Maruti: ಮಾರುತಿಯ ಅಗ್ಗದ ಜನಪ್ರಿಯ ಕಾರೀಗ ಮತ್ತಷ್ಟು ಸುರಕ್ಷಿತ
ಆಟೋಮೊಬೈಲ್ಸ್
- 1 year, 7 month, 6 days ago
ಮಾರುತಿ ಸುಜುಕಿ ಕಂಪನಿಯು 2025ರ ವರ್ಷಕ್ಕೆ ಬ್ರೆಝಾವನ್ನು ಹೆಚ್ಚುವರಿ ಸುರಕ್ಷತಾ ಮತ್ತು ಅನುಕೂಲಕರ ವೈಶಿಷ್ಟ್ಯಗಳೊಂದಿಗೆ ಸ್ಟ್ಯಾಂಡರ್ಡ್ ಆಗಿ ನವೀಕರಿಸಿದೆ. ಹೊಸ ಬ್ರೆಝಾ ಬೆಲೆಗಳು ಪ್ರಸ್ತುತ 8.54 ಲಕ್ಷ ರೂ.ಗಳಿಂದ 14.14 ಲಕ್ಷ ರೂ.ಗಳವರೆಗೆ (ಎಕ್ಸ್ ಶೋರೂಂ) ಇವೆ. ಹೊಸ ಮಾರುತಿ ಸುಜುಕಿ ಸಬ್ ಕಾಂಪ್ಯಾಕ್ಟ್ ಎಸ್‌ಯುವಿ ಬ್ರೆಝಾ ಈಗ ಆರು ಏರ್ ಬ್ಯಾಗ್‌ಗಳೊಂದಿಗೆ ಸ್ಟ್ಯಾಂಡರ್ಡ್ ಆಗಿ ನೀಡಲಾಗುವುದು. 6 ಏರ್ ಬ್ಯಾಗ್‌ಗಳ ಹೊರತಾಗಿ, ಬ್ರೆಝಾ ಈಗ ಎಲ್ಲಾ ಪ್ರಯಾಣಿಕರಿಗೆ ಮೂರು-ಪಾಯಿಂಟ್ ಸೀಟ್ ಬೆಲ್ಟ್ ಗಳನ್ನು ಸಹ ನೀಡುತ್ತದೆ. ಈ ಹಿಂದೆ ಎಲ್ಲಾ ಫೀಚರ್‌ಗಳು ಎಸ್‌ಯುವಿಯ ಟಾಪ್ ವೇರಿಯೆಂಟ್‌ಗಳಲ್ಲಿ ಮಾತ್ರ ಲಭ್ಯವಿದ್ದವು. ಅಂದರೆ ZXI+ ಟ್ರಿಮ್‌ಗೆ ಮಾತ್ರ ಆರು ಏರ್ ಬ್ಯಾಗ್‌ಗಳನ್ನು ನೀಡಲಾಗುತ್ತಿತ್ತು. ಇದೀಗ ಈ ಎಸ್‌ಯುವಿ ಕಳೆದ ಫೆಬ್ರವರಿ 2025 ರ ಆರಂಭದಲ್ಲಿ 20,000 ರೂ.ಗಳವರೆಗೆ ಬೆಲೆ ಏರಿಕೆಯನ್ನು ಪಡೆದಿದೆ. ಈಗ ಎಲ್ಲಾ ವೇರಿಯೆಂಟ್‌ಗಳಲ್ಲಿಯೂ ಸ್ಟ್ಯಾಂಡರ್ಡ್ ಆಗಿ ಲಭ್ಯವಿದೆ.