾಗೂ 1.2-ಲೀಟರ್ ಸಿಎನ್‌ಜಿ ಎಂಜಿನ್‌ನ್ನು ಪಡೆದಿದೆ. 19 ರಿಂದ 28 ಕಿ.ಮೀವರೆಗೆ ಮೈಲೇಜ್ ನೀಡುತ್ತದೆ. 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ವಿಶೇಷವಾಗಿ ಇದೇ ಟೊಯೊಟಾ ಟೈಸರ್‌ಗೆ ಈ 3 ಎಸ್‌ಯುವಿಗಳು ಪರ್ಯಾಯ ಆಯ್ಕೆಯಾಗಬಲ್ಲವು. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.
Advertisement

Hybrid Cars: 15 ಹೊಸ ಹೈಬ್ರಿಡ್ ಎಸ್‌ಯುವಿಗಳು ಬಿಡುಗಡೆಗೆ ಸಜ್ಜು

ಭಾರತದ ಆಟೋಮೋಟಿವ್ ಮಾರುಕಟ್ಟೆಯು ಪ್ರಮುಖ ಪರಿವರ್ತನೆಯ ಅಂಚಿನಲ್ಲಿದೆ, ಏಕೆಂದರೆ 2027 ರ ವೇಳೆಗೆ ಕನಿಷ್ಠ 15 ಹೊಸ ಹೈಬ್ರಿಡ್ ಕಾರುಗಳು (Hybrid Cars) ದೇಶದಲ್ಲಿ ಬಿಡುಗಡೆಯಾಗಲಿವೆ. ಹೈಬ್ರಿಡ್ ಕೊಡುಗೆಗಳಲ್ಲಿ ಈ ಮುಂಬರುವ ಏರಿಕೆಯು ಇಂಧನ ದಕ್ಷತೆ, ಪರಿಸರ ಕಾಳಜಿ ಮತ್ತು ಸ್ವಚ್ಛ ಚಲನಶೀಲತೆಯತ್ತ ಸರ್ಕಾರದ ಒತ್ತು ನೀಡುವ ಮೂಲಕ ಗ್ರಾಹಕರ ಬೇಡಿಕೆಯನ್ನು ಹೆಚ್ಚಿಸುತ್ತಿದೆ. ಮಾರುತಿ ಸುಜುಕಿ, ಮಹೀಂದ್ರಾ, ಹುಂಡೈ, ಕಿಯಾ, ಹೋಂಡಾ, ರೆನಾಲ್ಟ್, ನಿಸ್ಸಾನ್ ಸೇರಿದಂತೆ ಕಾರು ತಯಾರಕರು ವಿವಿಧ ವಿಭಾಗಗಳಲ್ಲಿ ಸ್ಟ್ರಾಂಗ್ ಮತ್ತು ಮೈಲ್ಡ್-ಹೈಬ್ರಿಡ್ SUV ಗಳನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದ್ದಾರೆ.

ಟಾಪ್ 5 ಹೊಸ ಕಾರುಗಳ ಬಿಡುಗಡೆ ಸನ್ನಿಹಿತ.. ಟಾಟಾ, ಮಾರುತಿ...

ವಿಶ್ವದಲ್ಲೇ ಭಾರತವು ಕೂಡ ಅತಿದೊಡ್ಡ ಕಾರು ಮಾರುಕಟ್ಟೆಯನ್ನು ಹೊಂದಿದೆ. ಈ 2025 ಹಲವು ವಾಹನ ತಯಾರಕ ಕಂಪನಿಗಳಿಗೆ ಮಹತ್ವದ ವರ್ಷವಾಗಿದ್ದು, ವಿವಿಧ ಹೊಸ ಕಾರುಗಳನ್ನು ಮಾರಾಟಕ್ಕೆ ತರಲು ಸಿದ್ಧವಾಗಿವೆ. ಆದರಲ್ಲೂ ಟಾಟಾ ಸಿಯೆರಾ, ಮಾರುತಿ ಸುಜುಕಿ ಇ ವಿಟಾರಾ, ರೆನಾಲ್ಟ್ ಕಿಗರ್ ಫೇಸ್‌ಲಿಫ್ಟ್, ವಿನ್‌ಫಾಸ್ಟ್‌ನ ವಿಎಫ್6 ಹಾಗೂ ವಿಎಫ್7 ಕಾರುಗಳು ಬಿಡುಗಡೆಯಾಗಲು ಹಣಿಯಾಗಿವೆ. ಇವುಗಳು ಒಂದಕ್ಕಿಂತ ಒಂದು ಅದ್ಬುತವಾಗಿವೆ. ನಾವಿಲ್ಲಿ ಈ ಕಾರುಗಳ ನಿರೀಕ್ಷಿತ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಒಂದಷ್ಟು ವಿವರಗಳನ್ನು ತಿಳಿಸಿಕೊಟ್ಟಿದ್ದೇವೆ.

ಭಾರತದಲ್ಲಿ ಅತಿಹೆಚ್ಚು ಮಾರಾಟವಾದ ಟಾಪ್-5 ಎಸ್‌ಯುವಿಗಳು: ಜುಲೈ 2025

ಭಾರತವು ವೇಗವಾಗಿ ಬೆಳೆಯುತ್ತಿದೆ, ಕಾರು ಖರೀದಿದಾರರ ಸಂಖ್ಯೆ ಕೂಡ ಅಷ್ಟೇ ವೇಗವಾಗಿ ಬೆಳೆಯುತ್ತಿದೆ. ಅದರಲ್ಲೂ ಎಸ್‌ಯುವಿಗಳನ್ನು ಹೆಚ್ಚಾಗಿ ಭಾರತದಲ್ಲಿ ಖರೀದಿಸಲಾಗುತ್ತಿದೆ. ಮಹೀಂದ್ರಾ ಕೇವಲ ಎಸ್‌ಯುವಿಗಳನ್ನು ಮಾರಾಟ ಮಾಡುವ ಬ್ರಾಂಡ್‌ ಆಗಿರುವುದರಿಂದ, ಜುಲೈ 2025 ರಲ್ಲಿ ಭಾರತದಲ್ಲಿ ಹೆಚ್ಚು ಮಾರಾಟವಾದ ಟಾಪ್ - 5 ಎಸ್‌ಯುವಿಗಳಲ್ಲಿ ಮಹೀಂದ್ರಾದ ಪ್ರಮುಖ ಎಸ್‌ಯುವಿ ಎರಡನೇ ಸ್ಥಾನ ಪಡೆದುಕೊಂಡಿದೆ. ಹಾಗಾದ್ರೆ ಜುಲೈ ತಿಂಗಳಿನಲ್ಲಿ ದೇಶದ ಟಾಪ್ - 5 ಎಸ್‌ಯುವಿಗಳು ಯಾವುವು ನೋಡೋಣ ಬನ್ನಿ.

33 ಕಿ.ಮೀ ಮೈಲೇಜ್.. 5-ಸೀಟರ್, 4 ಲಕ್ಷ.. ಆದರೂ ಈ ಮಾರುತಿ ಕಾರಿಗೆ..

ಮಾರುತಿ ಸುಜುಕಿ ಎಸ್-ಪ್ರೆಸ್ಸೊ (Maruti Suzuki S-Presso) ಪ್ರಮುಖ ಹ್ಯಾಚ್‌ಬ್ಯಾಕ್ ಆಗಿದೆ. ಇದು ನೋಡಲು ತುಂಬಾ ಚೆನ್ನಾಗಿದ್ದು, ಹಲವು ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಆದರೂ ಈ ಮಾರಾಟ ಸಂಖ್ಯೆಯು ಕುಸಿತವಾಗುತ್ತಿದೆ. ಅದು ಜುಲೈನಲ್ಲೂ ಮುಂದುವರಿದಿದೆ. ಒಟ್ಟು 912 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. 2024ರ ಇದೇ ಅವಧಿಯಲ್ಲಿ 2607 ಯುನಿಟ್‌ಗಳನ್ನು ಮಾರಲಾಗಿದೆ. ಇದರೊಂದಿಗೆ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ -65.02% ಇಳಿಕೆಯಾಗಿದೆ.
Advertisement

65 ಕಿ.ಮೀವರೆಗೆ ಮೈಲೇಜ್.. ರೂ.89,999, ನಿನ್ನೆ ಬಿಡುಗಡೆ.. ಹೊಸ Hero

ಹೊಚ್ಚ ಹೊಸ ಹೀರೋ ಗ್ಲಾಮರ್ ಎಕ್ಸ್ 125 (Hero Glamour X 125) ಬೈಕ್‌ನ್ನು ಮಂಗಳವಾರ ಅದ್ದೂರಿಯಾಗಿ ಬಿಡುಗಡೆಗೊಳಿಸಲಾಯಿತು. ಇದು ಡ್ರಮ್ ಹಾಗೂ ಡಿಸ್ಕ್ ಎಂಬ ಎರಡು ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿ ಸಿಗಲಿದ್ದು,ರೂ.89,999 ರಿಂದ ರೂ.99,999 (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 124.7 ಸಿಸಿ ಏರ್-ಕೂಲ್ಡ್, ಸಿಂಗಲ್-ಸಿಲಿಂಡರ್ ಪೆಟ್ರೋಲ್ ಎಂಜಿನ್ ಹಾಗೂ 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 65 ಕಿ.ಮೀವರೆಗೆ ಮೈಲೇಜ್ ನೀಡಬಲ್ಲದು ಎಂದು ಅಂದಾಜಿಸಲಾಗಿದೆ. ಕಲರ್ ಟಿಎಫ್‌ಟಿ ಕ್ಲಸ್ಟರ್ ಹಾಗೂ ಕ್ರೂಸ್ ಕಂಟ್ರೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಇದೇ 'ಗ್ಲಾಮರ್ ಎಕ್ಸ್ 125'ಗೆ ಈ ಮೂರು ಮೋಟಾರ್‌ಸೈಕಲ್‌ಗಳು ಪರ್ಯಾಯ ಆಯ್ಕೆಯಾಗಲಿವೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಪಲ್ಸರ್ ಬೈಕ್ ಖರೀದಿಸುವ ಪ್ಲಾನ್ ಇದೆಯೇ? ಹಾಗಾದ್ರೆ ಸರಿಯಾದ ಸಮಯ ಬಂದಿದ

ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಬಜಾಜ್, ತನ್ನ ಪ್ರಮುಖ ಪಲ್ಸರ್ ಶ್ರೇಣಿಯ ಮೇಲೆ ವಿಶೇಷ ಆಫರ್ ಘೊಷಿಸಿದೆ. ಇದನ್ನು ಬಜಾಜ್ ಪಲ್ಸರ್ ಹ್ಯಾಟ್ರಿಕ್ ಆಫರ್ ಎಂದು ಕಂಪನಿ ಪ್ರಕಟಿಸಿದೆ, ಇದರಡಿ ಹಬ್ಬದ ಸೀಸನ್‌ನಲ್ಲಿ ಖರೀದಿದಾರರಿಗೆ ಪಲ್ಸರ್ ಮೋಟಾರ್‌ಸೈಕಲ್ ಅನ್ನು ಹೆಚ್ಚು ಕೈಗೆಟುಕುವ ಮತ್ತು ಆಕರ್ಷಕವಾಗಿಸಲು ಗಮನಾರ್ಹ ಪ್ರಯೋಜನಗಳನ್ನು ಒದಗಿಸಲಾಗುತ್ತಿದೆ. ಈ ಹಬ್ಬದ ಸೀಸನ್‌ನಲ್ಲಿ ನೀವು ಪಲ್ಸರ್ ಬೈಕ್ ಖರೀದಿಸಲು ನೋಡುತ್ತಿದ್ದರೆ, ಈ ಆಫರ್ ನಿಮಗೆ ವೆಚ್ಚದ ಪ್ರಯೋಜನಗಳನ್ನು ಪಡೆಯಲು ಉತ್ತಮ ಅವಕಾಶವಾಗಿದೆ. ಏನೆಲ್ಲಾ ಆಫರ್‌ಗಳಿವೆ ಬನ್ನಿ ನೋಡೋಣ.

Tata: ಟಾಟಾ ಕಾರುಗಳು ಆಫ್ರಿಕಾದಲ್ಲಿ ಅನಾವರಣ

ಭಾರತದ ಅತಿದೊಡ್ಡ ವಾಹನ ತಯಾರಕ ಕಂಪನಿಗಳಲ್ಲಿ ಒಂದಾದ ಟಾಟಾ ಮೋಟಾರ್ಸ್ (Tata Motors), ದಕ್ಷಿಣ ಆಫ್ರಿಕಾ (South Africa)ದ ಪ್ರಯಾಣಿಕ ವಾಹನ ಮಾರುಕಟ್ಟೆಗೆ ಪ್ರವೇಶಿಸಿದೆ. ಇಲ್ಲಿನ ಜೋಹಾನ್ಸ್ ಬರ್ಗ್‌ನ ಸ್ಯಾಂಡ್‌ಟನ್‌ನಲ್ಲಿರುವ ದಿ ಗ್ಯಾಲೇರಿಯಾದಲ್ಲಿ ನಾಲ್ಕು ಹೊಸ ಮಾಡಲ್‌ಗಳನ್ನು ಅನಾವರಣಗೊಳಿಸಿದೆ. ಭಾರತದಲ್ಲಿ ಈಗಾಗಲೇ ತುಂಬಾ ಹೆಸರು ಮಾಡಿರುವ ಟಾಟಾ ಹ್ಯಾರಿಯರ್, ಕರ್ವ್ವ್, ಪಂಚ್ ಮತ್ತು ಟಿಯಾಗೊ ಮಾಡಲ್‌ಗಳನ್ನು ದಕ್ಷಿಣ ಆಫ್ರಿಕಾ ಗ್ರಾಹಕರ ವೈವಿಧ್ಯಮಯ ಅಗತ್ಯಗಳಿಗೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ ಎಂದು ಟಾಟಾ ಮೋಟಾರ್ಸ್ ಹೇಳಿದೆ.

24 Km ಮೈಲೇಜ್.. 8 ಲಕ್ಷ, 5-ಸೀಟರ್.. Tata Nexon ಕಾರನ್ನು..

ಟಾಟಾ ನೆಕ್ಸಾನ್ (Tata Nexon) ಪ್ರಮುಖ ಕಾಂಪ್ಯಾಕ್ಟ್ ಎಸ್‌ಯುವಿಯಾಗಿದೆ. ಇದು ತುಂಬಾ ಅಚ್ಚುಕಟ್ಟಾದ ವಿನ್ಯಾಸ ಹಾಗೂ ಹಲವು ಆಕರ್ಷಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಕನಿಷ್ಠ ರೂ.8 ಲಕ್ಷ ಹಾಗೂ ಗರಿಷ್ಠ ರೂ.15.60 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. ನೀವು ಹೊಚ್ಚ ಹೊಸ ಕಾರೊಂದನ್ನು ಮನೆಗೆ ತರಲು ಆಲೋಚಿಸಿದ್ದೀರಾ.. ಹಾಗಾದರೆ, 'ನೆಕ್ಸಾನ್' ಅತ್ಯುತ್ತಮವಾದ ಆಯ್ಕೆಯಾಗಲಿದೆ. ನಾವಿಲ್ಲಿ, ಇದೇ ಎಸ್‌ಯುವಿಯ ಆನ್-ರೋಡ್ ಬೆಲೆ (On-Road Price) ಹಾಗೂ ಇಎಂಐ (EMI) ಆಯ್ಕೆಯ ಕುರಿತಂತೆ ಒಂದಷ್ಟು ವಿವರಗಳನ್ನು ತಿಳಿಸಿಕೊಟ್ಟಿದ್ದೇವೆ.
Advertisement

ಅಮೆರಿಕಾದಲ್ಲಿ ಎಡಗೈ ಸ್ಟೀರಿಂಗ್... ಭಾರತದಲ್ಲಿ ಬಲಗೈ

ನಮ್ಮಲ್ಲಿ ಹಲವರಿಗೆ ಕಾರುಗಳಲ್ಲಿ ಸ್ಟೀರಿಂಗ್ ವೀಲ್ ಏಕೆ ಬಲಭಾಗದಲ್ಲಿರುತ್ತದೆ ಎಂಬುದು ತಿಳಿದಿಲ್ಲ, ಹಾಗೆಯೇ ಯುರೋಪ್ ಮತ್ತು ಉತ್ತರ ಅಮೆರಿಕಾದಂತಹ ದೇಶಗಳಲ್ಲಿ ಎಡಭಾಗದಲ್ಲಿ ಸ್ಟೀರಿಂಗ್ ವೀಲ್ ಇರುತ್ತದೆ. ಇದರ ಹಿಂದಿನ ಕಾರಣವೇನು? ಉತ್ತರಕ್ಕಾಗಿ ಆಯಾ ದೇಶಗಳ ಇತಿಹಾಸವನ್ನು ಒಮ್ಮೆ ನೋಡಬೇಕಾಗುತ್ತದೆ. ಮೊದಲಿಗೆ ನಮ್ಮ ಭಾರತದಲ್ಲಿನ ಕಾರುಗಳಲ್ಲಿ ಬಲಭಾಗದಲ್ಲಿ ಸ್ಟೀರಿಂಗ್ ವೀಲ್ ಇರಲು ಮುಖ್ಯ ಕಾರಣ ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆ. ಬ್ರಿಟೀಷರಿಂದ ಆರಂಭವಾದ ಅದೆಷ್ಟೋ ನಿಯಮಗಳನ್ನು ಇನ್ನೂ ಭಾರತದಲ್ಲಿ ಅನುಸರಿಸುತ್ತಿರುವುದು ನಿಜವಲ್ಲವೆ? ಅದರಲ್ಲಿ ಈ ಬಲಭಾಗದ ಸ್ಟೀರಿಂಗ್ ವೀಲ್ ಕೂಡ ಒಂದು.

ಪವರ್‌ಫುಲ್‌ ಲೀಡರ್ ಡಿಕೆಶಿಗೆ ಅದೃಷ್ಟ ತಂದ ಬೈಕ್‌ ಇದು!

ಬೆಂಗಳೂರಿನ ಹೆಬ್ಬಾಳ ಜಂಕ್ಷನ್‌ನಲ್ಲಿ ಸೋಮವಾರ (ಆಗಸ್ಟ್ 18) ನೂತನವಾಗಿ ನಿರ್ಮಿಸಿರುವ ಫ್ಲೈಓವರ್‌ನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DCM D.K Shivakumar) ಅವರು ಲೋಕಾರ್ಪಣೆಗೊಳಿಸಿದರು. ಹೊಸ ಫ್ಲೈಓವರ್‌ನಿಂದ ಕೆ.ಆರ್.ಪುರದಿಂದ ಮೇಖ್ರಿ ಸರ್ಕಲ್‍ಗೆ ಕಡೆಗೆ ತೆರಳುವ ವಾಹನ ಸವಾರರಿಗೆ ದೊಡ್ಡ ಮಟ್ಟದ ಅನುಕೂಲವಾಗಲಿದೆ. ಸಂಚಾರ ದಟ್ಟಣೆ ಸಂಖ್ಯೆಯಿಂದ ಮುಕ್ತಿ ದೊರೆಯಲಿದೆ.

ನಿನ್ನೆಯಷ್ಟೆ ಮೈಲೇಜ್ ಕಿಂಗ್ ಹೀರೋ ಗ್ಲಾಮರ್ ಎಕ್ಸ್ ಬಿಡುಗಡೆ:

ಹೀರೋ ಮೋಟೋಕಾರ್ಪ್ ನಿನ್ನೆಯಷ್ಟೆ ತನ್ನ ಹೊಚ್ಚ ಹೊಸ ಗ್ಲಾಮರ್ ಎಕ್ಸ್ 125 ಅನ್ನು ಬಿಡುಗಡೆ ಮಾಡಿದೆ. ಎರಡು ವೇರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಇದರ ಡ್ರಮ್ ವೇರಿಯೆಂಟ್ ರೂ. 89,999 (ಎಕ್ಸ್ - ಶೋರೂಂ) ಮತ್ತು ಡಿಸ್ಕ್ ವೇರಿಯೆಂಟ್ ರೂ.99,999 (ಎಕ್ಸ್ - ಶೋರೂಂ) ನಿಂದ ಬೆಲೆಗಳು ಪ್ರಾರಂಭವಾಗುತ್ತದೆ. ಬುಕಿಂಗ್‌ಗಳು ಈಗಾಗಲೇ ಪ್ರಾರಂಭವಾಗಿದ್ದು, ವಿತರಣೆಗಳು ಶೀಘ್ರದಲ್ಲೇ ಪ್ರಾರಂಭವಾಗುತ್ತವೆ ಎಂದು ಕಂಪನಿ ತಿಳಿಸಿದೆ. ಹೊಸ ಗ್ಲಾಮರ್ ಎಕ್ಸ್ 125 ಬಗ್ಗೆ ತಿಳಿಯಬೇಕಾದ ಪ್ರಮುಖ ವಿಷಯಗಳು ಇಲ್ಲಿವೆ.

ಐಟಿ ಅಲ್ಲ.. ಆಟೋಮೊಬೈಲ್‌ನಲ್ಲೂ ಕರ್ನಾಟಕ ಮುಂದು..

ಕರ್ನಾಟಕವು ಮಾಹಿತಿ ತಂತ್ರಜ್ಞಾನ (IT) ಉದ್ಯಮದಲ್ಲಿ ದೊಡ್ಡ ಹೆಸರನ್ನು ಮಾಡಿದೆ. ಬೆಂಗಳೂರು, ಮೈಸೂರು ಹಾಗೂ ಮಂಗಳೂರಿನಲ್ಲಿ ದೊಡ್ಡ-ದೊಡ್ಡ ಕಚೇರಿಗಳನ್ನು ಹೊಂದಿದ್ದು, ಲಕ್ಷಾಂತರ ಜನರು ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ರಾಜ್ಯವು ದೇಶದ ಆರ್ಥಿಕತೆಗೂ ಹೆಚ್ಚಿನ ಕೊಡುಗೆಯನ್ನು ನೀಡುತ್ತಿದೆ. ಅದೇ ರೀತಿಯಲ್ಲಿ ಆಟೋಮೊಬೈಲ್ (Automobile) ಕ್ಷೇತ್ರದಲ್ಲೂ ಮುಂದಿದೆ. ಟೊಯೊಟಾ, ವೋಲ್ವೋ, ಮರ್ಸಿಡಿಸ್ ಹಾಗೂ ಸ್ಕ್ಯಾನಿಯಾದಂತಹ ಕಂಪನಿಗಳಿಗೆ ನೆಲೆಯಾಗಿದೆ.
Advertisement

ಕೇವಲ ಈ ಒಂದು ಕಾರು ಕಂಪನಿಯ ಸ್ಥಿತಿ ಬದಲಿಸಿದೆ: ಫುಲ್ ಡಿಮ್ಯಾಂಡ್

JSW MG ಮೋಟಾರ್ ಇಂಡಿಯಾ ಬೆಂಗಳೂರು ನಗರದಲ್ಲಿ ಹೊಸ ಅತ್ಯಾಧುನಿಕ ಶೋರೂಂ ಅನ್ನು ಇತ್ತೀಚೆಗೆ ಉದ್ಘಾಟಿಸಿದೆ. 7 ಕಾರುಗಳ ವಿನ್ಯಾಸ ಪ್ರದೇಶದೊಂದಿಗೆ 7000 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಲಾದ ಈ ಹೊಸದಾಗಿ ಉದ್ಘಾಟನೆಗೊಂಡ ಶೋರೂಂ MG ಯ ಭವಿಷ್ಯದ ಮತ್ತು ತಾಂತ್ರಿಕವಾಗಿ ಮುಂದುವರಿದ ಕಾರುಗಳನ್ನು ಪ್ರದರ್ಶನದಲ್ಲಿ ಇರಿಸಲಿದೆ. JSW MG ಮೋಟಾರ್ ಇಂಡಿಯಾದ ನೆಟ್‌ವರ್ಕ್‌ನ ವಿಸ್ತರಣೆಯ ಮೂಲಕ ಅಸಾಧಾರಣ ಒಟ್ಟಾರೆ ಖರೀದಿ ಮತ್ತು ಮಾಲೀಕತ್ವದ ಅನುಭವವನ್ನು ನೀಡುವ ಅದರ ಕಾರ್ಯತಂತ್ರದ ದೃಷ್ಟಿಗೆ ಹೊಂದಿಕೆಯಾಗುತ್ತದೆ. ಈ ಉದ್ಘಾಟನೆಯೊಂದಿಗೆ, ಕಂಪನಿಯು ಈಗ ಕರ್ನಾಟಕ ರಾಜ್ಯದಲ್ಲಿ 14 ಟಚ್‌ಪಾಯಿಂಟ್‌ಗಳನ್ನು ಹೊಂದಿದೆ ಎಂದು ತಿಳಿಸಿದೆ.

ಈ ಗಜ ಗಾತ್ರದ ಮಾರುತಿ ಎಂಪಿವಿಗೆ ಮನಸೋತ ಗ್ರಾಹಕರು..

ಮಾರುತಿ ಸುಜುಕಿ ಇನ್ವಿಕ್ಟೋ (Maruti Suzuki Invicto) ದೊಡ್ಡ ಗಾತ್ರದ ಎಂಪಿವಿಯಾಗಿದೆ. ನೋಡಲು ತುಂಬಾ ಚೆನ್ನಾಗಿದ್ದು, ಹಲವು ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ. ದಿನದಿಂದ ದಿನಕ್ಕೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಅದಕ್ಕೆ ಸಾಕ್ಷಿ ಎಂಬಂತೆ ಈ ಜುಲೈ ತಿಂಗಳಲ್ಲೂ ಉತ್ತಮ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಒಟ್ಟು 351 ಯುನಿಟ್‌ಗಳನ್ನು ಗ್ರಾಹಕರಿಗೆ ವಿತರಣೆ ಮಾಡಲಾಗಿದೆ. 2024ರ ಇದೇ ಅವಧಿಯಲ್ಲಿ 251 ಯುನಿಟ್‌ಗಳನ್ನು ಮಾರಲಾಗಿತ್ತು. ಅದಕ್ಕೆ ಹೋಲಿಕೆ ಮಾಡಿದರೆ, ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 39.84% ಪ್ರಗತಿಯಾಗಿದೆ.

ಹೊಚ್ಚ ಹೊಸ ಹೀರೋ ಗ್ಲಾಮರ್ ಎಕ್ಸ್ 125 ಬಿಡುಗಡೆ: ಕಡಿಮೆ ಬೆಲೆ

ಹೀರೋ ಮೋಟೋಕಾರ್ಪ್ ಇಂದು ತನ್ನ ಹೊಚ್ಚ ಹೊಸ ಗ್ಲಾಮರ್ ಎಕ್ಸ್ 125 (Hero Xtream 125) ಅನ್ನು ಬಿಡುಗಡೆ ಮಾಡಿದೆ. ಹೊಸ ಗ್ಲಾಮರ್ ಎಕ್ಸ್ 125 ಹೊಸ ಯುಗದ ಮಹತ್ವಾಕಾಂಕ್ಷೆಯ ಸವಾರರಿಗಾಗಿ ದಿಟ್ಟ ಹೊಸ ವಿನ್ಯಾಸ, ಸುಧಾರಿತ ತಂತ್ರಜ್ಞಾನ, ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ಅಸಾಧಾರಣ ಸೌಕರ್ಯವನ್ನು ನೀಡುತ್ತದೆ. ಗ್ಲಾಮರ್ ಎಕ್ಸ್ 125 ಎರಡು ವೇರಿಯೆಂಟ್‌ಗಳಲ್ಲಿ ಲಭ್ಯವಿದ್ದು, ಡ್ರಮ್ ವೇರಿಯೆಂಟ್ ರೂ. 89 999 ಮತ್ತು ಡಿಸ್ಕ್ ರೂ. 99 999 (ಎಕ್ಸ್ - ಶೋರೂಂ) ನಲ್ಲಿ ದೇಶಾದ್ಯಂತ ಹೀರೋ ಮೋಟೋಕಾರ್ಪ್ ಡೀಲರ್‌ಶಿಪ್‌ಗಳಲ್ಲಿ ಖರಿದಿಗೆ ಲಭ್ಯವಿದೆ.

28 Km ಮೈಲೇಜ್.. 5-ಸೀಟರ್, 7.60 ಲಕ್ಷ.. ಎರಡೇ ವರ್ಷದಲ್ಲಿ..

ಮಾರುತಿ ಸುಜುಕಿ ಫ್ರಾಂಕ್ಸ್ (Maruti Suzuki Fronx) ಹೆಚ್ಚು ಜನಮನ್ನಣೆ ಗಳಿಸಿರುವ ಎಸ್‌ಯುವಿಯಾಗಿ ಹೊರಹೊಮ್ಮಿದೆ. ಇದು ತುಂಬಾ ಅಚ್ಚುಕಟ್ಟಾದ ವಿನ್ಯಾಸ ಹಾಗೂ ಹಲವು ಬಗೆಯ ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಅದಕ್ಕೆ ಸಾಕ್ಷಿ ಎಂಬಂತೆ ಈ 2025ರ ಜುಲೈ ತಿಂಗಳಲ್ಲೂ 'ಫ್ರಾಂಕ್ಸ್' ಭಾರೀ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಒಟ್ಟು 12,872 ಯುನಿಟ್‌ಗಳನ್ನು ಗ್ರಾಹಕರಿಗೆ ವಿತರಣೆ ಮಾಡಲಾಗಿದೆ. 2024ರ ಇದೇ ಅವಧಿಯಲ್ಲಿ 10,925 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಇದರೊಂದಿಗೆ ಮಾರಾಟ ಪ್ರಮಾಣವು ವರ್ಷದಿಂದ ಶೇಕಡ 17.82% ಪ್ರಗತಿಯಾಗಿದೆ.
Advertisement

Maruti: ಮಾರುತಿ ಕಾರಿಗೆ ಫುಲ್ ಡಿಮ್ಯಾಂಡ್: 28.51 ಕಿ.ಮೀ ಮೈಲೇಜ್

ಮಾರುತಿ ಸುಜುಕಿ ತನ್ನ ಅತ್ಯಾಕರ್ಷಕ ಫ್ರಾಂಕ್ಸ್ (Maruti Fronx) ಕಾರನ್ನು ಬಿಡುಗಡೆ ಮಾಡಿದಾಗಿನಿಂದ ತನ್ನ ವಿಭಾಗದಲ್ಲಿಯೇ ಅತ್ಯುತ್ತಮ ಮಾರಾಟ ಕಾಣುವ ಕಾರಾಗಿ ಗುರ್ತಿಸಿಕೊಂಡಿದೆ. ಪ್ರತಿ ತಿಂಗಳು ಏರಿಕೆ ಕಾಣುತ್ತಾ ಗ್ರಾಹಕರ ಆದ್ಯತೆಯ ಎಸ್‌ಯುವಿಯಾಗಿ ಮಿಂಚುತ್ತಿದೆ. ಕಳೆದ ತಿಂಗಳಿನಲ್ಲೂ ದಾಖಲೆಯ ಕಾರುಗಳು ಮಾರಾಟವಾಗಿದ್ದು, ಜುಲೈ 2025 ರಲ್ಲಿ ಫ್ರಾಂಕ್ಸ್ ಎರಡನೇ ಅತಿ ಹೆಚ್ಚು ಮಾರಾಟವಾದ ಕಾಂಪ್ಯಾಕ್ಟ್ SUV ಆಗಿ ಜನಪ್ರಿಯತೆ ಪಡೆದಿದೆ. ಜುಲೈನಲ್ಲಿನ ಈ ಏರಿಕೆಯು NEXA ಸಾಲಿನಲ್ಲಿ ಮತ್ತು ವಿಭಾಗದಲ್ಲಿನ ಎಲ್ಲಾ ಕಾಂಪ್ಯಾಕ್ಟ್ SUV ಗಳಲ್ಲಿ ಮಾರುತಿಯ ಅತ್ಯಂತ ಜನಪ್ರಿಯ ಆಯ್ಕೆಗಳಲ್ಲಿ ಒಂದಾಗಿ ಉಳಿದಿದೆ. ಜುಲೈ 2025 ರಲ್ಲಿ, ಮಾರುತಿ ಸುಜುಕಿ ಫ್ರಾಂಕ್ಸ್ ಭಾರತದಲ್ಲಿ 12,872 ಯುನಿಟ್‌ ಕಾರುಗಳನ್ನು ಮಾರಾಟ ಮಾಡಿದೆ. ಈ ಅಂಕಿ ಅಂಶವು ಜುಲೈ 2024 ರಲ್ಲಿ ಮಾರಾಟವಾದ 10,925 ಯುನಿಟ್‌ ಕಾರುಗಳಿಗೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ 18% ಮಾರಾಟ ಬೆಳವಣಿಗೆಯನ್ನು ಸೂಚಿಸುತ್ತದೆ. ಇನ್ನು ಜೂನ್ 2025 ರಲ್ಲಿ 9,815 ಯುನಿಟ್‌ ಕಾರುಗಳು ಮಾರಾಟವಾಗಿದ್ದು, ತಿಂಗಳಿನಿಂದ ತಿಂಗಳಿಗೆ ಶೇ31 ರಷ್ಟು ಹೆಚ್ಚಾಗಿದೆ.