Steelbird: ಅಂತರಾಷ್ಟ್ರೀಯ ಫೀಚರ್ಸ್... ಸ್ವದೇಶಿ ಹೆಲ್ಮೆಟ್ ಬಿಡುಗಡೆ
ಆಟೋಮೊಬೈಲ್ಸ್
- 1 year, 4 month, 13 days ago
ಭಾರತದ ಪ್ರಮುಖ ಹೆಲ್ಮೆಟ್ ತಯಾರಕರಲ್ಲಿ ಒಂದಾದ ಸ್ಟೀಲ್‌ಬರ್ಡ್ (Steelbird) ಹೆಲ್ಮೆಟ್ಸ್, 'ಟೊರ್ನಾಡೋ' ಎಂಬ ಹೆಸರಿನ ಹೊಸ ಹೆಲ್ಮೆಟ್ ಅನ್ನು ಇತ್ತೀಚೆಗೆ ಮಾರುಕಟ್ಟೆಗೆ ಪರಿಚಯಿಸಿದೆ. DOT ಮತ್ತು ISI ಗುಣಮಟ್ಟದ ಪ್ರಮಾಣೀಕರಣವನ್ನು ಹೊಂದಿರುವ ಈ ಹೆಲ್ಮೆಟ್, ದೀರ್ಘ ಪ್ರಯಾಣ ಮಾಡುವ ಸವಾರರಿಗೆ ಹೇಳಿ ಮಾಡಿಸಿದಂತಿದೆ. ಈ ಹೆಲ್ಮೆಟ್ ಸುರಕ್ಷತೆ, ಸೌಕರ್ಯ ಮತ್ತು ದೈನಂದಿನ ಬಳಕೆಗೆ ಅನುಕೂಲಕರವಾಗಿ ವಿನ್ಯಾಸಗೊಳಿಸಲಾಗಿದೆ. ಭಾರತೀಯ ಮತ್ತು ಅಂತರರಾಷ್ಟ್ರೀಯ ಸುರಕ್ಷತಾ ಮಾನದಂಡಗಳನ್ನು ಇದು ಅನುಸರಿಸುತ್ತದೆ ಎಂದು ಕಂಪನಿ ತಿಳಿಸಿದೆ.