ಹೊಸ Honda Activa 125 ಆನಿವರ್ಸರಿ ಎಡಿಷನ್ ಕುರಿತ ಪ್ರಮುಖಾಂಶಗಳಿವು..

ಹೋಂಡಾ ಮೋಟಾರ್‌ಸೈಕಲ್ & ಸ್ಕೂಟರ್ ಇಂಡಿಯಾದ 25ನೇ ವರ್ಷಾಚರಣೆಯನ್ನು ಆಚರಿಸಲಾಗುತ್ತಿದೆ. ಅದರ ನೆನಪಿಗಾಗಿ ಈಚೆಗೆ 'ಆಕ್ಟಿವಾ 125 ಆನಿವರ್ಸರಿ ಎಡಿಷನ್'ನ್ನು ಅದ್ದೂರಿಯಾಗಿ ಮಾರಾಟಕ್ಕೆ ತರಲಾಗಿದೆ. ಇದು ವಿನ್ಯಾಸದಲ್ಲಿ ಒಂದಷ್ಟು ಹೊಸತನಗಳಿಗೆ ಸಾಕ್ಷಿಯಾಗಿದೆ. ಅದರ ಹೊರತಾಗಿ ಕಾರ್ಯಕ್ಷಮತೆ ಹಾಗೂ ವೈಶಿಷ್ಟ್ಯದಲ್ಲಿ ಯಾವುದೇ ಪ್ರಮುಖವಾದ ಬದಲಾವಣೆಯನ್ನು ಪಡೆದುಕೊಂಡಿಲ್ಲ. ಬನ್ನಿ, ನೂತನ ಸ್ಕೂಟರ್‌ನ ಬೆಲೆ ಹಾಗೂ ವಿಶೇಷತೆಗಳ ಕುರಿತ ಪ್ರಮುಖಾಂಶಗಳು ತಿಳಿಯೋಣ.

Best 7-seater: ದೊಡ್ಡ ಕುಟುಂಬಕ್ಕೆ ಬೆಸ್ಟ್ 7-ಸೀಟರ್: 26.11 ಕಿ.ಮೀ

ಭಾರತದಲ್ಲಿ ಕೆಲವೇ ಜನಪ್ರಿಯ ಕಾರು ತಯಾರಕ ಕಂಪನಿಗಳಲ್ಲಿ ಒಂದಾಗಿರುವ ಟೊಯೋಟಾ ತನ್ನ ಪ್ರಮುಖ MPV ಯೊಂದನ್ನು ಮಾರುಕಟ್ಟೆಗೆ ಪರಿಚಯಿಸಿದಾಗಿನಿಂದ ಉತ್ತಮ ಬೇಡಿಕೆಯೊಂದಿಗೆ ಮುನ್ನುಗ್ಗುತ್ತಿದೆ. ಈ ಕಾರು ಜನಪ್ರಿಯ ಮಾರುತಿ ಎರ್ಟಿಗಾದ ರೀಬ್ಯಾಡ್ಜ್ ಆವೃತ್ತಿಯಾಗಿದ್ದರೂ ತನ್ನದೇ ಪ್ರತ್ಯೇಕ ಗುರುತನ್ನು ಪಡೆದುಕೊಂಡಿದೆ. ಅದೇ ಟೊಯೋಟಾ ರೂಮಿಯನ್ ಇದು ಸದ್ಯ ಕೈಗೆಟುಕುವ ಬೆಸ್ಟ್ 7 - ಸೀಟರ್ (Best 7-seater) ಎಂಪಿವಿಯಾಗಿದೆ. ಟೊಯೋಟಾ ಇನ್ನೋವಾವನ್ನು ಖರೀದಿಸಲು ಸಾಧ್ಯವಾಗದ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಮಿಡಿಲ್‌ಕ್ಲಾಸ್ ಫ್ಯಾಮಿಲಿ ಕಾರಾಗಿದೆ. ಈ ಎಂಪಿವಿಯ ಪ್ರಮುಖ ವಿಶೇಷತೆಗಳನ್ನು ಇಲ್ಲಿ ನೋಡೋಣ.

ಅಮ್ಮನಿಗಾಗಿ ಹೊಸ ಹ್ಯುಂಡೈ ಕಾರು ಖರೀದಿಸಿದ ಕಾಮಿಡಿ ಕಿಲಾಡಿ ಸ್ಟಾರ್..

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕಾಮಿಡಿ ಕಿಲಾಡಿಗಳು' ಪ್ರವೀಣ್‌ ಜೈನ್‌ (Praveen Jain) ಅವರಿಗೆ ದೊಡ್ಡ ಮಟ್ಟದ ಹೆಸರನ್ನು ತಂದುಕೊಟ್ಟಿತು. ಈ ಮೂಲಕ ಅವರು ಜನಪ್ರಿಯ ಹಾಸ್ಯ ನಟನಾಗಿ ಮನೆ ಮಾತಾದರು. 'ಭರ್ಜರಿ ಬ್ಯಾಚುಲರ್ಸ್‌ ಸೀಸನ್‌ 2' ರಿಯಾಲಿಟಿ ಶೋನಲ್ಲೂ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಪುಟ್ಟಕ್ಕನ ಮಕ್ಕಳು ಹಾಗೂ ಮನಸೆಲ್ಲ ನೀನೆ ಧಾರವಾಹಿಗಳಲ್ಲೂ ಅಭಿನಯಿಸುತ್ತಿದ್ದು, ತಮ್ಮ ವಿಭಿನ್ನವಾದ ನಟನೆಯೊಂದಿಗೆ ಎಲ್ಲರ ಗಮನವನ್ನು ಸೆಳೆಯುತ್ತಿದ್ದಾರೆ.

Toyota: ನಿನ್ನೆಯಷ್ಟೆ ಬಿಡುಗಡೆಯಾದ ಟೊಯೋಟಾ ಹೈಬ್ರಿಡ್ ವಿಶೇಷತೆಗಳು!

ಜನಪ್ರಿಯ ಕಾರು ತಯಾರಕ ಕಂಪನಿಯಾದ ಟೊಯೋಟಾ (Toyota), ಹೈಬ್ರಿಡ್ ಎಲೆಕ್ಟ್ರಿಕ್ ಸೆಡಾನ್ 'ಕ್ಯಾಮ್ರಿ-ಸ್ಪ್ರಿಂಟ್ ಎಡಿಷನ್' (Camry Sprint Edition) ಅನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಟೊಯೋಟಾ ಹೈಬ್ರಿಡ್ ಬ್ಯಾಟರಿಯ ಮೇಲೆ 8 ವರ್ಷ ಅಥವಾ 1,60,000 ಕಿಮೀ ವಾರಂಟಿಯನ್ನು (ಯಾವುದು ಮೊದಲು ಬರುತ್ತದೆಯೋ ಅದು) ನೀಡುತ್ತಿದೆ. ಕ್ಯಾಮ್ರಿ ಸ್ಪ್ರಿಂಟ್ ಆವೃತ್ತಿಯ ಬುಕಿಂಗ್‌ಗಳು ಈಗ ತೆರೆದಿವೆ. ಗ್ರಾಹಕರು ಟೊಯೋಟಾ ಅಧಿಕೃತ ವೆಬ್‌ಸೈಟ್‌ನಲ್ಲಿ ತಮ್ಮ ಬುಕಿಂಗ್‌ಗಳನ್ನು ಮಾಡಬಹುದು ಅಥವಾ ಹತ್ತಿರದ ಟೊಯೋಟಾ ಡೀಲರ್‌ಶಿಪ್‌ಗೆ ಭೇಟಿ ನೀಡಬಹುದು.
Advertisement

ಸದ್ದಿಲ್ಲದೇ ಹೊಸ ಕಂಪನಿ ವಿನ್‌ಫಾಸ್ಟ್‌ನಿಂದ 7-ಸೀಟರ್ ಕಾರಿನ..

ವಿಯೆಟ್ನಾಂ ದೇಶದ ವಿನ್‌ಫಾಸ್ಟ್ (VinFast), ಪ್ರಮುಖ ವಾಹನ ತಯಾರಕ ಕಂಪನಿ ಎಂದೇ ಹೆಸರುವಾಸಿಯಾಗಿದೆ. ಭಾರತ ಕಾರು ಮಾರುಕಟ್ಟೆಯನ್ನು ಪ್ರವೇಶಿಸಲು ಎಲ್ಲ ರೀತಿಯ ತಯಾರಿಯನ್ನು ಮಾಡಿಕೊಳ್ಳುತ್ತಿದೆ. ಎಲ್ಲವು ಸುಸೂತ್ರವಾಗಿ ನಡೆದರೆ, ಇದೇ ಸೆಪ್ಟೆಂಬರ್‌ನಲ್ಲಿ ನೂತನ ವಿಎಫ್6 ಹಾಗೂ ವಿಎಫ್7 ಎಲೆಕ್ಟ್ರಿಕ್ ಎಸ್‌ಯುವಿಗಳನ್ನು ಅದ್ದೂರಿಯಾಗಿಯೂ ಮಾರಾಟಕ್ಕೆ ತರಲಿದೆ. ಈ ಕಾರುಗಳಿಗಾಗಿ ಬುಕ್ಕಿಂಗ್‌ನ್ನು ಪ್ರಾರಂಭಿಸಿದೆ. ಆಸಕ್ತರು, ಅಧಿಕೃತ ವೆಬ್‌ಸೈಟ್‌ ಅಥವಾ ಸಮೀಪದ ಶೋರೂಂಗೆ ಭೇಟಿ ನೀಡಿ, ರೂ.21,000 ಮುಂಗಡ ಹಣ ಪಾವತಿಸಿ, ಕಾಯ್ದಿರಿಸಬಹುದಾಗಿದೆ.

ಬೆಂಗಳೂರಿನ ಸ್ಕೂಟರ್‌ಗೆ ವಿದೇಶಗಳಲ್ಲಿ ಸಖತ್ ಡಿಮ್ಯಾಂಡ್

ಭಾರತದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಹಾಗೂ ಬೆಂಗಳೂರು ಮೂಲದ ಎಥರ್ ಎನರ್ಜಿ, ಇತ್ತೀಚೆಗೆ ಶ್ರೀಲಂಕಾದಲ್ಲಿ 2025 ಎಥರ್ 450X (Ather 450X) ಅನ್ನು ಬಿಡುಗಡೆ ಮಾಡಿದೆ. ಇದು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ತನ್ನ ಅಸ್ತಿತ್ವವನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ಎಥರ್‌ನ ಅಂತರರಾಷ್ಟ್ರೀಯ ಬೆಳವಣಿಗೆಯ ಗುರಿಯಲ್ಲಿ ಒಂದು ಮೈಲಿಗಲ್ಲನ್ನು ಗುರುತಿಸುತ್ತದೆ. ಈ ಸ್ಕೂಟರ್‌ಗೆ ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಉತ್ತಮ ಬೇಡಿಕೆಯಿದ್ದು, ಸಾಕಷ್ಟು ಜನಪ್ರಿಯತೆ ಗಳಿಸಿದೆ. ಈಗ ಎಥರ್ ಶ್ರೀಲಂಕಾದಲ್ಲಿ ಒಂದೊಂದೆ ಮಾದರಿಗಳನ್ನು ಪರಿಚಯಿಸುತ್ತಿರುವುದಾಗಿ ತಿಳಿಸಿದೆ.

34 ಕಿ.ಮೀ ಮೈಲೇಜ್.. 6 ಏರ್‌ಬ್ಯಾಗ್‌ಗಳು, 4 ಲಕ್ಷ ಬೆಲೆ..

ಮಾರುತಿ ಸುಜುಕಿ ಆಲ್ಟೊ ಕೆ10 (Maruti Suzuki Alto K10) ಪುಟ್ಟ ಹ್ಯಾಚ್‌ಬ್ಯಾಕ್ ಆಗಿ ಹೊರಹೊಮ್ಮಿದೆ. ತುಂಬಾ ಅಚ್ಚುಕಟ್ಟಾದ ವಿನ್ಯಾಸ ಮತ್ತು ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಇದರೊಂದಿಗೆ ಶ್ರೀಸಾಮಾನ್ಯರ ಕಾರೆಂದು ಹೆಸರುವಾಸಿಯಾಗಿದೆ. ಆದರೂ ಈ ಕಾರಿನ ಮಾರಾಟ ಸಂಖ್ಯೆ ಕುಸಿತವಾಗುತ್ತಿದೆ. ಅದು ಜುಲೈನಲ್ಲೂ ಮುಂದುವರಿದಿದೆ. ಬರೋಬ್ಬರಿ 5,910 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. 2024ರ ಇದೇ ಅವಧಿಯಲ್ಲಿ 7,353 ಯುನಿಟ್‌ಗಳನ್ನು ಮಾರಲಾಗಿದೆ. ಈ ಮೂಲಕ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ -20% ಇಳಿಕೆಯಾಗಿದೆ.

ಭಾರತದ ಮೊದಲ AI-ಚಾಲಿತ ಸ್ಕೂಟರ್‌ಗಳ ಅನಾವರಣ: ವಿಶ್ವ ತಿರುಗಿ ನೋಡಲಿದೆ!

ಭಾರತದ ಉದಯೋನ್ಮುಖ ಎಲೆಕ್ಟ್ರಿಕ್ ವಾಹನ ತಯಾರಕರಲ್ಲಿ ಒಂದಾದ 'E3 Electric.Ai', ದೇಶದ ಮೊದಲ ಸ್ಮಾರ್ಟ್ ಎಲೆಕ್ಟ್ರಿಕ್ ಫ್ಯಾಮಿಲಿ ಸ್ಕೂಟರ್ ಮತ್ತು ಕ್ರಾಸ್ಒವರ್ ಡೆಲಿವರಿ ಮೊಪೆಡ್ ಎಂಬ ಎರಡು ವಾಹನಗಳನ್ನು ಪರಿಚಯಿಸಿದೆ. ಇವನ್ನು ಮುಂದುವರಿದ AI ತಂತ್ರಜ್ಞಾನದೊಂದಿಗೆ 14 - ಇಂಚಿನ ಚಕ್ರಗಳ ಮಾಡ್ಯುಲರ್ ಚಾಸಿಸ್ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದೆ. ಫ್ಯೂಚರಿಸ್ಟಿಕ್ ಡಿಸೈನ್‌ನೊಂದಿಗೆ ಸಾಟಿಯಿಲ್ಲದ ಸುರಕ್ಷತೆ, ಸ್ಮಾರ್ಟ್ ಫೀಚರ್‌ಗಳು ಮತ್ತು ಕೈಗೆಟುಕುವ ಬೆಲೆಯೊಂದಿಗೆ ಗ್ರಾಹಕರಿಗೆ ತಲುಪಿಸುವ ಗುರಿಯಿದೆ ಎಂದು ಕಂಪನಿ ಹೇಳಿದೆ.
Advertisement

Toyota: ಹೊಸ ಟೊಯೋಟಾ ಹೈಬ್ರಿಡ್ ಕಾರು ಬಿಡುಗಡೆ: 25.49 ಕಿ.ಮೀ ಮೈಲೇಜ್

ಜನಪ್ರಿಯ ಕಾರು ಕಂಪನಿಯಾದ ಟೊಯೋಟಾ (Toyota), ಇಂದು ತನ್ನ ಐಕಾನಿಕ್ ಐಷಾರಾಮಿ ಹೈಬ್ರಿಡ್ ಎಲೆಕ್ಟ್ರಿಕ್ ಸೆಡಾನ್ ಆಗಿರುವ 'ಕ್ಯಾಮ್ರಿ-ಸ್ಪ್ರಿಂಟ್ ಎಡಿಷನ್' (Camry Sprint Edition) ಅನ್ನು ಬಿಡುಗಡೆ ಮಾಡಿದೆ. ಗಮನಾರ್ಹವಾದ ಡ್ಯುಯಲ್-ಟೋನ್ ಬಾಹ್ಯ, ಮ್ಯಾಟ್ ಬ್ಲಾಕ್ ವರ್ಧನೆಗಳು ಮತ್ತು ವಿಶೇಷ ಸ್ಪೋರ್ಟ್ಸ್ ಕಿಟ್ ಅನ್ನು ಒಳಗೊಂಡಿರುವ ಈ ಹೊಸ ವೇರಿಯೆಂಟ್ ಸಂಸ್ಕರಿಸಿದ ಕಾರ್ಯಕ್ಷಮತೆಯೊಂದಿಗೆ ಬರುತ್ತದೆ. ಕ್ಯಾಮ್ರಿ ಸ್ಪ್ರಿಂಟ್ ಆವೃತ್ತಿಯು ಉತ್ಸಾಹಭರಿತ ಪರ್ಫಾಮೆನ್ಸ್ - ಸ್ಪೋರ್ಟಿ ವಿನ್ಯಾಸ, ಅತ್ಯಾಧುನಿಕ ಫೀಚರ್ಸ್ ಜೊತೆಗೆ ಮೋಜಿನ ಡ್ರೈವ್ ಅನುಭವ ಬಯಸುವವರಿಗಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಟೊಯೋಟಾ ಹೇಳಿದೆ.

ಬ್ರಾಂಡ್‌ಗೆ ಚಿನ್ನದ ಮೊಟ್ಟೆಯಾದ ಎಸ್‌ಯುವಿ: ಕಡಿಮೆ ಬೆಲೆ

ಪ್ರಮುಖ ಕಾರು ತಯಾರಕಾ ಕಂಪನಿಯಾಗಿರುವ ಸ್ಕೋಡಾ, ಭಾರತದಲ್ಲಿ ತನ್ನ ಮಾರಾಟದಲ್ಲಿ ಉತ್ತಮ ಬೆಳವಣಿಗೆ ಸಾಧಿಸಿದೆ. ಜುಲೈ 2025 ರಲ್ಲಿ 5,554 ಯುನಿಟ್ ಕಾರುಗಳನ್ನು ಮಾರಾಟ ಮಾಡುವ ಮೂಲಕ ಉತ್ತಮ ಬೆಳವಣಿಗೆಯನ್ನು ದಾಖಲಿಸಿದೆ. ಆದರೆ ಕಳೆದ ವರ್ಷ ಇದೇ ತಿಂಗಳಲ್ಲಿ ಕೇವಲ 2,103 ಯುನಿಟ್ ಕಾರುಗಳು ಮಾರಾಟವಾಗಿದ್ದವು. ಇದಲ್ಲದೆ, ಬ್ರಾಂಡ್ ಜೂನ್ 2025 ರಲ್ಲಿ 5,014 ಯುನಿಟ್‌ ಕಾರುಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದ್ದರಿಂದ ಶೇ11 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಇದರಲ್ಲಿ ಹೆಚ್ಚಿನ ಪಾಲು ಸ್ಕೋಡಾ ಕೈಲಾಕ್ ಧಕ್ಕಿಸಿಕೊಂಡಿರುವುದು ವಿಶೇಷ.

ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್ ಕೇವಲ ರೂ.3,000

ಆಗಸ್ಟ್ 15, 2025 ರಂದು, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ವಾಣಿಜ್ಯೇತರ ವಾಹನಗಳಿಗಾಗಿ ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್ (FASTag Annual Pass) ಅನ್ನು ಪ್ರಾರಂಭಿಸಿತು. ಪ್ರತಿಕ್ರಿಯೆ ಗಮನಾರ್ಹವಾಗಿತ್ತು, ಮೊದಲ ದಿನವೇ 1.4 ಲಕ್ಷಕ್ಕೂ ಹೆಚ್ಚು ಬಳಕೆದಾರರು ಪಾಸ್ ಅನ್ನು ಖರೀದಿಸಿ ಸಕ್ರಿಯಗೊಳಿಸಿದ್ದಾರೆ ಎಂದು ವರದಿಗಳು ಹೇಳಿವೆ. ಹೆಚ್ಚುವರಿಯಾಗಿ, ರಾಷ್ಟ್ರೀಯ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳಲ್ಲಿನ 1,150 ಟೋಲ್ ಪ್ಲಾಜಾಗಳಲ್ಲಿ 1.39 ಲಕ್ಷಕ್ಕೂ ಹೆಚ್ಚು ವಹಿವಾಟುಗಳನ್ನು ದಾಖಲಿಸಲಾಗಿದೆ.

ಹೊಸ ವೋಲ್ವೋ EX30 ರಿವ್ಯೂ: ಅತ್ಯಾಧುನಿಕ ತಂತ್ರಜ್ಞಾನ, ಆರಾಮ ಪ್ರಯಾಣ

Volvo EX30 launched in India at ₹59.90 Lakh. Discover its design, tech, and features. Is this compact electric SUV worth considering? | ವೋಲ್ವೋ EX30 ಭಾರತದಲ್ಲಿ ₹59.90 ಲಕ್ಷಕ್ಕೆ ಬಿಡುಗಡೆಯಾಗಿದೆ. ಇದರ ವಿನ್ಯಾಸ, ತಂತ್ರಜ್ಞಾನ ಮತ್ತು ವೈಶಿಷ್ಟ್ಯಗಳನ್ನು ಅನ್ವೇಷಿಸಿ. ಈ ಕಾಂಪ್ಯಾಕ್ಟ್ ಎಲೆಕ್ಟ್ರಿಕ್ SUV ಪರಿಗಣಿಸಲು ಯೋಗ್ಯವಾಗಿದೆಯೇ?
Advertisement

ಸ್ವರ್ಗಕ್ಕೆ ಕಿಚ್ಚು ಹಚ್ಚುವಂತಿದೆ.. ಮಹೀಂದ್ರಾ ಬಿಇ 6..

ಇತ್ತೀಚೆಗೆ ಹೊಚ್ಚ ಹೊಸ ಮಹೀಂದ್ರಾ ಬಿಇ 6 ಬ್ಯಾಟ್‌ಮ್ಯಾನ್ ಎಡಿಷನ್ (Mahindra BE 6 Batman Edition) ಎಲೆಕ್ಟ್ರಿಕ್ ಎಸ್‌ಯುವಿಯನ್ನು ಬಿಡುಗಡೆಗೊಳಿಸಲಾಗಿದೆ. ಇದು ತುಂಬಾ ಚೆನ್ನಾಗಿರುವ ವಿನ್ಯಾಸ ಹಾಗೂ ಹಲವು ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದಿದೆ. ಸ್ವಲ್ಪ ಮಟ್ಟಿಗೆ ದುಬಾರಿ ಬೆಲೆಯನ್ನು ಹೊಂದಿದೆ. ನಾವಿಲ್ಲಿ ಈ ನೂತನ 'ಬ್ಯಾಟ್‌ಮ್ಯಾನ್ ಎಡಿಷನ್' ಬೆಲೆ ಹಾಗೂ ವಿಶೇಷತೆಗಳ ಕುರಿತ ಪ್ರಮುಖಾಂಶಗಳು ಏನೆಂಬುದನ್ನು ತಿಳಿಸಿಕೊಟ್ಟಿದ್ದೇವೆ.

ಅತ್ಯಂತ ಧೀರ್ಘ ಶ್ರೇಣಿಯ ಹೊಸ ಸ್ಕೂಟರ್ ಬಿಡುಗಡೆ ಮಾಡಿದ ಕೊಮಾಕಿ

ಕೊಮಕಿ ಎಲೆಕ್ಟ್ರಿಕ್ ಕಂಪನಿಯು ಭಾರತದಲ್ಲಿ ಹೊಸ XR7 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ರೂ.89,999 ಎಕ್ಸ್-ಶೋರೂಂ ಬೆಲೆಯಲ್ಲಿ ಇತ್ತೀಚೆಗಷ್ಟೆ ಬಿಡುಗಡೆ ಮಾಡಿದೆ. XR7 ಭಾರತದಲ್ಲಿ ಅತಿ ಉದ್ದದ ಎಲೆಕ್ಟ್ರಿಕ್ ಸ್ಕೂಟರ್ ಶ್ರೇಣಿಯನ್ನು ಹೊಂದಿದೆ - ಒಂದೇ ಚಾರ್ಜ್‌ನಲ್ಲಿ 322 ಕಿ.ಮೀ ರೇಂಜ್ ನೀಡುತ್ತದೆ. ಇದು 3,000-ವ್ಯಾಟ್ BLDC ಹಬ್ ಮೋಟಾರ್‌ನಿಂದ ನಿಯಂತ್ರಿಸಲ್ಪಡುತ್ತದೆ. 3,000 ರಿಂದ 5,000 ಚಕ್ರಗಳ ಬ್ಯಾಟರಿ ಬಾಳಿಕೆ ಹಾಗೂ ಹೀಟ್ ಸುರಕ್ಷತೆಗೆ ಹೆಸರುವಾಸಿಯಾದ Lipo4 (LiFePO4) ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ.

5-ಸೀಟರ್, 30 ಕಿ.ಮೀ ಮೈಲೇಜ್.. ಸದ್ದಿಲ್ಲದೇ ಈ ಅಗ್ಗದ ಟೊಯೊಟಾ..

ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಫೆಬ್ರವರಿ 2024 ರಿಂದ ಜಾರಿಗೆ ಬರುವಂತೆ ಗ್ಲಾಂಜಾ ಹ್ಯಾಚ್‌ಬ್ಯಾಕ್ ಮಾದರಿಗಳಿಗೆ ಬೆಲೆ ಏರಿಕೆಯನ್ನು ಘೋಷಿಸಿದ್ದು, ವಿವಿಧ ಟ್ರಿಮ್‌ಗಳಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡಿದೆ.

ದೀಪಾವಳಿಗೆ ಮೋದಿ ಬಂಪರ್ ಆಫರ್: GST ಸುಧಾರಣೆ... ಬೆಲೆಗಳು ಭಾರೀ ಇಳಿಕೆ

ಭಾರತ ಸರ್ಕಾರ ಪ್ರಸ್ತಾಪಿಸಿರುವ ಮುಂದಿನ ಪೀಳಿಗೆಯ ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಸುಧಾರಣೆಯು ಪ್ರಯಾಣಿಕ ಕಾರುಗಳು ಮತ್ತು ದ್ವಿಚಕ್ರ ವಾಹನಗಳನ್ನು ಅಗ್ಗವಾಗಿಸಲು ಸಜ್ಜಾಗಿದೆ. ಪ್ರಸ್ತುತ, ಈ ವಾಹನಗಳಿಗೆ ಅಸ್ತಿತ್ವದಲ್ಲಿರುವ ಜಿಎಸ್‌ಟಿ ರಚನೆಯ ಅಡಿಯಲ್ಲಿ ಶೇ28 ತೆರಿಗೆ ವಿಧಿಸಲಾಗುತ್ತಿದೆ. ಹೊಸ ಪ್ರಸ್ತಾವನೆಯಲ್ಲಿ ಶೇ5 (ಮೆರಿಟ್) ಮತ್ತು ಶೇ18 (ಸ್ಟ್ಯಾಂಡರ್ಡ್) ಸ್ಲ್ಯಾಬ್‌ಗಳಾಗಿ ಸರಳಗೊಳಿಸುವ ಗುರಿಯನ್ನು ಹೊಂದಿದೆ. ಹೆಚ್ಚಿನ ಸಾಮೂಹಿಕ-ಮಾರುಕಟ್ಟೆ ಪ್ರಯಾಣಿಕ ಕಾರುಗಳು ಮತ್ತು ದ್ವಿಚಕ್ರ ವಾಹನಗಳು ಈ ಸುಧಾರಣೆಗಳ ಅಡಿಯಲ್ಲಿ ಶೇ28 ಸ್ಲ್ಯಾಬ್‌ನಿಂದ ಶೇ18 ಸ್ಲ್ಯಾಬ್‌ಗೆ ಇಳಿಯಲಿದೆ ಎಂದು ವರದಿಯಾಗಿದೆ.
Advertisement

7-ಸೀಟರ್: ಇನ್ನೋವಾಗೆ ಸವಾಲೆಸೆಯಬಲ್ಲ ಈ ಪ್ರಮುಖ Mahindra Suv..

ಮಹೀಂದ್ರಾ ಎಕ್ಸ್‌ಯುವಿ700 (Mahindra XUV700) ವಿಶ್ವಾಸಾರ್ಹ ಫ್ಯಾಮಿಲಿ ಎಸ್‍ಯುವಿಯಾಗಿದೆ. ಇದು ಅತ್ಯಾಧುನಿಕ ವಿನ್ಯಾಸ ಹಾಗೂ ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಗ್ರಾಹಕರು ಕೂಡ ನಾ ಮಂದು - ತಾ ಮುಂದು ಎಂಬಂತೆ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಅದರ ಹೊರತಾಗಿಯೂ ಈ ಜುಲೈನಲ್ಲಿ 'ಎಕ್ಸ್‌ಯುವಿ700' ಕಾರಿನ ಮಾರಾಟ ಒಂದಷ್ಟು ಮಟ್ಟಿಗೆ ಕುಸಿತವಾಗಿದೆ. ಒಟ್ಟು 7,054 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. 2024ರ ಇದೇ ಅವಧಿಯಲ್ಲಿ 7,769 ಯುನಿಟ್‌ಗಳನ್ನು ಮಾರಲಾಗಿದೆ. ಇದರೊಂದಿಗೆ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ -9% ಇಳಿಕೆಯಾಗಿದೆ.

5.25 ಲಕ್ಷ ಆರಂಭಿಕ ಬೆಲೆಯಲ್ಲಿ ಸ್ಪೋರ್ಟಿ ಹ್ಯಾಚ್‌ಬ್ಯಾಕ್ ಬಿಡುಗಡೆ

ಸಿಟ್ರನ್ ಕಳೆದ ಆಗಸ್ಟ್ 12 ರಂದು ಭಾರತದಲ್ಲಿ ಹೊಸ ಸಿಟ್ರನ್ C3X ಅನ್ನು ಬಿಡುಗಡೆ ಮಾಡಿದೆ. C3X ಜನಪ್ರಿಯ SUV-ಶೈಲಿಯ C3 ಹ್ಯಾಚ್‌ಬ್ಯಾಕ್‌ನ ಅಪ್‌ಡೇಟೆಡ್ ಮಾಡಲ್ ಆಗಿದ್ದು, ಸೌಕರ್ಯ, ಅನುಕೂಲತೆ ಮತ್ತು ಸುರಕ್ಷತೆಯನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾದ 15 ಹೊಸ ವೈಶಿಷ್ಟ್ಯಗಳನ್ನು ಹೊಂದಿದೆ. ಕೈಗೆಟುಕುವ ಸಬ್- 4 ಮೀಟರ್ SUV ಅನುಭವವನ್ನು ಒದಗಿಸುವ ಗುರಿಯನ್ನು ಹೊಂದಿರುವ ಈ ಕಾರು, ಬಲವಾದ ಮೌಲ್ಯದ ಪ್ರತಿಪಾದನೆಯನ್ನು ನೀಡುವ ಇತರ ಕಾಂಪ್ಯಾಕ್ಟ್ SUV ಗಳು ಮತ್ತು ಹ್ಯಾಚ್‌ಬ್ಯಾಕ್‌ಗಳೊಂದಿಗೆ ಸ್ಪರ್ಧಿಸುತ್ತದೆ. ಈ ಹ್ಯಾಚ್‌ಬ್ಯಾಕ್ ಪ್ರಮುಖಾಂಶಗಳನ್ನು ನೋಡೋಣ.

25 ಕಿ.ಮೀ ಮೈಲೇಜ್.. 5-ಸೀಟರ್.. 8 ಲಕ್ಷದ ಈ Maruti Suv..

ಮಾರುತಿ ಸುಜುಕಿ ಬ್ರೆಝಾ (Maruti Suzuki Brezza) ಪ್ರಮುಖ ಎಸ್‌ಯುವಿಯಾಗಿದೆ. ಹೆಚ್ಚು ಅತ್ಯಾಧುನಿಕ ವಿನ್ಯಾಸ ಹಾಗೂ ನವೀನ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಕನಿಷ್ಠ ರೂ.8.69 ಲಕ್ಷ ಹಾಗೂ ಗರಿಷ್ಠ ರೂ.14.14 ಲಕ್ಷ (ಎಕ್ಸ್-ಶೋರೂಂ) ಬೆಲೆಯಲ್ಲಿ ಗ್ರಾಹಕರ ಖರೀದಿಗೆ ಲಭ್ಯವಿದೆ. ನೀವು ಹೊಚ್ಚ ಹೊಸ ಕಾರೊಂದನ್ನು ಖರೀದಿ ಮಾಡಲು ಆಲೋಚಿಸಿದ್ದೀರಾ.. ಹಾಗಾದರೆ, 'ಬ್ರೆಝಾ' ಅತ್ಯುತ್ತಮವಾದ ಆಯ್ಕೆಯಾಗಲಿದೆ. ನಾವಿಲ್ಲಿ, ಇದೇ ಎಸ್‌ಯುವಿಯ ಆನ್-ರೋಡ್ ಬೆಲೆ (On-Road Price) ಮತ್ತು ಇಎಂಐ (EMI) ಆಯ್ಕೆಯ ಕುರಿತಂತೆ ಒಂದಷ್ಟು ವಿವರಗಳನ್ನು ತಿಳಿಸಿಕೊಟ್ಟಿದ್ದೇವೆ.

BYD: ಚೀನಾದ ಅಗ್ಗದ ಎಲೆಕ್ಟ್ರಿಕ್ ಕಾರು ಭಾರತದಲ್ಲಿ ಬಿಡುಗಡೆಯಾಗಲಿದೆ..

ಚೀನಾದ ಬಿವೈಡಿ (BYD) ಜನಪ್ರಿಯ ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿಯಾಗಿ ಹೊರಹೊಮ್ಮಿದೆ. ಜಾಗತಿಕವಾಗಿ ಎಲಾನ್ ಮಸ್ಕ್ ಒಡೆತನದ ಟೆಸ್ಲಾದೊಂದಿಗೆ ಸ್ಪರ್ದಿಸುತ್ತಿದೆ. ದೇಶೀಯವಾಗಿ ಇಮ್ಯಾಕ್ಸ್ 7, ಅಟ್ಟೊ 3, ಸೀಲ್ ಹಾಗೂ ಸೀಲಿಯನ್ ಕಾರುಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಗ್ರಾಹಕರು ಕೂಡ ಇಷ್ಟುಪಟ್ಟು ಖರೀದಿ ಮಾಡುತ್ತಿದ್ದಾರೆ. ಸದ್ಯ, ಇದೇ ಬಿವೈಡಿ ಕಂಪನಿಯು ಭಾರತದ ಮಾರುಕಟ್ಟೆಯಲ್ಲಿ ಹೊಚ್ಚ ಹೊಸ ಕಾರೊಂದನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಲು ತಯಾರಿ ಮಾಡಿಕೊಳ್ಳುತ್ತಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.
Advertisement

ನಿನ್ನೆಯಷ್ಟೆ ಅನಾವರಣ: ಅಂತರಾಷ್ಟ್ರೀಯ ಗುಣಮಟ್ಟದ ಹೊಸ ಎಸ್‌ಯುವಿ

2025 ರ ಸ್ವಾತಂತ್ರ್ಯ ದಿನಾಚರಣೆಯಂದು ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಹೀಂದ್ರಾ ವಿಷನ್ ಟಿ (Vision T) ಮತ್ತು ವಿಷನ್ ಎಸ್‌ಎಕ್ಸ್‌ಟಿ (Vision SXT) ಎಂಬ ಪರಿಕಲ್ಪನೆಯ ಮಾದರಿ (Concept Models)ಗಳನ್ನು ಅನಾವರಣಗೊಳಿಸಿದೆ. ಎರಡೂ ಮಾಡಲ್‌ಗಳು ಭಾರತೀಯ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುವ ಗುರಿಯಾಗಿಟ್ಟುಕೊಂಡು ಬಹುಮುಖ ಸಿ-ಸೆಗ್ಮೆಂಟ್ ಎಸ್‌ಯುವಿಗಳಾಗಿ ವಿನ್ಯಾಸಗೊಳಿಸಲಾಗಿದೆ. ಮಹೀಂದ್ರಾದ ಹೊಸದಾಗಿ ಬಹಿರಂಗಪಡಿಸಿದ NU.IQ ಮಾಡ್ಯುಲರ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿವೆ. ಈ ಎರಡು ಮಾಡಲ್‌ಗಳ ಕುರಿತ ಪ್ರಮುಖಾಂಶಗಳು ಇಲ್ಲಿವೆ.

Honda: 17 ಕಿ.ಮೀ ಮೈಲೇಜ್.. 5-ಸೀಟರ್, 11.91 ಲಕ್ಷ.. ಈ ಹೋಂಡಾ..

ಹೋಂಡಾ ಎಲಿವೇಟ್ (Honda Elevate) ಮಿಡ್-ಸೈಜ್ ಎಸ್‌ಯುವಿಯಾಗಿದೆ. ಇದು ತುಂಬಾ ಅಚ್ಚುಕಟ್ಟಾದ ವಿನ್ಯಾಸ ಹಾಗೂ ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಈ ಜುಲೈನಲ್ಲೂ 'ಎಲಿವೇಟ್' ಕಾರು ಭಾರೀ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಒಟ್ಟು 1,395 ಯುನಿಟ್‌ಗಳನ್ನು ವಿವರಣೆ ಮಾಡಲಾಗಿದೆ. ಈ ಮೂಲಕ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 4% ಪ್ರಗತಿಯಾಗಿದೆ. 2024ರ ಇದೇ ಅವಧಿಯಲ್ಲಿ 1,340 ಯುನಿಟ್‌ಗಳನ್ನು ಮಾರಲಾಗಿತ್ತು.

ಮೊಬೈಲ್‌ಗಿಂತ ಕಡಿಮೆ ಬೆಲೆ... ಕಾರನ್ನು ಮೀರಿಸುವ ಫೀಚರ್ಸ್

ಜೀಲಿಯೋ ಎಲೆಕ್ಟ್ರಿಕ್ ತನ್ನ ಹೊಸ ಎಲೆಕ್ಟ್ರಿಕ್ ಸ್ಕೂಟರ್ ನೈಟ್ ಪ್ಲಸ್ (Night+) ಅನ್ನು ಇತ್ತೀಚೆಗೆ ಬಿಡುಗಡೆ ಮಾಡಿದ್ದು, ಮಾರುಕಟ್ಟೆಯಲ್ಲಿ ಫುಲ್ ಡಿಮ್ಯಾಂಡ್ ಪಡೆದು ಮುನ್ನುಗ್ಗುತ್ತಿದೆ. ಇದರ ಬೆಲೆ ಕೇವಲ ರೂ. 59,990 (ಎಕ್ಸ್-ಶೋರೂಂ). ಇದು ಭಾರತದ ಅತ್ಯಂತ ಕೈಗೆಟುಕುವ ಹೈ-ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಒಂದಾಗಿದೆ, ಇದನ್ನು ಪ್ರಾಥಮಿಕವಾಗಿ ನಗರ ಮತ್ತು ಅರೆ - ನಗರ ಪ್ರದೇಶಗಳಲ್ಲಿ ದೈನಂದಿನ ಪ್ರಯಾಣಿಕರಿಗಾಗಿ ವಿನ್ಯಾಸಗೊಳಿಸಲಾಗಿದೆ. ಈ ಸ್ಕೂಟರ್ ಕುರಿತ ಪ್ರಮುಖ ಹೈಲೆಟ್‌ಗಳನ್ನು ಇಲ್ಲಿ ನೋಡೋಣ.

FASTag: 3,000.. ಬ್ರೋ.. ವಾರ್ಷಿಕ ಫಾಸ್ಟ್‌ಟ್ಯಾಗ್ ಪಾಸ್..

ಖಾಸಗಿ ವಾಹನ ಸವಾರರಿಗೆ ಅನುಕೂಲವಾಗಿಸುವ ನಿಟ್ಟಿನಲ್ಲಿ ಫಾಸ್ಟ್‌ಟ್ಯಾಗ್ (FASTag) ಆಧಾರಿತ ವಾರ್ಷಿಕ ಹೆದ್ದಾರಿ ಟೋಲ್ ಪಾಸ್ ವ್ಯವಸ್ಥೆಯನ್ನು ಶುಕ್ರವಾರದಿಂದ ಜಾರಿಗೊಳಿಸಲಾಗಿದೆ. ಇದು ಕಾರು, ಜೀಪ್‌ & ವ್ಯಾನ್‌ಗಳಂತಹ ವಾಣಿಜ್ಯೇತರ ಖಾಸಗಿ ವಾಹನಗಳಿಗೆ ಮಾತ್ರ ಅನ್ವಯಿಸಲಿದೆ. ಟೋಲ್ ಶುಲ್ಕ ಪಾವತಿಗೆ ಪದೇ ಪದೇ ಫಾಸ್ಟ್‌ಟ್ಯಾಗ್ ಕಾರ್ಡ್‌ಗಳನ್ನು ರೀಚಾರ್ಜ್ ಮಾಡುವುದನ್ನು ತಪ್ಪಿಸಲಿದೆ. ಈ ಮೂಲಕ ಸುಲಭ ಸಂಚಾರಕ್ಕೆ ನೆರವಾಗಲಿದೆ.
Advertisement

Kia: 7- ಸೀಟರ್‌ನ ಹೊಸ ಕಿಯಾ ಕಾರುಗಳಿಗಾಗಿ ಕ್ಯೂ ನಿಂತ ಗ್ರಾಹಕರು..

ಕಿಯಾ ಮೋಟಾರ್ಸ್ (Kia Motors) ಪ್ರಮುಖ ವಾಹನ ತಯಾರಕ ಕಂಪನಿಯಾಗಿ ಹೊರಹೊಮ್ಮಿದೆ. ಇದೇ ಮೇನಲ್ಲಿ ಸ್ಟ್ಯಾಂಡರ್ಡ್ ಕ್ಯಾರೆನ್ಸ್ ಕ್ಲಾವಿಸ್ ಹಾಗೂ ಜುಲೈ ತಿಂಗಳಲ್ಲಿ ಕ್ಯಾರೆನ್ಸ್ ಕ್ಲಾವಿಸ್ ಇವಿಯನ್ನು ಮಾರಾಟಕ್ಕೆ ತಂದಿತ್ತು. ಈ ಎಂಪಿವಿಗಳು ಅತ್ಯಾಧುನಿಕವಾದ ವಿನ್ಯಾಸ ಹಾಗೂ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿವೆ. ಸದ್ಯ, ಈ ಕಾರುಗಳ ಬುಕ್ಕಿಂಗ್‌ನಲ್ಲಿ ಹೊಸದೊಂದು ದಾಖಲೆ ಬರೆಯಲಾಗಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.