Honda: ಯುಗಾದಿಗೆ ಹೊಸ ಕಾರುಗಳನ್ನು ಖರೀದಿಸಬಹುದು..

ಹೋಂಡಾ ಕಾರ್ಸ್ ಇಂಡಿಯಾ (Honda Cars India) ನಂಬಿಕಾರ್ಹ ಕಾರು ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಅಮೇಜ್, ಎಲಿವೇಟ್ ಹಾಗೂ ಸಿಟಿ ಕಾರುಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಇವುಗಳ ಖರೀದಿ ಮೇಲೆ ಈ 2026ರ ಮಾರ್ಚ್ ತಿಂಗಳು ದೊಡ್ಡ ಮಟ್ಟದಲ್ಲಿ ರಿಯಾಯಿತಿ ಪ್ರಯೋಜನಗಳನ್ನು ಘೋಷಣೆ ಮಾಡಿದೆ. ಯುಗಾದಿ ಹಬ್ಬಕ್ಕೆ ಹೊಚ್ಚ ಹೊಸ ಕಾರನ್ನು ಕೊಂಡುಕೊಳ್ಳಲು ಪ್ಲ್ಯಾನ್ ಮಾಡಿದವರಿಗೆ ಹೆಚ್ಚಿನ ಪ್ರಯೋಜನಗಳು ಲಭ್ಯವಾಗಲಿದೆ.

ಏಕೀಕೃತ EV ಚಾರ್ಜಿಂಗ್ ಅಪ್ಲಿಕೇಶನ್ ಆಗಿ ಹೊರಹಿಮ್ಮಿದ MG ಇ-ಹಬ್

ಜೆಎಸ್‌ಡಬ್ಲ್ಯೂ ಎಂಜಿ ಮೋಟಾರ್ ಇಂಡಿಯಾ ತನ್ನ ನವೀನ ಇ-ಹಬ್ ಬೈ ಎಂಜಿ ಅಪ್ಲಿಕೇಶನ್ ಭಾರತದ ಅತಿದೊಡ್ಡ ಏಕೀಕೃತ ಇವಿ ಚಾರ್ಜಿಂಗ್ ಅಪ್ಲಿಕೇಶನ್ ಆಗಿ ಮಾರ್ಪಟ್ಟಿದೆ ಎಂದು ಘೋಷಿಸಿದೆ. ಪ್ಲಾಟ್‌ಫಾರ್ಮ್‌ನಲ್ಲಿ 22,500 ಕ್ಕೂ ಹೆಚ್ಚು ಚಾರ್ಜಿಂಗ್ ಪಾಯಿಂಟ್‌ಗಳನ್ನು ಪಟ್ಟಿ ಮಾಡಲಾಗಿದೆ. ಇದರ ಜೊತೆಗೆ, ಇ-ಹಬ್ ಬೈ ಎಂಜಿ ಅಪ್ಲಿಕೇಶನ್ ಈಗ ಜಿಯೋ-ಬಿಪಿ, ಟಾಟಾ ಪವರ್ ಅದಾನಿ, ಶೆಲ್, ಜಿಯಾನ್, ಚಾರ್ಜ್ ಝೋನ್, ಬಿಪಿಸಿಎಲ್, ಇತ್ಯಾದಿಗಳನ್ನು ಒಳಗೊಂಡಂತೆ 40 ಪ್ರಮುಖ ಚಾರ್ಜ್ ಪಾಯಿಂಟ್ ಆಪರೇಟರ್‌ಗಳನ್ನು (ಸಿಪಿಒ) ಹೊಂದಿದೆ ಎಂದು ಕಾರು ತಯಾರಕರು ತಿಳಿಸಿದ್ದಾರೆ.

Toyota: ಮುಗಿಬಿದ್ದ ಜನ.. ಅಬ್ಬರಿಸಿದ ಟೊಯೊಟಾ.. ಪ್ರತಿದಿನ 1,200..

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (Toyota Kirloskar Motor) ಜನಮೆಚ್ಚಿದ ವಾಹನ ತಯಾರಕ ಕಂಪನಿ ಎಂದೇ ಮನೆ ಮಾತಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ವಿವಿಧ ಕಾರುಗಳನ್ನು ಯಶಸ್ವಿವಾಗಿ ಮಾರಾಟಗೊಳಿಸುತ್ತಿದೆ. ಈ 2026ರ ಫೆಬ್ರವರಿಯಲ್ಲಿ ಸರಿ ಸುಮಾರು 34,034 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿತ್ತು. 2025ರ ಇದೇ ಅವಧಿಯಲ್ಲಿ 28,414 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿಅಂಶವನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 20% ಪ್ರಗತಿಯಾಗಿದೆ. ಒಟ್ಟು ಮಾರಾಟದಲ್ಲಿ ದೇಶೀಯವಾಗಿ 30,737 ಯುನಿಟ್ ಹಾಗೂ ವಿದೇಶಕ್ಕೆ 3,297 ಯುನಿಟ್‌ಗಳನ್ನು ರಫ್ತು ಮಾಡಲಾಗಿದೆ.

ರಸ್ತೆಯಲ್ಲಿ ಸುರಕ್ಷತೆ ಹೆಚ್ಚಿಸಲು AI-ಚಾಲಿತ ಡ್ಯಾಶ್ ಕ್ಯಾಮ್ ಸಜ್ಜು

ಬೆಂಗಳೂರು ಮೂಲದ ಎಲೆಕ್ಟ್ರಿಕ್ ತ್ರಿಚಕ್ರ ವಾಹನ (EV) ತಯಾರಕರಾದ 3ev ಇಂಡಸ್ಟ್ರೀಸ್ ಮತ್ತು ಪೂರ್ಣ ಪ್ರಮಾಣದ EV ಲಾಜಿಸ್ಟಿಕ್ಸ್ ಪ್ಲಾಟ್‌ಫಾರ್ಮ್ ಆಗಿರುವ 3eco ಸಿಸ್ಟಮ್ಸ್, ಚಾಲಕರು, ಪ್ರಯಾಣಿಕರನ್ನು ರಸ್ತೆ ಅಪಘಾತಗಳಿಂದ ರಕ್ಷಿಸಲು 10,000 ಎಲೆಕ್ಟ್ರಿಕ್ ತ್ರಿಚಕ್ರ ವಾಹನ ಫ್ಲೀಟ್‌ಗಳಲ್ಲಿ ಕಾಶಿಯೋ (Cautio) ತಯಾರಿಸಿದ ಡ್ಯಾಶ್ ಕ್ಯಾಮೆರಾಗಳನ್ನು ದೊಡ್ಡ ಪ್ರಮಾಣದಲ್ಲಿ ನಿಯೋಜಿಸುವುದಾಗಿ ಘೋಷಿಸಿವೆ. Cautio ಭಾರತದ ಪ್ರಮುಖ ವೀಡಿಯೊ ಟೆಲಿಮ್ಯಾಟಿಕ್ಸ್ ಕಂಪನಿಯಾಗಿದ್ದು, AI - ಚಾಲಿತ ಡ್ಯಾಶ್‌ ಕ್ಯಾಮ್ ಸಿಸ್ಟಮ್‌ಗಳನ್ನು ತಯಾರಿಸುತ್ತಿದೆ.
Advertisement

2026ರ ಫೆಬ್ರವರಿ ಎಲೆಕ್ಟ್ರಿಕ್ ಟೂ-ವೀಲರ್ ಸೇಲ್ಸ್.. ಟಿವಿಎಸ್ ನಂ.1..

ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನ (Electric 2-Wheeler) ಮಾರುಕಟ್ಟೆ ವೇಗವನ್ನು ಬೆಳವಣಿಗೆಯಾಗುತ್ತಿದೆ. ಗ್ರಾಹಕರು ಕೂಡ 'ಇವಿ'ಗಳನ್ನು ನಾ ಮುಂದು - ತಾ ಮುಂದು ಎಂಬಂತೆ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಈ 2026ರ ಫೆಬ್ರವರಿಯಲ್ಲಿ ಎಲ್ಲ ಕಂಪನಿಗಳು ಸೇರಿ ಒಟ್ಟು 1,11,680 ಯುನಿಟ್‌ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿವೆ. 2025ರ ಇದೇ ಅವಧಿಯಲ್ಲಿ 76,720 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿಅಂಶವನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 46% ಪ್ರಗತಿಯಾಗಿದೆ. ಸದ್ಯ, ಅತಿಹೆಚ್ಚು 'ಇವಿ'ಗಳನ್ನು ಮಾರಾಟಗೊಳಿಸಿದ ಪ್ರಮುಖ 10 ಕಂಪನಿಗಳ ಪಟ್ಟಿಯೂ ಪ್ರಕಟಗೊಂಡಿದೆ. ಟಿವಿಎಸ್ ಮೋಟಾರ್ ಅಗ್ರ ಸ್ಥಾನದಲ್ಲಿದ್ದರೆ, ರಿವೋಲ್ಟ್ ಮೋಟಾರ್ಸ್ ಕಡೆಯ ಸ್ಥಾನದಲ್ಲಿದೆ.

Ultraviolette: ಬರೋಬ್ಬರಿ 1 ಲಕ್ಷ ಇಳಿಕೆ: ಕೇವಲ 1.5 ಲಕ್ಷಕ್ಕೆ ಬೈಕ್

ಕರ್ನಾಟದ ಪ್ರಮುಖ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ತಯಾರಕ ಕಂಪನಿಯಾಗಿರುವ ಅಲ್ಟ್ರಾವೈಲೆಟ್ (Ultraviolette), ತನ್ನ X-47 ಅಡ್ವೆಂಚರ್ ಬೈಕ್ ಬಿಡುಗಡೆಯ ಅದ್ಭುತ ಯಶಸ್ಸಿನ ನಂತರ ಇಂದು 'ಬ್ಯಾಟರಿ ಫ್ಲೆಕ್ಸ್' (BaaS) ಅನ್ನು ಬಿಡುಗಡೆ ಮಾಡಿದೆ. ಇದು ದೇಶಾದ್ಯಂತ ಗ್ರಾಹಕರಿಗೆ ಸುಲಭ ಖರೀದಿ ಮತ್ತು ಕೈಗೆಟುಕುವ ಬೆಲೆಗೆ ಬೈಕ್ ಲಭ್ಯವಾಗುವಂತೆ ಮಾಡುತ್ತದೆ. NBFC, Ecofy ಜೊತೆಗಿನ ಪಾಲುದಾರಿಕೆಯಲ್ಲಿ, ಅಲ್ಟ್ರಾವೈಲೆಟ್ ಸುಧಾರಿತ ಹಣಕಾಸು ಪರಿಹಾರಗಳನ್ನು ನೀಡುತ್ತಿದೆ, ಜೊತೆಗೆ ಈ ಸಹಯೋಗವು ಭಾರತೀಯ ಗ್ರಾಹಕರಿಗೆ ಸುಧಾರಿತ ಎಲೆಕ್ಟ್ರಿಕ್ ಬೈಕ್ ಅತಿ ಸುಲಭವಾಗಿ ಖರೀದಿಸುವಂತೆ ಮಾಡುತ್ತದೆ.

Maruti Suzuki: ಈ ಭಾರತ ನಿರ್ಮಿತ ಸ್ಟೈಲಿಶ್ ಮಾರುತಿ SUV..

ಈಚೆಗೆ ದೇಶೀಯ ಮಾರುಕಟ್ಟೆಯಲ್ಲಿ ಹೊಚ್ಚ ಹೊಸ ಮಾರುತಿ ಸುಜುಕಿ ಇ-ವಿಟಾರಾ (Maruti Suzuki e Vitara) ಎಲೆಕ್ಟ್ರಿಕ್ ಎಸ್‌ಯುವಿಯನ್ನು ಬಿಡುಗಡೆಗೊಳಿಸಲಾಗಿತ್ತು ಸದ್ಯ, ಭಾರತ ನಿರ್ಮಿತ ಈ ಕಾರನ್ನು 'ಸುಜುಕಿ ಇ-ವಿಟಾರಾ' ಹೆಸರಿನೊಂದಿಗೆ ಬ್ರೆಜಿಲ್‌ನಲ್ಲೂ ಮಾರಾಟಕ್ಕೆ ತರಲಾಗಿದೆ ಎಂದು ವರದಿಯಾಗಿದೆ. ಅಲ್ಲಿ 269,990 ಡಾಲರ್ ಬೆಲೆಯನ್ನು ಹೊಂದಿದೆ. ಭಾರತೀಯ ರೂಪಾಯಿಗಳಲ್ಲಿ ರೂ. 48 ಲಕ್ಷ ಆಗುತ್ತದೆ.

ಕಮ್ಮಿ ಬೆಲೆಯ ಪುಟ್ಟ ಕಾರುಗಳು ಬಿಡುಗಡೆಗೆ ಸಜ್ಜಾಗಿವೆ

ಭಾರತದಲ್ಲಿ ಸಣ್ಣ ಎಸ್‌ಯುವಿಗಳು (ಸಬ್-4 ಮೀಟರ್ ಕಾಂಪ್ಯಾಕ್ಟ್ ಎಸ್‌ಯುವಿ) ತುಂಬಾ ಡಿಮ್ಯಾಂಡ್ ಪಡೆದುಕೊಳ್ಳುತ್ತಿವೆ, ಐದು ಮಂದಿಗೆ ಆರಾಮ ಪ್ರಯಾಣ ನೀಡುವ ಈ ಕಾರುಗಳು ಸಣ್ಣ ಕುಟುಂಬಕ್ಕೆ ಬೆಸ್ಟ್ ಆಯ್ಕೆಯಾಗಿವೆ. ದೇಶದಲ್ಲಿ ಬಹುತೇಕ ಎಲ್ಲಾ ಬ್ರ್ಯಾಂಡ್‌ಗಳು ಸಬ್-4 ಮೀಟರ್ ಕಾಂಪ್ಯಾಕ್ಟ್ ಎಸ್‌ಯುವಿಗಳನ್ನು ಮಾರಾಟ ಮಾಡುತ್ತಿವೆ. ಆದರೂ ಜನ ಹೊಸ ಅಪ್‌ಡೇಟ್‌ಗಳು ಹಾಗೂ ಆಕರ್ಷಕ ಡಿಸೈನ್ ಬಯಸುತ್ತಿರುವುದರಿಂದ ಒಂದಷ್ಟು ಬ್ರ್ಯಾಂಡ್‌ಗಳು ಹೊಸ ಸಬ್-4 ಮೀಟರ್ ಕಾಂಪ್ಯಾಕ್ಟ್ ಎಸ್‌ಯುವಿಗಳನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿವೆ. ಯಾವೆಲ್ಲಾ ಕಾರುಗಳು ಬಿಡುಗಡೆಯಾಗಲಿವೆ ಬನ್ನಿ ನೋಡೋಣ.
Advertisement

ಬಡವರಿಗಾಗಿಯೇ ಇರುವ ಕಮ್ಮಿ ಬೆಲೆಯ 7 ಬೈಕ್‌ಗಳಿವು: 90 Km ತನಕ..

ಭಾರತದಲ್ಲಿ ಬಡ ಹಾಗೂ ಮಧ್ಯಮ ವರ್ಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಅದರಲ್ಲೂ ಕೆಲವರಿಗೆ ಬದುಕಿನ ಬಂಡಿ ಎಳೆಯಲು ಮೋಟಾರ್‌ಸೈಕಲ್‌ಗಳು ತೀರಾ ಅನಿವಾರ್ಯವಾಗಿವೆ. ನೀವು ಹೊಚ್ಚ ಹೊಸ 100 ಸಿಸಿ ಬೈಕ್‌ವೊಂದನ್ನು ಖರೀದಿಸಲು ಆಲೋಚಿಸಿದ್ದೀರಾ.. ಹಾಗಾದರೆ ಹೀರೋ ಸ್ಪ್ಲೆಂಡರ್ ಪ್ಲಸ್, ಹೀರೋ ಸ್ಪ್ಲೆಂಡರ್ ಪ್ಲಸ್ ಎಕ್ಸ್‌ಟೆಕ್, ಹೋಂಡಾ ಶೈನ್ 100, ಹೋಂಡಾ ಶೈನ್ 100 ಡಿಎಕ್ಸ್, ಹೀರೋ ಎಚ್ಎಫ್ ಡಿಲಕ್ಸ್, ಹೀರೋ ಪ್ಯಾಶನ್ ಪ್ಲಸ್ ಹಾಗೂ ಬಜಾಜ್ ಪ್ಲಾಟಿನಾ 100 ಮಾಡೆಲ್‌ಗಳು ಅತ್ಯುತ್ತಮವಾದ ಆಯ್ಕೆಯಾಗಲಿವೆ. ಬನ್ನಿ, ಇವುಗಳ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಕ್ಷಿಪ್ತವಾದ ವಿವರಗಳನ್ನು ತಿಳಿಯೋಣ.

Duster: ಮಾರ್ಚ್ 17ಕ್ಕೆ ಹೊಸ ಹೈಬ್ರಿಡ್ SUV ಬಿಡುಗಡೆ

ರೆನಾಲ್ಟ್ ಡಸ್ಟರ್ ಯಾರಿಗೆ ಗೊತ್ತಿಲ್ಲ ಹೇಳಿ, ಒಂದು ಕಾಲದಲ್ಲಿ ಎಸ್‌ಯುವಿ ಎಂದ ತಕ್ಷಣ ನೆನಪಾಗುವ ಮೊದಲ ಕಾರಾಗಿತ್ತು. ದಶಕದ ಹಿಂದೆ ಭಾರತದಲ್ಲಿ ಹೆಚ್ಚು ಜನಪ್ರಿಯತೆ ಪಡೆದಿದ್ದ ರೆನಾಲ್ಟ್ ಡಸ್ಟರ್ (Renault duster) ಅನ್ನು ಮೊದಲಿಗೆ 2012 ರಲ್ಲಿ ಮೊದಲ ಬಾರಿಗೆ ಪರಿಚಯಿಸಲಾಯಿತು. ಆಗ ಇದರ ಡಿಸೈನ್‌ ಹಾಗೂ ಪರ್ಫಾಮೆನ್ಸ್‌ಗೆ ಜನ ಫಿದಾ ಆಗಿದ್ದರು, ನಂತರ ಇತರ ಬ್ರಾಂಡ್‌ಗಳ ಪೈಪೋಟಿ ಹಾಗೂ ವಿವಿಧ ಕಾರಣಾಂತರಗಳಿಂದ 2022 ರಲ್ಲಿ ಕಾರನ್ನು ಸ್ಥಗಿತಗೊಳಿಸಲಾಯಿತು. ಆದರೆ ಜನರಲ್ಲಿ ಇಂದಿಗೂ ಈ ಕಾರಿನ ಮೇಲೆ ಕ್ರೇಜ್ ಇರುವ ಕಾರಣ, ಪ್ರತಿಸ್ಪರ್ಧಿಗಳಿಗೆ ಪೈಪೋಟಿ ನೀಡುವಂತಹ ಡಿಸೈನ್, ಫೀಚರ್ಸ್ ಹಾಗೂ ಹೈಬ್ರಿಡ್ ಎಂಜಿನ್‌ನೊಂದಿಗೆ ಬಿಡುಗಡೆಗೆ ಸಜ್ಜಾಗಿದೆ.

ರೂ.4.99 ಲಕ್ಷಕ್ಕೆ ಬೆಸ್ಟ್ ಮಾರುತಿ ಕಾರಿದು.. ಮುಗಿಬಿದ್ದ ಜನ..

ಮಾರುತಿ ಸುಜುಕಿ ವ್ಯಾಗನ್ಆರ್ (Maruti Suzuki WagonR) ಪ್ರಖ್ಯಾತ ಹ್ಯಾಚ್‌ಬ್ಯಾಕ್ ಎಂದೇ ಮನೆ ಮಾತಾಗಿದೆ. ಎಸ್‌ಯುವಿ ಹಾಗೂ ಎಂಪಿವಿಗಳ ತೀವ್ರ ಪೈಪೋಟಿಯ ನಡುವೆಯೂ ಮಧ್ಯಮ ವರ್ಗದ ಜನರು ಆಯ್ಕೆಯ ವಾಹನವಾಗಿದೆ. ಅದಕ್ಕೆ ತಕ್ಕಂತೆ ಪ್ರತಿ ತಿಂಗಳು ಸ್ಪರ್ಧಾತ್ಮಕ ಸಂಖ್ಯೆಯಲ್ಲಿಯೇ ಮಾರಾಟವಾಗುತ್ತಿದೆ. ಈ 2026ರ ಫೆಬ್ರವರಿಯಲ್ಲಿಯೂ ಗ್ರಾಹಕರು ಮುಗಿಬಿದ್ದು ಖರೀದಿಸುತ್ತಿದ್ದಾರೆ. ಒಟ್ಟು 14,885 ಯುನಿಟ್‌ಗಳನ್ನು ವಿತರಿಸಲಾಗಿದೆ. ಇದೇ ಜನವರಿ ತಿಂಗಳಲ್ಲಿ ಸರಿ ಸುಮಾರು 15,118 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ.

Yamaha: ಮೊನ್ನೆಯಷ್ಟೆ ಬಿಡುಗಡೆಯಾದ ಕಮ್ಮಿ ಬೆಲೆಯ ಯಮಹಾ ಬೈಕ್ ವಿಶೇಷತೆ

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿರುವ ಯಮಹಾ (Yamaha), ಇತ್ತೀಚೆಗೆ ತನ್ನ XSR155 ಮೋಟಾರ್‌ಸೈಕಲ್‌ನ ಮೆಟಾಲಿಕ್ ಬ್ಲ್ಯಾಕ್ ಎಡಿಷನ್ ಅನ್ನು ಬಿಡುಗಡೆ ಮಾಡಿದೆ. ಹೊಸ ಯಮಹಾ XSR155 ಮೆಟಾಲಿಕ್ ಬ್ಲ್ಯಾಕ್ ಎಡಿಷನ್ ಬೆಲೆಯು ರೂ. 1,58,990 (ಎಕ್ಸ್ - ಶೋರೂಂ) ಇದೆ. ಈ ಮೋಟಾರ್‌ಸೈಕಲ್ ಪ್ರತಿ ಲೀಟರ್ ಪೆಟ್ರೋಲ್‌ಗೆ 48 ಕಿ.ಮೀವರೆಗೆ ಮೈಲೇಜ್ ನೀಡುತ್ತದೆ ಎಂದು ಕಂಪನಿ ತಿಳಿಸಿದೆ. ಹೊಸ ಯಮಹಾ XSR155 ಮೆಟಾಲಿಕ್ ಬ್ಲ್ಯಾಕ್ ಎಡಿಷನ್ ಹೆಚ್ಚಿನ ವಿಶೇಷತೆಗಳು ಇಲ್ಲಿವೆ.
Advertisement

Tata: ರೆಡಿಯಾಗಿ.. 3 ಹೊಸ ಟಾಟಾ ಕಾರುಗಳು ಬರಲಿವೆ, ಯಾವುವು?

ಟಾಟಾ ಮೋಟಾರ್ಸ್ (Tata Motors) ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಅಗ್ರ ಸ್ಥಾನದಲ್ಲಿದೆ. ಕಂಪನಿಯ ಇವಿಗಳನ್ನು ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಈ 2026 ಟಾಟಾಗೆ ತುಂಬಾ ಮಹತ್ವದ ವರ್ಷವಾಗಿದೆ. ಟಿಯಾಗೊ ಇವಿ ಫೇಸ್‌ಲಿಫ್ಟ್, ಸಿಯೆರಾ ಇವಿ ಹಾಗೂ ಅವಿನ್ಯಾ ಇವಿಗಳು ಮಾರಾಟಕ್ಕೆ ಬರಲಿವೆ ಎಂದು ವರದಿಯಾಗಿದೆ. ಬನ್ನಿ, ಈ ಕಾರುಗಳ ನಿರೀಕ್ಷಿತ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಕ್ಷಿಪ್ತವಾದ ವಿವರಗಳನ್ನು ತಿಳಿಯೋಣ.

ಭಾರತದಲ್ಲಿ ಹೊಸ ಬ್ರ್ಯಾಂಡ್‌ಗಳದ್ದೇ ಹವಾ

ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಬೇಡಿಕೆ ಹೆಚ್ಚುತ್ತಲೇ ಇದೆ, ಹೊಸ ಹೊಸ ಬ್ರ್ಯಾಂಡ್‌ಗಳು ದೇಶದಲ್ಲಿ ತಮ್ಮ ಇವಿಗಳನ್ನು ಪರಿಚಯಿಸಿ ಲಾಭ ಮಾಡಿಕೊಳ್ಳುತ್ತಿವೆ. ಜಾಗತಿಕವಾಗಿ ಗುರ್ತಿಸಿಕೊಂಡಿರುವ ಎಂಜಿ ಮೋಟಾರ್ ಕೂಡ ತನ್ನ ಜನಪ್ರಿಯ ಮಾಡಲ್‌ಗಳೊಂದಿಗೆ ಭಾರತದಲ್ಲಿ ಮುನ್ನುಗ್ಗುತ್ತಿದೆ, ಈ ಬ್ರ್ಯಾಂಡ್ ಇಂಧನ ಚಾಲಿತ ಕಾರುಗಳನ್ನು ಮಾರಾಟ ಮಾಡುತ್ತದೆಯಾದರೂ, ಇವಿಗಳಿಗೆ ತುಂಬಾ ಬೇಡಿಕೆ ಹೊಂದಿದೆ. ಅದರಲ್ಲೂ 'ಎಂಜಿ ವಿಂಡ್ಸರ್' ಕಾರು, ಕಂಪನಿಗೆ ಚಿನ್ನದ ಮೊಟ್ಟೆಯಾಗಿದೆ. ನಿಧಾನವಾಗಿ ಭಾರತದಲ್ಲಿ ತನ್ನ ಅಸ್ತಿತ್ವನ್ನು ಭದ್ರಪಡಿಸಿಕೊಳ್ಳುತ್ತಿರುವ ಎಂಜಿ ಮೋಟಾರ್, ಫೆಬ್ರವರಿ ತಿಂಗಳಲ್ಲಿ ಬರೋಬ್ಬರಿ 4,957 ಕಾರುಗಳನ್ನು ಮಾರಾಟ ಮಾಡಿದೆ.

Ola: ಪ್ರತಿದಿನ ಬರೀ 141 ಟೂ-ವೀಲರ್​ಗಳಷ್ಟೇ ಸೇಲ್ಸ್.. ಮಂಕಾದ ಓಲಾ..

ಭಾರತದ ದ್ವಿಚಕ್ರ ಮಾರುಕಟ್ಟೆಯಲ್ಲಿ ಓಲಾ ಎಲೆಕ್ಟ್ರಿಕ್ (Ola Electric) ಅಬ್ಬರಿಸಿತ್ತು. 2022 ರಿಂದ 2024ರವರೆಗೆ ಕಂಪನಿಯ ಇವಿಗಳು ಭಾರೀ ಸಂಖ್ಯೆಯಲ್ಲಿ ಮಾರಾಟವಾಗುತ್ತಿದ್ದವು. ಆದರೆ, 2025ರಲ್ಲಿ ನಾನಾ ಕಾರಣಗಳಿಗೆ ಮಾರಾಟದಲ್ಲಿ ಹಲವು ಏರುಪೇರುಗಳು ದಾಖಲಾಗಿತ್ತು. ಸದ್ಯ, ಇದೇ 2026ರ ಫೆಬ್ರವರಿಯಲ್ಲಿ 'ಓಲಾ' ಎಲೆಕ್ಟ್ರ್ರಿಕ್ ವಾಹನಗಳ ಮಾರಾಟ ಸಂಖ್ಯೆಯು ತೀವ್ರತರದಲ್ಲಿ ಕುಸಿತವಾಗಿದೆ. ಕೇವಲ 3,968 ಯುನಿಟ್‌ಗಳನ್ನು ಮಾರಾಟ ಮಾಡುವಲ್ಲಿ ಮಾತ್ರವೇ ಕಂಪನಿಯು ಯಶಸ್ವಿಯಾಗಿದೆ. ಅಂದರೆ ಪ್ರತಿದಿನ ಸರಿ ಸುಮಾರು 141 ವಾಹನಗಳನಷ್ಟೇ ಗ್ರಾಹಕರು ಖರೀದಿಸಿದ್ದಾರೆ. 2025ರ ಇದೇ ಅವಧಿಯಲ್ಲಿ 7,531 ಯುನಿಟ್‌ಗಳನ್ನು ಮಾರಲಾಗಿತ್ತು. ಅಂಕಿಅಂಶವನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ -54.26 ಇಳಿಮುಖವಾಗಿದೆ.

Maruti: ಬರೀ 6 ಲಕ್ಷಕ್ಕೆ ಹೊಸ 7-ಸೀಟರ್: ಫುಲ್ ಡಿಮ್ಯಾಂಡ್

ಮಾರುತಿ ಸುಜುಕಿ ಪ್ರಸ್ತುತ ಭಾರತದಲ್ಲಿ ಬಹುತೇಕರ ಕಾರು ಖರೀದಿಸುವ ಕನಸನ್ನು ನನಸು ಮಾಡುತ್ತಿದೆ. ಕಡಿಮೆ ಬೆಲೆಗೆ ಪುಟ್ಟ ಕಾರುಗಳನ್ನು ನೀಡುತ್ತಾ ಬಡವರು, ಮಧ್ಯಮ ವರ್ಗದವರಿಗೆ ಫೇವರೆಟ್ ಬ್ರ್ಯಾಂಡ್ ಆಗಿ ಮುಂದುವರಿಯುತ್ತಿದೆ. ಕೇವಲ ಪುಟ್ಟ ಕಾರುಗಳನ್ನು ಮಾತ್ರವಲ್ಲದೆ, ದೊಡ್ಡ 7-ಸೀಟರ್ ಕಾರನ್ನು ಕೂಡ ಕಮ್ಮಿ ಬೆಲೆಯಲ್ಲಿ ಮಾರಾಟ ಮಾಡುತ್ತಿದೆ. ಈ ಮೂಲಕ ಅಗ್ಗವಾಗಿ ದೊಡ್ಡ ಫ್ಯಾಮಿಲಿಗಳು ಕೂಡ 7-ಸೀಟರ್ ಕಾರುಗಳಲ್ಲಿ ಓಡಾಡಲು ಅನುವು ಮಾಡಿಕೊಡುತ್ತಿದೆ. ಕೇವಲ ರೂ. 5.20 ಲಕ್ಷ ಆರಂಭಿಕ ಬೆಲೆಯಲ್ಲಿ ದೊಡ್ಡ 7-ಸೀಟರ್ ಕಾರು ನೀಡುತ್ತಿದ್ದು, ಜನ ಈ ಕಾರನ್ನು ಇಷ್ಟಪಟ್ಟು ಖರೀದಿಸುತ್ತಿದ್ದಾರೆ.
Advertisement

Maruti: ಈ ಜನಪ್ರಿಯ ಕಾರಿಗೆ ಮುಗಿಬಿದ್ದ ಜನ.. ಬೈಕ್‌ನಂತೆ 30 Km..

ಮಾರುತಿ ಸುಜುಕಿ ಬಲೆನೊ (Maruti Suzuki Baleno) ಪ್ರಖ್ಯಾತ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಗಿ ಹೊರಹೊಮ್ಮಿದೆ. ಈ ಕಾರನ್ನು ನೆಕ್ಸಾ ಡೀಲರ್‌ಶಿಪ್‌ ಮೂಲಕ ಯಶಸ್ವಿಯಾಗಿ ಮಾರಾಟಗೊಳಿಸಲಾಗುತ್ತದೆ. ದೇಶೀಯ ಮಾರುಕಟ್ಟೆಯಲ್ಲಿ 1999ರಲ್ಲಿ ಮೊದಲ ಬಾರಿಗೆ ಬಿಡುಗಡೆಗೊಳಿಸಲಾಗಿತ್ತು. ಅಂದಿನಿಂದಲೇ ಭಾರೀ ಬೇಡಿಕೆಯನ್ನು ಹೊಂದಿದೆ. ಗ್ರಾಹಕರು ಸಹ ಮುಗಿಬಿದ್ದು ಖರೀದಿಸುತ್ತಿದ್ದಾರೆ. ಈ 2026ರ ಫೆಬ್ರವರಿಯಲ್ಲಿ ಒಟ್ಟು 14,632 ಯುನಿಟ್‌ 'ಬಲೆನೊ' ಹ್ಯಾಚ್‌ಬ್ಯಾಕ್‌ಗಳನ್ನು ಮಾರಾಟ ಮಾಡಲಾಗಿದೆ. 2025ರ ಇದೇ ಅವಧಿಯಲ್ಲಿ 15,480 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ-ಅಂಶವನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಸ್ವಲ್ಪ ಮಟ್ಟಿಗೆ ಅಂದರೆ ಶೇಕಡ -5.48% ಕುಸಿತವಾಗಿದೆ.

Hero: ಬಡವರಿಂದ ಮಧ್ಯಮ ವರ್ಗದವರವರೆಗೆ ಹೀರೋ ವಾಹನಗಳ ದಾಖಲೆಯ ಖರೀದಿ

ಮೋಟಾರ್ ಸೈಕಲ್‌ಗಳು ಮತ್ತು ಸ್ಕೂಟರ್‌ಗಳ ತಯಾರಕರಾದ ಹೀರೋ ಮೋಟೋಕಾರ್ಪ್, ಫೆಬ್ರವರಿ 2026 ರಲ್ಲಿ ವರ್ಷದಿಂದ ವರ್ಷಕ್ಕೆ (Y-o-Y) ತನ್ನ ಪ್ರಬಲ ರವಾನೆ ಕಾರ್ಯಕ್ಷಮತೆಯನ್ನು ವರದಿ ಮಾಡಿದೆ. ಕಂಪನಿಯು ಫೆಬ್ರವರಿ ತಿಂಗಳಲ್ಲಿ 5,58,216 ಯುನಿಟ್‌ ವಾಹನಗಳನ್ನು ರವಾನಿಸಿದೆ, ಕಳೆದ ವರ್ಷ ಇದೇ ಅವಧಿಯಲ್ಲಿ ರವಾನಿಸಿದ 3,88,068 ಯುನಿಟ್‌ ವಾಹಗಳಿಗೆ ಹೋಲಿಸಿದರೆ 44% ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಒಟ್ಟು ರವಾನೆಯಲ್ಲಿ ಕಂಪನಿಯು ಫೆಬ್ರವರಿ 2026 ರಲ್ಲಿ 4,58,346 ವಾಹನ ನೋಂದಣಿಗಳೊಂದಿಗೆ (registrations) 18% ರಷ್ಟು ವರ್ಷದಿಂದ ವರ್ಷಕ್ಕೆ ಬೆಳವಣಿಗೆಯನ್ನು ದಾಖಲಿಸಿದೆ.

TVS: ಇದು ನಂ.1 ಆಕ್ಟಿವಾ ಅಲ್ಲ.. ಆಫೀಸ್‌ಗೆ ಹೋಗೋರಿಗೆ ಈ ಅಗ್ಗದ..

ಹೋಂಡಾ ಆಕ್ಟಿವಾ (Honda Activa) ನಂಬರ್ 1 ಸ್ಕೂಟರ್ ಎಂದೇ ಮನೆ ಮಾತಾಗಿದೆ. ಇದಕ್ಕೆ ಟಿವಿಎಸ್ ಟಿವಿಎಸ್ ಜುಪಿಟರ್ (TVS Jupiter) ನೇರವಾದ ಎದುರಾಳಿಯಾಗಿದೆ. ನೀವು ಪ್ರತಿನಿತ್ಯ ಆಫೀಸ್‌ಗೆ ಹೋಗುವವರಾಗಿದ್ದು, ನೂತನ ಸ್ಕೂಟರ್‌ವೊಂದನ್ನು ಖರೀದಿಸಲು ಆಲೋಚಿಸಿದ್ದೀರಾ.. ಹಾಗಾದರೆ 'ಜುಪಿಟರ್' ಬೆಸ್ಟ್ ಚಾಯ್ಸ್ ಆಗಲಿದೆ. ಇದು ಜುಪಿಟರ್ 110 ಹಾಗೂ ಜುಪಿಟರ್ 125 ಎಂಬ ಎರಡು ವಿಧದಲ್ಲಿ ಲಭ್ಯವಿದೆ. ಬನ್ನಿ, ಈ ಮಾಡೆಲ್‌ಗಳ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

ಕಳಪೆ ಕಾರುಗಳಿಗೆ ಜನ ನಕಾರ: ಭಾರತದಲ್ಲಿ ನಂ.1 ಆಯ್ತು ಬಲಿಷ್ಟ SUV

ಭಾರತದಲ್ಲಿ ಕಾರು ಖರೀದಿದಾರರ ಸಂಖ್ಯೆ ಹೆಚ್ಚಾಗಿದೆ, ದೇಶದಲ್ಲಿ ಮಾರುತಿ ಸುಜುಕಿಯಿಂದ ಹಿಡಿದು ಟಾಟಾ ಮೋಟಾರ್ಸ್‌ವರೆಗೆ ಪ್ರತಿಯೊಂದು ಬ್ರ್ಯಾಂಡ್ ಕಾರು ಮಾರಾಟದಲ್ಲಿ ಉತ್ತಮ ಲಾಭ ಕಾಣುತ್ತಿದೆ. ಎಷ್ಟೇ ಬ್ರ್ಯಾಂಡ್‌ಗಳು ಇದ್ದರೂ ಜನ ಯಾವ ಕಾರನ್ನು ಹೆಚ್ಚಾಗಿ ಖರೀದಿಸುತ್ತಾರೊ ಆ ಬ್ರ್ಯಾಂಡ್ ದೇಶದಲ್ಲಿ ಟ್ರೆಂಡಿಂಗ್‌ನಲ್ಲಿ ಇರುತ್ತದೆ. 2026 ಫೆಬ್ರವರಿ ತಿಂಗಳಲ್ಲಿ ಅತಿಹೆಚ್ಚು ಮಾರಾಟ ಕಂಡಿರುವ ಕಾರಾಗಿ ನಮ್ಮ ಸ್ವದೇಶಿ ಬ್ರ್ಯಾಂಡ್‌ನ ಜನಪ್ರಿಯ ಮಾಡಲ್‌ವೊಂದು ತುಂಬಾ ಸದ್ದು ಮಾಡುತ್ತಿದ್ದು, ಜನಕ್ಕೆ ಈ ಎಸ್‌ಯುವಿ ಫೇವರೆಟ್ ಆಯ್ಕೆಯಾಗಿ ಹೊರಹೊಮ್ಮಿದೆ.
Advertisement

ಬಡವರ ಐಷಾರಾಮಿ ಕಾರಿದು.. 7-ಸೀಟರ್.. ರೂ.5.65 ಲಕ್ಷಕ್ಕೆ ಸಿಗುತ್ತೆ..

ಇತ್ತೀಚೆಗೆ ಹೊಚ್ಚ ಹೊಸ ನಿಸ್ಸಾನ್ ಗ್ರಾವೈಟ್ (Nissan Gravite) ಕಾರನ್ನು ಅದ್ದೂರಿ ಬಿಡುಗಡೆಗೊಳಿಸಲಾಗಿತ್ತು. ಇದೊಂದು ಎಂಪಿವಿಯಾಗಿದೆ. ಕೆಲವೇ ದಿನಗಳ ಹಿಂದೆ, ದೇಶಾದ್ಯಂತ ವಿವಿಧ ಡೀಲರ್‌ಶಿಪ್‌ಗಳಿಗೆ ಈ ಕಾರನ್ನು ತಲುಪಿಸುವ ಕಾರ್ಯಕ್ಕೂ ಚಾಲನೆ ನೀಡಲಾಗಿತ್ತು. ಸದ್ಯ ನೂತನ 'ಗ್ರಾವೈಟ್' ವಿತರಣೆಗಳು ಪ್ರಾರಂಭವಾಗಿವೆ ಎಂದು ಕಂಪನಿಯೇ ದೃಢಪಡಿಸಿದೆ. ಬನ್ನಿ, ಈ ಎಂಪಿವಿಯ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

Ola: ಹೋಳಿ ಮಹೋತ್ಸವ ಆಫರ್: ತೀರಾ ಕಮ್ಮಿ ಬೆಲೆಗೆ 'ಓಲಾ ರೋಡ್‌ಸ್ಟರ್'

ಓಲಾ ಎಲೆಕ್ಟ್ರಿಕ್ ಇಂದು ತನ್ನ ಹೋಳಿ ಮಹೋತ್ಸವವನ್ನು ಘೋಷಿಸಿದ್ದು, ಭಾರತದ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಪ್ರಯಾಣಕ್ಕೆ ಹೊಸ ಆರಂಭವನ್ನು ನೀಡಿದೆ. ಹೊಸ ಋತುವಿನ ಆರಂಭವನ್ನು ಆಚರಿಸುವ Holika Dahan ಶುಭ ಸಂದರ್ಭದಲ್ಲಿ, ಕಂಪನಿಯು ತನ್ನ ರೋಡ್‌ಸ್ಟರ್ ಮೋಟಾರ್‌ಸೈಕಲ್ ಬೆಲೆ ಈಗ ಕೇವಲ ರೂ.79,999 ರಿಂದ ಪ್ರಾರಂಭವಾಗಲಿದೆ ಎಂದು ಘೋಷಿಸಿದೆ. ಇದು ಜನಪ್ರಿಯ ಎಂಟ್ರಿ ಲೆವಲ್ ಇಂಧನ ಚಾಲಿತ ಮೋಟಾರ್‌ಸೈಕಲ್‌ಗಳಿಗೆ ನೇರವಾಗಿ ಸಮಾನವಾದ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ ಆಗಿದೆ ಎಂದು ಓಲಾ ಹೇಳಿದೆ.

Mahindra: 7-ಸೀಟರ್‌ನ ಜನಪ್ರಿಯ ಮಹೀಂದ್ರಾ ಕಾರಿದು..

ಮಹೀಂದ್ರಾ ಸ್ಕಾರ್ಪಿಯೋ (Mahindra Scorpio) ಪ್ರಮುಖ ಎಸ್‌ಯುವಿ ಎಂದೇ ಮನೆ ಮಾತಾಗಿದೆ. ದಿನದಿಂದ ದಿನಕ್ಕೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಗ್ರಾಹಕರು ಕೂಡ ಮುಗುಬಿದ್ದು ಕೊಂಡುಕೊಳ್ಳುತ್ತಿದ್ದಾರೆ. ಈ 2026ರ ಫೆಬ್ರವರಿ ತಿಂಗಳಲ್ಲೂ ಭಾರೀ ಸಂಖ್ಯೆಯೇ ಮಾರಾಟಗೊಂಡಿದೆ. ಒಟ್ಟು 14,665 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಿಸಲಾಗಿದೆ. 2025ರ ಇದೇ ಅವಧಿಯಲ್ಲಿ 13,618 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ-ಅಂಶವನ್ನು ವಿಶ್ಲೇಷಿಸಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ (YoY) ಶೇಕಡ 7.69% ಬೆಳವಣಿಗೆಯಾಗಿದೆ.

ಹೊಸ ಬ್ರ್ಯಾಂಡ್ ಜೋರು... 1 ವರ್ಷವೂ ಆಗಿಲ್ಲ, ಮತ್ತೆರಡು ಕಾರುಗಳು

ವಿಯೆಟ್ನಾಂ ಮೂಲದ ಪ್ರಮುಖ ಕಾರು ತಯಾರಕರಾದ ವಿನ್‌ಫಾಸ್ಟ್ (VinFast), ಕಳೆದ ವರ್ಷ ಭಾರತಕ್ಕೆ ಲಗ್ಗೆಯಿಟ್ಟಿದೆ. ಈಗಾಗಲೇ ತನ್ನ ಎರಡು ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಿ, ದೇಶದಲ್ಲಿ ಯಶಸ್ವಿಯಾಗಿ ಮಾರಾಟಕ್ಕೂ ತಂದಿದೆ. ಈಗ ಶ್ರೀಮಂತರಿಗಾಗಿ ಲ್ಯಾಕ್ ಹಾಂಗ್ 800S (Lac Hong 800S) ಮತ್ತು ಲ್ಯಾಕ್ ಹಾಂಗ್ 900S (Lac Hong 900S) ಎಂಬ ಎರಡು ಹೊಸ ಅಲ್ಟ್ರಾ-ಐಷಾರಾಮಿ ಕಾರುಗಳನ್ನು ಅಧಿಕೃತವಾಗಿ ಜಾಗತಿಕವಾಗಿ ಅನಾವರಣಗೊಳಿಸಿದೆ. 2027 ರಲ್ಲಿ ಈ ಎರಡೂ ಮಾಡಲ್‌ಗಳನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದೆ.
Advertisement

ಬಡವರ ಪ್ರೀಮಿಯಂ ಕಾರಿದು.. ರೂ.5.79 ಲಕ್ಷ.. 33 Km ಮೈಲೇಜ್..

ಮಾರುತಿ ಸುಜುಕಿ ಸ್ವಿಫ್ಟ್ (Maruti Suzuki Swift) ಪ್ರಖ್ಯಾತ ಹ್ಯಾಚ್‌ಬ್ಯಾಕ್‌ ಎಂದೇ ಮನೆ ಮಾತಾಗಿದೆ. 2005ರಲ್ಲಿ ಮೊದಲ ಬಾರಿಗೆ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಯಿತು. ಅಂದಿನಿಂದ ಇಂದಿನವರೆಗೆ ವ್ಯಾಪಕವಾದ ಬೇಡಿಕೆಯನ್ನು ಹೊಂದಿದ್ದು, ಹೆಚ್ಚಿನ ಸಂಖ್ಯೆಯಲ್ಲಿಯೇ ಮಾರಾಟಗೊಳುತ್ತಿದೆ. ಈ 2026ರ ಫೆಬ್ರವರಿಯಲ್ಲಿ ಒಟ್ಟು 14,885 ಯುನಿಟ್‌ಗಳನ್ನು ಗ್ರಾಹಕರಿಗೆ ವಿತರಿಸಲಾಗಿದೆ. 2025ರ ಇದೇ ಅವಧಿಯಲ್ಲಿ 16,269 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಈ ಅಂಕಿ ಅಂಶವನ್ನು ವಿಶ್ಲೇಷಿಸಿದಾಗ ಮಾರಾಟವು ವರ್ಷದಿಂದ ವರ್ಷಕ್ಕೆ ಸ್ವಲ್ಪ ಮಟ್ಟಿಗೆ ಅಂದರೆ ಶೇಕಡ -8.83% ಮಾತ್ರ ಇಳಿಕೆಯಾಗಿದೆ.