TATA: ಸದ್ದಿಲ್ಲದೇ 1 ಲಕ್ಷ ಹೊಸ ಕಾರುಗಳ ಬೃಹತ್ ಆರ್ಡರ್ ಟಾಟಾ..

2025ರ ನವೆಂಬರ್‌ನಲ್ಲಿ ನೂತನ ಟಾಟಾ ಸಿಯೆರಾ (Tata Sierra) ಕಾರನ್ನು ಪರಿಚಯಿಸಲಾಗಿತು. ಇದೊಂದು ಎಸ್‌ಯುವಿಯಾಗಿದ್ದು, ನೋಡಲು ತುಂಬಾ ಚೆನ್ನಾಗಿದ್ದು, ಹಲವು ಹೊಸತನಗಳಿಗೂ ಸಾಕ್ಷಿಯಾಗಿದೆ. ದಿನದಿಂದ ದಿನಕ್ಕೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಖರೀದಿದಾರರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಮುಗಿಬಿದ್ದು ಕೊಂಡುಕೊಳ್ಳುತ್ತಿದ್ದಾರೆ. ಸದ್ಯ, ಇದೇ 'ಸಿಯೆರಾ'ದ ಬುಕ್ಕಿಂಗ್‌ನಲ್ಲಿ ಹೊಸ ಇತಿಹಾಸ ನಿರ್ಮಾಣಗೊಂಡಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಮಾರುಕಟ್ಟೆಗೆ ಹೊಸ ಸ್ಕೂಟರ್ ಲಗ್ಗೆ: 110 ಕಿ.ಮೀ ರೇಂಜ್!

ಕೈಗೆಟುಕುವ ಬೆಲೆ ಮತ್ತು ಆಧುನಿಕ ತಂತ್ರಜ್ಞಾನದ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪರಿಹರಿಸಲು, ಪ್ರಮುಖ ಎಲೆಕ್ಟ್ರಿಕ್ ವಾಹನ ಕಂಪನಿಗಳಲ್ಲಿ ಒಂದಾದ ಒಮೆಗಾ ಸೀಕಿ ಮೊಬಿಲಿಟಿ (OSM), ಹೊಸ ವೆಕ್ಸ್ಟ್ರಾ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮೊನ್ನೆಯಷ್ಟೆ ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಹೊಸ ವೆಕ್ಸ್ಟ್ರಾ ಸ್ಕೂಟರ್ ಗಂಟೆಗೆ 70 ಕಿಮೀ ಟಾಪ್ ಸ್ಪೀಡ್ ಹೋಗಬಲ್ಲ ಸಾಮರ್ಥ್ಯವನ್ನು ಹೊಂದಿದೆ, ಒಮ್ಮೆ ಚಾರ್ಜ್‌ ಮಾಡಿ 110 ಕಿ.ಮೀ.ಕಿಂತ ಹೆಚ್ಚಿನ ದೂರ ಓಡಿಸಬಹುದು ಎಂದು ಕಂಪನಿ ಭರವಸೆ ನೀಡಿದೆ.

Tata: ಅತ್ಯಂತ ಸುರಕ್ಷಿತ ಟಾಟಾ ಮೈಕ್ರೋ SUV ಬಿಡುಗಡೆಗೆ ಸಜ್ಜು

ಟಾಟಾ ಮೋಟಾರ್ಸ್ ಭಾರತೀಯ ಎಲೆಕ್ಟ್ರಿಕ್ ವಾಹನ ವಿಭಾಗದಲ್ಲಿ ಮುನ್ನುಗ್ಗುತ್ತಿದೆ, ಟಾಟಾ ಪಂಚ್, ನೆಕ್ಸಾನ್, ಕರ್ವ್, ಹ್ಯಾರಿಯರ್ ಇವಿನಂತಹ ಪ್ರಮುಖ ಮಾಡಲ್‌ಗಳೊಂದಿಗೆ ಭಾರತದಲ್ಲಿ ಉತ್ತಮ ಲಾಭ ಕಾಣುತ್ತಿದೆ. ಗ್ರಾಹಕರಲ್ಲಿ ಈ ಮಾಡಲ್‌ಗಳಿಗೆ ತುಂಬಾ ಬೇಡಿಕೆಯಿದ್ದು, ಇವಿ ವಿಭಾಗದಲ್ಲಿ ಟಾಟಾ ಮೋಟಾರ್ಸ್ ನಂ.1 ಸ್ಥಾನದಲ್ಲಿ ಮುಂದುವರಿಯುತ್ತಿದೆ. ಈಗ ಸಣ್ಣ ಎಲೆಕ್ಟ್ರಿಕ್ ಮೈಕ್ರೋ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ಪ್ರತಿಸ್ಪರ್ಧಿಗಳಿಂದ ಟಾಟಾ ಪಂಚ್ ಇವಿ ಕಾರಿಗೆ ಪೈಪೋಟಿ ಹೆಚ್ಚಾಗಿದ್ದು, ಈ ಕಾರನ್ನು ಹೊಸ ಅಪ್‌ಡೇಟ್‌ಗಳನ್ನು ನೀಡುವ ಮೂಲಕ ಪೈಪೋಟಿಯಲ್ಲಿ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಲು ಟಾಟಾ ಮೋಟಾರ್ಸ್ ಪ್ಲಾನ್ ಮಾಡಿದೆ.

TVS: ಮಧ್ಯಮ ವರ್ಗದವರಿಗೆ ಪರ್ಫೆಕ್ಟ್ ಬೈಕ್‌ಯಿದು... 1 ಲಕ್ಷ ರೂಪಾಯಿ!

ಟಿವಿಎಸ್ ಅಪಾಚೆ ಆರ್‌ಟಿಆರ್ 160 (TVS Apache RTR 160) ಜನಪ್ರಿಯ ಮೋಟಾರ್‌ಸೈಕಲ್ ಎಂದೇ ಹೆಸರುವಾಸಿಯಾಗಿದೆ. ಇದು ನೋಡಲು ತುಂಬಾ ಚೆನ್ನಾಗಿದ್ದು, ಮಧ್ಯಮ ವರ್ಗದ ಜನರಿಗೆ ಪರ್ಫೆಕ್ಟ್ ಆಗಿದೆ. ನೀವು ಹೊಚ್ಚ ಹೊಸ ಬೈಕ್‌ವೊಂದನ್ನು ಖರೀದಿಸಲು ಆಲೋಚಿಸಿದ್ದೀರಾ.. ಹಾಗಾದರೆ ಇದೇ 'ಅಪಾಚೆ ಆರ್‌ಟಿಆರ್ 160' ಹೆಚ್ಚು ಸೂಕ್ತವಾಗಲಿದೆ. ಬನ್ನಿ.. ಈ ಮೋಟಾರ್‌ಸೈಕಲ್‌ನ ಬೆಲೆ ಎಷ್ಟು, ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.
Advertisement

Mahindra: ಈ ರಾಜ್ಯದಲ್ಲಿ ಮಹೀಂದ್ರಾದಿಂದ ರೂ.15,000 ಕೋಟಿ ಹೂಡಿಕೆ..

ಮಹಾರಾಷ್ಟ್ರದ ಕೈಗಾರಿಕಾ ಕ್ಷೇತ್ರಕ್ಕೆ ಮಹೀಂದ್ರಾ & ಮಹೀಂದ್ರಾ (Mahindra & Mahindra) ದೊಡ್ಡ ಮಟ್ಟದಲ್ಲಿ ಕೊಡುಗೆ ನೀಡಲು ಮುಂದಾಗಿದೆ. ಮುಂದಿನ 10 ವರ್ಷಗಳಲ್ಲಿ ಸರಿ ಸುಮಾರು ರೂ.15,000 ಕೋಟಿ ಹೂಡಿಕೆ ಮಾಡುವುದಾಗಿ 'ಅಡ್ವಾಂಟೇಜ್ ವಿದರ್ಭ' ಕಾರ್ಯಕ್ರಮದಲ್ಲಿ ಘೋಷಣೆ ಮಾಡಿದೆ. ನಾಗಪುರದಲ್ಲಿ ಅತಿದೊಡ್ಡ ಆಟೋಮೊಬೈಲ್ ಹಾಗೂ ಟ್ರಾಕ್ಟರ್ ತಯಾರಿಕಾ ಘಟಕವನ್ನು ತೆರೆಯುವುದಾಗಿ ತಿಳಿಸಿದೆ.

60 Km ಮೈಲೇಜ್.. ರೂ.86,211.. ಹೊಸ 'ಹೋಂಡಾ ಶೈನ್ 125 ಲಿಮಿಟೆಡ್..

ಇತ್ತೀಚೆಗೆ ಬಹುನಿರೀಕ್ಷಿತ ಹೋಂಡಾ ಶೈನ್ 125 ಲಿಮಿಟೆಡ್ ಎಡಿಷನ್ (Honda Shine 125 Limited Edition) ಬೈಕ್‌ನ್ನು ಬಿಡುಗಡೆಗೊಳಿಸಲಾಗಿದೆ. ಇದು ರೂ.86,211 (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ತುಂಬಾ ಚೆನ್ನಾಗಿರುವ ವಿನ್ಯಾಸವನ್ನು ಒಳಗೊಂಡಿದ್ದು, ನೋಡುಗರ ಕಣ್ಣು ಕುಕ್ಕುವಂತಿದೆ. 'ಪರ್ಲ್ ಸೈರನ್ ಬ್ಲೂ' ಎಂಬ ಬಣ್ಣದೊಂದಿಗೂ ಲಭ್ಯವಿದೆ. 162 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಮತ್ತು 1,285 ಮಿ.ಮೀ ವೀಲ್‌ಬೇಸ್‌ನ್ನು ಪಡೆದಿದೆ. ಬರೋಬ್ಬರಿ 113 ಕೆಜಿ ತೂಕವಿದೆ.

Honda Dio: ಮೊನ್ನೆಯಷ್ಟೆ ಬಿಡುಗಡೆ... ಸ್ಪೋರ್ಟಿ ಡಿಯೋ 125 X

ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿರುವ ಹೋಂಡಾ, ಮೊನ್ನೆಯಷ್ಟೆ ತನ್ನ ಹೊಸ ಹೋಂಡಾ ಡಿಯೋ 125 ಎಕ್ಸ್-ಎಡಿಷನ್ (Honda Dio 125 X Edition) ಸ್ಕೂಟರ್‌ನ್ನು ರೂ. 87,733 (ಎಕ್ಸ್-ಶೋರೂಂ) ಬೆಲೆಯಲ್ಲಿ ಬಿಡುಗಡೆ ಮಾಡಿದೆ. ಕಂಪನಿಯ ಪ್ರಕಾರ ಫೀಚರ್ಸ್ ವಿಷಯದಲ್ಲಿ X ಆವೃತ್ತಿಯು ಸಾಮಾನ್ಯ ಡಿಯೋದಂತೆಯೇ ಇರುತ್ತದೆ. ಹೋಂಡಾ ಡಿಯೋ 125ನ ಪ್ರಮುಖ ಗುಣಲಕ್ಷಣಗಳನ್ನು ಬದಲಾಯಿಸದೆಯೇ ಹೊಸ ಲುಕ್ ಹಾಗೂ ಹೊಸ ಗ್ರಾಫಿಕ್ಸ್ ನೀಡಿ ಸ್ಪೋರ್ಟಿಯಾಗಿ ಡಿಸೈನ್ ಮಾಡಲಾಗಿದೆ ಎಂದು ಹೋಂಡಾ ತಿಳಿಸಿದೆ.

Maruti: ಬಡವರ ಕಾರಿದು.. 3.70 ಲಕ್ಷ ರೂಪಾಯಿ.. ಬೈಕ್‌ನಂತೆ 34 Km..

ಮಾರುತಿ ಸುಜುಕಿ ಆಲ್ಟೊ ಕೆ10 (Maruti Suzuki Alto K10) ಪ್ರಮಖ ಹ್ಯಾಚ್‌ಬ್ಯಾಕ್ ಆಗಿ ಹೊರಹೊಮ್ಮಿದೆ. ಈ ಕಾರಿಗೆ ದಿನದಿಂದ ದಿನಕ್ಕೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಗ್ರಾಹಕರು ಸಹ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಕಳೆದ ತಿಂಗಳು (ಜನವರಿ - 2026) ಭಾರೀ ಸಂಖ್ಯೆಯಲ್ಲಿಯೇ ಮಾರಾಟಗೊಂಡಿದೆ. ಒಟ್ಟು 12,314 ಯುನಿಟ್‌ಗಳನ್ನು ಗ್ರಾಹಕರಿಗೆ ವಿತರಿಸಲಾಗಿದೆ. 2025ರ ಇದೇ ಅವಧಿಯಲ್ಲಿ 11,352 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿಅಂಶವನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 8.47% ಪ್ರಗತಿಯಾಗಿದೆ.
Advertisement

ಟಾಟಾ ಕರ್ವ್ ವಿರುದ್ಧವಾಗಿ ಈ ಕಾರು ಸಿಗುತ್ತೆ.. 8.15 ಲಕ್ಷ ರೂಪಾಯಿ..

ಟಾಟಾ ಕರ್ವ್ (Tata Curvv) ಜನಪ್ರಿಯ ಕೂಪೆ ಎಸ್‌ಯುವಿಯಾಗಿದೆ. ರೂ.9.66 ಲಕ್ಷದಿಂದ ರೂ.18.85 ಲಕ್ಷ ಬೆಲೆಯನ್ನು ಹೊಂದಿದೆ. ಇದಕ್ಕೆ ಸಿಟ್ರನ್ ಬಸಾಲ್ಟ್ ಎಕ್ಸ್ (Citroen Basalt X) ನೇರವಾದ ಎದುರಾಳಿಯಾಗಿದೆ. ಉತ್ತಮ ಇಂಧನ ದಕ್ಷತೆಗೂ ಹೆಸರುವಾಸಿಯಾಗಿದೆ. ನೀವು ಹೊಚ್ಚ ಹೊಸ ಕಾರೊಂದನ್ನು ಖರೀದಿಸಲು ಪ್ಲ್ಯಾನ್ ಮಾಡಿದ್ದೀರಾ.. ಹಾಗಾದರೆ, ಇದೇ 'ಬಸಾಲ್ಟ್ ಎಕ್ಸ್' ಬೆಸ್ಟ್ ಚಾಯ್ಸ್ ಆಗಲಿದೆ. ಬನ್ನಿ.. ಈ ನೂತನ ಎಸ್‌ಯುವಿಯ ಬೆಲೆ ಎಷ್ಟು, ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

Bajaj: ಕಪ್ ಗೆದ್ದು 'ಚೇತಕ್' ಮನೆಗೆ ಕೊಂಡೊಯ್ದ T20 RCB ಸಾಧಕಿ ಸಾಧಕಿ

ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಬಜಾಜ್ (Bajaj) ಆಟೋ ಲಿಮಿಟೆಡ್, ಈ ವರ್ಷದ ಮಹಿಳಾ ಟಿ20 ಲೀಗ್‌ನ ಚಾಂಪಿಯನ್‌ಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಮಹಿಳಾ ತಂಡವನ್ನು ಅಭಿನಂದಿಸಿದೆ. ಸೀಸನ್ ಉದ್ದಕ್ಕೂ ಅವರ ಅತ್ಯುತ್ತಮ ಪ್ರದರ್ಶನ ಮತ್ತು ಹೋರಾಟದ ಮನೋಭಾವವನ್ನು ಗುರುತಿಸಿ ಪ್ರಶಸ್ತಿ ವಿಜೇತ ತಂಡದ ಪ್ರತಿಯೊಬ್ಬ ಸದಸ್ಯರಿಗೂ ಹೊಸ ಚೇತಕ್ ಸಿ25 (Chetak C25) ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಉಡುಗೊರೆಯಾಗಿ ನೀಡುವುದಾಗಿ ಘೋಷಿಸಿದೆ. "2026 ರ ಐತಿಹಾಸಿಕ ವಿಜಯಕ್ಕಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳೆಯರಿಗೆ ಅಭಿನಂದನೆಗಳು. ಈ ಪಾಲುದಾರಿಕೆಯು ನಮ್ಮ ಘನ ಅಡಿಪಾಯವನ್ನು ಹೊಸ ಪೀಳಿಗೆಯ ಮಹತ್ವಾಕಾಂಕ್ಷೆಯೊಂದಿಗೆ ಸಂಯೋಜಿಸುತ್ತದೆ. ಅವರ ಪ್ರಾಬಲ್ಯವನ್ನು ಆಚರಿಸಲು, ನಾವು RCB ಮಹಿಳಾ T20 ಆಟಗಾರ್ತಿಯರಲ್ಲಿ ಪ್ರತಿಯೊಬ್ಬರಿಗೂ ಹೊಸ ಚೇತಕ್ C25 ಸ್ಕೂಟರ್ ಉಡುಗೊರೆಯಾಗಿ ನೀಡುತ್ತಿದ್ದೇವೆ ಎಂದು ಬಜಾಜ್ ಮಾರ್ಕೆಟಿಂಗ್ ಅಧ್ಯಕ್ಷ ಸುಮೀತ್ ನಾರಂಗ್ ಹೇಳಿದರು.

ಹೊಸ ಹೋಂಡಾ ಶೈನ್ vs ಹೀರೋ ಸೂಪರ್ ಸ್ಪ್ಲೆಂಡರ್: ಅಗ್ಗದ ಬೈಕ್‌ಗಳಿವು..

ಇತ್ತೀಚೆಗೆ ಹೊಸ ಹೋಂಡಾ ಶೈನ್ 125 ಲಿಮಿಟೆಡ್ ಎಡಿಷನ್ (Honda Shine 125 Limited Edition) ಮೋಟಾರ್‌ಸೈಕಲ್‌ನ್ನು ಮಾರಾಟಕ್ಕೆ ತರಲಾಗಿತ್ತು. ಇದಕ್ಕೆ ಹೀರೋ ಸೂಪರ್ ಸ್ಪ್ಲೆಂಡರ್ ಎಕ್ಸ್‌ಟೆಕ್ (Hero Super Splendor XTEC) ಪ್ರಬಲವಾದ ಪ್ರತಿಸ್ಪರ್ಧಿಯಾಗಿದ್ದು, ಯುವ ಗ್ರಾಹಕರಿಗೆ ಹೇಳಿ ಮಾಡಿಸಿದಂತಿವೆ. ದಿನಬಳಕೆಗೂ ಹೆಸರು ಸೂಕ್ತವಾಗಿವೆ. ಕಡಿಮೆ ನಿರ್ವಹಣಾ ವೆಚ್ಚ ಹೊಂದಿದ್ದು, ಉತ್ತಮ ಇಂಧನ ದಕ್ಷತೆಗೂ ಹೆಸರುವಾಸಿಯಾಗಿವೆ. ನಾವಿಲ್ಲಿ ಇವೆರೆಡು ಬೈಕ್‌ಗಳ ಬೆಲೆ, ಕಾರ್ಯಕ್ಷಮತೆ ಹಾಗೂ ವೈಶಿಷ್ಟ್ಯಗಳ ಕುರಿತು ಹೋಲಿಕೆ ಮಾಡಿದ್ದೇವೆ. ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

Tata: 421 ಕಿ.ಮೀ ರೇಂಜ್! ಅತಿ ಶೀಘ್ರದಲ್ಲೇ ಹೊಸ ಟಾಟಾ ಕಾರು..

'ಟಾಟಾ ಪಂಚ್ ಇವಿ' ಜನಪ್ರಿಯ ಎಲೆಕ್ಟ್ರಿಕ್ ಎಸ್‌ಯುವಿಯಾಗಿದೆ. ಈ ಕಾರಿಗೆ ಭಾರೀ ಬೇಡಿಕೆಯಿದ್ದು, ದೇಶೀಯ ಮಾರುಕಟ್ಟೆಯಲ್ಲಿ 2024ರ ಜನವರಿ 17ರಂದು ಮೊದಲ ಬಾರಿಗೆ ಬಿಡುಗಡೆಗೊಳಿಸಲಾಗಿತ್ತು. ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಸದ್ಯ, ಇದೇ ಎಸ್‌ಯುವಿಯನ್ನು ಹೊಸ ರೂಪದಲ್ಲಿ ಮಾರಾಟಕ್ಕೆ ತರಲು ಕಂಪನಿಯು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಎಲ್ಲವು ಅಂದುಕೊಂಡಂತೆ ನಡೆದರೆ, ಫೆಬ್ರವರಿ 20ಕ್ಕೆ ನೂತನ 'ಪಂಚ್ ಇವಿ ಫೇಸ್‌ಲಿಫ್ಟ್'ನ್ನು ಪರಿಚಯಿಸಲಾಗುತ್ತದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
Advertisement

ಏಷ್ಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ಪ್ರವೇಶಿಸಿದೆ ಭಾರತದ ಮೊದಲ EV

ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿರುವ 'ಗ್ರೀವ್ಸ್ ಎಲೆಕ್ಟ್ರಿಕ್ ಮೊಬಿಲಿಟಿ'ಯನ್ನು ಪ್ರತಿಷ್ಠಿತ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಗುರುತಿಸಿದ್ದು, ತಮಿಳುನಾಡಿನ ಕೊಲ್ಲಿ ಬೆಟ್ಟಗಳನ್ನು ಯಶಸ್ವಿಯಾಗಿ ಏರಿದ ಮೊದಲ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಬ್ರಾಂಡ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಸಾಧನೆಯಲ್ಲಿ ಕಂಪನಿಯ ಆಂಪಿಯರ್ ನೆಕ್ಸಸ್ ಸ್ಕೂಟರ್ ಬಳಸಲಾಗಿದೆ, ದಕ್ಷಿಣ ಭಾರತದ ಅತ್ಯಂತ ಬೇಡಿಕೆಯ ಮಾರ್ಗಗಳಲ್ಲಿ ಒಂದೆಂದು ಪರಿಗಣಿಸಲಾದ ಕೊಲ್ಲಿ ಬೆಟ್ಟಗಳು ಹತ್ತುವಾಗ 70 ಹೇರ್‌ಪಿನ್ ತಿರುವು (70 hairpin bends)ಗಳನ್ನು ಹೊಂದಿದ್ದು, ಯಾವುದೇ ಡ್ರೈವ್ ಅನ್ನು ಸಹಿಷ್ಣುತೆಯ ಪರೀಕ್ಷೆಯನ್ನಾಗಿ ಮಾಡುತ್ತದೆ.

ಬರೀ 92,000 ರೂಪಾಯಿ.. ಹೊಸ ಸುಜುಕಿ ಆಕ್ಸೆಸ್ ABSಗೆ 3 ಪರ್ಯಾಯ..

ಇತ್ತೀಚೆಗೆ ಹೊಸ ಸುಜುಕಿ ಆಕ್ಸೆಸ್ 125 ಎಬಿಎಸ್ (Suzuki Access 125 ABS) ಸ್ಕೂಟರ್‌ನ್ನು ಬಿಡುಗಡೆಗೊಳಿಸಲಾಯಿತು. ಇದು ರೂ.92,328 ರಿಂದ ರೂ.93,378 (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ರೈಡ್ ಕನೆಕ್ಟ್ ಎಬಿಎಸ್ ಎಡಿಷನ್ & ರೈಡ್ ಕನೆಕ್ಟ್ ಟಿಎಫ್‌ಟಿ ಎಬಿಎಸ್ ಎಡಿಷನ್ ಎಂಬ ರೂಪಾಂತರಗಳೊಂದಿಗೂ ಸಿಗುತ್ತದೆ. ಅತ್ಯುತ್ತಮವಾದ ವಿನ್ಯಾಸವನ್ನು ಒಳಗೊಂಡಿದೆ. ಮೆಟಾಲಿಕ್ ಮ್ಯಾಟ್ ಬ್ಲ್ಯಾಕ್, ಮೆಟಾಲಿಕ್ ಮ್ಯಾಟ್ ಸ್ಟೆಲ್ಲರ್ ಬ್ಲೂ, ಪರ್ಲ್ ಗ್ರೇಸ್ ವೈಟ್ ಮತ್ತು ಪರ್ಲ್ ಶೈನಿ ಬೀಜ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ. 160 ಮಿ.ಮೀ ಗ್ರೌಂಡ್ ಕ್ಲಿಯರೆನ್ ಹಾಗೂ 1,260 ಮಿ.ಮೀ ವೀಲ್‌ಬೇಸ್‌ನ್ನು ಹೊಂದಿದೆ.

EV ವಿಭಾಗಕ್ಕೆ ದೈತ್ಯ ಬ್ರ್ಯಾಂಡ್‌ಗಳ ಎಂಟ್ರಿ... ಯಮಹಾ VS ಸುಜುಕಿ ಇವಿ

ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ವಿಭಾಗವು ವೇಗವಾಗಿ ಬೆಳೆಯುತ್ತಿದೆ, ಹೊಸ ಸ್ಟಾರ್ಟ್‌ಅಪ್‌ಗಳ ಜೊತೆಗೆ ಪ್ರಮುಖ ಬ್ರ್ಯಾಂಡ್‌ಗಳು ಕೂಡ ಹೊಸ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಬಿಡುಗಡೆ ಮಾಡುತ್ತಿವೆ. ಯಮಹಾ ಕಂಪನಿ ಕೂಡ ಭಾರತದಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ, ಇದನ್ನು EC-06 ಎಂದು ಕರೆಯಲಾಗುತ್ತದೆ. ಹಾಗೆಯೇ ಸುಜುಕಿ ಕೂಡ ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡುವ ಮೂಲಕ ಇವಿ ಕ್ಷೇತ್ರಕ್ಕೆ ಎಂಟ್ರಿಕೊಟ್ಟಿದೆ. ಹಾಗಾದ್ರೆ ಯಮಹಾ ಹಾಗೂ ಸುಜುಕಿ ಸ್ಕೂಟರ್‌ಗಳಲ್ಲಿ ಯಾವುದು ಹೇಗಿದೆ ಎಂಬುದನ್ನು ತಿಳಿಯಲು ಇಲ್ಲಿ ಹೋಲಿಕೆ ಮಾಡಿದ್ದೇವೆ.

Tata: ಟಾಟಾದ ಗತ್ತು ಹೆಚ್ಚಿಸಿದ ಕಾರಿದು..

2025ರ ನವೆಂಬರ್‌ನಲ್ಲಿ ಹೊಚ್ಚ ಹೊಸ ಟಾಟಾ ಸಿಯೆರಾ (Tata Sierra) ಎಸ್‌ಯುವಿಯನ್ನು ಮಾರಾಟಕ್ಕೆ ತರಲಾಗಿತ್ತು. ಈ ಕಾರಿಗೆ ಫುಲ್ ಡಿಮ್ಯಾಂಡ್ ಇದ್ದು, ಗ್ರಾಹಕರು ಕೂಡ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಈ 2026ರ ಜನವರಿಯಲ್ಲಿಯೂ ಭಾರೀ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಒಟ್ಟು 7,003 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಿಸಲಾಗಿದೆ. ಈ ಅಂಕಿಸಂಖ್ಯೆಯನ್ನು ಲೆಕ್ಕಹಾಕಿದಾಗ ದಿನವೊಂದಕ್ಕೆ 225 ಕಾರುಗಳನ್ನು ಯಶಸ್ವಿಯಾಗಿ ಮಾರಾಟ ಮಾಡಲಾಗಿದೆ.
Advertisement

ಭರ್ಜರಿ ಆಫರ್ ಬಾಚಿಕೊಂಡ ಕ್ರಿಕೆಟರ್ ಹಾರ್ದಿಕ್ ಪಾಂಡ್ಯ

ಭಾರತದ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಬ್ರ್ಯಾಂಡ್ ಆಗಿರುವ 'ರಿವೋಲ್ಟ್ ಮೋಟಾರ್ಸ್' (Revolt Motors), ಭಾರತೀಯ ಕ್ರಿಕೆಟರ್ ಹಾರ್ದಿಕ್ ಪಾಂಡ್ಯ (hardik Pandya) ಅವರನ್ನು ತನ್ನ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡಿಕೊಂಡಿರುವುದಾಗಿ ಘೋಷಿಸಿದೆ. ಬಹು ಮಾಡಲ್‌ಗಳು, ರಾಷ್ಟ್ರವ್ಯಾಪಿ ಹೆಜ್ಜೆಗುರುತು, ದೃಢವಾದ ಸೇವಾ ಮೂಲಸೌಕರ್ಯ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ವೈವಿಧ್ಯಮಯ ವಾಹನಗಳ ಮೂಲಕ ರಿವೋಲ್ಟ್ ಮೋಟಾರ್ಸ್ ತನ್ನ ಬೆಳವಣಿಗೆಗೆ ಬಲವಾದ ಅಡಿಪಾಯವನ್ನು ನಿರ್ಮಿಸಿರುವಲ್ಲಿ ಈ ಸಹಯೋಗವು ಒಂದು ಪ್ರಮುಖ ಕ್ಷಣವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Toyota: ಗಟ್ಟಿಮುಟ್ಟಾದ ಕಾರಿದು.. 28 ಕಿ.ಮೀ ಮೈಲೇಜ್, 10.99 ಲಕ್ಷ..

ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ (Toyota Urban Cruiser Hyryder) ಜನಮೆಚ್ಚಿದ ಎಸ್‌ಯುವಿ ಎಂದೇ ಹೆಸರುವಾಸಿಯಾಗಿದೆ. ಈ ಕಾರಿಗೆ ದಿನದಿಂದ ದಿನಕ್ಕೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಕಳೆದ ತಿಂಗಳು (ಜನವರಿ - 2026) 'ಅರ್ಬನ್ ಕ್ರೂಸರ್ ಹೈರೈಡರ್' ಭಾರೀ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಒಟ್ಟು 9,156 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಿಸಲಾಗಿದೆ. 2025ರ ಇದೇ ಅವಧಿಯಲ್ಲಿ 4,941 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿಅಂಶವನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 85% ಬೆಳವಣಿಗೆಯಾಗಿದೆ.

Hyundai: ಸದ್ದಿಲ್ಲದೆ ದರ ಇಳಿಕೆ: ತೀರಾ ಅಗ್ಗವಾಗಿ i20 ಬಿಡುಗಡೆ

ಪ್ರಮುಖ ಕಾರು ತಯಾರಕ ಕಂಪನಿಯಾಗಿರುವ ಹುಂಡೈ, ತನ್ನ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಗಿರುವ ಹುಂಡೈ i20 (Hyundai i20) ಕಾರಿನ ಆಯ್ದ ವೇರಿಯೆಂಟ್‌ಗಳನ್ನು ಸುಲಭವಾಗಿ ಖರೀದಿಸಬಹುದಾದ ಹೊಸ ಬೆಲೆಗಳನ್ನು ಪ್ರಕಟಿಸಿದೆ. ಹುಂಡೈ ಕಾರು ಖರೀದಿದಾರರು ಭಾರತದಲ್ಲಿ ಒಂದು ದಶಕಕ್ಕೂ ಹೆಚ್ಚು ಕಾಲ i20 ಕಾರಿನ ಉತ್ತಮ ಪರ್ಫಾಮೆನ್ಸ್, ಸುಧಾರಿತ ತಂತ್ರಜ್ಞಾನ ಮತ್ತು ಪ್ರೀಮಿಯಂ ಸ್ಟೈಲಿಂಗ್ ಅನ್ನು ಅನುಭವಿಸಿದ್ದಾರೆ. ಈ ಕಾರಿನ ಮೇಲೆ ಅವರಿಗಿರುವ ನಂಬಿಕೆ, ವಿಶ್ವಾಸಾರ್ಹತೆಯಿಂದಾಗಿ i20 ಉತ್ತಮ ಬೇಡಿಕೆಯೊಂದಿಗೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದ್ದು, ಈಗ ಇನ್ನೂ ಸುಲಭವಾಗಿ ಖರೀದಿಸುವಂತೆ ಮಾಡಿದ್ದೇವೆ ಎಂದು ಹ್ಯುಂಡೈ ಹೇಳಿದೆ.

ಸ್ಪ್ಲೆಂಡರ್‌ ವಿರುದ್ಧ ನೂತನ ಹೋಂಡಾ ಬೈಕ್ ಮಾರಾಟಕ್ಕೆ..

ಈಚೆಗೆ ನೂತನ ಹೋಂಡಾ ಶೈನ್ 125 ಲಿಮಿಟೆಡ್ ಎಡಿಷನ್ (Honda Shine 125 Limited Edition) ಮೋಟಾರ್‌ಸೈಕಲ್‌ನ್ನು ಬಿಡುಗಡೆಗೊಳಿಸಲಾಗಿತು. ಇದು ಸಖತ್ ಸ್ಟೈಲಿಶ್ ಆಗಿದ್ದು, ಜೆನ್ ಜಿಗಳಿಗಾಗಿಯೇ ತಯಾರಿಸಿದ ರೀತಿಯಲ್ಲಿದೆ. ನೀವು ಹೊಚ್ಚ ಹೊಸ ಬೈಕ್‌ವೊಂದನ್ನು ಖರೀದಿಸಲು ಆಲೋಚಿಸಿದ್ದೀರಾ.. ಹಾಗಾದರೆ ಇದೇ 'ಶೈನ್ 125 ಲಿಮಿಟೆಡ್ ಎಡಿಷನ್' ಬೆಸ್ಟ್ ಚಾಯ್ಸ್ ಆಗಲಿದೆ. ಬನ್ನಿ.. ಈ ಮೋಟಾರ್‌ಸೈಕಲ್‌ನ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.
Advertisement

TVS: ಬಡವರು ಹಣ ಗಳಿಸಿಲು ಬೈಕ್ ಬೆಲೆಯಲ್ಲಿ ಕಾರ್ಗೋ ವಾಹನ ಬಿಡುಗಡೆ

ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಉತ್ಪಾದನೆಯಲ್ಲಿ ಜಾಗತಿಕವಾಗಿ ಹೆಸರು ಮಾಡಿರುವ ಭಾರತದ ಟಿವಿಎಸ್ ಮೋಟಾರ್ (TVS Motor) ಕಂಪನಿ, ಇಂದು ಟಿವಿಎಸ್ ಕಿಂಗ್ ಕಾರ್ಗೋ ಎಚ್‌ಡಿ ಸಿಎನ್‌ಜಿ (TVS King Cargo HD CNG) ತ್ರಿ-ಚಕ್ರ ವಾಣಿಜ್ಯ ವಾಹನವನ್ನು ಬಿಡುಗಡೆ ಮಾಡಿದೆ. ಈ ವಾಹನವು ದೆಹಲಿ NCR, ಹರಿಯಾಣ, ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ, ಕರ್ನಾಟಕ ಮತ್ತು ಉತ್ತರ ಪ್ರದೇಶಗಳಲ್ಲಿ ಹಂತ ಹಂತವಾಗಿ ಬಿಡುಗಡೆಯಾಗಲಿದೆ. ಟಿವಿಎಸ್ ಕಿಂಗ್ ಕಾರ್ಗೋ HD CNG ರೂ. 2,70,648 (ಎಕ್ಸ್-ಶೋರೂಂ) ಆರಂಭಿಕ ಬೆಲೆಯಲ್ಲಿ ಲಭ್ಯವಿದೆ.

ಬೈಕ್‌ನಂತೆ 34 Km ಮೈಲೇಜ್.. 4.99 ಲಕ್ಷ ರೂಪಾಯಿ, ಈ ಜನಪ್ರಿಯ..

ಮಾರುತಿ ಸುಜುಕಿ ವ್ಯಾಗನ್ಆರ್ (Maruti Suzuki WagonR) ಪ್ರಖ್ಯಾತ ಹ್ಯಾಚ್‌ಬ್ಯಾಕ್ ಎಂದೇ ಹೆಸರುವಾಸಿಯಾಗಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಆದರೂ ಈ 2026ರ ಜನವರಿಯಲ್ಲಿ 'ವ್ಯಾಗನ್ಆರ್' ಮಾರಾಟವು ಇಳಿಮುಖವಾಗಿದೆ. ಒಟ್ಟು 15,118 ಯುನಿಟ್‌ಗಳನ್ನು ವಿತರಿಸಲಾಗಿದೆ. 2025ರ ಇದೇ ಅವಧಿಯಲ್ಲಿ 24,078 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿಸಂಖ್ಯೆಯಲ್ಲಿ ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ -37% ಕುಸಿತವಾಗಿದೆ.

ಅಗ್ಗದ ಸ್ಟೈಲಿಷ್ ಸ್ಕೂಟರ್ ಬಿಡುಗಡೆ: ರಿವರ್ಸ್ ಗೇರ್ ಇದೆ

ಪ್ರಮುಖ ಎಲೆಕ್ಟ್ರಿಕ್ ವಾಹನ ಕಂಪನಿಗಳಲ್ಲಿ ಒಂದಾದ ಒಮೆಗಾ ಸೀಕಿ ಮೊಬಿಲಿಟಿ (OSM), ಇಂದು ತನ್ನ ಮೊದಲ ಹೈ-ಸ್ಪೀಡ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನವಾದ 'ವೆಕ್ಸ್ಟ್ರಾ' (OSM Vextra) ಸ್ಕೂಟರ್‌ನ್ನು ರೂ.99,900 ಬೆಲೆಯಲ್ಲಿ ಬಿಡುಗಡೆ ಮಾಡಿದೆ. ದೈನಂದಿನ ಪ್ರಯಾಣ ಮತ್ತು ವೃತ್ತಿಪರ ಬಳಕೆಗಾಗಿ ಹೈ ಪರ್ಫಾಮೆನ್ಸ್, ಕೈಗೆಟುಕುವ ಬೆಲೆ ಮತ್ತು ಆಧುನಿಕ ತಂತ್ರಜ್ಞಾನದ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪರಿಹರಿಸಲು OSM ವೆಕ್ಸ್ಟ್ರಾವನ್ನು ಪರಿಚಯಿಸಿದೆ. ಈ ಸ್ಕೂಟರ್ ಭಾರತದಲ್ಲಿ ಉತ್ತಮ ಪ್ರತಿಕ್ರಿಯೆ ಪಡೆಯಲಿದೆ ಎಂದು ಕಂಪನಿ ವಿಶ್ವಾಸ ವ್ಯಕ್ತಪಡಿಸಿದೆ.

TATA: ಹೊಸ ಟಾಟಾ ಎಸ್‌ಯುವಿ ಅಬ್ಬರಕ್ಕೆ ನಡುಗಿದ ಎದುರಾಳಿಗಳು..

ಕಳೆದ ವರ್ಷದ ನವೆಂಬರ್‌ನಲ್ಲಿ ನೂತನ ಟಾಟಾ ಸಿಯೆರಾ (Tata Sierra) ಎಸ್‌ಯುವಿಯನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಲಾಗಿತ್ತು. ಇದು ನೋಡಲು ತುಂಬಾ ಚೆನ್ನಾಗಿದ್ದು, ನಾನಾ ಬಗೆಯ ಹೊಸತನಗಳಿಗೂ ಸಾಕ್ಷಿಯಾಗಿದೆ. ಈ ಕಾರು ಬುಕ್ಕಿಂಗ್‌ನಲ್ಲೂ ಅಬ್ಬರಿಸಿತ್ತು. ಡಿಸೆಂಬರ್ 16ರಂದು ಆರ್ಡರ್ ತೆಗೆದುಕೊಳ್ಳುವ ಕಾರ್ಯಕ್ಕೂ ಕಂಪನಿಯು ಚಾಲನೆ ನೀಡಿತ್ತು. ಕೇವಲ 24 ಗಂಟೆಗಳಲ್ಲಿ 70,000ಕ್ಕೂ ಅಧಿಕ ಸಂಖ್ಯೆಯ ಗ್ರಾಹಕರು ಬುಕ್ ಮಾಡಿದ್ದರು.
Advertisement

Maruti: ಕಮ್ಮಿ ಬೆಲೆ, 5 ಮಂದಿಗೆ ಪರ್ಫೆಕ್ಟ್ ಎಸ್‌ಯುವಿ

ಮಾರುತಿ ಸುಜುಕಿ (Maruti Suzuki) 2026 ಜನವರಿ ತಿಂಗಳಲ್ಲಿ ಒಟ್ಟು 2.37 ಲಕ್ಷ ಯುನಿಟ್‌ ವಾಹನಗಳನ್ನು ಮಾರಾಟ ಮಾಡಿದೆ. ಈ ಮಾರಾಟದಲ್ಲಿ ಅತಿ ಹೆಚ್ಚಿನ ಪಾಲು ಸ್ವಿಫ್ಟ್, ಬ್ರೆಝಾ, ಡಿಜೈರ್ ಮತ್ತು ಬಲೆನೊದಂತಹ ಮಾಡಲ್‌ಗಳದ್ದಾಗಿದೆ. ಗ್ರಾಹಕರ ಹೆಚ್ಚಿನ ಬೇಡಿಕೆಯಿಂದ ಈ ಕಾರುಗಳು ದಾಖಲೆ ಮಟ್ಟದಲ್ಲಿ ಮಾರಾಟವಾಗಿವೆ. ಅದರಲ್ಲೂ ಮಾರುತಿ ಸುಜುಕಿ ಬ್ರೆಝಾ (Maruti Suzuki Brezza) ಬಗ್ಗೆ ಹೇಳಲೇಬೇಕು, ತನ್ನ ವಿಭಾಗದಲ್ಲಿ ಅತ್ಯಧಿಕ ಪೈಪೋಟಿ ಇದ್ದರೂ ಉತ್ತಮ ಮಾರಾಟವನ್ನು ಕಂಡಿದೆ. ಕಂಪನಿಯ ಮಾರಾಟ ಬೆಳವಣಿಗೆಗೆ ಪ್ರಮುಖ ಕೊಡುಗೆ ನೀಡಿದೆ. ಭಾರತದಲ್ಲಿ ಸಬ್ ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗವು ವೇಗವಾಗಿ ಬೆಳೆಯುತ್ತಿದೆ, ಇದರಲ್ಲಿ ಮುಖ್ಯವಾಗಿ ಬ್ರೆಝಾ ಹಲವು ವರ್ಷಗಳಿಂದ ಮಾರುಕಟ್ಟೆಯಲ್ಲಿ ಮುಂದುವರೆಯಲು ಪ್ರತಿಸ್ಟರ್ಧಿಗಳೊಂದಿಗೆ ಸೆಣಸಾಡುತ್ತಿದೆ. ಈ ಕಾರಿನ ಕಡಿಮೆ ಬೆಲೆ, ಉತ್ತಮ ಫೀಚರ್ಸ್, ಆಕರ್ಷಕ ಡಿಸೈನ್, ಐದು ಮಂದಿಗೆ ಆರಾಮ ಪ್ರಯಾಣ ಸೇರಿದಂತೆ ಅತ್ಯುತ್ತಮ ಮೈಲೇಜ್ ನೀಡುವುದರಿಂದ ಮಾರುತಿ ಬ್ರೆಝಾ ಸದ್ಯ ಭಾರತದಲ್ಲಿ ಹೆಚ್ಚಾಗಿ ಮಾರಾಟ ಕಾಣುತ್ತಿದೆ.