ಮೊದಲೇ ಕಡಿಮೆ ಬೆಲೆ... ಮತ್ತೇ 20,000 ವರೆಗೆ ಡಿಸ್ಕೌಂಟ್

ಭಾರತದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕರಲ್ಲಿ ಒಂದಾದ ಎಥರ್ ಎನರ್ಜಿ (Ather Energy), ಪ್ರಸ್ತುತ ದೇಶದಲ್ಲಿ ತನ್ನ ಇವಿ ಮಾರಾಟದಲ್ಲಿ ಮುನ್ನುಗ್ಗುತ್ತಿದೆ. ಹಲವರು ಪ್ರತಿಸ್ಪರ್ಧಿಗಳ ನಡೆವೆಯು ಉತ್ತಮ ಫೀಚರ್ಸ್, ಆಕರ್ಷಕ ಡಿಸೈನ್, ಅತ್ಯುತ್ತಮ ರೇಂಜ್ ನೀಡುವ ಸ್ಕೂಟರ್‌ಗಳ ಮೂಲಕ ಗ್ರಾಹಕರಲ್ಲಿ ಉತ್ತಮ ಬೇಡಿಕೆ ಪಡೆದುಕೊಂಡಿದೆ. ಈಗ ಹೊಸ ಆಫರ್ ಘೋಷಿಸುವ ಮೂಲಕ ತನ್ನ ಮಾರಾಟವನ್ನು ಹೆಚ್ಚಿಕೊಳ್ಳಲು ಪ್ಲಾನ್ ಮಾಡಿದೆ. ಹೌದು, ತನ್ನ ಎಲೆಕ್ಟ್ರಿಕ್ ಸ್ಕೂಟರ್‌ಗಳಾದ ರಿಜ್ಟಾ ಮತ್ತು 450 ಸಿರೀಸ್ ಸ್ಕೂಟರ್‌ಗಳ ಮೇಲೆ ರೂ. 20,000 ವರೆಗಿನ ಸೀಮಿತ ಅವಧಿಯ ಪ್ರಯೋಜನಗಳನ್ನು ಘೋಷಿಸಿದೆ.

ಬಡವರಿಗೆ ಬೆಸ್ಟ್ ಬೈಕ್‌ಗಳು.. 73 Km ಮೈಲೇಜ್.. ಕೇವಲ ರೂ.69,000..

ಹೀರೋ ಸ್ಪ್ಲೆಂಡರ್ ಪ್ಲಸ್ ಎಕ್ಸ್‌ಟೆಕ್ (Hero Splendor Plus Xtec) ಜನಮೆಚ್ಚಿದ ಮೋಟಾರ್‌ಸೈಕಲ್‌ ಎಂದೇ ಹೆಸರುವಾಸಿಯಾಗಿದೆ. ಇದಕ್ಕೆ ಬಜಾಜ್ ಪ್ಲಾಟಿನಾ 110 (Bajaj Platina 110) ನೇರವಾದ ಎದುರಾಳಿಯಾಗಿದೆ. ಈ ಬೈಕ್‌ಗಳು ಒಂದಕ್ಕಿಂತ ಒಂದು ಅದ್ಭುತವಾಗಿವೆ. ಜೊತೆಗೆ ಕೈಗೆಟುಕುವ ದರದಲ್ಲೂ ಲಭ್ಯವಿದ್ದು, ದಿನಬಳಕೆಗೆ ಹೆಚ್ಚು ಸೂಕ್ತವಾಗಿವೆ. ನಾವಿಲ್ಲಿ ಇವುಗಳ ಬೆಲೆ, ಕಾರ್ಯಕ್ಷಮತೆ ಮತ್ತು ವೈಶಿಷ್ಟ್ಯಗಳ ಕುರಿತು ಹೋಲಿಕೆ ಮಾಡಿದ್ದೇವೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಒಳ್ಳೆ ಮೈಲೇಜ್, ಕಮ್ಮಿ ಬೆಲೆ, ಸ್ಪೋರ್ಟಿ ಲುಕ್... ಯಾರೂ ಖರೀದಿಸುತಿಲ್ಲ

ಟೊಯೋಟಾ ದೇಶೀಯವಾಗಿ ಫೆಬ್ರವರಿ ತಿಂಗಳಲ್ಲಿ ಒಟ್ಟು 30,737 ಯುನಿಟ್‌ ಕಾರುಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಮಾರಾಟವಾದ 26,414 ಯುನಿಟ್‌ ಕಾರುಗಳಿಗೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ ಶೇ16 ರಷ್ಟು ಹೆಚ್ಚಳವನ್ನು ಕಂಡಿದೆ. ಈ ಮಾರಾಟ ಅಂಕಿಅಂಶಗಳನ್ನು ನೋಡಿದರೆ ಭಾರತದಲ್ಲಿ ಟೊಯೋಟಾ ಕಾರುಗಳಿಗೆ ಉತ್ತಮ ಬೇಡಿಕೆ ಇರುವುದು ಸ್ಪಷ್ಟವಾಗಿದೆ. ಆದರೆ ಕಂಪನಿ ನೀಡುವ ಎಲ್ಲಾ ಕಾರುಗಳನ್ನು ಜನ ಇಷ್ಟ ಪಟ್ಟು ಖರೀದಿಸುವುದಿಲ್ಲ ಎಂಬುದನ್ನು ಟೊಯೋಟಾದ ಈ ಮಾಡಲ್ ಸಾಭೀತು ಪಡಿಸಿದೆ.

TATA: ಶಕ್ತಿಶಾಲಿಯಾದ ಟಾಟಾ ಕಾರಿದು.. ಭಾರೀ ಸಂಖ್ಯೆಯಲ್ಲಿ ಸೇಲ್ಸ್..

ಟಾಟಾ ಹ್ಯಾರಿಯರ್ (Tata Harrier) ಜನಮೆಚ್ಚಿನ ಎಸ್‌ಯುವಿಯಾಗಿ ಹೊರಹೊಮ್ಮುತ್ತಿದೆ. ಗ್ರಾಹಕರು ಕೂಡ ಮುಗಿಬಿದ್ದು ಕೊಂಡುಕೊಳ್ಳುತ್ತಿದ್ದಾರೆ. ಈ 2026ರ ಫೆಬ್ರವರಿಯಲ್ಲಿಯೂ ಭಾರೀ ಸಂಖ್ಯೆಯಲ್ಲಿಯೇ ಮಾರಾಟಗೊಂಡಿದೆ. ಒಟ್ಟು 3,096 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಿಸಲಾಗಿದೆ. 2025ರ ಇದೇ ಅವಧಿಯಲ್ಲಿ 1,376 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ - ಅಂಶವನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 125% ಬೆಳವಣಿಗೆಯಾಗಿದೆ.
Advertisement

ಹೊಸ ಹ್ಯುಂಡೈ ಎಸ್‌ಯುವಿಗೆ ಫುಲ್ ಡಿಮ್ಯಾಂಡ್: 1 ಲಕ್ಷ ಆರ್ಡರ್‌

ಪ್ರಮುಖ ಕಾರು ತಯಾರಕ ಕಂಪನಿಯಾಗಿರುವ ಹುಂಡೈ, ತನ್ನ ಹೊಚ್ಚ ಹೊಸ ಹುಂಡೈ ವೆನ್ಯೂ (Hyundai VENUE) ಅನ್ನು ಕಳೆದ ವರ್ಷ ನವೆಂಬರ್‌ನಲ್ಲಿ ಬಿಡುಗಡೆ ಮಾಡಿತ್ತು. ಹೈ - ಪರ್ಫಾಮೆನ್ಸ್ ಮತ್ತು ವಿವಿಧ ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಸಾಟಿಯಿಲ್ಲದ ಚಾಲನಾ ಅನುಭವವನ್ನು ನೀಡಲು ವಿನ್ಯಾಸಗೊಳಿಸಲಾದ ಹೊಚ್ಚ ಹೊಸ ಹುಂಡೈ ವೆನ್ಯೂ ಈಗ ದಾಖಲೆಯ ಬುಕಿಂಗ್ಸ್ ಪಡೆದುಕೊಂಡಿದೆ. ಜೊತೆಗೆ ಕಂಪನಿ ಕೂಡ ಗ್ರಾಹಕರ ಮನಗೆಲ್ಲಲು ವೇಗವಾಗಿ ಡೆಲಿವರಿಗಳನ್ನು ನೀಡುತ್ತಿದೆ. ಈ ಕಾರಿಗೆ ಗ್ರಾಹಕರಿಂದ ಈ ಮಟ್ಟದ ಬೇಡಿಕೆ ವ್ಯಕ್ತವಾಗಲು ಹಲವು ಕಾರಗಳಿವೆ.

TVS: ರೂ.1.08 ಲಕ್ಷ.. 212 Km ರೇಂಜ್.. ನಂ.1 ಟಿವಿಎಸ್ ಐಕ್ಯೂಬ್..

ಟಿವಿಎಸ್ ಐಕ್ಯೂಬ್ (TVS iQube) ನಂಬರ್ 1 ಎಲೆಕ್ಟ್ರಿಕ್ ಸ್ಕೂಟರ್ ಎಂದೇ ಹೆಸರುವಾಸಿಯಾಗಿದೆ. ಈ ಸ್ಕೂಟರ್‌ಗೆ ಫುಲ್ ಡಿಮ್ಯಾಂಡ್ ಇದ್ದು, ಗ್ರಾಹಕರು ಕೂಡ ಮುಗಿಬಿದ್ದು ಕೊಂಡುಕೊಳ್ಳುತ್ತಿದ್ದಾರೆ. ನೀವು ದಿನಬಳಕೆಗಾಗಿ ಹೊಚ್ಚ ಹೊಸ ಇ-ಸ್ಕೂಟರ್‌ವೊಂದನ್ನು ಖರೀದಿಸಲು ಪ್ಲ್ಯಾನ್ ಮಾಡಿದ್ದೀರಾ.. ಹಾಗಾದರೆ ಇದೇ 'ಐಕ್ಯೂಬ್' ಬೆಸ್ಟ್ ಚಾಯ್ಸ್ ಆಗಲಿದೆ. ಬನ್ನಿ, ಈ ನೂತನ ಎಲೆಕ್ಟ್ರಿಕ್ ಸ್ಕೂಟರ್‌ನ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

Ugadi Offer: ಯುಗಾದಿ ಆಫರ್: ಕನ್ನಡಿಗರಿಗೆ ಡಿಸ್ಕೌಂಟ್

ಹಿಂದುಗಳಿಗೆ ಹೊಸ ವರ್ಷವೆಂದು ಪರಿಗಣಿಸುವ ಯುಗಾದಿ ಹಬ್ಬವು ಭಾರತದಲ್ಲಿ ತುಂಬಾ ಪ್ರಾಮುಖ್ಯತೆಯನ್ನು ಪಡೆದಿದೆ. ಅದರಲ್ಲೂ ದಕ್ಷಿಣ ಭಾರತದಲ್ಲಿ ಜೋರಾಗಿ ಆಚರಿಸಲಾಗುತ್ತದೆ, ಕರ್ನಾಟಕವು ಇರುವುದರಲ್ಲೇ ತುಂಬಾ ಅದ್ದೂರಿಯಾಗಿ ಯುಗಾದಿ ಹಬ್ಬವನ್ನು ಆಚರಿಸುವ ರಾಜ್ಯವಾಗಿದೆ. ಹಾಗಾಗಿಯೇ ಜಾಗತಿಕ ಮೋಟಾರ್‌ಸೈಕಲ್ ಬ್ರ್ಯಾಂಡ್ ಆಗಿರುವ ಯಮಹಾ (Yamaha) ಯುಗಾದಿಯ ಶುಭ ಸಂದರ್ಭದಲ್ಲಿ, ಕೇವಲ ಕರ್ನಾಟಕದಲ್ಲಿ ಮಾತ್ರ ತನ್ನ ಜನಪ್ರಿಯ ಸ್ಕೂಟರ್ ಮತ್ತು ಮೋಟಾರ್‌ಸೈಕಲ್‌ಗಳ ಮೇಲೆ ವಿಶೇಷ ಹಬ್ಬದ ಆಫರ್‌ಗಳನ್ನು ಘೋಷಿಸಿದೆ. ಗ್ರಾಹಕರು ಈ ಹಬ್ಬದ ಋತುವಿನಲ್ಲಿ ತಮ್ಮ ನೆಚ್ಚಿನ ಯಮಹಾ ವಾಹನವನ್ನು ಕಮ್ಮಿ ಬೆಲೆಗೆ ಮನೆಗೆ ಕೊಂಡೊಯ್ಯುವ ಅವಕಾಶ ನೀಡಲಾಗಿದೆ.

33 ಕಿ.ಮೀ ಮೈಲೇಜ್.. ರೂ.3.50 ಲಕ್ಷ.. ತುಂಬಾ ಚೆನ್ನಾಗಿದೆ..

ಮಾರುತಿ ಸುಜುಕಿ ಎಸ್-ಪ್ರೆಸ್ಸೊ (Maruti Suzuki S-Presso) ಎಂಟ್ರಿ ಲೆವೆಲ್ ಹ್ಯಾಚ್‌ಬ್ಯಾಕ್ ಎಂದೇ ಮನೆ ಮಾತಾಗಿದೆ. ಅಗ್ಗದ ದರದಲ್ಲೂ ಲಭ್ಯವಿದೆ. ಆದರೂ ಈ ಕಾರಿನ ಮಾರಾಟವು ದಿನದಿಂದ ದಿನಕ್ಕೆ ಇಳಿಕೆಯಾಯಾಗುತ್ತದೆ. ಕಳೆದ ತಿಂಗಳು (ಫೆಬ್ರವರಿ - 2026) ಅದು ಮುಂದುವರಿದಿದೆ. ಕೇವಲ 451 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಿಸಲಾಗಿದೆ. ಅಂದರೆ ಪ್ರತಿದಿನ 16 'ಎಸ್-ಪ್ರೆಸ್ಸೊ' ಕಾರುಗಳನ್ನು ಮಾತ್ರ ಮಾರಾಟಗೊಳಿಸಲಾಗಿದೆ. 2025ರ ಇದೇ ಅವಧಿಯಲ್ಲಿ 1,685 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ - ಅಂಶವನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ -73% ಕುಸಿತವಾಗಿದೆ.
Advertisement

ಹೊಸ ಮರ್ಸಿಡಿಸ್-ಬೆಂಝ್ CLA ಎಲೆಕ್ಟ್ರಿಕ್ ಕಾರಿನ ರಿವ್ಯೂ

ಮರ್ಸಿಡಿಸ್-ಬೆಂಜ್ ಸಿಎಲ್‌ಎ ಎಲೆಕ್ಟ್ರಿಕ್ ವಿಮರ್ಶೆ: ಸುದೀರ್ಘ ರೇಂಜ್, AI ತಂತ್ರಜ್ಞಾನ, ಆಕರ್ಷಕ ವಿನ್ಯಾಸ ಮತ್ತು ಭಾರತದಲ್ಲಿ ಬೆಲೆ ವಿವರಗಳು. Explore its 792km WLTP range, MBUX AI, 5-star safety, and competitive pricing for the Indian market.

Mahindra: ಅಬ್ಬರಿಸಿದ ಮಹೀಂದ್ರಾ.. ಈ ಕಾರಿಗೆ ಮುಗಿಬಿದ್ದ ಜನ..

2025ರ ಆಗಸ್ಟ್ 14ರಂದು ಹೊಚ್ಚ ಹೊಸ ಮಹೀಂದ್ರಾ ಬಿಇ 6 ಬ್ಯಾಟ್‌ಮ್ಯಾನ್ ಎಡಿಷನ್ (Mahindra BE 6 Batman Edition) ಎಲೆಕ್ಟ್ರಿಕ್ ಎಸ್‌ಯುವಿಯನ್ನು ಪರಿಚಯಿಸಲಾಗಿತ್ತು. ಕೆಲವೇ ದಿನಗಳಲ್ಲಿ ಬುಕ್ಕಿಂಗ್‌ನ್ನು ತೆರೆಯಲಾಗಿತ್ತು. ಬರೀ 135 ಸೆಕೆಂಡುಗಳಲ್ಲಿ ಎಲ್ಲ 999 ಕಾರುಗಳು ಸೋಲ್ಡ್ ಔಟ್ ಆಗಿದ್ದವು. ಈಚೆಗೆ ಗ್ರಾಹಕರ ಒತ್ತಡದಿಂದಾಗಿ ಕಂಪನಿಯು ಇದೇ ಎಸ್‌ಯುವಿಯನ್ನು ಮರು ಬಿಡುಗಡೆಗೊಳಿಸಿತ್ತು. ಮೊದಲಿದಂತೆ 999 ಯುನಿಟ್‌ಗಳನ್ನು ಮಾತ್ರ ಮಾರಾಟ ಮಾಡುವುದಾಗಿ ಘೋಷಣೆ ಮಾಡಿತ್ತು. ನಿನ್ನೆಯಿಂದ ಆರ್ಡರ್ ತೆಗೆದುಕೊಳ್ಳುವ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. 7 ನಿಮಿಷದಲ್ಲೇ ಅವೆಲ್ಲ ಮಾರಾಟವಾಗಿವೆ.

ಅಂತರಾಷ್ಟ್ರೀಯ ಗುಣಮಟ್ಟದೊಂದಿಗೆ ಅಗ್ಗದ ಪುಟ್ಟ SUV ಬಿಡುಗಡೆಗೆ ಸಜ್ಜು

ಭಾರತ ಸೇರಿದಂತೆ ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗಾಗಿ ಮುಂಬರುವ ಕಾಂಪ್ಯಾಕ್ಟ್ ಎಸ್‌ಯುವಿಯ ಕಾನ್ಸೆಪ್ಟ್ ಮಾಡಲ್‌ನ್ನು ರೆನಾಲ್ಟ್ (Renault) ಅನಾವರಣಗೊಳಿಸಿದೆ. ಈ ಹೊಸ ಎಸ್‌ಯುವಿಗೆ ಕಂಪನಿಯು ಬ್ರಿಡ್ಜರ್ (Renault Bridger) ಎಂದು ಹೆಸರಿಟ್ಟಿದೆ. ಮುಂಬರಲಿರುವ ಈ ಸಬ್ - 4 ಮೀಟರ್ ಎಸ್‌ಯುವಿಯನ್ನು ಭಾರತದಲ್ಲಿ ಉತ್ಪಾದಿಸಲಾಗುವುದು, ಜೊತೆಗೆ ಅಂತರಾಷ್ಟ್ರೀಯ ಮಾರುಕಟ್ಟೆಗಳಿಗೆ ಇಲ್ಲಿಂದ ರಫ್ತು ಮಾಡಲಾಗುವುದು ಎಂದು ವರದಿಯಾಗಿದೆ. ಇದನ್ನು ರೆನಾಲ್ಟ್‌ನ ಮುಂಬರುವ 'ಮಿನಿ-ಡಸ್ಟರ್' ಎಂದು ಸಹ ಹೇಳಲಾಗುತ್ತಿದೆ. ಈ ಕಾರು ಹೇಗಿರಲಿದೆ, ಬಿಡುಗಡೆ ಯಾವಾಗ ಹಾಗೂ ಏನೆಲ್ಲಾ ವಿಶೇಷತೆಗಳನ್ನು ಒಳಗೊಂಡಿದೆ ಎಂಬುದರ ಬಗ್ಗೆ ತಿಳಿಯೋಣ.

ಆಫೀಸ್‌ಗೆ ಹೋಗುವವರಿಗೆ ಪರ್ಫೆಕ್ಟ್ ಚಾಯ್ಸ್.. 70 Km ಮೈಲೇಜ್..

ಹೋಂಡಾ ಶೈನ್ 100 (Honda Shine 100) ಜನಮೆಚ್ಚಿದ ಮೋಟಾರ್‌ಸೈಕಲ್‌ ಎಂದೇ ಮನೆ ಮಾತಾಗಿದೆ. ಇದಕ್ಕೆ ಟಿವಿಎಸ್ ರೇಡಿಯನ್ (Tvs Radeon) ಪ್ರಬಲವಾದ ಪ್ರತಿಸ್ಪರ್ಧಿಯಾಗಿದೆ. ಈ ಬೈಕ್‌ಗಳು ದಿನಬಳಕೆಗೆ ಹೆಚ್ಚು ಸೂಕ್ತವಾಗಿದ್ದು, ಆಫೀಸ್‌ಗೆ ಹೋಗುವವರಿಗೆ ಪರ್ಫೆಕ್ಟ್ ಚಾಯ್ಸ್ ಆಗಿವೆ. ನಾವಿಲ್ಲಿ ಇವುಗಳ ಬೆಲೆ, ಕಾರ್ಯಕ್ಷಮತೆ ಹಾಗೂ ವೈಶಿಷ್ಟ್ಯಗಳ ಕುರಿತು ಹೋಲಿಕೆ ಮಾಡಿದ್ದೇವೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
Advertisement

6 ಲಕ್ಷ ಮಾರಾಟದ ಗಡಿ ದಾಟಿದ ಭಾರತದ ಅತ್ಯಂತ ಪ್ರೀತಿಯ ಕ್ರೂಸರ್ ಬೈಕ್

ಭಾರತದ ಅತ್ಯಂತ ಜನಪ್ರಿಯ ಕ್ರೂಸರ್ ಮೋಟಾರ್‌ಸೈಕಲ್ ಆಗಿರುವ ರಾಯಲ್ ಎನ್‌ಫೀಲ್ಡ್ ಮೀಟಿಯರ್ 350 (Royal Enfield Meteor 350), 6 ಲಕ್ಷ ಮಾರಾಟದ ಮೈಲಿಗಲ್ಲನ್ನು ದಾಟಿದೆ. ನವೆಂಬರ್ 2020 ರಲ್ಲಿ ಬಿಡುಗಡೆಯಾದಾಗಿನಿಂದ ಪ್ರಪಂಚದಾದ್ಯಂತದ ಸವಾರರ ವಿಶ್ವಾಸವನ್ನು ಗಳಿಸಿದೆ. ಅದರ ಸಡಿಲವಾದ ಕ್ರೂಸಿಂಗ್ ಸಾಮರ್ಥ್ಯ, ಸಂಸ್ಕರಿಸಿದ ಎಂಜಿನ್ ಮತ್ತು ಸುಲಭ ಸವಾರಿಯೊಂದಿಗೆ, ಮೀಟಿಯರ್ 350 ತ್ವರಿತವಾಗಿ ಅನುಭವಿ ಮೋಟಾರ್‌ಸೈಕ್ಲಿಸ್ಟ್‌ಗಳು ಮತ್ತು ಹೊಸ ಸವಾರರಲ್ಲಿ ನೆಚ್ಚಿನ ಕ್ರೂಸರ್ ಮೋಟಾರ್‌ಸೈಕಲ್ ಆಗಿ ಜನಪ್ರಿಯತೆ ಪಡೆದುಕೊಂಡಿದೆ.

ಮುಗಿಬಿದ್ದ ಜನ.. ಸದ್ದಿಲ್ಲದೇ 1 ಲಕ್ಷ ಬುಕ್ಕಿಂಗ್ಸ್ ಹ್ಯುಂಡೈ..

2025ರ ನ.4 ರಂದು ಎರಡನೇ ತಲೆಮಾರಿನ ಹ್ಯುಂಡೈ ವೆನ್ಯೂ (Second Gen Hyundai Venue) ಎಸ್‌ಯುವಿಯನ್ನು ಮಾರಾಟಕ್ಕೆ ತರಲಾಗಿತ್ತು. ಈ ಕಾರಿನ ದಿನದಿಂದ ದಿನಕ್ಕೆ ಬೇಡಿಕೆಯೂ ಹೆಚ್ಚಾಗುತ್ತದೆ. ಗ್ರಾಹಕರು ಕೂಡ ಮುಗಿಬಿದ್ದು ಕೊಂಡುಕೊಳ್ಳುತ್ತಿದ್ದಾರೆ. ಸದ್ಯ, ಇದೇ ಎಸ್‌ಯುವಿ ಬುಕ್ಕಿಂಗ್‌ನಲ್ಲಿ ಹೊಸದೊಂದು ಇತಿಹಾಸ ನಿರ್ಮಾಣಗೊಂಡಿದ್ದು, ಸರಿ ಸುಮಾರು 1 ಲಕ್ಷ ಆರ್ಡರ್‌ಗಳನ್ನು ಪಡೆದುಕೊಳ್ಳುವಲ್ಲಿ ಕಂಪನಿಯು ಯಶಸ್ವಿಯಾಗಿದೆ. ಇದರ ಸವಿನೆನಪಿಗಾಗಿ ನೂತನ ರೂಪಾಂತರವೊಂದನ್ನು ಬಿಡುಗಡೆಗೊಳಿಸಿದೆ.

ಹೈಬ್ರಿಡ್ SUV ಗೆ ಮುಗಿಬಿದ್ದ ಜನ: ಡೀಲರ್‌ಗಳಿಗೂ ತುಂಬಾ ಇಷ್ಟ

ಸ್ವದೇಶಿ ಕಾರು ಬ್ರ್ಯಾಂಡ್‌ಗಳಿಗೆ ಭಾರತದಲ್ಲಿ ಎಷ್ಟು ಬೇಡಿಕೆ ಇದೆಯೋ ಜಪಾನ್ ಮೂಲದ ಟೊಯೋಟಾ ಕಂಪನಿಗೂ ಅಷ್ಟೇ ಬೇಡಿಕೆ ಇದೆ. ನಮ್ಮ ಕರ್ನಾಟಕದ ಬಿಡದಿಯಲ್ಲಿ ಬೃಹತ್ ಉತ್ಪಾದನಾ ಸ್ಥಾವರ ಹೊಂದಿರುವ ಟೊಯೋಟಾ, ಈಗ ದಾಖಲೆಯ ಮಟ್ಟದಲ್ಲಿ ತನ್ನ ಕಾರುಗಳನ್ನು ದೇಶಾದ್ಯಂತ ಮಾರಾಟ ಮಾಡುತ್ತಿದೆ. ಪ್ರಮುಖ ಮಾಡಲ್‌ಗಳಾದ ಟೊಯೋಟಾ ಇನ್ನೋವಾ, ಗ್ಲಾಂಝಾ, ಫಾರ್ಚುನರ್‌ಗಳು ಭಾರೀ ಬೇಡಿಕೆ ಹೊಂದಿರುವ ಮಾಡಲ್‌ಗಳಾಗಿವೆ. ಆದರೆ ಇವೆಲ್ಲಕ್ಕಿಂತ ದೇಶದಲ್ಲಿ ಮತ್ತೊಂದು ಟೊಯೋಟಾ ಕಾರು ಸಖತ್ ಡಿಮ್ಯಾಂಡ್ ಪಡೆದುಕೊಳ್ಳುತ್ತಿದೆ. ಕಳೆದ ಫೆಬ್ರವರಿ ತಿಂಗಳಲ್ಲಿ ದಾಖಲೆಯ ಮಾರಾಟವನ್ನು ಕಂಡಿದೆ.

27 Km ಮೈಲೇಜ್.. 5-ಸೀಟರ್, ರೂ.10.77 ಲಕ್ಷ.. ಆದ್ರೂ ಈ ಜನಪ್ರಿಯ..

ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ (Maruti Suzuki Grand Vitara) ನಂಬಿಕಾರ್ಹ ಎಸ್‌ಯುವಿಯಾಗಿ ಹೊರಹೊಮ್ಮಿದೆ. ಆದರೂ ಮಾರಾಟ ಸಂಖ್ಯೆ ಮಾತ್ರ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದೆ. ಅದು ಈ 2026ರ ಫೆಬ್ರವರಿಯಲ್ಲಿಯೂ ಮುಂದುವರಿದಿದೆ. ಒಟ್ಟು 5,859 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಿಸಲಾಗಿದೆ. 2025ರ ಇದೇ ಅವಧಿಯಲ್ಲಿ 10,669 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ - ಅಂಶವನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ -45% ಕುಸಿತವಾಗಿದೆ.
Advertisement

Triumph: ಕಮ್ಮಿ ಬೆಲೆಗೆ ಅಂತರಾಷ್ಟ್ರೀಯ ಬೈಕ್: ಫುಲ್ ಡಿಮ್ಯಾಂಡ್

ಜಾಗತಿಕ ಮೋಟಾರ್‌ಸೈಕಲ್ ಬ್ರ್ಯಾಂಡ್ ಆಗಿರುವ ಟ್ರಯಂಫ್ ಮೋಟಾರ್‌ಸೈಕಲ್ಸ್, ಭಾರತದಲ್ಲಿ ಪ್ರಮುಖ ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ತಯಾರಕ ಕಂಪನಿಯಾದ ಬಜಾಜ್ ಆಟೋ ಜೊತೆಗೆ ಪಾಲುದಾರಿಕೆಯನ್ನು ಹೊಂದಿದೆ. ಇವರ ಪಾಲುದಾರಿಕೆಯಡಿ ಬಜಾಜ್ ಕಂಪನಿಯು ಟ್ರಯಂಫ್ ಮೋಟಾರ್‌ಸೈಕಲ್‌ಗಳ ಕಾರ್ಯಾಚರಣೆಯನ್ನು ನೋಡಿಕೊಳ್ಳುತ್ತದೆ. ಕಂಪನಿಗಳ ಪ್ರಕಾರ ಇಲ್ಲಿಯವರೆಗೆ ಭಾರತದಲ್ಲಿ 1 ಲಕ್ಷ ಟ್ರಯಂಫ್ ಮೋಟಾರ್‌ಸೈಕಲ್‌ಗಳ ಗಮನಾರ್ಹ ಮಾರಾಟ ಮೈಲಿಗಲ್ಲನ್ನು ದಾಟಿರುವುದಾಗಿ ತಿಳಿಸಿವೆ. ಈ ಸಾಧನೆಯು ವಿಶ್ವದ ಅತ್ಯಂತ ಬೇಡಿಕೆಯ ಪ್ರೀಮಿಯಂ ಮೋಟಾರ್‌ಸೈಕಲ್ ಬ್ರಾಂಡ್‌ಗಳಲ್ಲಿ ಒಂದಾಗಿ ಟ್ರಯಂಫ್‌ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿದೆ.

Hero: ಪೆಟ್ರೋಲ್ ಬೇಕಿಲ್ಲ.. 165 Km ರೇಂಜ್.. ಕಡಿಮೆ ಬೆಲೆಯ ಹೀರೋ..

ಹೀರೋ ವಿಡಾ ವಿ2 (Hero Vida V2) ವಿಶ್ವಾಸಾರ್ಹ ಎಲೆಕ್ಟ್ರಿಕ್ ಸ್ಕೂಟರ್ ಎಂದೇ ಮನೆ ಮಾತಾಗಿದೆ. ಈ ಸ್ಕೂಟರ್‌ಗೆ ಗ್ರಾಹಕರು ಮನಸೊತ್ತಿದ್ದಾರೆ. ಅದಕ್ಕೆ ತಕ್ಕಂತೆ ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ನೀವು ದಿನಬಳಕೆಗಾಗಿ ಹೊಚ್ಚ ಹೊಸ ಇ-ಸ್ಕೂಟರ್‌ವೊಂದನ್ನು ಖರೀದಿಸಲು ಪ್ಲ್ಯಾನ್ ಮಾಡಿದ್ದೀರಾ.. ಹಾಗಾದರೆ ಇದೇ 'ವಿಡಾ ವಿ2' ಬೆಸ್ಟ್ ಚಾಯ್ಸ್ ಆಗಲಿದೆ. ಬನ್ನಿ, ಈ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

Ola: ಸ್ಕೂಟರ್ ಮಾಲೀಕರಿಗೆ ಫುಲ್ ಖುಷಿ: ರೂ. 10,000 ಉಳಿಸುವ ಆಫರ್

ಭಾರತದ ಐತಿಹಾಸಿಕ ಮೂರನೇ ಐಸಿಸಿ ಪುರುಷರ ಟಿ20 ವಿಶ್ವಕಪ್ (ICC Men's T20 World Cup) ವಿಜಯದ ಸ್ಮರಣಾರ್ಥ ಓಲಾ ಎಲೆಕ್ಟ್ರಿಕ್ ಇಂದು #ಚಾಂಪಿಯನ್ ಮಹೋತ್ಸವ (#ChampionMahotsav) ವನ್ನು ಘೋಷಿಸಿದೆ. ದೇಶಕ್ಕೆ ಅಪಾರ ಹೆಮ್ಮೆಯ ಕ್ಷಣವಾಗಿ, ಓಲಾ ಎಲೆಕ್ಟ್ರಿಕ್ (Ola Electric) ತನ್ನ ಎಲ್ಲಾ ವಾಹನಗಳ ಖರೀದಿಯ ಮೇಲೆ ರೂ. 10,000 ಮೌಲ್ಯದ ಪ್ರಯೋಜನಗಳನ್ನು ನೀಡುವುದಾಗಿ ಹೇಳಿದೆ. ಇದರಿಂದಾಗಿ ಹೆಚ್ಚಿನ ಗ್ರಾಹಕರು ಆಚರಣೆಯಲ್ಲಿ ಸೇರಲು ಸಾಧ್ಯವಾಗುತ್ತದೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದೆ.

TATA: 7-ಸೀಟರ್‌ನ ಕಲ್ಲು ಬಂಡೆಯಂತಹ ಟಾಟಾ ಕಾರಿದು..

ಟಾಟಾ ಸಫಾರಿ (Tata Safari) ನಂಬಿಕಾರ್ಹ ಎಸ್‌ಯುವಿಯಾಗಿ ಎಂದೇ ಮನೆ ಮಾತಾಗಿದೆ. ಸುರಕ್ಷತೆಗೂ ಹೆಸರುವಾಸಿಯಾಗಿದೆ. ಗ್ಲೋಬಲ್ ಎನ್‌ಸಿಎಪಿ & ಭಾರತ್ ಎನ್‌ಸಿಎಪಿಯಿಂದ 5-ಸ್ಟಾರ್ ಸೇಫ್ಟಿ ರೇಟಿಂಗ್‌ನ್ನು ಹೊಂದುವಲ್ಲಿಯೂ ಯಶಸ್ವಿಯಾಗಿದೆ. ಈ ಕಾರಿಗೆ ದಿನದಿಂದ ದಿನಕ್ಕೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಗ್ರಾಹಕರು ಸಹ ಮುಗಿಬಿದ್ದು ಕೊಂಡುಕೊಳ್ಳುತ್ತಿದ್ದಾರೆ. ಕಳೆದ ತಿಂಗಳು (ಫೆಬ್ರವರಿ - 2026) ಭಾರೀ ಸಂಖ್ಯೆಯಲ್ಲಿಯೇ ಮಾರಾಟಗೊಂಡಿದೆ. ಒಟ್ಟು 1,650 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಿಸಲಾಗಿದೆ. 2025ರ ಇದೇ ಅವಧಿಯಲ್ಲಿ 1,562 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ - ಅಂಶವನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 5.63% ಬೆಳವಣಿಗೆಯಾಗಿದೆ.
Advertisement

MG ಮೆಜೆಸ್ಟರ್ SUV ಗಾಗಿ 5-5-5 ಕಾರ್ಯಕ್ರಮ ಪರಿಚಯಿಸಿದ MG ಮೋಟಾರ

ಭಾರತದ ಮೊದಲ D+ SUV ಆಗಿರುವ ಎಂಜಿ ಮೆಜೆಸ್ಟರ್ (MG MAJESTOR) ಕಾರಿಗಾಗಿ ತನ್ನ ವಿಶಿಷ್ಟವಾದ 5- 5 -5 ಕಾರ್ಯಕ್ರಮದ ಮೂಲಕ ಜೆಎಸ್‌ಡಬ್ಲ್ಯು ಎಂಜಿ ಮೋಟಾರ್ (JSW MG Motor) ಕಂಪನಿಯು ಗ್ರಾಹಕರಿಗೆ ದೀರ್ಘಾವಧಿಯ ಮಾಲೀಕತ್ವದ ಭರವಸೆಯನ್ನು ನೀಡಿದೆ. ಗ್ರಾಹಕರು ಕಾರ್ಯಕ್ಷಮತೆ, ಗಾತ್ರ ಮತ್ತು ಸುಧಾರಿತ ತಂತ್ರಜ್ಞಾನದಲ್ಲಿ ಗಮನಾರ್ಹವಾಗಿ ಹೂಡಿಕೆ ಮಾಡುವ ವಿಭಾಗದಲ್ಲಿ, 5- 5 -5 ಕಾರ್ಯಕ್ರಮವನ್ನು ಆರಂಭದಿಂದಲೇ ಚಾಲನೆಯಲ್ಲಿರುವ ವೆಚ್ಚಗಳು ಮತ್ತು ರಾಷ್ಟ್ರವ್ಯಾಪಿ ಬೆಂಬಲವನ್ನು ಪರಿಹರಿಸುವ ಮೂಲಕ ತೊಂದರೆ-ಮುಕ್ತ ಮಾಲೀಕತ್ವದ ಅನುಭವ, ದೀರ್ಘಾವಧಿಯ ವೆಚ್ಚದ ಮುನ್ಸೂಚನೆಯನ್ನು ನೀಡಲು ಇದನ್ನು ವಿನ್ಯಾಸಗೊಳಿಸಲಾಗಿದೆ.

ಬೆಸ್ಟ್ 5 ಮೈಲೇಜ್ ಸ್ಕೂಟರ್‌ಗಳಿವು.. ಬೆಲೆಯೂ ಕಮ್ಮಿ.. ಜನಪ್ರಿಯ..

ಭಾರತದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಸ್ಕೂಟರ್‌ಗಳಿಗೆ ದಿನದಿಂದ ದಿನಕ್ಕೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಗ್ರಾಹಕರು ಸಹ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ನೀವು ದಿನಬಳಕೆಗೆ ಹೊಚ್ಚ ಹೊಸ ಸ್ಕೂಟರ್‌ವೊಂದನ್ನು ಖರೀದಿಸಲು ಪ್ಲ್ಯಾನ್ ಮಾಡಿದ್ದೀರಾ.. ಹಾಗಾದರೆ, ಗರಿಷ್ಠ ಮೈಲೇಜ್ ನೀಡಬಲ್ಲ ಹೋಂಡಾ ಆಕ್ಟಿವಾ 125, ಯಮಹಾ ಫ್ಯಾಸಿನೊ 125 ಎಫ್ಐ ಹೈಬ್ರಿಡ್, ಟಿವಿಎಸ್ ಜುಪಿಟರ್ 125, ಟಿವಿಎಸ್ ಎನ್‌ಟಾರ್ಕ್ 125 ಹಾಗೂ ಸುಜುಕಿ ಆಕ್ಸೆಸ್ 125 ಮಾಡೆಲ್‌ಗಳು ಬೆಸ್ಟ್ ಚಾಯ್ಸ್ ಆಗಲಿವೆ. ಬನ್ನಿ.. ಇವುಗಳ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಕ್ಷಿಪ್ತವಾದ ವಿವರಗಳನ್ನು ತಿಳಿಯೋಣ.

ಟೊಯೋಟಾ ಹೈಬ್ರಿಡ್ SUV... 27 ಕಿ.ಮೀ ಮೈಲೇಜ್: ಫುಲ್ ಡಿಮ್ಯಾಂಡ್

ಜಾಗತಿಕವಾಗಿ ಅತ್ಯಂತ ಜನಪ್ರಿಯತೆ ಪಡೆದಿರುವ ಕಾರು ತಯಾರಕ ಕಂಪನಿ 'ಟೊಯೋಟಾ' (Toyota) ಇಂದು 'ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್ ಮಾಸ' (Toyota Urban Cruiser Hyryder Month) ವನ್ನು ಪರಿಚಯಿಸಿದೆ. ಏನಿದು ಹೈರೈಡರ್ ಮಾಸ? ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್‌ನ ನಿರಂತರ ಯಶಸ್ಸನ್ನು ಆಚರಿಸುವ ಅಂಗವಾಗಿ ಒಂದು ತಿಂಗಳ ಅವಧಿಗೆ ಗ್ರಾಹಕರನ್ನು ಈ ಹೈಬ್ರಿಡ್ ಎಸ್‌ಯುವಿಗೆ ಇನ್ನೂ ಹತ್ತಿರವಾಗುವಂತೆ ಮಾಡುವುದಾಗಿದೆ. ಮಾರ್ಚ್ ಅಂತ್ಯದವರೆಗೆ ಉತ್ತರ ಭಾರತದಾದ್ಯಂತ ಅನ್ವಯವಾಗುವ ಈ ಅಭಿಯಾನವು ಆಕರ್ಷಕ, ವಿಶೇಷ ಪ್ರಯೋಜನಗಳಿಂದ ಪೂರಕವಾಗಿರುತ್ತದೆ ಎಂದು ಟೊಯೋಟಾ ತಿಳಿಸಿದೆ.

ರೂ.4.57 ಲಕ್ಷಕ್ಕೆ ಹೊಸ ಟಾಟಾ ಕಾರು.. ಈ ಆಫರ್ ಮಿಸ್ ಮಾಡಿಕೊಳ್ಳಬೇಡಿ..

ಟಾಟಾ ಮೋಟಾರ್ಸ್ (Tata Motors) ನಂಬಿಕಾರ್ಹ ವಾಹನ ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಟಿಯಾಗೊ, ಟಿಗೂರ್, ಆಲ್ಟೋಜ್, ನೆಕ್ಸಾನ್‌, ಹ್ಯಾರಿಯರ್ ಹಾಗೂ ಸಫಾರಿ ಸೇರಿದಂತೆ ವಿವಿಧ ಕಾರುಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಗ್ರಾಹಕರು ಸಹ ನಾ ಮುಂದು - ತಾ ಮುಂದು ಎಂಬಂತೆ ಮುಗಿಬಿದ್ದು ಖರೀದಿಸುತ್ತಿದ್ದಾರೆ. ಇದೇ ಕಾರುಗಳ ಖರೀದಿ ಮೇಲೆ ಈ 2026ರ ಮಾರ್ಚ್‌ನಲ್ಲಿ ದೊಡ್ಡ ಮಟ್ಟದಲ್ಲಿ ರಿಯಾಯಿತಿ ಪ್ರಯೋಜನಗಳನ್ನು ಘೋಷಣೆ ಮಾಡಲಾಗಿದೆ. ಯುಗಾದಿಗೆ ನೂತನ ಕಾರೊಂದನ್ನು ಖರೀದಿಸಲು ಆಲೋಚಿಸಿದ್ದವರಿಗೆ ಹೆಚ್ಚಿನ ಅನುಕೂಲವಾಗಲಿದೆ.
Advertisement

ನಾಲ್ಕೂವರೆ ಲಕ್ಷಕ್ಕೆ ಕಾರು.. ಪೆಟ್ರೋಲ್, CNG, EV ರೂಪದಲ್ಲಿ..

ಟಾಟಾ ಟಿಯಾಗೊ (Tata Tiago) ಪ್ರಮುಖ ಹ್ಯಾಚ್‌ಬ್ಯಾಕ್ ಎಂದೇ ಹೆಸರುವಾಸಿಯಾಗಿದೆ. 2016ರಲ್ಲಿ ಬಿಡುಗಡೆಯಾದ ಈ ಕಾರು, ಅಂದಿನಿಂದ ಇಂದಿನವರೆಗೆ ಉತ್ತಮ ಸಂಖ್ಯೆಯಲ್ಲಿಯೇ ಮಾರಾಟವಾಗುತ್ತಿದೆ. ಗ್ರಾಹಕರು ಸಹ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಕಳೆದ ತಿಂಗಳು (ಫೆಬ್ರವರಿ - 2026) ಒಟ್ಟು 7,040 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಿಸಲಾಗಿದೆ. 2025ರ ಇದೇ ಅವಧಿಯಲ್ಲಿ 6,954 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ - ಅಂಶವನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 1% ಬೆಳವಣಿಗೆಯಾಗಿದೆ.