ಬೆಂಗಳೂರಿನಲ್ಲಿ ನಾಲ್ಕನೇ 'ಹೀರೋ ಪ್ರೀಮಿಯಾ' ಡೀಲರ್‌ಶಿಪ್ ಉದ್ಘಾಟನೆ

ಅತಿದೊಡ್ಡ ಮೋಟಾರ್‌ ಸೈಕಲ್ ಮತ್ತು ಸ್ಕೂಟರ್ ತಯಾರಕ ಕಂಪನಿಯಾದ ಹೀರೋ ಮೋಟೋಕಾರ್ಪ್, ಗ್ರಾಹಕರಿಗೆ ತನ್ನ ಪ್ರೀಮಿಯಂ ಉತ್ಪನ್ನಗಳನ್ನು ಸುಲಭವಾಗಿ ಒದಗಿಸಲು ಬೆಂಗಳೂರಿನ ಬಾಣಸವಾಡಿಯ ಹೊರಮಾವು ಸಿಗ್ನಲ್ ಬಳಿ ಹೀರೋ ಪ್ರೀಮಿಯಾ ಡೀಲರ್‌ ಶಿಪ್ ಅನ್ನು ಉದ್ಘಾಟನೆ ಮಾಡಿದೆ. ಈ ಮೂಲಕ ಕಂಪನಿಯು ಕರ್ನಾಟಕದ ಬೆಂಗಳೂರಿನಲ್ಲಿ ತನ್ನ ನಾಲ್ಕನೇ ಹೀರೋ ಪ್ರೀಮಿಯಾ ಡೀಲರ್‌ ಶಿಪ್ ಅನ್ನು ಉದ್ಘಾಟಿಸಿದೆ. ಅಲ್ಲದೇ ಈ ಹೊಸ ಡೀಲರ್‌ಶಿಪ್ ಉದ್ಘಾಟನೆಗೊಳ್ಳುವ ಮೂಲಕ ಹೀರೋ ಮೋಟೋಕಾರ್ಪ್ ನ ಪ್ರೀಮಿಯಾ ಡೀಲರ್‌ಶಿಪ್ ಮಳಿಗೆಗಳ ಸಂಖ್ಯೆ 83ಕ್ಕೆ ಏರಿದೆ ಎಂದು ಕಂಪನಿ ಹೇಳಿದೆ.

ಬಡವರ ಐರಾವತ.. ಭಾರೀ ಸಂಖ್ಯೆಯಲ್ಲಿ 'Honda Shine' ಬೈಕ್ ಮಾರಾಟ..

ಹೋಂಡಾ ಶೈನ್ (Honda Shine) ಪ್ರಮುಖ ಬೈಕ್ ಆಗಿದೆ. ಇದು ತುಂಬಾ ಸರಳವಾದ ವಿನ್ಯಾಸವನ್ನು ಹೊಂದಿದ್ದು, ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಅತ್ಯಂತ ಅಗ್ಗದ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, ದಿನಬಳಕೆಗೂ ಹೆಚ್ಚು ಸೂಕ್ತವಾಗಿದೆ. ಹೀಗಾಗಿ ಬಡ ಹಾಗೂ ಮಧ್ಯಮ ವರ್ಗದ ಗ್ರಾಹಕರು ಮುಗಿಬಿದ್ದು ಕೊಂಡುಕುಳ್ಳುತ್ತಿದ್ದಾರೆ. ಈ ಏಪ್ರಿಲ್ ತಿಂಗಳು ವಿವಿಧ ಕಂಪನಿಗಳಿಗೆ ಸೇರಿದ ಬಹುತೇಕ ಎಲ್ಲ ಮೋಟಾರ್‌ಸೈಕಲ್‌ಗಳ ಮಾರಾಟ ಸಂಖ್ಯೆ ತೀವ್ರತರದಲ್ಲಿ ಕುಸಿತ ಕಂಡಿದೆ. ಅದರ ಹೊರತಾಗಿ 'ಶೈನ್' ಬೈಕ್‌ಗಳು ಹೇರಳವಾಗಿ ಬಿಕರಿಗೊಂಡಿವೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಹೊಸ ನಿಸ್ಸಾನ್ ಮ್ಯಾಗ್ನೈಟ್ ಈಗ CNG ಕಿಟ್‌ನೊಂದಿಗೆ ಲಭ್ಯ

ನಿಸ್ಸಾನ್ ಮೋಟಾರ್ ಇಂಡಿಯಾದ ಜನಪ್ರಿಯ SUV, ಹೊಸ ನಿಸ್ಸಾನ್ ಮ್ಯಾಗ್ನೈಟ್, ಈಗ ಸರ್ಕಾರದಿಂದ ಅನುಮೋದಿತ CNG ರೆಟ್ರೋಫಿಟ್‌ಮೆಂಟ್ ಕಿಟ್‌ನೊಂದಿಗೆ ಲಭ್ಯವಿದೆ. CNG ಕಿಟ್ ಅನ್ನು ದೇಶದ ನಿಯಂತ್ರಕ ಮಾನದಂಡಗಳ ಪ್ರಕಾರ ಮೋಟೋಜೆನ್ ಸಂಪೂರ್ಣವಾಗಿ ಅಭಿವೃದ್ಧಿಪಡಿಸಿ ತಯಾರಿಸಲಾಗಿದೆ. ಇದು ಗುಣಮಟ್ಟವನ್ನು ಖಚಿತಪಡಿಸುವುದಲ್ಲದೆ ಮೋಟೋಜೆನ್ ಕಿಟ್ ಘಟಕಗಳಿಗೆ ವಾರೆಂಟಿ ನೀಡುತ್ತದೆ. ಈ ಕಿಟ್‌ಗಳ ಫಿಟ್‌ಮೆಂಟ್ ಅನ್ನು ಸರ್ಕಾರಿ - ಅಧಿಕೃತ ಫಿಟ್‌ಮೆಂಟ್ ಕೇಂದ್ರಗಳಲ್ಲಿ ಕೈಗೊಳ್ಳಲಾಗುತ್ತದೆ. ಸಂಪೂರ್ಣ ರೆಟ್ರೋಫಿಟ್‌ಮೆಂಟ್ ರೂ. 74,999 ಹೆಚ್ಚುವರಿ ಬೆಲೆಯಲ್ಲಿ ಲಭ್ಯವಿದೆ ಎಂದು ಕಂಪನಿ ತಿಳಿಸಿದೆ.

Bajaj CNG Bike: ಬಜಾಜ್ ಸಿಎನ್‌ಜಿ ಬೈಕ್‌ಗೆ ಫುಲ್ ಡಿಮ್ಯಾಂಡ್

Bajaj CNG Bike: ಬಜಾಜ್ ಕಂಪನಿಯು ವಿಶ್ವದ ಮೊದಲ ಸಿಎನ್‌ಜಿ ಬೈಕ್ ಪರಿಚಯಿಸುವ ಮೂಲಕ ದ್ವಿಚಕ್ರ ವಾಹನ ವಲಯದಲ್ಲಿ ಹೊಸ ಅಲೆ ಎಬ್ಬಿಸಿತ್ತು. ಆರಂಭದಲ್ಲಿ ಭಾರೀ ನಿರೀಕ್ಷೆಗಳೊಂದಿಗೆ ಎಂಟ್ರಿ ಕೊಟ್ಟಿದ ಬಜಾಜ್ ಫ್ರೀಡಂ 125 ಸಿಎನ್‌ಜಿ (Bajaj Freedom 125 CNG) ಬೈಕ್, ನಂತರದ ದಿನಗಳಲ್ಲಿ ನಿಧಾನವಾಗಿ ಬೇಡಿಕೆ ಕಳೆದುಕೊಂಡಿತ್ತು. ಆದರೆ ಈಗ ಅಚ್ಚರಿಗೊಳಿಸುವಂತೆ ಮಾರಾಟದಲ್ಲಿ ಮುನ್ನುಗ್ಗುತ್ತಿದೆ. ಬಜಾಜ್ ಕಂಪನಿಯು ಜುಲೈ 2024 ರಲ್ಲಿ ಫ್ರೀಡಂ 125 ಸಿಎನ್‌ಜಿ ಬೈಕ್ ಬಿಡುಗಡೆ ಮಾಡಿತ್ತು. ಇದೀಗ ಕಳೆದ ಏಪ್ರಿಲ್‌ಗೆ ವಾಹನ ಬಂದು ಒಂಬತ್ತು ತಿಂಗಳು ಪೂರ್ಣಗೊಂಡಿದ್ದು, ಇಲ್ಲಿಯವರೆಗೆ ಬರೋಬ್ಬರಿ 50,000 ಬೈಕ್‌ಗಳು ಮಾರಾಟವಾಗಿವೆ ಎಂದು ವರದಿಯಾಗಿದೆ.
Advertisement

Tata Altroz Facelift: ಟಾಟಾ ಆಲ್ಟ್ರೋಜ್ ಫೇಸ್‌ಲಿಫ್ಟ್ ಕನ್ನಡ..

ಇತ್ತೀಚೆಗೆ ಹೊಚ್ಚ ಹೊಸ 2025ರ ಟಾಟಾ ಆಲ್ಟ್ರೋಜ್ ಫೇಸ್‌ಲಿಫ್ಟ್ (Tata Altroz Facelift) ಹ್ಯಾಚ್‌ಬ್ಯಾಕ್‌ನ್ನು ಬಿಡುಗಡೆಗೊಳಿಸಲಾಗಿತ್ತು. ಇದು ರೂ.6.89 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದ್ದು, ಆಕರ್ಷಕವಾದ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ನಮ್ಮ 'ಡ್ರೈವ್‌ಸ್ಪಾರ್ಕ್' ತಂಡಕ್ಕೆ ಈ ಕಾರಿನ ಟೆಸ್ಟ್ ಡ್ರೈವ್ ನಡೆಸುವ ಅವಕಾಶ ಕೂಡ ಲಭ್ಯವಾಗಿತು. ನಿಮಗಾಗಿ, ನೂತನ 'ಆಲ್ಟ್ರೋಜ್' ಕಾರು ಹೇಗಿದೆ ಎಂಬುದರ ಕುರಿತಂತೆ ಸಂಪೂರ್ಣವಾದ ವಿಡಿಯೋ ರಿವ್ಯೂ..

ಬೆಲೆ ಕೇವಲ 6.89 ಲಕ್ಷ: 2025 ಆಲ್ಟ್ರೋಜ್ ಬೇಸ್ ವೇರಿಯಂಟ್ ಮಾಹಿತಿ

ಟಾಟಾ ಮೋಟಾರ್ಸ್ ಇತ್ತೀಚೆಗಷ್ಟೆ ತನ್ನ ಬಹುನಿರೀಕ್ಷಿತ 2025 ರ ಟಾಟಾ ಆಲ್ಟ್ರೋಜ್ ಫೇಸ್‌ಲಿಫ್ಟ್ (Tata Altroz ​​facelift) ಹ್ಯಾಚ್‌ಬ್ಯಾಕ್ ಕಾರನ್ನು ಬಿಡುಗಡೆ ಮಾಡಿದೆ. ಒಂದು ಕಾರು ಬಿಡುಗಡೆಯಾದರೆ ಅದರ ಬೇಸ್‌ ವೇರಿಯೆಂಟ್‌ನೊಂದಿಗೆ ಮೂಲ ಬೆಲೆಯನ್ನು ಪರಿಚಯಿಸಲಾಗುತ್ತದೆ. ಬಹುತೇಕರು ಈ ಬೇಸ್‌ ವೇರಿಯೆಂಟ್ ಬಗ್ಗೆ ತಿಳಿದುಕೊಳ್ಳುವ ಉತ್ಸಾವನ್ನು ಹೊಂದಿರುತ್ತಾರೆ. ಹಾಗಾಗಿಯೇ ಇತ್ತೀಚೆಗೆ ಬಿಡುಗಡೆಯಾಗಿರುವ ಟಾಟಾ ಆಲ್ಟ್ರೋಜ್ ಬೇಸ್‌ ವೇರಿಯೆಂಟ್‌ನ ಬೆಲೆಯಿಂದ ಹಿಡಿದು ಫೀಚರ್ಸ್‌ವರೆಗೆ ಏನೆಲ್ಲಾ ವಿಶೇಷತೆಗಳನ್ನು ಹೊಂದಿದೆ ಎಂಬುದನ್ನು ಇಲ್ಲಿ ತಿಳಿಸಿದ್ದೇವೆ.

Tata Altroz Facelift Review: ಟಾಟಾ ಆಲ್ಟ್ರೋಜ್ ಫೇಸ್‌ಲಿಫ್ಟ್..

2019ರ ಸಾಮಾನ್ಯ ವರ್ಷವಾಗಿತ್ತು. ಆಗ ಕೊರೋನಾದ ಒಳ ಸುಳಿಯಲ್ಲಿ ಜಗತ್ತು ಸಿಲುಕಿಕೊಂಡಿರಲಿಲ್ಲ. ಯುರೋಪ್‌ನಲ್ಲಿ ಬೃಹತ್ ಕಾರು ಪ್ರದರ್ಶನಗಳನ್ನು ಅದ್ದೂರಿಯಾಗಿ ನಡೆಸಲಾಗುತ್ತಿತ್ತು. ಆ ವೇಳೆಯಲ್ಲಿ ಅಂದರೆ 2108ರ ಆಟೋ ಎಕ್ಸ್‌ಪೋದಲ್ಲಿ ಟಾಟಾ ಮೋಟಾರ್ಸ್, '45ಎಕ್ಸ್' ಕಾನ್ಸೆಪ್ಟ್ ಕಾರಿನ ಆಧಾರಿತ ಹೊಚ್ಚ ಹೊಸ 'ಆಲ್ಟ್ರೋಜ್' ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನ್ನು ಅನಾವರಣಗೊಳಿಸಿತ್ತು. ನಂತರದಲ್ಲಿ ಮಾರಾಟಕ್ಕೂ ತರಲಾಯಿತು. ಮರು ವರ್ಷ ದೇಶಾದ್ಯಂತ ಕಟ್ಟುನಿಟ್ಟಿನ ಎಮಿಷನ್ ಮಾನದಂಡಗಳನ್ನು ಜಾರಿಗೊಳಿಸಲಾಯಿತು. ಅದಕ್ಕೆ ಅನುಗುಣವಾಗಿ ಕಂಪನಿಯು ಆಲ್ಟ್ರೋಜ್ ಕಾರನ್ನು ಮೇಲ್ದರ್ಜೆರಿಸುತ್ತಲೇ ಇತ್ತು. ಜೊತೆಗೆ ಈ ಹ್ಯಾಚ್‌ಬ್ಯಾಕ್‌ನ ರೇಸರ್ & ಐಸಿಎನ್‌ಜಿ ರೂಪಾಂತರಗಳನ್ನು (ವೇರಿಯೆಂಟ್) ಸಹ ಬಿಡುಗಡೆಗೊಳಿಸಲಾಗಿತ್ತು.

ಕಡಿಮೆ ಬೆಲೆಗೆ 6-ಏರ್‌ಬ್ಯಾಗ್‌ಗಳೊಂದಿಗೆ ಸಿಗುವ ಸುರಕ್ಷಿತ ಕಾರುಗಳು!

ಭಾರತದಲ್ಲಿ ಸದ್ಯ ಅತ್ಯಂತ ಕಡಿಮೆ ಬೆಲೆಯಲ್ಲಿ 6 ಏರ್ ಬ್ಯಾಗ್‌ ಗಳನ್ನು ಹೊಂದಿರುವ ಕೈಗೆಟುಕುವ ಕಾರುಗಳು ಸಿಗುತ್ತಿವೆ. ಈ ಕಾರುಗಳು ನಿಮ್ಮ ಬಜೆಟ್ ಬೆಲೆಯಲ್ಲಿ ಸಿಗಲಿದ್ದು ಧೀರ್ಘ ಪ್ರಯಾಣಗಳನ್ನು ಮತ್ತಷ್ಟು ಸುರಕ್ಷಿತವಾಗಿಸುತ್ತವೆ. ಈ ಕಡಿಮೆ ಬೆಲೆಯ ಹ್ಯಾಚ್‌ಬ್ಯಾಕ್‌ಗಳನ್ನು ಖರೀದಿಸುವ ಮೂಲಕ ಕಾರು ಖರೀದಿಸುವ ಕನಸನ್ನು ನನಸಾಗಿಸಿಕೊಳ್ಳಬಹುದು. ಸದ್ಯ ಭಾರತದಲ್ಲಿ 6 ಲಕ್ಷ ರೂ.ಗಿಂತ ಕಡಿಮೆ ಬೆಲೆಯ ಕೆಲವು ಕಾರುಗಳು 6-ಏರ್‌ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಪಡೆಯುತ್ತಿವೆ. ಬನ್ನಿ ಯಾವೆಲ್ಲಾ ಕಾರುಗಳಿವೆ ನೋಡೋಣ.
Advertisement

11 ಲಕ್ಷ.. 6 ಸೀಟರ್.. ಈ 'ಮಾರುತಿ ಎಂಪಿವಿ'ಗೆ ಮೂರು ಪರ್ಯಾಯ..

ಮಾರುತಿ ಸುಜುಕಿ ಎಕ್ಸ್ಎಲ್6 (Maruti Suzuki XL6) ಜನಪ್ರಿಯ ಎಂಪಿವಿಯಾಗಿ ಹೊರಹೊಮ್ಮಿದೆ. ಇದು ಕನಿಷ್ಠ ರೂ.12 ಲಕ್ಷ ಮತ್ತು ಗರಿಷ್ಠ ರೂ.15 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಬಲಿಷ್ಠವಾದ 1.5-ಲೀ. ಪೆಟ್ರೋಲ್ & ಸಿಎನ್‌ಜಿ ಎಂಜಿನ್‌ನ್ನು ಪಡೆದಿದ್ದು, 20 ರಿಂದ 26 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಇದರಲ್ಲಿ 6 ಆಸನಗಳಿವೆ. ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಮತ್ತು ಆಟೋ ಎಸಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಗಾಗಿ 4 ಏರ್‌ಬ್ಯಾಗ್‌ಗಳನ್ನು ಹೊಂದಿದೆ. ನೀವು ಇದೇ 'ಎಕ್ಸ್ಎಲ್6' ಎಂಪಿವಿಗೆ ಬದಲಾಗಿ ಈ 3 ಕಾರುಗಳನ್ನು ಕೂಡ ಖರೀದಿ ಮಾಡಬಹುದು. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಹೊಸ BMW i7 ಗೆ ದೇಶಾದ್ಯಂತ ಏಕರೂಪದ ಬೆಲೆ ಘೋಷಣೆ: ನೋಂದಣಿ ವೆಚ್ಚವಿಲ್ಲ

ದೇಶಾದ್ಯಂತ ಗ್ರಾಹಕರ ಅನುಕೂಲಕ್ಕಾಗಿ BMW ಇಂಡಿಯಾ ತನ್ನ ಪ್ರಮುಖ ಎಲೆಕ್ಟ್ರಿಕ್ ಕಾರಾಗಿರುವ - BMW i7 ಮೇಲೆ ವಿಶಿಷ್ಟ ಕೊಡುಗೆಯನ್ನು ಪರಿಚಯಿಸಿದೆ. ನೋಂದಣಿ ಸ್ಥಳವನ್ನು (registration location) ಲೆಕ್ಕಿಸದೆ BMW i7 ಗೆ ಏಕರೂಪದ ಬೆಲೆಯನ್ನು ಒದಗಿಸುತ್ತಿದೆ. ವಿಶೇಷವಾಗಿ ವಿನ್ಯಾಸಗೊಳಿಸಲಾದ ಹೊಸ ಬೆಲೆ ನಿಗದಿಯಲ್ಲಿ, ಗ್ರಾಹಕರು BMW i7 ರಿಜಿಸ್ಟ್ರೇಷನ್ ವೆಚ್ಚವನ್ನು ಭರಿಸಬೇಕಾಗಿಲ್ಲ, ಈ ವೆಚ್ಚವನ್ನು BMW ಇಂಡಿಯಾ ಭರಿಸುತ್ತದೆ ಮತ್ತು ಅಧಿಕೃತ ಡೀಲರ್‌ಶಿಪ್ ನಿರ್ವಹಿಸುತ್ತದೆ ಎಂದು ಕಂಪನಿ ತಿಳಿಸಿದೆ.

Royal Enfield: ಈ ರಾಯಲ್ ಎನ್‌ಫೀಲ್ಡ್ ಬೈಕ್‌ಗೆ ಮುಗಿಬಿದ್ದ..

ರಾಯಲ್ ಎನ್‌ಫೀಲ್ಡ್ ಹಂಟರ್ 350 (Royal Enfield Hunter 350) ಪ್ರಮುಖ ಮೋಟಾರ್‌ಸೈಕಲ್‌ ಆಗಿದೆ. ಇದು ಹೆಚ್ಚಿನ ಆಕರ್ಷಕವಾದ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಕೈಗೆಟುಕುವ ಬೆಲೆಯಲ್ಲಿಯೂ ಖರೀದಿ ದೊರೆಯುತ್ತದೆ. ಗ್ರಾಹಕರು ಕೂಡ ತಾಮುಂದು - ನಾಮುಂದು ಎಂಬಂತೆ ಖರೀದಿಗೆ ಮಾಡುತ್ತಿದ್ದಾರೆ. ಅದಕ್ಕೆ ಪುಷ್ಟಿ ನೀಡುವಂತೆ, ಈ ಏಪ್ರಿಲ್ ತಿಂಗಳು ಇದೇ 'ಹಂಟರ್ 350' ಬೈಕ್ ದಾಖಲೆ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

Best EV Bikes: 1 ರೂ. ಖರ್ಚಿಲ್ಲದೆ ನಿತ್ಯ 100 ಕಿ.ಮೀ ಓಡಿಸಬಹದು

ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ವಿಭಾಗವು ಭಾರೀ ಬೇಡಿಕೆಯೊಂದಿಗೆ ಮುನ್ನುಗ್ಗುತ್ತಿದೆ. ಕೇವಲ ಸ್ಕೂಟರ್‌ಗಳು ಮಾತ್ರವಲ್ಲ ಇವಿ ಬೈಕ್‌ಗಳು ಕೂಡ ಗ್ರಾಹಕರಲ್ಲಿ ತುಂಬಾ ಜನಪ್ರಿಯತೆ ಗಳಿಸುತ್ತಿವೆ. ಅಗ್ಗದ ಬೆಲೆ, ಕಡಿಮೆ ನಿರ್ವಹಣ ವೆಚ್ಚ ಎಲ್ಲದಕ್ಕಿಂತ ಮುಖ್ಯವಾಗಿ ಪೆಟ್ರೋಲ್ ಖರ್ಚು ಇಲ್ಲದಿರುವುದರಿಂದ ಎಲೆಕ್ಟ್ರಿಕ್ ವಾಹನಗಳು ವೇಗವಾಗಿ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸುತ್ತಿವೆ. ಎಲೆಕ್ಟ್ರಿಕ್ ಸ್ಕೂಟರ್‌ಗಳು ಈ ವಿಭಾಗದಲ್ಲಿ ಹೆಚ್ಚು ಸದ್ದು ಮಾಡುತ್ತಿವೆ, ಆದರೆ ಮಾರುಕಟ್ಟೆಯಲ್ಲಿ ಎಲ್ಲಾ ಎಲೆಕ್ಟ್ರಿಕ್ ಮೋಟಾರ್ ಸೈಕಲ್‌ಗಳು ಸಹ ಲಭ್ಯವಿದೆ. 1 ಲಕ್ಷ ರೂ.ಗಿಂತ ಕಡಿಮೆ ಬೆಲೆಯ ಅತ್ಯಂತ ಕೈಗೆಟುಕುವ ಎಲೆಕ್ಟ್ರಿಕ್ ಮೋಟಾರ್ ಸೈಕಲ್‌ಗಳ ಪಟ್ಟಿ ಇಲ್ಲಿದೆ.
Advertisement

ಇನ್ನೂ 'Thar Roxx' ಎಸ್‌ಯುವಿಯನ್ನು ಬೇಗ ಮನೆಗೆ ತರಬಹುದು..

ಮಹೀಂದ್ರಾ ಥಾರ್ ರಾಕ್ಸ್ (Mahindra Thar Roxx) ಪ್ರಮುಖ ಆಫ್-ರೋಡ್ ಎಸ್‌ಯುವಿಯಾಗಿದ್ದು, ದೇಶೀಯ ರಸ್ತೆಯಲ್ಲಿ ಅಬ್ಬರಿಸುತ್ತಿದೆ. ಮಾರುತಿ ಸುಜುಕಿ ಜಿಮ್ನಿ ಹಾಗೂ ಫೋರ್ಸ್ ಗೂರ್ಖಾಗೆ ಪ್ರಬಲವಾದ ಸ್ಪರ್ಧೆಯೊಡ್ಡುತ್ತಿದೆ. ಇಲ್ಲಿವರೆಗೂ 'ಥಾರ್ ರಾಕ್ಸ್'ನ್ನು ವಿತರಣೆ ಪಡೆಯಲು ಗ್ರಾಹಕರು ಹಲವು ತಿಂಗಳ ಕಾಲ ತಾಳ್ಮೆಯಿಂದ ಕಾಯಬೇಕಾಗಿತ್ತು. ಅದರ ಹೊರತಾಗಿ ಇದೇ 'ಮೇ'ನಲ್ಲಿ ಈ ಥಾರ್ ರಾಕ್ಸ್ ಕಾಯುವಿಕೆ ಅವಧಿ (Waiting Period) ಬಹಳಷ್ಟು ಕಡಿಮೆಯಾಗಿದೆ. ಬನ್ನಿ, ಆ ಕುರಿತಂತೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಹುಡುಕಿ ಬಂತು ಅಂತರಾಷ್ಟ್ರೀಯ ಬ್ರಾಂಡ್

ಎಂಜಿನಿಯರಿಂಗ್ ಶ್ರೇಷ್ಠತೆ, ನಿರಂತರ ನಾವೀನ್ಯತೆ ಮತ್ತು ಮುಂದಾಲೋಚನೆಯ ವಿನ್ಯಾಸಕ್ಕಾಗಿ ಜಾಗತಿಕವಾಗಿ ಹೆಸರುವಾಸಿಯಾಗಿರುವ ಆಡಿ ಬ್ರ್ಯಾಂಡ್‌ನೊಂದಿಗೆ ಚಿನ್ನದ ಹುಡುಗ ನೀರಜ್ ಚೋಪ್ರಾ, ಪಾಲುದಾರಿಕೆ ಘೋಷಿಸಿದ್ದಾರೆ. ವಿಶ್ವ ದರ್ಜೆಯ ಪರ್ಫಾಮೆನ್ಸ್, ಸ್ಫೋಟಕ ವೇಗ ಮತ್ತು ಐಕಾನಿಕ್ ಡಿಸೈನ್‌ ಹೊಂದಿರುವ ಆಡಿ ಕಾರುಗಳ ಪರವಾಗಿ ನೀರಜ್ ನಿಲ್ಲಲಿದ್ದಾರೆ. ಈ ಪಾಲುದಾರಿಕೆಯು ಕ್ರೀಡಾಪಟು ಮತ್ತು ಬ್ರ್ಯಾಂಡ್ ನಡುವಿನ ಹಂಚಿಕೆಯ ಮೌಲ್ಯಗಳನ್ನು ತೋರಿಸುತ್ತದೆ. ಇದು ನಿಜವಾಗಿಯೂ ಭಾರತೀಯ ಕ್ರೀಡೆ ಮತ್ತು ವ್ಯವಹಾರಕ್ಕೆ ಒಂದು ಹೆಗ್ಗುರುತು ಪಾಲುದಾರಿಕೆಯಾಗಿದೆ ಎಂದು ಆಡಿ ಹೇಳಿಕೊಂಡಿದೆ.

ಗುಡ್‌ನ್ಯೂಸ್: ಶೀಘ್ರ 2 ಹೊಸ 'Toyota Suv'ಗಳು ಬಿಡುಗಡೆ.. ಯಾವುವು..

ಭಾರತದ ಪ್ರಮುಖ ಕಾರು ತಯಾರಕ ಕಂಪನಿಯಾಗಿ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (Toyota Kirloskar Motor) ಹೊರಹೊಮ್ಮಿದೆ. ದೇಶೀಯ ಮಾರುಕಟ್ಟೆಯಲ್ಲಿ ವಿವಿಧ ಹ್ಯಾಚ್‌ಬ್ಯಾಕ್, ಎಸ್‌ಯುವಿ ಹಾಗೂ ಎಂಪಿವಿಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಎಲ್ಲವು ಅಂದುಕೊಂಡಂತೆ ನಡೆದರೆ, ಈ ವರ್ಷಾಂತ್ಯದೊಳಗೆ ಹೆಚ್ಚು ಆಕರ್ಷಕವಾಗಿರುವ ಎರಡು ಹೊಚ್ಚ ಹೊಸ ಎಸ್‌ಯುವಿಗಳನ್ನು ಕೂಡ ಕಂಪನಿಯು ಅದ್ದೂರಿಯಾಗಿ ಮಾರಾಟಕ್ಕೆ ತರಲಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಎರಡು ಹೊಸ ಹೀರೋ ಎಲೆಕ್ಟ್ರಿಕ್ ಸ್ಕೂಟರ್‌ಗಳು ಬಿಡುಗಡೆ ಸಜ್ಜು

ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಬೇಡಿಕೆ ಹೆಚ್ಚುತ್ತಿದೆ, ಇದುವರೆಗು ಹೊಸ ಕಂಪನಿಗಳಾದ ಓಲಾ, ಎಥರ್, ಸಿಂಪಲ್ ಒನ್‌ನಂತಹ ಬ್ರಾಂಡ್‌ಗಳು ಅಬ್ಬರಿಸಿದ್ದವು. ಇದೀಗ ಇವಿಗಳಿಗೆ ಹೆಚ್ಚುತ್ತಿರುವ ಕ್ರೇಜ್ ಅನ್ನು ಮನಗಂಡಿರುವ ಪ್ರಮುಖ ಬ್ರಾಂಡ್‌ಗಳಾದ ಬಜಾಜ್, ಹೋಂಡಾ, ಟಿವಿಎಸ್ ಬ್ರಾಂಡ್‌ಗಳು ತಮ್ಮ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿ ಗ್ರಾಹಕರ ವಿಶ್ವಾಸ ಗಳಿಸಿವೆ. ಹೊಸ ಆಧುನಿಕ ಇವಿಗಳು ಮಾರುಕಟ್ಟೆಯಲ್ಲಿ ಇಳಿದರೆ ಸಾಕು ಪೈಪೋಟಿಯೊಂದಿಗೆ ಇತರ ಬ್ರಾಂಡ್‌ಗಳು ಇನ್ನೂ ಅತ್ಯಾಧುನಿಕ ಇವಿಗಳನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿವೆ. ಇದೀಗ ಹೀರೋ ತನ್ನ ಅತ್ಯಾಧುನಿಕ ಇವಿಯನ್ನು ಪರಿಚಯಿಸಲು ರೆಡಿಯಾಗಿದೆ.
Advertisement

Honda Activa: ಬೆಲೆಯೂ ಕಮ್ಮಿ.. ಆದರೂ 'ಹೋಂಡಾ ಆಕ್ಟಿವಾ' ಮಾರಾಟ..

ಹೋಂಡಾ ಆಕ್ಟಿವಾ (Honda Activa) ಪ್ರಮುಖ ಸ್ಕೂಟರ್ ಎಂದೇ ಹೆಸರುವಾಸಿಯಾಗಿದ್ದು, ಹಳ್ಳಿಯಿಂದ ದಿಲ್ಲಿವರೆಗೆ ಮನೆ ಮಾತಾಗಿದೆ. ಈ ಸ್ಕೂಟರ್‌ನ್ನು ಸಾಮಾನ್ಯರಿಂದ ಹಿಡಿದು ಶ್ರೀಮಂತರವರೆಗೆ ತಮ್ಮ ದಿನನಿತ್ಯದ ಬಳಕೆಗಾಗಿ ಖರೀದಿ ಮಾಡುತ್ತಾರೆ. ಹೀಗಾಗಿ, 'ಹೋಂಡಾ ಆಕ್ಟಿವಾ' ಸ್ಕೂಟರ್ ವಿಭಾಗದಲ್ಲಿ ಮೊದಲ ಸ್ಥಾನದಲ್ಲಿದೆ. ಅದರ ಹೊರತಾಗಿಯೂ ಈ ಏಪ್ರಿಲ್ ತಿಂಗಳಲ್ಲೂ ಇದೇ ಆಕ್ಟಿವಾದ ಮಾರಾಟ ಸಂಖ್ಯೆ ತೀವ್ರತರದಲ್ಲಿ ಕುಸಿತವಾಗಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

Toyota: ಟೊಯೋಟಾದ 2 ಕಾರುಗಳಿಗೆ ಫುಲ್ ಡಿಮ್ಯಾಂಡ್

ಪ್ರಮುಖ ಕಾರು ತಯಾರಕ ಕಂಪನಿಯಾದ ಟೊಯೋಟಾ (Toyota) ಮಹತ್ವದ ಮೈಲಿಗಲ್ಲು ಸಾಧಿಸಿದೆ. ತನ್ನ ಪ್ರಮುಖ ಎಸ್‌ಯುವಿಗಳಾದ ಫಾರ್ಚೂನರ್ ಮತ್ತು ಲೆಜೆಂಡರ್‌ನ 3 ಲಕ್ಷ ಯುನಿಟ್‌ ಕಾರುಗಳ ಮಾರಾಟ ಸಾಧಿಸಿರುವುದಾಗಿ ಘೋಷಿಸಿದೆ. 2009 ರಲ್ಲಿ ಪಾದಾರ್ಪಣೆ ಮಾಡಿದಾಗಿನಿಂದ ಟೊಯೋಟಾ ಫಾರ್ಚೂನರ್ ಎಸ್‌ಯುವಿ ವಿಭಾಗದಲ್ಲಿ ಮುನ್ನುಗ್ಗುತ್ತಿದೆ. ಪ್ರಭಾವಶಾಲಿ 204 ಪಿಎಸ್ ಪವರ್ ಮತ್ತು 500 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುವ ದೃಢವಾದ 2.8 ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಸಜ್ಜುಗೊಂಡಿರುವ ಫಾರ್ಚೂನರ್ ತನ್ನ ಅಸಾಧಾರಣ ಆಫ್-ರೋಡ್ ಸಾಮರ್ಥ್ಯದೊಂದಿಗೆ ಜನಪ್ರಿಯತೆ ಪಡೆದುಕೊಂಡಿದೆ.

Kia: 6 & 7-ಸೀಟರ್.. 11.49 ಲಕ್ಷ, ಹೊಸ 'ಕಿಯಾ ಕ್ಯಾರೆನ್ಸ್..

ಇತ್ತೀಚೆಗೆ ಹೊಸ ಕಿಯಾ ಕ್ಯಾರೆನ್ಸ್ ಕ್ಲಾವಿಸ್ (Kia Carens Clavis) ಎಂಪಿವಿಯನ್ನು ಬಿಡುಗಡೆಗೊಳಿಸಲಾಗಿತ್ತು. ಇದು ರೂ.11.49 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್‌ನ್ನು ಪಡೆದಿದ್ದು, 6 ಹಾಗೂ 7 ಆಸನ ಆಯ್ಕೆ ವ್ಯವಸ್ಥೆಯಲ್ಲಿ ಖರೀದಿಗೆ ಲಭ್ಯವಿದೆ. 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಪನೋರಮಿಕ್ ಸನ್‌ರೂಫ್ ಮತ್ತು 9-ಸ್ಪೀಕರ್ ಬೋಸ್ ಸೌಂಡ್ ಸಿಸ್ಟಮ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಗಾಗಿ 6-ಏರ್‌ಬ್ಯಾಗ್‌ಗಳು, ಲೆವೆಲ್-2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) ಹಾಗೂ 360-ಡಿಗ್ರಿ ಕ್ಯಾಮೆರಾಗಳನ್ನು ಹೊಂದಿದೆ. ನೀವು ನೂತನ 'ಕಿಯಾ ಕ್ಯಾರೆನ್ಸ್ ಕ್ಲಾವಿಸ್' ಎಂಪಿವಿಗೆ ಬದಲಾಗಿ ಈ 3 ಕಾರುಗಳನ್ನು ಕೂಡ ತೆಗೆದುಕೊಳ್ಳಬಹುದು. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

Hero: ಬಡವರ ಬಂಡಿ.. ಹೀರೋ ಸ್ಪ್ಲೆಂಡರ್‌ನ್ನು ಖರೀದಿಸಲು ಗ್ರಾಹಕರಿಂದ..

ಹೀರೋ ಸ್ಪ್ಲೆಂಡರ್ (Hero Splendor) ಪ್ರಮುಖ ಮೋಟಾರ್‌ಸೈಕಲ್‌ ಆಗಿದೆ. ಇದು ಕಡಿಮೆ ಬೆಲೆಯಲ್ಲಿ ಖರೀದಿಗೆ ದೊರೆಯಲಿದ್ದು, ಬಡ ಹಾಗೂ ಮಧ್ಯಮ ವರ್ಗದ ಜನರು ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ. ದೇಶೀಯ ಮಾರುಕಟ್ಟೆಯಲ್ಲಿ 'ಸ್ಪ್ಲೆಂಡರ್' ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಗೊಳ್ಳುವ ದ್ವಿಚಕ್ರ ವಾಹನಗಳ ಪಟ್ಟಿಯಲ್ಲಿ ನಂಬರ್ 1 ಸ್ಥಾನದಲ್ಲಿದೆ. ಅದರ ಹೊರತಾಗಿಯೂ ಈ ಏಪ್ರಿಲ್‌ನಲ್ಲಿಯೂ 'ಸ್ಪ್ಲೆಂಡರ್' ಮಾರಾಟ ಸಂಖ್ಯೆ ಕುಸಿತವಾಗಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.
Advertisement

ಫೋಕ್ಸ್‌ವ್ಯಾಗನ್ ಗಾಲ್ಫ್ ಜಿಟಿಐ ಕನ್ನಡ ರಿವ್ಯೂ ವಿಡಿಯೋ

ಕೊನೆಗೂ ಭಾರತದಲ್ಲಿ ಫೋಕ್ಸ್‌ವ್ಯಾಗನ್ ತನ್ನ ಜನಪ್ರಿಯ ಅಂತರಾಷ್ಟ್ರೀಯ ಮಾದರಿಯಾದ 'ಫೋಕ್ಸ್‌ವ್ಯಾಗನ್ ಗಾಲ್ಫ್ ಜಿಟಿಐ' (Volkswagen Golf GTI) ಹ್ಯಾಚ್‌ಬ್ಯಾಕ್ ಕಾರನ್ನು ಪರಿಚಯಿಸಿದೆ. ಪರ್ಫಾಮೆನ್ಸ್ ಕಾರುಗಳಿಗೆ ಭಾರತದಲ್ಲಿ ಬೇಡಿಕೆ ಹೆಚ್ಚುತ್ತಿರುವ ಕಾರಣ ಫೋಕ್ಸ್‌ವ್ಯಾಗನ್ ಗಾಲ್ಫ್ ಜಿಟಿಐ ಕಾರನ್ನು ಸೀಮಿತ ಸಂಖ್ಯೆಯಲ್ಲಿ ಭಾರತದಲ್ಲಿ ಮಾರಾಟ ಮಾಡಲು ಮುಂದಾಗಿದೆ. ಈ ಅಪರೂಪದ ಕಾರನ್ನು ರಿವ್ಯೂ ಮಾಡಲು ನಮಗೆ ಅವಕಾಶ ಸಿಕ್ಕಿದ್ದು, ಈ ಪವರ್‌ಫುಲ್‌ ರಾಕೆಟ್‌ ಬಗ್ಗೆ ಈ ಕೆಳಗಿನ ವಿಡಿಯೋದಲ್ಲಿ ಸಂಪೂರ್ಣವಾಗಿ ವಿವರಿಸಿದ್ದೇವೆ.

ಮಳೆಗಾಲದ ಅತ್ಯುತ್ತಮ ಆಯ್ಕೆಯಾಗಲ್ಲ 'ಪಂಚ' SUVಗಳಿವು.. ಯಾವುವು..

ರಾಜ್ಯಾದ್ಯಂತ ವ್ಯಾಪಕವಾಗಿ ಮಳೆಯಾಗುತ್ತಿದೆ. ರಸ್ತೆಯಲ್ಲಿ ಓಡಾಟ ನಡೆಸುವುದೇ ಕಷ್ಟ ಸಾಧ್ಯವಾಗಿದೆ. ಅದರಲ್ಲೂ ಊರಿಗೆ ಹೋಗಬೇಕಾದರೆ ತುಂಬಾ ಪ್ರಯಾಸ ಪಡಬೇಕಾಗುತ್ತದೆ. ಹಾಗೆಯೇ ಮಳೆಯಲ್ಲಿ ತೆರಳಲು ಒಂದು ಕಾರಿದ್ದರೆ ಎಷ್ಟು ಚೆಂದ ಎಂದು ಹಲವಾರು ಅಂದುಕೊಳ್ಳುತ್ತಾರೆ. ನಾವಿಲ್ಲಿ ಮಳೆಗಾಲದಲ್ಲಿ ಸಾಮಾನ್ಯ ರಸ್ತೆಯಿರಲಿ ಅಥವಾ ಕಚ್ಚಾ ರಸ್ತೆಯೇ ಇರಲಿ.. ಅಲ್ಲಿ ಸುಲಭವಾಗಿ ಚಲಿಸಬಲ್ಲ 5 ಪ್ರಮುಖ ಎಸ್‌ಯುವಿಗಳ (SUVs) ಕುರಿತಂತೆ ಒಂದಷ್ಟು ವಿವರಗಳನ್ನು ತಿಳಿಸಿಕೊಟ್ಟಿದ್ದೇವೆ.

Suzuki e-Access: ಎಲೆಕ್ಟ್ರಿಕ್ ಆಕ್ಸಿಸ್ ಉತ್ಪಾದನೆ ಆರಂಭ

ಭಾರತದಲ್ಲಿ ಇಂಧನ ಬೆಲೆಗಳ ಏರಿಕೆಯಿಂದಾಗಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಗ್ರಾಹಕರ ಬೇಡಿಕೆಯನ್ನು ಅರಿತು ಇತ್ತೀಚೆಗೆ ಹೋಂಡಾ ಕಂಪನಿ ತನ್ನ ಜನಪ್ರಿಯ ಆಕ್ಟೀವಾವನ್ನು ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಬಿಡುಗಡೆ ಮಾಡಿದೆ. ಇದೀಗ ಸುಜುಕಿ ಕೂಡ ತನ್ನ ಜನಪ್ರಿಯ ಮಾದರಿಯಾದ ಆಕ್ಸಿಸ್ ಸ್ಕೂಟರ್ ಅನ್ನು ಎಲೆಕ್ಟ್ರಿಕ್ ಆವೃತ್ತಿಯಲ್ಲಿ (Suzuki e-Access) ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ವರದದಿಗಳ ಪ್ರಕಾರ ಸುಜುಕಿ ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಇ-ಆಕ್ಸೆಸ್ ಉತ್ಪಾದನೆಯನ್ನು ಪ್ರಾರಂಭಿಸಿದೆ. ಈ ಮಾದರಿಯು ಕಂಪನಿಯ ಗುರಗಾಂವ್ ಉತ್ಪಾದನಾ ಸೌಲಭ್ಯದಿಂದ ಹೊರಬರಲು ಪ್ರಾರಂಭಿಸಿದೆ ಎಂದು ವರದಿಗಳು ಸೂಚಿಸಿವೆ.

28 ಕಿ.ಮೀ ಮೈಲೇಜ್.. 7 ಲಕ್ಷ.. 5-ಸೀಟರ್, ಈ 'Toyota Suv'ಗೆ..

ಟೊಯೊಟಾ (Toyota) ಪ್ರಮುಖ ಕಾರು ತಯಾರಕ ಕಂಪನಿಯಾಗಿದ್ದು, ಹಳ್ಳಿಯಿಂದ ದಿಲ್ಲಿವರೆಗೆ ಮನೆ ಮಾತಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಇನ್ನೋವಾ, ಗ್ಲ್ಯಾನ್ಜಾ, ಫಾರ್ಚುನರ್ & ರೂಮಿಯನ್ ಸೇರಿದಂತೆ ವಿವಿಧ ಕಾರುಗಳನ್ನು ಮಾರಾಟಗೊಳಿಸುತ್ತಿದೆ. ಕಳೆದ ತಿಂಗಳು (ಏಪ್ರಿಲ್- 2025) ಸಹ ಟೊಯೊಟಾ ಕಂಪನಿಯು ಒಟ್ಟು 24,833 ಯುನಿಟ್‌ ಕಾರುಗಳನ್ನು ಗ್ರಾಹಕರಿಗೆ ವಿತರಿಸಿದೆ. ಅದರಲ್ಲೂ ಪ್ರಖ್ಯಾತ ಎಸ್‌ಯುವಿ ಅರ್ಬನ್ ಕ್ರೂಸರ್ ಟೈಸರ್ (Urban Cruiser Taisor) ಭಾರೀ ಸಂಖ್ಯೆಯಲ್ಲಿಯೂ ಮಾರಾಟಗೊಂಡಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.
Advertisement

Tata: ಕೇವಲ 6.89 ಲಕ್ಷಕ್ಕೆ ಸನ್‌ರೂಫ್ ಕಾರು: 360 ಡಿಗ್ರಿ ಕ್ಯಾಮರಾ

ಟಾಟಾ ಮೋಟಾರ್ಸ್ ಇತ್ತೀಚೆಗೆ ತನ್ನ ಆಲ್ಟ್ರೋಜ್ ಫೇಸ್‌ಲಿಫ್ಟ್ ಕಾರನ್ನು ಬಿಡುಗಡೆ ಮಾಡಿದೆ. ಹೊಸ ಡಿಸೈನ್, ಆಕರ್ಷಕ ಫೀಚರ್ಸ್ ಹಾಗೂ ಡೀಸೆಲ್ ಎಂಜಿನ್‌ನೊಂದಿಗೆ ಸಣ್ಣ ಹ್ಯಾಚ್‌ಬ್ಯಾಕ್ ಅನ್ನು ಪರಿಚಯಿಸಲಾಗಿದೆ. ಸುರಕ್ಷತೆ ವಿಷಯದಲ್ಲೂ ರಾಜಿಯಾಗದೇ 6 ಏರ್‌ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡುವ ಮೂಲಕ ಟಾಟಾ ಮೋಟಾರ್ಸ್ ತನ್ನ ಗ್ರಾಹಕರ ವಿಶ್ವಾಸವನ್ನು ಗಳಿಸಿದೆ. ಈ ಹೊಸ ಕಾರಿನ ಆರಂಭಿಕ ಬೆಲೆಗಳು ಎಕ್ಸ್‌ ಶೊರೂಂ ದರದಂತೆ ರೂ 6.89 ಲಕ್ಷವಿದೆ. ಈ ಸಣ್ಣ ಹ್ಯಾಚ್‌ಬ್ಯಾಕ್‌ನಲ್ಲಿ ಎಲೆಕ್ಟ್ರಿಕ್ ಸನ್‌ರೂಫ್ ಕೂಡ ನೀಡಲಾಗಿದೆ.