New car launches: ಹೊಸ ಕಾರು ಖರೀದಿಸುತ್ತಿದ್ದೀರಾ?

New car launches: ಭಾರತದಲ್ಲಿ ಕಾರು ಖರೀದಿಸುವವರ ಸಂಖ್ಯೆ ಕಳೆದ ಐದು ವರ್ಷಗಳಲ್ಲಿ ದುಪ್ಪಟ್ಟಾಗಿದೆ. ಮಧ್ಯಮ ವರ್ಗದವರಿಗಾಗಿ ಕೈಗೆಟುಕುವ ಬೆಲೆಯ ಕಾರುಗಳನ್ನು ತಯಾರಕರು ಪರಿಚಯಿಸುತ್ತಿದ್ದು, ಸದ್ಯ ದೇಶದಲ್ಲಿ ಬಹುತೇಕ ಎಲ್ಲಾ ಬ್ರಾಂಡ್‌ಗಳು ಲಾಭದಲ್ಲಿವೆ. ಕಳೆದ ತಿಂಗಳು (ಮಾರ್ಚ್) ಕೂಡ ಹೆಚ್ಚಾಗಿ ಐಷಾರಾಮಿ ಕಾರುಗಳು ಬಿಡುಗಡೆಯಾಗಿದ್ದವು. ಆದರೆ ಈಗ ಏಪ್ರಿಲ್ ತಿಂಗಳು ಸಾಮೂಹಿಕ ಮಾರುಕಟ್ಟೆ ಬ್ರಾಂಡ್‌ಗಳಿಂದ ಅನೇಕ ಎಸ್‌ಯುವಿಗಳು ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದರಲ್ಲಿ ಮಾರುತಿಯ ಮೊದಲ ಎಲೆಕ್ಟ್ರಿಕ್ ಎಸ್‌ಯುವಿ ಸೇರಿದಂತೆ ಕಿಯಾ, ಸ್ಕೋಡಾ, ಫೋಕ್ಸ್‌ವ್ಯಾಗನ್ ಸೇರಿದಂತೆ ಬಿಎಂಡಬ್ಲ್ಯು ಬ್ರಾಂಡ್‌ಗಳ ಕಾರುಗಳು ಬಿಡುಗಡೆಗೆ ಸಜ್ಜಾಗಿವೆ.

Nissan: ಭಾರತದಲ್ಲಿ ನಿಸ್ಸಾನ್‌ಗೆ ಆಧಾರಸ್ತಂಭವಾದ ಕಾರು

ನಿಸ್ಸಾನ್ (Nissan) ಮೋಟಾರ್ ಇಂಡಿಯಾ ಪ್ರೈ. ಲಿಮಿಟೆಡ್ (NMIPL) ಭಾರತದಲ್ಲಿ ಸ್ಥಿರ ಮತ್ತು ಸುಸ್ಥಿರ ಬೆಳವಣಿಗೆಯನ್ನು ಮುಂದುವರೆಸಿದೆ, ಕಳೆದ ಏಳು ವರ್ಷಗಳಲ್ಲಿ ಹಿಂದೆಂದು ಸಾಧಿಸದ ಮಾರಾಟವನ್ನು 2024-25ನೇ ಹಣಕಾಸು ವರ್ಷದಲ್ಲಿ ಸಾಧಿಸಿದೆ. ಈ ವರ್ಷವು ಹೊಸ ನಿಸ್ಸಾನ್ ಮ್ಯಾಗ್ನೈಟ್‌ನ ನಿರಂತರ ಯಶಸ್ಸಿನಿಂದ ಈ ಮಾರಾಟವು ಹೆಚ್ಚಾಗಿದೆ. 2024-25ನೇ ಹಣಕಾಸು ವರ್ಷದಲ್ಲಿ ನಿಸ್ಸಾನ್ ಮೋಟಾರ್ ಇಂಡಿಯಾ 28,000 ಕ್ಕೂ ಹೆಚ್ಚು ಯುನಿಟ್‌ ಕಾರುಗಳ ಒಟ್ಟು ದೇಶೀಯ ಮಾರಾಟವನ್ನು ದಾಖಲಿಸಿದೆ. ಇದರಲ್ಲಿ ಅಕ್ಟೋಬರ್ 2024 ರಲ್ಲಿ ಪರಿಚಯಿಸಲಾದ ಹೊಸ ನಿಸ್ಸಾನ್ ಮ್ಯಾಗ್ನೈಟ್ ಕೂಡ ಇದೆ.

ತಿಂಗಳಾರಂಭದ ಮೊದಲ ದಿನವೇ ಶಾಕ್: ಇನ್ನೂ ಹೊಸ ಕಾರುಗಳು ದುಬಾರಿ..

ಇಂದಿನಿಂದ 2025 - 26 ಹಣಕಾಸಿನ ವರ್ಷ ಆರಂಭವಾಗಲಿದೆ. ಪ್ರಮುಖ ವಾಹನ ತಯಾರಕ ಕಂಪನಿಗಳಾದ ಮಾರುತಿ ಸುಜುಕಿ ಇಂಡಿಯಾ, ಹ್ಯುಂಡೈ ಮೋಟಾರ್ ಇಂಡಿಯಾ, ಟಾಟಾ ಮೋಟಾರ್ಸ್, ಮಹೀಂದ್ರಾ, ಕಿಯಾ ಇಂಡಿಯಾ, ಬಿಎಂಡಬ್ಲ್ಯೂ ಗ್ರೂಪ್ ಇಂಡಿಯಾ ಹಾಗೂ ನಿಸ್ಸಾನ್ ಇಂಡಿಯಾ ವಿವಿಧ ಕಾರುಗಳ ಬೆಲೆಯನ್ನು ಹೆಚ್ಚಿಸಿವೆ. ಬಿಡಿಭಾಗಗಳ ದರ ಏರಿಕೆ, ತಯಾರಿಕಾ ವೆಚ್ಚ ಅಧಿಕಗೊಳ್ಳುವಿಕೆ, ಹಣದುಬ್ಬರ ಹಾಗೂ ಕಾರ್ಯಾಚರಣೆ ವೆಚ್ಚಗಳು ದುಪಟ್ಟುಗೊಂಡಿರುವುದು ಸೇರಿದಂತೆ ಹಲವು ಕಾರಣಗಳಿಗೆ ಈ ಕ್ರಮವನ್ನು ಕೈಗೊಂಡಿವೆ.

ಹೋಂಡಾ ಆಕ್ಟಿವಾ 125ಗೆ ಮೂರು ಪರ್ಯಾಯ ಸ್ಕೂಟರ್‌ಗಳಿವು..

ಹೋಂಡಾ ಆಕ್ಟಿವಾ 125 (Honda Activa 125) ಪ್ರಖ್ಯಾತ ಸ್ಕೂಟರ್ ಆಗಿದೆ. ಇದು ರೂ.94,000 ರಿಂದ ರೂ.97,000 (ಎಕ್ಸ್ ಶೋರೂಂ) ದರವನ್ನು ಪಡೆದಿದೆ. 123.92 ಸಿಸಿ ಪೆಟ್ರೋಲ್ ಎಂಜಿನ್ ಹೊಂದಿದ್ದು, 48 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಟಿಎಫ್‌ಟಿ ಕನ್ಸೋಲ್, ಟರ್ನ್-ಬೈ-ಟರ್ನ್ ನ್ಯಾವಿಗೇಶನ್‌, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ಮತ್ತು ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಗಾಗಿ ಡಿಸ್ಕ್/ ಡ್ರಮ್ ಬ್ರೇಕ್ ಆಯ್ಕೆಯನ್ನು ಪಡೆದಿದೆ. ಈ ಆಕ್ಟಿವಾ 125ಗೆ ಪರ್ಯಾಯವಾಗಿ ಗ್ರಾಹಕರು ಈ 3 ಸ್ಕೂಟರ್‌ಗಳನ್ನು ಖರೀದಿ ಮಾಡಬಹುದು. ಬನ್ನಿ.. ಇವುಗಳ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಸಂಕ್ಷಿಪ್ತವಾದ ವಿವರವನ್ನು ತಿಳಿಯೋಣ.
Advertisement

ಬಿಡುಗಡೆಯೇ ಆಗಿಲ್ಲ.. ಈ ಅತಿ ಸಣ್ಣ ಎಲೆಕ್ಟ್ರಿಕ್ ಕಾರಿಗೆ..

ವಿಯೆಟ್ನಾಂ ಮೂಲದ ವಿನ್‌ಫಾಸ್ಟ್ (VinFast) ಜನಪ್ರಿಯ ವಾಹನ ತರಯಕ ಕಂಪನಿ ಆಗಿದ್ದು, ಭಾರತದ ಕಾರು ಮಾರುಕಟ್ಟೆಯನ್ನು ಪ್ರವೇಶಿಸಲು ಭರದಿಂದ ಸಿದ್ದತೆಯನ್ನು ಮಾಡಿಕೊಳ್ಳುತ್ತಿದೆ. ಕಳೆದ ಜನವರಿಯಲ್ಲಿ ಮುಕ್ತಾಯಗೊಂಡ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಮೊದಲ ಬಾರಿಗೆ ಹೊಚ್ಚ ಹೊಸ 'ವಿಎಫ್3' ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್‌ನ್ನು ಅನಾವರಣಗೊಳಿಸಿತ್ತು. ಈ ಕಾರು ಬಿಡುಗಡೆಯಾದ ಮೇಲೆ ಟಾಟಾ ಟಿಯಾಗೊ ಇವಿ, ಎಂಜಿ ಕಾಮೆಟ್ ಇವಿ ಹಾಗೂ ಸಿಟ್ರನ್ ಇಸಿ3 ಎಲೆಕ್ಟ್ರಿಕ್ ಕಾರುಗಳ ಪ್ರಬಲವಾದ ಸ್ಪರ್ಧೆಯನ್ನು ಎದುರಿಸಬೇಕಾಗಿದೆ.

ನಿಮ್ಮ CNG ಕಾರಿನ ಮೈಲೇಜ್ ಹೆಚ್ಚಿಸಬೇಕೆ? 5 ಡ್ರೈವಿಂಗ್ ಟಿಪ್ಸ್

ದೇಶದಲ್ಲಿ ಇತ್ತೀಚೆಗೆ ಸಿಎನ್‌ಜಿ ಕಾರುಗಳಿಗೆ ಭಾರೀ ಬೇಡಿಕೆ ವ್ಯಕ್ತವಾಗುತ್ತಿದೆ. ಆದರೆ ಜನರು ತಮ್ಮ ಸಿಎನ್‌ಜಿ ಕಾರುಗಳನ್ನು ಖರೀದಿಸಿದ ಬಳಿಕ ಅವುಗಳ ಬಗ್ಗೆ ಸರಿಯಾದ ಕಾಳಜಿ ವಹಿಸದಿರುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಸರಿಯಾದ ನಿರ್ವಹಣೆ ಇಲ್ಲದಿರುವ ಕಾರಣ ಕಳಪೆ ಪರ್ಫಾಮೆನ್ಸ್ ಹಾಗೂ ಕಡಿಮೆ ಮೈಲೇಜ್‌ನಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನೀವು ಸಹ ಇದೇ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ನೀವು ಈ 5 ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ತುಂಬಾ ಮುಖ್ಯ. ನಾವು ಹೇಳುವ ಈ ವಿಷಯಗಳನ್ನು ಪರಿಶೀಲಿಸಿ ನಿರ್ವಹಣೆ ಮಾಡಿದರೆ ನಿಮ್ಮ ಸಿಎನ್‌ಜಿ ಕಾರು ಉತ್ತಮ ಮೈಲೇಜ್ ಹಾಗೂ ಪರ್ಫಾಮೆನ್ಸ್ ನೀಡುತ್ತದೆ.

ಕಾರಿಗೂ ಮೀರಿಸುವ ವೈಶಿಷ್ಟ್ಯಗಳು.. ಅತ್ಯುತ್ತಮ ಎಲೆಕ್ಟ್ರಿಕ್..

ಭಾರತದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳು ದಿನದಿಂದ ದಿನಕ್ಕೆ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಗಳಿಸುತ್ತಿದ್ದು, ಭಾರೀ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ನೀವು ಹೊಚ್ಚ ಹೊಸ ಸ್ಕೂಟರ್‌ವೊಂದನ್ನು ಖರೀದಿ ಮಾಡಲು ಆಲೋಚಿಸಿದ್ದೀರಾ.. ಹಾಗಾದರೆ, ಬಜಾಜ್ ಚೇತಕ್, ಟಿವಿಎಸ್ ಐಕ್ಯೂಬ್, ಓಲಾ ಎಸ್1 ಎಕ್ಸ್, ಎಥರ್ ರಿಜ್ಟಾ, ಹೀರೋ ವಿಡಾ ವಿ2 ಹಾಗೂ ಅಲ್ಟ್ರಾವೈಲೆಟ್ ಟೆಸ್ಸೆರಾಕ್ಟ್ ಮಾಡೆಲ್‌ಗ‌ಳು ಹೆಚ್ಚು ಸೂಕ್ತವಾಗಲಿವೆ. ಬನ್ನಿ.. ಇವುಗಳ ಬೆಲೆ ಹಾಗೂ ವಿಶೇಶತೆಗಳ ಕುರಿತಂತೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಯೋಣ.

ಡ್ಯುಯಲ್ ಜೋನ್ AC ಹೊಂದಿರುವ 5 ಅತ್ಯಂತ ಅಗ್ಗದ ಕಾರುಗಳು!

ದೇಶದ ಬಹುತೇಕ ಎಲ್ಲಾ ರಾಜ್ಯಗಳು ಬೇಸಿಗೆಯಲ್ಲಿ ಹೆಚ್ಚಿನ ಬಿಸಿಲನ್ನು ಹೊಂದಿರುವ ಕಾರಣ ಭಾರತೀಯ ಕಾರು ತಯಾರಕರು ಬಲವಾದ ಹವಾನಿಯಂತ್ರಣ (ಎಸಿ) ವ್ಯವಸ್ಥೆಯನ್ನು ಹೊಂದಿರುವ ಕಾರುಗಳನ್ನು ನಿರ್ಮಿಸಲು ಮುಂದಾಗುತ್ತಿದ್ದಾರೆ. ಕಾರಿನ ಒಳಗಿನ ತಾಪಮಾನವನ್ನು ನಿಯಂತ್ರಿಸುವ ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್ ಈಗ ಟ್ರೆಂಡಿಂಗ್‌ನಲ್ಲಿರುವ ಪ್ರಮುಖ ಫೀಚರ್ ಆಗಿದೆ. ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್ ಹೊಂದಿರುವ ಕಾರುಗಳಿಗೆ ದೇಶದಲ್ಲಿ ಭಾರೀ ಬೇಡಿಕೆ ಇದೆ. ಸದ್ಯ ಭಾರತದ ಟಾಪ್ 5 ಅತ್ಯಂತ ಕೈಗೆಟುಕುವ ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್ ಹೊಂದಿರುವ ಕಾರುಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇವೆ.
Advertisement

Mahindra: ಸೇನೆಗೆ ಪವರ್‌ಫುಲ್‌ ವಾಹನಗಳ ನೀಡಲು ಮಹೀಂದ್ರಾ ಸಜ್ಜು

ದೇಶದ ಜನಪ್ರಿಯ ಎಸ್‌ಯುವಿ ತಯಾರಕ ಕಂಪನಿಯೊಂದಿಗೆ ಭಾರತೀಯ ಸೇನೆ ಒಪ್ಪಂದ ಮಾಡಿಕೊಂಡಿದೆ. ಪವರ್‌ಫುಲ್ ಪಿಕಪ್‌ಗಳ ದೊಡ್ಡ ಆರ್ಡರ್ ಅನ್ನು ಮಹೀಂದ್ರಾ (Mahindra) ಗೆ ನೀಡಿದೆ. ಹೌದು ದೇಶಿಯ ಬ್ರಾಂಡ್ ಆಗಿರುವ ಮಹೀಂದ್ರಾ ಜೊತೆಗೆ ಇತ್ತೀಚೆಗೆ ಭಾರತೀಯ ಸಶಸ್ತ್ರ ಪಡೆ ರೂ. 2,700 ಕೋಟಿ ಒಪ್ಪಂದಕ್ಕೆ ಸಹಿ ಹಾಕಿದೆ. ಕಂಪನಿಯ ಜನಪ್ರಿಯ ಮಾಡಲ್ ಆಗಿರುವ ಸ್ಕಾರ್ಪಿಯೋ ಪಿಕ್-ಅಪ್ ಈಗ ಭಾರತೀಯ ಸಶಸ್ತ್ರ ಪಡೆಗೆ ಸೇರಲಿದೆ. ಇದರೊಂದಿಗೆ, ಕಂಪನಿಯು ಈಗ 4,000 ಕ್ಕೂ ಹೆಚ್ಚು ಸ್ಕಾರ್ಪಿಯೋ ಪಿಕ್-ಅಪ್‌ಗಳು, ಸ್ಕಾರ್ಪಿಯೋ ಕ್ಲಾಸಿಕ್, ಸ್ಕಾರ್ಪಿಯೋ-ಎನ್ ಮತ್ತು ಬೊಲೆರೊ ಪಿಕ್-ಅಪ್ 4WD ಗಳನ್ನು ಸೇನೆಗೆ ಪೂರೈಸಲಿದೆ.

Suzuki: ಸುಜುಕಿ ಹೊಸ ಸ್ಕೂಟರ್‌ಗಳ ಎಂಜಿನ್ ಅಪ್‌ಡೇಟ್

ಕಮ್ಯೂಟರ್ ಸ್ಕೂಟರ್ ವಿಭಾಗದಲ್ಲಿ ಆಕರ್ಷಕ ಆಯ್ಕೆಗಳಾದ ಪ್ರಮುಖ ಸ್ಕೂಟರ್‌ಗಳಲ್ಲಿ ಅವೆನಿಸ್ ಹಾಗೂ ಬರ್ಗ್‌ಮ್ಯಾನ್ ಭಾರತದಲ್ಲಿ ಉತ್ತಮ ಬೇಡಿಕೆಯನ್ನು ಪಡೆದಿವೆ. ಕೊನೆಗೂ ಸುಜುಕಿ ಕಂಪನಿಯು ಈ ಎರಡೂ ಸ್ಕೂಟರ್‌ಗಳನ್ನು OBD-2B ಎಂಜಿನ್‌ಗಳೊಂದಿಗೆ ನವೀಕರಿಸಿ ಮೈಲೇಜ್ ಹಾಗೂ ಎಂಜಿನ್ ಪರ್ಫಾಮೆನ್ಸ್ ಹೆಚ್ಚಿಸಿದೆ. ಈ ಮೂಲಕ ನವೀಕರಿಸಿದ OBD-2B ಸುಜುಕಿ ಬರ್ಗ್‌ಮನ್ ಸ್ಟ್ರೀಟ್ EX ಈಗ ರೂ. 1,16,200 (ಎಕ್ಸ್‌ ಶೋರೂಂ) ಆರಂಭಿಕ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಹಾಗೆಯೇ ಬರ್ಗ್‌ಮನ್ ಸ್ಟ್ರೀಟ್ ಬೆಲೆಯು ರೂ.95,800 (ಎಕ್ಸ್‌ ಶೋರೂಂ)ನಿಂದ ಪ್ರಾರಂಭವಾಗುತ್ತದೆ.

Kinetic E-Luna: ಹಳ್ಳಿ & ಸಿಟಿಗೂ ಸೈ.. ಶೀಘ್ರ ಹೊಸ ರೂಪದಲ್ಲಿ..

ದೇಶದಲ್ಲಿ ದಶಕಗಳ ಹಿಂದೆ 'ಕೈನೆಟಿಕ್ ಲೂನಾ' ಸಾಮಾನ್ಯ ವರ್ಗದ ಜನರ ಮೆಚ್ಚಿನ ದ್ವಿಚಕ್ರ ವಾಹನವಾಗಿತ್ತು. ಕಳೆದ ವರ್ಷದ ಫೆಬ್ರವರಿ ತಿಂಗಳಲ್ಲಿ ಈ ಸ್ಕೂಟರ್‌ನ್ನು ಎಲೆಕ್ಟ್ರಿಕ್ ಅವತಾರದಲ್ಲಿಯೂ ಮಾರಾಟಕ್ಕೆ ತರಲಾಗಿತ್ತು. ಇದು ಹೆಚ್ಚು ಕೈಗೆಟುಕುವ ಬೆಲೆಯಲ್ಲಿಯೂ ಖರೀದಿಗೆ ದೊರೆಯಲಿದ್ದು, ಹೆಚ್ಚು ಆಕರ್ಷಕವಾದ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಸದ್ಯ, ಕೈನೆಟಿಕ್ ಗ್ರೀನ್ (Kinetic Green) ಕಂಪನಿಯು ಈ ಮೊಪೆಡ್‍ನ್ನು ನವೀಕರಿಸಲು ಮುಂದಾಗಿದ್ದು, ಅತಿ ಶೀಘ್ರದಲ್ಲಿಯೇ ಹೊಸ ರೂಪದಲ್ಲಿ ಬಿಡುಗಡೆಗೊಳಿಸಲು ಸಿದ್ದತೆಯನ್ನು ನಡೆಸುತ್ತಿದೆ. ಬನ್ನಿ.. ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಹೊಸ ಬಹುಪಯೋಗಿ ಇ-ಸ್ಕೂಟರ್ 'ಡಿಪ್ಲೋಸ್ ಮ್ಯಾಕ್ಸ್' ವಿಶೇಷತೆಗಳು!

ಭಾರತದ ಪ್ರಮುಖ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾದ ನ್ಯೂಮೆರೋಸ್ ಮೋಟಾರ್ಸ್ (Numeros Motors), ತನ್ನ ಬಹು-ಉಪಯುಕ್ತ ಇ-ಸ್ಕೂಟರ್ ಡಿಪ್ಲೋಸ್ ಮ್ಯಾಕ್ಸ್ ಇವಿ ಸ್ಕೂಟರ್ ಅನ್ನು 1,13,399 ರೂ. ಎಕ್ಸ್ - ಶೋರೂಂ ಬೆಲೆಯಲ್ಲಿ ಭಾರತದಲ್ಲಿ ಬಿಡುಗಡೆ ಮಾಡಿದೆ. ಡಿಪ್ಲೋಸ್ ಸ್ಕೂಟರ್ ‌ನ ಪ್ಲಾಟ್‌ ಫಾರ್ಮ್ ಅನ್ನು ಅತ್ಯಾಧುನಿಕ ಎಂಜಿನಿಯರಿಂಗ್ ಮತ್ತು ನವೀನ ವಿನ್ಯಾಸದ ಮೇಲೆ ನಿರ್ಮಿಸಲಾಗಿದ್ದು, ಸಂಪೂರ್ಣವಾಗಿ ಸಂಪರ್ಕಿತ ಮತ್ತು ತಡೆರಹಿತ ಬಳಕೆದಾರ ಅನುಭವವನ್ನು ನೀಡುತ್ತದೆ ಎಂದು ಕಂಪನಿ ತಿಳಿಸಿದೆ.
Advertisement

6 ಏರ್‌ಬ್ಯಾಗ್‌ನ ಮಾರುತಿ ಸೆಲೆರಿಯೊ ಕಾರು ಖರೀದಿಸಬೇಕೇ..

ಮಾರುತಿ ಸುಜುಕಿ ಸೆಲೆರಿಯೊ (Maruti Suzuki Celerio) ಜನಪ್ರಿಯ ಹ್ಯಾಚ್‌ಬ್ಯಾಕ್ ಆಗಿದೆ. ಈ ಕಾರನ್ನು 6 ಏರ್‌ಬ್ಯಾಗ್‌ನೊಂದಿಗೆ ಮೇಲ್ದರ್ಜೆರಿಸಲಾಗಿದ್ದು, ರೂ.5.64 ಲಕ್ಷದಿಂದ ರೂ.7.37 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ನೀವು ಸಹ 'ಸೆಲೆರಿಯೊ' ಹ್ಯಾಚ್‌ಬ್ಯಾಕ್‌ನ್ನು ಕೊಂಡುಕೊಳ್ಳಲು ಪ್ಲ್ಯಾನ್ ಮಾಡಿದ್ದೀರಾ.. ನಾವಿಲ್ಲಿ ಈ ಹೊಚ್ಚ ಹೊಸ ಕಾರಿನ ಆನ್-ರೋಡ್ ಬೆಲೆ (On-Road Price) ಹಾಗೂ ಇಎಂಐ (EMI) ಆಯ್ಕೆಯ ಕುರಿತಂತೆ ಸಂಕ್ಷಿಪ್ತವಾಗಿ ತಿಳಿಸಿಕೊಟ್ಟಿದೇವೆ.

ಬಡವರ ಬಂಡಿ 'ಹೀರೋ ಸ್ಪ್ಲೆಂಡರ್ ಪ್ಲ​ಸ್‌'ಗೆ 3 ಪರ್ಯಾಯ ಬೈಕ್‌ಗಳಿವು..

ಹೀರೋ ಸ್ಪ್ಲೆಂಡರ್ ಪ್ಲಸ್ (Hero Splendor Plus) ಜನಪ್ರಿಯ ಮೋಟಾರ್‌ಸೈಕಲ್ ಆಗಿದೆ. ಇದು ರೂ.76,000 ರಿಂದ ರೂ.79,000 (ಎಕ್ಸ್-ಶೋರೂಂ) ದರದಲ್ಲಿ ಖರೀದಿಗೆ ದೊರೆಯುತ್ತದೆ. 97.2 ಸಿಸಿ ಪೆಟ್ರೋಲ್ ಎಂಜಿನ್ ಹೊಂದಿದ್ದು, 70 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಫೋರ್ಸ್ ಸಿಲ್ವರ್ ಹಾಗೂ ಬ್ಲ್ಯಾಕ್ ರೆಡ್ ಪರ್ಪಲ್ ಒಳಗೊಂಡಂತೆ ಹಲವು ಬಣ್ಣಗಳೊಂದಿಗೂ ಸಿಗುತ್ತದೆ. ಸುರಕ್ಷತೆಗಾಗಿ ಡ್ರಮ್ ಬ್ರೇಕ್‌ಗಳನ್ನು ಪಡೆದಿದೆ. 9.8 ಲೀ. ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‌ನ್ನು ಒಳಗೊಂಡಿದೆ. ಈ 'ಸ್ಪ್ಲೆಂಡರ್ ಪ್ಲಸ್‌'ಗೆ ಪರ್ಯಾಯವಾಗಿ ಗ್ರಾಹಕರು ಈ 3 ಬೈಕ್‌ಗಳನ್ನು ಖರೀದಿ ಮಾಡಬಹುದು. ಬನ್ನಿ.. ಇವುಗಳ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಸಂಕ್ಷಿಪ್ತವಾದ ವಿವರವನ್ನು ತಿಳಿಯೋಣ.

Defender: ಇತ್ತೀಚೆಗೆ ಬಿಡುಗಡೆಯಾದ ಆಫ್‌ರೋಡ್ ಕಿಂಗ್ 'ಡಿಫೆಂಡರ್ ಆಕ್ಟ

ಭಾರತದಲ್ಲಿ ಇತ್ತೀಚೆಗೆ 4x4 ಐಷಾರಾಮಿ SUV ಆದ ಹೊಸ 'ಡಿಫೆಂಡರ್ ಆಕ್ಟಾ' (Defender OCTA) ಎಸ್‌ಯುವಿನ್ನು ರೂ. 2 ಕೋಟಿ 59 ಲಕ್ಷ (ಎಕ್ಸ್-ಶೋರೂಂ) ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ಹೊರಭಾಗವು ಹೆಚ್ಚು ಆಕರ್ಷಕ ಹಾಗೂ ವಿಶಿಷ್ಟ ವಿನ್ಯಾಸದೊಂದಿಗೆ ನಿರ್ಮಾಣಗೊಂಡು ಈ ಬಾರಿ ತುಸು ಸವಾರಿ ಎತ್ತರವನ್ನು ಹೆಚ್ಚಿಸಲಾಗಿದೆ. ಮರುವಿನ್ಯಾಸಗೊಳಿಸಲಾದ ಬಂಪರ್‌ಗಳನ್ನು ಒದಗಿಸಲಾಗಿದ್ದು, ಕಠಿಣವಾದ ಇದರ ಅಂಡರ್‌ಬಾಡಿ ರಕ್ಷಣೆಯು ಚಾಲಕರು ಒರಟು ಭೂಪ್ರದೇಶದಲ್ಲೂ ಸುನಾಯಾಸವಾಗಿ ಓಡಿಸುವ ವಿಶ್ವಾಸವನ್ನು ಒದಗಿಸುತ್ತದೆ ಎಂದು ಕಂಪನಿ ಭರವಸೆ ನೀಡಿದೆ.

TATA: ಶೀಘ್ರ ಲಕ್ಷುರಿ ಫೀಚರ್‌ನ ಟಾಟಾದ ಹೊಸ ಎಲೆಕ್ಟ್ರಿಕ್ ಕಾರು..

ಹೊಚ್ಚ ಹೊಸ ಟಾಟಾ ಹ್ಯಾರಿಯರ್ ಇವಿ (Tata Harrier EV) ಅತಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಈ ಕಾರನ್ನು ಜನವರಿಯಲ್ಲಿ ಅದ್ದೂರಿಯಾಗಿ ಮುಕ್ತಾಯಗೊಂಡ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲೂ ಪ್ರದರ್ಶಿಸಲಾಗಿತ್ತು. ಇದು ಹೆಚ್ಚು ಆಕರ್ಷಕವಾದ ವೈಶಿಷ್ಟ್ಯಗಳನ್ನು ಹೊಂದಿರುವ ನಿರೀಕ್ಷೆಯಿದ್ದು, ಸ್ವಲ್ಪ ಹೆಚ್ಚಿನ ದರದಲ್ಲಿ ಮಾರಾಟಕ್ಕೆ ಬರಬಹುದು ಎಂದು ಹೇಳಲಾಗಿದೆ. ಬನ್ನಿ.. ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
Advertisement

ಭಾರತ ಮಾತ್ರವಲ್ಲ ವಿದೇಶದಲ್ಲೂ ಟಾಟಾ ಕಾರುಗಳಿಗೆ ಫುಲ್ ಡಿಮ್ಯಾಂಡ್

ಭಾರತದ ಅತಿದೊಡ್ಡ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್‌ನ ಅಂಗಸಂಸ್ಥೆಯಾದ TATA.ev, ಮಾರಿಷಸ್‌ ದೇಶದ ಪ್ರಮುಖ ಆಟೋಮೊಬೈಲ್ ವಿತರಕರಾದ ಅಲೈಡ್ ಮೋಟಾರ್ಸ್‌ನ ಸಹಯೋಗದೊಂದಿಗೆ, ಮಾರಿಷಸ್‌ ದೇಶದಲ್ಲಿ ಟಿಯಾಗೋ ಇವಿ (Tiago.ev), ಪಂಚ್ ಇವಿ (Punch.ev) ಮತ್ತು ನೆಕ್ಸಾನ್ (Nexon.ev) ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಿದೆ. ಸುಧಾರಿತ ಹೈ - ವೋಲ್ಟೇಜ್ ಆರ್ಕಿಟೆಕ್ಚರ್‌ಗಳ ಮೇಲೆ ನಿರ್ಮಿಸಲಾದ ಈ EVಗಳು ಪ್ರಮುಖ ವೈಶಿಷ್ಟ್ಯಗಳು, ಅತ್ಯುತ್ತಮ ದರ್ಜೆಯ ಸುರಕ್ಷತೆ ಮತ್ತು ಸಾಟಿಯಿಲ್ಲದ ಸೌಕರ್ಯವನ್ನು ನೀಡುತ್ತವೆ ಎಂದು ಅಲ್ಲಿನ ಜನರಿಗೆ ಟಾಟಾ ಹೇಳಿಕೊಂಡಿದೆ.

ಈ ಜನಪ್ರಿಯ ಎಸ್‌ಯುವಿಗಳು ರೂ.12 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಲಭ್ಯ..

ಭಾರತದ ಕಾರು ಮಾರುಕಟ್ಟೆಯಲ್ಲಿ ಎಸ್‌ಯುವಿಗಳು ದೊಡ್ಡ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ. ಇವುಗಳು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಹೊಂದಿರುವುದರಿಂದ ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ನೀವು ಹೊಚ್ಚ ಹೊಸ ಎಸ್‌ಯುವಿಯೊಂದನ್ನು ಕೊಂಡುಕೊಳ್ಳಲು ಆಲೋಚಿಸಿದ್ದೀರಾ.. ಹಾಗಾದರೆ, ರೂ.12 ಲಕ್ಷದೊಳಗೆ ಲಭ್ಯವಾಗುವ ಟಾಟಾ ಪಂಚ್, ಹ್ಯುಂಡೈ ಎಕ್ಸ್‌ಟರ್, ಕಿಯಾ ಸೈರಸ್, ಸ್ಕೋಡಾ ಕೈಲಾಕ್, ಹ್ಯುಂಡೈ ಕ್ರೆಟಾ, ಮಾರುತಿ ಸುಜುಕಿ ಫ್ರಾಂಕ್ಸ್, ಮಾರುತಿ ಸುಜುಕಿ ಬ್ರೆಝಾ ಹಾಗೂ ಹೋಂಡಾ ಎಲಿವೇಟ್‌ ಕಾರುಗಳು ಹೆಚ್ಚು ಸೂಕ್ತವಾಗಲಿವೆ.

2-seater car: ಬೈಕ್ ಬೆಲೆಯಲ್ಲಿ ಹೊಸ 2-ಸೀಟರ್ ಕಾರು

ಇದೇ ವರ್ಷ ಜನವರಿಯಲ್ಲಿ ನಡೆದ ಭಾರತ್ ಮೊಬಿಲಿಟಿ ಎಕ್ಸ್‌ಪೋ 2025 (Bharat Mobility Expo 2025) ರಲ್ಲಿ ಸೋಲಾರ್ ಎಲೆಕ್ಟ್ರಿಕ್ ಕಾರುಗಳ ತಯಾರಕ ಕಂಪನಿಯಾದ 'ವೈವ್ ಮೊಬಿಲಿಟಿ', ತನ್ನ ಬಹುನಿರೀಕ್ಷಿತ ಇವಾ ಕಾಂಪ್ಯಾಕ್ಟ್ ಸೋಲಾರ್ ಎಲೆಕ್ಟ್ರಿಕ್ 2-ಸೀಟರ್ ಕಾರನ್ನು (2-seater car) ಬಿಡುಗಡೆ ಮಾಡಿದೆ. ಟ್ರಾಫಿಕ್ ದಟ್ಟಣೆ, ಸೀಮಿತ ಪಾರ್ಕಿಂಗ್ ಸ್ಥಳ ಮತ್ತು ಹೆಚ್ಚುತ್ತಿರುವ ಇಂಧನ ವೆಚ್ಚಗಳಂತಹ ನಗರ ಜೀವನದ ಸವಾಲುಗಳನ್ನು ನಿಭಾಯಿಸಲು ಈ ಕಾರನ್ನು ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಇದರ ಬೆಲೆ ಹಾಗೂ ವಿಶೇಷತೆಗಳನ್ನು ಇಲ್ಲಿ ವಿವರಿಸಲಾಗಿದೆ.

Maruti: ಲಕ್ಷುರಿ ಫೀಚರ್ಸ್‌.. ಮಾರುತಿಯ ಮೊದಲ ಎಲೆಕ್ಟ್ರಿಕ್ ಕಾರು..

ಬಹುನೀರಿಕ್ಷಿತ ಮಾರುತಿ ಸುಜುಕಿ ಇ-ವಿಟಾರಾ (Maruti Suzuki e Vitara) ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆಗೆ ದಿನಗಣನೇ ಶುರುವಾಗಿದೆ. ಕಳೆದ ಜನವರಿಯಲ್ಲಿ ಮುಕ್ತಾಯಗೊಂಡ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾದ ಈ ಕಾರು, ಅತಿ ಶೀಘ್ರದಲ್ಲೇ ಮಾರಾಟಕ್ಕೆ ಬರಲಿದೆ. ಎಲ್ಲವು ಅಂದುಕೊಂಡಂತೆ ನಡೆದರೆ, ಇದೇ ಏಪ್ರಿಲ್‌ನಲ್ಲಿ ಗ್ರಾಹಕರ ಖರೀದಿಗೆ ದೊರೆಯಬಹುದು ಎನ್ನಲಾಗಿದೆ. ಆದರೆ, ಈ ಕುರಿತಂತೆ ಕಂಪನಿ ಕಡೆಯಿಂದ ಅಧಿಕೃತ ವಿವರಗಳು ಲಭ್ಯವಾಗಿಲ್ಲ. ಬನ್ನಿ.. ನೂತನ ಇ-ವಿಟಾರಾದ ನಿರೀಕ್ಷಿತ ಬೆಲೆ ಎಷ್ಟು.. ಯಾವೆಲ್ಲ ವಿಶೇಷತೆಗಳಿಗೆ ಸಾಕ್ಷಿಯಾಗಿದೆ ಎಂಬುದನ್ನು ತಿಳಿಯೋಣ.
Advertisement

ಶೀಘ್ರದಲ್ಲೆ ಹೊಸ ಫೋಕ್ಸ್‌ವ್ಯಾಗನ್ ಟಿಗುವಾನ್ R-ಲೈನ್ ಬಿಡುಗಡೆ

ಭಾರತದಲ್ಲಿ ಹೊಸ ಫೋಕ್ಸ್‌ವ್ಯಾಗನ್ ಟಿಗುವಾನ್‌ನ (Volkswagen Tiguan) ಸ್ಪೋರ್ಟಿ ಎಡಿಷನ್ ಆಗಿರುವ ''R'' ಲೈನ್ ಆವೃತ್ತಿಯನ್ನು ಕಂಪನಿ ಪರಿಚಯಿಸಲು ಸಜ್ಜಾಗಿದೆ. ಶೀಘ್ರದಲ್ಲೇ ಪರಿಚಯಿಸಲಿರುವ ಈ ಪ್ರಮುಖ ಎಸ್‌ಯುವಿ ಗಮನಾರ್ಹವಾದ 'ಆರ್' ಥೀಮ್‌ನ ಡಿಸೈನ್ ಮತ್ತು ಪ್ರೀಮಿಯಂ ಸೌಕರ್ಯದೊಂದಿಗೆ ಬರುತ್ತದೆ. ಅಲ್ಲದೇ ಹೊಸ ಟಿಗುವಾನ್ ಆರ್ - ಲೈನ್ ಸಂಪೂರ್ಣವಾಗಿ ಹೊಸ ವಿನ್ಯಾಸ, ಗಮನಾರ್ಹ ವೈಶಿಷ್ಟ್ಯಗಳು, ಎಸ್‌ಯುವಿಯ ಮುಂಭಾಗವು ಎಲ್ಇಡಿ ಪ್ಲಸ್ ಹೆಡ್‌ಲೈಟ್‌ಗಳು ಮತ್ತು ಗಾಜಿನಿಂದ ಆವೃತವಾದ ಪವರ್‌ಫುಲ್ ನೋಟವನ್ನು ಹೊಂದಿದೆ.

34 Km ಮೈಲೇಜ್.. 6 ಏರ್‌ಬ್ಯಾಗ್‌ನ ಅಗ್ಗದ ಮಾರುತಿ ಆಲ್ಟೊ ಕಾರು..

ಮಾರುತಿ ಸುಜುಕಿ ಆಲ್ಟೊ ಕೆ10 (Maruti Suzuki Alto K10) ಪ್ರಮುಖ ಹ್ಯಾಚ್‌ಬ್ಯಾಕ್ ಆಗಿ ಹೊರಹೊಮ್ಮಿದೆ. ಇದನ್ನು 6 ಏರ್‌ಬ್ಯಾಗ್‌ನೊಂದಿಗೆ ನವೀಕರಿಸಲಾಗಿದ್ದು, ಕನಿಷ್ಠ ರೂ.4.23 ಲಕ್ಷ ಹಾಗೂ ಗರಿಷ್ಠ ರೂ.6.21 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ನೀವು ಕೂಡ ಹೊಚ್ಚ ಹೊಸ ಆಲ್ಟೊ ಕೆ10 ಕಾರನ್ನು ಖರೀದಿಸಲು ಆಲೋಚಿಸಿದ್ದೀರಾ.. ನಾವಿಲ್ಲಿ ಈ ನೂತನ ಹ್ಯಾಚ್‌ಬ್ಯಾಕ್‌ನ ಆನ್-ರೋಡ್ ಬೆಲೆ (On-Road Price) ಹಾಗೂ ಇಎಂಐ (EMI) ಆಯ್ಕೆಯ ಕುರಿತಂತೆ ಸಂಕ್ಷಿಪ್ತವಾಗಿ ವಿವರಿಸಿದ್ದೇವೆ.

Ashok Layland: ಭರ್ಜರಿ ಆರ್ಡರ್ ಬಾಚಿಕೊಂಡ ಅಶೋಕ್ ಲೇಲ್ಯಾಂಡ್!

ಹಿಂದೂಜಾ ಗ್ರೂಪ್‌ನ ಭಾರತದ ಪ್ರಮುಖ ಕಂಪನಿ ಮತ್ತು ಭಾರತೀಯ ಸೇನೆಗೆ ಲಾಜಿಸ್ಟಿಕ್ಸ್ ವಾಹನಗಳ ಅತಿದೊಡ್ಡ ಪೂರೈಕೆದಾರರಾದ ಅಶೋಕ್ ಲೇಲ್ಯಾಂಡ್ (Ashok Layland), ಇಂದು ತನ್ನ ರಕ್ಷಣಾ ವ್ಯವಹಾರವು ರೂ. 700 ಕೋಟಿಗಿಂತ ಹೆಚ್ಚಿನ ಮೌಲ್ಯದ ಬಹು ಆರ್ಡರ್‌ಗಳನ್ನು ಗೆದ್ದಿದೆ ಎಂದು ಘೋಷಿಸಿದೆ. ಈ ಆರ್ಡರ್‌ಗಳ ಅಡಿಯಲ್ಲಿ ಸರಬರಾಜು ಮಾಡಲಾಗುವ ವಾಹನಗಳು ಕ್ಲೋಸ್-ಇನ್ ವೆಪನ್ ಸಿಸ್ಟಮ್ಸ್ (CIWS) ಕಾರ್ಯಕ್ರಮದ ಅಡಿಯಲ್ಲಿ ಸೈನ್ಯದ ಸಾಗಣೆ, ಲಾಜಿಸ್ಟಿಕ್ಸ್ ಮತ್ತು ಇತರ ವಿಶೇಷ ಮೊಬಿಲಿಟಿ ಅಗತ್ಯಗಳ ರಕ್ಷಣಾ ವಲಯದ ಅಗತ್ಯಗಳನ್ನು ಪೂರೈಸುತ್ತವೆ ಎಂದು ಅಶೋಕ್ ಲೇಲ್ಯಾಂಡ್ ಹೇಳಿದೆ.

Mahindra: ಈ ಫ್ಯಾಮಿಲಿ ಕಾರಿನ ಬೆಲೆ ಭಾರೀ ಇಳಿಕೆ.. 17 Km ಮೈಲೇಜ್..

ಮಹೀಂದ್ರಾ ಎಕ್ಸ್‌ಯುವಿ700 (Mahindra XUV700) ಜನಪ್ರಿಯ ಎಸ್‍ಯುವಿಯಾಗಿದೆ. ಇದು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ಹಾಗೆಯೇ ಫ್ಯಾಮಿಲಿ ಕಾರಾಗಿರುವುದರಿಂದ ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಸದ್ಯ, ಕಂಪನಿಯು ಈ 'ಎಕ್ಸ್‌ಯುವಿ700' ಎಸ್‍ಯುವಿಯನ್ನು ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗಿಸಲು ಮುಂದಾಗಿದ್ದು, ಇದೇ ಕಾರಿನ ಆಯ್ದ ರೂಪಾಂತರಗಳ (ವೇರಿಯೆಂಟ್) ಬೆಲೆಯನ್ನು ಭಾರೀ ಪ್ರಮಾಣದಲ್ಲಿ ಇಳಿಕೆ ಮಾಡಿದೆ.
Advertisement

ಭಾರತದ ಮೊದಲ AI ಪರ್ಸನಲ್ ಅಸಿಸ್ಟೆಂಟ್ ಕಾರನ್ನು ಪರಿಚಯಿಸಿದ MG ಮೋಟಾರ್

JSW MG ಮೋಟಾರ್ ಇಂಡಿಯಾ, ತನ್ನ MY2025 ಆವೃತ್ತಿಯೊಂದಿಗೆ MG ಆಸ್ಟರ್ ಗೆ 'ದಿ ಬ್ಲಾಕ್‌ಬಸ್ಟರ್ SUV' ಎಂಬ ಹೊಸ ಹೆಸರನ್ನು ಘೋಷಿಸಿದೆ. ಇದು ತನ್ನ ಗ್ರಾಹಕರಿಗೆ ಆಟೋ-ಟೆಕ್ ಮಾಸ್ಟರ್‌ಪೀಸ್ ಅನ್ನು ತರುವ ಬ್ರ್ಯಾಂಡ್‌ನ ಅತ್ಯಾಕರ್ಷಕ ಪರ್ಫಾಮೆನ್ಸ್, ಅತ್ಯಾಧುನಿಕತೆ, ನಾವೀನ್ಯತೆ ಮತ್ತು ತಂತ್ರಜ್ಞಾನವನ್ನು ಒಂದೇ ಪ್ಯಾಕೇಜ್‌ನಲ್ಲಿ ನೀಡುವ ಕಾರಾಗಿದೆ. MG ಆಸ್ಟರ್ ಈಗ ತನ್ನ ಹೊಸ ಶೈನ್ ರೂಪಾಂತರದೊಂದಿಗೆ ರೂ. 12.5 ಲಕ್ಷ (ಎಕ್ಸ್-ಶೋರೂಮ್) ಕ್ಕಿಂತ ಕಡಿಮೆ ಬೆಲೆಯಲ್ಲಿ ಪನೋರಮಿಕ್ ಸನ್‌ರೂಫ್ ಅನ್ನು ನೀಡುವ ತನ್ನ ವಿಭಾಗದಲ್ಲಿನ ಏಕೈಕ SUV ಆಗಿದೆ ಎಂದು ಕಂಪನಿ ಹೇಳಿದೆ.