ಜುಲೈ 1ಕ್ಕೆ ಹೊಸ Hero Electric Scooter ಬಿಡುಗಡೆ.. ರೂ.65,000..
ಆಟೋಮೊಬೈಲ್ಸ್
- 1 year, 4 month, 16 days ago
ಬಹುನಿರೀಕ್ಷಿತ ಹೀರೋ ವಿಡಾ ವಿಎಕ್ಸ್2 (Hero Vida VX2) ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಇದು ಜುಲೈ 1 ರಂದು ಮಾರಾಟಕ್ಕೆ ಬರಲಿದ್ದು, ಹಲವು ಹೊಸತನಗಳಿಗೆ ಸಾಕ್ಷಿಯಾಗುವ ನಿರೀಕ್ಷೆಯಿದೆ. ಅತಿ ಕಡಿಮೆ ಬೆಲೆಗೂ ಲಭ್ಯವಾಗಲಿದ್ದು, ಮಧ್ಯಮ ವರ್ಗದ ಗ್ರಾಹಕರು ಸುಲಭವಾಗಿ ಖರೀದಿ ಮಾಡಬಹುದು ಎನ್ನಲಾಗಿದೆ. ಬನ್ನಿ, ಹೊಚ್ಚ ಹೊಸ 'ವಿಡಾ ವಿಎಕ್ಸ್2' ಇ-ಸ್ಕೂಟರ್ನ ಅಂದಾಜು ಬೆಲೆ ಎಷ್ಟಿರಲಿದೆ.. ಸಂಪೂರ್ಣ ಚಾರ್ಜ್ನಲ್ಲಿ ಕ್ರಮಿಸುವ ದೂರವೆಷ್ಟು?, ಜೊತೆಗೆ ಯಾವೆಲ್ಲ ವೈಶಿಷ್ಟ್ಯಗಳನ್ನು ಹೊಂದಿರಲಿದೆ ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ. ಬೆಲೆ (Price): ನೂತನ ಹೀರೋ ವಿಡಾ ವಿಎಕ್ಸ್2 ಎಲೆಕ್ಟ್ರಿಕ್ ಸ್ಕೂಟರ್ ಭಾರೀ ಕಡಿಮೆ ಬೆಲೆಗೆ ಮಾರಾಟಕ್ಕೆ ಬರುವ ಸಾಧ್ಯತೆಯಿದೆ. ಇದು ರೂ.65,000 ರಿಂದ ರೂ.70,000 (ಎಕ್ಸ್-ಶೋರೂಂ) ಬೆಲೆಯಲ್ಲಿ ಬಿಡುಗಡೆಯಾಗಬಹುದು ಎಂದು ಹೇಳಲಾಗಿದೆ. ಈ ಸ್ಕೂಟರ್ನ್ನು ಕಂಪನಿಯು ಬ್ಯಾಟರಿ-ಆಸ್-ಎ-ಸರ್ವಿಸ್ (BaaS) ಯೋಜನೆಯಡಿ ಪರಿಚಯಿಸಲು ಸಜ್ಜಾಗಿದೆ.