Tata: ಮುಂದಿನ ಪೀಳಿಗೆಯ 17 ಟ್ರಕ್‌ಗಳನ್ನು ಬಿಡುಗಡೆ ಮಾಡಿದ ಟಾಟಾ

ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್, ಇಂದು ಭಾರತೀಯ ಟ್ರಕ್ ಕ್ಷೇತ್ರವನ್ನೇ ಬದಲಿಸುವ ಮಹತ್ವದ ಹೆಜ್ಜೆಯಾಗಿ ಮುಂದಿನ ಪೀಳಿಗೆಯ 17 ಟ್ರಕ್‌ಗಳನ್ನು ಬಿಡುಗಡೆ ಮಾಡಿದೆ. 7 ರಿಂದ 55 ಟನ್‌ಗಳವರೆಗಿನ ವಿಭಾಗದ ಈ ಹೊಸ ಟ್ರಕ್‌ಗಳು ಸುರಕ್ಷತೆ, ಲಾಭ ಮತ್ತು ಪ್ರಗತಿಯಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸಲಿವೆ. ಈ ಸಮಗ್ರ ವಾಹನ ಬಿಡುಗಡೆಯಲ್ಲಿ ಹೊಚ್ಚ ಹೊಸ ಅಜುರಾ ಸರಣಿ, ಅತ್ಯಾಧುನಿಕ ಟಾಟಾ ಟ್ರಕ್ಸ್.ಇವಿ ಶ್ರೇಣಿ ಮತ್ತು ಈಗಾಗಲೇ ಜನಪ್ರಿಯವಾಗಿರುವ ಪ್ರೈಮಾ, ಸಿಗ್ನಾ ಹಾಗೂ ಅಲ್ಟ್ರಾ ವಾಹನಗಳ ಸುಧಾರಿತ ಆವೃತ್ತಿಗಳನ್ನು ಪರಿಚಯಿಸಲಾಗಿದೆ.

ತುಂಬಾ ಚೆನ್ನಾಗಿದ್ರು ಈ ಎರಡು ಸ್ಕೂಟರ್‌ಗಳನ್ನು ಕೇಳೋರಿಲ್ಲ..

ಹೋಂಡಾ ಸ್ಕೂಟರ್ & ಮೋಟಾರ್‌ಸೈಕಲ್ ಇಂಡಿಯಾ (Honda Scooter & Motorcycle India), 2025ರ ಜನವರಿಯಲ್ಲಿ ಹೊಚ್ಚ ಹೊಸ ಆಕ್ಟಿವಾ ಇ (Activa e) ಮತ್ತು ಕ್ಯೂಸಿ1(QC1) ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸಿತ್ತು. ಇವು ನೋಡಲು ತುಂಬಾ ಚೆನ್ನಾಗಿದ್ದು, ಹಲವು ಹೊಸತನಗಳಿಗೆ ಸಾಕ್ಷಿಯಾಗಿವೆ. ಕೈಗೆಟುಕುವ ಬೆಲೆಯಲ್ಲಿಯೂ ಸಿಗುತ್ತವೆ. ಆದರೂ ದೇಶೀಯ ಖರೀದಿದಾರರನ್ನು ಸೆಳೆಯಲು ವಿಫಲವಾಗಿವೆ. ಮಾರಾಟ ಸಂಖ್ಯೆಯೂ ತೀವ್ರತರದಲ್ಲಿ ಕುಸಿತವಾಗಿದೆ.

Maruti: ಮಾರುತಿಯ ಮೊದಲ ಎಲೆಕ್ಡ್ರಿಕ್ ಕಾರಿನ ಬೆಲೆ ಮಾಹಿತಿ ಸೋರಿಕೆ

ಭಾರತದಲ್ಲಿ ಬಹುತೇಕ ಎಲ್ಲಾ ಬ್ರಾಂಡ್‌ಗಳು ಈಗಾಗಲೇ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಿವೆ. ಆದರೆ ಇಂಧನ ಚಾಲಿತ ಕಾರುಗಳ ಮಾರಾಟದಲ್ಲಿ ಭಾರತದಲ್ಲಿ ನಂ.1 ಸ್ಥಾನದಲ್ಲಿರುವ ಮಾರುತಿ ಸುಜುಕಿ (Maruti Suzuki), ತನ್ನ ಮೊದಲ ಎಲೆಕ್ಟ್ರಿಕ್ ಕಾರನ್ನು ಅನಾವರಣಗೊಳಿಸಿದೆಯಾದರೂ ಇನ್ನು ಬಿಡುಗಡೆ ಮಾಡಿಲ್ಲ. ಮಾರುತಿಯ ಮೊದಲ ಎಲೆಕ್ಟ್ರಿಕ್ ಕಾರಿನ ಹೆಸರು ಇ-ವಿಟಾರಾ (e-Vitara) ಎಂದು ನಾಮಕರಣ ಮಾಡಲಾಗಿದೆ. ಕಾರಿನ ಬಗ್ಗೆ ಸಂಪೂರ್ಣ ವಿವರಗಳನ್ನು ಕಂಪನಿ ಈಗಾಗಲೇ ಬಹಿರಂಗಪಡಿಸಿದೆ, ವಿದೇಶಗಳಿಗೂ ರಫ್ತು ಮಾಡುತ್ತಿದೆ. ಆದರೆ ಭಾರತದಲ್ಲಿ ಇನ್ನೂ ಮಾರಟಕ್ಕೆ ತಂದಿಲ್ಲ, ಇದೀಗ ಬೆಲೆ ಮಾಹಿತಿ ಸೋರಿಕೆಯಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ಬಡವರ ಪ್ರೀಮಿಯಂ ಕಾರಿದು.. 5.35 ಲಕ್ಷ ರೂಪಾಯಿ, 21 Km ಮೈಲೇಜ್..

ಮಾರುತಿ ಸುಜುಕಿ ಇಗ್ನಿಸ್ (Maruti Suzuki Ignis) ಪ್ರೀಮಿಯಂ ಹ್ಯಾಚ್‌ಬ್ಯಾಕ್ ಎಂದೇ ಮನೆ ಮಾತಾಗಿದೆ. ಆದರೆ, ಈ ಕಾರಿನ ಮಾರಾಟವು ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದೆ. 2026ರ ಜನವರಿಯಲ್ಲಿಯೂ ಅದು ಮುಂದುವರಿದಿದೆ. ಒಟ್ಟು 1902 ಯುನಿಟ್‌ಗಳನ್ನು ಗ್ರಾಹಕರಿಗೆ ವಿತರಿಸಲಾಗಿದೆ. 2025ರ ಇದೇ ಅವಧಿಯಲ್ಲಿ 3,780 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ ಅಂಶವನ್ನು ಲೆಕ್ಕ ಹಾಕಿದಾಗ, ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 49.68% ಕುಸಿತವಾಗಿದೆ.
Advertisement

ಭಾರತದಲ್ಲಿ ಹೊಸ ಕಾರು ಬಿಡುಗಡೆ: ಬೆಲೆಯೆಷ್ಟು, ಡೆಲಿವರಿ ಯಾವಾಗ?

ಹೊಸ ಬಿಎಂಡಬ್ಲ್ಯುಎಕ್ಸ್3 30 ಎಕ್ಸ್‌ಡ್ರೈವ್‌ ಎಂ ಸ್ಪೋರ್ಟ್ ಪ್ರೋ (BMW X3 30 xDrive M Sport Pro) ಇಂದು ಭಾರತದಲ್ಲಿ ಬಿಡುಗಡೆಯಾಗಿದೆ. ಚೆನ್ನೈನಲ್ಲಿರುವ BMW ಗ್ರೂಪ್ ಪ್ಲಾಂಟ್‌ನಲ್ಲಿ ಸ್ಥಳೀಯವಾಗಿ ಉತ್ಪಾದಿಸಲಾದ BMW X3 ನ ಈ ಹೊಸ ಪೆಟ್ರೋಲ್ ವೇರಿಯೆಂಟ್ ಇಂದಿನಿಂದ ದೇಶಾದ್ಯಂತದ ಎಲ್ಲಾ BMW ಡೀಲರ್‌ಶಿಪ್‌ಗಳಲ್ಲಿ ಬುಕ್ ಮಾಡಬಹುದು. ಈ ಕಾರು 4,755 ಮಿ.ಮೀ ಉದ್ದ ಮತ್ತು 2,865 ಮಿ.ಮೀ ವೀಲ್‌ಬೇಸ್‌ನೊಂದಿಗೆ ವಿಭಾಗದಲ್ಲಿ ಅತಿ ಉದ್ದವಾದ ಕಾರಾಗಿದೆ. ಜೊತೆಗೆ 1,920 ಮಿ.ಮೀ ಅಗಲ ಮತ್ತು 1,660 ಮಿ.ಮೀ ಎತ್ತರದೊಂದಿಗೆ ತನ್ನ ವಿಭಾಗದಲ್ಲಿ ಅತ್ಯಂತ ಅಗಲವಾದ ಮತ್ತು ಎತ್ತರದ ಕಾರು ಕೂಡ ಆಗಿದೆ.

ಆಫೀಸ್‌ಗೆ ಹೋಗುವವರಿಗೆ ಬೆಸ್ಟ್ ಬೈಕ್‌ಗಳಿವು: 65 Km ಮೈಲೇಜ್..

ಹೋಂಡಾ ಎಸ್‌ಪಿ 125 (Honda SP 125) ಜನಮೆಚ್ಚಿದ ಮೋಟಾರ್‌ಸೈಕಲ್‌ ಎಂದೇ ಮನೆ ಮಾತಾಗಿದೆ. ಇದಕ್ಕೆ ಹೀರೋ ಗ್ಲಾಮರ್ (Hero Glamour) ಪ್ರಬಲವಾದ ಪ್ರತಿಸ್ಪರ್ಧಿಯಾಗಲಿದೆ. ಈ ಬೈಕ್‌ಗಳು ನೋಡಲು ತುಂಬಾ ಚೆನ್ನಾಗಿದ್ದು, ನಾನಾ ಬಗೆಯ ಹೊಸತನಗಳಿಗೂ ಸಾಕ್ಷಿಯಾಗಿವೆ. ನಾವಿಲ್ಲಿ ಇವೆರೆಡು ಮೋಟಾರ್‌ಸೈಕಲ್‌ಗಳ ಬೆಲೆ, ಕಾರ್ಯಕ್ಷಮತೆ ಹಾಗೂ ವೈಶಿಷ್ಟ್ಯಗಳ ಕುರಿತು ಹೋಲಿಕೆ ಮಾಡಿದ್ದೇವೆ. ಬನ್ನಿ.. ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

Maruti:ಬಹುನಿರೀಕ್ಷಿತ ಹೊಸ ಮಾರುತಿ ಫೇಸ್‌ಲಿಫ್ಟ್ SUV ಬಿಡುಗಡೆ ಸಜ್ಜು

ಮಾರುತಿ ಬ್ರೆಝಾ ಫೇಸ್‌ಲಿಫ್ಟ್ (Maruti Brezza Facelift) ಬಿಡುಗಡೆಗೆ ಸಜ್ಜಾಗುತ್ತಿದ್ದು, ಈಗಾಗಲೇ ರಸ್ತೆಗಳಲ್ಲಿ ಟೆಸ್ಟಿಂಗ್ ಮಾಡುವಾಗ ಹಲವು ಬಾರಿ ಕಾಣಿಸಕೊಂಡಿದೆ. ದೇಶದ ವಿವಿಧೆಡೆ ಟೆಸ್ಟಿಂಗ್ ಮಾಡಲ್ ಕಾಣಿಸಿಕೊಂಡಿರುವ ವಿಡಿಯೋಗಳು ವೈರಲ್ ಆಗುತ್ತಿವೆ. ಕೆಲವು ಮೂಲಗಳ ಪ್ರಕಾರ, ಅಧಿಕೃತ ಬಿಡುಗಡೆಯು ಜುಲೈ ಅಥವಾ ಅಕ್ಟೋಬರ್ 2026ರ ನಡುವೆ ಆಗಬಹುದು ಎಂದು ಹೇಳಿವೆ. ಸಬ್ ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಪೈಪೋಟಿ ಹೆಚ್ಚಾಗಿರುವುದರಿಂದ ಬ್ರೆಝಾ ಕಾರಿಗೆ ಈಗ ಫೇಸ್‌ಲಿಫ್ಟ್ ತುಂಬಾ ಮುಖ್ಯವಾಗಿದೆ. ಈಗಾಗಲೇ ಪ್ರತಿಸ್ಪರ್ಧಿಗಳು ಆಧುನಿಕ ಡಿಸೈನ್, ಆಕರ್ಷಕ ಫೀಚರ್ಸ್‌ನೊಂದಿಗೆ ಮುನ್ನುಗ್ಗುತ್ತಿದ್ದು, ಇವಕ್ಕೆ ಪೈಪೋಟಿ ನೀಡಲು ಹೊಸ ಫೇಸ್‌ಲಿಫ್ಟ್ ಬ್ರೆಝಾ ಯಾವೆಲ್ಲ ಅಪ್‌ಡೇಟ್ ಪಡೆಯಲಿದೆ ಎಂಬುದರ ಮಾಹಿತಿ ಇಲ್ಲಿದೆ.

Nissan: ನಾಳೆ ಅಗ್ಗದ ಹೊಸ ನಿಸ್ಸಾನ್ ಎಂಪಿವಿ ಬಿಡುಗಡೆ.. ಮಾರುತಿಗೆ..

ಬಹುನಿರೀಕ್ಷಿತ ನಿಸ್ಸಾನ್ ಗ್ರಾವೈಟ್ (Nissan Gravite) ಎಂಪಿವಿ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ನಾಳೆ (ಫೆಬ್ರವರಿ 17) ಈ ಕಾರು ಅದ್ದೂರಿಯಾಗಿ ಮಾರಾಟಕ್ಕೆ ಬರಲಿದೆ. ನಿಸ್ಸಾನ್ ಮತ್ತು ರೆನಾಲ್ಟ್ ಕಂಪನಿಗಳು ವ್ಯಾವಹಾರಿಕ ಪಾಲುದಾರಿಕೆ ಹೊಂದಿವೆ. ಇದರಿಂದಾಗಿ 'ಗ್ರಾವೈಟ್' ಎಂಪಿವಿಯು 'ಟ್ರೈಬರ್'ನ್ನು ಆಧರಿಸಿರಲಿದ್ದು, ರೀ-ಬ್ಯಾಡ್ಜ್ ಮಾಡೆಲ್ ಎಂದೇ ಹೇಳಬಹುದು. ಬನ್ನಿ, ನೂತನ ಎಂಪಿವಿಯ ನಿರೀಕ್ಷಿತ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.
Advertisement

Jeep: ಮಾರುಕಟ್ಟೆಗೆ ಹೊಸ 7-ಸೀಟರ್ ಎಸ್‌ಯುವಿ ಬಿಡುಗಡೆ: ಬೆಲೆಯೆಷ್ಟು?

ಜೀಪ್ (Jeep) ಇಂಡಿಯಾ ಇಂದು ಮೆರಿಡಿಯನ್ ಟ್ರ್ಯಾಕ್ ಎಡಿಷನ್ (Meridian 'Track Edition') ಬಿಡುಗಡೆ ಮಾಡಿದೆ. ಇದು ಹೊಸ ಎಸ್‌ಯುವಿ ಸೀಮಿತವಾಗಿ (limited ‑ run) ಸಿಗಲಿದ್ದು, ಮೆರಿಡಿಯನ್‌ನ ಪ್ರೀಮಿಯಂ ಆಕರ್ಷಣೆಯನ್ನು ಹೆಚ್ಚಿಸಲು ನಿರ್ಮಿಸಲಾಗಿದೆ. ದಿಟ್ಟ ರಸ್ತೆ ಉಪಸ್ಥಿತಿ ಮತ್ತು ಉತ್ತಮ ಸೌಕರ್ಯ ನವೀಕರಣಗಳೊಂದಿಗೆ - ವಿಶೇಷವಾಗಿ ಹೊಸ 140 ಎಂಎಂ ಫುಲ್ಲಿ - ಫ್ರಂಟ್ ಸ್ಲೈಡಿಂಗ್ ಎರಡನೇ ಸೀಟಿನ ಸಾಲಿನೊಂದಿಗೆ ಇದುವರೆಗಿನ ಅತ್ಯಂತ ಆರಾಮದಾಯಕ ಜೀಪ್ ಮೆರಿಡಿಯನ್ ಆಗಿದೆ ಎಂದು ಕಂಪನಿ ತಿಳಿಸಿದೆ.

Tata: ಈ ಕಾರಿಗೆ ಪೆಟ್ರೋಲ್ ಬೇಕಿಲ್ಲ.. ಒಂದೇ ಚಾರ್ಜ್‌ನಲ್ಲಿ 593..

ಬಹುನಿರೀಕ್ಷಿತ ಟಾಟಾ ಪಂಚ್ ಇವಿ ಫೇಸ್‌ಲಿಫ್ಟ್ (Tata Punch EV Facelift) ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಈ ಕಾರು ಫೆಬ್ರವರಿ 20 ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಹೊಚ್ಚ ಹೊಸ 'ಪಂಚ್ ಇವಿ' ಬರುವಿಕೆಗಾಗಿ ಗ್ರಾಹಕರು ಕೂಡ ತುದಿಗಾಲಿನಲ್ಲಿ ನಿಂತುಕೊಂಡು ಕಾಯುತ್ತಿದ್ದಾರೆ. ಸದ್ಯ, ಕಂಪನಿಯು ಕೂಡ ಇದೇ ಕಾರಿನ ಕುರಿತಂತೆ ಒಂದೊಂದೆ ವಿಚಾರಗಳನ್ನು ಬಹಿರಂಗಪಡಿಸುತ್ತಿದೆ.

ಮೊನ್ನೆಯಷ್ಟೆ ಬಿಡುಗಡೆ...ಪ್ರತಿಸ್ಪರ್ಧಿಗಳಿಗೆ ಭಯ ಹುಟ್ಟಿಸುವ ಫೀಚರ್ಸ್

ಪ್ರೀಮಿಯಂ ಕಾರುಗಳ ತಯಾರಕ ಕಂಪನಿಯಾಗಿರುವ ಜೆಎಸ್‌ಡಬ್ಲ್ಯೂ ಎಂಜಿ ಮೋಟಾರ್ (JSW MG Motor), ಭಾರತದಲ್ಲಿ ಇತ್ತೀಚೆಗಷ್ಟೆ ತನ್ನ ಬಹುನಿರೀಕ್ಷಿತ ದೈತ್ಯ ಮೆಜೆಸ್ಟರ್ (MAJESTOR) ಎಸ್‌ಯುವಿಯನ್ನು ಅನಾವರಣಗೊಳಿಸಿದೆ. ಕಂಪನಿಯ ಪ್ರಕಾರ ಇದು ಭಾರತದ ಮೊದಲ ಡಿ+ ಎಸ್‌ಯುವಿ ಆಗಿದ್ದು, ಏಪ್ರಿಲ್‌ನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ, ಹಾಗೆಯೇ ಮೇ 2026 ರಲ್ಲಿ ಡೆಲಿವರಿಗಳು ಪ್ರಾರಂಭವಾಗಲಿವೆ. ಅನಾವರಣಗೊಂಡಾಗಿನಿಂದ ಈ ಎಸ್‌ಯುವಿಯ ಬಗ್ಗೆ ತಿಳಿದುಕೊಳ್ಳಲು ಜನರಿಗೆ ಸಾಕಷ್ಟು ಕುತೂಹಲವಿದೆ, ಬನ್ನಿ ಹಾಗಾದ್ರೆ ಎಂಜಿ ಮೆಜೆಸ್ಟರ್ ಎಸ್‌ಯುವಿಯ ಪ್ರಮುಖ ಐದು ಫೀಚರ್‌ಗಳನ್ನು ನೋಡೋಣ.

ಇದು ಟಾಟಾ & ಮಾರುತಿ ಕಾರಲ್ಲ.. ರೂ.5 ಲಕ್ಷಕ್ಕಿಂತ ಕಮ್ಮಿ..

ರೆನಾಲ್ಟ್ ಇಂಡಿಯಾ (Renault India) ಪ್ರಮುಖ ಕಾರು ತಯಾರಕ ಕಂಪನಿಯಾಗಿ ಹೊರಹೊಮ್ಮಿದೆ. 2025ರಲ್ಲಿ ಟ್ರೈಬರ್ ಎಂಪಿವಿ ಹಾಗೂ ಕೈಗರ್ ಎಸ್‌ಯುವಿಯನ್ನು ನವೀಕರಿಸಿ ಬಿಡುಗಡೆಗೊಳಿಸಲಾಗಿತ್ತು. ಸದ್ಯ, ಎಂಟ್ರಿ-ಲೆವೆಲ್ ಹ್ಯಾಚ್‌ಬ್ಯಾಕ್ ಎಂದೇ ಹೆಸರುವಾಸಿಯಾಗಿರುವ 'ಕ್ವಿಡ್'ನ್ನು ಹೊಸ ರೂಪದಲ್ಲಿ ಮಾರಾಟಕ್ಕೆ ತರಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಈಚೆಗೆ ಇದೇ ಕಾರಿನ 'ಫೇಸ್‌ಲಿಫ್ಟ್' ಮಾಡೆಲ್ ಪ್ರಾಯೋಗಿಕ ಸಂಚಾರವನ್ನು ನಡೆಸುವಾಗಲೂ ಕಾಣಿಸಿಕೊಂಡಿದೆ. ಅದರ 'ಸ್ಪೈ' ಫೋಟೋಗಳು ಆನ್‌ಲೈನ್‌ನಲ್ಲಿಯೂ ಸೋರಿಕೆಯಾಗಿವೆ.
Advertisement

Maruti Suzuki: ಮತ್ತೆ ಸಿಡಿದೆದ್ದ ಮಾರುತಿ.. ಥಾರ್ ವಿರುದ್ಧ ತೊಡೆ..

ಮಹೀಂದ್ರಾ ಥಾರ್ ರಾಕ್ಸ್ (Mahindra Thar Roxx) ಜನಮೆಚ್ಚಿದ ಆಫ್-ರೋಡ್ ಎಸ್‌ಯುವಿಯಾಗಿದೆ. ಇದಕ್ಕೆ ಮಾರುತಿ ಸುಜುಕಿ ಜಿಮ್ನಿ (Maruti Suzuki Jimny) ನೇರವಾದ ಎದುರಾಳಿಯಾಗಿದೆ. ಆದರೂ ಈ ಕಾರಿನ ಮಾರಾಟ ಸಂಖ್ಯೆ ಮಾತ್ರ ಕುಸಿತವಾಗುತ್ತಿತ್ತು. ಸದ್ಯ, ಇದೇ 'ಜಿಮ್ನಿ' ಮಾರಾಟವು ದಿಢೀರನೇ ಅಧಿಕಗೊಂಡಿದೆ. ಕಳೆದ ತಿಂಗಳು (ಜನವರಿ - 2026) ಒಟ್ಟು 591 ಯುನಿಟ್‌ಗಳನ್ನು ಗ್ರಾಹಕರಿಗೆ ವಿತರಿಸಲಾಗಿದೆ. 2025ರ ಜನವರಿಯಲ್ಲಿ 163 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ ಅಂಶವನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 263% ಪ್ರಗತಿಯಾಗಿದೆ.

ಬಡವರಿಗೆ ಫರ್ಫೆಕ್ಟ್.. 5 ಜನಪ್ರಿಯ ಸ್ಕೂಟರ್‌ಗಳಿವು.. 68.75 ಕಿ.ಮೀ..

ದಿನನಿತ್ಯದ ಬಳಕೆಗೆ ಸ್ಕೂಟರ್‌ಗಳು ಬೇಕೇ ಬೇಕು. ಇವುಗಳನ್ನು ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸುಲಭವಾಗಿ ಬಳಕೆ ಮಾಡಬಹುದು. ನೀವು ಉತ್ತಮ ಇಂಧನ ದಕ್ಷತೆಗೆ ಹೆಸರಾಗಿರುವ ಹೊಚ್ಚ ಹೊಸ ಸ್ಕೂಟರ್‌ವೊಂದನ್ನು ಕೊಂಡುಕೊಳ್ಳಲು ಪ್ಲ್ಯಾನ್ ಮಾಡಿದ್ದೀರಾ.. ಹಾಗಾದ್ರೆ ಸುಜುಕಿ ಆಕ್ಸೆಸ್ 125, ಟಿವಿಎಸ್ ಜುಪಿಟರ್ 110, ಹೋಂಡಾ ಆಕ್ಟಿವಾ 110, ಯಮಹಾ ಫ್ಯಾಸಿನೋ 125 ಎಫ್ಐ ಹೈಬ್ರಿಡ್ ಹಾಗೂ ಹೀರೋ ಡೆಸ್ಟಿನಿ 125ಗಳು ಅತ್ಯುತ್ತಮವಾದ ಆಯ್ಕೆಯಾಗಲಿವೆ. ಬನ್ನಿ.. ಈ ಸ್ಕೂಟರ್‌ಗಳ ಬೆಲೆ ಎಷ್ಟು, ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಕ್ಷಿಪ್ತವಾದ ವಿವರಗಳನ್ನು ತಿಳಿಯೋಣ.

Tata: ಬಿಡುಗಡೆಗೂ ಮೊದಲೇ ರಸ್ತೆಗೆ ಬಂತು ಹೊಸ ಟಾಟಾ ಕಾರು..

ಅತಿ ಶೀಘ್ರದಲ್ಲೇ ಹೊಸ ಟಾಟಾ ಪಂಚ್ ಇವಿ ಫೇಸ್‌ಲಿಫ್ಟ್ (Tata Punch EV Facelift) ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಈ ಎಲೆಕ್ಟ್ರಿಕ್ ಎಸ್‌ಯುವಿ ನೋಡಲು ತುಂಬಾ ಚೆನ್ನಾಗಿದೆ. ನೂತನ 'ಪಂಚ್ ಇವಿ' ಬರುವಿಕೆಗಾಗಿ ಗ್ರಾಹಕರು ಕೂಡ ತುದಿಗಾಲಿನಲ್ಲಿ ನಿಂತುಕೊಂಡು ಕಾಯುತ್ತಿದ್ದಾರೆ. ಸದ್ಯ, ಇದೇ ಕಾರು ಯಾವುದೇ ರೀತಿಯಲ್ಲಿ ಮರೆಮಾಚದೆ ಪರೀಕ್ಷಾರ್ಥ ಸಂಚಾರ ನಡೆಸುವಾಗ ಕಾಣಿಸಿಕೊಂಡಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

Best Budget cars: ಮಧ್ಯಮ ವರ್ಗದ ಫೇವರೆಟ್: 5 ಲಕ್ಷಕ್ಕಿಂತ ಕಮ್ಮಿ

ಕಳೆದ ಕೆಲವು ವರ್ಷಗಳಿಂದ ಮಾರುಕಟ್ಟೆಯಲ್ಲಿ SUV ಗಳು ಪ್ರಾಬಲ್ಯ ಸಾಧಿಸುತ್ತಿದ್ದರೂ ಭಾರತೀಯರು ಇನ್ನೂ ಹ್ಯಾಚ್‌ಬ್ಯಾಕ್ ಮೇಲಿನ ಪ್ರೀತಿಯನ್ನು ಬಿಟ್ಟಿಲ್ಲ. ನೀವು ಮಧ್ಯಮ ವರ್ಗದ ಕುಟುಂಬದವರಾಗಿದ್ದರೆ ಸುಲಭವಾಗಿ ಕಾರು ಖರೀದಿಸಬಹುದಾಗಿದೆ. ನಿಮಗೆ ಕಮ್ಮಿ ಬೆಲೆಯ ಹ್ಯಾಚ್‌ಬ್ಯಾಕ್‌ಗಳು ಪ್ರಾಯೋಗಿಕತೆ, ಕೈಗೆಟುಕುವಿಕೆ, ಕಡಿಮೆ ನಿರ್ವಹಣಾ ವೆಚ್ಚ ಮತ್ತು ನಗರ ಪರಿಸ್ಥಿತಿಗಳಲ್ಲಿ ಚಾಲನೆಯ ಸುಲಭತೆಯನ್ನು ನೀಡುತ್ತವೆ. ಮಾರುತಿ ಸುಜುಕಿ ಮತ್ತು ಟಾಟಾದಂತಹ ಪ್ರಮುಖ ಕಾರು ಬ್ರಾಂಡ್‌ಗಳು ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ಮುಂಚೂಣಿಯಲ್ಲಿವೆ.
Advertisement

ಕಳಪೆ ಎಂದು ಕರೆಯುವಂತಿಲ್ಲ: ಪವರ್ ತೋರಿಸಿದ ನಂ.1 ಮಾರುತಿ ಸುಜುಕಿ..

ಮಾರುತಿ ಸುಜುಕಿ (Maruti Suzuki) ನಂಬರ್ 1 ಕಾರು ತಯಾರಕ ಕಂಪನಿ ಎಂದೇ ಹೆಸರುವಾಸಿಯಾಗಿದ್ದು, ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಾರುಗಳನ್ನು ಮಾರಾಟಗೊಳಿಸುತ್ತಿದೆ. ದೇಶದ ವಾಹನಗಳಿಗೆ ಸುರಕ್ಷತಾ ಪರೀಕ್ಷೆ ನಡೆಸುವ ಸಂಸ್ಥೆ ಭಾರತ್ ಎನ್‌ಸಿಎಪಿ (Bharat NCAP) ಕಂಪನಿಯ ಡಿಜೈರ್, ವಿಕ್ಟೋರಿಸ್‌ ಹಾಗೂ ಇನ್ವಿಕ್ಟೋಗಳನ್ನು ಅತಿ ಸುರಕ್ಷಿತ ಕಾರುಗಳೆಂದು ತೀರ್ಮಾನಿಸಿದ್ದು, 5 ಸ್ಟಾರ್ ಸೇಫ್ಟಿ ರೇಟಿಂಗ್‌ನ್ನು ಘೋಷಣೆ ಮಾಡಿದೆ. ಬನ್ನಿ.. ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಪವರ್‌ಫುಲ್‌ ಹ್ಯಾಚ್‌ಬ್ಯಾಕ್‌ಗಳು: ಹೊಸ ಕಾರು ಬರೀ 6 ಲಕ್ಷ

ಭಾರತದಲ್ಲಿ ಹಲವರು ಕಾರು ಖರೀದಿದಾರರಿಗೆ, ಹ್ಯಾಚ್‌ಬ್ಯಾಕ್‌ಗಳು ಯಾವಾಗಲೂ ಅವರ ಅತ್ಯಂತ ಆದ್ಯತೆಯ ಆಯ್ಕೆಯಾಗಿದೆ. ನಗರಗಳ ಸಂಚಾರ ದಟ್ಟಣೆಯಲ್ಲಿ ಸುಲಭವಾಗಿ ಚಲಿಸಬಹುದು ಮತ್ತು ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಸಿಗುವುದರಿಂದ ಸಿಟಿ ಮಂದಿಗೆ ಹ್ಯಾಚ್‌ಬ್ಯಾಕ್‌ಗಳು ಬೆಸ್ಟ್ ಆಯ್ಕೆಯಾಗಿವೆ. ಮಾರುತಿ ಸುಜುಕಿ ಸ್ವಿಫ್ಟ್ ಮತ್ತು ಹುಂಡೈ ಗ್ರ್ಯಾಂಡ್ ಐ10 ನಿಯೋಸ್ ಈ ವಿಭಾಗದಲ್ಲಿ ಕಳೆದ ಹಲವು ವರ್ಷಗಳಿಂದ ಮುನ್ನಡೆ ಸಾಧಿಸುತ್ತಿವೆ. ಎರಡೂ ಹ್ಯಾಚ್‌ಬ್ಯಾಕ್‌ಗಳು ಡಿಸೈನ್ ಮತ್ತು ಪ್ರಾಯೋಗಿಕತೆ ಜೊತೆಗೆ ಅತ್ಯುತ್ತಮ ಫೀಚರ್ಸ್ ಹೊಂದಿವೆ. ಆದರೆ ಯಾವುದು ನಿಮಗೆ ಉತ್ತಮವಾಗಿ ಸರಿಹೊಂದಬಹುದು? ಹೋಲಿಕೆ ಮಾಡಿ ನೋಡೋಣ ಬನ್ನಿ.

Maruti: 6-ಸೀಟರ್.. 26.32 Km ಮೈಲೇಜ್, 11 ಲಕ್ಷ.. ಈ ಪ್ರಖ್ಯಾತ..

ಮಾರುತಿ ಸುಜುಕಿ ಎಕ್ಸ್ಎಲ್6 (Maruti Suzuki XL6) ಜನಪ್ರಿಯ ಎಂಪಿವಿ ಆಗಿ ಹೊರಹೊಮ್ಮಿದೆ. ಇದು ಫ್ಯಾಮಿಲಿ ಕಾರಾಗಿದ್ದು, ಕಡಿಮೆ ನಿರ್ವಹಣಾ ವೆಚ್ಚವನ್ನು ಹೊಂದಿದೆ. ಉತ್ತಮ ಇಂಧನ ದಕ್ಷತೆಗೂ ಹೆಸರುವಾಸಿಯಾಗಿದೆ. ನೋಡಲು ತುಂಬಾ ಚೆನ್ನಾಗಿದೆ. ನೀವು ಹೊಚ್ಚ ಹೊಸ ಕಾರೊಂದನ್ನು ಖರೀದಿಸಲು ಆಲೋಚಿಸಿದ್ದೀರಾ.. ಹಾಗಾದರೆ, ಇದೇ 'ಎಕ್ಸ್ಎಲ್6' ಅತ್ಯುತ್ತಮವಾದ ಆಯ್ಕೆಯಾಗಲಿದೆ. ಬನ್ನಿ, ಈ ಎಂಪಿವಿಯ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

ಹ್ಯುಂಡೈ ವರ್ನಾ ಖರೀದಿಸುವ ಪ್ಲಾನ್ ಇದೆಯೇ? ಸ್ವಲ್ಪ ಕಾದರೆ ಫೇಸ್‌ಲಿಫ್ಟ

ಸೆಡಾನ್ ಕಾರು ವಿಭಾಗದಲ್ಲಿ ಜನಪ್ರಿಯತೆ ಪಡೆದುಕೊಂಡಿರುವ ಹ್ಯುಂಡೈ ವರ್ನಾ ಸದ್ಯ ಮಾರುಕ್ಟಟೆಯಲ್ಲಿ ಉತ್ತಮ ಮಾರಾಟ ಕಾಣುತ್ತಿದೆ. ಈ ಕಾರನ್ನು ಖರೀದಿಸಲು ಬಯಸುವವರು ಇನ್ನೆರಡು ತಿಂಗಳು ಕಾದರೆ ಫೇಸ್‌ಲಿಫ್ಟ್ ಬಿಡುಗಡೆಯಾಗಲಿದೆ. ಹುಂಡೈ ವೆರ್ನಾ ಫೇಸ್‌ಲಿಫ್ಟ್ ಮೇ 2026 ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಕೆಲವು ಮೂಲಗಳು ಇದನ್ನು ಮಾರ್ಚ್ 15, 2026 ರ ಸುಮಾರಿಗೆ ಬಿಡುಗಡೆ ಮಾಡಬಹುದು ಎಂದು ಸೂಚಿಸಿದರೆ, ಇನ್ನು ಕೆಲವು ಮೂಲಗಳು ಬಿಡುಗಡೆ ದಿನಾಂಕವನ್ನು 29 ಮೇ 2026 ಎಂದು ಸೂಚಿಸುತ್ತಿವೆ. ಅಂದಹಾಗೆ ಈ ಹೊಸ ಕಾರಿನ ಇಂಟೀರಿಯರ್‌ನಲ್ಲಿ ಏನೆಲ್ಲಾ ಬದಲಾವಣೆ ಇರಲಿದೆ ನೋಡೋಣ.
Advertisement

ಲಿಥಿಯಂ ಐರನ್ ಫಾಸ್ಫೇಟ್ ಬ್ಯಾಟರಿ: EVಸ್ಕೂಟರ್‌ಗಳಿಗೆ ಇವು ಏಕೆ ಮುಖ್ಯ?

ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಖರೀದಿ ಹೆಚ್ಚಾದಂತೆ, ಸಂಭಾಷಣೆಯು "ಅದು ಎಷ್ಟು ದೂರ ಹೋಗಬಹುದು?" ಎಂದು ಕೇಳುವುದರಿಂದ "ಅದು ಎಷ್ಟು ಕಾಲ ಉಳಿಯುತ್ತದೆ?" ಎಂಬುದಕ್ಕೆ ಬದಲಾಗುತ್ತಿದೆ. ಈ ಪ್ರಶ್ನೆಯು ಇವಿ ಸ್ಕೂಟರ್ ಕುರಿತಾದರೂ ಅದರ ಹೃದಯಭಾಗದಲ್ಲಿರುವ ಪ್ರಮುಖ ಅಂಶವಾದ - ಬ್ಯಾಟರಿಗೆ ಅನ್ವಯಿಸುತ್ತದೆ. ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಲ್ಲಿ ಎರಡು ರೀತಿಯ ಬ್ಯಾಟರಿ ರಸಾಯನಶಾಸ್ತ್ರಗಳನ್ನು ಬಳಸಲಾಗುತ್ತದೆ: ನಿಕಲ್ ಮ್ಯಾಂಗನೀಸ್ ಕೋಬಾಲ್ಟ್ (NMC) ಮತ್ತು ಲಿಥಿಯಂ ಐರನ್ ಫಾಸ್ಫೇಟ್ (LFP). ಪ್ರತಿಯೊಂದೂ ತನ್ನದೇ ಆದ ಅನುಕೂಲಗಳು ಮತ್ತು ಅನಾನುಕೂಲಗಳನ್ನು ಹೊಂದಿದೆ.

ಕಳಪೆ ಗುಣಮಟ್ಟದ ಕಾರುಗಳು ಖರೀದಿಸಬೇಡಿ: ಯಾವುದೀ ಕಾರು? ಈಗ 5-ಸ್ಟಾರ್

ಈ ಹಿಂದೆ ಮಾರುತಿ ಸುಜುಕಿ ಗುಣಮಟ್ಟದ ಕಾರುಗಳನ್ನು ನೀಡುವಲ್ಲಿ ಟೀಕೆಗಳನ್ನು ಎದುರಿಸುತ್ತಿತ್ತು, ಸರಿಯಾದ ನಿರ್ಮಾಣ ಗುಣಮಟ್ಟವಿಲ್ಲದೆ ಅಪಘಾತವಾದಾಗ ಪ್ರಯಾಣಿಕರ ಜೀವಹಾನಿಗಳಾಗಿರುವ ಸಾಕಷ್ಟು ಉದಾಹರಣೆಗಳಿವೆ. ನೀವು ನೋಡಿರುವ ಫೋಟೋ ಕೂಡ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಕಾರಿನದ್ದಾಗಿದೆ. ಇಷ್ಟು ಕಳಪೆ ಗುಣಮಟ್ಟದ ಕಾರುಗಳನ್ನು ನೀಡುತ್ತದೆ ಎಂದು ಹಲವು ಟೀಕೆಗಳಿದ್ದರೂ, ಮಾರಾಟದಲ್ಲಿ ಇಂದಿಗೂ ಮಾರುತಿ ಸುಜುಕಿ ಕಾರುಗಳದ್ದೇ ನಂ.1 ಸ್ಥಾನ. ಇದಕ್ಕೆ ಕಾರಣ ಬಜೆಟ್ ಬೆಲೆಯಲ್ಲಿ ಅತ್ಯುತ್ತಮ ಫೀಚರ್ಸ್, ಹೆಚ್ಚಿನ ಮೈಲೇಜ್ ನೀಡುವ ಕಾರುಗಳನ್ನು ಮಾರಾಟ ಮಾಡುತ್ತದೆ, ಎಲ್ಲಕ್ಕಿಂತ ಮುಖ್ಯವಾಗಿ ಉತ್ತಮ ಸರ್ವಿಸ್‌ ನೆಟ್‌ವರ್ಕ್ ಹೊಂದಿದೆ.

ವಿಶ್ವಕಪ್ ನೋಡುವ ಅವಕಾಶ... ಕಿಯಾ ಖರೀದಿದಾರರಿಗೆ ಮಾತ್ರ

ಕಿಯಾ ಇಂಡಿಯಾ ವಿಶ್ವದ ಅತಿದೊಡ್ಡ ಫುಟ್‌ಬಾಲ್ ಆಚರಣೆಯನ್ನು ಭಾರತೀಯ ಗ್ರಾಹಕರಿಗೆ ಹತ್ತಿರ ತರುತ್ತಿದೆ. 'ಕಿಯಾ ವಾಕ್ ವಿತ್ ಚಾಂಪಿಯನ್ಸ್' ಮತ್ತು 'ಕಿಯಾ ಡ್ರೈವ್ ಟು FIFA ವರ್ಲ್ಡ್ ಕಪ್ 2026' ಎಂಬ ಎರಡು ವಿಶೇಷ ಉಪಕ್ರಮಗಳ ಮೂಲಕ - ಕಿಯಾ ವಾಹನ ಮಾಲೀಕತ್ವವನ್ನು ಫುಟ್‌ಬಾಲ್‌ನ ಭವ್ಯ ವೇದಿಕೆಗೆ ಒಂದು ದ್ವಾರವಾಗಿ ಪರಿವರ್ತಿಸುತ್ತಿದೆ. 10-14 ವರ್ಷ ವಯಸ್ಸಿನ ಇಬ್ಬರು ಮಕ್ಕಳು USA ನಲ್ಲಿ ನಡೆಯುವ ಫಿಫಾ ವಿಶ್ವಕಪ್ 2026 ಗ್ರೂಪ್ ಸ್ಟೇಜ್ ಪಂದ್ಯದಲ್ಲಿ ಅಧಿಕೃತ ಮ್ಯಾಚ್ ಬಾಲ್ ಕ್ಯಾರಿಯರ್‌ಗಳಾಗಿ ಪಿಚ್‌ಗೆ ಹೆಜ್ಜೆ ಹಾಕಲು ಅನುವು ಮಾಡಿಕೊಡುತ್ತಿರುವುದಾಗಿ ಕಿಯಾ ಇಂಡಿಯಾ ತಿಳಿಸಿದೆ.

ಬರೀ 3.59 ಲಕ್ಷ.. 200 Km ರೇಂಜ್, ಹೊಸ ಮಹೀಂದ್ರಾ ಉಡೋಗೆ 3 ಬದಲಿ..

ಮಹೀಂದ್ರಾ ಉಡೋ (Mahindra Udo) ಇ-ಆಟೋರಿಕ್ಷಾ ಗುರುವಾರ ಬಿಡುಗಡೆಗೊಂಡಿದೆ. ರೂ.3.59 ಲಕ್ಷ ಪರಿಚಯಾತ್ಮಕ ಬೆಲೆಯನ್ನು ಹೊಂದಿದೆ. ಇದು ಸೀಮಿತಾವಧಿಯ ಕೊಡುಗೆಯಾಗಿದೆ. ಈ ಎಲೆಕ್ಟ್ರಿಕ್ ಆಟೋರಿಕ್ಷಾ ಸಖತ್ ಬೋಲ್ಡ್ ಲುಕ್‌ನ್ನು ಪಡೆದಿದ್ದು, ನೋಡುಗರ ಕಣ್ಣು ಕುಕ್ಕುವಂತಿದೆ. 11.7 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿದೆ. ಭರ್ತಿ ಚಾರ್ಜ್‌ನಲ್ಲಿ 200 ಕಿಲೋಮೀಟರ್ ರೇಂಜ್ (ಮೈಲೇಜ್) ಕೊಡುತ್ತದೆ. 55 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ.
Advertisement

ಎರಡನೇ ವರ್ಷವೂ ರಾನ್ ಉತ್ಸವದಲ್ಲಿ ಮೈಲಿಗಲ್ಲು ಸ್ಥಾಪಿಸಿದ ಟಿವಿಎಸ್

ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಟಿವಿಎಸ್ ಮೋಟಾರ್, ಗುಜರಾತ್‌ನ ರಾನ್ ಉತ್ಸವದಲ್ಲಿ ಎರಡನೇ ವರ್ಷದ ಹೆಗ್ಗುರುತಾಗಿ, ಟಿವಿಎಸ್ ರಾನ್ ಆಫ್ ಕಚ್ ಅನ್ನು ಭೇಟಿ ನೀಡಲೇಬೇಕಾದ ಜಾಗತಿಕ ಉತ್ಸವವಾಗಿ ಮಾಡಿದೆ. ಕಳೆದ ವರ್ಷ ಉತ್ಸವದೊಂದಿಗೆ ತನ್ನ ಮೊದಲ ಸಂಭ್ರಮವನ್ನು ನಿರ್ಮಿಸುವ ಈ ಆವೃತ್ತಿಯು ಇಟಲಿ ಮತ್ತು ಮೆಕ್ಸಿಕೊದಂತಹ ದೇಶಗಳ ಸವಾರರು ಸೇರಿದಂತೆ 100 ಕ್ಕೂ ಹೆಚ್ಚು ಮೋಟಾರ್‌ಸೈಕಲ್ ಉತ್ಸಾಹಿಗಳನ್ನು ಕಂಡಿತ್ತು. ಈಗ ಭಾಗವಹಿಸುವಿಕೆಯ ಹೆಚ್ಚುತ್ತಿರುವ ಪ್ರಮಾಣವು ಮೋಟಾರ್‌ಸೈಕ್ಲಿಂಗ್ ನೇತೃತ್ವದ ಅನುಭವ ಪ್ರವಾಸೋದ್ಯಮ ತಾಣವಾಗಿ ರಾನ್ ಉತ್ಸವದ ವಿಕಸನವನ್ನು ಒತ್ತಿಹೇಳುತ್ತದೆ ಎಂದು ಟಿವಿಎಸ್ ಹೇಳಿದೆ.