ಹೊಸ ಟಾಟಾ ಸಿಯೆರಾ ಬಗ್ಗೆ ಜನರಿಗಿವೆ ಹಲವು ಗೊಂದಲಗಳು

2025 ರ ಟಾಟಾ ಸಿಯೆರಾ ಸದ್ಯ ಭಾರತದಲ್ಲಿ ಭಾರೀ ಸದ್ದು ಮಾಡುತ್ತಿದೆ, ಗ್ರಾಹಕರಲ್ಲಿ ಈ ಎಸ್‌ಯುವಿ ಬಗ್ಗೆ ಹಲವು ಗೊಂದಲಗಳಿವೆ. ಡ್ರೈವ್ ಟ್ರೈನ್ ಆಯ್ಕೆಗಳು, ವೇರಿಯೆಂಟ್, ಡೆಲಿವರಿ ಮತ್ತು ಫೀಚರ್ಸ್ ಮುಖ್ಯಾಂಶಗಳ ಬಗ್ಗೆ ಜನರು ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಈ ಮಿಡ್ ಸೈಜ್ ಎಸ್‌ಯುವಿ ಅತಿ ವೇಗವಾಗಿ ಭಾರತದಲ್ಲಿ ಹೆಚ್ಚು ಚರ್ಚಿಸಲ್ಪಡುತ್ತಿದೆ, ಪ್ರೀಮಿಯಂ, ವೈಶಿಷ್ಟ್ಯ-ಸಮೃದ್ಧ ಒಳಾಂಗಣ ಮತ್ತು ವ್ಯಾಪಕ ಶ್ರೇಣಿಯ ಪವರ್ ಟ್ರೇನ್ ಆಯ್ಕೆಗಳ ಜೊತೆಗೆ ಸ್ಪೋರ್ಟಿ ಲುಕ್ ಹೊಂದಿರುವ ಹೊಸ ಟಾಟಾ ಸಿಯೆರಾ ಕಾರಿನ ಬಗ್ಗೆ ಜನರಿಗಿರುವ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

Maruti: 500 ಕಿ.ಮೀ ಓಡುತ್ತೆ.. ಬರುವ ಮಂಗಳವಾರದಂದೇ ಹೊಸ ಮಾರುತಿ..

ಹೊಚ್ಚ ಹೊಸ ಮಾರುತಿ ಸುಜುಕಿ ಇ-ವಿಟಾರಾ (Maruti Suzuki e Vitara) ಬಿಡುಗಡೆಗೆ ಕಾಲ ಕೂಡಿಬಂದಿದೆ. ಇದೇ ಡಿಸೆಂಬರ್ 2 ರಂದು (ಮಂಗಳವಾರ) ಈ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಅದ್ದೂರಿಯಾಗಿ ಮಾರಾಟಕ್ಕೆ ತರಲಾಗುತ್ತಿದೆ. ನೂತನ 'ಇ-ವಿಟಾರಾ' ಮೇಲೆ ಖರೀದಿದಾರರು ಕೂಡ ದೊಡ್ಡ ಮಟ್ಟದಲ್ಲಿ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಬನ್ನಿ, ಈ ಕಾರಿನ ಬೆಲೆ ಎಷ್ಟಿರಲಿದೆ.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

ನಿನ್ನೆಯಷ್ಟೆ ಬಿಡುಗಡೆಯಾದ ಮಹೀಂದ್ರಾ 7-ಸೀಟರ್ SUV ವಿಶೇಷತೆಗಳು

ಬಹುನಿರೀಕ್ಷಿತ ಮಹೀಂದ್ರಾ XEV 9S ಭಾರತದಲ್ಲಿ ನಿನ್ನೆಯಷ್ಟೆ (27 ನವೆಂಬರ್) ಬಿಡುಗಡೆಯಾಗಿದ್ದು, ಇದರ ಆರಂಭಿಕ ಬೆಲೆ ರೂ. 19.95 ಲಕ್ಷ (ಎಕ್ಸ್-ಶೋರೂಂ) ವಿದೆ. ಕಂಪನಿಯ ಪ್ರಕಾರ ಇದು ಭಾರತದ ಮೊದಲ ಅಧಿಕೃತ ಎಲೆಕ್ಟ್ರಿಕ್ 7-ಸೀಟರ್ SUV ಆಗಿದ್ದು, ಬುಕಿಂಗ್ ಜನವರಿ 14, 2026 ರಿಂದ ಪ್ರಾರಂಭವಾಗಲಿದೆ. ವಿತರಣೆಯು ಜನವರಿ 23, 2026 ರಿಂದ ಪ್ರಾರಂಭವಾಗಲಿದೆ. ವಿಸ್ತಾರವಾದ ಕ್ಯಾಬಿನ್, ಮೂರು-ಸಾಲಿನ ವಿನ್ಯಾಸ ಹಾಗೂ ನಿಶ್ಯಬ್ಧ ಡ್ರೈವ್ ಅನುಭವ ನೀಡುವ XEV 9S ಪ್ರಯಾಣಿಕರಿಗೆ ವಿಮಾನದಲ್ಲಿ ಪ್ರಯಾಣಿಸಿಂದತಹ ಅನುಭವ ನೀಡುತ್ತದೆ ಎಂದು ಕಂಪನಿ ಹೇಳಿದೆ.

Tata Sierra: 11.49 ಲಕ್ಷ.. 5-ಸೀಟರ್, ಹೊಸ ಟಾಟಾ ಸಿಯೆರಾಗೆ 3..

ಇತ್ತೀಚೆಗೆ ನೂತನ ಟಾಟಾ ಸಿಯೆರಾ (Tata Sierra) ಎಸ್‌ಯುವಿಯನ್ನು ಮಾರಾಟಕ್ಕೆ ತರಲಾಗಿದೆ. ಇದು ರೂ.11.49 ಲಕ್ಷ (ಎಕ್ಸ್-ಶೋರೂಂ) ಪರಿಚಯಾತ್ಮಕ ಬೆಲೆಯಲ್ಲಿ ಬಿಡುಗಡೆಗೊಂಡಿದೆ. ಅತ್ಯುತ್ತಮವಾದ ವಿನ್ಯಾಸವನ್ನು ಹೊಂದಿದೆ. ಅಂಡಮಾನ್ ಅಡ್ವೆಂಚರ್ (ಯೆಲ್ಲೋ), ಬೆಂಗಾಲ್ ರೂಜ್ (ರೆಡ್), ಕೂರ್ಗ್ ಕ್ಲೌಡ್ಸ್ (ಸಿಲ್ವರ್), ಮುನ್ನಾರ್ ಮಿಸ್ಟ್ (ಗ್ರೀನ್), ಮಿಂಟಲ್ ಗ್ರೇ ಹಾಗೂ ಪ್ರಿಸ್ಟೀನ್ ವೈಟ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ. 205 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2730 ಮಿ.ಮೀ ವೀಲ್‌ಬೇಸ್‌ನ್ನು ಪಡೆದಿದೆ.
Advertisement

BMW ಬ್ರಾಂಡ್‌ ಜೊತೆಗೂಡಿ ದಾಖಲೆ ನಿರ್ಮಿಸಿದ TVS

ಟಿವಿಎಸ್ ಮೋಟಾರ್ ಕಂಪನಿ (ಟಿವಿಎಸ್ಎಂ) ಮತ್ತು ಬಿಎಂಡಬ್ಲ್ಯು ಮೋಟರ್‌ರಾಡ್ ಇಂದು ತಮ್ಮ ದೀರ್ಘಕಾಲೀನ ಪಾಲುದಾರಿಕೆಯಡಿಯಲ್ಲಿ 2,00,000 ಯುನಿಟ್‌ ವಾಹನಗಳ ಉತ್ಪಾದನಾ ಮೈಲಿಗಲ್ಲನ್ನು ದಾಟಿರುವುದಾಗಿ ಘೋಷಿಸಿವೆ. ಈ ಮೈಲಿಗಲ್ಲು ಇಂಡೋ-ಜರ್ಮನ್ ಸಹಯೋಗದ ಯಶಸ್ಸನ್ನು ಎತ್ತಿ ತೋರಿಸುತ್ತದೆ, ಇದು 500 ಸಿಸಿ ಗಿಂತ ಕಡಿಮೆ ದ್ವಿಚಕ್ರ ವಾಹನ ವಿಭಾಗದಲ್ಲಿ ನಿರಂತರವಾಗಿ ಹೊಸ ಮಾನದಂಡಗಳನ್ನು ಸ್ಥಾಪಿಸಿದೆ. ವಿಶ್ವಾದ್ಯಂತ ಗ್ರಾಹಕರಿಗೆ ವಿಶ್ವ ದರ್ಜೆಯ ಮೋಟಾರ್‌ಸೈಕಲ್‌ಗಳನ್ನು ತಲುಪಿಸಿದೆ. 2013 ರಲ್ಲಿ ಕಾರ್ಯತಂತ್ರದ ಮೈತ್ರಿಕೂಟವನ್ನು ರಚಿಸಿದಾಗಿನಿಂದ, ಪಾಲುದಾರರು ಹಲವಾರು ಮೈಲಿಗಲ್ಲುಗಳನ್ನು ಸಾಧಿಸಿರುವುದಾಗಿ ಟಿವಿಎಸ್ - ಬಿಎಂಡಬ್ಲ್ಯು ಹೇಳಿವೆ.

ಮಹೀಂದ್ರಾ BE 6 ಫಾರ್ಮುಲಾ ಇ ಎಡಿಷನ್ ವಿಶೇಷತೆಗಳು

ಭಾರತದ ಜನಪ್ರಿಯ ವಾಹನ ತಯಾರಕ ಕಂಪನಿ ಮಹೀಂದ್ರಾ ತನ್ನ ಹೊಸ ಎಲೆಕ್ಟ್ರಿಕ್ ಎಸ್‌ಯುವಿ BE 6 ಅನ್ನು ಇದೀಗ ಫಾರ್ಮುಲಾ-ಇ ಎಡಿಷನ್‌ನಲ್ಲಿ ಬಿಡುಗಡೆ ಮಾಡಿದೆ. ಇದರ ಬೆಲೆಯು ರೂ.23.69 ಲಕ್ಷದಿಂದ ರೂ.24.49 ಲಕ್ಷ (ಎಕ್ಸ್-ಶೋರೂಂ) ವರೆಗೆ ಇದೆ, ಎಫ್ಇ2 (FE2) ಹಾಗೂ ಎಫ್ಇ3 (FE3) ಎಂಬ ವೇರಿಯೆಂಟ್‌ಗಳಲ್ಲಿ ಸಿಗುತ್ತದೆ. ಜನವರಿ 14, 2026 ರಿಂದ ಬುಕ್ಕಿಂಗ್ ತೆರೆಯಲಾಗುವುದು ಹಾಗೆಯೇ ಫೆಬ್ರವರಿ 14, 2026 ರಿಂದ ವಿತರಣೆಯನ್ನು ಪ್ರಾರಂಭಿಸಲಾಗುತ್ತದೆ ಎಂದು ಮಹೀಂದ್ರಾ ಕಂಪನಿ ತಿಳಿಸಿದೆ.

"ಗುಡ್ ನ್ಯೂಸ್: ಬೆಂಗಳೂರಿನ ಪೌರಕಾರ್ಮಿಕರು, ಸ್ವಚ್ಛತಾ ಸಿಬ್ಬಂದಿಗೆ ವಿಶ್ರಾಂತಿ ಕೊಠಡಿ ವ್ಯವಸ್ಥೆ''

ಬಿಬಿಎಂಪಿಯ ಹೊಸ ಉಪಕ್ರಮವು ಬೆಂಗಳೂರಿನಲ್ಲಿ ನೈರ್ಮಲ್ಯ ಕಾರ್ಮಿಕರಿಗೆ ವಿಶ್ರಾಂತಿ ಕೊಠಡಿಗಳನ್ನು ಒದಗಿಸುತ್ತಿದೆ, ಕೆಲಸದ ಸಮಯದಲ್ಲಿ ಅವರ ಆರೋಗ್ಯ ಮತ್ತು ಯೋಗಕ್ಷೇಮವನ್ನು ಖಚಿತಪಡಿಸುತ್ತದೆ.

ಚೀನಾ ಕಾರನ್ನು ಜನ ಮುಗಿಬಿದ್ದು ಖರೀದಿ: ಪ್ರಶಸ್ತಿ ಗೆದ್ದ ವಿಂಡ್ಸರ್

ಪ್ರಮುಖ ಕಾರು ತಯಾರಕ ಕಂಪನಿಯಾದ ಎಂಜಿ ಮೋಟಾರ್‌ನ 'ವಿಂಡ್ಸರ್ ಇವಿ' ಲೇಹ್‌ನಿಂದ ಕನ್ಯಾಕುಮಾರಿಯವರೆಗಿನ ಸವಾಲಿನ ಪ್ರಯಾಣವನ್ನು ಕೇವಲ 83 ಗಂಟೆ 43 ನಿಮಿಷಗಳಲ್ಲಿ ಪೂರ್ಣಗೊಳಿಸಿದೆ. ಬರೋಬ್ಬರಿ 3,757 ಕಿಲೋಮೀಟರ್‌ಗಳನ್ನು ಕ್ರಮಿಸುವುದರೊಂದಿಗೆ JSW MG ಮೋಟಾರ್ ಇಂಡಿಯಾ ಇಂದು ಪ್ರಶಸ್ತಿ ವಿಜೇತ ಸಾಧನೆಯನ್ನು ಘೋಷಿಸಿದೆ. ಅತಿ ಕಡಿಮೆ ಸಮಯದಲ್ಲಿ ಈ ವೈವಿಧ್ಯಮಯ ಮಾರ್ಗವನ್ನು ಕ್ರಮಿಸದ EV ಆಗಿ MG ವಿಂಡ್ಸರ್ ಜನಪ್ರಿಯತೆ ಪಡೆದಿದೆ. ಈ ಸಾಧನೆಯನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಗುರುತಿಸಿದೆ.

ಹೊಚ್ಚ ಹೊಸ ಡುಕಾಟಿ 2025 ಸ್ಟ್ರೀಟ್‌ಫೈಟರ್ V2 ನೇಕೆಡ್ ಬೈಕ್ ಬಿಡುಗಡೆ

ಐಷಾರಾಮಿ ಮೋಟಾರ್‌ ಸೈಕಲ್ ಬ್ರ್ಯಾಂಡ್ ಡುಕಾಟಿ ಇಂದು ಭಾರತದಲ್ಲಿ ಬಹುನಿರೀಕ್ಷಿತ ಡುಕಾಟಿ ಸ್ಟ್ರೀಟ್ ‌ಫೈಟರ್ V2 ಮೋಟರ್‌ಸೈಕಲ್ ಅನ್ನು ಬಿಡುಗಡೆ ಮಾಡಿದೆ. ಡುಕಾಟಿಯ ಪ್ರಸಿದ್ಧ "ಫೈಟ್ ಫಾರ್ಮುಲಾ" ಅನ್ನು ಪ್ಯಾನಿಗೇಲ್ V2 ಪ್ಲಾಟ್‌ಫಾರ್ಮ್‌ಗೆ ಅನ್ವಯಿಸುವ ಮೂಲಕ, ಈ ಹೊಸ ನೇಕೆಡ್ ಸ್ಪೋರ್ಟ್ ‌ಬೈಕ್ ಅತ್ಯಾಧುನಿಕ ತಂತ್ರಜ್ಞಾನ, ಆಕ್ರಮಣಕಾರಿ ವಿನ್ಯಾಸದೊಂದಿಗೆ ರಸ್ತೆ ಮತ್ತು ಟ್ರ್ಯಾಕ್ ಉತ್ಸಾಹಿಗಳಿಗಾಗಿ ಇದನ್ನು ನಿರ್ಮಿಸಲಾಗಿದೆ ಎಂದು ಕಂಪನಿ ತಿಳಿಸಿದೆ. ಹೊಸ ಸ್ಟ್ರೀಟ್ ‌ಫೈಟರ್ V2 ನೇಕೆಡ್ ಬೈಕ್‌ನ ವಿಶೇಷತೆಗಳು ಇಲ್ಲಿವೆ.

ಕಾರಿಗೆ ಬರೋಬ್ಬರಿ 1.17 ಕೋಟಿ ರೂಪಾಯಿಗೆ ಫ್ಯಾನ್ಸಿ ನಂಬರ್ ಖರೀದಿ: ಭಾರೀ ವೈರಲ್‌

ದುಬೈನಲ್ಲಿ 'P 7' ಎಂಬ ಏಕ-ಅಂಕಿಯ ನಂಬರ್ ಪ್ಲೇಟ್ 1.17 ಕೋಟಿಗೆ ಮಾರಾಟವಾಗುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದೆ, ಇದು ವಿಶಿಷ್ಟ ಪ್ಲೇಟ್‌ಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಎತ್ತಿ ತೋರಿಸುತ್ತದೆ.

ಇ-ಖಾತಾ ವಿತರಣೆ ಕುರಿತು ಬಿಗ್‌ ಅಪ್‌ಡೇಟ್‌ ಕೊಟ್ಟ ಆಯುಕ್ತರಾದ ದಲ್ಜಿತ್ ಕುಮಾರ್

ಸಾರ್ವಜನಿಕ ಅನುಕೂಲಕ್ಕಾಗಿ ಖಾತೆ ವಿತರಣೆಯನ್ನು ಸರಳಗೊಳಿಸಲು ಇ-ಖಾತಾ ಅರ್ಜಿಗಳ ತ್ವರಿತ ಪ್ರಕ್ರಿಯೆಗೆ ಕರ್ನಾಟಕದ ಆಯುಕ್ತ ದಲ್ಜಿತ್ ಕುಮಾರ್ ನಿರ್ದೇಶನ ನೀಡಿದ್ದಾರೆ.

ಅಂತರಾಷ್ಟ್ರೀಯ ಗುಣಮಟ್ಟದೊಂದಿಗೆ ಹೊಸ ಮಹೀಂದ್ರಾ 7-ಸೀಟರ್ SUV ಬಿಡುಗಡೆ

ದೇಶೀಯ ಕಾರು ತಯಾರಕ ಕಂಪನಿಯಾದ ಮಹೀಂದ್ರಾ' ಇಂದು XEV 9S ಎಂಬ ಭಾರತದ ಮೊದಲ ಅಧಿಕೃತ ಎಲೆಕ್ಟ್ರಿಕ್ 7-ಸೀಟರ್ SUV ಅನ್ನು ಬಿಡುಗಡೆ ಮಾಡಿದೆ. ವಿಸ್ತಾರವಾದ ಕ್ಯಾಬಿನ್, ಮೂರು-ಸಾಲಿನ ವಿನ್ಯಾಸ ಹಾಗೂ ನಿಶ್ಯಬ್ಧ ಡ್ರೈವ್ ಅನುಭವ ನೀಡುವ XEV 9S ಪ್ರಯಾಣಿಕರಿಗೆ ವಿಮಾನದಲ್ಲಿ ಪ್ರಯಾಣಿಸಿಂದತಹ ಮೋಜನ್ನು ನೀಡುತ್ತದೆ. ಅಥ್ಲೆಟಿಕ್ ನಿಲುವು, ಮಸ್ಕುಲರ್ ಲೈನ್‌ಗಳು, ತಲ್ಲೀನಗೊಳಿಸುವ ತಂತ್ರಜ್ಞಾನ-ಸಮೃದ್ಧ ಇಂಟೀರಿಯರ್ ಜೊತೆಗೆ ಪ್ರೀಮಿಯಂ ಆಗಿ ಕಾಣುತ್ತದೆ. ಬೆಲೆಗಳು ರೂ. 19.95 ಲಕ್ಷದಿಂದ ಪ್ರಾರಂಭವಾಗುತ್ತವೆ, ಜನವರಿ 14 ರಂದು ಬುಕಿಂಗ್ ತೆರೆಯಲಿದ್ದು, ಜನವರಿ 23 ರಂದು ವಿತರಣೆಗಳು ಪ್ರಾರಂಭವಾಗುತ್ತವೆ.
Advertisement

"ಪದ ಶಕ್ತಿಯೇ ವಿಶ್ವ ಶಕ್ತಿ': ಕೊಟ್ಟ ಮಾತು ಉಳಿಸಿಕೊಳ್ಳಿ! ಹೈಕಮಾಂಡ್ ಭರವಸೆ ನೆನಪಿಸಿ ಡಿಕೆ ಶಿವಕುಮಾರ್ ಪೋಸ್ಟ್...

ರಾಜಕೀಯ ಭರವಸೆಗಳನ್ನು ಉಳಿಸಿಕೊಳ್ಳುವ ಮಹತ್ವವನ್ನು ಡಿ.ಕೆ. ಶಿವಕುಮಾರ್ ಎತ್ತಿ ತೋರಿಸುತ್ತಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ: ನವೆಂಬರ್ 27ರ ಅಂಕಿಅಂಶಗಳು

ನವೆಂಬರ್ 27, 2023 ರ ದತ್ತಾಂಶದ ಆಧಾರದ ಮೇಲೆ ಲಿಂಗನಮಕ್ಕಿ ಮತ್ತು ಕಬಿನಿ ಸೇರಿದಂತೆ ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿನ ಇತ್ತೀಚಿನ ನೀರಿನ ಮಟ್ಟವನ್ನು ಅನ್ವೇಷಿಸಿ.

Bajaj: ಅತ್ಯಂತ ಕಡಿಮೆ ಬೆಲೆಯಲ್ಲಿ ಬಜಾಜ್ ಎಲೆಕ್ಟ್ರಿಕ್ ಆಟೋ ಬಿಡುಗಡೆ

ಬಜಾಜ್ ಆಟೋ, ರಿಕಿ ಎಂಬ ಹೊಸ ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳನ್ನು ಬಿಡುಗಡೆ ಮಾಡಿದೆ, ಇದು ಭಾರತದಲ್ಲಿ ಕೊನೆಯ ಹಂತದ ಚಲನಶೀಲತೆಯನ್ನು ಗುರಿಯಾಗಿಟ್ಟುಕೊಂಡು ಪ್ರತ್ಯೇಕ ಪ್ರಯಾಣಿಕ ಮತ್ತು ಸರಕು ವಿಭಾಗಗಳಿಗೆ ಇ-ರಿಕ್ಷಾ ಮಾಡಲ್‌ಗಳನ್ನು ಪರಿಚಯಿಸಿದೆ. ಇದರಲ್ಲಿ P40 ಸರಣಿಯ ಮೊದಲ ಮಾದರಿ - ಬಜಾಜ್ ರಿಕಿ P4005 - P (ಪ್ಯಾಸೆಂಜರ್ ವಾಹನ) 5.4 kWh ಬ್ಯಾಟರಿಯೊಂದಿಗೆ ಬರುತ್ತದೆ, ಇದರ ಬೆಲೆ ರೂ.1,90,890 (ಎಕ್ಸ್-ಶೋರೂಂ) ಇದೆ. ಕಾರ್ಗೋ ಮಾದರಿಯಾದ ರಿಕಿ C4005 ಬೆಲೆಯು ರೂ. 2,00,876 (ಎಕ್ಸ್-ಶೋರೂಂ) ಇದೆ.

27 ಕಿಲೋಮೀಟರ್‌ವರೆಗೆ ಮೈಲೇಜ್.. 6ಕ್ಕೂ ಹೆಚ್ಚು ಆಸನಗಳು..

ಭಾರತದಲ್ಲಿ ಹೊಸ ಕಾರು ಕೊಳ್ಳುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹ್ಯಾಚ್‌ಬ್ಯಾಕ್, ಸೆಡಾನ್ ಹಾಗೂ ಎಸ್‌ಯುವಿಗಳಂತೆ ಎಂಪಿವಿಗಳಿಗೂ ಹೆಚ್ಚು ಬೇಡಿಕೆಯಿದೆ. ಇವು ಹೆಚ್ಚಿನ ಆಸನ ಆಯ್ಕೆಯಲ್ಲಿ ಲಭ್ಯವಿದ್ದು, ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ನೀವು ಹೊಚ್ಚ ಹೊಸ ಕಾರೊಂದನ್ನು ಖರೀದಿ ಮಾಡಲು ಆಲೋಚಿಸಿದ್ದೀರಾ.. ಹಾಗಾದರೆ, ಮಾರುತಿ ಸುಜುಕಿ ಇಕೋ, ರೆನಾಲ್ಟ್ ಟ್ರೈಬರ್, ಮಾರುತಿ ಸುಜುಕಿ ಎರ್ಟಿಗಾ, ಟೊಯೊಟಾ ರೂಮಿಯನ್ ಮತ್ತು ಕಿಯಾ ಕ್ಯಾರೆನ್ಸ್ ಕ್ಲಾವಿಸ್ ಎಂಪಿವಿಗಳು ಅತ್ಯುತ್ತಮವಾದ ಆಯ್ಕೆಯಾಗಲಿವೆ. ಬನ್ನಿ, ಈ ಕಾರುಗಳ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

ಪೋರ್ಟಬಲ್ ಕಾರ್ ಇವಿ ವಾಲ್ ಚಾರ್ಜರ್ ಬಿಡುಗಡೆ: ಜೊತೆಗೆ ಕೊಂಡೊಯ್ಯಬಹುದು

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ತ್ವರಿತ ಅಳವಡಿಕೆಯೊಂದಿಗೆ, ವಿಶ್ವಾಸಾರ್ಹ ಮತ್ತು ಬಳಕೆದಾರ ಸ್ನೇಹಿ ಹೋಮ್ ಚಾರ್ಜಿಂಗ್ ಪರಿಹಾರಗಳ ಅಗತ್ಯವು ಎಂದಿಗಿಂತಲೂ ಬಲವಾಗಿದೆ. ಈ ವಿಕಸನಗೊಳ್ಳುತ್ತಿರುವ ಅವಶ್ಯಕತೆಗಳನ್ನು ಪೂರೈಸುತ್ತಾ, ಆಟೋಮೋಟಿವ್ ಆಫ್ಟರ್‌ಮಾರ್ಕೆಟ್ ಉದ್ಯಮದಲ್ಲಿ ಪ್ರಮುಖ ಕಂಪನಿಯಾದ ಯುನೊ ಮಿಂಡಾ (UNO Minda), ತನ್ನ ಪೋರ್ಟಬಲ್ ಕಾರ್ ಇವಿ ವಾಲ್ ಚಾರ್ಜರ್ ಅನ್ನು ಬಿಡುಗಡೆ ಮಾಡಿದೆ. ಇದು ಮನೆಯಲ್ಲಿ ಅಥವಾ ಪ್ರಯಾಣದಲ್ಲಿರುವಾಗ ಇವಿ ಚಾರ್ಜಿಂಗ್ ಅನ್ನು ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿಸಲು ವಿನ್ಯಾಸಗೊಳಿಸಲಾದ ಕಾಂಪ್ಯಾಕ್ಟ್, ಪ್ರಯಾಣ-ಸ್ನೇಹಿ ಮತ್ತು ವಿಶ್ವಾಸಾರ್ಹ ಚಾರ್ಜರ್ ಆಗಿದೆ ಎಂದು ಕಂಪನಿ ತಿಳಿಸಿದೆ.

Mahindra: 683 ಕಿ.ಮೀ ಓಡುತ್ತೆ.. 5-ಸೀಟರ್, ಹೊಸ ಮಹೀಂದ್ರಾ SUV..

ಇಂದು ಹೊಚ್ಚ ಹೊಸ ಮಹೀಂದ್ರಾ ಬಿಇ 6 ಫಾರ್ಮುಲಾ-ಇ ಎಡಿಷನ್ (Mahindra BE 6 Formula-E Edition) ಎಲೆಕ್ಟ್ರಿಕ್ ಎಸ್‌ಯುವಿಯನ್ನು ಬಿಡುಗಡೆಗೊಳಿಸಲಾಗಿದೆ. ಇದು ತುಂಬಾ ಅಚ್ಚುಕಟ್ಟಾದ ವಿನ್ಯಾಸ ಹೊಂದಿದ್ದು, ನೋಡಿಗರ ಕಣ್ಣು ಕುಕ್ಕುವಂತಿದೆ. ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಸ್ಪರ್ಧಾತ್ಮಕ ಬೆಲೆಯಲ್ಲಿಯೂ ಮಾರಾಟಕ್ಕೆ ಬಂದಿದೆ. ಬನ್ನಿ, ಈ ಕಾರಿನ ದರವೆಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

ಅಧಿಕಾರ ಹಂಚಿಕೆ: ಸತೀಶ್ ಜಾರಕಿಹೊಳಿ ಜತೆಗಿನ ಮಾತುಕತೆ ರಹಸ್ಯ ಬಿಚ್ಚಿಟ್ಟ ಡಿಕೆ ಶಿವಕುಮಾರ್

ಬೆಳಗಾವಿ ಜಿಲ್ಲಾ ರಾಜಕೀಯದ ಕುರಿತು ಸತೀಶ್ ಜಾರಕಿಹೊಳಿ ಅವರೊಂದಿಗೆ ಭವಿಷ್ಯದ ಕಾರ್ಯತಂತ್ರಗಳು ಮತ್ತು ಪಕ್ಷ ಸಂಘಟನೆಯ ಕುರಿತು ಡಿಕೆ ಶಿವಕುಮಾರ್ ಪ್ರಮುಖ ಚರ್ಚೆಗಳನ್ನು ಬಹಿರಂಗಪಡಿಸಿದ್ದಾರೆ.

Mahindra: 7-ಸೀಟರ್.. ಲೆಕ್ಕವಿಲ್ಲದಷ್ಟು ವೈಶಿಷ್ಟ್ಯಗಳು! ನಾಳೆ..

ಮಹೀಂದ್ರಾ (Mahindra) ಜನಪ್ರಿಯ ಸ್ವದೇಶಿ ಕಾರು ತಯಾರಕ ಕಂಪನಿಯಾಗಿ ಹೊರಹೊಮ್ಮಿದೆ. ದೇಶೀಯ ಮಾರುಕಟ್ಟೆಯಲ್ಲಿ ಎಕ್ಸ್ಇವಿ 9ಇ (XEV 9e) ಮತ್ತು ಬಿಇ 6 (BE 6) ಎಲೆಕ್ಟ್ರಿಕ್ ಎಸ್‌ಯುವಿಗಳನ್ನು ಯಶಸ್ವಿಯಾಗಿ ಮಾರಾಟ ಮಾಡುತ್ತಿದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ನಾಳೆ ಕಂಪನಿಯು ಎಕ್ಸ್ಇವಿ 9ಎಸ್ (XEV 9S) ಹೆಸರಿನ ಹೊಚ್ಚ ಹೊಸ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲಿದೆ. ಬನ್ನಿ, ಈ ಕಾರಿನ ನಿರೀಕ್ಷಿತ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.
Advertisement

ಇ-ಖಾತಾ ಮಹತ್ವದ ಮಾಹಿತಿ ನೀಡಿದ ಆಯುಕ್ತರಾದ ಡಾ ರಾಜೇಂದ್ರ‌

ಬೆಂಗಳೂರಿನ ಬಿಬಿಎಂಪಿ ನಕಲಿ ಖಾತೆಗಳು ಮತ್ತು ತೆರಿಗೆ ವಂಚನೆಯನ್ನು ತಡೆಯಲು, ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ನಾಗರಿಕರನ್ನು ರಕ್ಷಿಸಲು ಮಾರ್ಗಸೂಚಿಗಳನ್ನು ಪರಿಚಯಿಸುತ್ತದೆ.

Aadhaar Card: ಆಧಾರ್ ಬಗೆಗಿನ 3 ಹೊಸ ನಿಯಮ, ಕೊನೆ ಘಳಿಗೆಯಲ್ಲಿ ಪರದಾಡಬೇಡಿ..!

ಆಧಾರ್ ಕಾರ್ಡ್ ಬಳಕೆಯನ್ನು ಸರಳೀಕರಿಸಲು ಮತ್ತು ಡೇಟಾ ನಿಖರತೆಯನ್ನು ಹೆಚ್ಚಿಸಲು ಯುಐಡಿಎಐ ಭಾರತದಲ್ಲಿ ಆಧಾರ್ ಕಾರ್ಡ್ ಹೊಂದಿರುವವರಿಗೆ ಮೂರು ಹೊಸ ನಿಯಮಗಳನ್ನು ಪರಿಚಯಿಸಿದೆ.

ಅಂತರಾಷ್ಟ್ರೀಯ ಗುಣಮಟ್ಟ, ದೇಶೀಯ ಕಾರುಗಳು... ಜನ ಫುಲ್ ಫಿದಾ

ಕಳೆದ ವರ್ಷ (2024) ನವೆಂಬರ್‌ನಲ್ಲಿ, ಮಹೀಂದ್ರಾ ಎರಡು ಎಲೆಕ್ಟ್ರಿಕ್ ಒರಿಜಿನ್ ಎಸ್‌ಯುವಿಗಳಾದ XEV 9e ಮತ್ತು BE 6 ಕಾರುಗಳನ್ನು ಬಿಡುಗಡೆ ಮಾಡಿತ್ತು. ಈ ಎರಡು ಎಸ್‌ಯುವಿಗಳು ವರ್ಷದ ಅತ್ಯಂತ ಚರ್ಚಿತ ಭಾರತೀಯ ಕಾರುಗಳಾಗಿವೆ, ಐಷಾರಾಮಿ ಕಾರು ಅಭಿಮಾನಿಗಳು ಮತ್ತು ಉದ್ಯಮಿಗಳಿಂದ ಹಿಡಿದು ಉನ್ನತ ಸರ್ಕಾರಿ ಅಧಿಕಾರಿಗಳವರೆಗೆ ಎಲ್ಲರನ್ನೂ ಆಕರ್ಷಿಸಿದ್ದವು. ಇವು ವಿಶ್ವ ದರ್ಜೆಯ ಮೇಡ್-ಇನ್-ಇಂಡಿಯಾ ಎಲೆಕ್ಟ್ರಿಕ್ ಒರಿಜಿನ್ SUV ಗಳಾಗಿ ಜನಪ್ರಿಯತೆ ಪಡೆದಿವೆ. ಇವೆರಡು ಭಾರತದಲ್ಲಿ ಇನ್ಯಾವುದೇ EV ಗಳು ಮಾಡದ ಸಾಧನೆ ಮಾಡಿವೆ ಎಂದು ಮಹೀಂದ್ರಾ ಹೇಳಿಕೊಂಡಿದೆ.

Bajaj: ಬೈಕ್ ಬೆಲೆಯಲ್ಲಿ ಹೊಸ ಇ-ರಿಕ್ಷಾ ಬಿಡುಗಡೆ

ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ತಯಾರಕರಾದ ಬಜಾಜ್ ಆಟೋ ಲಿಮಿಟೆಡ್, ಇಂದು 'ಬಜಾಜ್ ರಿಕಿ'ಯನ್ನು ಬಿಡುಗಡೆ ಮಾಡುವ ಮೂಲಕ ಇ-ರಿಕ್ಷಾ (ಎಲೆಕ್ಟ್ರಿಕ್ ರಿಕ್ಷಾ) ವಿಭಾಗಕ್ಕೆ ಪ್ರವೇಶಿಸಿರುವುದಾಗಿ ಘೋಷಿಸಿದೆ. ತ್ರಿ-ಚಕ್ರ ವಾಹನ ವ್ಯವಸ್ಥೆಯಲ್ಲಿ ದಶಕಗಳ ನಾಯಕತ್ವ ಹೊಂದಿರುವ ಬಜಾಜ್ ಆಟೋ, ಈಗ ಚಾಲಕರೊಂದಿಗೆ ತನ್ನ ವಿಶ್ವಾಸಾರ್ಹ ಪಾಲುದಾರಿಕೆಯೊಂದಿಗೆ ಭಾರತದ ವೇಗವಾಗಿ ಬೆಳೆಯುತ್ತಿರುವ ಇ-ರಿಕ್ಷಾ ವಿಭಾಗಕ್ಕೆ ಎಂಟ್ರಿ ಕೊಟ್ಟಿದೆ. ಕೋವಿಡ್ ನಂತರ ಇ-ರಿಕ್ಷಾ ವರ್ಗವು ವೇಗವಾಗಿ ವಿಸ್ತರಿಸಿದ್ದು, ಈ ವಿಭಾಗದಲ್ಲಿ ಚಾಲಕರಿಗೆ ಕೈಗೆಟುಕುವ ಬೆಲೆಯಲ್ಲಿ ಈ ವಾಹನವನ್ನು ಪರಿಚಯಿಸಲಾಗಿದೆ.

Tata Sierra Suv: ಹೊಸ ಟಾಟಾ ಸಿಯೆರಾ ಕಾರಿನ ವೇರಿಯೆಂಟ್‌ವಾರು..

ನಿನ್ನೆ ಹೊಸ ಟಾಟಾ ಸಿಯೆರಾ (Tata Sierra) ಎಸ್‌ಯುವಿಯನ್ನು ಮಾರಾಟಕ್ಕೆ ತರಲಾಗಿತ್ತು. ಇದು ಅತ್ಯಾಧುನಿಕ ವಿನ್ಯಾಸವನ್ನು ಒಳಗೊಂಡಿದ್ದು, ಹಲವು ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ರೂ.1.49 ಲಕ್ಷ (ಎಕ್ಸ್-ಶೋರೂಂ) ಪರಿಚಯಾತ್ಮಕ ಬೆಲೆಯನ್ನು ಹೊಂದಿದೆ. ಸ್ಮಾರ್ಟ್ ಪ್ಲಸ್, ಪ್ಯೂರ್, ಪ್ಯೂರ್ ಪ್ಲಸ್, ಅಡ್ವೆಂಚರ್, ಅಡ್ವೆಂಚರ್ ಪ್ಲಸ್, ಅಕಾಂಪ್ಲಿಶ್ಡ್ ಹಾಗೂ ಅಕಾಂಪ್ಲಿಶ್ಡ್ ಪ್ಲಸ್ ಎಂಬ ರೂಪಾಂತರಗಳ (ವೇರಿಯೆಂಟ್‌) ಆಯ್ಕೆಯಲ್ಲಿಯೂ ಲಭ್ಯವಿದೆ. ಬನ್ನಿ.. ಈ ರೂಪಾಂತರಗಳು ಯಾವೆಲ್ಲ ವೈಶಿಷ್ಟ್ಯಗಳನ್ನು ಹೊಂದಿವೆ ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.