Tata: 8 ಲಕ್ಷ, 24 Km ಮೈಲೇಜ್.. ಈ ಶಕ್ತಿಯುತವಾದ ಟಾಟಾ..

ಟಾಟಾ ನೆಕ್ಸಾನ್ (Tata Nexon) ಜನಪ್ರಿಯ ಎಸ್‌ಯುವಿಯಾಗಿದೆ. ಇದು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಹೊಂದಿರುವುದರಿಂದ ಭಾರೀ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ಇತ್ತೀಚೆಗೆ, ಎಲ್ಲ ವಾಹನ ತಯಾರಕ ಕಂಪನಿಗಳು ಈ ಮಾರ್ಚ್ ತಿಂಗಳ ಕಾರು ಮಾರಾಟದ ಅಂಕಿಅಂಶಗಳ ವರದಿಯನ್ನು ಪ್ರಕಟಿಸಿವೆ. ದೇಶೀಯ ಮಾರುಕಟ್ಟೆಯಲ್ಲಿ ಅತಿಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಗೊಂಡ ಪ್ರಮುಖ ಕಾರುಗಳ ಪಟ್ಟಿಯಲ್ಲಿ ಇದೇ 'ಟಾಟಾ ನೆಕ್ಸಾನ್' ಏಳನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ಹ್ಯುಂಡೈ ಕ್ರೆಟಾ, ಎರಡನೇ ಸ್ಥಾನದಲ್ಲಿ ಮಾರುತಿ ಸ್ವಿಫ್ಟ್ ಹಾಗೂ ಮೂರನೇ ಸ್ಥಾನದಲ್ಲಿ ಟಾಟಾ ಪಂಚ್ ಮೈಕ್ರೋ ಎಸ್‌ಯುವಿ ಇದೆ.

32 ಕಿ.ಮೀಗೂ ಅಧಿಕ ಮೈಲೇಜ್.. 6.49 ಲಕ್ಷ, 5-ಸೀಟರ್..

ಮಾರುತಿ ಸುಜುಕಿ ಸ್ವಿಫ್ಟ್ (Maruti Suzuki Swift) ಪ್ರಖ್ಯಾತ ಹ್ಯಾಚ್‌ಬ್ಯಾಕ್ ಎಂದೇ ಹೆಸರುವಾಸಿಯಾಗಿದೆ. ಇದು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ಇತ್ತೀಚೆಗೆ ಪ್ರಮುಖ ವಾಹನ ತಯಾರಕ ಕಂಪನಿಗಳು ಮಾರ್ಚ್ ತಿಂಗಳ ಕಾರು ಮಾರಾಟದ ಅಂಕಿಅಂಶಗಳ ವರದಿಯನ್ನು ಪ್ರಕಟಿಸಿದ್ದು, ನೂತನ 'ಸ್ವಿಫ್ಟ್' ದೇಶೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಗೊಂಡ ಪ್ರಮುಖ ಕಾರುಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಹ್ಯುಂಡೈ ಕ್ರೆಟಾ (18,059 ಯುನಿಟ್) ಮೊದಲ ಸ್ಥಾನದಲ್ಲಿದೆ.

ಯುವಕರಿಗೆ ಖುಷಿಸುದ್ದಿ.. ಹೊಸ ಫೀಚರ್‌ನೊಂದಿಗೆ 2025ರ Hero Karizma..

ಯುವಕರಿಗೆ ಭರ್ಜರಿ ಸಿಹಿಸುದ್ದಿಯೊಂದು ಲಭ್ಯವಾಗಿದೆ. ಇಂದು 2025ರ ಹೊಚ್ಚ ಹೊಸ ಹೀರೋ ಕರಿಜ್ಮಾ ಎಕ್ಸ್ಎಂಆರ್ 210 (Hero Karizma XMR 210) ಬೈಕ್‌ನ್ನು ಬಿಡುಗಡೆಗೊಳಿಸಲಾಗಿದೆ. ಈ ಮೋಟಾರ್‌ಸೈಕಲ್ ಒಂದಷ್ಟು ನವೀಕರಣಗಳನ್ನು ಪಡೆದುಕೊಂಡಿದ್ದು, ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿಯೂ ಮಾರಾಟಕ್ಕೆ ಬಂದಿದ್ದು, ಬೆಲೆಯೂ ಕೂಡ ಕೈಗೆಟುಕುವಂತಿದೆ. ಬನ್ನಿ.. ನೂತನ 'ಕರಿಜ್ಮಾ ಎಕ್ಸ್ಎಂಆರ್' ಬೈಕ್‌ನ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಯೋಣ.

Toyota: ನವೀನ ವೈಶಿಷ್ಟ್ಯಗಳೊಂದಿಗೆ ಹೊಸ ಟೊಯೋಟಾ ಹೈಬ್ರಿಡ್ ಎಸ್‌ಯುವಿ

ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (Toyota Kirloskar Motor) ಇಂದು ತನ್ನ ಜನಪ್ರಿಯ ಎಸ್‌ಯುವಿ ಆಗಿರುವ ಅರ್ಬನ್ ಕ್ರೂಸರ್ ಹೈರೈಡರ್ (Urban Cruiser Hyryder) ನಲ್ಲಿ ಸುರಕ್ಷತೆ, ಸೌಕರ್ಯ ಮತ್ತು ಅನುಕೂಲತೆಯನ್ನು ಹೆಚ್ಚಿಸುವ ಸಲುವಾಗಿ ಹೊಸ ಫೀಚರ್‌ಗಳ ಅಪ್‌ಡೇಟ್‌ಗಳೊಂದಿಗೆ ಬಿಡುಗಡೆ ಮಾಡಿದೆ. ಇದೀಗ ಪರಿಚಯಿಸಿರುವ ಹೊಸ ಫೀಚರ್‌ಗಳು ಗ್ರಾಹಕರ ಆದ್ಯತೆಯನ್ನು ಪರಿಶೀಲಿಸಿ ನೀಡಲಾಗಿದೆ. ಗ್ರಾಹಕರ ಚಾಲನಾ ಅನುಭವವನ್ನು ಹೆಚ್ಚಿಸಲು ಮತ್ತು ವಿಕಸನಗೊಳ್ಳುತ್ತಿರುವ ಮಾರುಕಟ್ಟೆ ಪ್ರವೃತ್ತಿಗಳನ್ನು ಮನಗಂಡು ಹೊಸ ಅಪ್‌ಡೇಟ್‌ಗಳನ್ನು ಘೋಷಿಸಿರುವುದಾಗಿ ಟೊಯೋಟಾ ಕಂಪನಿ ಹೇಳಿದೆ.
Advertisement

Hero: 2025ರ ಹೀರೋ ಸೂಪರ್ ಸ್ಪ್ಲೆಂಡರ್‌ನ ಪರಿಕ್ಷೆ.. ಶೀಘ್ರ ಹೊಸ..

ಭಾರತದಲ್ಲಿ ದಶಕಗಳಿಂದ 'ಸ್ಪ್ಲೆಂಡರ್‌' ಮಧ್ಯಮ ವರ್ಗದ ಜನರ ನೆಚ್ಚಿನ ಬೈಕ್ ಆಗಿದೆ. ಇದು ಕೈಗೆಟುಕುವ ಬೆಲೆಯಲ್ಲಿ ದೊರೆಯವುದು ಮಾತ್ರವಲ್ಲದೆ, ಗರಿಷ್ಠ ಮೈಲೇಜ್ ನೀಡುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಅದರಲ್ಲೂ ಹೀರೋ ಸೂಪರ್ ಸ್ಪ್ಲೆಂಡರ್‌ (Hero Super Splendor) ಶಕ್ತಿಯತವಾದ ಮೋಟಾರ್‌ಸೈಕಲ್ ಆಗಿದ್ದು, ಭಾರೀ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ಸದ್ಯ, ಇದೇ ಬೈಕ್‌ನ್ನು ಒಂದಷ್ಟು ನವೀಕರಿಸಿ, ಹೊಸ ರೂಪದಲ್ಲಿ ಬಿಡುಗಡೆಗೊಳಿಸಲು ಕಂಪನಿಯು ತಯಾರಿಯನ್ನು ನಡೆಸುತ್ತಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಮಹೀಂದ್ರಾ ಕಾರುಗಳನ್ನು ರೂಪಿಸಲು ಹೊಸ ಡಿಸೈನ್ ಸ್ಟುಡಿಯೋ ಅನಾವರಣ

ಭಾರತದ ಪ್ರಮುಖ ಆಟೋಮೋಟಿವ್ ಕಂಪನಿಗಳಲ್ಲಿ ಒಂದಾದ ಮಹೀಂದ್ರಾ, ಇಂದು ತನ್ನ ಹೊಸ ಮಹೀಂದ್ರಾ ಇಂಡಿಯಾ ಡಿಸೈನ್ ಸ್ಟುಡಿಯೋ (MIDS)ವನ್ನು ಉದ್ಘಾಟಿಸಿದೆ. ಇದು ಕಂಪನಿಯ ವಿನ್ಯಾಸ ಸಾಮರ್ಥ್ಯಗಳಲ್ಲಿ ದಿಟ್ಟ ಮುನ್ನಡೆಯನ್ನು ಸೂಚಿಸುವ ಅತ್ಯಾಧುನಿಕ ಸೃಜನಶೀಲ ಸೌಲಭ್ಯವಾಗಿದೆ. ಮುಂಬೈನಲ್ಲಿರುವ ಈ ಭವಿಷ್ಯ ಸಿದ್ಧ MIDS, ಕಂಪನಿಯ ಉತ್ಪನ್ನ ಅಭಿವೃದ್ಧಿ ಕಾರ್ಯತಂತ್ರದ ಮೂಲಾಧಾರವಾಗಿ ವಿನ್ಯಾಸ ಶ್ರೇಷ್ಠತೆಗೆ ಮಹೀಂದ್ರಾದ ಬದ್ಧತೆಯನ್ನು ಎತ್ತಿತೋರಿಸುತ್ತದೆ. ವಿಸ್ತೃತ MIDS ಸೃಷ್ಟಿಗೆ ಕೇವಲ ಒಂದು ಸ್ಥಳವಾಗಿ ಮಾತ್ರವಲ್ಲದೆ ಪ್ರತಿಭೆಗೆ ಒಂದು ಆಯಸ್ಕಾಂತವಾಗಿದೆ ಎಂದು ಮಹೀಂದ್ರಾ ಹೇಳಿಕೊಂಡಿದೆ.

Hyundai: ಹೊಸ ಹ್ಯುಂಡೈ ಸಿಎನ್‌ಜಿ ಕಾರು ಬಿಡುಗಡೆ: 7.50 ಲಕ್ಷ ಬೆಲೆ

ಹ್ಯುಂಡೈ ಕೊನೆಗೂ ತನ್ನ ಸಿಎನ್‌ಜಿ ಕಾರುಗಳ ಮೇಲೆ ಹೆಚ್ಚು ಗಮನಹರಿಸುತ್ತಿದೆ. ಹೊಸ ತಂತ್ರಜ್ಞಾನದೊಂದಿಗೆ ಹ್ಯುಂಡೈ ಎಕ್ಸ್‌ಟರ್ ಹೈ-ಸಿಎನ್‌ಜಿ ಡ್ಯುಯೊ (Hyundai Exter Hy-CNG Duo) ಕಾರನ್ನು ಬಿಡುಗಡೆ ಮಾಡಿದೆ. ಈ ಹೈ-ಸಿಎನ್‌ಜಿ ಡ್ಯುಯೊ ದೊಡ್ಡ ಸಿಲಿಂಡರ್ ಬದಲಿಗೆ ಎರಡು ಸಣ್ಣ ಸಿಎನ್‌ಜಿ ಸಿಲಿಂಡರ್‌ಗಳನ್ನು ಪಡೆದಿದೆ. ಹ್ಯುಂಡೈ ಇಂಟಿಗ್ರೇಟೆಡ್ ಎಲೆಕ್ಟ್ರಾನಿಕ್ ಕಂಟ್ರೋಲ್ ಯುನಿಟ್ ಅನ್ನು ಸಹ ಇದರಲ್ಲಿ ನೀಡಿದೆ. ಇದು ಪೆಟ್ರೋಲ್‌ನಿಂದ ಸಿಎನ್‌ಜಿಗೆ ಬದಲಾಯಿಸುವ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ ಎಂದು ಕಂಪನಿ ಹೇಳಿದೆ.

ಗುಡ್‌ನ್ಯೂಸ್.. ಹ್ಯುಂಡೈ ಕಂಪನಿಯಿಂದ ರೂ.75,000 ವರೆಗೆ ರಿಯಾಯಿತಿ..

ಹ್ಯುಂಡೈ ಮೋಟಾರ್ ಇಂಡಿಯಾ (Hyundai Motor India) ಪ್ರಖ್ಯಾತ ಕಾರು ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಕಂಪನಿಯು ಗ್ರ್ಯಾಂಡ್ ಐ10 ನಿಯೋಸ್, ಐ20, ಐ20 ಎನ್ ಲೈನ್, ಔರಾ, ವೆರ್ನಾ, ಎಕ್ಸ್‌ಟರ್, ವೆನ್ಯೂ, ವೆನ್ಯೂ ಎನ್ ಲೈನ್, ಅಲ್ಕಾಜರ್ ಫೇಸ್‌ಲಿಫ್ಟ್, ಟಕ್ಸನ್ ಹಾಗೂ ಕ್ರೆಟಾ ಕಾರುಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಸದ್ಯ, ಈ ಏಪ್ರಿಲ್ ತಿಂಗಳಲ್ಲಿ ಕರ್ನಾಟಕದ ಹ್ಯುಂಡೈ ಕಂಪನಿಯ ವಿವಿಧ ಡೀಲರ್‌ಶಿಪ್‌ಗಳು ಬಹುತೇಕ ಎಲ್ಲ ಕಾರುಗಳ ಖರೀದಿ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಣೆ ಮಾಡಿವೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
Advertisement

ನನ್ನ ಉದ್ಯೋಗಿಗಳೆ ದೇವರು: ಕಾರುಗಳನ್ನು ಉಡುಗೊರೆ ಕೊಟ್ಟ ಮಾಲೀಕ!

ಯಾವುದೇ ಕಂಪನಿಯಾಗಿರಲಿ ತನ್ನ ಬೆಳವಣಿಗೆಗೆ ಉದ್ಯೋಗಿಗಳ ಶ್ರಮ ತುಂಬಾ ಇರುತ್ತದೆ. ವರ್ಷದುದ್ದಕ್ಕೂ ಕಂಪನಿಗಾಗಿ ದುಡಿಯುವವರಿಗೆ ಸಂಬಳ ಬಿಟ್ಟು ಬೇರೇನೂ ಸಿಗುವುದಿಲ್ಲ. ಆದರೆ ಕೆಲವೊಂದೆಡೆ ಮನಸುಳ್ಳ ಮಾಲೀಕರು ತಮ್ಮ ಉದ್ಯೋಗಿಗಳನ್ನು ಮನೆ-ಮಂದಿಯಂತೆ ಕಾಣುತ್ತಾರೆ. ಅವರ ಲಾಭದಲ್ಲಿ ಒಂದಷ್ಟು ಹಣವನ್ನು ಉದ್ಯೋಗಿಗಳಿಗಾಗಿ ವ್ಯಯಿಸುತ್ತಾರೆ. ಇಂತಹ ಮಾಲೀಕರಿಗೆ ನೌಕರರು ಕೂಡ ನಿಷ್ಠಾವಂತರಾಗಿ ಕೆಲಸ ಮಾಡುತ್ತಾರೆ. ಇತ್ತೀಚೆಗೆ ಇಂತಹ ಮಾಲೀಕರೊಬ್ಬರು ಬೆಳಕಿಗೆ ಬಂದಿದ್ದಾರೆ. ಗುಜರಾತ್‌ನ ಆಭರಣ ಅಂಗಡಿ ಮಾಲೀಕರೊಬ್ಬರು ತಮ್ಮ ನಿಷ್ಠಾವಂತ ಉದ್ಯೋಗಿಗಳಿಗೆ ಐಷಾರಾಮಿ ಕಾರುಗಳು, ಬೈಕ್‌ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

Hero: ಯುವಕರ ಹಾಟ್‌ ಫೇವರೆಟ್ ಹೀರೋ ಎಕ್ಸ್‌ಟ್ರೀಮ್ 250R ವಿಶೇಷತೆಗಳು!

ದೇಶದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕರಾದ ಹೀರೋ ತನ್ನ ಅತ್ಯಂತ ಪವರ್‌ಫುಲ್ ನೇಕೆಡ್ ಮೋಟಾರ್‌ಸೈಕಲ್ ಆಗಿರುವ ಹೀರೋ ಎಕ್ಸ್‌ಟ್ರೀಮ್ 250R ಅನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಇದರ ಡಿಸೈನ್ ಮುಂಭಾಗದಲ್ಲಿ, ತ್ರಿಕೋನ ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್ ಘಟಕವು ಸಾಕಷ್ಟು ಆಕ್ರಮಣಕಾರಿಯಾಗಿ ಕಾಣುತ್ತದೆ. ಅದರೊಳಗೆ ಸಂಯೋಜಿಸಲ್ಪಟ್ಟ H- ಆಕಾರದ DRL ಅನ್ನು ಹೊಂದಿದೆ. ಇದರ ಹಿಂದೆ ಕುಳಿತಿರುವ ಗೋಲ್ಡನ್ USD ಮುಂಭಾಗದ ಫೋರ್ಕ್‌ಗಳು ಇನ್ನೂ ಆಕರ್ಷಕವಾಗಿದೆ. ಮೇಲೆ 17-ಇಂಚಿನ ಅಲಾಯ್ ವೀಲ್ ಜೊತೆಗೆ ಮುಂಭಾಗದ ಫೆಂಡರ್ ಅನ್ನು ಹೊಂದಿದೆ.

4 ಕೋಟಿ ಜನರ ವಿಶ್ವಾಸ: ಸದ್ದಿಲ್ಲದೇ ಬೈಕ್ ಕಿಂಗ್ 'ಸ್ಪ್ಲೆಂಡರ್..

ಹೀರೋ ಸ್ಪ್ಲೆಂಡರ್ ಪ್ಲಸ್ (Hero Splendor Plus) ವಿಶ್ವದ ನಂ 1 ಮೋಟಾರ್‌ಸೈಕಲ್ ಆಗಿದೆ. ಈ ಬೈಕ್‌ನ ಜನಪ್ರಿಯತೆ ಎಷ್ಟಿದೆ ಅಂದರೆ, ಈವರೆಗೆ 4 ಕೋಟಿಗೂ ಅಧಿಕ ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿದೆ. ಇಷ್ಟು ಮಾತ್ರವಲ್ಲದೆ, ಕಾಲ ಕಾಲಕ್ಕೆ ಕಂಪನಿಯು ಸ್ಪ್ಲೆಂಡರ್‌ನ್ನು ನವೀಕರಣಗೊಳಿಸಿ ಮಾರಾಟಕ್ಕೆ ತರುತ್ತಲೇ ಇರುತ್ತದೆ. ಸದ್ಯ, 2025ರ ನೂತನ 'ಹೀರೋ ಸ್ಪ್ಲೆಂಡರ್ ಪ್ಲಸ್' ಮೋಟಾರ್‌ಸೈಕಲ್ ಪರೀಕ್ಷಾರ್ಥ ಸಂಚಾರ ನಡೆಸುವಾಗ ಕಾಣಿಸಿಕೊಂಡಿದ್ದು, ಆ ಸ್ಪೈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲೂ ಕಾಣಿಸಿಕೊಂಡಿವೆ.

ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರಿಗೆ ಈ 3 ಎಸ್‌ಯುವಿಗಳು..

ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ (Hyundai Creta Electric) ಜನಪ್ರಿಯ ಎಸ್‌ಯುವಿಯಾಗಿದೆ. ಈ ಕಾರು ರೂ.17.99 ಲಕ್ಷದಿಂದ ರೂ.24.38 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಪಡೆದಿದೆ. 42 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಮತ್ತು 51.4 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 473 ಕಿಲೋಮೀಟರ್ ಕ್ರಮಿಸುತ್ತದೆ. 5 ಆಸನ ಆಯ್ಕೆ ವ್ಯವಸ್ಥೆಯೊಂದಿರುವ ಈ ಎಸ್‌ಯುವಿ, 10.25-ಇಂಚಿನ ಡುಯಲ್ ಸ್ಕ್ರೀನ್ ಮತ್ತು ಪನೋರಮಿಕ್ ಸನ್‌ರೂಫ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ 'ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್'ಗೆ ಪರ್ಯಾಯವಾಗಿ ಗ್ರಾಹಕರು ಈ 3 ಕಾರುಗಳನ್ನು ಖರೀದಿ ಮಾಡಬಹುದು. ಬನ್ನಿ.. ಇವುಗಳ ಬೆಲೆ ಹಾಗೂ ವಿಶೇಷತೆಗಳ ಬಗ್ಗೆ ಒಂದಷ್ಟು ವಿವರವನ್ನು ತಿಳಿಯೋಣ.
Advertisement

ಯುವಕರು ಲೈಕ್ ಮಾಡುವ ಬೈಕ್‌ಗಳಿವು.. ಪ್ರೀಮಿಯಂ ಲುಕ್, 2 ಲಕ್ಷದೊಳಗೆ..

ಸಾಮಾನ್ಯವಾಗಿ ಯುವಕರಿಗೆ ಪ್ರೀಮಿಯಂ ಬೈಕ್‌ವೊಂದನ್ನು ಖರೀದಿ ಮಾಡಬೇಕೆಂಬ ಬಹುದೊಡ್ಡ ಆಸೆಯಿರುತ್ತದೆ. ಆದರೆ, ಯಾವ ಮೋಟಾರ್‌ಸೈಕಲ್ ತೆಗೆದುಕೊಂಡರೆ, ಹೆಚ್ಚು ಉತ್ತಮವಾಗಬಲ್ಲದು. ಅದು ದೀರ್ಘಕಾಲ ಬಾಳಿಕೆ ಬರಲಿದೆಯೇ ಎಂಬ ಹಲವು ಗೊಂದಲವಿರುತ್ತದೆ. ನೀವು ರೂ.2 ಲಕ್ಷದೊಳಗೆ ಹೆಚ್ಚು ಅತ್ಯಾಧುನಿಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಹೊಂದಿರುವ ಹೊಚ್ಚ ಹೊಸ ಬೈಕ್‌ನ್ನು ಖರೀದಿಸಲು ಹುಡುಕಾಟ ನಡೆಸುತ್ತಿದ್ದೀರಾ.. ಹಾಗಾದರೆ ಟಿವಿಎಸ್ ರೈಡರ್ 125, ಹೀರೋ ಎಕ್ಸ್‌ಟ್ರೀಮ್ 125ಆರ್, ಬಜಾಜ್ ಪಲ್ಸರ್ ಎನ್160, ಹೋಂಡಾ ಎಸ್‌ಪಿ160 ಮತ್ತು ಯಮಹಾ ಎಫ್‌ಝಡ್‌-ಎಸ್ ಫೈ ಹೈಬ್ರಿಡ್ ಮಾಡೆಲ್‌ಗಳು ಹೆಚ್ಚು ಸೂಕ್ತವಾಗಲಿವೆ. ಬನ್ನಿ.. ಇವುಗಳ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಒಂದಷ್ಟು ವಿವರಗಳನ್ನು ತಿಳಿಯೋಣ.

ಕಡಿಮೆ ಬೆಲೆ, 70 Km ಮೈಲೇಜ್.. ಬಡವನು ಕೊಳ್ಳಬಹುದು: 'TVS Sport'...

ಟಿವಿಎಸ್ ಸ್ಪೋರ್ಟ್ (TVS Sport) ಜನಪ್ರಿಯ ಮೋಟಾರ್‌ಸೈಕಲ್ ಆಗಿದೆ. ಇದನ್ನು ದಿನಬಳಕೆಗೆ ಸುಲಭವಾಗಿ ಬಳಕೆ ಮಾಡಲು ಸಾಧ್ಯವಾಗುವಂತೆ ತಯಾರಿಸಲಾಗಿದ್ದು, ಅತ್ಯಂತ ಕೈಗೆಟುಕುವ ಬೆಲೆಯಲ್ಲಿಯೂ ಸಿಗುವುದರಿಂದ ಗ್ರಾಹಕರು ಕೂಡ ತಾಮುಂದು - ನಾಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಈ ಬೈಕ್‌ನ್ನು ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲೂ ಬಳಕೆ ಮಾಡಬಹುದು. ನೀವು ಹೊಚ್ಚ ಹೊಸ 'ಟಿವಿಎಸ್ ಸ್ಪೋರ್ಟ್' ಮೋಟಾರ್‌ಸೈಕಲ್‌ನ್ನು ಖರೀದಿಸಲು ಪ್ಲ್ಯಾನ್ ಮಾಡಿದ್ದೀರಾ.. ಹಾಗಾದರೆ, ಪ್ರಮುಖ 5 ಕಾರಣಗಳು ಇಲ್ಲಿವೆ.

Honda: 65 ಕಿ.ಮೀ ಮೈಲೇಜ್... ಸ್ಟೈಲಿಷ್ ಬೈಕ್

ಹೋಂಡಾ ಕಂಪನಿಯು ಇತ್ತೀಚೆಗೆ 2025 ರ ಹೊಸ SP125 ಮೋಟಾರ್‌ಸೈಕಲ್ ಅನ್ನು ಬಿಡುಗಡೆ ಮಾಡಿದೆ. ಸುಧಾರಿತ ವೈಶಿಷ್ಟ್ಯಗಳು ಮತ್ತು ಹೊಸ ಬಣ್ಣಗಳ ಆಯ್ಕೆಯನ್ನು ನೀಡುತ್ತಾ, ಆಕರ್ಷಕ ಮೈಲೇಜ್‌ನೊಂದಿಗೆ ಈಗ SP125 ಮೋಟಾರ್‌ಸೈಕಲ್ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಬ್ಲೂಟೂತ್ ನ್ಯಾವಿಗೇಷನ್, ವಾಯ್ಸ್ ಅಸಿಸ್ಟ್ ಮತ್ತು ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್‌ನಂತಹ ಸುಧಾರಿತ ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾಗಿದ್ದು, ಇದು ಇಂದಿನ ತಂತ್ರಜ್ಞಾನ-ಬುದ್ಧಿವಂತ ಸವಾರರ ಬೇಡಿಕೆಗಳನ್ನು ಪೂರೈಸಲು ಸಜ್ಜಾಗಿರುವ ಈ ಬೈಕ್ ಟಾಪ್ ಫೀಚರ್ಸ್ ವಿವರ ಇಲ್ಲಿದೆ.

ಕಣ್ಣುಕುಕ್ಕುವ ಫೀಚರ್ಸ್‌, 5 ಸೀಟರ್.. ಮುಂದಿನ ತಿಂಗಳು ಹೊಸ Maruti..

ಹೊಚ್ಚ ಹೊಸ ಮಾರುತಿ ಸುಜುಕಿ ಇ-ವಿಟಾರಾ (Maruti Suzuki e Vitara) ಎಲೆಕ್ಟ್ರಿಕ್ ಎಸ್‌ಯುವಿ ಅತಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಈ ಕಾರು ನೋಡುಗರ ಕಣ್ಣುಕುಕ್ಕುವ ರೀತಿಯಲ್ಲಿ ಹೆಚ್ಚು ಅತ್ಯಾಧುನಿಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಹೊಂದಿದೆ. ಕಳೆದ ಜನವರಿಯಲ್ಲಿ ತೆರೆಕಂಡ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ತಯಾರಿಕೆಗೆ ಸಿದ್ಧಗೊಂಡಿದ್ದ ನೂತನ 'ಇ-ವಿಟಾರಾ' ಎಲೆಕ್ಟ್ರಿಕ್ ಎಸ್‌ಯುವಿಯನ್ನು ಕಂಪನಿಯು ಪ್ರದರ್ಶನ ಮಾಡಲಾಗಿತ್ತು.
Advertisement

Familiy cars: ಕ್ಯಾಪ್ಟನ್ ಸೀಟುಗಳೊಂದಿಗೆ ಸಿಗುವ ಅಗ್ಗದ ಕಾರುಗಳು

ಮೂರು ಸಾಲಿನ ಎಸ್‌ಯುವಿಗಳು ಮತ್ತು ಎಂಪಿವಿಗಳು ಎರಡನೇ ಸಾಲಿಗೆ ಬೆಂಚ್ ಸೀಟ್‌ನೊಂದಿಗೆ ಸಾಧ್ಯವಾದಷ್ಟು ಪ್ರಯಾಣಿಕರನ್ನು ಹೊಂದಿಸಲು ಸಹಾಯ ಮಾಡಿದರೆ, ಇನ್ನೂ ಕೆಲವು ಮೂರು ಸಾಲಿನಲ್ಲೂ ಕ್ಯಾಪ್ಟನ್ ಸೀಟುಗಳನ್ನು ಹೊಂದಿರುತ್ತವೆ. ಆದರೆ ಈ ವಿನ್ಯಾಸದೊಂದಿಗೆ ಬರುವ ಕಾರುಗಳು ಹೆಚ್ಚು ಯಶಸ್ವಿಯಾಗಿಲ್ಲ. ಇನ್ನೊಂದು ವಿನ್ಯಾಸ ಹೊಂದಿರುವ ಹಾಗೂ ಮೂರನೇ ಸಾಲಿನ ಪ್ರವೇಶವನ್ನು ಸುಲಭಗೊಳಿಸುವ ಎರಡನೇ ಸಾಲಿನ ಕ್ಯಾಪ್ಟನ್ ಸೀಟುಗಳೊಂದಿಗೆ ಬರುವ ವಿನ್ಯಾಸವಿದೆ. ಇಂತಹ ಅತ್ಯಂತ ಕೈಗೆಟುಕುವ ಮೂರು ಸಾಲಿನ ಎಸ್‌ಯುವಿಗಳು ಮತ್ತು ಎಂಪಿವಿಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.

Renault: ಕಾರು ಖರೀದಿಸುವ ಕನಸಿದ್ಯಾ.. ಅತಿ ಕಡಿಮೆ ಬೆಲೆಗೆ ಮನೆಗೆ..

ರೆನಾಲ್ಟ್ ಇಂಡಿಯಾ (Renault India) ಜನಪ್ರಿಯ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ದೇಶೀಯ ಮಾರುಕಟ್ಟೆಯಲ್ಲಿ ಕಂಪನಿಯು ಕ್ವಿಡ್, ಕಿಗರ್ ಮತ್ತು ಟ್ರೈಬರ್ ಕಾರುಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಸದ್ಯ, ರೆನಾಲ್ಟ್ ಇವೆಲ್ಲ ಕಾರುಗಳ ಖರೀದಿ ಮೇಲೆ ಈ ಏಪ್ರಿಲ್ ತಿಂಗಳು ರೂ.65,000 ವರೆಗೆ ರಿಯಾಯಿತಿಯನ್ನು ಘೋಷಣೆ ಮಾಡಿದೆ. ಬನ್ನಿ.. ಆ ಬಗ್ಗೆ ಹೆಚ್ಚಿನ ಮಾಹಿತಿವನ್ನು ತಿಳಿಯೋಣ.

Maruti: 8 ಲಕ್ಷಕ್ಕೆ ಬೆಸ್ಟ್ 7-ಸೀಟರ್ ಕಾರು: 26.11 ಕಿ.ಮೀ ಮೈಲೇಜ್

ಭಾರತೀಯ ಗ್ರಾಹಕರಿಗೆ, ವಿಶೇಷವಾಗಿ ದೀರ್ಘ ಪ್ರಯಾಣವನ್ನು ಇಷ್ಟಪಡುವ ಕುಟುಂಬಗಳಿಗೆ, 7 ಆಸನಗಳ ಕಾರುಗಳಿಗೆ ಬೇಡಿಕೆ ವೇಗವಾಗಿ ಹೆಚ್ಚುತ್ತಿದೆ. ದೇಶದಲ್ಲಿ 7 ಸೀಟರ್ ಕಾರುಗಳು ಸಾಕಷ್ಟಿದ್ದರು, ಮಾರುತಿಯ ಈ ಒಂದು ಕಾರು ಮಾತ್ರ ಸದ್ಯ ತುಂಬಾ ಬೇಡಿಕೆ ಪಡೆದುಕೊಂಡಿದೆ. ಕೈಗೆಟುಕುವ ಬೆಲೆ, ಮೈಲೇಜ್ ಮತ್ತು ವಿಶಾಲತೆಗೆ ಹೆಸರುವಾಸಿಯಾದ ಜನಪ್ರಿಯ 7 ಸೀಟರ್ ಕಾರು ಮಾರುತಿ ಸುಜುಕಿ ಎರ್ಟಿಗಾ (Maruti Suzuki Ertiga), ಸದ್ಯ ಭಾರತದ ಬೆಸ್ಟ್ ಫ್ಯಾಮಿಲಿ ಕಾರಾಗಿದೆ. ಮಾರುತಿ ಎರ್ಟಿಗಾ ಬೆಲೆ ರೂ. 8.69 ಲಕ್ಷದಿಂದ ರೂ. 13.03 ಲಕ್ಷದವರೆಗೆ (ಎಕ್ಸ್‌ ಶೋರೂಂ) ಇದೆ.

ಜನಪ್ರಿಯ 'ಹೋಂಡಾ ಆಕ್ಟಿವಾ ಇ'ಗೆ ಬದಲಿ ಆಯ್ಕೆಯಾಗಬಲ್ಲ 3..

ಹೋಂಡಾ ಆಕ್ಟಿವಾ ಇ (Honda Activa e) ಪ್ರಖ್ಯಾತ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಇದು 2 ವಿಧದಲ್ಲಿ ಗ್ರಾಹಕರ ಖರೀದಿಗೆ ಲಭ್ಯವಾಗುತ್ತದೆ. ಇದರ ಸ್ಟ್ಯಾಂಡರ್ಡ್ ಮಾಡೆಲ್ ರೂ.1.17 ಲಕ್ಷ ಮತ್ತು ರೋಡ್‌ಸಿಂಕ್ ಮಾಡೆಲ್ ರೂ.1.52 ಲಕ್ಷ (ಎಕ್ಸ್-ಶೋರೂಂ) ದರವನ್ನು ಒಳಗೊಂಡಿದೆ. ಈ ಸ್ಕೂಟರ್ 1.5 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಎರಡು ಬದಲಾಯಿಸಬಹುದಾದ ಬ್ಯಾಟರಿ ಪ್ಯಾಕ್‌ನ್ನು ಪಡೆದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 102 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ. ಟಿಎಫ್‌ಟಿ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ನೂತನ 'ಆಕ್ಟಿವಾ ಇ'ಗೆ ಪರ್ಯಾಯವಾಗಿ ಗ್ರಾಹಕರು ಈ 3 ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಖರೀದಿ ಮಾಡಬಹುದು. ಬನ್ನಿ.. ಇವುಗಳ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಸಂಕ್ಷಿಪ್ತವಾದ ಮಾಹಿತಿಯನ್ನು ತಿಳಿಯೋಣ.
Advertisement

Kia Syros: 9 ಲಕ್ಷಕ್ಕೆ ಫುಲ್ ಪ್ರೀಮಿಯಂ ಕಿಯಾ ಕಾರು

ಪ್ರಮುಖ ಕಾರು ತಯಾರಕ ಕಂಪನಿಯಾದ ಕಿಯಾ, ಎತ್ತರದ ಬಾಕ್ಸಿ ವಿನ್ಯಾಸದೊಂದಿಗೆ ವಿಭಿನ್ನವಾಗಿ ಕಾಣುವ 'ಸೈರಸ್' ಎಸ್‌ಯುವಿಯನ್ನು ಇದೇ ವರ್ಷದ ಆರಂಭದಲ್ಲಿ ಬಿಡುಗಡೆ ಮಾಡಿ ಗ್ರಾಹಕರಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಇದು ಆಕರ್ಷಕ ಲುಕ್ ಮತ್ತು ವಿಶಿಷ್ಟ್ ವೈಶಿಷ್ಟ್ಯಗಳನ್ನು ಹೊಂದಿದೆ. ಕಿಯಾ ಸೈರಸ್ ಒಳಗೆ ಹೆಜ್ಜೆ ಹಾಕಿ ನೋಡಿದ್ರೆ, ಕ್ಯಾಬಿನ್ ಸಾನೆಟ್‌ಗಿಂತ ಪ್ರೀಮಿಯಂ ಅನುಭವ ನೀಡುತ್ತದೆ. ಈ ಎಸ್‌ಯುವಿ ರೂ.8.99 ಲಕ್ಷದಿಂದ ರೂ.17.80 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಈ ಕಾರಿನ ಪ್ರಮುಖ ಫೀಚರ್ಸ್ ಇಲ್ಲಿವೆ.

Suzuki: ಬಹುನಿರೀಕ್ಷಿತ ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್..

ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ (Suzuki Motorcycle India), ವಿಶ್ವಾಸಾರ್ಹ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಕಂಪನಿಯು ಯಶಸ್ವಿಯಾಗಿ ಮಾರಾಟಗೊಳಿಸುವ 'ಆಕ್ಸೆಸ್ 125' ಗೇಮ್ ಚೇಂಜರ್ ಸ್ಕೂಟರ್ ಆಗಿ ಹೊರಹೊಮ್ಮಿದೆ. ಇದನ್ನು ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಈ ಆಕ್ಸೆಸ್ ಸ್ಕೂಟರ್‌ಗಿರುವ ಬೇಡಿಕೆಯನ್ನು ಕಂಪನಿಯು ಮನಗಂಡಿದ್ದು, ಇದೇ ಸ್ಕೂಟರ್‌ನ್ನು ಎಲೆಕ್ಟ್ರಿಕ್ ಅವತಾರದಲ್ಲಿ ಬಿಡುಗಡೆಗೊಳಿಸಲು ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ. ಎಲ್ಲವು ಅಂದುಕೊಂಡಂತೆ ನಡೆದರೆ, ಈ ಸ್ಕೂಟರ್ ಅತಿ ಶೀಘ್ರದಲ್ಲೇ ಮಾರಾಟಕ್ಕೂ ಬರಲಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

Maruti Grand Vitara Vs Hyundai Creta: ಯಾವುದು ಬೆಸ್ಟ್?

ಭಾರತದಲ್ಲಿ ಸದ್ಯ ಅತ್ಯಂತ ಬೇಡಿಕೆಯ ಎಸ್‌ಯುವಿಗಳಾದ ಹ್ಯುಂಡೈ ಕ್ರೆಟಾ (Hyundai Creta) ಮತ್ತು ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ (Maruti Grand Vitara) ಒಂದಕ್ಕೊಂದು ಸರಿಯಾದ ಪ್ರತಿಸ್ಪರ್ಧಿಗಳಾಗಿದ್ದು, ಹೆಚ್ಚುಕಡಿಮೆ ಅದೇ ಬೆಲೆಯಲ್ಲಿ ಸಿಗುವ ಬೆಸ್ಟ್ ಕಾರುಗಳಾಗಿವೆ. ಯಾವ ಮಟ್ಟಿಗೆ ಅಂದರೆ ಎರಡೂ ಕಾರುಗಳ ನಡುವೆ ಒಂದನ್ನು ಆಯ್ಕೆ ಮಾಡಿಕೊಳ್ಳುವುದು ತುಸು ಕಷ್ಟವಾಗುವಷ್ಟು. ಹಾಗಾಗಿಯೇ ಬೆಲೆಯಿಂದ ಹಿಡಿದು ಫೀಚರ್ಸ್, ಮೈಲೇಜ್, ಎಂಜಿನ್ ವಿವರಗಳವರೆಗೆ ಎಲ್ಲವನ್ನು ಇಲ್ಲಿ ಹೋಲಿಕೆ ಮಾಡಿದ್ದೇವೆ. ಬನ್ನಿ ನೋಡೋಣ.

ಎರಡು ಕುಟುಂಬ ಹೋಗಬಹುದಾದ ಕಾರುಗಳಿವು: 10 ಲಕ್ಷಕ್ಕಿಂತ ಕಡಿಮೆ ಬೆಲೆ..

ಭಾರತದಲ್ಲಿ ಸಾಮಾನ್ಯ ವರ್ಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಅವರು ತಮ್ಮ ಕುಟುಂಬಕ್ಕಾಗಿ ಹೊಚ್ಚ ಹೊಸ ಫ್ಯಾಮಿಲಿ ಕಾರನ್ನು ಖರೀದಿಸಬೇಕೆಂಬ ಬಹುದೊಡ್ಡ ಆಸೆಯನ್ನು ಹೊಂದಿರುತ್ತಾರೆ. ನೀವು ಹೆಚ್ಚಿನ ಆಸನವಿರುವ ನೂತನ ಕಾರನ್ನು ಕೊಂಡುಕೊಳ್ಳಲು ಆಲೋಚಿಸಿದ್ದೀರಾ.. ಹಾಗಾದರೆ, ಮಾರುತಿ ಸುಜುಕಿ ಇಕೋ, ರೆನಾಲ್ಟ್ ಟ್ರೈಬರ್, ಮಾರುತಿ ಸುಜುಕಿ ಎರ್ಟಿಗಾ, ಟೊಯೊಟಾ ರೂಮಿಯಾನ್, ಮಹೀಂದ್ರಾ ಬೊಲೆರೊ ನಿಯೋ ಕಾರುಗಳು ಹೆಚ್ಚು ಸೂಕ್ತವಾಗಲಿವೆ. ಬನ್ನಿ.. ಇವುಗಳ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಕೆಲವೊಂದು ವಿಚಾರಗಳ ಬಗ್ಗೆ ತಿಳಿಸಿಕೊಟ್ಟಿದ್ದೇವೆ.
Advertisement

Maruti Fronx: 7.5 ಲಕ್ಷದ ಕಾರಿಗೆ ಫುಲ್ ಡಿಮ್ಯಾಂಡ್

ಭಾರತದ ಪ್ರಮುಖ ಕಾರು ತಯಾರಕ ಕಂಪನಿಯಾಗಿರುವ ಮಾರುತಿ ಸುಜುಕಿ, ತನ್ನ ಕೈಗೆಟುಕುವ ಕಾರುಗಳಿಂದಲೇ ಭಾರೀ ಜನಪ್ರಿಯತೆ ಗಳಿಸಿದೆ. ಸದ್ಯ ಮಾರುತಿಗೆ ಫ್ರಾಂಕ್ಸ್ ಎಂಬ ಕಾರು ಭಾರೀ ಲಾಭವನ್ನು ತಂದುಕೊಡುತ್ತಿದೆ. ಯಾವ ಮಟ್ಟಿಗೆ ಅಂದರೆ ಕೇವಲ ಎರಡು ವರ್ಷಗಳಲ್ಲಿ ಬರೋಬ್ಬರಿ 3 ಲಕ್ಷಕ್ಕೂ ಅಧಿಕ ಕಾರುಗಳು ಮಾರಾಟವಾಗಿವೆ. ಅಷ್ಟಕ್ಕೂ ಆ ಕಾರು ಯಾವುದು ಗೊತ್ತಾ? 'ಮಾರುತಿ ಸುಜುಕಿ ಫ್ರಾಂಕ್ಸ್' (Maruti Suzuki Fronx), ಕೈಗೆಟುಕುವ ಬೆಲೆಯಲ್ಲಿ ಆಕರ್ಷಕ ಡಿಸೈನ್, ಅತ್ಯುತ್ತಮ ಫೀಚರ್ಸ್, ಅಧಿಕ ಮೈಲೇಜ್‌ನೊಂದಿಗೆ ಸದ್ಯ ದೇಶದಲ್ಲಿ ಉತ್ತಮ ಮಾರಾಟ ಕಾಣುತ್ತಿರುವ ಕಾರಾಗಿ ಜನಪ್ರಿಯತೆ ಪಡೆದುಕೊಂಡು ಮುನ್ನುಗ್ಗುತ್ತಿದೆ.