ವಿಶ್ವ ತಿರುಗಿ ನೋಡುವಂತಾಗಿದೆ... ಶ್ರೀಮಂತ ದೇಶವಾಗುತ್ತಿದೆಯೇ ಭಾರತ!

ಸ್ಕೋಡಾ ಆಟೋ ಫೋಕ್ಸ್‌ವ್ಯಾಗನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (SAVWIPL) ಇಂದು ತನ್ನ ಗ್ರೂಪ್‌ನ ಅಡಿಯಲ್ಲಿ ಆರನೇ ಬ್ರ್ಯಾಂಡ್ ಆಗಿ ಪ್ರಸಿದ್ಧ ಬ್ರಿಟಿಷ್ ಬ್ರ್ಯಾಂಡ್ ಬೆಂಟ್ಲಿಯನ್ನು ಸೇರ್ಪಡೆಗೊಳಿಸುವುದಾಗಿ ಘೋಷಿಸಿದೆ. SAVWIPL ದೇಶಾದ್ಯಂತ ಬೆಂಟ್ಲಿ ವಾಹನಗಳನ್ನು ಪ್ರತ್ಯೇಕವಾಗಿ ಆಮದು ಮಾಡಿಕೊಂಡು ಡೆಲಿವರಿ ಮತ್ತು ಸರ್ವಿಸ್ ಮಾಡಲಿದೆ. ಇದು ಭಾರತದಲ್ಲಿ ವಿಸ್ತರಿಸುತ್ತಿರುವ ಐಷಾರಾಮಿ ಕಾರು ಕ್ಷೇತ್ರಕ್ಕೆ ಇನ್ನಷ್ಟು ವೇಗ ಹೆಚ್ಚಿಸಲಿದೆ. ಎಲ್ಲಾ ಮಾರ್ಕೆಟಿಂಗ್, ಮಾರಾಟ ಮತ್ತು ಮಾರಾಟದ ನಂತರದ ಕಾರ್ಯಾಚರಣೆಗಳನ್ನು ಹೊಸದಾಗಿ ಸ್ಥಾಪಿಸಲಾದ ಘಟಕವಾದ ಬೆಂಟ್ಲಿ ಇಂಡಿಯಾ ಅಡಿಯಲ್ಲಿ ನಡೆಸಲಾಗುವುದು ಎಂದು ಕಂಪನಿ ತಿಳಿಸಿದೆ.

ಭಾರತೀಯ ಸ್ಕೂಟರ್‌ಗೆ ನೇಪಾಳದಲ್ಲಿ ಫುಲ್‌ ಡಿಮ್ಯಾಂಡ್

ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿರುವ ಟಿವಿಎಸ್ ಮೋಟಾರ್ (TVS Motor), ತನ್ನ ಜನಪ್ರಿಯ ಜೂಪಿಟರ್ 110 ಅನ್ನು ನೇಪಾಳದಲ್ಲಿ ಬಿಡುಗಡೆ ಮಾಡಿದೆ. ಈ ಸ್ಕೂಟರ್ ಮೊದಲ-ಇನ್-ಸೆಗ್ಮೆಂಟ್ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಹೆಚ್ಚಿನ ಮೈಲೇಜ್, ಪರ್ಫಾಮೆನ್ಸ್, ಸೌಕರ್ಯ, ಅನುಕೂಲತೆ, ಸುರಕ್ಷತೆ ಮತ್ತು ತಂತ್ರಜ್ಞಾನವನ್ನು ಒಳಗೊಂಡಿದೆ. 15 ಪ್ರಥಮ ದರ್ಜೆ ಮತ್ತು 14 ಅತ್ಯುತ್ತಮ-ಇನ್-ಕ್ಲಾಸ್ ವೈಶಿಷ್ಟ್ಯಗಳನ್ನು ಹೊಂದಿರುವ ಈ ಹೊಸ ಜೂಪಿಟರ್ 110 ಸಿಸಿ ಸ್ಕೂಟರ್, ನೇಪಾಳದ ಗ್ರಾಹಕರ ವಿಕಸಿಸುತ್ತಿರುವ ಆದ್ಯತೆಗಳನ್ನು ಪೂರೈಸಲಿದೆ ಎಂದು ಕಂಪನಿ ಅಲ್ಲಿನ ಗ್ರಾಹಕರಿಗೆ ಭರವಸೆ ನೀಡಿದೆ.

Toyota: ಮಾನ್ಸೂನ್‌ಗೆ ಸಿದ್ಧರಾಗಿ

ಟೊಯೋಟಾ (Toyota) ಈ ಮಾನ್ಸೂನ್ ಋತುವಿನಲ್ಲಿ ತನ್ನ 'ಅದ್ಭುತ ಟೊಯೋಟಾ ಸೇವಾ ಅಭಿಯಾನ'ವನ್ನು ಪ್ರಾರಂಭಿಸಿದೆ. ಇದು ದಕ್ಷಿಣ ಭಾರತದಲ್ಲಿರುವ ಎಲ್ಲಾ ಅಧಿಕೃತ ಟೊಯೋಟಾ ಡೀಲರ್‌ಶಿಪ್‌ಗಳಲ್ಲಿ ಒಂದು ಉಪಕ್ರಮವಾಗಿದೆ. ಮಳೆಗಾಲಕ್ಕೆ ನಿಮ್ಮ ವಾಹನವನ್ನು ಸಿದ್ಧಪಡಿಸುವುದಾಗಲಿ, ಮಾನ್ಸೂನ್ ಆರೈಕೆಯೊಂದಿಗೆ ಒಳಾಂಗಣವನ್ನು ರಿಫ್ರೆಶ್ ಮಾಡುವುದಾಗಲಿ ಅಥವಾ ಟೈರ್ ಮತ್ತು ಬ್ಯಾಟರಿ ಪರಿಶೀಲನೆಗಳೊಂದಿಗೆ ಸುಗಮ ಸವಾರಿಯನ್ನು ಖಚಿತಪಡಿಸಿಕೊಳ್ಳಲು ಈ ಅಭಿಯಾನವು ಗ್ರಾಹಕರಿಗೆ ಸಹಕರಿಸಲಿದೆ. ಅಲ್ಲದೆ ನಿಮ್ಮನ್ನು ಸುರಕ್ಷಿತವಾಗಿ, ಆರಾಮದಾಯಕವಾಗಿರಿಸಲು ಬೇಕಾದ ಎಲ್ಲಾ ಕಾರ್ ಚೆಕಪ್ ಹಾಗೂ ಸರ್ವಿಸ್ ಅನ್ನು ಈ ಅಭಿಯಾನ ಒಳಗೊಂಡಿರುವುದಾಗಿ ಟೊಯೋಟಾ ಹೇಳಿದೆ.

121 ಕಿ.ಮೀ ಕ್ರಮಿಸುತ್ತೆ.. ಅಗ್ಗದ TVS iQube ಎಲೆಕ್ಟ್ರಿಕ್..

ಟಿವಿಎಸ್ ಐಕ್ಯೂಬ್ (TVS iQube) ವಿಶ್ವಾಸಾರ್ಹ ಎಲೆಕ್ಟ್ರಿಕ್ ಸ್ಕೂಟರ್ ಎಂದೇ ಹೆಸರುವಾಸಿಯಾಗಿದ್ದು, ಭಾರೀ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ಸದ್ಯ 2.2 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್), 3.5 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಹಾಗೂ 5.3 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಎಂಬ ಬ್ಯಾಟರಿ ಪ್ಯಾಕ್‌ ಹೊಂದಿರುವ ರೂಪಾಂತರಗಳ ಆಯ್ಕೆಯಲ್ಲಿ ಖರೀದಿಗೆ ದೊರೆಯುತ್ತಿದೆ. ಇತ್ತೀಚೆಗೆ ನೂತನ 3.1 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ ಹೊಂದಿರುವ ರೂಪಾಂತರವನ್ನು (ವೇರಿಯೆಂಟ್) ಬಿಡುಗಡೆಗೊಳಿಸಲಾಗಿದೆ. ಬನ್ನಿ, ಹೊಸ ರೂಪಾಂತರದ ಬೆಲೆ ಹಾಗೂ ವಿಶೇಷತೆಗಳ ಕುರಿತ ಪ್ರಮುಖಾಂಶಗಳು ಏನೆಂಬುದನ್ನು ತಿಳಿಯೋಣ.
Advertisement

26 ಕಿ.ಮೀ ಮೈಲೇಜ್.. 7-ಸೀಟರ್.. 8 ಲಕ್ಷ ಬೆಲೆ, ಈ Maruti Mpvಗೆ..

ಮಾರುತಿ ಸುಜುಕಿ ಎರ್ಟಿಗಾ (Maruti Suzuki Ertiga) ಪ್ರಮುಖ ಎಂಪಿವಿಯಾಗಿದೆ. ಇದು ವಿಶ್ವಾಸಾರ್ಹತೆಗೆ ಹೆಸರುವಾಸಿಯಾಗಿದೆ. ದೊಡ್ಡ ಕುಟುಂಬಗಳಿಗೂ ಹೆಚ್ಚು ಸೂಕ್ತವಾಗಿದ್ದು, ಭಾರೀ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ಗ್ರಾಹಕರು ಕೂಡ ನಾಮುಂದು - ತಾಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಈಚೆಗೆ ದೇಶೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಗೊಂಡ ಪ್ರಮುಖ 10 ಕಾರುಗಳ ಪಟ್ಟಿ ಪ್ರಕಟಗೊಂಡಿದೆ. ಅದರಲ್ಲೂ ಇದೇ ಎರ್ಟಿಗಾ ನಾಲ್ಕನೇ ಸ್ಥಾನದಲಿದ್ದು, 14,151 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಮೊದಲ ಸ್ಥಾನದಲ್ಲಿ ಹ್ಯುಂಡೈ ಕ್ರೆಟಾ (15,786 ಯುನಿಟ್), ಎರಡನೇ ಸ್ಥಾನದಲ್ಲಿ ಮಾರುತಿ ಸುಜುಕಿ ಡಿಜೈರ್ (15,484 ಯುನಿಟ್) ಹಾಗೂ ಮೂರನೇ ಸ್ಥಾನದಲ್ಲಿ ಮಾರುತಿ ಬ್ರೆಝಾ (14,507 ಯುನಿಟ್) ಇದೆ.

ಬೈಕ್ ಬೆಲೆಯಲ್ಲಿ ಸೂಪರ್ ಕಾರು ನಿರ್ಮಿಸಿದ ಯುವಕ

ಸೂಪರ್‌ಕಾರ್‌ಗಳ ಕನಸು ಕಾಣುತ್ತಾ ಬೆಳೆದ ಕಾರು ಉತ್ಸಾಹಿಯೊಬ್ಬರು, ನಿಜವಾದ ಲ್ಯಾಂಬೋರ್ಘಿನಿಯನ್ನು ಖರೀದಿಸಲು ಸಾಧ್ಯವಾಗದೇ ಮನೆಯಲ್ಲಿ ತನ್ನದೇ ಆದ ಆವೃತ್ತಿಯನ್ನು ನಿರ್ಮಿಸಿದ್ದಾರೆ. ಹೌದು, ಕೇರಳದ ಕಾರು ಉತ್ಸಾಹಿ ಬಿಬಿನ್ ಎಂಬಾತ ಸ್ಥಳೀಯವಾಗಿ ಸಂಗ್ರಹಿಸಿದ ವಸ್ತುಗಳು, ಮಾರುತಿ ಆಲ್ಟೊ ಚಕ್ರಗಳು ಮತ್ತು ಸ್ಕ್ರ್ಯಾಪ್ ಭಾಗಗಳನ್ನು ಬಳಸಿಕೊಂಡು ಲ್ಯಾಂಬೋರ್ಘಿನಿ ಹುರಾಕನ್ ಸೂಪರ್ ಕಾರನ್ನು ಸಂಪೂರ್ಣವಾಗಿ ಮೊದಲಿನಿಂದ ನಿರ್ಮಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಸದ್ಯ ದೇಶಾದ್ಯಂತ ಈ ಯುವಕ ಭಾರೀ ಸದ್ದು ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈತನ ಕಾರು ಫುಲ್ ವೈರಲ್ ಆಗಿದೆ.

ಒಂದೇ ಸೂರಿನಡಿ 100ಕ್ಕೂ ಹೆಚ್ಚು ವಾಹನಗಳು: ಭಾರತ್ ಮೊಬಿಲಿಟಿ..

ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ (Bharat Mobility Global Expo), ವಾಹನ ಪ್ರಿಯರ ನೆಚ್ಚಿನ ಆಟೋಮೊಬೈಲ್ ಪ್ರದರ್ಶನವಾಗಿದೆ. ಇಲ್ಲಿ ಹತ್ತಾರು ಕಂಪನಿಗಳ ನೂರಾರು ವಾಹನಗಳನ್ನು ಕಣ್ತುಂಬಿಕೊಳ್ಳಬಹುದು. ಈಗಾಗಲೇ ಜರುಗಿರುವ ಮೊದಲೆರೆಡು ಆವೃತ್ತಿಗಳಿಗೆ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸದ್ಯ 2027ರಲ್ಲಿ ನಡೆಯುವ ಮೂರನೇ ಆವೃತ್ತಿ 'ಭಾರತ್ ಮೊಬಿಲಿಟಿ ಎಕ್ಸ್‌ಪೋ'ಗೂ ದಿನಾಂಕವನ್ನು ನಿಗದಿಪಡಿಸಲಾಗಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

Bajaj: 2025 ರ ಹೊಸ ಡೊಮಿನಾರ್ 400cc - 250cc ಬಿಡುಗಡೆ

ಪ್ರಮುಖ ದ್ವಿಚಕ್ರ ವಾಹನ ಕಂಪನಿಯಾದ ಬಜಾಜ್, 2025 ರ ಡೊಮಿನಾರ್ 400 ಮತ್ತು 250 ಮೋಟಾರ್‌ಸೈಕಗಳನ್ನು ಬಿಡುಗಡೆ ಮಾಡಿದೆ. ಇವುಗಳನ್ನು ಅತ್ಯಾಧುನಿಕ ಎಲೆಕ್ಟ್ರಾನಿಕ್ಸ್ ಮತ್ತು ಎರ್ಗೋನಾಮಿಕ್ಸ್ ಅಪ್‌ಡೇಟ್‌ಗಳೊಂದಿಗೆ ನವೀಕರಿಸಲಾಗಿದೆ. ರೈಡ್ - ಬೈ - ವೈರ್ ತಂತ್ರಜ್ಞಾನ, ಆಯ್ಕೆ ಮಾಡಬಹುದಾದ ರೈಡಿಂಗ್ ಮೋಡ್‌ಗಳು ಮತ್ತು ಹೊಸದಾಗಿ ವಿನ್ಯಾಸಗೊಳಿಸಲಾದ ಬಾಂಡೆಡ್ ಸ್ಪೀಡೋಮೀಟರ್‌ನೊಂದಿಗೆ ಹೊಸ ಡೊಮಿನಾರ್ ಸಿರೀಸ್ ಈಗ ಮತ್ತಷ್ಟು ಸ್ಪೋರ್ಟಿಯಾಗಿ ಅಪ್‌ಡೇಟ್‌ ಆಗಿದೆ. ಈ ಲಾಂಗ್‌ ರೈಡ್ ಪ್ರವಾಸ ಸಿದ್ಧ ಮೋಟಾರ್‌ಸೈಕಲ್‌ಗಳ ಪ್ರಮುಖ ಹೈಲೆಟ್‌ಗಳು ಇಲ್ಲಿವೆ.
Advertisement

Keeway: ಮೊದಲೇ ಅಗ್ಗದ ಬೆಲೆ... ಮತ್ತೇ 71,000 ರೂ. ಬೆಲೆ ಇಳಿಕೆ

ಭಾರತದಾದ್ಯಂತ ಮೋಟಾರ್‌ಸೈಕಲ್ ಪ್ರಿಯರನ್ನು ಸಂತೋಷಪಡಿಸಲು ಸಜ್ಜಾಗಿರುವ ಪ್ರಮುಖ ವಾಹನ ಕಂಪನಿ 'ಆದೀಶ್ವರ್ ಆಟೋ ರೈಡ್' ಇಂಡಿಯಾ ತನ್ನ ಎರಡು ಜನಪ್ರಿಯ ಮಾಡಲ್‌ಗಳಾದ ಕೀವೇ ಕೆ-ಲೈಟ್ 250ವಿ (Keeway K-Light 250V) ಮತ್ತು ಜೋಂಟೆಸ್ 350ಎಕ್ಸ್ (Zontes 350X) ಮೋಟಾರ್‌ಸೈಕಲ್‌ಗಳ ಮೇಲೆ ಅತ್ಯಾಕರ್ಷಕ ಬೆಲೆ ಇಳಿಕೆಯನ್ನು ಘೋಷಿಸಿದೆ. ಈ ಬೆಲೆ ಪರಿಷ್ಕರಣೆಯು ಪ್ರೀಮಿಯಂ ಮೋಟಾರ್‌ಸೈಕಲ್‌ಗಳನ್ನು ಇನ್ನಷ್ಟು ಅಗ್ಗವಾಗಿಸುತ್ತದೆ. ಅವುಗಳನ್ನು ಆಯಾ ವಿಭಾಗಗಳಲ್ಲಿ ಹಣಕ್ಕೆ ತಕ್ಕ ಮೌಲ್ಯದ ಕೊಡುಗೆಗಳಾಗಿ ಮಾಡಿದೆ ಎಂದು ಕಂಪನಿ ಪ್ರಕಟಿಸಿದೆ.

ಸಿಗಂದೂರು ಸೇತುವೆ ಉದ್ಘಾಟನೆಗೆ ದಿನಾಂಕ ನಿಗದಿ, ಏನಿದರ ವಿಶೇಷತೆ?

ಶಿವಮೊಗ್ಗ (Shivamogga) ಜಿಲ್ಲೆಯ ಜನರಿಗೆ ಕಡೆಗೂ ಸಿಹಿಸುದ್ದಿ ಲಭ್ಯವಾಗಿದೆ. ಸಾಗರದ ಶರಾವತಿ ಹಿನ್ನೀರಿನಲ್ಲಿ ನಿರ್ಮಾಣಗೊಂಡಿರುವ ದೇಶದ ಎರಡನೇ ಅತಿ ಉದ್ದದ ಕೇಬಲ್ ಸೇತುವೆ ಲೋಕಾರ್ಪಣೆಗೆ ದಿನಾಂಕವನ್ನು ನಿಗದಿಪಡಿಸಲಾಗಿದೆ. ಇದೇ ಜುಲೈ 14ರಂದು ಕೇಂದ್ರ ಭೂ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಉದ್ಘಾಟಿಸಲಿದ್ದಾರೆ. ಹೊಸ ಸೇತುವೆಯಿಂದ ಸ್ಥಳೀಯರು ಮಾತ್ರವಲ್ಲದೆ, ಸಿಗಂದೂರು ಚೌಡೇಶ್ವರಿ ದೇಗುಲಕ್ಕೆ ತೆರಳುವ ಯಾತ್ರಿಕರಿಗೂ ಹೆಚ್ಚಿನ ಅನುಕೂಲವಾಗಲಿದೆ.

Ampere Nexus: ಅಗ್ಗದ ಸ್ಕೂಟರ್ ಮೇಲೆ 5 ವರ್ಷ ವಾರೆಂಟಿ

ಗ್ರೀವ್ಸ್ ಎಲೆಕ್ಟ್ರಿಕ್ ಮೊಬಿಲಿಟಿ ಅಡಿಯಲ್ಲಿ ಬರುವ ದ್ವಿಚಕ್ರ ವಾಹನ ತಯಾರಕ ಕಂಪನಿ ಆಂಪಿಯರ್ ಬ್ರಾಂಡ್, ತನ್ನ ಪ್ರಮುಖ ಎಲೆಕ್ಟ್ರಿಕ್ ಸ್ಕೂಟರ್ - ಆಂಪಿಯರ್ ನೆಕ್ಸಸ್ (Ampere Nexus) ‌ಗೆ ಪ್ರಮುಖ ಅಪ್‌ಡೇಟ್ ಪ್ರಕಟಿಸಿದೆ. ಹಾಗೆಯೇ ಈ ಸ್ಕೂಟರ್ ಭಾರತದ ಮೊದಲ ಹೈ - ಪರ್ಫಾಮೆನ್ಸ್ ಫ್ಯಾಮಿಲಿ ಎಲೆಕ್ಟ್ರಿಕ್ ಸ್ಕೂಟರ್ ಎಂದು ಪ್ರಶಂಸಿಸಲ್ಪಟ್ಟಿದೆ. ಇಂಡಿಯಾ ಡಿಸೈನ್ ಮಾರ್ಕ್ ಮತ್ತು ಅತ್ಯುತ್ತಮ ಎಲೆಕ್ಟ್ರಿಕ್ ಸ್ಕೂಟರ್ ಪ್ರಶಸ್ತಿ ಸೇರಿದಂತೆ ಉನ್ನತ ಗೌರವಗಳನ್ನು ಗಳಿಸಿದೆ ಎಂದು ಕಂಪನಿ ತಿಳಿಸಿದೆ.

ಬ್ರೋ.. 7-ಸೀಟರ್, 16 Km ಮೈಲೇಜ್.. 13 ಲಕ್ಷದ ಮಹೀಂದ್ರಾ..

ಭಾರತದ ಕಾರು ಮಾರುಕಟ್ಟೆಯಲ್ಲಿ ಮಹೀಂದ್ರಾ ಸ್ಕಾರ್ಪಿಯೋ (Mahindra Scorpio) ತನ್ನದೇ ಆದ ಛಾಪನ್ನು ಮೂಡಿಸಿದೆ. ಇದು ದಶಕಗಳಿಂದ ಗ್ರಾಹಕರ ನಂಬಿಕೆಯನ್ನು ಉಳಿಸಿಕೊಂಡಿದ್ದು, ಭಾರೀ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ಖರೀದಿದಾರರು ಸಹ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಈಚೆಗೆ ದೇಶೀಯವಾಗಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಗೊಂಡ ಪ್ರಮುಖ 10 ಕಾರುಗಳ ಪಟ್ಟಿ ಪ್ರಕಟಗೊಂಡಿದೆ. ಇದೇ ಸ್ಕಾರ್ಪಿಯೋ 7 ಸ್ಥಾನದಲ್ಲಿದ್ದು, 12,740 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ.
Advertisement

Skoda: ಸ್ಕೋಡಾ ಕಾರುಗಳಿಗೆ ಫುಲ್ ಡಿಮ್ಯಾಂಡ್: ಯಾರೂ ನಂಬಲ್ಲ

ಪ್ರಮುಖ ವಾಹನ ತಯಾರಕ ಕಂಪನಿಯಾಗಿರುವ ಸ್ಕೋಡಾ (Skoda), ಭಾರತದಲ್ಲಿ ಹೊಸ ಉತ್ಪಾದನಾ ಮೈಲಿಗಲ್ಲನ್ನು ದಾಟಿದೆ. ಭಾರತದಲ್ಲಿನ ಅತ್ಯಾಧುನಿಕ ಸ್ಕೋಡಾ ಉತ್ಪಾದನಾ ಸೌಲಭ್ಯಗಳಲ್ಲಿ ಅರ್ಧ ಮಿಲಿಯನ್ (5 ಲಕ್ಷ) ಕಾರುಗಳನ್ನು ಉತ್ಪಾದಿಸಲಾಗಿದೆ. ಸ್ಕೋಡಾ ಕಂಪನಿಯು ಮೊದಲ ಬಾರಿಗೆ 2001 ರಲ್ಲಿ ತನ್ನ ಛತ್ರಪತಿ ಸಂಭಾಜಿ ನಗರ ಸೌಲಭ್ಯದಿಂದ (ಹಿಂದೆ ಔರಂಗಾಬಾದ್) ಆಕ್ಟೇವಿಯಾವನ್ನು ಹೊರತಂದ ನಂತರ, ಭಾರತದಲ್ಲಿ ಬ್ರ್ಯಾಂಡ್‌ನ ಪ್ರಯಾಣವು ಅಭಿವೃದ್ಧಿ ಹೊಂದುತ್ತಾ ಬಂದಿದೆ, ಪ್ರಸ್ತುತ ಹಲವು ಕಾರು ಮಾದರಿಗಳನ್ನು ಪರಿಚಯಿಸುವ ಮೂಲಕ ಭಾರತದಲ್ಲಿ ಪ್ರಮುಖ ಬ್ರಾಂಡ್‌ ಆಗಿ ಬೆಳೆದುನಿಂತಿದೆ.

Hero: ಅಗ್ಗದ ಹೀರೋ ವಿಡಾ ವಿಎಕ್ಸ್2ಗೆ ಬದಲಿ ಆಯ್ಕೆಯಾಗಬಲ್ಲ 5..

ಇತ್ತೀಚೆಗೆ ಹೀರೋ ವಿಡಾ ವಿಎಕ್ಸ್2 (Hero Vida Vx2) ಇ-ಸ್ಕೂಟರ್‌ನ್ನು ಬಿಡುಗಡೆಗೊಳಿಸಲಾಗಿತ್ತು. ಈ ಎಲೆಕ್ಟ್ರಿಕ್ ಸ್ಕೂಟರ್‌ನ ಆರಂಭಿಕ ಬೆಲೆ ರೂ.59,000 ಇದ್ದು, 2.2 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಮತ್ತು 3.4 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿದೆ. 92 ರಿಂದ 142 ಕಿಲೋಮೀಟರ್ ರಿಂದ ರೇಂಜ್ (ಮೈಲೇಜ್) ನೀಡುತ್ತದೆ. ಎಲ್‌ಸಿಡಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಗಾಗಿ ಡಿಸ್ಕ್ ಬ್ರೇಕ್‌ಗಳನ್ನು ಒಳಗೊಂಡಿದೆ. ನೀವು ದಿನನಿತ್ಯದ ಬಳಕೆಗಾಗಿ 'ವಿಡಾ ವಿಎಕ್ಸ್2'ಗೆ ಪರ್ಯಾಯವಾಗಿ ಈ 5 ದ್ವಿಚಕ್ರ ವಾಹನಗಳನ್ನು ಖರೀದಿ ಮಾಡಬಹುದು. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

32.85 Km ಮೈಲೇಜ್.. 5-ಸೀಟರ್, 6 ಲಕ್ಷ.. ಈ ಮಾರುತಿ ಕಾರು ಭಾರೀ..

ಮಾರುತಿ ಸುಜುಕಿ ಸ್ವಿಫ್ಟ್ (Maruti Suzuki Swift) ಜನಪ್ರಿಯ ಹ್ಯಾಚ್‌ಬ್ಯಾಕ್‌ ಆಗಿದೆ. ಇದು ವಿಶ್ವಾಸಾರ್ಹತೆ ಹಾಗೂ ಉತ್ತಮ ಇಂಧನ ದಕ್ಷತೆಗೂ ಹೆಸರುವಾಸಿಯಾಗಿದೆ. ಈಚೆಗೆ ದೇಶೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಗೊಂಡ ಪ್ರಮುಖ 10 ಕಾರುಗಳ ಪಟ್ಟಿ ಪ್ರಕಟಗೊಂಡಿದೆ. ಅದರಲ್ಲಿ ಇದೇ ಸ್ವಿಫ್ಟ್ 5ನೇ ಸ್ಥಾನದಲ್ಲಿದ್ದು, ಬರೋಬ್ಬರಿ 13,275 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಹಾಗೆಯೇ ಮೊದಲ ಸ್ಥಾನದಲ್ಲಿ ಹ್ಯುಂಡೈ ಕ್ರೆಟಾ (15,786 ಯುನಿಟ್), ಎರಡನೇ ಸ್ಥಾನದಲ್ಲಿ ಮಾರುತಿ ಸುಜುಕಿ ಡಿಜೈರ್ (15,484 ಯುನಿಟ್), ಮೂರನೇ ಸ್ಥಾನದಲ್ಲಿ ಮಾರುತಿ ಸುಜುಕಿ ಬ್ರೆಜಾ (14,507 ಯುನಿಟ್) ಹಾಗೂ ನಾಲ್ಕನೇ ಸ್ಥಾನದಲ್ಲಿ ಮಾರುತಿ ಸುಜುಕಿ ಎರ್ಟಿಗಾ (14,151 ಯುನಿಟ್) ಇದೆ.

Ather: ಖರ್ಚಿಲ್ಲದೆ ನಿತ್ಯ 159 ಕಿ.ಮೀ ಓಡುವ ಹೊಸ ಸ್ಕೂಟರ್

ಎಥರ್ ಎನರ್ಜಿ (Ather energy) ಹೊಸ 3.7kWh ಬ್ಯಾಟರಿ ಪ್ಯಾಕ್‌ನೊಂದಿಗೆ ತನ್ನ ರಿಜ್ಟಾ S ಫ್ಯಾಮಿಲಿ ಸ್ಕೂಟರ್ ಅನ್ನು ಇತ್ತೀಚೆಗಷ್ಟೆ ಬಿಡುಗಡೆ ಮಾಡಿದ್ದು, ಉತ್ತಮ ಪ್ರಿತಿಕ್ರಿಯೆ ವ್ಯಕ್ತವಾಗಿದೆ. ಇದರ ಬೆಲೆಯು ರೂ. 1.37 ಲಕ್ಷ (ಎಕ್ಸ್-ಶೋರೂಂ) ವಿದೆ. ಈ ವೇರಿಯೆಂಟ್ ಅನ್ನು ಉನ್ನತ-ಮಟ್ಟದ Z ವೇರಿಯೆಂಟ್ ಆಯ್ಕೆ ಮಾಡದೆ ದೀರ್ಘ ರೇಂಜ್ ಬಯಸುವವರು ಖರೀದಿಸಬಹುದಾಗಿದೆ. ಈ ಹೊಸ ಬ್ಯಾಟರಿ ಪ್ಯಾಕ್ ಮೂಲಕ ಒಮ್ಮೆ ಚಾರ್ಜ್ ಮಾಡಿದರೆ 159 ಕಿ.ಮೀ IDC-ಪ್ರಮಾಣೀಕೃತ ರೇಂಜ್ ಪಡೆಯಬಹುದಾಗಿದೆ ಎಂದು ಕಂಪನಿ ತಿಳಿಸಿದೆ.
Advertisement

19.25 ಕಿ.ಮೀ ಮೈಲೇಜ್.. 5-ಸೀಟರ್, ಸದ್ದಿಲ್ಲದೇ ಈ ಜನಪ್ರಿಯ Tata..

ಟಾಟಾ ಕರ್ವ್ (Tata Curvv) ಪ್ರಮಖ ಕೂಪೆ ಎಸ್‌ಯುವಿಯಾಗಿದೆ. ಇದು ಹೆಚ್ಚು ಅತ್ಯಾಕರ್ಷಕವಾದ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಕೈಗೆಟುಕುವ ಬೆಲೆಯಲ್ಲಿಯೂ ಸಿಗುತ್ತದೆ. ಗ್ರಾಹಕರು ಕೂಡ ನಾಮುಂದು - ತಾಮುಂದು ಖರೀದಿ ಮಾಡುತ್ತಿದ್ದಾರೆ. ಅದಕ್ಕೆ ತಕ್ಕಂತೆ ಭಾರೀ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ಸದ್ಯ, ಇದೇ ಕರ್ವ್ ಕಾರಿನ ದರ ಸ್ವಲ್ಪ ಮಟ್ಟಿಗೆ ಏರಿಕೆಯಾಗಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

627 ಕಿ.ಮೀ ರೇಂಜ್.. 5-ಸೀಟರ್.. Tata Harrier EVಗೆ ಮುಗಿಬಿದ್ದ..

ಇತ್ತೀಚೆಗೆ ನೂತನ ಟಾಟಾ ಹ್ಯಾರಿಯರ್ ಇವಿಯನ್ನು ಬಿಡುಗಡೆಗೊಳಿಸಲಾಗಿತ್ತು. ಈ ಕಾರು ಅತ್ಯಾಧುನಿಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಜುಲೈ 3ರಿಂದ ಹ್ಯಾರಿಯರ್ ಇವಿಗಾಗಿ ಕಂಪನಿಯು ಬುಕ್ಕಿಂಗ್‌ನ್ನು ಶುರು ಮಾಡಿತ್ತು. ಗ್ರಾಹಕರಿಂದಲೂ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಒಂದೇ ದಿನದಲ್ಲಿ ದಾಖಲೆ ಸಂಖ್ಯೆಯಲ್ಲಿ ಆರ್ಡರ್ ಮಾಡಿದ್ದಾರೆ. ಇದು ಎಲೆಕ್ಟ್ರಿಕ್ ಎಸ್‌ಯುವಿಗಳಿರುವ ಬೇಡಿಕೆಯನ್ನು ಎತ್ತಿ ತೋರಿಸುತ್ತದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

25 ಕಿ.ಮೀ ಮೈಲೇಜ್.. 8 ಲಕ್ಷ, 5-ಸೀಟರ್.. ಈ Maruti Suv ಬೇಕೆಂದು..

ಮಾರುತಿ ಸುಜುಕಿ ಬ್ರೆಝಾ (Maruti Suzuki Brezza) ವಿಶ್ವಾಸಾರ್ಹ ಕಾಂಪ್ಯಾಕ್ಟ್ ಎಸ್‌ಯುವಿಯಾಗಿದ್ದು, ತನ್ನದೇ ಆದ ಛಾಪನ್ನು ಮೂಡಿಸಿದೆ. ಈ ಕಾರು ಅತ್ಯುತ್ತಮವಾದ ವಿನ್ಯಾಸ, ಕಾರ್ಯಕ್ಷಮತೆ ಹಾಗೂ ವೈಶಿಷ್ಟ್ಯಗಳಿಂದಲೇ ಹೆಚ್ಚಿನ ಗ್ರಾಹಕರ ಗಮನವನ್ನು ಸೆಳೆದಿದೆ. ಇತ್ತೀಚೆಗೆ ಈ ಜೂನ್ ತಿಂಗಳು ದೇಶೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಗೊಂಡ ಪ್ರಮುಖ 10 ಕಾರುಗಳ ಪಟ್ಟಿ ಪ್ರಕಟಗೊಂಡಿದೆ. ಇದೇ 'ಬ್ರೆಝಾ' 3ನೇ ಸ್ಥಾನದಲ್ಲಿದ್ದು, 14,507 ಯುನಿಟ್‌ಗಳನ್ನು ಮಾರಲಾಗಿದೆ. ಆದರೆ 15,786 ಯುನಿಟ್‌ಗಳೊಂದಿಗೆ ಹ್ಯುಂಡೈ ಕ್ರೆಟಾ ಮೊದಲ ಸ್ಥಾನದಲ್ಲಿದ್ದರೆ, 15,484 ಯುನಿಟ್‌ಗಳೊಂದಿಗೆ ಮಾರುತಿ ಸುಜುಕಿ ಡಿಜೈರ್ ಎರಡನೇ ಸ್ಥಾನದಲ್ಲಿದೆ.

Tata: ಬೆಲೆ ಕೇವಲ 3.99 ಲಕ್ಷ: ಭಾರತದ ಅತ್ಯಂತ ಕೈಗೆಟುಕುವ ಮಿನಿ ಟ್ರಕ್

ಟಾಟಾ ಮೋಟಾರ್ಸ್, ಭಾರತದ ಅತ್ಯಂತ ಕೈಗೆಟುಕುವ 4-ವೀಲ್ ಮಿನಿ - ಟ್ರಕ್ ಆಗಿರುವ ಹೊಸ ಏಸ್ ಪ್ರೊ ಅನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಇದರ ಆರಂಭಿಕ ಬೆಲೆಯು ಕೇವಲ 3.99 ಲಕ್ಷ (ಎಕ್ಸ್-ಶೋರೂಂ) ವಾಗಿದೆ. ಇದು ದೇಶದ ಸಣ್ಣ ವಾಣಿಜ್ಯ ವಾಹನ ವಿಭಾಗದಲ್ಲಿ ಮಹತ್ವದ ಹೆಜ್ಜೆಯಾಗಿದೆ. ಈ ವಾಹನವು ಪೆಟ್ರೋಲ್, ದ್ವಿ - ಇಂಧನ (CNG + ಪೆಟ್ರೋಲ್) ಮತ್ತು ಎಲೆಕ್ಟ್ರಿಕ್ ಆವೃತ್ತಿಗಳಲ್ಲಿ ಲಭ್ಯವಿದೆ. ವಾಹನದ ವಿಶೇಷತೆಗಳನ್ನು ನೋಡೋಣ ಬನ್ನಿ.
Advertisement

ಬಡವರ ಬಂಡಿ.. ಹೊಸ Hero VIDA VX2 ಇ-ಸ್ಕೂಟರ್ ಕುರಿತ ಪ್ರಮುಖಾಂಶಗಳಿವು

ಇತ್ತೀಚೆಗೆ ಹೊಚ್ಚ ಹೊಸ ಹೀರೋ ವಿಡಾ ವಿಎಕ್ಸ್2 (Hero Vida Vx2) ಇ-ಸ್ಕೂಟರ್ ಬಿಡುಗಡೆಗೊಂಡಿದೆ. ಇದು ಅತ್ಯುತ್ತಮವಾದ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಕೈಗೆಟುಕುವ ಬೆಲೆಯಲ್ಲಿಯೂ ಸಿಗುತ್ತದೆ. ಈ ಎಲೆಕ್ಟ್ರಿಕ್ ಸ್ಕೂಟರ್‌ ಸ್ಟ್ಯಾಂಡರ್ಡ್ ಹಾಗೂ ಬ್ಯಾಟರಿ-ಆಸ್-ಎ-ಸರ್ವಿಸ್ (ಬಾಸ್-BaaS) ಪ್ಲ್ಯಾನ್‌ನಡಿ ಗ್ರಾಹಕರ ಖರೀದಿಗೆ ಲಭ್ಯವಿದೆ. ನಾವಿಲ್ಲಿ ನೂತನ 'ವಿಡಾ ವಿಎಕ್ಸ್2' ಎಲೆಕ್ಟ್ರಿಕ್ ಸ್ಕೂಟರ್‌ನ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಪ್ರಮುಖಾಂಶಗಳು ಏನೆಂಬುದನ್ನು ತಿಳಿಸಿಕೊಟ್ಟಿದ್ದೇವೆ.

5-ಸೀಟರ್.. ಸ್ವದೇಶಿ ನಿರ್ಮಿತ ಅಗ್ಗದ Mahindra Suv ದುಬಾರಿ ಬೆಲೆಗೆ..

ಆನಂದ್ ಮಹೀಂದ್ರಾ ಮಾಲೀಕತ್ವದ ಮಹೀಂದ್ರಾ (Mahindra) ಪ್ರಮುಖ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ದೇಶೀಯವಾಗಿ ಮಾತ್ರವಲ್ಲದೆ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲೂ ತನ್ನದೆಯಾದ ಛಾಪನ್ನು ಮೂಡಿಸಿದೆ. ಸದ್ಯ, ಆಸ್ಟ್ರೇಲಿಯಾದಲ್ಲಿ ಸ್ವದೇಶಿ ನಿರ್ಮಿತ ಹೊಚ್ಚ ಹೊಸ ಎಕ್ಸ್‌ಯುವಿ 3ಎಕ್ಸ್ಒ (XUV 3XO) ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಬಿಡುಗಡೆಗೊಳಿಸಿದೆ. ಬನ್ನಿ, ಈ ಕಾರಿನ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

Matter Aera: ದೇಶದ ಮೊದಲ ಎಲೆಕ್ಟ್ರಿಕ್ ಗೇರ್ ಬೈಕ್..

ಅಹಮದಾಬಾದ್ ಮೂಲದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಸ್ಟಾರ್ಟ್ಅಪ್ ಕಂಪನಿಯಾಗಿ ಮ್ಯಾಟರ್ (Matter) ಗುರುತಿಸಿಕೊಂಡಿದೆ. ಹಬ್ಬಗಳು ಸಮೀಪಿಸುತ್ತಿರುವಾಗಲೇ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನೂತನ 'ಏರಾ' ಇ-ಮೋಟಾರ್‌ಸೈಕಲ್‌ನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಿದೆ. ಇದು 1.93 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದ್ದು, ಹಲವು ವಿಶೇಷತೆಗಳಿಗೂ ಸಾಕ್ಷಿಯಾಗಿದೆ. ಈ ಎಲೆಕ್ಟ್ರಿಕ್ ಬೈಕ್‌ಗಾಗಿ ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಬುಕ್ಕಿಂಗ್‌ನ್ನು ತೆರೆಯಲಾಗಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ರಸ್ತೆ ಮೇಲಿನ ಅರಮನೆಯಂತಿರುವ Lexus ಕಾರನ್ನು ಖರೀದಿಸಿದ ರಾಕಿಂಗ್..

ಕನ್ನಡದ ರಾಕಿಂಗ್ ಸ್ಟಾರ್ ಯಶ್ (Yash) ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದು, ದೊಡ್ಡ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳಿದ್ದ ಕೆಜಿಎಫ್ (KGF) ಸಿನಿಮಾದ ಯಶಸ್ಸಿನ ಬಳಿಕ, ಯಶ್ ಅವರ ಅದೃಷ್ಟವೇ ಬದಲಾಗಿ ಹೋಗಿದೆ. ಸದ್ಯ, ರಾಮಾಯಣ ಹಾಗೂ ಟಾಕ್ಸಿಕ್ ಚಿತ್ರಗಳಲ್ಲಿ ಫುಲ್ ಬ್ಯುಸಿಯಾಗಿದ್ದು, ಶೂಟಿಂಗ್‌ಗಾಗಿ ಮುಂಬೈನಲ್ಲಿಯೇ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಅಲ್ಲಿನ ಓಡಾಟಕ್ಕಾಗಿ, ರಸ್ತೆ ಮೇಲಿನ ಅರಮನೆಯಂತಿರುವ ದುಬಾರಿ ಬೆಲೆಯ ಐಷಾರಾಮಿ ಕಾರನ್ನು ಖರೀದಿ ಮಾಡಿದ್ದಾರೆ ಎಂದು ವರದಿಯಾಗಿದೆ.
Advertisement

TVS: ಇತ್ತೀಚೆಗೆ ಬಿಡುಗಡೆಯಾದ ಹೊಸ ಟಿವಿಎಸ್ ಬೈಕ್ ವಿಶೇಷತೆಗಳು!

ಟಿವಿಎಸ್ 2025 ಅಪಾಚೆ ಆರ್‌ಟಿಆರ್ 160 (TVS Apache RTR 160) ಅನ್ನು ಮೊದಲ ಬಾರಿಗೆ ಡ್ಯುಯಲ್ - ಚಾನೆಲ್ ಎಬಿಎಸ್‌ನೊಂದಿಗೆ ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ. ಇದು 160 ಸಿಸಿ ಮೋಟಾರ್‌ಸೈಕಲ್ ವಿಭಾಗದಲ್ಲಿ ಗಮನಾರ್ಹ ಸುರಕ್ಷತಾ ಅಪ್‌ಗ್ರೇಡ್ ಅನ್ನು ಪಡೆದುಕೊಂಡಿದೆ. ಹೊಸ ಡ್ಯುಯಲ್ - ಚಾನೆಲ್ ಎಬಿಎಸ್ ರೂಪಾಂತರದ ಬೆಲೆಯು ರೂ. 1.34 ಲಕ್ಷ (ಎಕ್ಸ್ - ಶೋರೂಂ) ಇದೆ. ಇಂದಿನ ಸವಾರರ ವಿಕಸನಗೊಳ್ಳುತ್ತಿರುವ ಬೇಡಿಕೆಗಳನ್ನು ಪೂರೈಸುವ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಂಡಿರುವ ಟಿವಿಎಸ್ ಅಪಾಚೆ RTR 160 ಕುರಿತ ಹೆಚ್ಚಿನ ವಿಶೇಷತೆಗಳು ಇಲ್ಲಿವೆ.