Mahindra: ನಂ.1 ಆಗಲು ಸಿದ್ದತೆ.. ಮಹೀಂದ್ರಾ ವಿಷನ್ ಎಕ್ಸ್..

ಮಹೀಂದ್ರಾ & ಮಹೀಂದ್ರಾ (Mahindra & Mahindra) ವಿಶ್ವಾಸಾರ್ಹ ವಾಹನ ತಯಾರಕ ಕಂಪನಿಯಾಗಿ ಹೊರಹೊಮ್ಮಿದೆ. ದೇಶೀಯ ಕಾರು ಮಾರುಕಟ್ಟೆಯಲ್ಲಿ ಹೊಸ ಕ್ರಾಂತಿ ಸೃಷ್ಟಿಸಲು ಮುಂದಾಗಿದೆ. ಈ ಮೂಲಕ ನಂ.1 ಕಂಪನಿಯಾಗಲು ಎಲ್ಲ ರೀತಿಯ ಸಿದ್ಧತೆಯನ್ನು ಮಾಡಿಕೊಳುತ್ತಿದೆ. ಮುಂಬೈನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ವಿಷನ್ ಎಕ್ಸ್, ವಿಷನ್ ಎಸ್, ವಿಷನ್ ಟಿ ಹಾಗೂ ವಿಷನ್ ಎಸ್‌ಎಕ್ಸ್‌ಟಿ ಹೆಸರಿನ 4 ಕಾನ್ಸೆಪ್ಟ್ ಕಾರುಗಳನ್ನು ಅನಾವರಣ ಮಾಡಿದೆ.

FASTag: ಫಾಸ್ಟ್ಯಾಗ್ ವಾರ್ಷಿಕ ಪಾಸ್ ಬಿಡುಗಡೆ: ಕೇವಲ ರೂ. 3,000

ಭಾರತದ 79 ನೇ ಸ್ವಾತಂತ್ರ್ಯ ದಿನಾಚರಣೆ (ಆಗಸ್ಟ್ 15, 2025) ಯಂದು ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್ (FASTag Annual Pass) ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ (MoRTH) ಈ ಹೊಸ ಉಪಕ್ರಮವು ಖಾಸಗಿ ವಾಹನ ಮಾಲೀಕರಿಗೆ ಟೋಲ್ ಪಾವತಿಗಳನ್ನು ಸರಳಗೊಳಿಸುವ ಗುರಿಯನ್ನು ಹೊಂದಿದೆ. ಆಗಾಗ್ಗೆ ಪ್ರಯಾಣಿಸುವವರಿಗೆ ಅನುಗುಣವಾಗಿ ಭಾರತದ ಹೆದ್ದಾರಿಗಳಲ್ಲಿ ಹೆಚ್ಚು ಪರಿಣಾಮಕಾರಿ ಮತ್ತು ನಗದುರಹಿತ ಟೋಲಿಂಗ್ ಕಡೆಗೆ ಈ ಬಿಡುಗಡೆಯು ಮಹತ್ವದ ಹೆಜ್ಜೆಯನ್ನು ಗುರುತಿಸುತ್ತದೆ.

ಇಂದು ಹೊಸ ಮಹೀಂದ್ರಾ ಕಾರುಗಳ ಅನಾವರಣ: ಅಂತರಾಷ್ಟ್ರೀಯ ಗುಣಮಟ್ಟ

ದೇಶದ ಪ್ರಮುಖ ಕಾರು ತಯಾರಕ ಕಂಪನಿಯಾಗಿರುವ ಮಹೀಂದ್ರಾ, ಪ್ರತಿ ಬಾರಿ ಆಗಸ್ಟ 15 ಸ್ವಾತಂತ್ರ ದಿನಾಚರಣೆಯಂದು ತನ್ನ ಹೊಸ ಮಾಡಲ್‌ಗಳನ್ನು ಪರಿಚಯಿಸುವ ಮೂಲಕ ಇವು ಬಿಡುಗಡೆಯಾಗುವ ವೇಳೆಗೆ ನಿರೀಕ್ಷೆಗಳನ್ನು ಹೆಚ್ಚಿಸುತ್ತಿದ್ದವು. ಅಂತೆಯೇ ಇಂದು (2025 ಆಗಸ್ಟ 15) ಮಹೀಂದ್ರಾ ವಿಷನ್ ಟಿ (Vision T) ಮತ್ತು ವಿಷನ್ ಎಸ್‌ಎಕ್ಸ್‌ಟಿ (Vision SXT) ಎಂಬ ಎರಡು ಹೊಸ ಪರಿಕಲ್ಪನೆ ಮಾದರಿಗಳ (concept models) ನ್ನು ಅನಾವರಣಗೊಳಸಿದೆ. ಈ ಕಾರುಗಳ ಬಗ್ಗೆ ಹೆಚ್ಚಿನ ವಿವರಗಳು ಇಲ್ಲಿವೆ.

ಯಾರೂ ನಂಬಲ್ಲ ಈ ಸತ್ಯ! 13,200 ಅಡಿ ಎತ್ತರದಲ್ಲಿರುವ ಶಿಪ್ಕಿ ಲಾ ಪಾಸ್

ಗ್ರೀವ್ಸ್ ಎಲೆಕ್ಟ್ರಿಕ್ ಮೊಬಿಲಿಟಿಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನವಾದ ಆಂಪಿಯರ್ ನೆಕ್ಸಸ್, 13,200 ಅಡಿ ಎತ್ತರದಲ್ಲಿರುವ 'ಶಿಪ್ಕಿ ಲಾ ಪಾಸ್' (Shipki La Pass) ಅನ್ನು ತಲುಪಿದ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, LOC ನಿಂದ ಕೇವಲ 200 ಮೀಟರ್ ದೂರದಲ್ಲಿದೆ. ಸೂರ್ಯ ಕಮಾಂಡ್ ನೇತೃತ್ವದಲ್ಲಿ ಟ್ರಿಪೀಕ್ ಬ್ರಿಗೇಡ್ ನೇತೃತ್ವದ ಭಾರತೀಯ ಸೇನೆಯ ಗಡಿ ಪ್ರವಾಸೋದ್ಯಮ ಉಪಕ್ರಮವನ್ನು ಉತ್ತೇಜಿಸಲು ಕೈಗೊಂಡ ಈ ಸ್ವಾತಂತ್ರ್ಯ ಸವಾರಿಯು, ಭಾರತದ EV ಕ್ರಾಂತಿಯು ನಗರ ರಸ್ತೆಗಳಿಂದ ದೇಶದ ಅತ್ಯಂತ ದೂರದ ಮತ್ತು ಸವಾಲಿನ ಭೂಪ್ರದೇಶಗಳವರೆಗೆ ಅಭಿವೃದ್ಧಿ ಹೊಂದಬಹುದು ಎಂಬುದನ್ನು ಸಾಬೀತುಪಡಿಸಿದೆ ಎಂದು ಕಂಪನಿ ಹೇಳಿಕೊಂಡಿದೆ.
Advertisement

Mahindra: ಭೂಲೋಕದ ಅರಮನೆಯಂತಿದೆ.. ಮಹೀಂದ್ರಾ ಬಿಇ 6..

ಮಹೀಂದ್ರಾ & ಮಹೀಂದ್ರಾ (Mahindra & Mahindra) ಹಾಗೂ ಡಿಸಿ ಕಾಮಿಕ್ಸ್ ಸಿನಿಮಾ ನಿರ್ಮಾಣ ಸಂಸ್ಥೆ ವಾರ್ನರ್ ಬ್ರದರ್ಸ್ (Warner Bros) ಒಪ್ಪಂದ ಮಾಡಿಕೊಂಡಿವೆ. ಅದರ ಭಾಗವಾಗಿ ಗುರುವಾರ ನೂತನ 'ಬಿಇ 6 ಬ್ಯಾಟ್‌ಮ್ಯಾನ್ ಎಡಿಷನ್' ಎಲೆಕ್ಟ್ರಿಕ್ ಎಸ್‌ಯುವಿಯನ್ನು ಬಿಡುಗಡೆಗೊಳಿಸಲಾಗಿದೆ. ಈ ಕಾರು ಬೇರೆ 'ಡಾರ್ಕ್ ಎಡಿಷನ್'ಗಳಿಗಿಂತ ವಿಭಿನ್ನವಾಗಿದೆ. ಇದರ ವಿನ್ಯಾಸದಲ್ಲಿ ಬ್ಯಾಟ್‌ಮ್ಯಾನ್ ಸಿನಿಮಾ & ಕಾಮಿಕ್ಸ್‌ಗಳಲ್ಲಿ ಕಂಡುಬರುವ ಅಂಶಗಳನ್ನು ಹೆಚ್ಚಾಗಿ ನೋಡಬಹುದು.

5-ಸೀಟರ್.. 500+ ಕಿ.ಮೀ ರೇಂಜ್! ಮೊದಲ ಎಲೆಕ್ಟ್ರಿಕ್ ಕಾರಿದು..

ಬಹುನಿರೀಕ್ಷಿತ ಮಾರುತಿ ಸುಜುಕಿ ಇ-ವಿಟಾರಾ (Maruti Suzuki e Vitara) ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಪರಿಸರ ಸ್ನೇಹಿಯಾದ ಈ ಕಾರನ್ನು ಬಿಡುಗಡೆಗೊಳಿಸಲು ಕಂಪನಿಯು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ನೂತನ ಎಲೆಕ್ಟ್ರಿಕ್ ಎಲೆಕ್ಟ್ರಿಕ್ ಎಸ್‌ಯುವಿ ತುಂಬಾ ಅಚ್ಚುಕಟ್ಟಾದ ವಿನ್ಯಾಸ ಹೊಂದಿದ್ದು, ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಹೊಸ 'ಇ-ವಿಟಾರಾ' ಬರುವಿಕೆಗಾಗಿ ಗ್ರಾಹಕರು ಕೂಡ ತುದಿಗಾಲಿನಲ್ಲಿ ನಿಂತುಕೊಂಡು ಕಾಯುತ್ತಿದ್ದಾರೆ.

ಯಮಹಾ ಹೈಬ್ರಿಡ್ ಸ್ಕೂಟರ್ ಸಿರೀಸ್ ಬಿಡುಗಡೆ

ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿರುವ ಯಮಹಾ, ಇಂದು ತನ್ನ 125cc Fi ಹೈಬ್ರಿಡ್ ಸ್ಕೂಟರ್ ಶ್ರೇಣಿಗೆ ಅತ್ಯಾಕರ್ಷಕ ನವೀಕರಣವನ್ನು ಪ್ರಕಟಿಸಿದೆ. ಫ್ಯಾಸಿನೊ 125 Fi ಹೈಬ್ರಿಡ್ ಮತ್ತು ರೇಝಡ್ಆರ್ 125 Fi ಹೈಬ್ರಿಡ್ ಈಗ ಸುಧಾರಿತ ಸ್ಮಾರ್ಟ್ ಫೀಚರ್ಸ್ ಮತ್ತು ರೋಮಾಂಚಕ ಬಣ್ಣ ಆಯ್ಕೆಗಳೊಂದಿಗೆ ಬಂದಿದ್ದು, ಸವಾರರಿಗೆ ಹೆಚ್ಚು ಸಂಪರ್ಕಿತ, ಸೊಗಸಾದ ಮತ್ತು ಕ್ರಿಯಾತ್ಮಕ ಸವಾರಿ ಅನುಭವವನ್ನು ನೀಡಲಿವೆ. ಎರಡೂ ಸ್ಕೂಟರ್‌ಗಳು ಈ ಬಾರಿ ಇನ್ನೂ ಯಾವೆಲ್ಲಾ ವಿಶೇಷತೆಗಳನ್ನು ಒಳಗೊಂಡಿವೆ ಎಂಬುದನ್ನು ಈ ಕೆಳಗೆ ವಿವರಿಸಲಾಗಿದೆ.

Viral: ಮೋದಿಜೀ.. ಮುದ್ದಾದ ಅಕ್ಷರಗಳಲ್ಲಿ ಪತ್ರ ಬರೆದ ಪುಟ್ಟ ಪೋರಿ...

ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು, ಭಾನುವಾರ ಬೆಂಗಳೂರಿಗೆ ಬಂದಿದ್ದರು. ಈ ವೇಳೆ ವಂದೇ ಭಾರತ್ ಎಕ್ಸ್‌ಪ್ರೆಸ್ ಹಾಗೂ ನಮ್ಮ ಮೆಟ್ರೋ ಹಳದಿ ಮಾರ್ಗವನ್ನು ಉದ್ಘಾಟಿಸಿದ್ದರು. ಅದೇ ಸಂದರ್ಭದಲ್ಲಿ ನಗರದ ಸಂಚಾರ ದಟ್ಟಣೆ ಹಾಗೂ ಹದಗೆಟ್ಟ ರಸ್ತೆ ಕುರಿತಂತೆ ಪ್ರಧಾನಿಗಳಿಗೆ ಪುಟ್ಟ ಬಾಲಕಿಯೋರ್ವಳು ಪತ್ರ ಬರೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ನೆಟ್ಟಿಗರಿಂದಲೂ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗಿದೆ.
Advertisement

MG Hector:ಟ್ರೆಂಡ್ ಸೆಟ್ ಮಾಡಿ 6 ವರ್ಷ ಪೂರ್ಣಗೊಳಿಸಿದ ಎಂಜಿ ಹೆಕ್ಟರ್

2019 ರ ಮಧ್ಯಭಾಗದಲ್ಲಿ ದೇಶದ ಮೊದಲ ಇಂಟರ್ನೆಟ್ ಕಾರಾಗಿರುವ ಎಂಜಿ ಹೆಕ್ಟರ್ (MG Hector) ಭಾರತಕ್ಕೆ ಎಂಟ್ರಿಕೊಡುವ ಬಗ್ಗೆ ನಮಗೆ ಎಚ್ಚರಿಕೆ ನೀಡಿತು. ಈ ಕಾರು ಬಿಡುಗಡೆಯಾಗಿದ್ದೇ ತಡ, ಫೀಚರ್ಸ್ ಹಾಗೂ ಟೆಕ್‌ ವಿಷಯದಲ್ಲಿ ತನಗೊಂದು ವಿಶೇಷ ಸ್ಥಾನ ಪಡೆದುಕೊಂಡಿತು. ರೂ. 12.18 ಲಕ್ಷ ಆರಂಭಿಕ ಬೆಲೆ ಹಾಗೂ ಟಾಪ್ ವೇರಿಯೆಂಟ್ ರೂ.16.18 ಲಕ್ಷ (ಎಕ್ಸ್‌ ಶೊರೂಂ) ಬೆಲೆಯಲ್ಲಿ ಪರಿಚಯಿಸಲಾಯಿತು. ಹೆಕ್ಟರ್ ಎಂಬ ಹೆಸರು ಮತ್ತು ಗುಣಗಳನ್ನು 'ಟ್ರಾಯ್‌'ನ ಪೌರಾಣಿಕ ರಾಜಕುಮಾರನಿಂದ ಪಡೆಯಲಾಗಿದೆ. ಎಂಜಿ ಹೆಕ್ಟರ್ ಭಾರತೀಯ SUV ವಿಭಾಗದಲ್ಲಿ ದಿಟ್ಟ ಶೈಲಿ, ಬಲವಾದ ರಸ್ತೆ ಉಪಸ್ಥಿತಿ ಮತ್ತು ಅದರ ವರ್ಗದಲ್ಲಿಯೇ ಪ್ರತ್ಯೇಕವಾಗಿ ನಿಲ್ಲುತ್ತದೆ.

ಇದೇ 27ಕ್ಕೆ ಗಣೇಶ ಹಬ್ಬ: ಹೊಸ ಬೈಕ್ ತೆಗದುಕೊಳ್ಳಬೇಕೇ..

2024 ರ ಗಣೇಶ ಚತುರ್ಥಿಗೆ ಬಜಾಜ್ ಪ್ಲಾಟಿನಾ 100, ಹೀರೋ ಸೂಪರ್ ಸ್ಪ್ಲೆಂಡರ್ ಮತ್ತು ಇನ್ನೂ ಹೆಚ್ಚಿನವುಗಳನ್ನು ಒಳಗೊಂಡಂತೆ ಜನಪ್ರಿಯ ಮೋಟಾರ್‌ಸೈಕಲ್ ಮಾದರಿಗಳನ್ನು ಅನ್ವೇಷಿಸಿ.

Best ADAS Cars: ಮಳೆಗಾಲಕ್ಕೆ ಸೂಕ್ತ ಕಾರುಗಳು: ಅತ್ಯಾಧುನಿಕ ಸೇಫ್ಟಿ

ಮಾನ್ಸೂನ್ ಹತ್ತಿರವಾಗುತ್ತಿದ್ದಂತೆ ಕಾರು ಚಾಲನೆ ಮಾಡುವುದು ಚಾಲಕರಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತದೆ. ಕಡಿಮೆ ಗೋಚರತೆ, ಜಾರುವ ರಸ್ತೆಗಳು ಮತ್ತು ಅನಿರೀಕ್ಷಿತ ದಟ್ಟಣೆಯಂತಹ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಪರಿಸ್ಥಿತಿಗಳಲ್ಲಿಯೇ ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್ (ADAS) ಅಮೂಲ್ಯವೆಂದು ಸಾಬೀತುಪಡಿಸುತ್ತದೆ. ತುರ್ತು ಬ್ರೇಕಿಂಗ್, ಲೇನ್-ಕೀಪಿಂಗ್ ಅಸಿಸ್ಟ್ ಮತ್ತು ಡಿಕ್ಕಿ ಎಚ್ಚರಿಕೆಗಳನ್ನು ಒಳಗೊಂಡಂತೆ ಈ ಬುದ್ಧಿವಂತ ಸುರಕ್ಷತಾ ತಂತ್ರಜ್ಞಾನವು ಚಾಲಕರಿಗೆ ಸಹಾಯ ಮಾಡುತ್ತದೆ. ಚಾಲಕರು ಮತ್ತು ಪ್ರಯಾಣಿಕರನ್ನು ಸುರಕ್ಷಿತವಾಗಿರಿಸುತ್ತದೆ. ಈ ನಿಟ್ಟಿನಲ್ಲಿ ದೃಢವಾದ ADAS ವೈಶಿಷ್ಟ್ಯಗಳನ್ನು ಹೊಂದಿರುವ ಐದು ಕಾರು (Best ADAS Cars) ಗಳನ್ನು ಇಲ್ಲಿ ನೋಡೋಣ.

TATA: ಸ್ವದೇಶಿ ಟಾಟಾ ವಿದೇಶಕ್ಕೆ ಎಂಟ್ರಿ.. ಗಟ್ಟಿಮುಟ್ಟಾದ..

ಟಾಟಾ ಮೋಟಾರ್ಸ್ (Tata Motors) ವಿಶ್ವಾಸಾರ್ಹ ವಾಹನ ತಯಾರಕ ಕಂಪನಿಯಾಗಿದೆ. ದೇಶಿಯವಾಗಿ ಪ್ರಯಾಣಿಕ ವಾಹನ (Passenger vehicle) ವಿಭಾಗದಲ್ಲಿ ಸಫಾರಿ, ಹ್ಯಾರಿಯರ್, ನೆಕ್ಸಾನ್, ಪಂಚ್, ಕರ್ವ್, ಟಿಯಾಗೊ ಹಾಗೂ ಟಿಗೂರ್ ಸೇರಿದಂತೆ ವಿವಿಧ ಕಾರುಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಇದೇ ಟಾಟಾ ಕಂಪನಿಯು ವಿದೇಶಕ್ಕೂ ಲಗ್ಗೆ ಇಡಲು ಹಣಿಯಾಗಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.
Advertisement

ರೂ. 89,999 ಬೆಲೆಯಲ್ಲಿ ಹೊಸ ಸ್ಕೂಟರ್ ಅನಾವರಣಗೊಳಿಸಿದ ಮಾಡಿದ ಕೊಮಾಕಿ

ಪ್ರಮುಖ ಎಲೆಕ್ಟ್ರಿಕ್ ವಾಹನ ಬ್ರಾಂಡ್ ಆಗಿರುವ ಕೊಮಾಕಿ ಎಲೆಕ್ಟ್ರಿಕ್ (Komaki electric), ಭಾರತದ ಅತ್ಯಂತ ದೀರ್ಘ ಶ್ರೇಣಿಯ EV ಸ್ಕೂಟರ್ XR7 ಅನ್ನು ರೂ. 89,999 ಎಕ್ಸ್-ಶೋರೂಂ ಬೆಲೆಯಲ್ಲಿ ಅನಾವರಣಗೊಳಿಸಿದೆ. ಹೊಸ ಯುಗದ ಎಲೆಕ್ಟ್ರಿಕ್ ವಾಹನದ ಡಿಸೈನ್ ಅನ್ನು ಮನಸ್ಸಿನಲ್ಲಿಟ್ಟುಕೊಂಡು ಕ್ಲಾಸಿಕ್ ಸ್ಕೂಟರ್ ಮಿಶ್ರಣದಲ್ಲಿ ನಿರ್ಮಿಸಲಾಗಿದೆ. ಪೆಟ್ರೋಲ್ ಹಾಕಿಸುವ ಚಿಂತೆಯನ್ನು ಬಿಟ್ಟು ವಿಂಟೇಜ್ ಲುಕ್ ಬಯಸುವ ಜನರನ್ನು ಆಕರ್ಷಿಸಲು ಈ ಸ್ಕೂಟರ್ ಬಿಡುಗಡೆ ಮಾಡಲಾಗಿದೆ ಎಂದು ಕೊಮಾಕಿ ಎಲೆಕ್ಟ್ರಿಕ್ ಹೇಳಿದೆ.

ಬಡವರಿಗೆ ಪರ್ಫೆಕ್ಟ್ ಕಾರಿದು.. ರೂ.5.70 ಲಕ್ಷದ ಈ ಮಾರುತಿ ಎಂಪಿವಿಗೆ..

ಮಾರುತಿ ಸುಜುಕಿ ಇಕೋ (Maruti Suzuki Eeco) ವಿಶ್ವಾಸಾರ್ಹ ಎಂಪಿವಿಯಾಗಿದೆ. ಇದು ತುಂಬಾ ಚೆನ್ನಾಗಿರುವ ವಿನ್ಯಾಸ ಮತ್ತು ಹಲವು ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಉತ್ತಮವಾದ ಇಂಧನ ದಕ್ಷತೆ ಹಾಗೂ ಕಾರ್ಯಕ್ಷಮತೆಯಿಂದಲೂ ಮನೆ ಮಾತಾಗಿದೆ. ಖರೀದಿದಾರರು ಸಹ ಇಷ್ಟುಪಟ್ಟು ಕೊಂಡುಕೊಳ್ಳುತ್ತದ್ದಾರೆ. ಈ ಜುಲೈ ತಿಂಗಳಲ್ಲೂ 'ಇಕೋ' ಕಾರು ಭಾರೀ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಒಟ್ಟು 12,341 ಯುನಿಟ್‌ಗಳನ್ನು ವಿತರಣೆ ಮಾಡಲಾಗಿದೆ. 2024ರ ಇದೇ ಅವಧಿಯಲ್ಲಿ 11,916 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಮೂಲಕ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 4% ಪ್ರಗತಿಯಾಗಿದೆ.

CNG ಹೈಬ್ರಿಡ್ ಕಾರುಗಳನ್ನು ಏಕೆ ತಯಾರಿಸುತ್ತಿಲ್ಲ ಗೊತ್ತಾ?

ಪೆಟ್ರೋಲ್ ಅಥವಾ ಡೀಸೆಲ್‌ಗೆ ಹೋಲಿಸಿದರೆ ಕಡಿಮೆ ವೆಚ್ಚ ಮತ್ತು ಕಡಿಮೆ ಕಾರ್ಬನ್ ಹೊರಸೂಸುವಿಕೆಯಿಂದಾಗಿ ಸಂಕುಚಿತ ನೈಸರ್ಗಿಕ ಅನಿಲ (CNG) ಆಕರ್ಷಕ ಇಂಧನ ಆಯ್ಕೆಯಾಗಿದೆ. ಹಾಗಾದ್ರೆ ಸಿಎನ್‌ಜಿ ಬಳಸಿ ಹೈಬ್ರಿಡ್ ಕಾರನ್ನು ಏಕೆ ನಿರ್ಮಿಸಬಾರದು? ಈ ಪ್ರಶ್ನೆ ಹಲವರನ್ನು ಕಾಡಿರಬಹುದು. CNG - ಚಾಲಿತ ಹೈಬ್ರಿಡ್ ಕಾರುಗಳನ್ನು ತಯಾರಿಸುವುದು ತಾಂತ್ರಿಕವಾಗಿ ಒಂದು ಹಂತದಲ್ಲಿ ಕಾರ್ಯಸಾಧ್ಯವಾದರೂ, ಹಲವಾರು ಸವಾಲುಗಳು, ತಂತ್ರಜ್ಞಾನದಲ್ಲಿ ವ್ಯಾಪಕ ಅಭಿವೃದ್ಧಿ ಆಗಬೇಕಿದೆ. ಜೊತೆಗೆ ವಿನ್ಯಾಸ, ವೆಚ್ಚ ಮತ್ತು ಮೂಲಸೌಕರ್ಯ ಅಂಶಗಳು ಕೂಡ ಇಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

Hyundai: 6 ಲಕ್ಷ.. 27 ಕಿ.ಮೀ ಮೈಲೇಜ್, 5-ಸೀಟರ್..

ಹ್ಯುಂಡೈ ಎಕ್ಸ್‌ಟರ್‌ (Hyundai Exter) ಪ್ರಮುಖ ಮೈಕ್ರೋ ಎಸ್‌ಯುವಿಯಾಗಿದೆ. ಇದು ತುಂಬಾ ಅಚ್ಚುಕಟ್ಟಾದ ವಿನ್ಯಾಸ ಹಾಗೂ ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಉತ್ತಮವಾದ ಕಾರ್ಯಕ್ಷಮತೆಗೂ ಹೆಸರುವಾಸಿಯಾಗಿದೆ. ಆದರೂ ಈ ಕಾರಿನ ಮಾರಾಟ ಸಂಖ್ಯೆ ದಿನದಿಂದ ದಿನಕ್ಕೆ ಕುಸಿತವಾಗುತ್ತಿದೆ. ಅದು ಜುಲೈ ತಿಂಗಳಲ್ಲೂ ಮುಂದುವರಿದಿದೆ. ಒಟ್ಟು 5,075 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿದೆ. ಇದರೊಂದಿಗೆ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ -16% ಪ್ರಗತಿಯಾಗಿದೆ. 2024ರ ಇದೇ ಅವಧಿಯಲ್ಲಿ 6,037 ಯುನಿಟ್‌ಗಳನ್ನು ಮಾರಲಾಗಿತ್ತು.
Advertisement

MG Windsor: ಕಾರನ್ನು ಜನ ಮುಗಿಬಿದ್ದು ಖರೀದಿ

ಭಾರತದಲ್ಲಿ ಅತ್ಯುತ್ತಮವಾಗಿ ಮಾರಾಟ ಕಾಣುತ್ತಿರುವ ಎಂಜಿ ವಿಂಡ್ಸರ್ (MG Windsor) ಮತ್ತೊಂದು ಗಮನಾರ್ಹ ಮೈಲಿಗಲ್ಲು ಸಾಧಿಸಿದೆ ಎಂದು ಜೆಎಸ್‌ಡಬ್ಲ್ಯೂ ಎಂಜಿ ಮೋಟಾರ್ ಇಂಡಿಯಾ ಇಂದು ಘೋಷಿಸಿದೆ. ಜುಲೈನಲ್ಲಿ, ಕಂಪನಿಯು ವಿಂಡ್ಸರ್ ಮಾರಾಟದಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಿದೆ, ಒಂದೇ ತಿಂಗಳಲ್ಲಿ ಬರೋಬ್ಬರಿ 4,308 ಯುನಿಟ್‌ ಕಾರುಗಳನ್ನು ಮಾರಾಟ ಮಾಡಿದೆ. ಬಿಡುಗಡೆಯಾದಾಗಿನಿಂದ ಇಲ್ಲಿಯವರೆಗೆ ಸುಮಾರು 36,000 ಯುನಿಟ್‌ ಎಂಜಿ ವಿಂಡ್ಸರ್ ಕಾರುಗಳನ್ನು ಮಾರಾಟ ಮಾಡಿರುವುದಾಗಿ ಕಂಪನಿ ತಿಳಿಸಿದೆ. ಈ ಕಾರನ್ನು ಜನ ಮುಗಿಬಿದ್ದು ಖರೀದಿಸಲು ಕಾರಣವೇನು?

ಇದು ಟಾಟಾ ನ್ಯಾನೋ ಅಲ್ಲ.. ಹೊಸ ಬ್ರ್ಯಾಂಡ್ ವಿನ್‌ಫಾಸ್ಟ್‌ನಿಂದ..

ವಿಯೆಟ್ನಾಂನ ಜನಪ್ರಿಯ ವಾಹನ ತಯಾರಕ ಕಂಪನಿ ವಿನ್‌ಫಾಸ್ಟ್ (VinFast), ಭಾರತದ ಕಾರು ಮಾರುಕಟ್ಟೆಯನ್ನು ಪ್ರವೇಶಿಸಲು ಎಲ್ಲ ರೀತಿಯ ತಯಾರಿಯನ್ನು ಮಾಡಿಕೊಳ್ಳುತ್ತಿದೆ. ಅದರ ಭಾಗವಾಗಿ ತಮಿಳುನಾಡಿನ ತೂತುಕುಡಿಯಲ್ಲಿ ಬೃಹತ್ ಉತ್ಪಾದನಾ ಘಟಕವನ್ನು ಶುರು ಮಾಡಿದೆ. ಚೆನ್ನೈ ಹಾಗೂ ಸೂರತ್‌ನಲ್ಲಿ ಡೀಲರ್‌ಶಿಪ್‌ನ್ನು ಆರಂಭ ಮಾಡಿದೆ. ಅತಿ ಶೀಘ್ರದಲ್ಲೇ ಹೊಚ್ಚ ಹೊಸ ವಿಎಫ್6 (VF6) & ವಿಎಫ್7 (VF7) ಎಲೆಕ್ಟ್ರಿಕ್ ಎಸ್‌ಯುವಿಗಳನ್ನು ಕೂಡ ಅದ್ದೂರಿಯಾಗಿ ಮಾರಾಟಕ್ಕೆ ತರಲಿದೆ.

ಸ್ವಾತಂತ್ರ್ಯ ದಿನಾಚರಣೆಗೆ ಖರೀದಿಸಬಹುದಾದ ಭಾರತ ನಿರ್ಮಿತ ಕಾರುಗಳಿವು!


E20 ಪೆಟ್ರೋಲ್‌ನಿಂದ ಗಾಡಿಗಳ ಮೈಲೇಜ್‌ ಕಡಿಮೆಯಾಗುತ್ತಾ..

ಇತ್ತೀಚೆಗೆ, ಇ20 ಪೆಟ್ರೋಲ್ (ಎಥೆನಾಲ್ ಮಿಶ್ರಿತ) ಉಪಯೋಗದ ಬಗ್ಗೆ ಅನೇಕ ಸವಾರರು ಕಳವಳ ವ್ಯಕ್ತಪಡಿಸಿದ್ದರು. ಈ ಕುರಿತಂತೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಇದರೊಂದಿಗೆ ಎಲ್ಲ ಗೊಂದಲಗಳಿಗೂ ತೆರೆ ಎಳೆಯುವ ಪ್ರಯತ್ನ ಮಾಡಿದೆ. ಎಥೆನಾಲ್ ಮಿಶ್ರಿತ ಪೆಟ್ರೋಲ್‌ ಉಪಯೋಗದಿಂದ ಪರಿಸರ ಮಾಲಿನ್ಯ ಕಡಿಮೆಯಾಗುತ್ತದೆ. ವಿದೇಶದಿಂದ ಬರುವ ಕಚ್ಚಾ ತೈಲದ ಆಮದಿನ ವೆಚ್ಚವನ್ನು ಉಳಿಸಬಹುದು. ಇದರೊಂದಿಗೆ ವಾಹನಗಳ ಸವಾರಿಯ ಗುಣಮಟ್ಟವು (ರೈಡ್ ಕ್ವಾಲಿಟಿ) ಸುಧಾರಿಸುತ್ತದೆ ಎಂದು ಹೇಳಿದೆ.
Advertisement

ವಿಭಾಗದಲ್ಲಿಯೇ ಮೊದಲ 5-ಸ್ಟಾರ್ ರೇಟಿಂಗ್ ಹ್ಯಾಚ್‌ಬ್ಯಾಕ್‌

ನಿಸ್ಸಾನ್ ಮೋಟಾರ್ (Nissan Motor) ಇಂಡಿಯಾ ಕಂಪನಿಯು ಭಾರತದ B - SUV (ಹ್ಯಾಚ್‌ಬ್ಯಾಕ್‌) ವಿಭಾಗದಲ್ಲಿ ಇದೇ ಮೊದಲ ಬಾರಿಗೆ 10 ವರ್ಷಗಳ ವಿಸ್ತೃತ ವಾರಂಟಿ ಯೋಜನೆಯನ್ನು ಪರಿಚಯಿಸಿದ್ದು, ತನ್ನ ಹೊಸ ನಿಸ್ಸಾನ್ ಮ್ಯಾಗ್ನೈಟ್‌ ಮೇಲೆ ಈ ಸೌಲಭ್ಯ ಒದಗಿಸುತ್ತಿದೆ. ಹೊಸ ನಿಸ್ಸಾನ್ ಮ್ಯಾಗ್ನೈಟ್‌ ಪ್ರಯಾಣಿಕರ ಸುರಕ್ಷತೆಗೆ 5-ಸ್ಟಾರ್ ರೇಟಿಂಗ್ ಮತ್ತು ಎಓಪಿ (ವಯಸ್ಕ ಪ್ರಯಾಣಿಕರ ಸುರಕ್ಷತೆ) ವಿಭಾಗದಲ್ಲಿ ಪರಿಪೂರ್ಣ 5-ಸ್ಟಾರ್ ರೇಟಿಂಗ್‌ ಅನ್ನು ಪಡೆದುಕೊಂಡಿದ್ದು, ಈ ವಾಹನಕ್ಕೆ ಹೊಸ ಸೌಲಭ್ಯ ಒದಗಿಸುತ್ತಿರುವುದು ಗಮನಾರ್ಹವಾಗಿದೆ.

28 Km ಮೈಲೇಜ್.. 5-ಸೀಟರ್, ಜನಪ್ರಿಯ Toyota Taisor..

ಟೊಯೊಟಾ ಅರ್ಬನ್ ಕ್ರೂಸರ್ ಟೈಸರ್ (Toyota Urban Cruiser Taisor) ವಿಶ್ವಾಸಾರ್ಹ ಎಸ್‌ಯುವಿ ಎಂದೇ ಹೆಸರುವಾಸಿಯಾಗಿದೆ. ಇದು ಮಾರುತಿ ಸುಜುಕಿ ಫ್ರಾಂಕ್ಸ್ (Maruti Suzuki Fronx) ಕಾರಿನ ರೀ-ಬ್ಯಾಡ್ಜ್ ಮಾಡೆಲ್ ಆಗಿದ್ದು, ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಸದ್ಯ ಪ್ರಯಾಣಿಕರ ರಕ್ಷಣೆಗಾಗಿ ಇದೇ 'ಟೈಸರ್' ಕಾರನ್ನು ನವೀಕರಿಸಿಯೂ ಬಿಡುಗಡೆಗೊಳಿಸಲಾಗಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಆತ್ಯಾಧುನಿಕ ಫೀಚರ್ಸ್... ಕೇವಲ 5.25 ಲಕ್ಷಕ್ಕೆ ಹೊಸ ಕಾರು ಬಿಡುಗಡೆ

ಪ್ರಮುಖ ಕಾರು ತಯಾರಕರಾದ 'ಸಿಟ್ರನ್', ಇಂದು ಹೊಸ ಸಿಟ್ರನ್ C3X ಅನ್ನು ಬಿಡುಗಡೆ ಮಾಡಿದೆ. ಇದು 15 ಹೊಸ ಇಂಟಿಲಿಜೆಂಟ್ ಫೀಚರ್ಸ್‌ನೊಂದಿಗೆ ಸಜ್ಜುಗೊಂಡಿರುವ ಜೊತೆಗೆ, ಉನ್ನತ ಸೌಕರ್ಯ, ಆಧುನಿಕ ತಂತ್ರಜ್ಞಾನ ಮತ್ತು ಪ್ರಯಾಣಿಕರಿಗೆ ಗರಿಷ್ಟ ಸುರಕ್ಷತೆಯನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಈ ವಿಭಾಗದಲ್ಲಿ ಅತ್ಯಂತ ಸುಲಭವಾಗಿ ಖರೀದಿಸಬಹುದಾದ ಕೊಡುಗೆಯಾಗಿ ಸ್ಪರ್ಧಾತ್ಮಕ ಬೆಲೆಯಲ್ಲಿ ಈ ಕಾರು ಖರೀದಿಗೆ ಲಭ್ಯವಿದೆ. ಈ C3 ಶ್ರೇಣಿಯು ಈಗ ರೂ. 5.25 ಲಕ್ಷ (ಎಕ್ಸ್‌ ಶೊರೂಂ) ಆರಂಭಿಕ ಬೆಲೆಯಲ್ಲಿ ಲಭ್ಯವಿದೆ.

Honda: ಹೊಸ ಹೋಂಡಾ ಆಕ್ಟಿವಾ 110, ಆಕ್ಟಿವಾ 125 & ಎಸ್‌ಪಿ125..

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (Honda Motorcycle & Scooter India), 25 ವರ್ಷದ ವಾರ್ಷಿಕೋತ್ಸವ ಸಂಭ್ರಮದಲ್ಲಿದೆ. ಆ ಖುಷಿಯನ್ನು ಮತ್ತಷ್ಟು ಹಿಮ್ಮಡಿಗೊಳಿಸಲು ಆಕ್ಟಿವಾ 110, ಆಕ್ಟಿವಾ 125 ಮತ್ತು ಎಸ್‌ಪಿ125 ಮಾಡೆಲ್‌ಗಳ 'ಆನಿವರ್ಸರಿ ಎಡಿಷನ್'ನ್ನು ಬಿಡುಗಡೆಗೊಳಿಸಿದೆ. 2001ರಲ್ಲಿ ಮೊದಲ ಬಾರಿಗೆ 'ಆಕ್ಟಿವಾ' ಸ್ಕೂಟರ್‌ನ್ನು ಬಿಡುಗಡೆಗೊಳಿಸಲಾಯಿತು. ಇದು ಅಂದಿನಿಂದ ಇಂದಿನವರೆಗೆ ಮನೆ ಮಾತಾಗಿದೆ. ಎಸ್‌ಪಿ125 ವಿಶ್ವಾಸಾರ್ಹ ಮೋಟಾರ್‌ಸೈಕಲ್‌ ಎಂದೇ ಹೆಸರುವಾಸಿಯಾಗಿದೆ. ಈ ನೂತನ ಸ್ಕೂಟರ್‌ & ಬೈಕ್‍ಗಾಗಿ ಬುಕ್ಕಿಂಗ್‌ನ್ನು ತೆರೆದಿದ್ದು, ಆಸಕ್ತ ಗ್ರಾಹಕರು ಆರ್ಡರ್ ಮಾಡಬಹುದು. ಆಗಸ್ಟ್ ಮಾಸಾಂತ್ಯದೊಳಗೆ ವಿವರಣೆಗಳು ಪ್ರಾರಂಭವಾಗುವ ನಿರೀಕ್ಷೆಯಿದೆ.
Advertisement

Jawa Yezdi: ಗತವೈಭವ ಮರಳಿ ಪಡೆಯಲು ಬಿಡುಗಡೆಯಾಗಿದೆ ಹೊಸ ಜಾವಾ ಯೆಜ್ಡಿ

ಜಾವಾ ಯೆಜ್ಡಿ ಮೋಟಾರ್‌ಸೈಕಲ್ಸ್ (Jawa Yezdi Motorcycles), ಕ್ಲಾಸಿಕ್ ವಿಭಾಗದಲ್ಲಿ ಯೆಜ್ಡಿ ರೋಡ್‌ಸ್ಟರ್ 2025 (2025 Yezdi Roadster) ಅನ್ನು ಬಿಡುಗಡೆ ಮಾಡಿದೆ. ಇದರ ಬೆಲೆಯು ರೂ. 2.09 ಲಕ್ಷ (ಎಕ್ಸ್‌ ಶೋರೂಂ) ದಿಂದ ಪ್ರಾರಂಭವಾಗುತ್ತದೆ. ಭವ್ಯವಾದ ಹೊಸ ವಿನ್ಯಾಸ, ಆಕರ್ಷಕ ಫ್ಯೂಲ್ ಟ್ಯಾಂಕ್ ಮತ್ತು ಅಗಲವಾದ ಹಿಂಭಾಗದ ಟೈರ್‌ಗಳನ್ನು ಹೊಂದಿದೆ. ಐಕಾನಿಕ್ ಟ್ವಿನ್ - ಬ್ಯಾರೆಲ್ ಎಕ್ಸಾಸ್ಟ್‌ಗಳೊಂದಿಗೆ ಕತ್ತರಿಸಿದ ಹಿಂಭಾಗದ ಫೆಂಡರ್ ಮತ್ತು ದಿಟ್ಟ '69' ಡೆಕಲ್‌ಗಳು ಬ್ರ್ಯಾಂಡ್‌ನ ಶುದ್ಧ ಮೋಟಾರ್‌ಸೈಕ್ಲಿಂಗ್‌ನ ಶ್ರೀಮಂತ ಪರಂಪರೆಯನ್ನು ಎತ್ತಿತೋರುವಂತಹ ಡಿಸೈನ್‌ ಪಡೆದುಕೊಂಡಿದೆ ಎಂದು ಯೆಜ್ಡಿ ಹೇಳಿದೆ.