Tata: ಟಾಟಾ ಬ್ರಹ್ಮಾಸ್ತ್ರವಿದು: 10 ಸಾವಿರ ಎಸ್‌ಯುವಿಗಳು ಡೆಲಿವರಿ

ಭಾರತದಲ್ಲಿ ನವೆಂಬರ್ 25, 2025 ರಂದು ಬಿಡುಗಡೆಯಾದ ಹೊಸ 'ಟಾಟಾ ಸಿಯೆರಾ' ದೇಶಾದ್ಯಂತ ಗ್ರಾಹಕರಿಂದ ಎಲ್ಲಿಲ್ಲದ ಬೇಡಿಕೆ ಪಡೆದುಕೊಂಡಿದೆ. ಈ ಅದ್ಭುತ ಪ್ರತಿಕ್ರಿಯೆಯು ಭಾರತದಾದ್ಯಂತ ಗ್ರಾಹಕರ ಹೃದಯದಲ್ಲಿ ಪ್ರೀಮಿಯಂ ಮಿಡ್ - ಸೈಜ್ ಎಸ್‌ಯುವಿಯಾಗಿ ಸಿಯೆರಾದ ಐಕಾನಿಕ್ ಸ್ಥಾನವನ್ನು ಒತ್ತಿಹೇಳುತ್ತದೆ. ಅಲ್ಲದೇ ದೇಶದಲ್ಲಿ ತನ್ನ ಗತವೈಭವವನ್ನು ಮರಳಿ ಪಡೆಯುತ್ತಿದೆ ಎಂದು ಹೇಳುವುದರಲ್ಲಿ ಯಾವುದೇ ಅನುಮಾನವಿಲ್ಲ. ಬುಕಿಂಗ್‌ಗಳು ದಾಖಲೆ ಮಟ್ಟದಲ್ಲಿ ಹರಿದುಬರುತ್ತಿರುವುದರಿಂದ ಟಾಟಾ ಮೋಟಾರ್ಸ್ ಗ್ರಾಹಕರಿಗೆ ಡೆಲಿವರಿಗಳನ್ನು ವೇಗವಾಗಿ ನೀಡಲು ಪ್ರಯತ್ನಿಸುತ್ತಿದೆ.

ಚಿಕ್ಕ ಸಂಸಾರಕ್ಕೆ 7 ಬೆಸ್ಟ್ ಎಸ್‌ಯುವಿಗಳಿವು.. ಮೈಲೇಜ್‌ನಲ್ಲಿ..

ಭಾರತದ ಕಾರು ಮಾರುಕಟ್ಟೆಯಲ್ಲಿ ಎಸ್‌ಯುವಿಗಳಿಗೆ ವಿಪರೀತವಾದ ಬೇಡಿಕೆಯಿದೆ. ಇವುಗಳನ್ನು ಗ್ರಾಹಕರು ಕೂಡ ಇಷ್ಟಪಟ್ಟು ಕೊಳ್ಳುತ್ತಿದ್ದಾರೆ. ನಿಮ್ಮ ಪುಟ್ಟ ಕುಟುಂಬಕ್ಕಾಗಿ ಹೊಚ್ಚ ಹೊಸ ಕಾರೊಂದನ್ನು ಖರೀದಿಸಲು ಆಲೋಚಿಸಿದ್ದೀರಾ.. ಹಾಗಾದರೆ ಟಾಟಾ ಪಂಚ್, ಮಾರುತಿ ಸುಜುಕಿ ಬ್ರೆಝಾ, ಹ್ಯುಂಡೈ ವೆನ್ಯೂ, ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್ಒ, ಸ್ಕೋಡಾ ಕೈಲಾಕ್, ನಿಸ್ಸಾನ್ ಮ್ಯಾಗ್ನೈಟ್, ರೆನಾಲ್ಟ್ ಕೈಗರ್ ಮಾಡೆಲ್‌ಗಳು ಬೆಸ್ಟ್ ಚಾಯ್ಸ್ ಆಗಲಿವೆ. ಬನ್ನಿ, ಈ ಎಸ್‌ಯುವಿಗಳ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಕ್ಷಿಪ್ತವಾದ ವಿವರಗಳನ್ನು ತಿಳಿಯೋಣ.

ಭಾರತದ ನಂ.1 ಕಾಂಪ್ಯಾಕ್ಟ್ SUV: ಕಮ್ಮಿ ಬೆಲೆಗೆ ಸುರಕ್ಷಿತ ಕಾರು

ಪ್ರಮುಖ ಕಾರು ತಯಾರಕ ಕಂಪನಿಯಾಗಿರುವ ಮಾರುತಿ ಸುಜುಕಿ (Maruti Suzuki), ತನ್ನ ಕಾಂಪ್ಯಾಕ್ಟ್ ಎಸ್‌ಯುವಿಯಾಗಿರುವ 'ಬ್ರೆಝಾ' (Brezza) 10 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. 2016 ರಲ್ಲಿ ಪರಿಚಯಿಸಿದಾಗಿನಿಂದ, ಬ್ರೆಝಾ ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗವನ್ನು ಭಾರತೀಯ ಪ್ರಯಾಣಿಕ ವಾಹನ ಉದ್ಯಮದಲ್ಲಿ ಅತಿದೊಡ್ಡ ವಿಭಾಗಗಳಲ್ಲಿ ಒಂದಾಗಿ ಸ್ಥಾಪಿಸಿದೆ. ಯುವ ನಗರ ಎಸ್‌ಯುವಿಯಾಗಿ, ಬ್ರೆಝಾ ದೈನಂದಿನ ಜೀವನದಲ್ಲಿ ವಿಶ್ವಾಸಾರ್ಹ ಕಾರಾಗಿ ಗುರ್ತಿಸಿಕೊಂಡಿದೆ. ಭಾರತದ ನಂ.1 ಕಾಂಪ್ಯಾಕ್ಟ್ ಎಸ್‌ಯುವಿಯಾಗಿ ಬ್ರೆಝಾ ಒಂದು ದಶಕದಿಂದ ಭಾರತದ ಟಾಪ್ 10 ಅತ್ಯುತ್ತಮ ಮಾರಾಟವಾಗುವ ಪ್ರಯಾಣಿಕ ವಾಹನಗಳಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ.

Suzuki: ಹೊಸ ಸ್ಕೂಟರ್‌ ಖರೀದಿಸಲು ದುಡ್ಡಿಲ್ವಾ.. ನೂತನ ಸುಜುಕಿ..

ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ (Suzuki Motorcycle India) & ರಾಯಲ್ ಬ್ರದರ್ಸ್ ರೆಂಟಲ್ಸ್‌ (Royal Brothers Rentals) ಒಪ್ಪಂದ ಮಾಡಿಕೊಂಡಿವೆ. ಈ ಪಾಲುದಾರಿಕೆಯ ಭಾಗವಾಗಿ ಹೊಚ್ಚ ಹೊಸ 'ಇ-ಆಕ್ಸೆಸ್' ಎಲೆಕ್ಟ್ರಿಕ್ ಸ್ಕೂಟರ್‌ನ್ನು ಬಾಡಿಗೆ ಮತ್ತು ಚಂದಾದಾರಿಕೆಯ ರೂಪದಲ್ಲಿ ಸವಾರರ ಬಳಕೆಗೆ ನೀಡಲಾಗುತ್ತದೆ. ಬೆಂಗಳೂರು, ಹೈದರಾಬಾದ್, ಅಹಮದಾಬಾದ್, ವಿಶಾಖಪಟ್ಟಣ, ಭುವನೇಶ್ವರ, ಜೈಪುರ ಹಾಗೂ ಗುರುಗ್ರಾಮ ಸೇರಿದಂತೆ ದೇಶದ ಪ್ರಮುಖ 7 ಪ್ರಮುಖ ನಗರಗಳಲ್ಲಿ ಈ ಸೇವೆ ಲಭ್ಯವಾಗಲಿದೆ.
Advertisement

Maruti: ಬೆಲೆ ಇಷ್ಟೇನಾ? ಹೊಸ 7-ಸೀಟರ್ ಕಾರಿಗೆ ಫುಲ್ ಡಿಮ್ಯಾಂಡ್

ದೇಶದ ಪ್ರಮುಖ ವಾಹನ ತಯಾರಕ ಕಂಪನಿಯಾಗಿರುವ ಮಾರುತಿ ಸುಜುಕಿ (Maruti Suzuki) ಪ್ರಸ್ತುತ ಕಾರು ಮಾರಾಟದಲ್ಲಿ ನಂ.1 ಕಂಪನಿಯಾಗಿ ಮುಂದುವರಿಯುತ್ತಿದೆ. ಇತರ ಬ್ರ್ಯಾಂಡ್‌ಗಳಿಗೆ ಹೋಲಿಸಿದರೆ ಬಜೆಟ್ ಬೆಲೆಯಲ್ಲಿ ಉತ್ತಮ ಫೀಚರ್ಸ್ ಹಾಗೂ ಹೆಚ್ಚಿನ ಮೈಲೇಜ್ ನೀಡುವ ಕಾರುಗಳನ್ನು ಮಾರಾಟ ಮಾಡುತ್ತಿದೆ. ಜನ ಮಾರುತಿ ಕಾರುಗಳನ್ನು ಮುಗಿಬಿದ್ದು ಖರೀದಿಸುವುದರಿಂದ ಪ್ರತಿ ತಿಂಗಳ ಮಾರಾಟದಲ್ಲಿ ಮಾರುತಿ ಸುಜುಕಿ ದಾಖಲೆಯ ಮಾರಾಟವನ್ನು ಕಾಣುತ್ತಿದೆ. ಈ ಬಾರಿ ಕೂಡ 7-ಸೀಟರ್ ವಿಭಾಗದಲ್ಲಿ ಪ್ರಮುಖ ಮಾರುತಿ ಕಾರು ಮೊದಲ ಸ್ಥಾನ ದಕ್ಕಿಸಿಕೊಂಡಿದೆ.

Hyundai: ಮುಗಿಬಿದ್ದ ಜನ.. ಅಬ್ಬರಿಸಿದ ಹ್ಯುಂಡೈ ಎಸ್‌ಯುವಿ..

ಹ್ಯುಂಡೈ ಕ್ರೆಟಾ (Hyundai Creta) ನಂಬಿಕಾರ್ಹ ಮಿಡ್-ಸೈಜ್ ಎಸ್‌ಯುವಿಯಾಗಿ ಹೊರಹೊಮ್ಮಿದೆ. ಇದಕ್ಕೆ ಹೆಚ್ಚಿನ ಬೇಡಿಕೆಯಿದ್ದು, ಗ್ರಾಹಕರು ಸಹ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಈ 2026ರ ಫೆಬ್ರವರಿ ತಿಂಗಳಲ್ಲೂ ಭಾರೀ ಸಂಖ್ಯೆಯಲ್ಲಿಯೇ ಮಾರಾಟಗೊಂಡಿದೆ. ಒಟ್ಟು 17,938 ಯುನಿಟ್‌ಗಳನ್ನು ವಿತರಿಸಲಾಗಿದೆ. 2025ರ ಇದೇ ಅವಧಿಯಲ್ಲಿ 16,317 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ-ಅಂಶವನ್ನು ಲೆಕ್ಕ-ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ (YoY) ಶೇಕಡ 9.93% ಪ್ರಗತಿಯಾಗಿದೆ.

Yamaha: RX 100 ನೆನಪಿಸುವ ಹೊಸ ಬೈಕ್ ಬಿಡುಗಡೆ

ಜಾಗತಿಕವಾಗಿ ಗುರ್ತಿಸಿಕೊಂಡಿರುವ ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿರುವ ಯಮಹಾ (Yamaha) ಮೋಟಾರ್ ಕಂಪನಿ, ಇತ್ತೀಚೆಗೆ XSR155 ಬೈಕ್ ಬಿಡುಗಡೆ ಮಾಡಿತ್ತು. ಇದೀಗ ಇದರ ಆಕರ್ಷಣೆ ಹೆಚ್ಚಿಸಲು ಹೊಸ 'ಮೆಟಾಲಿಕ್ ಬ್ಲ್ಯಾಕ್' ಎಡಿಷನ್ ಬಿಡುಗಡೆ ಮಾಡಿದ್ದು, ಆಕರ್ಷಕ ಲುಕ್ ಹಾಗೂ ಸ್ಪೋರ್ಟಿಯಾಗಿ ಕಾಣುತ್ತಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಬಿಡುಗಡೆಯಾಗಿದ್ದ ಈ ಆಧುನಿಕ ರೆಟ್ರೋ ಬೈಕ್ ಭಾರತದಾದ್ಯಂತ ಸವಾರರಿಂದ ಅಗಾಧ ಪ್ರತಿಕ್ರಿಯೆಯನ್ನು ಪಡೆದಿದೆ. ಅಲ್ಪಾವಧಿಯಲ್ಲಿಯೇ, ಯಮಹಾದ ರೆಟ್ರೊ-ಪ್ರೇರಿತ ಸ್ಟೈಲಿಂಗ್ ಮತ್ತು ಸ್ಪೋರ್ಟಿ ಪರ್ಫಾಮೆನ್ಸ್ ಬಯಸುವ ಮೋಟಾರ್‌ಸೈಕಲ್ ಉತ್ಸಾಹಿಗಳಿಗೆ ಇದು ಆದ್ಯತೆಯ ಆಯ್ಕೆಯಾಗಿದೆ.

Tata: ಟಾಟಾ ಬ್ರ್ಯಾಂಡ್‌ಗೆ ಜೈಕಾರ ಹಾಕಿದ ಜನ..

ಟಾಟಾ ಪಂಚ್ (Tata Punch) ವಿಶ್ವಾಸಾರ್ಹ ಮೈಕ್ರೋ ಎಸ್‌ಯುವಿಯಾಗಿ ಹೊರಹೊಮ್ಮಿದೆ. ಈ ಕಾರಿಗೆ ದಿನದಿಂದ ದಿನಕ್ಕೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಗ್ರಾಹಕರು ಸಹ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಕಳೆದ ತಿಂಗಳು (ಜನವರಿ - 2026) ಭಾರೀ ಸಂಖ್ಯೆಯಲ್ಲಿಯೇ ಮಾರಾಟಗೊಂಡಿದೆ. ಒಟ್ಟು 18,748 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಿಸಲಾಗಿದೆ. 2025ರ ಇದೇ ಅವಧಿಯಲ್ಲಿ 14,559 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ-ಅಂಶವನ್ನು ಲೆಕ್ಕಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 28.77% ಬೆಳವಣಿಗೆಯಾಗಿದೆ.
Advertisement

Honda: ಅಬ್ಬರಿಸಿದ ಆಕ್ಟಿವಾ & ಶೈನ್.. ಹೋಂಡಾ ಬ್ರ್ಯಾಂಡ್..

ಹೋಂಡಾ ಮೋಟಾರ್‌ಸೈಕಲ್ & ಸ್ಕೂಟರ್ ಇಂಡಿಯಾ (Honda Motorcycle & Scooter India), ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಹೊರಹೊಮ್ಮಿದೆ. ವಿವಿಧ ಬೈಕ್ ಹಾಗೂ ಸ್ಕೂಟರ್‌ಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಸಹ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಈ 2026ರ ಫೆಬ್ರವರಿಯಲ್ಲಿ ಬರೋಬ್ಬರಿ 5,67,351 ಯುನಿಟ್‌ ದ್ವಿಚಕ್ರ ವಾಹನಗಳನ್ನು ಖರೀದಿದಾರರಿಗೆ ವಿತರಿಸಲಾಗಿದೆ. 2025ರ ಇದೇ ಅವಧಿಯಲ್ಲಿ 4,22,449 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ-ಅಂಶವನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ (YoY) ಶೇಕಡ 34% ಪ್ರಗತಿಯಾಗಿದೆ.

5-ಸ್ಟಾರ್ ಕಾರಿದು.. ಬಿಸಿ ದೋಸೆಯಂತೆ ಸೇಲ್ಸ್.. 6 ಲಕ್ಷ ರೂಪಾಯಿ..

ಮಾರುತಿ ಸುಜುಕಿ ಡಿಜೈರ್ (Maruti Suzuki Dzire) ಜನಮೆಚ್ಚಿದ ಸೆಡಾನ್ ಎಂದೇ ಮನೆ ಮಾತಾಗಿದೆ. ಗ್ರಾಹಕರು ಸಹ ನಾ ಮುಂದು - ಮುಂದು ಎಂಬಂತೆ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಈ 2026ರ ಫೆಬ್ರವರಿಯಲ್ಲಿಯೂ ಭಾರೀ ಸಂಖ್ಯೆಯಲ್ಲಿಯೇ ಮಾರಾಟಗೊಂಡಿದೆ. ಸರಿ ಸುಮಾರು 19,326 ಯುನಿಟ್‌ಗಳನ್ನು ವಿತರಿಸಲಾಗಿದೆ. 2025ರ ಇದೇ ಅವಧಿಯಲ್ಲಿ 14,694 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿತ್ತು. ಈ ಅಂಕಿಅಂಶವನ್ನು ಲೆಕ್ಕಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 31.52% ಬೆಳವಣಿಗೆಯಾಗಿದೆ.

ರಸ್ತೆ ಮೇಲಿನ ಅರಮನೆಯಂತಿರುವ ದೈತ್ಯ ಎಂಪಿವಿ ಬಿಡುಗಡೆ.. 6-ಸೀಟರ್..

ಹೊಚ್ಚ ಹೊಸ ಮರ್ಸಿಡಿಸ್-ಬೆನ್ಜ್ ವಿ-ಕ್ಲಾಸ್ (Mercedes-Benz V-Class) ಎಂಪಿವಿ ಸೋಮವಾರ ಅದ್ದೂರಿಯಾಗಿ ಬಿಡುಗಡೆಗೊಂಡಿದೆ. ಸರಿ ಸುಮಾರು 4 ವರ್ಷಗಳ ನಂತರ ದೇಶೀಯ ಮಾರುಕಟ್ಟೆಗೆ ಪುನರಾಗಮನವಾಗಿದೆ. ಇದು ನೋಡಲು ತುಂಬಾ ಚೆನ್ನಾಗಿದ್ದು, ಹಲವು ನವೀನತೆಗಳಿಗೂ ಸಾಕ್ಷಿಯಾಗಿದೆ. ಟೊಯೊಟಾ ವೆಲ್‌ಫೈರ್ ಹಾಗೂ ಲೆಕ್ಸಸ್ ಎಲ್ಎಂಗಳಿಗೆ ಪ್ರಬಲವಾದ ಪ್ರತಿಸ್ಪರ್ಧಿಯಾಗಿದೆ. ಬನ್ನಿ, ಈ ಎಂಪಿವಿ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

Maruti: 543 ಕಿ.ಮೀ ರೇಂಜ್.. ಹೊಸ ಮಾರುತಿ Suvಗೆ 5 ಪರ್ಯಾಯ..

ಈಚೆಗೆ ಮಾರುತಿ ಸುಜುಕಿ ಇ-ವಿಟಾರಾ (Maruti Suzuki e Vitara) ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆಗೊಂಡಿತ್ತು. ಇದು ರೂ.15.99 ಲಕ್ಷದಿಂದ ರೂ.20.01 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಒಳಗೊಂಡಿದೆ. ಸ್ಪ್ಲೆಂಡಿಡ್ ಸಿಲ್ವರ್, ಆರ್ಕ್ಟಿಕ್ ವೈಟ್, ಗ್ರ್ಯಾಂಡಿಯರ್ ಗ್ರೇ, ನೆಕ್ಸಾ ಬ್ಲ್ಯೂ, ಆಪುಲೆಂಟ್ ರೆಡ್ ಮತ್ತು ಬ್ಲ್ಯೂಯಿಶ್ ಬ್ಲ್ಯಾಕ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ. 180 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2,700 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ.
Advertisement

2026ರ ಫೆಬ್ರವರಿ ಕಾರು ಸೇಲ್ಸ್: ಟಾಟಾ ನೆಕ್ಸಾನ್ 1st.. ಮಾರುತಿ..

ಭಾರತವು ಅತಿದೊಡ್ಡ ಕಾರು ಮಾರುಕಟ್ಟೆಯನ್ನು ಹೊಂದಿದೆ. ಈ 2026ರ ಫೆಬ್ರವರಿಯಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಮಾರಾಟಗೊಂಡ ಪ್ರಮುಖ 10 ಕಾರುಗಳ ಪಟ್ಟಿ ಪ್ರಕಟಗೊಂಡಿದೆ. ಇದರಲ್ಲಿ ಟಾಟಾ ಮೋಟಾರ್ಸ್‌ನ ಎರಡು ಮತ್ತು ಮಾರುತಿ ಸುಜುಕಿಗೆ ಸೇರಿದ ಆರು ಕಾರುಗಳು ಸ್ಥಾನ ಪಡೆದಿವೆ. ಜೊತೆಗೆ ಹ್ಯುಂಡೈ ಹಾಗೂ ಮಹೀಂದ್ರಾದ ತಲಾ ಒಂದು ಕಾರುಗಳು ಸಹ ಪಟ್ಟಿಯಲ್ಲಿವೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

Ola: ಸ್ಕೂಟರ್ ಮಾಲೀಕರಿಗೆ ಫುಲ್ ಖುಷಿ: 50,000 ಹಣ ಉಳಿಸುವ ಬಂಪರ್ ಆಫರ

ಓಲಾ ಎಲೆಕ್ಟ್ರಿಕ್ (Ola Electric) ಇಂದು ದೇಶಾದ್ಯಂತ 1 ಮಿಲಿಯನ್‌ (ಹತ್ತು ಲಕ್ಷ) ಗಿಂತಲೂ ಹೆಚ್ಚು ಸವಾರರನ್ನು ಹೊಂದಿರುವ ತನ್ನ ಅಸ್ತಿತ್ವದಲ್ಲಿರುವ ಗ್ರಾಹಕರಿಗಾಗಿ ವಿಶೇಷ ಸಮುದಾಯ ಕಾರ್ಯಕ್ರಮವಾದ ಓಲಾ ಇನ್‌ಸೈಡರ್ಸ್ (Ola Insiders) ಅನ್ನು ಪ್ರಾರಂಭಿಸಿದೆ. ಓಲಾ ಇನ್‌ಸೈಡರ್ಸ್ ಪ್ರೋಗ್ರಾಂ ತನ್ನ ಸಮುದಾಯದ ಸದಸ್ಯರಿಗೆ ವಾಹನ ಅಪ್‌ಗ್ರೇಡ್, ಆಡ್-ಆನ್ ಮತ್ತು ರೆಫರಲ್‌ಗಳು ಸೇರಿದಂತೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಓಲಾ ಇನ್‌ಸೈಡರ್ಸ್ ಸಮುದಾಯ ಕಾರ್ಯಕ್ರಮವು ಮೂರು ಪ್ರಮುಖ ಪ್ರಯೋಜನಗಳನ್ನು ನೀಡುತ್ತದೆ. ಅವುಗಳನ್ನು ಈ ಕೆಳಗೆ ನೋಡೋಣ.

TVS: ಟಿವಿಎಸ್ ಟೂ-ವೀಲರ್​ಗಳಿಗೆ ಕ್ಯೂ ನಿಂತ ಗ್ರಾಹಕರು.. ಐಕ್ಯೂಬ್..

ಟಿವಿಎಸ್ ಮೋಟಾರ್ ಕಂಪನಿ (TVS Motor Company), ಪ್ರಮುಖ ವಾಹನ ತಯಾರಕ ಕಂಪನಿಯಾಗಿ ಹೊರಹೊಮ್ಮಿದೆ. ಈ 2026ರ ಫೆಬ್ರವರಿಯಲ್ಲಿ ಒಟ್ಟು 5,29,308 ಯುನಿಟ್‌ ದ್ವಿಚಕ್ರ & ತ್ರಿಚಕ್ರ (ದೇಶೀಯ & ರಫ್ತು) ವಾಹನಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸಿದೆ. 2025ರ ಇದೇ ಅವಧಿಯಲ್ಲಿ 4,03,976 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿಅಂಶವನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 31% ಪ್ರಗತಿಯಾಗಿದೆ. ಇದರಲ್ಲಿ 5,07,862 ಯುನಿಟ್ ದ್ವಿಚಕ್ರ ವಾಹನ ಹಾಗೂ 21,446 ಯುನಿಟ್ ತ್ರಿಚಕ್ರ ವಾಹನಗಳು ಸೇರಿವೆ.

Tata: ಅಬ್ಬರಿಸಿದ ಟಾಟಾ.. ಮುಗಿಬಿದ್ದ ಜನ.. ಈ ಗುಣಮಟ್ಟದ ಕಾರು..

ಟಾಟಾ ನೆಕ್ಸಾನ್ (Tata Nexon) ವಿಶ್ವಾಸಾರ್ಹ ಎಸ್‌ಯುವಿಯಾಗಿ ಹೊರಹೊಮ್ಮಿದೆ. ಈ ಕಾರಿಗೆ ದಿನದಿಂದ ದಿನಕ್ಕೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಕಳೆದ ತಿಂಗಳು (ಫೆಬ್ರವರಿ - 2026) ದೊಡ್ಡ ಸಂಖ್ಯೆಯಲ್ಲಿಯೇ ಮಾರಾಟಗೊಂಡಿದ್ದು, ನಂಬರ್ 1 ಎಸ್‌ಯುವಿಯಾಗಿ ಹೊರಹೊಮ್ಮಿದೆ. ಒಟ್ಟು 19,430 ಯುನಿಟ್‌ಗಳನ್ನು ಗ್ರಾಹಕರಿಗೆ ವಿತರಿಸಲಾಗಿದೆ. ಇದೇ ಜನವರಿಯಲ್ಲಿಯೂ ಮೊದಲ ಸ್ಥಾನದಲ್ಲಿತ್ತು. ಸರಿ ಸುಮಾರು 23,365 ಯುನಿಟ್‌ಗಳನ್ನು ಮಾರಲಾಗಿತ್ತು.
Advertisement

ಬ್ರ್ಯಾಂಡ್‌ಗೆ ವರದಾನವಾಗಿವೆ ಈ ರಗಡ್ ಎಸ್‌ಯುವಿಗಳು

ದೇಶದ ಪ್ರಮುಖ ವಾಹನ ತಯಾರಕರಲ್ಲಿ ಒಂದಾದ ಕಿಯಾ ಇಂಡಿಯಾ (Kia India), ಭಾರತದಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ನಂತರ ಇದೆ ಮೊದಲ ಬಾರಿಗೆ ಫೆಬ್ರವರಿಯಲ್ಲಿ 27,610 ಯುನಿಟ್‌ ವಾಹನಗಳ ಅತ್ಯಧಿಕ ಮಾರಾಟವನ್ನು ದಾಖಲಿಸಿದೆ. ಫೆಬ್ರವರಿ 2025 (ಕಳೆದ ವರ್ಷ ಇದೇ ಅವಧಿ) ರಲ್ಲಿ ಮಾರಾಟವಾದ 25,026 ಯುನಿಟ್‌ ವಾಹನಗಳಿಗಿಂತ ವರ್ಷದಿಂದ ವರ್ಷಕ್ಕೆ ಶೇ10.3 ರಷ್ಟು ಬೆಳವಣಿಗೆ ಸಾಧಿಸಿದೆ. ಇದು ಬ್ರ್ಯಾಂಡ್‌ನಲ್ಲಿ ಬಲವಾದ ಮತ್ತು ನಿರಂತರ ಗ್ರಾಹಕರ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ ಎಂದು ಕಿಯಾ ಹೇಳಿದೆ.

Mahindra: ಹೊಸ ಮಹೀಂದ್ರ್ ಸ್ಟೈಲಿಷ್ SUV ಬಿಡುಗಡೆ: ಬೆಲೆಯೆಷ್ಟು?

ಮಹೀಂದ್ರಾ ಇಂದು ತನ್ನ ಪ್ರಮುಖ ಎಲೆಕ್ಟ್ರಿಕ್ ಒರಿಜಿನ್ SUV ಯ ಹೆಚ್ಚು ಪ್ರೀಮಿಯಂ ಆವೃತ್ತಿಯಾದ XEV 9e ಸಿನೆಲಕ್ಸ್ ಎಡಿಷನ್ ಅನ್ನು ಅನಾವರಣಗೊಳಿಸಿದೆ. ಐಷಾರಾಮಿಯನ್ನು ಮೆಚ್ಚುವುದಲ್ಲದೆ, ಅದನ್ನು ಅನುಭವಿಸಬೇಕೆಂದು ನಿರೀಕ್ಷಿಸುವವರಿಗಾಗಿ ರಚಿಸಲಾದ ಸಿನೆಲಕ್ಸ್‌ನಲ್ಲಿ ಐಷಾರಾಮಿ, ತಂತ್ರಜ್ಞಾನ ಮತ್ತು ಆಧುನಿಕ ಫೀಚರ್ಸ್ ಅನ್ನು ಒದಗಿಸಲಾಗಿದೆ. ಎಲೆಕ್ಟ್ರಿಕ್ ಕಾರು ವಿಭಾಗದಲ್ಲಿ ತನಗೆಂದೆ ವಿಶಿಷ್ಟ ಪ್ರೀಮಿಯಂ ಸ್ಥಾನವನ್ನು ಪಡೆದುಕೊಂಡಿರುವ ಈ ಕಾರು, ಇದೀಗ ಸಿನೆಲಕ್ಸ್ ಎಡಿಷನ್ ಮೂಲಕ ತನ್ನ ಪ್ರೀಮಿಯಂ ಗ್ರಾಹಕರನ್ನು ಸೆಳೆಯಲು ಸಜ್ಜಾಗಿದೆ. ಹೊಸ ಸಿನೆಲಕ್ಸ್ ಎಡಿಷನ್ ವಿಶೇಷತೆಗಳು ಇಲ್ಲಿವೆ.

ಮಾರುತಿ ಇ-ವಿಟಾರಾ VS ಟೊಯೊಟಾ ಎಬೆಲ್ಲಾ: ಯಾವುದು ಬೆಸ್ಟ್, ಹೇಗಿವೆ ಕಾರ

ಮಾರುತಿ ಸುಜುಕಿ ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಇ-ವಿಟಾರಾ (Maruti Suzuki e-vitara) ಎಲೆಕ್ಟ್ರಿಕ್ ಎಸ್‌ಯುವಿಯನ್ನು ಬಿಡುಗಡೆ ಮಾಡಿದೆ. ಇದೇ ಕಾರನ್ನು ಟೊಯೋಟಾ ಕೂಡಾ ಎಬೆಲ್ಲಾ (Toyota Ebella) ಹೆಸರಿನಲ್ಲಿ ಇತ್ತೀಚೆಗೆ ಅನಾವರಣಗೊಳಿಸಿದೆ. ಮಾರುತಿ ಸುಜುಕಿ ಇ-ವಿಟಾರಾ ಮತ್ತು ಟೊಯೋಟಾ ಎಬೆಲ್ಲಾ ಅವರ ಜಾಗತಿಕ ಪಾಲುದಾರಿಕೆಯಡಿಯಲ್ಲಿ ಅಭಿವೃದ್ಧಿಪಡಿಸಿದ ಮೊದಲ ಎಲೆಕ್ಟ್ರಿಕ್ ಮಾಡಲ್‌ಗಳಾಗಿವೆ. ಎರಡೂ ಒಂದೇ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಾಣವಾಗಿದ್ದರೂ, ಎರಡರ ನಡುವೆ ಕೆಲವು ವ್ಯತ್ಯಾಸಗಳಿವೆ. ಈ ಲೇಖನದಲ್ಲಿ, ಅವುಗಳನ್ನು ಪ್ರತ್ಯೇಕಿಸುವ ಅಂಶಗಳನ್ನು ನಾವು ಹತ್ತಿರದಿಂದ ನೋಡೋಣ.

Maruti: ಹೈಬ್ರಿಡ್ ಮಾರುತಿ ಕಾರು ಬಿಡುಗಡೆಗೆ ಸರ್ವಸಿದ್ಧ

ತಂತ್ರಜ್ಞಾನ ಬೆಳೆಯುತ್ತಿದ್ದಂತೆ ಹೈಬ್ರಿಡ್ ಕಾರುಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಇವುಗಳ ಬೆಲೆ ಕೂಡ ದುಬಾರಿಯಾಗಿದೆ. ಈ ಹೈಬ್ರಿಡ್ ಕಾರುಗಳನ್ನು ಕೈಗೆಟುಕುವ ದರದಲ್ಲಿ ನೀಡಲು ಮಾರುತಿ ಸುಜುಕಿ (Maruti Suzuki) ಕೆಲಸ ಮಾಡುತ್ತಿದೆ. ಮಾರುತಿ ಸುಜುಕಿಯ ಜನಪ್ರಿಯ ಸ್ಟೈಲಿಷ್ ಕಾರಾಗಿರುವ 'ಫ್ರಾಂಕ್ಸ್ ಫೇಸ್‌ಲಿಫ್ಟ್ 2026' ಹೈಬ್ರಿಡ್ ಮಾಡಲ್ ಭಾರತದಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಈ ಕಾರು ಅಗ್ಗದ ಬೆಲೆಗೆ ಆಕರ್ಷಕ ಫೀಚರ್ಸ್, ಅತ್ಯುತ್ತಮ ಮೈಲೇಜ್ ಸೇರಿದಂತೆ ಉತ್ತಮ ಡಿಸೈನ್ ಹೊಂದಿರುವ ಕಾರಾಗಿದೆ ಎಂದು ಉದ್ಯಮ ಮೂಲಗಳು ಹೇಳಿವೆ. ಮುಂಬರುವ ಮಾರುತಿ ಸುಜುಕಿ ಫ್ರಾಂಕ್ಸ್ ಫೇಸ್‌ಲಿಫ್ಟ್ ವಿಶೇಷತೆಗಳನ್ನು ಇಲ್ಲಿ ನೋಡೋಣ.
Advertisement

ಹೊಸ ಮಾರುತಿ ಫೇಸ್‌ಲಿಫ್ಟ್ ಕಾರು ಬಿಡುಗಡೆಗೆ ಸಜ್ಜು

ಮಾರುತಿ ಸುಜುಕಿ ತನ್ನ ಜನಪ್ರಿಯ ಎಸ್‌ಯುವಿಯಾಗಿರುವ ಬ್ರೆಝಾದ ಫೇಸ್‌ಲಿಫ್ಟ್ ಆವೃತ್ತಿಯಲ್ಲಿ ಕೆಲಸ ಮಾಡುತ್ತಿದ್ದು, ಶೀಘ್ರದಲ್ಲೇ 2026 ಮಾರುತಿ ಸುಜುಕಿ ಬ್ರೆಝಾ ಬಿಡುಗಡೆಯಾಗಲಿದೆ. ಈಗಾಗಲೇ ಹಲವು ಬಾರಿ ರಸ್ತೆಯಲ್ಲಿ ಪರೀಕ್ಷಿಸುತ್ತಿರುವುದನ್ನು (ರೋಡ್ ಟೆಸ್ಟಿಂಗ್) ಗುರುತಿಸಲಾಗಿದೆ, ಸಿಎನ್‌ಜಿ ವೇರಿಯೆಂಟ್‌ಗೂ ಪ್ರಯೋಗಗಳು ನಡೆಯುತ್ತಿವೆ. ಈ ಫೇಸ್‌ಲಿಫ್ಟ್ ಸಣ್ಣ ಸ್ಟೈಲಿಂಗ್ ಬದಲಾವಣೆಗಳು, ಇಂಟೀರಿಯರ್ ಸುಧಾರಣೆಗಳು ಮತ್ತು ಕಾಂಪ್ಯಾಕ್ಟ್ SUV ವಿಭಾಗದಲ್ಲಿ ಸ್ಪರ್ಧಾತ್ಮಕವಾಗಿಡಲು ಹೆಚ್ಚಿನ ಸುರಕ್ಷತಾ ವೈಶಿಷ್ಟ್ಯಗಳನ್ನು ತರುವ ಸಾಧ್ಯತೆಯಿದೆ. ಈ ಎಲ್ಲದಕ್ಕಿಂತ ಮೂರು ಮಾತ್ರ ಪ್ರಮುಖ ಬದಲಾವಣೆಗಳುವೆ, ಅವುಗಳನ್ನು ನೋಡೋಣ.

ಈ 2026ರ ಫೆಬ್ರವರಿಯಲ್ಲಿ ಬಿಡುಗಡೆಗೊಂಡ ಹೊಸ ಕಾರುಗಳಿವು, ಬೆಲೆ..

ಈ 2026ರ ಫೆಬ್ರವರಿಯಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ವಿವಿಧ ಕಾರುಗಳು ಬಿಡುಗಡೆಗೊಂಡಿವೆ. ಅವುಗಳಲ್ಲಿ ಮಾರುತಿ ಇ ವಿಟಾರಾ, ನಿಸ್ಸಾನ್ ಗ್ರಾವೈಟ್, ಟಾಟಾ ಪಂಚ್ ಇವಿ ಫೇಸ್‌ಲಿಫ್ಟ್ ಹಾಗೂ ಫೋಕ್ಸ್‌ವ್ಯಾಗನ್ ಟೇರಾನ್ ಆರ್-ಲೈನ್‌ ಕಾರುಗಳು ಪ್ರಮುಖವಾಗಿವೆ. ಇವುಗಳು ಒಂದಕ್ಕಿಂದ ಒಂದು ಅದ್ಭುತವಾಗಿದ್ದು, ನೋಡಲು ಕೂಡ ಚೆನ್ನಾಗಿವೆ. ಬನ್ನಿ.. ಇವುಗಳ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಕ್ಷಿಪ್ತವಾದ ವಿವರಗಳನ್ನು ತಿಳಿಯೋಣ.

100 Km ಮೈಲೇಜ್.. ಆದ್ರೂ ಈ ಅಗ್ಗದ ಬೈಕ್‌ನ್ನು ಖರೀದಿಸಲು..

ಬಜಾಜ್ ಫ್ರೀಡಂ 125 (Bajaj Freedom 125) ಪ್ರಖ್ಯಾತ ಸಿಎನ್‌ಜಿ ಮೋಟಾರ್‌ಸೈಕಲ್‌ ಎಂದೇ ಹೆಸರುವಾಸಿಯಾಗಿದೆ. ಆದರೂ ದಿನದಿಂದ ದಿನಕ್ಕೆ ಮಾರಾಟ ಸಂಖ್ಯೆ ಮಾತ್ರ ಇಳಿಮುಖವಾಗುತ್ತಿದೆ. ಈ 2026ರ ಜನವರಿಯಲ್ಲಿಯೂ ಅದು ಮುಂದುವರಿದಿದೆ. ಬರೀ 1,157 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಿಸಲಾಗಿದೆ. 2025ರ ಇದೇ ಅವಧಿಯಲ್ಲಿ 1,345 ಯುನಿಟ್‌ಗಳನ್ನು ಮಾರಾಟಲಾಗಿತ್ತು. ಈ ಅಂಕಿಅಂಶವನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ -14% ಕುಸಿತವಾಗಿದೆ.

Ultraviolette: ಎಥರ್‌ ರಿಜ್ಟಾ ಪ್ರತಿಸ್ಪರ್ಧಿಯಿದು..

ಬೆಂಗಳೂರಿನ ಅಲ್ಟ್ರಾವೈಲೆಟ್ ಆಟೋಮೋಟಿವ್ (Ultraviolette Automotive) ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿದೆ. 2025ರ ಮಾರ್ಚ್‌ನಲ್ಲಿ ಮೊಟ್ಟ ಮೊದಲ ಎಲೆಕ್ಟ್ರಿಕ್ ಸ್ಕೂಟರ್‌ 'ಟೆಸ್ಸೆರಾಕ್ಟ್'ನ್ನು ಬಿಡುಗಡೆಗೊಳಿಸಿತ್ತು. ಇದು ಬುಕ್ಕಿಂಗ್‌ನಲ್ಲೂ ಅಬ್ಬರಿಸಿತ್ತು. 70,000ಕ್ಕೂ ಅಧಿಕ ಸಂಖ್ಯೆಯಲ್ಲಿ ಆರ್ಡರ್‌ಗಳನ್ನು ಪಡೆದುಕೊಂಡಿತ್ತು. ಎಲ್ಲವು ಅಂದುಕೊಂಡರೆ ಜರುಗಿದರೆ, ಅತಿ ಶೀಘ್ರದಲ್ಲೇ ವಿತರಣೆಗಳು ಶುರುವಾಗಲಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ
Advertisement

ಸರ್ಕಾರದಿಂದ ಬೃಹತ್ ಆರ್ಡರ್ ಬಾಚಿಕೊಂಡ ಟಾಟಾ

ದೇಶವನ್ನು ಕಾರ್ಬನ್ ಮುಕ್ತವಾಗಿಸುವ ಪಯಣದಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿ, ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕರಾದ ಟಾಟಾ ಮೋಟಾರ್ಸ್, ತಮಿಳುನಾಡಿನ ಟುಟಿಕೋರಿನ್‌ನಲ್ಲಿರುವ ವಿ.ಒ. ಚಿದಂಬರನಾರ್ ಬಂದರು ಪ್ರಾಧಿಕಾರ (ವಿಒಸಿಪಿಎ) ನೊಂದಿಗೆ 40 ಗ್ರೀನ್ ಹೈಡ್ರೋಜನ್ ಎಂಜಿನ್-ಚಾಲಿತ (ಎಚ್2 ಐಸಿಇ) ಪ್ರೈಮ್ ಮೂವರ್‌ಗಳನ್ನು ಬಂದರಿನಲ್ಲಿ ನಿಯೋಜಿಸುವ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಿದೆ. ಕೇಂದ್ರ ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವ ಸರ್ಬಾನಂದ ಸೋನೋವಾಲ್ ಅವರ ಸಮ್ಮುಖದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು.