7-ಸೀಟರ್.. ಈ ಜನಪ್ರಿಯ 'Mahindra Suv'ಗೆ ಮುಗಿಬಿದ್ದ ಗ್ರಾಹಕರು..

ಮಹೀಂದ್ರಾ ಎಕ್ಸ್‌ಯುವಿ700 (Mahindra XUV700) ಪ್ರಮುಖ ಎಸ್‍ಯುವಿಯಾಗಿದೆ. ಈ ಕಾರನ್ನು ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಅದಕ್ಕೆ ತಕ್ಕಂತೆ ದಿನದಿಂದ ದಿನಕ್ಕೆ ಬೇಡಿಕೆಯೂ ಹೆಚ್ಚಾಗುತ್ತಿದ್ದು, ದೊಡ್ಡ ಸಂಖ್ಯೆಯಲ್ಲಿಯೇ ಮಾರಾಟವಾಗುತ್ತಿದೆ. ಈ ಮೇನಲ್ಲಿ 'ಎಕ್ಸ್‌ಯುವಿ700'ನ್ನು ವಿತರಣೆ ಪಡೆಯಲು ಗ್ರಾಹಕರು ಒಂದಷ್ಟು ಸಮಯ ಕಾಯಬೇಕಾಗಿತ್ತು. ಅದು ಜೂನ್ ತಿಂಗಳಲ್ಲೂ ಯಥಾಸ್ಥಿತಿಯಲ್ಲಿ ಮುಂದುವರಿಯುವ ಸಾಧ್ಯತೆಯಿದೆ. ಬನ್ನಿ.. ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

Ola: ಕಹಿಸುದ್ದಿ.. 39,999 ಆರಂಭಿಕ ಬೆಲೆ.. ಓಲಾದ ಹೊಸ ಎಲೆಕ್ಟ್ರಿಕ್..

ಓಲಾ ಎಲೆಕ್ಟ್ರಿಕ್ (Ola Electric) ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿದ್ದು, ಬೆಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ದೇಶೀಯ ಮಾರುಕಟ್ಟೆಯಲ್ಲಿಯಲ್ಲಿ ಇ-ಬೈಕ್ ಹಾಗೂ ಸ್ಕೂಟರ್‌ಗಳನ್ನು ಮಾರಾಟಗೊಳಿಸುತ್ತಿದೆ. ಇವುಗಳು ಹೆಚ್ಚು ಆಕರ್ಷಕವಾದ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಗ್ರಾಹಕರು ಕೂಡ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಕಳೆದ ವರ್ಷ (2025) ಮತ್ತಷ್ಟು ಖರೀದಿದಾರರಿಗೆ ಹತ್ತಿರವಾಗಲು ಕಂಪನಿಯು ಗಿಗ್ (Gig) ಹಾಗೂ ಎಎಸ್1 ಝಡ್ (S1 Z) ಎಂಬ ಎರಡು ಹೊಚ್ಚ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಪರಿಚಯಿಸಿತ್ತು.

ಇತ್ತೀಚೆಗೆ ಬಿಡುಗಡೆಯಾದ ನಿಸ್ಸಾನ್ ಮ್ಯಾಗ್ನೈಟ್ CNG ವಿಶೇಷತೆಗಳು

ಭಾರತದಲ್ಲಿ ಸಿಎನ್‌ಜಿ ಕಾರುಗಳಿಗೆ ಬೇಡಿಕೆ ಹೆಚ್ಚಾಗಿದೆ, ಹೆಚ್ಚಿನ ಮೈಲೇಜ್ ನೀಡುವ ಈ ಸಿಎನ್‌ಜಿ ಕಾರುಗಳು ಪರಿಸರ ಸ್ನೇಹಿಯೂ ಹೌದು. ಇದೇ ಕಾರಣಕ್ಕೆ ಭಾರತದಲ್ಲಿ ಬಹುತೇಕ ಎಲ್ಲಾ ಬ್ರಾಂಡ್‌ಗಳು ತಮ್ಮ ಇಂಧನ ಚಾಲಿತ ಕಾರುಗಳ ಸಿಎನ್‌ಜಿ ಆವೃತ್ತಿಗಳನ್ನು ಪರಿಚಯಿಸುತ್ತಿವೆ. ಇದೀಗ ಈ ಸಾಲಿಗೆ ನಿಸ್ಸಾನ್ ಕೂಡ ಸೇರಿದೆ, ತನ್ನ ಜನಪ್ರಿಯ ಹ್ಯಾಚ್‌ಬ್ಯಾಕ್ ಹಾಗೂ ಕಂಪನಿಗೆ ಉತ್ತಮ ಲಾಭ ತಂದುಕೊಡುತ್ತಿರುವ ಮ್ಯಾಗ್ನೈಟ್ ಅನ್ನು ಈಗ ಸಿಎನ್‌ಜಿ ಕಿಟ್‌ನೊಂದಿಗೆ ಪರಿಚಯಿಸಿದೆ. ಹೊಸ ನಿಸ್ಸಾನ್ ಮ್ಯಾಗ್ನೈಟ್ ಈಗ ಸರ್ಕಾರಿ ಅನುಮೋದಿತ CNG ರೆಟ್ರೋಫಿಟ್‌ಮೆಂಟ್ ಕಿಟ್‌ನೊಂದಿಗೆ ಲಭ್ಯವಿದೆ.

ಇತ್ತೀಚೆಗೆ ಹೋಂಡಾದ ಎರಡು ಪವರ್‌ಫುಲ್ ಬೈಕ್‌ಗಳ ವಿಶೇಷತೆಗಳು

ಭಾರತದಲ್ಲಿ ಇತ್ತೀಚೆಗೆ ಹೋಂಡಾ (Honda) ಕಂಪನಿಯು ತನ್ನ ಅಂತರಾಷ್ಟ್ರೀಯ ಪ್ರೀಮಿಯಂ ಮೋಟಾರ್‌ಸೈಕಲ್‌ಗಳಾದ CB750 ಹಾರ್ನೆಟ್ ಮತ್ತು CB1000 ಹಾರ್ನೆಟ್ SP ಗಳನ್ನು ಬಿಡುಗಡೆ ಮಾಡಿದೆ. CB1000 ಹಾರ್ನೆಟ್ SP ಭಾರತದಲ್ಲಿನ ಬಿಗ್‌ವಿಂಗ್ ಟಾಪ್‌ಲೈನ್ ಡೀಲರ್‌ಶಿಪ್‌ಗಳ ಮೂಲಕ ಪ್ರತ್ಯೇಕವಾಗಿ ಮಾರಾಟವಾಗುತ್ತದೆ. ಹಾಗೆಯೇ CB750 ಹಾರ್ನೆಟ್ ಎಲ್ಲಾ ಬಿಗ್‌ವಿಂಗ್ ಟಾಪ್‌ಲೈನ್ ಮತ್ತು ಬಿಗ್‌ವಿಂಗ್ ಡೀಲರ್‌ಶಿಪ್‌ಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ. ಎರಡೂ ಮೋಟಾರ್‌ಸೈಕಲ್‌ಗಳ ಬುಕಿಂಗ್‌ಗಳನ್ನು ಪ್ರಾರಂಭವಾಗಿದ್ದು, ವಿತರಣೆಗಳು ಜೂನ್ 2025 ರಿಂದ ಪ್ರಾರಂಭವಾಗಲಿವೆ ಎಂದು ಹೋಂಡಾ ಹೇಳಿದೆ.
Advertisement

ಬಡವರ ಬಂಡಿ.. ಅಗ್ಗದ 'Honda QC1' ಎಲೆಕ್ಟ್ರಿಕ್ ಸ್ಕೂಟರ್..

ಹೋಂಡಾ ಕ್ಯೂಸಿ1 (Honda QC1) ಪ್ರಮುಖ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಇದು ತುಂಬಾ ಸರಳವಾದ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಅತ್ಯಂತ ಕಡಿಮೆ ಬೆಲೆಯಲ್ಲಿಯೂ ಗ್ರಾಹಕರ ಖರೀದಿಗೆ ದೊರೆಯುತ್ತದೆ. ನೀವು ಹೊಚ್ಚ ಹೊಸ 'ಕ್ಯೂಸಿ' ಇ-ಸ್ಕೂಟರ್‌ನ್ನು ಖರೀದಿಸಲು ಪ್ಲ್ಯಾನ್ ಮಾಡಿದ್ದೀರಾ.. ನಾವಿಲ್ಲಿ ಈ ನೂತನ ಸ್ಕೂಟರ್‌ನ ಆನ್-ರೋಡ್ ಬೆಲೆ (On-Road Price) ಮತ್ತು ಇಎಂಐ (EMI) ಆಯ್ಕೆಯ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿಕೊಟ್ಟಿದ್ದೇವೆ.

ಪತಾಂಜಲಿಯಿಂದ ಬೃಹತ್ ಆರ್ಡರ್ ಬಾಚಿಕೊಂಡ ಅಶೋಕ್‌ ಲೇಲ್ಯಾಂಡ್!

ಹಿಂದೂಜಾ ಗ್ರೂಪ್‌ನ ಭಾರತದ ಪ್ರಮುಖ ಕಂಪನಿ ಮತ್ತು ದೇಶದ ಪ್ರಮುಖ ವಾಣಿಜ್ಯ ವಾಹನ ತಯಾರಕ ಬ್ರಾಂಡ್ ಆಗಿರುವ ಅಶೋಕ್ ಲೇಲ್ಯಾಂಡ್ (Ashok Leyland), ತಮ್ಮ ಅತ್ಯಾಧುನಿಕ ಟ್ರಕ್‌ಗಳನ್ನು ಪ್ರಮುಖ ಲಾಜಿಸ್ಟಿಕ್ಸ್ ಆದ M/S ಪತಂಜಲಿ ಪರಿವಾಹನ್ ಪ್ರೈವೇಟ್ ಲಿಮಿಟೆಡ್‌ಗೆ ತಲುಪಿಸಲು ಬೃಹತ್ ಆರ್ಡರ್ ಪಡೆದುಕೊಂಡಿದೆ. ಈ ಮೈಲಿಗಲ್ಲು ಎರಡು ಕಂಪನಿಗಳ ನಡುವಿನ ಪಾಲುದಾರಿಕೆಯನ್ನು ಬಲಪಡಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ. ವಿಶ್ವಾಸಾರ್ಹ ಪೂರೈಕೆದಾರರಾಗಿ ಅಶೋಕ್ ಲೇಲ್ಯಾಂಡ್‌ನ ಸ್ಥಾನವನ್ನು ಬಲಪಡಿಸುತ್ತದೆ ಎಂದು ಹಿಂದೂಜಾ ಗ್ರೂಪ್‌ ಹೇಳಿಕೊಂಡಿದೆ.

TATA ನಂ.1 ಆಗುತ್ತಾ?.. ಬಿಡುಗಡೆಗೆ ಸಿದ್ದಗೊಳ್ಳುತ್ತಿವೆ 3 ಹೊಸ..

ಟಾಟಾ ಮೋಟಾರ್ಸ್ (Tata Motors) ಪ್ರಖ್ಯಾತ ಸ್ವದೇಶಿ ವಾಹನ ತಯಾರಕ ಕಂಪನಿಯಾಗಿದ್ದು, ದೇಶೀಯ ಮಾರುಕಟ್ಟೆಯಲ್ಲಿ ವಿವಿಧ ಕಾರುಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಇವುಗಳು ಸುರಕ್ಷತೆಗಾಗಿ ಹೆಸರುವಾಸಿಯಾಗಿದ್ದು, ಗ್ರಾಹಕರು ಕೂಡ ಮುಗಿಬಿದ್ದು ಕೊಂಡುಕೊಳ್ಳುತ್ತಿದ್ದಾರೆ. ಸದ್ಯ ಕಂಪನಿಯು 3 ಹೊಚ್ಚ ಹೊಸ ಎಸ್‌ಯುವಿಗಳನ್ನು ಅದ್ದೂರಿಯಾಗಿ ಮಾರಾಟಕ್ಕೆ ತರಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದರೊಂದಿಗೆ ಪ್ರಯಾಣಿಕ ವಾಹನ (Passenger Vehicle) ವಿಭಾಗದಲ್ಲಿ ನಂಬರ್ 1 ಸ್ಥಾನಕ್ಕೂ ಬರಲು ಹಣಿಯಾಗುತ್ತಿದೆ. ಬನ್ನಿ, ನೂತನ ಕಾರುಗಳ ಬೆಲೆ ಎಷ್ಟಿರಲಿದೆ.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಕ್ಷಿಪ್ತವಾದ ವಿವರಗಳನ್ನು ತಿಳಿಯೋಣ.

ವಿಶ್ವದಲ್ಲೇ ಇದೇ ಮೊದಲು: ಜನಪ್ರಿಯ ಎಸ್‌ಯುವಿನಲ್ಲಿ 'ಡಾಲ್ಬಿ ಅಟ್ಮೋಸ್'

ಮನರಂಜನಾ ಅನುಭವಗಳಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿರುವ ಡಾಲ್ಬಿ ಲ್ಯಾಬೋರೇಟರೀಸ್ ಮತ್ತು ಭಾರತದ ಪ್ರಮುಖ ಎಸ್‌ಯುವಿ ತಯಾರಕರಾದ ಮಹೀಂದ್ರಾ, ಇಂದು ಮಹೀಂದ್ರಾ ಥಾರ್ ರೋಕ್ಸ್ ಎಎಕ್ಸ್‌7ಎಲ್ (Thar ROXX AX7L) ವೇರಿಯೆಂಟ್‌ನಲ್ಲಿ ಡಾಲ್ಬಿ ಅಟ್ಮೋಸ್‌ನ ಪಾದಾರ್ಪಣೆಯನ್ನು ಘೋಷಿಸಿವೆ. ಜಾಗತಿಕ SUV ಮಾರುಕಟ್ಟೆಯಲ್ಲಿ ಡಾಲ್ಬಿ ಅಟ್ಮೋಸ್‌ನಿಂದ ನಡೆಸಲ್ಪಡುವ 4-ಚಾನೆಲ್ ಇಮ್ಮರ್ಸಿವ್ ಆಡಿಯೊವನ್ನು ವಾಹನಕ್ಕೆ ಸಂಯೋಜಿಸುತ್ತಿರುವುದು ಇದೇ ಮೊದಲ ಬಾರಿಯಾಗಿದೆ. ಈ ಮೂಲಕ ಥಾರ್ ರೋಕ್ಸ್ ಎಸ್‌ಯುವಿಯೊಳಗೆ ಥಿಯೇಟರ್ ಸೌಂಡ್ ಅನ್ನು ಅನುಭವಿಸಬಹುದು ಎಂದು ಕಂಪನಿ ಹೇಳಿದೆ.
Advertisement

ಆಕರ್ಷಕ ಫೀಚರ್ಸ್.. 2 ಲಕ್ಷ ಯುನಿಟ್ ಸೇಲ್ ಆಯ್ತು Nissan Suv!

ನಿಸ್ಸಾನ್ ಮ್ಯಾಗ್ನೈಟ್ (Nissan Magnite) ಪ್ರಮುಖ ಕಾಂಪ್ಯಾಕ್ಟ್ ಎಸ್‍ಯುವಿಯಾಗಿದೆ. ಪ್ರತಿ ತಿಂಗಳು ಉತ್ತಮ ಸಂಖ್ಯೆಯಲ್ಲಿ ಮಾರಾಟವಾಗುವುದರೊಂದಿಗೆ 'ಗೇಮ್ ಚೇಂಜರ್' ಕಾರಾಗಿಯೂ ಹೊರಹೊಮ್ಮಿದೆ. ಇದು ಹೆಚ್ಚು ಅತ್ಯಾಧುನಿಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಕೈಗೆಟುಕುವ ಬೆಲೆಯಲ್ಲಿಯೂ ಸಿಗುವುದರಿಂದ ಗ್ರಾಹಕರು ಕೂಡ ಮುಗಿಬಿದ್ದು ಕೊಂಡುಕೊಳ್ಳುತ್ತಿದ್ದಾರೆ. ಸದ್ಯ, ಕಂಪನಿಯು 'ಮ್ಯಾಗ್ನೈಟ್' ಎಸ್‍ಯುವಿ ಮಾರಾಟದಲ್ಲಿ ಹೊಸ ಇತಿಹಾಸ ಬರೆದಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

Suzuki e-Access: ಎಲೆಕ್ಟ್ರಿಕ್ ಆಕ್ಸಿಸ್ ಕನ್ನಡ ರಿವ್ಯೂ ವಿಡಿಯೋ...

ಭಾರತದಲ್ಲಿ ಈಗಾಗಲೇ ಬಹುತೇಕ ಎಲ್ಲಾ ಜನಪ್ರಿಯ ದ್ವಿಚಕ್ರ ವಾಹನ ಬ್ರಾಂಡ್‌ಗಳು ಎಲೆಕ್ಟ್ರಿಕ್ ವಾಹನಗಳನ್ನು ಹೊಂದಿವೆ. ಇತ್ತೀಚೆಗೆ ಹೋಂಡಾ ಕೂಡ ತನ್ನ ಆಕ್ಟೀವಾ ಎಲೆಕ್ಟ್ರಿಕ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಆದರೆ ಸುಜುಕಿ ಮಾತ್ರ ಈವೆರೆಗೆ ಎಲೆಕ್ಟ್ರಿಕ್ ವಾಹನವನ್ನು ಬಿಡುಗಡೆ ಮಾಡಿಲ್ಲ. ಇದೀಗ ತನ್ನ ಜನಪ್ರಿಯ ಆಕ್ಸಿಸ್ ಸ್ಕೂಟರ್ ಅನ್ನು ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಇದೆ ವರ್ಷದ ಆರಂಭದಲ್ಲಿ ನಡೆದ ಆಟೋ ಎಕ್ಸ್‌ಪೋ 2025 ರಲ್ಲಿ ಎಲೆಕ್ಟ್ರಿಕ್ ಆಕ್ಸಿಸ್ ಅನ್ನು ಬಹಿರಂಗಪಡಿಸಿತ್ತು. ಇನ್ನೇನು ಬಿಡುಗಡೆಗೆ ಸಜ್ಜಾಗಿರುವ ಸಮಯದಲ್ಲಿ ಆಕ್ಸಿಸ್ ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ ಮಾಡಲು ನಮನ್ನು ಆಹ್ವಾನಿಸಿದೆ.

Honda: 11 ವರ್ಷಗಳಿಂದ ಬಡವರ ಬಂಡಿ: ಈಗ ಯಾರೂ ಖರೀದಿಸುತ್ತಿಲ್ಲ

ಹೋಂಡಾ ಕಂಪನಿಯು ತನ್ನ ಅತ್ಯಂತ ಕೈಗೆಟುಕುವ ಎಂಟ್ರಿ ಲೆವೆಲ್ ಮೋಟಾರ್ ಸೈಕಲ್‌ಗಳಲ್ಲಿ ಒಂದಾದ ಸಿಡಿ 110 ಡ್ರೀಮ್ ಮಾರಾಟವನ್ನು ಅಧಿಕೃತವಾಗಿ ಸ್ಥಗಿತಗೊಳಿಸಿದೆ. ಈ ಬೈಕ್ ಕಳೆದ ಹನ್ನೊಂದು ವರ್ಷಗಳಿಂದ ದೇಶಿಯ ಮಾರುಕಟ್ಟೆಯಲ್ಲಿ ಜನಪ್ರಿಯತೆ ಗಳಿಸಿದೆ. ಬಜೆಟ್ ಸ್ನೇಹಿ ಬೆಲೆ ಮತ್ತು ಉತ್ತಮ ಫೀಚರ್ಸ್ ಹೊರತಾಗಿಯೂ, ಸಿಡಿ 110 ಡ್ರೀಮ್ ಇತ್ತೀಚಿನ ವರ್ಷಗಳಲ್ಲಿ ಖರೀದಿದಾರರನ್ನು ಆಕರ್ಷಿಸುವಲ್ಲಿ ವಿಫಲವಾಗಿದೆ. ಇದು ಹೋಂಡಾ ಕಂಪನಿಯಿಂದ ಖರೀದಿಗೆ ಲಭ್ಯವಿರುವ ಅತ್ಯಂತ ಕೈಗೆಟುಕುವ ವಾಹನಗಳಲ್ಲಿ ಒಂದಾಗಿದ್ದರೂ ಸರಿಯಾದ ಮಾರಾಟವಿಲ್ಲದಿರುವುದರಿಂದ ಬೈಕ್ ಅನ್ನು ಸ್ಥಗಿತಗೊಳಿಸಿರುವುದಾಗಿ ತಿಳಿದುಬಂದಿದೆ.

21 Km ಮೈಲೇಜ್.. 5 ಸೀಟರ್.. ಈ 'Mahindra Suv' ಬೇಕೆಂದು ಹಠ ಹಿಡಿದ..

ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್ಒ (Mahindra XUV 3XO) ಜನಪ್ರಿಯ ಎಸ್‌ಯುವಿಯಾಗಿ ಹೊರಹೊಮ್ಮಿದ್ದು, ದಿನದಿಂದ ದಿನಕ್ಕೆ ಉತ್ತಮ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಗ್ರಾಹಕರು ಕೂಡ ನಾಮುಂದು - ತಾಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಅದನ್ನು ಪುಷ್ಟಿಕರಿಸುವಂತೆ ಏಪ್ರಿಲ್‌ನಲ್ಲಿ 7,568 ಯುನಿಟ್, ಮಾರ್ಚ್‌ನಲ್ಲಿ 7,055 ಯುನಿಟ್, ಫೆಬ್ರವರಿಯಲ್ಲಿ 7,861 ಯುನಿಟ್ ಹಾಗೂ ಜನವರಿಯಲ್ಲಿ 8,454 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಈ ಮೇ ತಿಂಗಳಲ್ಲೂ 'ಎಕ್ಸ್‌ಯುವಿ 3ಎಕ್ಸ್ಒ'ಗೆ ಭಾರೀ ಬೇಡಿಕೆಯಿದ್ದು, ಇದರ ವಿವಿಧ ರೂಪಾಂತರಗಳನ್ನು (ವೇರಿಯೆಂಟ್) ವಿತರಣೆ ಪಡೆಯಲು ಒಂದಷ್ಟು ಸಮಯ ಕಾಯಲೇಬೇಕು.
Advertisement

Suzuki e-Access: ಸುಜುಕಿ ಎಲೆಕ್ಟ್ರಿಕ್ ಆಕ್ಸಿಸ್ ರಿವ್ಯೂ

ಇದೆ ವರ್ಷದ ಆರಂಭದಲ್ಲಿ ನಡೆದ ಆಟೋ ಎಕ್ಸ್‌ಪೋ 2025 ರಲ್ಲಿ ಹಲವು ಬ್ರ್ಯಾಂಡ್‌ಗಳು ಎಲೆಕ್ಟ್ರಿಕ್ ವಾಹನಗಳನ್ನು ಬಹಿರಂಗಪಡಿಸಿದ್ದವು. ಜಪಾನಿನ ದ್ವಿಚಕ್ರ ವಾಹನ ತಯಾರಕ ಸುಜುಕಿ ಗಿಕ್ಸರ್ 250 ಫ್ಲೆಕ್ಸ್-ಫ್ಯೂಲ್ ಆವೃತ್ತಿ ಸಹ ಬಹಿರಂಗಗೊಂಡಿತ್ತು. ಹೊಸ ಆಕ್ಸಿಸ್ 125 ಎಲೆಕ್ಟ್ರಿಕ್ ಆವೃತ್ತಿ ಕೂಡ ಅನಾವರಣಗೊಂಡಿತ್ತು. ಇದೀಗ 4 ತಿಂಗಳ ನಂತರ, ಸುಜುಕಿ ಇ-ಆಕ್ಸೆಸ್ ಬಿಡುಗಡೆಯಾಗಲು ಸಜ್ಜಾಗಿದೆ. ಈ ಆಕರ್ಷಕ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಓಡಿಸಿ ರಿವ್ಯೂ ನೀಡಲು ಕಂಪನಿ ನಮ್ಮನ್ನು ಆಹ್ವಾನಿಸಿದೆ. ಆದ್ದರಿಂದ, ಬೆಂಗಳೂರಿನಲ್ಲಿ ಕೆಲವು ಗಂಟೆಗಳ ಕಾಲ ಸುಜುಕಿ ಇ-ಆಕ್ಸಿಸ್ ಅನ್ನು ಪರೀಕ್ಷಿಸಿದ ಬಳಿಕ ನಮ್ಮ ಅಭಿಪ್ರಾಯಗಳನ್ನು ಇಲ್ಲಿ ವಿವರಿಸಿದ್ದೇವೆ.

TVS: ಪ್ರಖ್ಯಾತ 'ಟಿವಿಎಸ್ ಅಪಾಚೆ' ಬೈಕ್‌ಗಾಗಿ ಕ್ಯೂ ನಿಂತ ಗ್ರಾಹಕರು..

ಟಿವಿಎಸ್ ಅಪಾಚೆ (TVS Apache) ಜನಪ್ರಿಯ ಪ್ರೀಮಿಯಂ ಮೋಟಾರ್‌ಸೈಕಲ್ ಆಗಿ ಹೊರಹೊಮ್ಮಿದೆ. ಇದು ಹೆಚ್ಚು ಆಕರ್ಷಕವಾಗಿದ್ದು, ಗ್ರಾಹಕರು ಕೂಡ ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ. ಈ ಏಪ್ರಿಲ್ ತಿಂಗಳಲ್ಲೂ ಇದೇ 'ಅಪಾಚೆ' ಬೈಕ್ ಉತ್ತಮ ಸಂಖ್ಯೆಯಲ್ಲಿಯೂ ಮಾರಾಟಗೊಂಡಿದೆ. ಅದಕ್ಕೆ ಸಾಕ್ಷಿ ಎಂಬಂತೆ ದೇಶೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾದ ಪ್ರಮುಖ 10 ಮೋಟಾರ್‌ಸೈಕಲ್‌ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ಹೀರೋ ಸ್ಪ್ಲೆಂಡರ್, ಎರಡನೇ ಸ್ಥಾನದಲ್ಲಿ ಹೋಂಡಾ ಶೈನ್ ಹಾಗೂ ಮೂರನೇ ಸ್ಥಾನದಲ್ಲಿ ಪಲ್ಸರ್ ಬೈಕ್ ಇದೆ.

ಯುವಕರ ಹಾಟ್‌ಫೆವರೆಟ್ MY25 ಕವಾಸಕಿ ನಿಂಜಾ 300 ಬಿಡುಗಡೆ

ಜಾಗತಿಕವಾಗಿ ಸ್ಪೋರ್ಟಿ ಮೋಟಾರ್‌ಸೈಕಲ್‌ಗಳ ತಯಾರಿಕೆಯಲ್ಲಿ ಜನಪ್ರಿಯತೆ ಪಡೆದಿರುವ ಕವಾಸಕಿ ಕಂಪನಿಯು ಮತ್ತೊಮ್ಮೆ ಭಾರತದಲ್ಲಿ ಸದ್ದು ಮಾಡಲು ಸಜ್ಜಾಗಿದೆ. ಈ ಭಾರೀ ತನ್ನ ನಿಂಜಾ 300 ನೊಂದಿಗೆ ಹೊಸ ಅಪ್‌ಡೇಟ್‌ಗಳನ್ನು ನೀಡಿ ಯುವಕರ ಗಮನ ಸೆಳೆಯಲು ಎಂಟ್ರಿಕೊಟ್ಟಿದೆ. ಹೌದು, ಕವಾಸಕಿ ಮೋಟಾರ್ಸ್ ಭಾರತದ ಅತ್ಯಂತ ಪ್ರಸಿದ್ಧ ಆರಂಭಿಕ ಮಟ್ಟದ ಸ್ಪೋರ್ಟ್ಸ್ ಮೋಟಾರ್‌ಸೈಕಲ್‌ಗಳಲ್ಲಿ ಒಂದಾದ MY25 ನಿಂಜಾ 300 ಬೈಕ್‌ನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದು ಕವಾಸಕಿ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದ್ದು, ಹೊಸ ಬೈಕ್ ಯಾವೆಲ್ಲಾ ಅಪ್‌ಡೇಟ್‌ಗಳನ್ನು ಪಡೆದಿದೆ ಎಂಬುದರ ಬಗ್ಗೆ ಕುತೂಹಲ ಹೆಚ್ಚಾಗಿದೆ.

TVS Jupiter 125: ಡಬಲ್ ಬಣ್ಣದ ಹೊಸ ಟಿವಿಎಸ್ ಜೂಪಿಟರ್ 125 ಬಿಡುಗಡೆ

ಟಿವಿಎಸ್ ಮೋಟಾರ್ ಕಂಪನಿಯು ತನ್ನ ಜೂಪಿಟರ್ 125 ಸ್ಕೂಟರ್‌ಗೆ ಹೊಸ ಸ್ಟೈಲ್ ಅಪ್‌ಗ್ರೇಡ್‌ಗಳು ಮತ್ತು ಸ್ಮಾರ್ಟ್‌ ಎಕ್ಸ್‌ ಕನೆಕ್ಟ್ ವೈಶಿಷ್ಟ್ಯಗಳೊಂದಿಗೆ ಬಿಡುಗಡೆ ಮಾಡಿದೆ. ಈಗ ಹೊಸ ಟಿವಿಎಸ್ ಜೂಪಿಟರ್ 125 ಸ್ಮಾರ್ಟ್ ಸ್ಮಾರ್ಟ್‌ ಎಕ್ಸ್‌ ಕನೆಕ್ಟ್ (TVS Jupiter 125 Dual Tone SmartXonnect) ಸ್ಕೂಟರ್ ವಿನ್ಯಾಸ ಮತ್ತು ಆಧುನಿಕ ವೈಶಿಷ್ಟ್ಯಗಳೊಂದಿಗೆ, ಐವರಿ ಬ್ರೌನ್ ಮತ್ತು ಐವರಿ ಗ್ರೇ ಎಂಬ ಎರಡು ಆಕರ್ಷಕ ಡ್ಯುಯಲ್ - ಟೋನ್ ಬಣ್ಣದ ಆಯ್ಕೆಗಳನ್ನು ಸಹ ಪರಿಚಯಿಸಲಾಗಿದೆ.
Advertisement

Tata: ಜೂನ್ 3 ರಂದು 'ಗಜ' ಗಾತ್ರದ ಟಾಟಾ ಹ್ಯಾರಿಯರ್ ಇವಿ ಬಿಡುಗಡೆ..

ಬಹುನಿರೀಕ್ಷಿತ ಟಾಟಾ ಹ್ಯಾರಿಯರ್ ಇವಿ (Tata Harrier EV), ಇದೇ ಜೂನ್ 3 ರಂದು ಬಿಡುಗಡೆಯಾಗಲಿದೆ. ಈ ಕಾರನ್ನು ಮಾರಾಟಕ್ಕೆ ತರಲು ಕಂಪನಿ ಕೂಡ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ಡೀಸೆಲ್ ಚಾಲಿತ ಹ್ಯಾರಿಯರ್ ಎಸ್‌ಯುವಿಗೆ ಹೋಲಿಕೆ ಮಾಡಿದರೆ, ನೂತನ ಎಲೆಕ್ಟ್ರಿಕ್ ಕಾರು ಹಲವು ಹೊಸತನಗಳಿಗೂ ಸಾಕ್ಷಿಯಾಗಿರಲಿದೆ. ಬನ್ನಿ, ಈ 'ಹ್ಯಾರಿಯರ್ ಇವಿ'ಯ ಬೆಲೆ ಎಷ್ಟಿರಲಿದೆ.. ಯಾವೆಲ್ಲ ವಿಶೇಷತೆಗಳನ್ನು ಹೊಂದಿರಲಿದೆ ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

ಬ್ರೋ: 7-ಸೀಟರ್.. 'Scorpio N'ಗೆ ಫುಲ್ ಡಿಮ್ಯಾಂಡ್.. ಮನೆಗೆ ತರಲು..

ಮಹೀಂದ್ರಾ ಸ್ಕಾರ್ಪಿಯೋ ಎನ್ (Mahindra Scorpio N) ಪ್ರಮುಖ ಎಸ್‌ಯುವಿಯಾಗಿ ಹೊರಹೊಮ್ಮಿದೆ. ಇದು ಕೈಗೆಟುಕುವ ಬೆಲೆಯಲ್ಲಿ ಸಿಗಲಿದ್ದು, ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಈಗಲೂ ಈ 'ಸ್ಕಾರ್ಪಿಯೋ ಎನ್'ಗೆ ಭಾರೀ ಬೇಡಿಕೆಯಿದ್ದು, ಇವತ್ತು ಬುಕ್ಕಿಂಗ್ ಮಾಡಿದರೂ ವಿತರಣೆ ಪಡೆಯಲು ಖರೀದಿದಾರರು ಒಂದಷ್ಟು ದಿನಗಳು ಕಾಯಲೇ ಬೇಕು. ಸದ್ಯ, ಇದೇ ಕಾರಿನ ಕಾಯುವಿಕೆ ಅವಧಿ (Waiting Period) ಕುರಿತ ಒಂದಷ್ಟು ವಿವರಗಳು ಪ್ರಕಟಗೊಂಡಿವೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

Jeep: ಫುಲ್ ಡಿಮ್ಯಾಂಡ್... ಕೆಲವೆ ದಿನಗಳಲ್ಲಿ ಎಲ್ಲಾ ಕಾರುಗಳು ಮಾರಾಟ!

ಬಿಡುಗಡೆಯಾದ ಕೆಲವೇ ವಾರಗಳಲ್ಲಿ ಜೀಪ್ ವ್ರಾಂಗ್ಲರ್ ವಿಲ್ಲಿಸ್ ಲಿಮಿಟೆಡ್ ಎಡಿಷನ್ ಸಂಪೂರ್ಣವಾಗಿ ಮಾರಾಟವಾಗಿವೆ ಎಂದು ಜೀಪ್ ಇಂಡಿಯಾ ತಿಳಿಸಿದೆ. ನಿಜವಾದ ಆಫ್-ರೋಡ್ ಪ್ರಿಯರು ಮತ್ತು ಪರ್ಫಾಮೆನ್ಸ್ ಇಷ್ಟಪಡುವವರಿಗಾಗಿ ಈ ಜೀಪ್ ವ್ರಾಂಗ್ಲರ್ ವಿಲ್ಲೀಸ್ ಲಿಮಿಟೆಡ್ ಎಡಿಷನ್ ಅನ್ನು ಇತ್ತೀಚೆಗೆ ಪರಿಚಯಿಸಲಾಗಿತ್ತು. ಜೀಪ್‌ನ ಐಕಾನಿಕ್ ಪರಂಪರೆಗೆ ಹೇಳಿಮಾಡಿಸಿದ ಈ ಲಿಮಿಟೆಡ್ ಎಡಿಷನ್ ಮಾಡಲ್, ಭಾರತದಾದ್ಯಂತ ಚಾಲನಾ ಉತ್ಸಾಹಿಗಳಲ್ಲಿ ಆಫ್-ರೋಡಿಂಗ್‌ಗೆ ಅಪಾರ ಉತ್ಸಾಹವನ್ನು ಹುಟ್ಟುಹಾಕಿದ್ದು, ಭಾರತದಾದ್ಯಂತ ಕೇವಲ 30 ಕಾರುಗಳನ್ನು ಮಾತ್ರ ಮಾರಾಟ ಮಾಡಲಾಗುವುದು ಎಂದು ಹೇಳಿದ್ದೇ ತಡ ಎಲ್ಲಾ ಕಾರುಗಳು ಈಗ ಮಾರಾಟವಾಗಿಬಿಟ್ಟಿವೆ.

ಹೊಸ 'ರೆನಾಲ್ಟ್ ಕ್ವಿಡ್' ಎಲೆಕ್ಟ್ರಿಕ್ ಕಾರು..

ರೆನಾಲ್ಟ್ ಇಂಡಿಯಾ (Renault India) ಪ್ರಮುಖ ಕಾರು ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಕ್ವಿಡ್, ಕಿಗರ್ ಮತ್ತು ಟ್ರೈಬರ್ ಕಾರುಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಸದ್ಯ, ಕಂಪನಿಯು ಹೊಚ್ಚ ಹೊಸ ಎಲೆಕ್ಟ್ರಿಕ್ ಕಾರೊಂದನ್ನು ಮಾರಾಟಕ್ಕೆ ತರಲು ಸಕಲ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ. ಎಲ್ಲವು ಅಂದುಕೊಂಡಂತೆ ನಡೆದರೆ, ಅತಿ ಶೀಘ್ರದಲ್ಲಿ 'ಕ್ವಿಡ್ ಇವಿ'ಯು ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಬನ್ನಿ, ಆ ಕುರಿತಂತೆ ಹೆಚ್ಚಿನ ವಿವರಗಳನ್ನು ತಿಳಿಯೋಣ.
Advertisement

RRR ನಟನಿಗೆ ಬೆಸ್ಟ್ ಆಫರ್ ಕೊಟ್ಟ ಭಾರತೀಯ ಬ್ರ್ಯಾಂಡ್: ಬಾಲಿವುಡ್ ಶಾಕ್

ಪ್ರಮುಖ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾಗಿರುವ ಬಿಗೌಸ್ (BGauss), ತನ್ನ ಬ್ರಾಂಡ್ ಅಂಬಾಸಿಡರ್ ಆಗಿ ಬಾಲಿವುಡ್ ನಟ ಅಜಯ್ ದೇವಗನ್ ಅವರನ್ನು ನೇಮಕ ಮಾಡಿರುವುದಾಗಿ ಘೋಷಿಸಿದೆ. ಭಾರತದ ವೇಗವಾಗಿ ಬೆಳೆಯುತ್ತಿರುವ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ವಿಭಾಗದಲ್ಲಿ ಕಂಪನಿಯು ತನ್ನ ಅಸ್ತಿತ್ವವನ್ನು ವಿಸ್ತರಿಸುತ್ತಿರುವುದರಿಂದ ಈ ಪಾಲುದಾರಿಕೆಯು ಪ್ರಮುಖ ಮೈಲಿಗಲ್ಲಾಗಿದೆ. ಅಜಯ್ ದೇವಗನ್ ಅವರು ಆಕರ್ಷಕ ಸ್ಕ್ರೀನ್ ಪ್ರೆಸೆನ್ಸ್, ವಿಶ್ವಾಸಾರ್ಹತೆ ಮತ್ತು ಸಾಮೂಹಿಕ ಆಕರ್ಷಣೆಗೆ ಹೆಸರುವಾಸಿಯಾಗಿದ್ದಾರೆ. ಬಿಗೌಸ್‌ನ ಸ್ಮಾರ್ಟ್, ವಿಶ್ವಾಸಾರ್ಹ ಮತ್ತು ಭವಿಷ್ಯಕ್ಕೆ ಬೇಕಾದ ಎಲ್ಲಾ ಕೊಡುಗೆಗಳನ್ನು ನೀಡಲಿದ್ದಾರೆ ಎಂದು ಕಂಪನಿ ಹೇಳಿದೆ.

Suzuki Access 125: ಅಗ್ಗದ 'ಸುಜುಕಿ ಆಕ್ಸೆಸ್ 125' ಸ್ಕೂಟರ್‌ಗೆ..

ಸುಜುಕಿ ಆಕ್ಸೆಸ್ 125 (Suzuki Access 125) ಪ್ರಮುಖ ಸ್ಕೂಟರ್ ಆಗಿದೆ. ಗ್ರಾಹಕರು ಸಹ ನಾಮುಂದು - ತಾಮುಂದು ಎಂಬಂತೆ ಕೊಂಡುಕೊಳ್ಳುತ್ತಿದ್ದಾರೆ. ಅದಕ್ಕೆ ತಕ್ಕಂತೆ ಈ ಏಪ್ರಿಲ್ ತಿಂಗಳಲ್ಲೂ ಇದೇ 'ಆಕ್ಸೆಸ್' ಸ್ಕೂಟರ್ ಉತ್ತಮ ಸಂಖ್ಯೆಯಲ್ಲಿಯೂ ಮಾರಾಟಗೊಂಡಿದೆ. ಇದರೊಂದಿಗೆ ದೇಶೀಯವಾಗಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾದ ಪ್ರಮುಖ 10 ಸ್ಕೂಟರ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ತೀವ್ರ ಮಾರಾಟದ ಕುಸಿತದ ಬಳಿಕವು 'ಹೋಂಡಾ ಆಕ್ಟಿವಾ' ಮೊದಲ ಸ್ಥಾನದಲಿದ್ದು, 'ಟಿವಿಎಸ್ ಜೂಪಿಟರ್' ಎರಡನೇ ಸ್ಥಾನದಲ್ಲಿದೆ.

ಭಾರತದಲ್ಲಿ ನಂ.1 ಆಗಲು ಎಥರ್ ಖಡಕ್ ಪ್ಲಾನ್: ಹೊಸ ಪಾಲುದಾರಿಕೆ ಘೋಷಣೆ

ಭಾರತದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಎಥರ್ ಎನರ್ಜಿ ಮತ್ತು ಸೆಮಿಕಂಡಕ್ಟರ್ ಪರಿಹಾರಗಳಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿರುವ ಇನ್ಫಿನಿಯನ್ ಟೆಕ್ನಾಲಜೀಸ್ ಏಷ್ಯಾ ಪೆಸಿಫಿಕ್ ಪ್ರೈವೇಟ್ ಲಿಮಿಟೆಡ್, ಭಾರತದಲ್ಲಿ ಎಲೆಕ್ಟ್ರಿಕ್ ವಾಹನ (ಇವಿ) ಉದ್ಯಮದಲ್ಲಿ ಜಂಟಿಯಾಗಿ ನಾವೀನ್ಯತೆಯನ್ನು ಹೆಚ್ಚಿಸಲು ದಕ್ಷಿಣ ಕೊರಿಯಾದ ಸಿಯೋಲ್‌ನಲ್ಲಿ ತಿಳುವಳಿಕೆ ಒಪ್ಪಂದ (ಎಂಒಯು)ಕ್ಕೆ ಸಹಿ ಹಾಕಿವೆ. ಭಾರತದ ಬೆಳೆಯುತ್ತಿರುವ ಇವಿ ಪರಿಸರ ವ್ಯವಸ್ಥೆಗೆ ಕೊಡುಗೆ ನೀಡುವ ದೃಷ್ಟಿಯೊಂದಿಗೆ, ಲಘು ಎಲೆಕ್ಟ್ರಿಕ್ ವಾಹನಗಳು (ಎಲ್ಇವಿಗಳು), ಚಾರ್ಜಿಂಗ್ ಮೂಲಸೌಕರ್ಯ ಮತ್ತು ಸುರಕ್ಷತೆಯನ್ನು ಬೆಂಬಲಿಸಲು ಸೆಮಿಕಂಡಕ್ಟರ್ ತಂತ್ರಜ್ಞಾನಗಳನ್ನು ಮುಂದುವರಿಸುವುದರ ಮೇಲೆ ಈ ಸಹಯೋಗವು ಕೇಂದ್ರೀಕರಿಸುತ್ತದೆ.

TATA: ಹೊಸ ಟಾಟಾ ಆಲ್ಟ್ರೋಜ್ ಫೇಸ್‌ಲಿಫ್ಟ್ ಹ್ಯಾಚ್‌ಬ್ಯಾಕ್‌ಗೆ 3...

ಬಹುನಿರೀಕ್ಷಿತ 2025ರ ನೂತನ ಟಾಟಾ ಆಲ್ಟ್ರೋಜ್ ಫೇಸ್‌ಲಿಫ್ಟ್ (Tata Altroz Facelift) ಹ್ಯಾಚ್‌ಬ್ಯಾಕ್‌ನ್ನು ಈಚೆಗೆ ಅದ್ದೂರಿಯಾಗಿ ಮಾರಾಟಕ್ಕೆ ತರಲಾಯಿತು. ಈ ಕಾರು ರೂ.6.89 ಲಕ್ಷ ಆರಂಭಿಕ ದರವನ್ನು (ಎಕ್ಸ್-ಶೋರೂಂ) ಪಡೆದಿದೆ. 1.2-ಲೀ. ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್, 1.2-ಲೀ. ಸಿಎನ್‌ಜಿ ಹಾಗೂ 1.5-ಲೀ. ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್‌ನ್ನು ಹೊಂದಿದೆ. ಇದರಲ್ಲಿ 5 ಆಸನಗಳಿವೆ. 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಯ ದೃಷ್ಟಿಯಿಂದ 6 ಏರ್‌ಬ್ಯಾಗ್‌ಗಳನ್ನು ಪಡೆದಿದೆ. ನೀವು 'ಟಾಟಾ ಆಲ್ಟ್ರೋಜ್ ಫೇಸ್‌ಲಿಫ್ಟ್'ಗೆ ಪರ್ಯಾಯವಾಗಿ ಈ 3 ಕಾರುಗಳನ್ನು ಖರೀದಿ ಮಾಡಬಹುದು. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
Advertisement

ಸದ್ದಿಲ್ಲದೇ ಡೀಲರ್‌ಶಿಪ್‌ಗೆ ಬಂದೇ ಬಿಡ್ತು ಹೊಸ Hero Electric..

ಹೀರೋ ಮೋಟೋಕಾರ್ಪ್ (Hero MotoCorp), ಪ್ರಮುಖ ವಾಹನ ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ 'ವಿಡಾ' ರೇಂಜ್‌ನ ವಿವಿಧ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಸದ್ಯ, ವಿಡಾ ಲೈನ್ಅಪ್ ವಿಸ್ತರಿಸಲು ಕಂಪನಿಯು ಮುಂದಾಗಿದ್ದು, ಹೊಚ್ಚ ಹೊಸ ಇ-ಸ್ಕೂಟರ್‌ವೊಂದನ್ನು ಅತಿ ಶೀಘ್ರದಲ್ಲೇ ಅದ್ದೂರಿಯಾಗಿಯೂ ಬಿಡುಗಡೆಗೊಳಿಸಲಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.