ವಿದೇಶದಲ್ಲಿ ಭಾರತದ ತಾಕತ್ತು: MArG 155mm/45 Cal ಮೌಂಟೆಡ್ ಗನ್

ಭಾರತ್ ಫೋರ್ಸ್‌‌ನ ಸಂಪೂರ್ಣ ಸ್ವಾಮ್ಯದ ರಕ್ಷಣಾ ಅಂಗಸಂಸ್ಥೆಯಾದ ಕಲ್ಯಾಣಿ ಸ್ಟ್ರಾಟೆಜಿಕ್ ಸಿಸ್ಟಮ್ಸ್ ಲಿಮಿಟೆಡ್, 4x4 ಆಲ್ - ಟೆರೈನ್ ಪ್ಲಾಟ್‌ಫಾರ್ಮ್‌ನಲ್ಲಿ ಅಳವಡಿಸಲಾದ MArG 45 ಮೊಬೈಲ್ ಗನ್ ಸಿಸ್ಟಮ್ ಅನ್ನು IDEX ಅಬುಧಾಬಿ 2025 ರಲ್ಲಿ ಅನಾವರಣಗೊಳಿಸಿದೆ. ಈ ಪ್ರತಿಷ್ಠಿತ ಉಡಾವಣೆಯನ್ನು ಯುಎಇಗೆ ಭಾರತದ ರಾಯಭಾರಿ ಸಂಜಯ್ ಸುಧೀರ್ ಅವರು ನೆರವೇರಿಸಿದರು, ಇದು ಜಾಗತಿಕ ರಕ್ಷಣಾ ತಂತ್ರಜ್ಞಾನವನ್ನು ಮುನ್ನಡೆಸುವ ಭಾರತದ ಬದ್ಧತೆಯನ್ನು ಬಲಪಡಿಸಿದೆ ಎಂದು ಕಲ್ಯಾಣಿ ಸ್ಟ್ರಾಟೆಜಿಕ್ ಸಿಸ್ಟಮ್ಸ್ ಲಿಮಿಟೆಡ್ ಹೇಳಿದೆ.

TVS: ಹೊಸ ಟಿವಿಎಸ್ ಬೈಕ್ ಬಿಡುಗಡೆ

ಪ್ರಮುಖ ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ತಯಾರಕರಾದ ಟಿವಿಎಸ್ ಮೋಟಾರ್ (TVS Motor), ಹೊಚ್ಚ ಹೊಸ ಟಿವಿಎಸ್ ರೋನಿನ್ (TVS Ronin) 2025 ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಇದು ಆಧುನಿಕ - ರೆಟ್ರೊ ಮೋಟಾರ್‌ಸೈಕಲ್ ವರ್ಗದ ದಿಟ್ಟ ಹೊಸ ಆವೃತ್ತಿಯಾಗಿದೆ. ಪ್ರಾರಂಭದಿಂದಲೂ, ಟಿವಿಎಸ್ ರೋನಿನ್ ರೆಟ್ರೊ ಡಿಸೈನ್‌ನೊಂದಿಗೆ ಆಕರ್ಷಕ ಹಾಗೂ ಅತ್ಯಾಧುನಿಕ ತಂತ್ರಜ್ಞಾನದ ಮಿಶ್ರಣವನ್ನು ಹೊಂದಿದೆ. ಇದೀಗ 2025 ರ ಟಿವಿಎಸ್ ರೋನಿನ್ ರೋಮಾಂಚಕ ಬಣ್ಣಗಳು, ಹೊಸ ಡಿಸೈನ್ ಮತ್ತು ವರ್ಧಿತ ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾಗಿದೆ ಎಂದು ಕಂಪನಿ ಹೇಳಿದೆ.

Toyota: ಇನ್ನೋವಾ ಎಲೆಕ್ಟ್ರಿಕ್ ಕಾರಿನ ಮೊದಲ ಪ್ರದರ್ಶನ

ಭಾರತದಂತೆಯೇ ವಿಶ್ವದ ಹಲವು ದೇಶಗಳಲ್ಲಿ ವಿವಿಧ ಹೆಸರುಗಳಲ್ಲಿ ಟೊಯೋಟಾ ಇನ್ನೋವಾ ಮಾರಾಟ ಕಾಣುತ್ತಿದೆ. ಇತ್ತೀಚೆಗೆ ನಡೆದ ಐಐಎಂಎಸ್ 2025 (ಇಂಡೋನೇಷ್ಯಾ ಇಂಟರ್ನ್ಯಾಷನಲ್ ಮೋಟಾರ್ ಶೋ)ನಲ್ಲಿ ಟೊಯೊಟಾ ಕಂಪನಿಯು ಕಿಜಾಂಗ್ ಇನ್ನೋವಾ ಬಿಇವಿ ಕಾನ್ಸೆಪ್ಟ್ ಅನ್ನು ಪ್ರದರ್ಶಿಸಿದೆ. ಇದು ಸಂಪೂರ್ಣ ಎಲೆಕ್ಟ್ರಿಕ್ ಕಾರಾಗಿದ್ದು, ಇದು ಇಂಡೋನೇಷ್ಯಾದಲ್ಲಿ ಮುಂಬರುವ ವರ್ಷಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವ ಕುರಿತು ಯಾವುದೇ ಅಧಿಕೃತ ಮಾಹಿತಿಯನ್ನು ಹೊರಬಿಟ್ಟಿಲ್ಲವಾದರೂ, ಭವಿಷ್ಯದಲ್ಲಿ ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಬೇಡಿಕೆ ಹೆಚ್ಚಾದರೆ ಖಂಡಿತ ಇದನ್ನು ಬಿಡುಗಡೆ ಮಾಡಬಹುದು. ಎಲೆಕ್ಟ್ರಿಕ್ ಇನ್ನೋವಾ ವಿಶೆಷತೆಗಳು: 7- ಸೀಟರ್ ಟೊಯೊಟಾ ಇನ್ನೋವಾ ಬಿಇವಿ ಕಾನ್ಸೆಪ್ಟ್ ಮಾಡಲ್, 59.3 ಕಿಲೋವ್ಯಾಟ್ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಹೊಂದಿದೆ. ಈ ಬ್ಯಾಟರಿಯನ್ನು ಫ್ಲೋರ್ ಬೋರ್ಡ್‌ನಲ್ಲಿ ಅನೇಕ ಸಣ್ಣ ಮಾಡ್ಯೂಲ್‌ಗಳೊಂದಿಗೆ ಅಳವಡಿಸಲಾಗಿದೆ. ಜೊತೆಗೆ ಮುಂಭಾಗದಲ್ಲಿ, ಎಂಜಿನ್ ಬೇಯಲ್ಲಿ ದೊಡ್ಡ ಘಟಕವನ್ನು ಸ್ಥಾಪಿಸಲಾಗಿದೆ.

Renault: ಹ್ಯಾಚ್‌ಬ್ಯಾಕ್ ಬೆಲೆಯಲ್ಲಿ 7-ಸೀಟರ್ ಬಿಡುಗಡೆ

ರೆನಾಲ್ಟ್ (Renault) ಕಂಪನಿಯು ತನ್ನ 2025 ರ ಟ್ರೈಬರ್ (Triber) ಮತ್ತು ಕೈಗರ್ (Kiger) ಕಾರುಗಳನ್ನು ಅಪ್‌ಡೇಟ್ ಮಾಡಿ ಬಿಡುಗಡೆ ಮಾಡಿದೆ. ಹೊಸ ನವೀಕರಣಗಳ ಬಳಿಕ ಈಗ ಎರಡೂ ಕಾರುಗಳು ರೂ.6.1 ಲಕ್ಷ (ಎಕ್ಸ್‌ ಶೋರೂಂ) ಆರಂಭಿಕ ಬೆಲೆಯನ್ನು ಹೊಂದಿವೆ. ಅಪ್‌ಡೇಟ್ ಭಾಗವಾಗಿ ಎರಡೂ ಕಾರುಗಳಲ್ಲಿನ ಎಂಜಿನ್‌ಗಳಲ್ಲಿ ಬದಲಾವಣೆಗಳನ್ನು ತರಲಾಗಿದ್ದು, ಈಗ ಇ-20 ಕಾಂಪ್ಲೈಂಟ್ ಮಾಡಲಾಗಿದೆ. ಉಳಿದಂತೆ ಎರಡೂ ಕಾರುಗಳು ಡಿಸೈನ್‌ನಲ್ಲಿ ಯಾವುದೇ ಬದಲಾವಣೆಗಳನ್ನು ಪಡೆಯದಿದ್ದರೂ, ಫೀಚರ್‌ಗಳನ್ನು ಮರುಹೊಂದಿಸಲಾಗಿದೆ. ಮೊದಲಿಗಿಂತ ಹೆಚ್ಚು ಪ್ರೀಮಿಯಂ ಆಗಿ ಮಾಡಿರುವುದು ಮುಖ್ಯ ಹೈಲೈಟ್ ಆಗಿದೆ.
Advertisement

Aprilia Tuno 457: ಸದ್ದಿಲ್ಲದೆ ಅಪ್ರಿಲಿಯಾ ಟ್ಯುನೊ 457 ಬಿಡುಗಡೆ

ಭಾರತದಲ್ಲಿ ಇಟಾಲಿಯನ್ ಮೋಟಾರ್ ಸೈಕಲ್ ತಯಾರಕ ಕಂಪನಿಯಾದ ಎಪ್ರಿಲಿಯಾ ತನ್ನ ಹೊಸ ನೇಕೆಡ್ ಬೈಕ್ ಅನ್ನು ಸದ್ದಿಲ್ಲದೆ ಬಿಡುಗಡೆ ಮಾಡಿದೆ. ಇದು ಕಂಪನಿಯ ಬಹುನಿರೀಕ್ಷಿತ ಬೈಕ್ ಆಗಿದ್ದು, ಯುವಕರ ಉತ್ಸಾಹಕ್ಕೆ ತಕ್ಕಂತೆ ನಿರ್ಮಿಸಿರುವುದಾಗಿ ಕಂಪನಿ ಹೇಳಿದೆ. ವಿಷಯಕ್ಕೆ ಬಂದರೆ ಅಪ್ರಿಲಿಯಾ ಟ್ಯುನೊ 457 ನೇಕೆಡ್ ಬೈಕ್ (Aprilia Tuno 457 Naked Bike) ಭಾರತದ ಎಕ್ಸ್ ಶೋರೂಂ ದರದಂತೆ ರೂ.3.95 ಲಕ್ಷಕ್ಕೆ ಬಿಡುಗಡೆಯಾಗಿದೆ. ಎಪ್ರಿಲಿಯಾ ಟ್ಯೂನೊ 457 ಬೈಕ್‌ನ ಬ್ರಾಂಡ್ ಅಂಬಾಸಿಡರ್, ನಟ ಮತ್ತು ಪೆಟ್ರೋಲ್ ಹೆಡ್ ಜಾನ್ ಅಬ್ರಹಾಂ ಬಿಡುಗಡೆ ಮಾಡಿದರು.

Maruti: ಎರಡು ಹೊಸ ಮಾರುತಿ ಕಾರುಗಳ ಮಾಹಿತಿ ಸೋರಿಕೆ

ಮಾರುತಿ ಸುಜುಕಿ ಕಂಪನಿಯು ಕೊನೆಗೂ ತನ್ನ ಮೊದಲ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡುವುದನ್ನು ಖಚಿತಪಡಿಸಿದೆ. ಕಳೆದ ತಿಂಗಳು ದೆಹಲಿಯಲ್ಲಿ ನಡೆದ ಭಾರತ್ ಮೊಬಿಲಿಟಿ ಎಕ್ಸ್ಪೋದಲ್ಲಿ ಇ-ವಿಟಾರಾ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಅಧಿಕೃತವಾಗಿ ಅನಾವರಣಗೊಳಿಸಿದೆ. ಈ ಎಲೆಕ್ಟ್ರಿಕ್ ಎಸ್‌ಯುವಿ ಭಾರತದಲ್ಲಿ ಮಾರುತಿಯ ಮೊದಲ ಇವಿ ಕಾರಾಗಿದ್ದು, ಇದರ ನಂತರ ಕಂಪನಿಯು ಇನ್ನೂ ಎರಡು ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆ ಮಾಡುವ ಬಗ್ಗೆ ಹೊಸ ಮಾಹಿತಿ ಹೊರಬಿದ್ದಿದೆ. ಕಂಪನಿಯು ಮುಂಬರುವ ವರ್ಷಗಳಲ್ಲಿ ಹೊಸ ಕೈಗೆಟುಕುವ ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸಲು ಸದ್ಯ ಕೆಲಸ ಮಾಡುತ್ತಿದೆ.

BYD: ಭಾರತದಲ್ಲಿ ಹೊಸ ಚೀನಾ ಕಾರು ಬಿಡುಗಡೆ: ಫುಲ್ ಡಿಮ್ಯಾಂಡ್

ವಿಶ್ವದ ಪ್ರಮುಖ ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿಯಾದ ಬಿವೈಡಿ (Build your Dreams) ಕಂಪನಿಯು ತನ್ನ ಹೊಸ ಬಿವೈಡಿ ಸೀಲಯನ್ 7 (BYD SEALION 7) ಕಾರಿನ್ನು ಬಿಡುಗಡೆ ಮಾಡಿದೆ. ಕಂಪನಿಯು ಜನವರಿ 18, 2025 ರಂದು ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಈ ಕಾರನ್ನು ಅನಾವರಣಗೊಳಿಸಿ, ಬುಕಿಂಗ್‌ಗಳನ್ನು ಸಹ ಪ್ರಾರಂಭಿಸಿತ್ತು. ಒಂದು ತಿಂಗಳೊಳಗೆ ಬರೋಬ್ಬರಿ 1000 ಕ್ಕೂ ಹೆಚ್ಚು ಬುಕಿಂಗ್‌ಗಳನ್ನು ಈ ಎಲೆಕ್ಟ್ರಿಕ್ ಎಸ್‌ಯುವಿ ಗಳಿಸಿದೆ. ಇದು ಪ್ರೀಮಿಯಂ ಹಾಗೂ ಪರ್ಫಾಮೆನ್ಸ್ ಎಂಬ ಎರಡು ವೇರಿಯೆಂಟ್‌ಗಳನ್ನು ಒಳಗೊಂಡಿದ್ದು, ಬಲವಾದ ಜಾಗತಿಕ ಪರಂಪರೆಯನ್ನು ಹೊಂದಿರುವ ಯಶಸ್ವಿ ಕಾರಾಗಿದೆ ಎಂದು ಕಂಪನಿ ಹೇಳಿದೆ.

Maruti: ಮಾರುತಿ ಕಾರುಗಳ ಗುಣಮಟ್ಟದ ಬಗ್ಗೆ ಯಾರೂ ಮಾತನಾಡುವಂತಿಲ್ಲ

ಮಾರುತಿ ಸುಜುಕಿ ಕಾರುಗಳು ಸದ್ಯ ದೇಶದಲ್ಲಿ ಇತರ ಬ್ರಾಂಡ್‌ಗಳಿಗೆ ಹೋಲಿಸಿದರೆ ಅತ್ಯಂತ ಅಗ್ಗದ ಬೆಲೆಗೆ ಸಿಗುವ ಕಾರುಗಳಾಗಿವೆ. ಉತ್ತಮ ಫೀಚರ್ಸ್, ಮೈಲೇಜ್, ಸರ್ವಿಸ್ ಸೇರಿದಂತೆ ಎಲ್ಲಾ ರೀತಿಯಲ್ಲೂ ಉತ್ತಮವೆನಿಸಿಕೊಂಡಿರುವ ಕಂಪನಿಯು ನಿರ್ಮಾಣ ಗುಣಮಟ್ಟದಲ್ಲಿ ಮಾತ್ರ ಹಿಂದುಳಿದಿತ್ತು. ಅಪಘಾತವಾದರೆ ಮಾರುತಿ ಕಾರುಗಳಲ್ಲಿನ ಪ್ರಯಾಣಿಕರು ಜೀವ ಕಳೆದುಕೊಳ್ಳುತ್ತಾರೆ ಎಂಬ ಮಾತುಗಳು ಜೋರಾಗಿ ಕೇಳಿಬರುತ್ತಿದ್ದವು. ಜನರ ಈ ನಂಬಿಕೆಯನ್ನು ತೊಡೆದುಹಾಕಲು ಇತ್ತೀಚೆಗೆ ತನ್ನ ಡಿಜೈರ್ ಮೂಲಕ 5-ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದ ಕಂಪನಿಯು, ಈಗ ತನ್ನ ಇತರ ಕಾರುಗಳನ್ನು ಕೂಡ ಸುರಕ್ಷಿತವಾಗಿಸಲು ಮುಂದಾಗಿದೆ.
Advertisement

ಪವರ್‌ಫುಲ್ 7-ಸೀಟರ್ ಬಿಡುಗಡೆ: ಹಣ ಉಳಿಸಿ... ಖರ್ಚಿಲ್ಲದೆ 150 ಕಿ.ಮೀ

ಗಾಯತ್ರಿ ಎಲೆಕ್ಟ್ರಿಕ್ ವೆಹಿಕಲ್ ಪ್ರೈವೇಟ್ ಲಿಮಿಟೆಡ್, ಭಾರತದ ಮೊದಲ 7-ಸೀಟರ್ ಇ-ಆಟೋ 'ದಬಾಂಗ್ ಮ್ಯಾಕ್ಸ್ಎಕ್ಸ್' (Dabang MaxX) ಮತ್ತು ಗರಿಷ್ಠ ಪೇ ಲೋಡ್ ಸಾಮರ್ಥ್ಯವನ್ನು ಹೊಂದಿರುವ ಹೈ ಸ್ಪೀಡ್ ಇ-ಲೋಡರ್‌ಗಳ ಶ್ರೇಣಿಯಾದ ಎಂಟ್ರೆಗಾವನ್ನು ಬಿಡುಗಡೆ ಮಾಡಿದೆ. ಈ ಹೊಸ ಶ್ರೇಣಿಯ ಇ-3 ವೀಲರ್‌ಗಳನ್ನು ಇಂಟರ್ನ್ಯಾಷನಲ್ ಸೆಂಟರ್ ಫಾರ್ ಆಟೋಮೋಟಿವ್ ಟೆಕ್ನಾಲಜಿ (ICAT) ಅನುಮೋದಿಸಿದೆ. ಇದು ಎಲ್ಲಾ ಸರ್ಕಾರಿ ಭದ್ರತಾ ನಿಯಮಗಳಿಗೆ ಒಳಪಟ್ಟಿದ್ದು, ಭಾರತದಲ್ಲಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಹೇಳಿಮಾಡಿಸಿದಂತಿದೆ ಎಂದು ಕಂಪನಿ ಭರವಸೆ ನೀಡಿದೆ.

Maruti: 7 ಲಕ್ಷದೊಳಗೆ ಸಿಗುವ ಸುರಕ್ಷಿತ ಕಾರು: 33.73 ಕಿ.ಮೀ ಮೈಲೇಜ್

ಇತ್ತೀಚೆಗೆ ಭಾರತದಲ್ಲಿ ಸುರಕ್ಷತೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತಿದ್ದು, ದೇಶೀಯ ಬ್ರಾಂಡ್‌ಗಳಾದ ಟಾಟಾ ಹಾಗೂ ಮಹೀಂದ್ರಾ ಸುರಕ್ಷಿತ ಕಾರುಗಳನ್ನು ನೀಡುವಲ್ಲಿ ಯಶಸ್ವಿಯಾಗಿವೆ. ಈಗ ಇದೇ ದಾರಿಯಲ್ಲಿ ಮಾರುತಿ ಸುಜುಕಿ ಕೂಡ ನಡೆಯುತ್ತಿದೆ. ಇತ್ತೀಚೆಗೆ ಬಿಡುಗಡೆ ಮಾಡಿರುವ ಮಾರುತಿ ಡಿಜೈರ್ (Maruti Suzuki Dzire) ಕಂಪನಿಯ ಮೊದಲ ಪರಿಪೂರ್ಣ 5-ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದ ಕಾರಾಗಿ ಸದ್ದು ಮಾಡಿದೆ. ಅಗ್ಗದ ಬೆಲೆ, ಆಕರ್ಷಕ ಫೀಚರ್ಸ್, ಸುರಕ್ಷತೆಗಾಗಿ ಹಲವು ವೈಶಿಷ್ಟ್ಯಗಳನ್ನು ಇದು ಒಳಗೊಂಡಿದೆ. ಒಟ್ಟಾರೆ ಕಡಿಮೆ ಬೆಲೆಯಲ್ಲಿ ಬೆಸ್ಟ್ ಆಯ್ಕೆಯಾಗಿದೆ ಎಂದು ಹೇಳಬಹುದು.

Maruti Swift: 32.85 ಕಿ.ಮೀ ಮೈಲೇಜ್.. 5 ಸೀಟರ್..

ಮಾರುತಿ ಸುಜುಕಿ ಇಂಡಿಯಾ (Maruti Suzuki India) ಅತಿದೊಡ್ಡ ಕಾರು ತಯಾರಕ ಕಂಪನಿಯಾಗಿ ಹಳ್ಳಿಯಿಂದ ದಿಲ್ಲಿವರೆಗೆ ಮನೆ ಮಾತಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಕಂಪನಿಯು ಅರೆನಾ ಹಾಗೂ ನೆಕ್ಸಾ ಶೋರೂಂಗಳಲ್ಲಿ ಮಾರಾಟಗೊಳಿಸುವ ವಿವಿಧ ಕಾರುಗಳ ಬೆಲೆಯನ್ನು ಫೆ.1ಕ್ಕೆ ಅನ್ವಯವಾಗುವಂತೆ ಹೆಚ್ಚಳ ಮಾಡಿದೆ. ಈ ದರವು ರೂ.1,500 ರಿಂದ ರೂ.32,500 ವರೆಗೆ ಏರಿಕೆಯಾಗಿದೆ. ತಯಾರಿಕಾ ವೆಚ್ಚಗಳು ಹೆಚ್ಚಾದ ಹಿನ್ನೆಲೆ, ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಕಂಪನಿಯು ಹೇಳಿದೆ. ಸದ್ಯ ಮಾರುತಿ ಸ್ವಿಫ್ಟ್ ದರವು ಕೂಡ ಅಧಿಕಗೊಂಡಿದೆ.

ಕೆಟಿಎಂ ಸ್ಟ್ರೀಟ್ ಫೈಟರ್ 390 ಡ್ಯೂಕ್ ವಿಶೆಷತೆಗಳು!

ಭಾರತದಲ್ಲಿ 390cc ಬೈಕ್ ವಿಭಾಗದಲ್ಲಿ ಮುಂಚೂಣಿಯಲ್ಲಿರುವ ಕೆಟಿಎಂ 390 ಡ್ಯೂಕ್, ಸ್ಟ್ರೀಟ್‌ಫೈಟರ್ ಜೆನ್-3 ವೇಷದಲ್ಲಿ ಬೆಲೆ ಇಳಿಕೆಯೊಂದಿಗೆ ಬಿಡುಗಡೆಯಾಗಿದೆ. ಭಾರತದಲ್ಲಿ ಪ್ರಮುಖ ಸ್ಟ್ರೀಟ್‌ಫೈಟರ್ ಆಗಿರುವ ಜೆನ್-3 ಕೆಟಿಎಂ 390 ಡ್ಯೂಕ್‌ನ ಹೊಸ ಬೆಲೆಯು ಇಂದಿನಿಂದ ಅನ್ವಯವಾಗಲಿದ್ದು, ಬರೋಬ್ಬರಿ 18,000 ರೂ. ಬೆಲೆ ಇಳಿಕೆ ಮಾಡಿ, ಬೈಕ್ ಬೇಡಿಕೆಯನ್ನು ಹೆಚ್ಚಿಸಿಕೊಳ್ಳುವ ಜೊತೆಗೆ ಹೊಸ ಫೀಚರ್ಸ್ ಅನ್ನು ಪರಿಚಯಿಸಿದೆ. ಹೊಸ ಬೆಲೆಯೊಂದಿಗೆ ಇದು ಹೈ-ಪರ್ಫಾಮೆನ್ಸ್ ಮೋಟಾರ್‌ಸೈಕ್ಲಿಂಗ್ ಉತ್ಸಾಹಿಗಳಿಗೆ ಹೆಚ್ಚು ಕೈಗೆಟುಕುವಂತೆ ಮಾಡುತ್ತದೆ. ಬೈಕ್ ಕುರಿತ ಹೆಚ್ಚಿನ ವಿಶೇಷತೆಗಳು ಇಲ್ಲಿವೆ.
Advertisement

Honda: ಅಗ್ಗದ ಬೆಲೆಗೆ ಬಿಡುಗಡೆಯಾದ ಹೊಸ ಹೋಂಡಾ ADV ಬೈಕ್ ವಿಶೇಷತೆಗಳು


Mahindra: ಕಂಪನಿಯೇ ಲೆಕ್ಕಹಾಕಿರಲಿಲ್ಲ.. ಈ ಎಲೆಕ್ಟ್ರಿಕ್..

ಪ್ರಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ಮಾಲೀಕತ್ವದ ಮಹೀಂದ್ರಾ (Mahindra) ಜನಪ್ರಿಯ ವಾಹನ ತಯಾರಕ ಕಂಪನಿಯಾಗಿದೆ. ಕಳೆದ ವರ್ಷದ ಕೊನೆಯಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಕಂಪನಿಯು ವಿದೇಶಿ ಕಾರುಗಳಿಗೆ ಪ್ರಬಲವಾದ ಪೈಪೋಟಿಯೊಡ್ಡುವ ರೀತಿಯಲ್ಲಿ ಹೊಚ್ಚ ಹೊಸ ಎಕ್ಸ್ಇವಿ 9ಇ (XEV 9e) ಹಾಗೂ ಬಿಇ 6 (BE 6) ಎಲೆಕ್ಟ್ರಿಕ್ ಎಸ್‌ಯುವಿಗಳನ್ನು ಬಿಡುಗಡೆಗೊಳಿಸಿತ್ತು. ಶುಕ್ರವಾರ ಈ ನೂತನ ಕಾರುಗಳನ್ನು ಬುಕ್ಕಿಂಗ್‌ನ್ನು ತೆಗೆದುಕೊಳ್ಳುವುದುನ್ನು ಪ್ರಾರಂಭಿಸಿತ್ತು. ಗ್ರಾಹಕರಿಂದಲೂ ನೀರಿಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಒಂದೇ ದಿನದಲ್ಲಿ ದಾಖಲೆ ಸಂಖ್ಯೆಯಲ್ಲಿ ಆರ್ಡರ್ ಮಾಡಿದ್ದಾರೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

Honda: ಇತ್ತೀಚೆಗೆ 2025ರ ಹೊಸ ಹೋಂಡಾ ಶೈನ್ 125 ಬೈಕ್ ಮಾರಾಟಕ್ಕೆ..

ಹೋಂಡಾ ಸ್ಕೂಟರ್ & ಮೋಟಾರ್‌ಸೈಕಲ್ ಇಂಡಿಯಾ (Honda Scooter & Motorcycle India), ನಂಬಿಕೆಗೆ ಹೆಸರುವಾಸಿಯಾಗಿರುವ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿದೆ. ಇತ್ತೀಚೆಗೆ 2025ರ ಶೈನ್ 125 (Shine 125) ಬೈಕ್‌ನ್ನು ಅದ್ದೂರಿಯಾಗಿ ಮಾರಾಟಕ್ಕೆ ತಂದಿತ್ತು. ಈ ಮೋಟಾರ್‌ಸೈಕಲ್ ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಕೈಗೆಟುಕುವ ಬೆಲೆಯಲ್ಲಿಯೂ ಬಿಡುಗಡೆಗೊಂಡಿದೆ. ಬನ್ನಿ.. ನೂತನ ಹೋಂಡಾ ಶೈನ್ 125 ಬೈಕ್‌ ಕುರಿತ ಪ್ರಮುಖಾಂಶಗಳನ್ನು ತಿಳಿಯೋಣ.

Keeway K300 SF: ಕೀವೇ ಕೆ300 ಎಸ್‌ಎಫ್‌ ವಿಶೇಷತೆಗಳು!

'ಕೀವೇ ಇಂಡಿಯಾ' (Keyway India) ಕಂಪನಿಯು ಭಾರತದಲ್ಲಿ ಇತ್ತೀಚೆಗೆ ತನ್ನ K300 ಮೋಟಾರ್‌ಸೈಕಲ್ ಸಿರೀಸ್‌ನ ಅಪ್‌ಡೇಟೆಡ್ ಹಾಗೂ ವಿಶೇಷ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಈ ಪರ್ಫಾಮೆನ್ಸ್ ಮೋಟಾರ್‌ಸೈಕಲ್, ಹಣಕ್ಕೆ ಉತ್ತಮ ಮೌಲ್ಯದ ಬೈಕ್ ಆಗಿದ್ದು, ವಿಶೇಷ ಆಫರ್ ಭಾಗವಾಗಿ ಮೊದಲ 100 ಗ್ರಾಹಕರು ಈ ಅದ್ಭುತ ಮೋಟಾರ್‌ಸೈಕಲ್ ಅನ್ನು ಕೇವಲ ರೂ. 1.69 ಲಕ್ಷ (ಎಕ್ಸ್-ಶೋರೂಂ) ವಿಶೇಷ ಬೆಲೆಯಲ್ಲಿ ಖರೀದಿಸಿಬಹುದು ಎಂದು ಕಂಪನಿ ಹೇಳಿಕೊಂಡಿತ್ತು. ಸದ್ಯ ಈ ಆಫರ್ ಚಾಲ್ತಿಯಲ್ಲಿದೆಯೇ ಎಂಬುದನ್ನು ತಿಳಿಯಲು ಆಸಕ್ತರು ಡೀಲರ್‌ ಅನ್ನು ಸಂಪರ್ಕಿಸಬಹುದು.
Advertisement

TATA: ಕ್ರಾಂತಿಕಾರಿ ಯೋಜನೆಗೆ ಕೈಹಾಕಿದ ಟಾಟಾ

ಭಾರತದ ಎಲೆಕ್ಟ್ರಿಕ್ ವಾಹನ ವಿಭಾಗದಲ್ಲಿ ಮುಂಚೂಣಿಯಲ್ಲಿರುವ TATA.ev, ಇಂದು ದೇಶದ ಚಾರ್ಜಿಂಗ್ ಮೂಲಸೌಕರ್ಯವನ್ನು ಪರಿವರ್ತಿಸಲು ಒಂದು ದಿಟ್ಟ, ಪರಿವರ್ತನಾಶೀಲ ಕ್ರಮವನ್ನು ಘೋಷಿಸಿದೆ. 2,00,000 EV ಮಾರಾಟವನ್ನು ಮೀರಿದ ಯಶಸ್ಸಿನ ಆಧಾರದ ಮೇಲೆ, TATA.ev 2027 ರ ವೇಳೆಗೆ ಲಭ್ಯವಿರುವ ಚಾರ್ಜ್ ಪಾಯಿಂಟ್‌ಗಳ ಸಂಖ್ಯೆಯನ್ನು 4,00,000 ಕ್ಕೆ ದ್ವಿಗುಣಗೊಳಿಸುವ ಮೂಲಕ ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚು ಪ್ರವೇಶಿಸುವಂತೆ ಅನುಕೂಲಕರವಾದ ವ್ಯವಸ್ಥೆಗೆ ಮುಂದಾಗಿದೆ. ಇದು ಇವಿ ಕಾರು ಮಾಲೀಕರಿಗೆ ಚಾರ್ಜಿಂಗ್ ಭಯವಿಲ್ಲದೆ ನಿಶ್ಚಿಂತೆಯಿಂದ ಓಡಿಸಲು ಅನುವು ಮಾಡಿಕೊಡುತ್ತದೆ ಎಂದು ಕಂಪನಿ ಭರವಸೆ ನೀಡಿದೆ.

KTM: ಸ್ಟ್ರೀಟ್ ಫೈಟರ್ ಯುವಕರಿಗೆ ಸಿಹಿಸುದ್ದಿ

ವಿಶ್ವದ ಪ್ರೀಮಿಯಂ ಸ್ಪೋರ್ಟ್ಸ್ ಮೋಟಾರ್‌ಸೈಕಲ್ ಬ್ರಾಂಡ್ ಆಗಿರುವ ಕೆಟಿಎಂ (KTM), ತನ್ನ ಪ್ರಮುಖ 390 ಡ್ಯೂಕ್ ಜೊತೆಗೆ ಭಾರತದಲ್ಲಿ ಯುವಕರ ಮನಗೆದ್ದಿದೆ. 390cc ಬೈಕ್ ವಿಭಾಗದಲ್ಲಿ ಈ ಮೋಟಾರ್‌ಸೈಕಲ್‌ನ ಅಬ್ಬರವನ್ನು ತಗ್ಗಿಸದೆ ಮುಂದುವರಿಸುತ್ತಿರುವ ಕಂಪನಿಯು ಈಗ ಬೆಲೆ ಇಳೆಕೆ ಮಾಡಿ ಯುವಕರಿಗೆ ಮತ್ತಷ್ಟು ಕೈಗೆಟುಕುವಂತೆ ಮಾಡಿದೆ. ಬರೋಬ್ಬರಿ 18,000 ರೂ. ಬೆಲೆ ಇಳಿಕೆ ಮಾಡಿ, ಬೈಕ್ ಬೇಡಿಕೆಯನ್ನು ಹೆಚ್ಚಿಸಿಕೊಳ್ಳುವ ಜೊತೆಗೆ ಹೊಸ ಫೀಚರ್ಸ್ ಅನ್ನು ಪರಿಚಯಿಸಿದೆ. ಹೊಸ ಕೆಟಿಎಂ 390 ಡ್ಯೂಕ್ ಕುರಿತ ಹೆಚ್ಚಿನ ವಿಶೇಷತೆಗಳನ್ನು ನೋಡೋಣ.

Honda: ಕೇವಲ 1.69 ಲಕ್ಷಕ್ಕೆ ಹೋಂಡಾ ADV ಬೈಕ್ ಬಿಡುಗಡೆ

ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿರುವ ಹೋಂಡಾ ಮೋಟಾರ್ ಸೈಕಲ್ (Honda Motorcycle), ತನ್ನ ಹೋಂಡಾ ಸಿಬಿ 200 X ಅನ್ನು ಈಗ NX 200 ಎಂದು ಮರುನಾಮಕರಣ ಮಾಡಿ ಬಿಡುಗಡೆ ಮಾಡಿದೆ. ಇದನ್ನು ಆಧುನಿಕ ವಿನ್ಯಾಸ ಹಾಗೂ ಹೊಸ ಡಿಸೈನ್‌ನೊಂದಿಗೆ NX 200 ಅಡ್ವೆಂಚರ್ ವಿಭಾಗದಲ್ಲಿ ಬಿಡುಗಡೆ ಮಾಡಿದೆ. ಈ ಹೊಸ ಬೈಕ್ ಬೆಲೆಯು 1,68,499 (ಎಕ್ಸ್ ಶೋರೂಂ) ಇದೆ. ಹೊಸ ಹೋಂಡಾ NX 200 ಈಗ ದೇಶಾದ್ಯಂತ HMSI ರೆಡ್ ವಿಂಗ್ ಮತ್ತು ಬಿಗ್ ವಿಂಗ್ ಡೀಲರ್ ಶಿಪ್‌ಗಳಲ್ಲಿ ಖರೀದಿಗೆ ಲಭ್ಯವಿದೆ. ಹೋಂಡಾ ಕಂಪನಿಯು NX 200 ಬೈಕ್ ಅನ್ನು ಒಂದೇ ರೂಪಾಂತರದಲ್ಲಿ ಬಿಡುಗಡೆಗೊಳಿಸಿದ್ದು, - ಅಥ್ಲೆಟಿಕ್ ಬ್ಲೂ ಮೆಟಾಲಿಕ್ (Athletic Blue Metallic) - ರೇಡಿಯಂಟ್ ರೆಡ್ ಮೆಟಾಲಿಕ್ (Radiant Red Metallic) - ಪರ್ಲ್ ಇಗ್ನಿಯಸ್ ಬ್ಲ್ಯಾಕ್ (Pearl Igneous Black) ಎಂಬ ಮೂರು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ.

Volvo: ವೋಲ್ವೋದೊಂದಿಗೆ ಸರ್ಕಾರ ಒಪ್ಪಂದ: 1,400 ಕೋಟಿ ಹೂಡಿಕೆ

ಕರ್ನಾಟಕದ ಕೈಗಾರಿಕಾ ಭೂದೃಶ್ಯಕ್ಕೆ ಒಂದು ಮಹತ್ವದ ಹೆಜ್ಜೆಯಾಗಿ, ಟ್ರಕ್‌ಗಳು, ಬಸ್‌ಗಳು, ನಿರ್ಮಾಣ ಉಪಕರಣಗಳ ನಿರ್ಮಾಣದಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿರುವ ವೋಲ್ವೋ ಗ್ರೂಪ್ (Volvo Group), ಕರ್ನಾಟಕದಲ್ಲಿ ತನ್ನ ಉತ್ಪಾದನಾ ಕಾರ್ಯಾಚರಣೆಗಳನ್ನು ವಿಸ್ತರಿಸುವುದಾಗಿ ಘೋಷಿಸಿದೆ. ಗುರುವಾರ ಮುಖ್ಯಮಂತ್ರಿಯವರ ಅಧಿಕೃತ ನಿವಾಸ 'ಕಾವೇರಿ'ಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಕಂಪನಿಯು ಬೆಂಗಳೂರಿನ ಹೊಸಕೋಟೆಯಲ್ಲಿ ತನ್ನ 4ನೇ ಅಂತರರಾಷ್ಟ್ರೀಯ ಉತ್ಪಾದನಾ ಕೇಂದ್ರವನ್ನು ಸ್ಥಾಪಿಸಲು ಕರ್ನಾಟಕ ಸರ್ಕಾರದೊಂದಿಗೆ ತಿಳುವಳಿಕೆ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಿದೆ. ಇದು ರೂ. 1,400 ಕೋಟಿಗಳ ಕಾರ್ಯತಂತ್ರದ ಹೂಡಿಕೆಯಾಗಿದೆ.
Advertisement

Safest cars 2025: ಗಟ್ಟಿಮುಟ್ಟಾದ ಬಲಿಷ್ಟ ಕಾರುಗಳು

ಭಾರತೀಯ ಕಾರು ಮಾರುಕಟ್ಟೆಯಲ್ಲಿ ಹಲವರಿಗೆ ತಿಳಿಯದ ವಿಷಯವೇನೆಂದರೆ ರೂ. 10 ಲಕ್ಷ ಬಜೆಟ್ ಅಡಿಯಲ್ಲಿ ಬಿಎನ್‌ಸಿಎಪಿ (Bharat New Car Assessment Program) ಕ್ರ್ಯಾಶ್ ಟೆಸ್ಟ್ ರೇಟಿಂಗ್‌ಗಳ ಪ್ರಕಾರ ಅತ್ಯಂತ ಸುರಕ್ಷಿತೆಯನ್ನು (Safest cars 2025)ನೀಡುವ ಕಾರುಗಳನ್ನು ಖರೀದಿಸಬಹುದು. ನೀವು ಕೂಡ 10 ಲಕ್ಷಕ್ಕಿಂತ ಕಡಿಮೆ ಬೆಲೆಯ ಸುರಕ್ಷಿತ ಕಾರನ್ನು ಖರೀದಿಸಲು ಯೋಚಿಸುತ್ತಿದ್ದರೆ ಸರಿಯಾದ ಲೇಖನವನ್ನೆ ಓದುತ್ತಿದ್ದೀರ. ವಾಹನದ ಸುರಕ್ಷತಾ ರೇಟಿಂಗ್ ಖರೀದಿದಾರರಿಗೆ ಅವರು ಖರೀದಿಸುವ ಮಾದರಿ ಎಷ್ಟು ಸುರಕ್ಷಿತವಾಗಿದೆ ಎಂಬುದನ್ನು ತಿಳಿಸಿಕೊಡುತ್ತದೆ. ನಿಮ್ಮ ಬಜೆಟ್‌ಗೆ ಅನುಗುಣವಾಗಿ ಸುರಕ್ಷಿತ ಕಾರನ್ನು ಈ ಲೇಖನ ಓದಿ ಖರೀದಿಸಬಹುದು.

ರೈತ ಕುಟುಂಬದಿಂದ ಬಂದ ಕ್ರೀಡಾ ಸಾಧಕನಿಗೆ ಜಿಂದಾಲ್ - ಎಂಜಿ ಗೌರವ..

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತ, ಭಾರತದ ರಾಷ್ಟ್ರೀಯ ಹಾಕಿ ತಂಡದ ಭಾಗವಾಗಿದ್ದ ಗೋಲ್‌ಕೀಪರ್ ಪಿಆರ್ ಶ್ರೀಜೇಶ್ (PR Sreejesh) ಅವರಿಗೆ ಎಂಜಿ ವಿಂಡ್ಸರ್ ಇವಿಯನ್ನು ಉಡೊಗೊರೆಯಾಗಿ ನೀಡಲಾಗಿದೆ. ಒಲಿಂಪಿಕ್ಸ್‌ ಸಂದರ್ಭದಲ್ಲಿ ಜಿಂದಾಲ್ ಹಾಗೂ ಎಂಜಿ ಕಂಪನಿಯ ಪಾಲುದಾರಿಕೆಯಲ್ಲಿ ಭಾಗವಾಗಿ 'ವಿಂಡ್ಸರ್' ಎಲೆಕ್ಟ್ರಿಕ್ ಕಾರನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಲಾಗಿತ್ತು. ಆಗಲೇ ಎಂಜಿ ಕಂಪನಿ ಕೂಡ ಒಲಿಂಪಿಕ್ಸ್‌ ಪದಕ ವಿಜೇತರಿಗೆ ಈ ವಿಂಡ್ಸರ್‌ನ್ನು ಗಿಫ್ಟ್ ನೀಡುವುದಾಗಿ ಘೋಷಣೆ ಮಾಡಿತ್ತು. ಸದ್ಯ, ಶ್ರೀಜೇಶ್ ಅವರಿಗೆ ನೂತನ ಕಾರನ್ನು ಡೆಲಿವರಿ ಮಾಡಲಾಗಿದೆ.

ಸೇರಿಗೆ ಸವ್ವಾ ಸೇರು: ಮುರಿದುಬಿದ್ದ ಮಾತುಕತೆ.. 60 ಬಿಲಿಯನ್ ಡಾಲರ್..

ಅಂತರರಾಷ್ಟ್ರೀಯ ಕಾರು ಮಾರುಕಟ್ಟೆಯಲ್ಲಿ ಅಮೆರಿಕದ ಎಲಾನ್ ಮಸ್ಕ್ ಒಡೆತನದ ಟೆಸ್ಲಾ (Tesla) ಹಾಗೂ ಚೀನಾ ಮೂಲದ ಬಿವೈಡಿ (BYD) ಕಂಪನಿಗಳು ದೊಡ್ಡ ಮಟ್ಟದ ಪ್ರಾಬಲ್ಯ ಸಾಧಿಸಲು ಪೈಪೋಟಿ ನಡೆಸುತ್ತಿವೆ. ಈ ಕಂಪನಿಗಳ ಓಟಕ್ಕೆ ಇತಿಶ್ರೀ ಹಾಕಲು ಜಪಾನ್ ಕಾರು ತಯಾರಕ ಕಂಪನಿಗಳಾದ ಹೋಂಡಾ (Honda) ಹಾಗೂ ನಿಸ್ಸಾನ್ (Nissan) ಕಂಪನಿಗಳು ಒಟ್ಟಿಗೆ ವಿಲೀನಗೊಳ್ಳಲು ಮಾತುಕತೆ ನಡೆಸುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೀಗ ಈ ಮಾತುಕತೆಯೇ ಮುರಿದು ಬಿದ್ದಿದೆ ಎಂದು ವರದಿಯಾಗಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಅಗ್ಗದ ಮಾರುತಿ ಸುಜುಕಿ ಸೆಲೆರಿಯೊ ಕಾರು ಖರೀದಿಸಬೇಕೇ.. ಆನ್-ರೋಡ್..

ಮಾರುತಿ ಸುಜುಕಿ ಸೆಲೆರಿಯೊ (Maruti Suzuki Celerio) ಜನಪ್ರಿಯ ಹ್ಯಾಚ್‌ಬ್ಯಾಕ್ ಆಗಿ ಹೊರ ಹೊಮ್ಮಿದೆ. ಈ ಕಾರಿನ ಬೆಲೆ ಫೆಬ್ರವರಿ 1ಕ್ಕೆ ಅನ್ವಯವಾಗುವಂತೆ ಸರಿ ಸುಮಾರು ರೂ.32,500 ವರೆಗೆ ಅಧಿಕಗೊಂಡಿದೆ. ದರ ಏರಿಕೆ ನಂತರ, ಈ ಹ್ಯಾಚ್‌ಬ್ಯಾಕ್ ರೂ.5.64 ಲಕ್ಷದಿಂದ ರೂ.7.37 ಲಕ್ಷ (ಎಕ್ಸ್ ಶೋರೂಂ) ಬೆಲೆಯನ್ನು ಒಳಗೊಂಡಿದೆ. ನೀವು ಹೊಸ ಕಾರೊಂದನ್ನು ಖರೀದಿಸಲು ಯೋಚಿಸಿದ್ದೀರಾ.. ಹಾಗಾದರೆ, ಮಾರುತಿ ಸೆಲೆರಿಯೊ ಹೆಚ್ಚು ಸೂಕ್ತವಾಗಲಿದೆ. ನಾವಿಲ್ಲಿ ಈ ಹ್ಯಾಚ್‌ಬ್ಯಾಕ್‌ನ ಆನ್-ರೋಡ್ ಬೆಲೆ (On-Road Price) ಹಾಗೂ ಇಎಂಐ (EMI) ಆಯ್ಕೆಯ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದ್ದೇವೆ.
Advertisement

Tata: ಹೊಚ್ಚ ಹೊಸ ಟಾಟಾ ಹ್ಯಾರಿಯರ್ & ಸಫಾರಿ ಸ್ಟೆಲ್ತ್ ಎಡಿಷನ್..

ಭಾರತದಲ್ಲಿ ಟಾಟಾ ಮೋಟಾರ್ಸ್ (Tata Motors) ನಂಬಿಕೆ ಹೆಸರುವಾಸಿಯಾಗಿರುವ ವಾಹನ ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಕಂಪನಿ ಮಾರಾಟಗೊಳಿಸುವ ಕಾರುಗಳು ಹೆಚ್ಚು ಸುರಕ್ಷಿತವಾಗಿರುವ ಕಾರಣ, ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಇತ್ತೀಚೆಗೆ ನವದೆಹಲಿಯಲ್ಲಿ ಮುಕ್ತಾಯಗೊಂಡ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಟಾಟಾ ಮೋಟಾರ್ಸ್ ಜನಪ್ರಿಯ ಎಸ್‌ಯುವಿಗಳಾದ ಹ್ಯಾರಿಯರ್ ಮತ್ತು ಸಫಾರಿಯ 'ಸ್ಟೆಲ್ತ್ ಎಡಿಷನ್'ನ್ನು ಅನಾವರಣಗೊಳಿಸಿತ್ತು. ಸದ್ಯ, ಈ ಕಾರುಗಳನ್ನು ಮಾರಾಟಕ್ಕೂ ತಂದಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.