KTM: ಭಾರತದಲ್ಲಿ ಎರಡು ನವೀಕರಿಸಿದ ಅಡ್ವೆಂಚರ್ ಬೈಕ್‌ಗಳ ಬಿಡುಗಡೆ

ಪ್ರೀಮಿಯಂ ಸ್ಪೋರ್ಟ್ಸ್ ಮೋಟಾರ್‌ಸೈಕಲ್ ಬ್ರಾಂಡ್ ಆಗಿರುವ ಕೆಟಿಎಂ, ತನ್ನ 390 ಸಿಸಿ ವಿಭಾಗಕ್ಕೆ ಎರಡು ಹೊಸ ವೇರಿಯೆಂಟ್‌ಗಳನ್ನು ಬಿಡುಗಡೆ ಮಾಡಿದೆ. ನವೀಕರಿಸಿದ ಕೆಟಿಎಂ 390 ಅಡ್ವೆಂಚರ್ ಎಕ್ಸ್ (390 Adventure X) ಮತ್ತು ಕೆಟಿಎಂ 390 ಅಡ್ವೆಂಚರ್ ಎಂಡ್ಯೂರೋ ಆರ್ (Enduro R) ಈಗ ಹೊಸದಾಗಿ ಬಿಡುಗಡೆಯಾಗಿರುವ ವೇರಿಯೆಂಟ್‌ಗಳಾಗಿವೆ. ಇವು ಕ್ರಮವಾಗಿ ರೂ. 3,03,125 ಮತ್ತು ರೂ. 3,53,825 ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಎರಡು ನವೀಕೃತ ಮೋಟಾರ್‌ಸೈಕಲ್‌ಗಳ ವಿಶೇಷತೆಗಳನ್ನು ಇಲ್ಲಿ ನೋಡೋಣ.

7-ಸೀಟರ್.. ಭೂಲೋಕದ ಅರಮನೆಯಂತಿರುವ ಎಂಜಿ ಎಂ9 ಪ್ರೆಸಿಡೆನ್ಶಿಯಲ್..

MG M9 Presidential Limousine: ಭಾರತದಲ್ಲಿ ಬಿಡುಗಡೆಯಾದ ಎಲೆಕ್ಟ್ರಿಕ್ MPV, ಐಷಾರಾಮಿ, ಸ್ಥಳಾವಕಾಶ ಮತ್ತು ಸುಧಾರಿತ ತಂತ್ರಜ್ಞಾನವನ್ನು ಹೊಂದಿದೆ. ಸಂಪೂರ್ಣ ಮಾಹಿತಿ ಇಲ್ಲಿದೆ.

17 Km ಮೈಲೇಜ್.. 5-ಸೀಟರ್, ಕಲ್ಲು ಬಂಡೆಯಂತಿರುವ ಟಾಟಾ ಕಾರಿದು..

ಟಾಟಾ ಹ್ಯಾರಿಯರ್ (Tata Harrier) ಪ್ರಖ್ಯಾತ ಎಸ್‌ಯುವಿಯಾಗಿದ್ದು, ಆಕರ್ಷಕವಾದ ವೈಶಿಷ್ಟ್ಯಗಳು ಹಾಗೂ ಉತ್ತಮವಾದ ಕಾರ್ಯಕ್ಷಮತೆಯಿಂದಲೇ ಗಮನ ಸೆಳೆದಿದೆ. ಆದರೂ ಈ ಕಾರಿನ ಮಾರಾಟ ಸಂಖ್ಯೆ ದಿನದಿಂದ ದಿನಕ್ಕೆ ಕುಸಿತವಾಗಿದ್ದು, ಅದು ಈ ಜೂನ್ ತಿಂಗಳಲ್ಲೂ ಮುಂದುವರಿದಿದೆ. ಒಟ್ಟು 1,259 ಯುನಿಟ್‌ಗಳನ್ನು ಮಾತ್ರ ಮಾರಾಟಗೊಳಿಸಲಾಗಿದೆ. ಇದರೊಂದಿಗೆ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ -7% ಇಳಿಕೆಯಾಗಿದೆ. 2024ರ ಇದೇ ಅವಧಿಯಲ್ಲಿ 1,347 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು.

Toyota: ಟೊಯೋಟಾ ಹೈಬ್ರಿಡ್‌ ಎಸ್‌ಯುವಿಗೆ ಫುಲ್ ಡಿಮ್ಯಾಂಡ್

ಟೊಯೋಟಾ ಭಾರತೀಯ ಮಾರುಕಟ್ಟೆಗೆ ತನ್ನ ಜನಪ್ರಿಯ ಹೈಬ್ರಿಡ್ ಮಾಡಲ್ ಆಗಿರುವ ಅರ್ಬನ್ ಕ್ರೂಸರ್ ಹೈರೈಡರ್ ಅನ್ನು 'ಪ್ರೆಸ್ಟೀಜ್ ಪ್ಯಾಕೇಜ್' ನೊಂದಿಗೆ ಅನಾವರಣಗೊಳಿಸಿದೆ. ಇದು ಜುಲೈ 2025 ರಿಂದ ಸೀಮಿತ ಅವಧಿಯವರೆಗೆ ಲಭ್ಯವಿದೆ. ಈ ಪ್ಯಾಕೇಜ್ ಅನ್ನು ಎಸ್‌ಯುವಿಯ ಬಾಹ್ಯ ಆಕರ್ಷಣೆಯನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾಗಿದ್ದು, ಬೆಲೆ ಮತ್ತು ಲಭ್ಯತೆಗಾಗಿ, ಗ್ರಾಹಕರು ತಮ್ಮ ಸ್ಥಳೀಯ ಟೊಯೋಟಾ ಡೀಲರ್‌ಗಳೊಂದಿಗೆ ಪರಿಶೀಲಿಸಲು ಸೂಚಿಸಲಾಗಿದೆ. ಏಕೆಂದರೆ ಪ್ಯಾಕೇಜ್ ಸೀಮಿತ ಅವಧಿಗೆ ಮತ್ತು ಮೊದಲು ಬಂದವರಿಗೆ ಮೊದಲು ಸೇವೆ ಸಲ್ಲಿಸಿದ ಆಧಾರದ ಮೇಲೆ ಲಭ್ಯವಿದೆ.
Advertisement

Hero: ಆಕರ್ಷಕ ಹೀರೋ ವಿಡಾ VX 2 ಸ್ಕೂಟರ್ ಕೇವಲ 59 ಸಾವಿರ

ಹೀರೋ ಮೋಟೋಕಾರ್ಪ್ (Hero Motocorp) ಭಾರತದಲ್ಲಿ ವಿಡಾ ವಿಎಕ್ಸ್ 2 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಇದು ಬಜೆಟ್ ಸ್ನೇಹಿ ಮತ್ತು ನಗರ ಪ್ರಯಾಣಿಕರ ವಿಭಾಗವನ್ನು ಗುರಿಯಾಗಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ಹೊಸ ವಿಡಾ ವಿಎಕ್ಸ್ 2 ಎಲೆಕ್ಟ್ರಿಕ್ ಸ್ಕೂಟರ್ ಗೋ (ಸಿಂಗಲ್ 2.2 ಕಿ.ವ್ಯಾ ಬ್ಯಾಟರಿ, 92 ಕಿ.ಮೀ ಐಡಿಸಿ ರೇಂಜ್) ಮತ್ತು ಪ್ಲಸ್ (ಡ್ಯುಯಲ್ 3.4 ಕಿ.ವ್ಯಾ ಬ್ಯಾಟರಿಗಳು, 142 ಕಿ.ಮೀ ಐಡಿಸಿ ರೇಂಜ್) ಎಂಬ ಎರಡು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ.

20 ಕಿ.ಮೀ ಮೈಲೇಜ್.. 6 ಲಕ್ಷ, 5-ಸೀಟರ್.. Nissan Magnite..

ಭಾರತದ ಕಾರು ಮಾರುಕಟ್ಟೆಯಲ್ಲಿ ನಿಸ್ಸಾನ್ ಮ್ಯಾಗ್ನೈಟ್ (Nissan Magnite) ಬಲು ಜನಪ್ರಿಯ ಎಸ್‌ಯುವಿಯಾಗಿ ಹೊರಹೊಮ್ಮಿದೆ. ಇದರ ಆಕರ್ಷಕವಾದ ನೋಟಕ್ಕೆ ಗ್ರಾಹಕರು ಕೂಡ ಮರುಳಾಗಿದ್ದು, ಅತ್ಯುತ್ತಮ ವೈಶಿಷ್ಟ್ಯಗಳನ್ನು ಹೊಂದಿರುವುದರಿಂದ ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ಸದ್ಯ, ಈ ಕಾರನ್ನು ಕೊಂಡುಕೊಳ್ಳಬೇಕು ಎಂದು ಆಲೋಚಿಸಿರುವ ಖರೀದಿದಾರರಿಗೆ ಭಾರೀ ಸಿಹಿಸುದ್ದಿಯೊಂದು ಲಭ್ಯವಾಗಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

Tata: ಇದಕ್ಕೆ ನೋಡಿ ಟಾಟಾ ಇಷ್ಟವಾಗೋದು: ಲೈಫ್‌ಟೈಮ್ ವಾರೆಂಟಿ ಘೋಷಣೆ!

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಇರುವ ಅಡೆತಡೆಗಳನ್ನು ತೆಗೆದುಹಾಕುವ ತನ್ನ ನಿರಂತರ ಪ್ರಯತ್ನಗಳ ಭಾಗವಾಗಿ, ಭಾರತದ ಪ್ರಮುಖ ಎಲೆಕ್ಟ್ರಿಕ್ ವಾಹನ ತಯಾರಕರಾದ ಟಾಟಾ ಮೋಟಾರ್ಸ್, ಕರ್ವ್ ಇವಿ ಎಸ್‌ಯುವಿ ಕೂಪೆ (Curvv ev SUV Coupe) ಮತ್ತು ನೆಕ್ಸಾನ್ ಇವಿ (Nexon ev) 45 kWh ಎಸ್‌ಯುವಿಗಳ ಮೇಲೆ ಲೈಫ್‌ಟೈಮ್ HV ಬ್ಯಾಟರಿ ವಾರಂಟಿಯನ್ನು ಘೋಷಿಸಿದೆ. ಇತ್ತೀಚೆಗೆ ಬಿಡುಗಡೆಯಾದ ಹ್ಯಾರಿಯರ್ ಇವಿ (Harrier ev) ದೊಂದಿಗೆ ಮೊದಲು ಪರಿಚಯಿಸಲಾದ ಲೈಫ್‌ಟೈಮ್ HV ಬ್ಯಾಟರಿ ವಾರಂಟಿಯು ದೇಶಾದ್ಯಂತ ಗ್ರಾಹಕರಿಂದ ವ್ಯಾಪಕ ಮೆಚ್ಚುಗೆಯನ್ನು ಪಡೆದಿದೆ.

28 Km ಮೈಲೇಜ್.. 5-ಸೀಟರ್, 11 ಲಕ್ಷ.. ಈ ಪ್ರಮುಖ Maruti Suv..

ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ (Maruti Suzuki Grand Vitara) ಜನಪ್ರಿಯ ಎಸ್‌ಯುವಿ ಎಂದೇ ಹೆಸರುವಾಗಿದೆ. ಇದು ಉತ್ತಮವಾದ ಕಾರ್ಯಕ್ಷಮತೆ ಹಾಗೂ ಆಕರ್ಷಕ ವೈಶಿಷ್ಟ್ಯಗಳಿಂದಲೂ ಮನೆ ಮಾತಾಗಿದೆ. ಅದರ ಹೊರತಾಗಿಯೂ ಈ ಕಾರಿನ ಮಾರಾಟ ಸಂಖ್ಯೆ ದಿನೇ ದಿನೆ ಕುಸಿತವಾಗುತ್ತಿದೆ. ಅದಕ್ಕೆ ಈ ಜೂನ್ ತಿಂಗಳು ಕೂಡ ಹೊರತಾಗಿಲ್ಲ. ಒಟ್ಟು 6,828 ಯುನಿಟ್‌ಗಳನ್ನು ಮಾತ್ರ ಮಾರಾಟ ಮಾಡಲಾಗಿದೆ. ಇದರೊಂದಿಗೆ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ (YoY) ಶೇಕಡ -29% ಇಳಿಕೆಯಾಗಿದೆ. 2024ರ ಇದೇ ಅವಧಿಯಲ್ಲಿ 9,679 ಯುನಿಟ್‌ಗಳನ್ನು ಮಾರಲಾಗಿತ್ತು.
Advertisement

Kia: ಕಿಯಾ ಹೊಸ ಕಾರು ಬಿಡುಗಡೆ ಸ್ಥಗಿತ? ಬಹುನಿರೀಕ್ಷಿತ 7-ಸೀಟರ್

ಜನಪ್ರಿಯ ಕಾರು ತಯಾರಕ ಕಂಪನಿಯಾದ 'ಕಿಯಾ ಇಂಡಿಯಾ' (Kia india) ಇತ್ತೀಚೆಗೆ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮಗಳಿಂದ 'ಕಾರೆನ್ಸ್ ಕ್ಲಾವಿಸ್ ಇವಿ' (Carens Clavis EV) ಕಾರಿಗೆ ಸಂಬಂಧಿಸಿದ ಎಲ್ಲಾ ಟೀಸರ್ ವೀಡಿಯೊಗಳು ಮತ್ತು ಪ್ರಚಾರದ ವಿಷಯವನ್ನು ತೆಗೆದುಹಾಕಿದೆ. ಈ ಕ್ರಮವು ಭಾರತದಲ್ಲಿ ಕಾರೆನ್ಸ್ ಕ್ಲಾವಿಸ್ ಇವಿ ಬಿಡುಗಡೆಯ ಸ್ಥಿತಿಯ ಬಗ್ಗೆ ಊಹಾಪೋಹಗಳನ್ನು ಹುಟ್ಟುಹಾಕಿದೆ. ಕೆಲವರು ಕಂಪನಿ ಹೇಳಿರುವ ಬಿಡುಗಡೆ ದಿನಾಂಕಕ್ಕಿಂತ ವಿಳಂಬವಾಗಬಹುದು ಎಂದು ಹೇಳುತ್ತಿದ್ದರೇ, ಇನ್ನೂ ಕೆಲವರು ದೇಶದಲ್ಲಿ ಕಾರೆನ್ಸ್ ಕ್ಲಾವಿಸ್ ಇವಿಯನ್ನು ಬಿಡುಗಡೆ ಮಾಡುವುದನ್ನೇ ಸ್ಥಗಿತಗೊಳಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತದೆ. ಅಷ್ಟಕ್ಕೂ ಈ ಬೆಳವಣಿಗೆಗೆ ಕಾರಣವೇನು? ಬಿಡುಗಡೆಯಲ್ಲಿ ವಿಳಂಬ ಅಥವಾ ಟೀಸರ್‌ನಲ್ಲಿ ತೋರಿಸಿದಂತೆ ಕಾರಿನ ಕೆಲವು ವಿವರಗಳಲ್ಲಿ ಪರಿಷ್ಕರಣೆ ಇರಬಹುದು, ಹಾಗಾಗಿ ಟೀಸರ್‌ಗಳನ್ನು ಸದ್ದಿಲ್ಲದೆ ತೆಗೆದುಹಾಕಿದ್ದಾರೆ. ಕೆಲವು ಮೂಲಗಳ ಪ್ರಕಾರ ಟೀಸರ್‌ಗಳಲ್ಲಿ ಪ್ರದರ್ಶಿಸಲಾದ ಕಾರಿನ ಬಾಹ್ಯ ಅಥವಾ ಒಳಾಂಗಣ ಡಿಸೈನ್‌ನಲ್ಲಿ ಬದಲಾವಣೆ ಮಾಡುತ್ತಿರಬಹುದು, ಇದು ಭಾರತದ ಅಂತಿಮ ಉತ್ಪಾದನಾ ಮಾಡಲ್‌ಗೆ ಹೊಂದಿಕೆಯಾಗುತ್ತಿಲ್ಲವಾದ್ದರಿಂದ ಹೀಗೆ ಮಾಡಿರಬಹುದು.

ಇನ್ನು ಬಡವರು ತೆಗೆದುಕೊಳ್ಳಬಹುದು: ಮೊದಲೇ ಅಗ್ಗ.. Hero VIDA VX2..

ಇತ್ತೀಚೆಗೆ ಹೀರೋ ವಿಡಾ ವಿಎಕ್ಸ್2 (Hero Vida Vx2) ಎಲೆಕ್ಟ್ರಿಕ್ ಸ್ಕೂಟರ್‌ನ್ನು ಬಿಡುಗಡೆಗೊಳಿಸಲಾಗಿತ್ತು. ಇದು ಅತಿ ಕಡಿಮೆ ಬೆಲೆಯಲ್ಲಿ ಮಾರಾಟಕ್ಕೆ ಬಂದಿದ್ದು, ಹೆಚ್ಚು ಅತ್ಯಾಕರ್ಷಕವಾದ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಹೊಂದಿದ್ದು, ಹಲವು ಹೊಸತನಗಳಿಗೂ ಸಾಕ್ಷಿಯಾಗಿದೆ. ಸದ್ಯ, ಇದೇ 'ವಿಡಾ ವಿಎಕ್ಸ್2' ಇ-ಸ್ಕೂಟರ್‌ನ್ನು ಖರೀದಿ ಮಾಡಬೇಕೆಂದಿರುವ ಗ್ರಾಹಕರಿಗೆ ಭಾರೀ ಸಿಹಿಸುದ್ದಿಯೊಂದು ಲಭ್ಯವಾಗಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಹೊಸ ಬಜಾಜ್ ಟೂರಿಂಗ್ ಮೋಟಾರ್‌ಸೈಕಲ್ ವಿಶೇಷತೆಗಳು

ಬಜಾಜ್ ಡೊಮಿನಾರ್ 250 ಮತ್ತು ಡೊಮಿನಾರ್ 400 ಎರಡನ್ನೂ ಒಳಗೊಂಡಂತೆ 2025 ರ ಬಜಾಜ್ ಡೊಮಿನಾರ್ ಶ್ರೇಣಿಯನ್ನು ಮೊನ್ನೆಯಷ್ಟೆ ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ. ತಂತ್ರಜ್ಞಾನ, ಏರ್ಗೊನಾಮಿಕ್ಸ್ ಮತ್ತು ರೂರಿಂಗ್ ವೈಶಿಷ್ಟ್ಯಗಳ ಮೇಲೆ ಕೇಂದ್ರೀಕರಿಸಿದ ಹಲವಾರು ಗಮನಾರ್ಹ ನವೀಕರಣಗಳೊಂದಿಗೆ ಈ ಬೈಕ್‌ಗಳನ್ನು ಬಿಡುಗಡೆ ಮಾಡಲಾಗಿದೆ. ರೈಡ್ - ಬೈ - ವೈರ್ ತಂತ್ರಜ್ಞಾನ, ರೈಡಿಂಗ್ ಮೋಡ್‌ಗಳು ಮತ್ತು ಹೊಸ ಬಾಂಡೆಡ್ ಸ್ಪೀಡೋಮೀಟರ್‌ನೊಂದಿಗೆ ಹೊಸ ಡೊಮಿನಾರ್ ಸಿರೀಸ್ ಈಗ ಮತ್ತಷ್ಟು ಸ್ಪೋರ್ಟಿಯಾಗಿ ಅಪ್‌ಡೇಟ್‌ ಆಗಿದೆ.

28 ಕಿ.ಮೀ ಮೈಲೇಜ್.. 7 ಲಕ್ಷ, 5-ಸೀಟರ್.. ಈ ಜನಪ್ರಿಯ ಮಾರುತಿ..

ಮಾರುತಿ ಸುಜುಕಿ ಫ್ರಾಂಕ್ಸ್ (Maruti Suzuki Fronx) ಪ್ರಮುಖ ಕಾಂಪ್ಯಾಕ್ಟ್ ಎಸ್‌ಯುವಿಯಾಗಿ ಗುರುತಿಸಿಕೊಂಡಿದೆ. ಇದು ಬಲೆನೊ ಹ್ಯಾಚ್‌ಬ್ಯಾಕ್‌ನ್ನು ಆಧರಿಸಿದ್ದು, ಅತ್ಯಾಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಈ ಜೂನ್ ತಿಂಗಳಲ್ಲೂ ಇದೇ 'ಫ್ರಾಂಕ್ಸ್' ಕಾರು ಸ್ಪರ್ಧಾತ್ಮಕ ಸಂಖ್ಯೆಯಲ್ಲಿ ಮಾರಾಟಗೊಂಡಿದ್ದು, ಒಟ್ಟು 9,815 ಯುನಿಟ್‌ಗಳನ್ನು ಗ್ರಾಹಕರಿಗೆ ವಿತರಿಸಲಾಗಿದೆ. ಈ ಮೂಲಕ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 1% ಪ್ರಗತಿಯಾಗಿದೆ. 2024ರ ಇದೇ ಅವಧಿಯಲ್ಲಿ 9,688 ಯುನಿಟ್‌ಗಳನ್ನು ಮಾರಲಾಗಿತ್ತು.
Advertisement

8 ಆಸನಗಳು.. ಟೊಯೊಟಾ ಇನ್ನೋವಾ ಕ್ರಿಸ್ಟಾ ಎಂಪಿವಿ ಖರೀದಿಸಬೇಕೇ..

ಟೊಯೊಟಾ ಇನ್ನೋವಾ ಕ್ರಿಸ್ಟಾ (Toyota Innova Crysta) ವಿಶ್ವಾಸಾರ್ಹ ಎಂಪಿವಿಯಾಗಿದೆ. ಇದು ಹೆಚ್ಚು ಅತ್ಯಾಧುನಿಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ಗ್ರಾಹಕರು ಕೂಡ ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ. ನೀವು ಹೊಚ್ಚ ಹೊಸ 'ಇನ್ನೋವಾ ಕ್ರಿಸ್ಟಾ' ಎಂಪಿವಿಯನ್ನು ಕೊಂಡುಕೊಳ್ಳಲು ಆಲೋಚಿಸಿದ್ದೀರಾ.. ನಾವಿಲ್ಲಿ, ಈ ಕಾರಿನ ಆನ್-ರೋಡ್ ಬೆಲೆ (On-Road Price) ಹಾಗೂ ಇಎಂಐ (EMI) ಆಯ್ಕೆಯ ಕುರಿತಂತೆ ಸಂಕ್ಷಿಪ್ತವಾಗಿ ತಿಳಿಸಿಕೊಟ್ಟಿದ್ದೇವೆ.

6-ಸೀಟರ್, ಗಟ್ಟಿಮುಟ್ಟದ ಕಾರಿದು.. ಆದರೂ ಈ Tata SUV ಖರೀದಿಸಲು..

ಭಾರತದ ಕಾರು ಮಾರುಕಟ್ಟೆಯಲ್ಲಿ ಟಾಟಾ ಸಫಾರಿ (Tata Safari) ತನ್ನದೆಯಾದ ಛಾಪನ್ನು ಮೂಡಿಸಿದೆ. ಇದು ಉತ್ತಮವಾದ ಕಾರ್ಯಕ್ಷಮತೆ ಹಾಗೂ ಆಕರ್ಷಕವಾದ ವೈಶಿಷ್ಟ್ಯಗಳಿಗೂ ಹೆಸರುವಾಸಿಯಾಗಿದೆ. ಅದರ ಹೊರತಾಗಿ ಈ ಕಾರಿನ ಮಾರಾಟ ಸಂಖ್ಯೆ ದಿನದಿಂದ ದಿನಕ್ಕೆ ಕುಸಿತವಾಗುತ್ತಿದೆ. ಅದು ಈ ಜೂನ್ ತಿಂಗಳಲ್ಲೂ ಮುಂದುವರಿದಿದ್ದು, ಒಟ್ಟು 922 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿದೆ. ಈ ಮೂಲಕ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ -34% ಇಳಿಕೆಯಾಗಿದೆ. 2024ರ ಇದೇ ಅವಧಿಯಲ್ಲಿ 1,394 ಯುನಿಟ್‌ಗಳನ್ನು ಮಾತ್ರ ಮಾರಾಟ ಮಾಡಲಾಗಿತ್ತು.

Vinfast: ವೇಗ ಹೆಚ್ಚಿಸಿದ ಹೊಸ ಕಾರು ಕಂಪನಿ: ಶೀಘ್ರದಲ್ಲೆ ಬಿಡುಗಡೆ

ಭಾರತಕ್ಕೆ ಲಗ್ಗೆಯಿಟ್ಟಿರುವ ವಿಯೆಟ್ನಾಂ ಮೂಲದ ಹೊಸ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿ ವಿನ್‌ಫಾಸ್ಟ್‌ (Vinfast), ತಮಿಳುನಾಡಿನ ತೂತುಕುಡಿಯಲ್ಲಿ ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿರುವ ತನ್ನ ಹೊಸ ಕಾರ್ಖಾನೆಯಲ್ಲಿ ಸ್ಥಳೀಯವಾಗಿ ನೇಮಕಗೊಂಡ 200 ಮಂದಿ ವೃತ್ತಿಪರರ ಮೊದಲ ಸಮೂಹವನ್ನು ಸೇರ್ಪಡೆ ಮಾಡಿಕೊಳ್ಳುವುದಾಗಿ ಇಂದು ಘೋಷಿಸಿದೆ. ಈ ಹೊಸ ಉತ್ಪಾದನಾ ಸೌಲಭ್ಯವು ಮುಂದಿನ ಐದು ವರ್ಷಗಳಲ್ಲಿ 3,500 ವೃತ್ತಿಪರರಿಗೆ ಉದ್ಯೋಗ ಅವಕಾಶವನ್ನು ಸೃಷ್ಟಿಸುವ ನಿರೀಕ್ಷೆಯಿದೆ. ಸ್ಥಾವರದ ಬೆಳವಣಿಗೆಯ ಪಥಕ್ಕೆ ಅನುಗುಣವಾಗಿ ಹಂತಹಂತವಾಗಿ ನೇಮಕಾತಿ ಮಾಡಲಾಗುತ್ತದೆ ಎಂದು ವಿನ್‌ಫಾಸ್ಟ್ ತಿಳಿಸಿದೆ.

20 ಕಿ.ಮೀ ಮೈಲೇಜ್.. 7-ಸೀಟರ್, ಜುಲೈ 23ರಂದು ಹೊಸ ರೂಪದಲ್ಲಿ..

ರೆನಾಲ್ಟ್ ಟ್ರೈಬರ್ (Renault Triber) ಪ್ರಮುಖ ಎಂಪಿವಿಯಾಗಿದೆ. ಕೈಗೆಟುಕುವ ಬೆಲೆಯಲ್ಲಿಯೂ ಲಭ್ಯವಿದ್ದು, ದೊಡ್ಡ ಕುಟುಂಬಗಳಿಗೆ ಹೆಚ್ಚು ಸೂಕ್ತವಾಗಿದೆ. ಪ್ರತಿ ತಿಂಗಳು ಸ್ಪರ್ಧಾತ್ಮಕ ಸಂಖ್ಯೆಯಲ್ಲಿ ಮಾರಾಟವಾಗುತ್ತಿದ್ದು, ಗ್ರಾಹಕರು ಕೂಡ ಮೆಚ್ಚಿಕೊಂಡಿದ್ದಾರೆ. 2019ರಲ್ಲಿ ಈ ಕಾರನ್ನು ಮಾರಾಟಕ್ಕೆ ತರಲಾಗಿತ್ತು. ಸದ್ಯ, ಇದೇ 'ಟ್ರೈಬರ್'ನ್ನು ನವೀಕರಣಕ್ಕೂ ಒಳಪಡಿಸಲಾಗಿದ್ದು, 2025ರ ಹೊಚ್ಚ ಹೊಸ ಫೇಸ್‌ಲಿಫ್ಟ್ ಮಾಡೆಲ್ ಬಿಡುಗಡೆಗೆ ಅಧಿಕೃತವಾಗಿ ದಿನಾಂಕವನ್ನು ನಿಗದಿಪಡಿಸಲಾಗಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.
Advertisement

ಅಗ್ಗದ ಹೊಸ ಸ್ಕೂಟರ್ ಬಿಡುಗಡೆ: ಖರ್ಚಿಲ್ಲದೆ 120 ಕಿ.ಮೀ ಓಡಿಸಿ

ಭಾರತದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಬ್ರಾಂಡ್‌ಗಳಲ್ಲಿ ಒಂದಾದ ಝೀಲಿಯೋ ಇ (ZELIO E) ಮೊಬಿಲಿಟಿ, ತನ್ನ ಜನಪ್ರಿಯ ಲೋ-ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ಈವಾ (Eeva) ಫೇಸ್‌ಲಿಫ್ಟ್ ಮಾಡಲ್ ಅನ್ನು ಬಿಡುಗಡೆ ಮಾಡಿದೆ. ಹೊಸ ಸ್ಕೂಟರ್ ಸುಧಾರಿತ ಪರ್ಫಾಮೆನ್ಸ್, ಹೆಚ್ಚಿನ ಸವಾರಿ ಸೌಕರ್ಯವನ್ನು ನೀಡಲಿದೆ. ಇದು ವಿದ್ಯಾರ್ಥಿಗಳು, ವೃತ್ತಿಪರರು ಮತ್ತು ಸಣ್ಣ ಕೆಲಸಗಾರರಿಗೆ ಅನುಗುಣವಾಗಿ ಅಗತ್ಯ ಫೀಚರ್ಸ್ ಒಳಗೊಂಡಿದೆ. ಈ ಸ್ಕೂಟರ್ ಕಂಪನಿಯ ಕೈಗೆಟುಕುವ, ನಗರ ಸ್ನೇಹಿ ಎಲೆಕ್ಟ್ರಿಕ್ ಸ್ಕೂಟರ್ ಆಗಿದ್ದು, ಸ್ಮಾರ್ಟ್ ಮತ್ತು ಪ್ರಾಯೋಗಿಕವಾಗಿದೆ ಎಂದು ಕಂಪನಿ ಹೇಳಿದೆ.

ಯಾರೂ ನಂಬಲ್ಲ... ಭಾರತದ ಭವಿಷ್ಯ ಹೇಗಿರಲಿದೆ ಗೊತ್ತಾ?

ಆರಂಭದಲ್ಲಿ ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿಗಳಲ್ಲಿ ಆಕಸ್ಮಿಕ ಬೆಂಕಿ, ರೇಂಜ್ ಆತಂಕ, ನಿರ್ವಹಣೆ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲದಿರುವುದು, ಸರ್ವಿಸ್ ಸೆಂಟರ್‌ಗಳ ಕೊರತೆಯಿಂದಾಗಿ ಇವಿಗಳ ಖರೀದಿಗೆ ಜನರು ಹಿಂದೇಟು ಹಾಕುತ್ತಿದ್ದರು. ಆದರೆ ಈಗ ಎಲ್ಲವೂ ಬದಲಾಗಿದೆ, ಎಲ್ಲಾ ಆತಂಕಗಳನ್ನು ದೂರ ಮಾಡಿ ವಿಶ್ವಾಸಾರ್ಹ ವಾಹನಗಳನ್ನು ತಯಾರಕರು ಬಿಡುಗಡೆ ಮಾಡುತ್ತಿದ್ದಾರೆ. ಇವಿಗಳ ಅಗ್ನಿ ಅವಘಡಗಳು ಕೂಡ ತೀರಾ ಕಡಿಮೆಯಾಗಿರುವುದರಿಂದ ನಿಧಾನವಾಗಿ ಜನರು ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಸದ್ಯ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ (ಇವಿ) ಖರೀದಿಯು ವೇಗವಾಗಿ ಬೆಳೆಯುತ್ತಿದೆ.

27.97 Km ಮೈಲೇಜ್.. 5-ಸೀಟರ್, 11 ಲಕ್ಷ, ಈ Toyota SUVಗೆ ಫುಲ್..

ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ (Toyota Urban Cruiser Hyryder) ವಿಶ್ವಾಸಾರ್ಹ ಕಾಂಪ್ಯಾಕ್ಟ್ ಎಸ್‌ಯುವಿಯಾಗಿದೆ. ಇದು ಹೆಚ್ಚು ಅತ್ಯಾಧುನಿಕವಾಗಿದ್ದು, ಉತ್ತಮವಾದ ಕಾರ್ಯಕ್ಷಮತೆಗೂ ಹೆಸರುವಾಗಿದೆ. ಈ ಜೂನ್ ತಿಂಗಳು ಇದೇ 'ಅರ್ಬನ್ ಕ್ರೂಸರ್ ಹೈರೈಡರ್' ಕಾರು ಭಾರೀ ಸಂಖ್ಯೆಯಲ್ಲಿ ಮಾರಾಟಗೊಂಡಿದ್ದು, ಗ್ರಾಹಕರು ಕೂಡ ನಾಮುಂದು-ತಾಮುಂದು ಎಂಬಂತೆ ಖರೀದಿ ಮಾಡಿದ್ದಾರೆ. ಬರೋಬ್ಬರಿ 7,462 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಈ ಮೂಲಕ ವರ್ಷದಿಂದ ವರ್ಷಕ್ಕೆ (YoY) ಶೇಕಡ 75% ಪ್ರಗತಿ ಸಾಧಿಸಲಾಗಿದೆ. 2024ರ ಜೂನ್‌ನಲ್ಲಿ 4,275 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿತ್ತು.

Bajaj: ಹೊಸ ಬಜಾಜ್ ಮೋಟಾರ್‌ಸೈಕಲ್ ಬಿಡುಗಡೆ: ಆಧುನಿಕ ಫೀಚರ್ಸ್!

ಜನಪ್ರಿಯ ದ್ವಿಚಕ್ರ ವಾಹನ ಕಂಪನಿಯಾದ ಬಜಾಜ್ (Bajaj), 2025 ರ ಅಪ್‌ಡೇಟೆಡ್ ಪಲ್ಸರ್ NS400Z ಮೋಟಾರ್‌ಸೈಕಲ್ ಬಿಡುಗಡೆ ಮಾಡಿದೆ. ಇದು ಸ್ಟ್ರೀಟ್‌ಫೈಟರ್ ಆಗಿದ್ದು, ಸ್ಪೋರ್ಟಿ ಲುಕ್ ಹಾಗೂ ಉತ್ತಮ ಪರ್ಫಾಮೆನ್ಸ್ ಬಯಸುವವರಿಗಾಗಿ ನಿರ್ಮಿಸಲಾಗಿದೆ. ಬಿಡುಗಡೆಯಾಗಿ ಒಂದು ವರ್ಷದ ನಂತರ, 20,000 ಕ್ಕೂ ಹೆಚ್ಚು ಪಲ್ಸರ್ NS400Z ಬೈಕ್‌ಗಳು ದೇಶದ ಬೀದಿಗಳಲ್ಲಿ ಸವಾರಿ ಮಾಡುತ್ತಿವೆ. ಇದು ಬೈಕ್‌ನ ಆಕರ್ಷಣೆ ಮತ್ತು ಪರಾಕ್ರಮಕ್ಕೆ ಸಾಕ್ಷಿಯಾಗಿದೆ. ಇದೀಗ ಬಿಡುಗಡೆಯಾಗಿರುವ ಹೊಸ 2025 ರ ಅಪ್‌ಡೇಟೆಡ್ ಪಲ್ಸರ್ NS400Z ಹೊಸ ತಂತ್ರಜ್ಞಾನದೊಂದಿಗೆ ಯುವಕರ ಫೇವರೆಟ್ ಆಯ್ಕೆಯಾಗಲಿದೆ ಎಂದು ಕಂಪನಿ ಭರವಸೆ ನೀಡಿದೆ.
Advertisement

Honda Activa e: ಕಮ್ಮಿ ಬೆಲೆ.. ಆದ್ರೂ ಹೋಂಡಾ ಆಕ್ಟಿವಾ..

ಬಹುನಿರೀಕ್ಷಿತ ಹೋಂಡಾ ಆಕ್ಟಿವಾ (Honda Activa) ಎಲೆಕ್ಟ್ರಿಕ್ ಸ್ಕೂಟರ್‌ನ್ನು ಇದೇ ಜನವರಿಯಲ್ಲಿ ಮುಕ್ತಾಯಗೊಂಡ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಅದ್ದೂರಿಯಾಗಿ ಬಿಡುಗಡೆಗೊಳಿಸಲಾಗಿತ್ತು. ಈ ಸ್ಕೂಟರ್ ದೊಡ್ಡ ಮಟ್ಟದಲ್ಲಿ ನೀರಿಕ್ಷೆಗಳನ್ನು ಹುಟ್ಟುಹಾಕಿತ್ತು. ಸ್ಟ್ಯಾಂಡರ್ಡ್ ಹಾಗೂ ರೋಡ್‌ಸಿಂಕ್ ಎಂಬ 2 ವಿಧದಲ್ಲೂ ಮಾರಾಟಕ್ಕೂ ಬಂದಿದ್ದು, ಕ್ರಮವಾಗಿ ರೂ.1.17 ಲಕ್ಷ ಹಾಗೂ ರೂ.1.52 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದುಕೊಂಡಿದೆ. ಆದರೂ ನೂತನ 'ಆಕ್ಟಿವಾ ಇ' ಮಾರಾಟ ಸಂಖ್ಯೆ ತಿಂಗಳಿನಿಂದ ತಿಂಗಳಿಗೆ ಕುಸಿತವಾಗುತ್ತಿದೆ. ಏಪ್ರಿಲ್‌ನಲ್ಲಿ 32 ಯುನಿಟ್ ಮಾರಾಟವಾಗಿದ್ದರೆ, ಮೇನಲ್ಲಿ ಶೂನ್ಯ ಸಂಖ್ಯೆಯಲ್ಲಿ ಮಾರಾಟಗೊಂಡಿದೆ ಎಂದು ವರದಿಯಾಗಿದೆ. ಈ ಅಂಕಿಅಂಶವು ತೀವ್ರ ಕಳವಳನ್ನು ಸೃಷ್ಟಿಸುತ್ತಿದೆ. ಅದಕ್ಕೆ ಒಂದಷ್ಟು ಕಾರಣಗಳನ್ನು ಪಟ್ಟಿ ಮಾಡಿದ್ದೇವೆ.

VinFast: ಭಾರತದಲ್ಲಿ ಹೊಸ ಕಾರು ಕಂಪನಿಯ ಒಪ್ಪಂದ

ಭಾರತಕ್ಕೆ ಇತ್ತೀಚೆಗೆ ಎಂಟ್ರಿ ಕೊಟ್ಟಿರುವ ವಿಯೆಟ್ನಾಂ ಮೂಲದ ಹೊಸ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿ 'ವಿನ್‌ಫಾಸ್ಟ್‌' (VinFast) ದೇಶದಲ್ಲಿ ತನ್ನ ವಾಹನಗಳನ್ನು ಬಿಡುಗಡೆ ಮಾಡಲು ವೇಗವನ್ನು ಹೆಚ್ಚಿಸಿದೆ. ಪ್ರಮುಖ ಇವಿ ಚಾರ್ಜಿಂಗ್ ಮತ್ತು ಮಾರಾಟ ನಂತರದ ಪರಿಹಾರ ಪೂರೈಕೆದಾರ ಕಂಪನಿಯಾಗಿರುವ ರೋಡ್‌ಗ್ರಿಡ್‌ (RoadGrid) ನೊಂದಿಗೆ ಪಾಲುದಾರಿಕೆಯನ್ನು ಘೋಷಿಸಿದೆ. ಈ ಪಾಲುದಾರಿಕೆಯ ಮೂಲಕ, ವಿನ್‌ಫಾಸ್ಟ್ ಭಾರತದಾದ್ಯಂತ ತನ್ನ ಸರ್ವಿಸ್ ಮತ್ತು ಚಾರ್ಜಿಂಗ್ ಸಾಮರ್ಥ್ಯಗಳನ್ನು ಬಲಪಡಿಸುತ್ತಿದೆ. ನಿರಂತರವಾಗಿ ಬ್ರಾಂಡ್‌ ಅನ್ನು ವಿಸ್ತರಣೆ ಮಾಡಿದ ಬಳಿಕ ಕಾರುಗಳನ್ನು ಬಿಡುಗಡೆ ಮಾಡಿ ಬಲವಾದ ಅಡಿಪಾಯವನ್ನು ಹಾಕುವ ಗುರಿಯನ್ನು ಹೊಂದಿರುವುದಾಗಿ ಕಂಪನಿ ಹೇಳಿದೆ.

ಅಮ್ಮನಿಗೆ ಏಕ್ ನಂಬರ್ Hyundai Creta ಕಾರು ಉಡುಗೊರೆ ನೀಡಿದ ಡ್ರೋನ್..

ಕನ್ನಡದ ಬಿಗ್ ಬಾಸ್ (Bigg Boss) ಸೀಸನ್ 10 ಡ್ರೋನ್ ಪ್ರತಾಪ್ (Drone Prathap) ಅವರಿಗೆ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿತ್ತು. ಆ ಶೋನಲ್ಲಿ ರನ್ನರ್ ಅಪ್ ಕೂಡ ಆಗಿದ್ದರು. ಈಗ ಭರ್ಜರಿ ಬ್ಯಾಚುಲರ್ಸ್ (Bharjari Bachelors) ಸೀಸನ್ 2ರ ಸ್ಪರ್ಧಿಯಾಗಿದ್ದಾರೆ. ಈ ನಡುವೆ ತಮ್ಮ ತಾಯಿಗೆ ದುಬಾರಿ ಬೆಲೆಯ ಹೊಚ್ಚ ಹೊಸ ಹ್ಯುಂಡೈ ಕ್ರೆಟಾ (Hyundai Creta) ಕಾರನ್ನು ಸರ್ಪ್ರೈಸ್ ಗಿಫ್ಟ್ ನೀಡಿದ್ದಾರೆ. ಅದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

Mahindra: ಮಹೀಂದ್ರಾಗೆ ಫುಲ್ ಡಿಮ್ಯಾಂಡ್: ಹೊಸ ಸಿರೀಸ್ ಬಿಡುಗಡೆ

ಭಾರತದ ಪ್ರಮುಖ ಎಸ್‌ಯುವಿ ತಯಾರಕರಾದ ಮಹೀಂದ್ರಾ (Mahindra), ಇಂದು ರೂ. 8.94 ಲಕ್ಷ ಆಕರ್ಷಕ ಬೆಲೆಯಿಂದ ಪ್ರಾರಂಭವಾಗುವ ಹೊಸ 'ಎಕ್ಸ್‌ಯುವಿ 3ಎಕ್ಸ್‌ಒ ಆರ್‌ಇವಿಎಕ್ಸ್' (XUV 3XO REVX) ಸಿರೀಸ್ ಅನ್ನು ಬಿಡುಗಡೆಗೊಳಿಸಿದೆ. REVX ಸಿರೀಸ್ ಮೂಲಕ ಹೊಸ XUV 3XO ಎಸ್‌ಯುವಿಯು ಪ್ರೀಮಿಯಂ ಫೀಚರ್ಸ್, ವಿಶಿಷ್ಟ ಡಿಸೈನ್ ಮತ್ತು ತನ್ನ ವಿಭಾಗದಲ್ಲಿ ಅತ್ಯುತ್ತಮ ಪರ್ಫಾಮೆನ್ಸ್ ಹಾಗೂ ಆಕರ್ಷಕ ಮೌಲ್ಯದ ಕೊಡುಗೆಯೊಂದಿಗೆ ಮತ್ತಷ್ಟು ಅಪ್‌ಡೇಟ್ ಆಗಿದೆ. ಈ ಕಾರು ಗ್ರಾಹಕರ ಆದ್ಯತೆಗಳನ್ನು ಮೀರಿ ಹೊಸ ಅನುಭವ ನೀಡಲು ಸಜ್ಜಾಗಿದೆ ಎಂದು ಕಂಪನಿ ಹೇಳಿದೆ.
Advertisement

Toyota: ಹೊಸ ಟೊಯೋಟಾ ಹೈಬ್ರಿಡ್ ಕಾರಿಗೆ ಹೆಚ್ಚಾಯ್ತು ಬೇಡಿಕೆ

ಗ್ರಾಹಕರ ಸಂತೋಷವನ್ನು ಹೆಚ್ಚಿಸುವ ಸಲುವಾಗಿ ಟೊಯೋಟಾ (Toyota) ಕಂಪನಿಯು ತನ್ನ ಜನಪ್ರಿಯ ಸೆಲ್ಫ್ - ಚಾರ್ಜಿಂಗ್ ಹೈಬ್ರಿಡ್ ಎಸ್‌ಯುವಿ ಆಗಿರುವ ಅರ್ಬನ್ ಕ್ರೂಸರ್ ಹೈರೈಡರ್‌ಗಾಗಿ ಸೀಮಿತ ಅವಧಿಯ 'ಪ್ರೆಸ್ಟೀಜ್ ಪ್ಯಾಕೇಜ್' ಅನ್ನು ಪರಿಚಯಿಸಿದೆ. ಈ ಎಸ್‌ಯುವಿ ಈಗಾಗಲೇ ದಿಟ್ಟ ಮತ್ತು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಸ್ಟೈಲಿಷ್ ಲುಕ್‌ ಹೊಂದಿದೆ. ಇದರ ಜೊತೆಗೆ ಈ ವಿಶೇಷ ಪ್ರೆಸ್ಟೀಜ್ ಪ್ಯಾಕೇಜ್ ಹೆಚ್ಚುವರಿ ಆಕರ್ಷಣೆಯನ್ನು ನೀಡಲಿದೆ. ಜುಲೈ 2025 ರಿಂದ ಲಭ್ಯವಿರುವ ಪ್ರೆಸ್ಟೀಜ್ ಪ್ಯಾಕೇಜ್ 10 ಉನ್ನತ-ಮೌಲ್ಯದ, ಡೀಲರ್-ಫಿಟೆಡ್ ಮತ್ತು ಒರಿಜಿನಲ್ ಅಕ್ಸೆಸೊರಿಗಳನ್ನು ಒಳಗೊಂಡಿದೆ.