Tata Sierra Suv: ಹೊಸ ಟಾಟಾ ಸಿಯೆರಾ ಕಾರಿನ ವೇರಿಯೆಂಟ್‌ವಾರು..

ನಿನ್ನೆ ಹೊಸ ಟಾಟಾ ಸಿಯೆರಾ (Tata Sierra) ಎಸ್‌ಯುವಿಯನ್ನು ಮಾರಾಟಕ್ಕೆ ತರಲಾಗಿತ್ತು. ಇದು ಅತ್ಯಾಧುನಿಕ ವಿನ್ಯಾಸವನ್ನು ಒಳಗೊಂಡಿದ್ದು, ಹಲವು ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ರೂ.1.49 ಲಕ್ಷ (ಎಕ್ಸ್-ಶೋರೂಂ) ಪರಿಚಯಾತ್ಮಕ ಬೆಲೆಯನ್ನು ಹೊಂದಿದೆ. ಸ್ಮಾರ್ಟ್ ಪ್ಲಸ್, ಪ್ಯೂರ್, ಪ್ಯೂರ್ ಪ್ಲಸ್, ಅಡ್ವೆಂಚರ್, ಅಡ್ವೆಂಚರ್ ಪ್ಲಸ್, ಅಕಾಂಪ್ಲಿಶ್ಡ್ ಹಾಗೂ ಅಕಾಂಪ್ಲಿಶ್ಡ್ ಪ್ಲಸ್ ಎಂಬ ರೂಪಾಂತರಗಳ (ವೇರಿಯೆಂಟ್‌) ಆಯ್ಕೆಯಲ್ಲಿಯೂ ಲಭ್ಯವಿದೆ. ಬನ್ನಿ.. ಈ ರೂಪಾಂತರಗಳು ಯಾವೆಲ್ಲ ವೈಶಿಷ್ಟ್ಯಗಳನ್ನು ಹೊಂದಿವೆ ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

90 ಕಿ.ಮೀ ಮೈಲೇಜ್ ನೀಡುವ ಸ್ಕೂಟರ್ ಬಿಡುಗಡೆ ಸಜ್ಜು!

ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ತುಂಬಾ ಜನಪ್ರಿಯತೆ ಪಡೆದಿರುವ ಸ್ಕೂಟರ್‌ಗಳಲ್ಲಿ ಟಿವಿಎಸ್ ಬ್ರಾಂಡ್‌ನ 'ಜುಪಿಟರ್' ಕೂಡ ಒಂದು. ಹೋಂಡಾ ಆಕ್ಟೀವಾ ಹಾಗೂ ಸುಜುಕಿ ಆಕ್ಸಿಸ್ ನಂತಹ ಬಲಿಷ್ಟ ಪ್ರತಿಸ್ಪರ್ಧಿಗಳಿಗೆ ನೇರ ಪೈಪೋಟಿ ನೀಡುತ್ತಾ ಪ್ರತಿ ತಿಂಗಳು ಉತ್ತಮ ಮಾರಾಟ ಕಾಣುತ್ತಿದೆ. ಕಳೆದ ಅಕ್ಟೋಬರ್ ತಿಂಗಳ ಮಾರಾಟ ವಿಷಯಕ್ಕೆ ಬಂದರೆ ಟಿವಿಎಸ್ ಜುಪಿಟರ್ ಕಂಪನಿಗೆ ಭರ್ಜರಿ ಲಾಭ ತಂದುಕೊಟ್ಟಿದೆ. ಅಕ್ಟೋಬರ್‌ನಲ್ಲಿ ದೀಪಾವಳಿ ಹಾಗೂ ದಸರಾ ಹಬ್ಬಗಳಲ್ಲಿ ಗ್ರಾಹಕರು ಮುಗಿಬಿದ್ದು ಈ ಸ್ಕೂಟರ್ ಖರೀದಿಸಿದ್ದಾರೆ. ಮೂಲಗಳ ಪ್ರಕಾರ ಮಾರಾಟವು 1 ಲಕ್ಷ ಯೂನಿಟ್‌ಗಳನ್ನು ದಾಟಿದೆ.

64 Km ಮೈಲೇಜ್, ರೂ.80,000 ಬೆಲೆ.. ಆದ್ರೂ ಆಕ್ಟಿವಾ & ಜುಪಿಟರ್..

ಸುಜುಕಿ ಆಕ್ಸೆಸ್ 125 (Suzuki Access 125) ಜಗಮೆಚ್ಚಿದ ಸ್ಕೂಟರ್ ಆಗಿದೆ. ದಿನಬಳಕೆಗೂ ಹೆಚ್ಚು ಸೂಕ್ತವಾಗಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಆದರೂ ಈ ಅಕ್ಟೋಬರ್ ತಿಂಗಳಲ್ಲಿ 'ಆಕ್ಸೆಸ್' ಮಾರಾಟ ಸಂಖ್ಯೆ ಸ್ವಲ್ಪ ಮಟ್ಟಿಗೆ ಕುಸಿತವಾಗಿದೆ. 70,327 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಿಸಲಾಗಿದೆ. 2024ರ ಇದೇ ಅವಧಿಯಲ್ಲಿ 74,813 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿಸಂಖ್ಯೆಯನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ -6% ಕುಸಿತವಾಗಿದೆ.

Volcano Eruption: ಜ್ವಾಲಾಮುಖಿ ಸ್ಫೋಟದ ಪರಿಣಾಮ ಹಲವು ವಿಮಾನಗಳ ಹಾರಾಟ ರದ್ದು!

ಇಂಡೋನೇಷ್ಯಾದ ಮೌಂಟ್ ರೌಂಗ್ ಸ್ಫೋಟದಿಂದಾಗಿ ಬಾಲಿಗೆ ಮತ್ತು ಅಲ್ಲಿಂದ ಹೊರಡುವ 110 ವಿಮಾನಗಳು ರದ್ದಾಗಿದ್ದು, ನೂರಾರು ಪ್ರವಾಸಿಗರ ಮೇಲೆ ಪರಿಣಾಮ ಬೀರಿದೆ.
Advertisement

Karnataka Rails: 2026 ಮಾರ್ಚ್‌ವರೆಗೆ ಹಲವು ರೈಲುಗಳು ಭಾಗಶಃ ರದ್ದು! ಕಾರಣವೇನು..

ಮಾರ್ಚ್ 1, 2024 ರಿಂದ ಮಾರ್ಚ್ 31, 2026 ರವರೆಗೆ, ಕರ್ನಾಟಕದಲ್ಲಿ ಹಲವಾರು ರೈಲು ಸೇವೆಗಳು ನಡೆಯುತ್ತಿರುವ ನಿರ್ಮಾಣ ಕಾರ್ಯಗಳಿಂದಾಗಿ ಭಾಗಶಃ ರದ್ದಾಗಲಿವೆ.

KEA UGNEET 2025: ಉಳಿದ ಸೀಟುಗಳ ಹಂಚಿಕೆ ಆರಂಭ, ನವೆಂಬರ್ 27 ಕೊನೆ ದಿನ

MBBS ಮತ್ತು BDS ಆಕಾಂಕ್ಷಿಗಳಿಗಾಗಿ ಉಳಿದ UG NEET 2024 ಸೀಟುಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು KEA ಪ್ರಾರಂಭಿಸಿದೆ. ನವೆಂಬರ್ 27 ರೊಳಗೆ ಅರ್ಜಿ ಸಲ್ಲಿಸಿ.

ಸಾವು-ಬದುಕಿನ ಹೋರಾಟ, ಯಾವ ಶತ್ರುವಿಗೂ ಬೇಡ: ನಟಿ ರಜಿನಿ

ಸೆನ್ಯಾರ್ ಚಂಡಮಾರುತವು ಕರ್ನಾಟಕ ಸೇರಿದಂತೆ ಭಾರತದ ಹಲವಾರು ರಾಜ್ಯಗಳ ಮೇಲೆ ಪರಿಣಾಮ ಬೀರಲಿದ್ದು, ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಮಹೀಂದ್ರಾ ಎಲೆಕ್ಟ್ರಿಕ್ ಕಾರು ಮಾಲೀಕರಿಗೆ ಭಯವಿಲ್ಲ: ದೊಡ್ಡ ಘೋಷಣೆ

2027 ರ ಅಂತ್ಯದ ವೇಳೆಗೆ 180 kW ಸಾಮರ್ಥ್ಯದ 250 ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಮಹೀಂದ್ರಾ ಯೋಜಿಸಿದೆ, ಪ್ರತಿಯೊಂದೂ 1,000 ಕ್ಕೂ ಹೆಚ್ಚು ಚಾರ್ಜಿಂಗ್ ಪಾಯಿಂಟ್‌ಗಳನ್ನು ಹೊಂದಿರಲಿದೆ. ಇದು ತನ್ನ ಚಾರ್ಜ್_ಇನ್ ಅಲ್ಟ್ರಾಫಾಸ್ಟ್ ಚಾರ್ಜಿಂಗ್ ನೆಟ್‌ವರ್ಕ್ ಮೂಲಕ UNLIMIT ವಿದ್ಯುತ್ ಚಲನಶೀಲತೆಯನ್ನು ಸಾಧಿಸುವ ಕಂಪನಿಯ ದೂರದೃಷ್ಟಿಯ ಭಾಗವಾಗಿದೆ. ಇದು ಭಾರತದಲ್ಲಿ ಇವಿ ಅಳವಡಿಕೆಯನ್ನು ವೇಗಗೊಳಿಸಲು ಸಾರ್ವಜನಿಕ ಇವಿ ಚಾರ್ಜಿಂಗ್ ಮೂಲಸೌಕರ್ಯವನ್ನು ಬಲಪಡಿಸುವ ಸರ್ಕಾರದ ಆದ್ಯತೆಗೆ ಅನುಗುಣವಾಗಿದೆ ಎಂದು ಮಹೀಂದ್ರಾ ತಿಳಿಸಿದೆ.

ಇನ್ನೆರಡು ದಿನಗಳಲ್ಲಿ ಡಿಕೆ ಶಿವಕುಮಾರ್ ಸಿಎಂ ಆಗ್ಬೇಕು.. ಇಲ್ಲದೇ ಹೋದರೆ...: ಸ್ಪೋಟಕ ಭವಿಷ್ಯ‌

ಕರ್ನಾಟಕ ವಿಧಾನಸಭಾ ಚುನಾವಣೆಯ ನಂತರ ಮುಖ್ಯಮಂತ್ರಿ ಹುದ್ದೆಗೆ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಪೈಪೋಟಿ ನಡೆಸುತ್ತಿರುವುದರಿಂದ ರಾಜ್ಯದಲ್ಲಿ ರಾಜಕೀಯ ಚರ್ಚೆ ತೀವ್ರಗೊಂಡಿದೆ.

ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ: ನವೆಂಬರ್ 26ರ ಅಂಕಿಅಂಶಗಳು

ನವೆಂಬರ್ 26, 2023 ರ ಹೊತ್ತಿಗೆ ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿನ ಇತ್ತೀಚಿನ ನೀರಿನ ಮಟ್ಟವನ್ನು ಅನ್ವೇಷಿಸಿ. ಲಿಂಗನಮಕ್ಕಿ, ಕಬಿನಿ, ಭದ್ರಾ ಮತ್ತು ಇತರವುಗಳ ಕುರಿತು ಪ್ರಮುಖ ಡೇಟಾ.

ಹೊಸ ಟಾಟಾ ಸಿಯೆರಾ vs ಹ್ಯುಂಡೈ ಕ್ರೆಟಾ: ಬೆಲೆ & ವಿಶೇಷತೆಗಳ..

ನಿನ್ನೆಯಷ್ಟೇ ಹೊಚ್ಚ ಹೊಸ ಟಾಟಾ ಸಿಯೆರಾ (Tata Sierra) ಎಸ್‌ಯುವಿಯನ್ನು ಬಿಡುಗಡೆಗೊಳಿಸಲಾಯಿತು. ಇದು ತುಂಬಾ ಅಚ್ಚುಕಟ್ಟಾದ ವಿನ್ಯಾಸ ಹೊಂದಿದ್ದು, ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಇದಕ್ಕೆ ಹ್ಯುಂಡೈ ಕ್ರೆಟಾ (Hyundai Creta) ಪ್ರಬಲವಾದ ಪ್ರತಿಸ್ಪರ್ಧಿಯಾಗಿದೆ. ಇಲ್ಲಿ ಈ ಕಾರುಗಳ ಬೆಲೆ, ಕಾರ್ಯಕ್ಷಮತೆ ಹಾಗೂ ವಿಶೇಷತೆಗಳ ಕುರಿತಂತೆ ಸಮಗ್ರವಾದ ಹೋಲಿಕೆ ಮಾಡಿದ್ದೇವೆ. ಬನ್ನಿ.. ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಜಾಗತಿಕ ಬಂಟರ ಒಕ್ಕೂಟದಿಂದ ಸಾಧಕರಿಗೆ ಸನ್ಮಾನ

ಜಾಗತಿಕ ಬಂಟರ ಒಕ್ಕೂಟವು ಸಮುದಾಯದ ಬೆಳವಣಿಗೆ ಮತ್ತು ಸ್ಫೂರ್ತಿಯನ್ನು ಬೆಳೆಸುವ ಮಹತ್ವದ ಸಾರ್ವಜನಿಕ ಅಧಿವೇಶನದಲ್ಲಿ ವಿವಿಧ ಕ್ಷೇತ್ರಗಳಲ್ಲಿನ ಗಮನಾರ್ಹ ಸಾಧಕರನ್ನು ಗೌರವಿಸುತ್ತದೆ.
Advertisement

ನಿನ್ನೆಯಷ್ಟೆ ಬಿಡುಗಡೆಯಾದ ಟಾಟಾ ಸಿಯೆರಾ ವಿಶೇಷತೆಗಳು

ಟಾಟಾ ಮೋಟಾರ್ಸ್ ನಿನ್ನೆಯಷ್ಟೆ ತನ್ನ ಬಹುನಿರೀಕ್ಷಿತ ಸಿಯೆರಾ ಎಸ್‌ಯುವಿಯನ್ನು ಅದ್ದೂರಿಯಾಗಿ ಬಿಡುಗಡೆ ಮಾಡಿದ್ದು (ಕಾರಿನ ಮಾಹಿತಿಗೆ ಕ್ಲಿಕ್ ಮಾಡಿ), ರೂ.11.49 ಲಕ್ಷ (ಎಕ್ಸ್-ಶೋರೂಂ) ಆರಂಭಿಕ ಬೆಲೆಯಿದೆ. ಡಿಸೆಂಬರ್ 16 ರಿಂದ ಬುಕ್ಕಿಂಗ್ ಪ್ರಾರಂಭವಾಗಲಿದ್ದು, 2026ರ ಜನವರಿ 15 ರಿಂದ ಡೆಲಿವರಿ ಶುರುವಾಗಲಿದೆ ಎಂದು ಟಾಟಾ ಮೋಟಾರ್ಸ್ ತಿಳಿಸಿದೆ. ಬಿಡುಗಡೆ ಬಳಿಕ ಕಾರಿನ ನಿರ್ಮಾಣಕ್ಕೆ ಸ್ಪೂರ್ತಿ ಹಾಗೂ ಈ ಕಾರಿನ ಬಗ್ಗೆ ಒಂದಷ್ಟು ಮಾಹಿತಿಯನ್ನು ಕಂಪನಿ ಹಂಚಿಕೊಂಡಿದೆ.

6-ಸೀಟರ್.. ಇದೇ ಬಲಭೀಮ, ಈ ಟಾಟಾ SUVಗೆ 5 ಬದಲಿ ಕಾರುಗಳಿವು..

ಟಾಟಾ ಸಫಾರಿ (Tata Safari) ಪ್ರಮುಖ ಎಸ್‌ಯುವಿಯಾಗಿದೆ. ಇದು ರೂ.15.50 ಲಕ್ಷದಿಂದ ರೂ.27.44 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. ಅತ್ಯುತ್ತಮವಾದ ವಿನ್ಯಾಸವನ್ನು ಹೊಂದಿದೆ. ಕಾಸ್ಮಿಕ್ ಗೋಲ್ಡ್, ಒಬೆರಾನ್ ಬ್ಲ್ಯಾಕ್, ಸ್ಟಾರ್‌ಡಸ್ಟ್ ಆಶ್, ಸ್ಟೆಲ್ಲರ್ ಫ್ರಾಸ್ಟ್ ಮತ್ತು ಸೂಪರ್‌ನೋವಾ ಕಾಪರ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ. 6/7 ಆಸನಗಳನ್ನು ಪಡೆದಿದ್ದು, ಪ್ರಯಾಣಿಕರು ಸುಲಭವಾಗಿ ಓಡಾಟ ನಡೆಸಬಹುದು. 420 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ತನ್ನದಾಗಿಸಿಕೊಂಡಿದೆ. 205 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಮತ್ತು 2,741 ಮಿ.ಮೀ ವೀಲ್‌ಬೇಸ್‌ನ್ನು ಪಡೆದಿದೆ.

ಟಾಟಾ ಕಾರಿಗೆ ಮುಗಿಬಿದ್ದ ಜನ: ಬುಕಿಂಗ್ ಹೆಚ್ಚಾಯ್ತು

ಟಾಟಾ ಕರ್ವ್ ಎಸ್‌ಯುವಿ (Tata Curvv) ದೇಶಿಯ ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ. ಪ್ರಸ್ತುತ ಬೇಡಿಕೆಯಲ್ಲಿ ಭಾರಿ ಏರಿಕೆಯಾಗುತ್ತಿದ್ದು, ಇದು ಖರೀದಿದಾರರ ಕಾಯುವ ಅವಧಿಯನ್ನು ಸುಮಾರು 8 ರಿಂದ 12 ವಾರಗಳವರೆಗೆ (2 ರಿಂದ 3 ತಿಂಗಳಿಗೆ) ವಿಸ್ತರಿಸಿದೆ. ಇತ್ತೀಚಿನ ಜಿಎಸ್‌ಟಿ ಇಳಿಕೆಯಿಂದ ಬೆಲೆ ಕಡಿತವಾಗಿದ್ದು, ಅದರ ಬೇಡಿಕೆ ಹೆಚ್ಚಾಗಿದೆ. ಆದ್ದರಿಂದ ನಿರೀಕ್ಷಿತ ಖರೀದಿದಾರರು ಬುಕಿಂಗ್ ಸಮಯದಿಂದ ಡೆಲಿವರಿ ಪಡೆಯಲು ಸುಮಾರು 2 ರಿಂದ 3 ತಿಂಗಳುಗಳ ಕಾಯುವಿಕೆಗೆ ಸಿದ್ಧರಾಗಿರಬೇಕು.

Tata Sierra: 11.49 ಲಕ್ಷ.. ಇಂದು ಬಿಡುಗಡೆಯಾದ ಹೊಸ ಟಾಟಾ..

ಮುಂಬೈನಲ್ಲಿಂದು ನಡೆದ ಅದ್ದೂರಿ ಸಮಾರಂಭದಲ್ಲಿ ಬಹುನಿರೀಕ್ಷಿತ ಟಾಟಾ ಸಿಯೆರಾ (Tata Sierra) ಎಸ್‌ಯುವಿಯನ್ನು ಬಿಡುಗಡೆಗೊಳಿಸಲಾಗಿದೆ. ಇದು ನೋಡಲು ತುಂಬಾ ಚೆನ್ನಾಗಿದ್ದು, ಹಲವು ಹೊಸತನಗಳಿಗೂ ಸಾಕ್ಷಿಯಾಗಿದೆ. ಡಿಸೆಂಬರ್ 16 ರಿಂದ ಬುಕ್ಕಿಂಗ್‌ ತೆಗೆದುಕೊಳ್ಳುವ ಕಾರ್ಯಕ್ಕೆ ಚಾಲನೆ ದೊರೆಯಲಿದೆ. 2026ರ ಜನವರಿ 15 ರಿಂದ ವಿತರಣೆಯನ್ನು ಶುರುವಾಗಲಿದೆ . ಬನ್ನಿ, ಈ ಕಾರಿನ ಬೆಲೆ ಹಾಗೂ ವಿಶೇಷತೆ ವಿಶೇಷತೆಗಳ ಕುರಿತಂತೆ ಪ್ರಮುಖಾಂಶಗಳು ಏನೆಂಬುದನ್ನು ತಿಳಿಯೋಣ.

ದೇಶದಲ್ಲಿ ಚೀನಾ ಕಾರಿಗಾಗಿ ಕ್ಯೂ ನಿಂತ ಜನ

ಜೆಎಸ್ಡಬ್ಲ್ಯು ಎಂಜಿ ಮೋಟಾರ್ ಇಂಡಿಯಾದ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರಾಗಿರುವ 'ಸೈಬರ್‌ಸ್ಟರ್' ಭಾರತದಲ್ಲಿ ಉತ್ತಮ ಮಾರಾಟದೊಂದಿಗೆ ಅತಿ ಹೆಚ್ಚು ಬೇಡಿಕೆ ಪಡೆದುಕೊಳ್ಳುತ್ತಿದೆ. ಸೆಲೆಬ್ರಿಟಿಗಳಿಂದ ಹಿಡಿದು ಉದ್ಯಮಿಗಳವರೆಗೆ ಈ ಕಾರನ್ನು ಹೆಚ್ಚಾಗಿ ಖರೀದಿಸುತ್ತಿದ್ದಾರೆ. ಇದೇ ವರ್ಷದ ಜುಲೈನಲ್ಲಿ ಬಿಡುಗಡೆಯಾದಾಗಿನಿಂದಲೂ ಬಲವಾದ ಬೇಡಿಕೆಯನ್ನು ಪಡೆದುಕೊಳ್ಳುತ್ತಿದೆ, ಅಲ್ಲದೆ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಕಾರನ್ನು ಬುಕಿಂಗ್ ಮಾಡಿದರೆ ಡೆಲಿವರಿಗೆ ಸುಮಾರು ನಾಲ್ಕರಿಂದ ಐದು ತಿಂಗಳಿಗೆ ಹೆಚ್ಚಿಸಲಾಗಿದೆ ಎಂದು ವಾಹನ ತಯಾರಕ ಕಂಪನಿ ತಿಳಿಸಿದೆ.

34 ಕಿ.ಮೀ ಮೈಲೇಜ್.. 3.70 ಲಕ್ಷ, ಈ ಪುಟ್ಟ ಮಾರುತಿ ಆಲ್ಟೊ ಕಾರು..

ಮಾರುತಿ ಸುಜುಕಿ ಆಲ್ಟೊ ಕೆ10 (Maruti Suzuki Alto K10) ಪುಟ್ಟ ಹ್ಯಾಚ್‌ಬ್ಯಾಕ್ ಆಗಿದ್ದು, ದಶಕಗಳಿಂದಲೂ ಮನೆ ಮಾತಾಗಿದೆ. ಈಗಲೂ ಗ್ರಾಹಕರು ನಾಮುಂದು - ತಾ ಮುಂದು ಎಂಬಂತೆ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಅದಕ್ಕೆ ತಕ್ಕಂತೆ ಎಷ್ಟೇ ಪ್ರತಿಸ್ಪರ್ಧಿ ಕಾರುಗಳು ಮಾರಾಟಕ್ಕೆ ಬಂದರೂ, ಸ್ಪರ್ಧಾತ್ಮಕ ಸಂಖ್ಯೆಯೇ ಮಾರಾಟವಾಗುತ್ತಿದೆ. ನಾವಿಲ್ಲಿ ಇದೇ 'ಆಲ್ಟೊ ಕೆ10' ಕಾರನ್ನು ಏಕೆ ಖರೀದಿಸಬೇಕು ಎಂಬುದರ ಕುರಿತಂತೆ 5 ಪ್ರಮುಖ ಕಾರಣಗಳನ್ನು ತಿಳಿಸಿಕೊಟ್ಟಿದ್ದೇವೆ.

ಪರೀಕ್ಷೆ ವೇಳೆ ಕಾಣಿಸಿಕೊಂಡ ಮಾರುತಿ ಬ್ರೆಝಾ ಫೇಸ್‌ಲಿಫ್ಟ್

ಮಾರುತಿ ಸುಜುಕಿ ತನ್ನ ಜನಪ್ರಿಯ ಎಸ್‌ಯುವಿ ಬ್ರೆಝಾದ ಫೇಸ್‌ಲಿಫ್ಟ್ ಆವೃತ್ತಿಯಲ್ಲಿ ಕೆಲಸ ಮಾಡುತ್ತಿದ್ದು, ಶೀಘ್ರದಲ್ಲೆ ಬಿಡುಗಡೆ ಮಾಡಲು ಜೋರು ಪರೀಕ್ಷೆ ನಡೆಸುತ್ತಿದೆ. 2026 ರಲ್ಲಿ ಬಿಡುಗಡೆಯಾಗಲಿರುವ ಮಾರುತಿ ಸುಜುಕಿ ಬ್ರೆಝಾ ಫೇಸ್‌ಲಿಫ್ಟ್ ಅನ್ನು ಈಗಾಗಲೇ ಹಲವು ಬಾರಿ ರಸ್ತೆಯಲ್ಲಿ ಪರೀಕ್ಷಿಸುತ್ತಿರುವುದನ್ನು (ರೋಡ್ ಟೆಸ್ಟಿಂಗ್) ಗುರುತಿಸಲಾಗಿದೆ, ಸಿಎನ್‌ಜಿ ರೂಪಾಂತರಕ್ಕಾಗಿ ಪ್ರಯೋಗಗಳು ಸಹ ನಡೆಯುತ್ತಿವೆ. ಇತ್ತೀಚೆಗೆ ತೆಗೆದ ಹೊಸ ಸ್ಪೈ ಶಾಟ್‌ಗಳು ಎಸ್‌ಯುವಿಯ ನವೀಕರಿಸಿದ ಮುಂಭಾಗ ಮತ್ತು ಸೈಡ್ ಪ್ರೊಫೈಲ್ ವಿನ್ಯಾಸ ಬದಲಾವಣೆಗಳ ಬಗ್ಗೆ ಸುಳಿವು ನೀಡಿದೆ. ಹೊಸ ಚಿತ್ರಗಳು ಕಾರಿನ ಬಗ್ಗೆ ಏನೆಲ್ಲಾ ಮಾಹಿತಿ ನೀಡಿದೆ ನೋಡೋಣ ಬನ್ನಿ.

ಟಾಟಾ ಬ್ರಹ್ಮಾಸ್ತ್ರ.. ಹೊಸ ಸಿಯೆರಾ ರಗಡ್ SUV ಬಿಡುಗಡೆ

ಟಾಟಾ ಮೋಟಾರ್ಸ್ ಭಾರತದಲ್ಲಿ ಹೊಸ ಸಿಯೆರಾವನ್ನು ಬಿಡುಗಡೆ (ನವೆಂಬರ್ 25, 2025) ಮಾಡಿದೆ. ಇದನ್ನು 20 ವರ್ಷಗಳ ನಂತರ ಭಾರತೀಯ ಮಾರುಕಟ್ಟೆಗೆ ಮತ್ತೆ ಪರಿಚಯಿಸಲಾಗಿದೆ. ಪರಿಚಯಾತ್ಮಕ ಎಕ್ಸ್-ಶೋರೂಂ ಬೆಲೆ ರೂ. 11.49 ಲಕ್ಷದಿಂದ ಪ್ರಾರಂಭವಾಗುತ್ತದೆ, ಬುಕಿಂಗ್ ಡಿಸೆಂಬರ್ 16, 2025 ರಿಂದ ಪ್ರಾರಂಭವಾಗುತ್ತದೆ ಮತ್ತು ವಿತರಣೆಗಳು ಜನವರಿ 2026 ರಲ್ಲಿ ಪ್ರಾರಂಭವಾಗಲಿವೆ.​ ಹೊಸ ಟಾಟಾ ಸಿಯೆರಾ ಪೆಟ್ರೋಲ್ ಮತ್ತು ಡೀಸೆಲ್ ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಲಭ್ಯವಿರುತ್ತದೆ. ಎಲೆಕ್ಟ್ರಿಕ್ ಆವೃತ್ತಿಯು ನಂತರ ಬಿಡುಗಡೆಯಾಗಲಿದೆ ಎಂದು ತಿಳಿದುಬಂದಿದೆ.
Advertisement

Hero: ನಂ.1 ಬೈಕ್‌ಯಿದು.. 70 Km ಮೈಲೇಜ್, ಆದರೂ ಹೀರೋ ಸ್ಪ್ಲೆಂಡರ್‌..

ಹೀರೋ ಸ್ಪ್ಲೆಂಡರ್‌ (Hero Splendor) ನಂ.1 ಬೈಕ್ ಎಂದೇ ಹೆಸರುವಾಸಿಯಾಗಿದೆ. ಬಡ ಹಾಗೂ ಮಧ್ಯಮ ವರ್ಗದ ಗ್ರಾಹಕರು ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಆದರೂ ಈ ಅಕ್ಟೋಬರ್ ತಿಂಗಳಲ್ಲಿ 'ಸ್ಪ್ಲೆಂಡರ್‌' ಮಾರಾಟ ಸಂಖ್ಯೆ ಸ್ವಲ್ಪ ಮಟ್ಟಿಗೆ ಇಳಿಮುಖವಾಗಿದೆ. 3,40,131 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಿಸಲಾಗಿದೆ. 2024ರ ಇದೇ ಅವಧಿಯಲ್ಲಿ 3,91,612 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ ಸಂಖ್ಯೆಯನ್ನು ವಿಶ್ಲೇಷಿಸಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ -13.15% ಕುಸಿತವಾಗಿದೆ.

28.65 Km ಮೈಲೇಜ್.. ಈ ಹೊಸ ಮಾರುತಿ ಕಾರು ಖರೀದಿಸಬೇಕೇ, ಆನ್-ರೋಡ್..

ಮಾರುತಿ ಸುಜುಕಿ ವಿಕ್ಟೋರಿಸ್ (Maruti Suzuki Victoris) ಪ್ರಮುಖ ಎಸ್‌ಯುವಿಯಾಗಿದೆ. ಈ ಕಾರನ್ನು ಅರೆನಾ ಡೀಲರ್‌ಶಿಪ್ ಮೂಲಕ ಮಾರಾಟಗೊಳಿಸಲಾಗುತ್ತದೆ. ಇದು ತುಂಬಾ ಅಚ್ಚುಕಟ್ಟಾದ ವಿನ್ಯಾಸ ಹೊಂದಿದ್ದು, ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದಿದೆ. ರೂ.10.50 ಲಕ್ಷದಿಂದ ರೂ.19.99 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ನೀವು ಹೊಚ್ಚ ಹೊಸ ಕಾರೊಂದನ್ನು ಖರೀದಿ ಮಾಡಲು ಆಲೋಚಿಸಿದ್ದೀರಾ.. ಹಾಗಾದರೆ 'ವಿಕ್ಟೋರಿಸ್' ಅತ್ಯುತ್ತಮವಾದ ಆಯ್ಕೆಯಾಗಲಿದೆ. ಬನ್ನಿ, ಈ ಎಸ್‌ಯುವಿಯ ಆನ್-ರೋಡ್ ಬೆಲೆ ಎಷ್ಟು.. ಇಎಂಐ ಏನು ಎಂಬುದರ ಕುರಿತಂತೆ ಸಂಕ್ಷಿಪ್ತವಾದ ವಿವರಗಳನ್ನು ತಿಳಿಯೋಣ.

ಸ್ಪೋರ್ಟಿ ಬಜಾಜ್ ಪಲ್ಸರ್ 125 ಬೆಲೆ ಇಷ್ಟೆನಾ?

ಬಜಾಜ್ ಪಲ್ಸರ್ 125 ಬೈಕ್ ಅನ್ನು 125 ಸಿಸಿ ವಿಭಾಗದಲ್ಲಿ ಸ್ಪೋರ್ಟಿ ಸ್ಟೈಲ್ ಬಯಸುವ ಸವಾರರಿಗಾಗಿ ವಿನ್ಯಾಸಗೊಳಿಸಲಾಗಿದ್ದು, ಭಾರತದಲ್ಲಿ ಲಭ್ಯವಿರುವ ಒಂದು ಸೊಗಸಾದ ಮತ್ತು ಸ್ಪೋರ್ಟಿ 125cc ಮೋಟಾರ್‌ಸೈಕಲ್ ಆಗಿದೆ. ಕಾಲೇಜು ಯುವಕರು ಹಾಗೂ ಕಚೇರಿಗಳಿಗೆ ತೆರಳುವ ಬೈಕ್ ಉತ್ಸಾಹಿಗಳಿಗೆ ಉತ್ತಮ ಆಯ್ಕೆಯಾಗಿದೆ. ಜೊತೆಗೆ ವಿಶ್ವಾಸಾರ್ಹ ಕಾರ್ಯಕ್ಷಮತೆ, ಉತ್ತಮ ಮೈಲೇಜ್ ಹಾಗೂ ಹಣಕ್ಕೆ ತಕ್ಕ ಮೌಲ್ಯ ಬಯಸುವವರಿಗೂ ಆಕರ್ಷಕ ಆಯ್ಕೆಯಾಗಿದೆ. ಹೊಸ ಬಜಾಜ್ 125 ಬೈಕ್ ಬೆಲೆ, ಎಂಜಿನ್ ವಿಶೇಷಣಗಳು, ಬಣ್ಣದ ಆಯ್ಕೆಗಳು ಮತ್ತು ಹೆಚ್ಚಿನವುಗಳ ಬಗ್ಗೆ ನೋಡೋಣ.

Honda Activa: ಕಿಂಗ್ ಆಫ್ ದಿ ಸ್ಕೂಟರ್, ಅಗ್ಗದ ಹೋಂಡಾ ಆಕ್ಟಿವಾಗೆ..

ಹೋಂಡಾ ಆಕ್ಟಿವಾ (Honda Activa) ನಂಬರ್ 1 ಸ್ಕೂಟರ್ ಎಂದೇ ಹೆಸರುವಾಸಿಯಾಗಿದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಕೊಂಡುಕೊಳ್ಳುತ್ತಿದ್ದಾರೆ. ಈ ಅಕ್ಟೋಬರ್ ತಿಂಗಳಲ್ಲಿ 'ಆಕ್ಟಿವಾ' ಭಾರೀ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಒಟ್ಟು 3,26,551 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಣೆ ಮಾಡಲಾಗಿದೆ. 2024ರ ಇದೇ ಅವಧಿಯಲ್ಲಿ 2,66,806 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿಸಂಖ್ಯೆಯಲ್ಲಿ ಲೆಕ್ಕ ಹಾಕಿದಾಗ, ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 22.39 ಪ್ರಗತಿಯಾಗಿದೆ.

Renault: 22 ಕಿ.ಮೀ ಮೈಲೇಜ್.. 4.30 ಲಕ್ಷ! ರೆನಾಲ್ಟ್ ಕ್ವಿಡ್‌ಗೆ..

ರೆನಾಲ್ಟ್ ಕ್ವಿಡ್ (Renault Kwid) ಪ್ರಖ್ಯಾತ ಹ್ಯಾಚ್‌ಬ್ಯಾಕ್ ಆಗಿದೆ. ರೂ.4.30 ಲಕ್ಷದಿಂದ ರೂ.5.99 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಆರ್‌ಎಕ್ಸ್ಇ, ಆರ್‌ಎಕ್ಸ್ಎಲ್ (ಒ) ಹಾಗೂ ಆರ್‌ಎಕ್ಸ್‌ಟಿ ಎಂಬ ರೂಪಾಂತರಗಳೊಂದಿಗೂ ಲಭ್ಯವಿದೆ. ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಒಳಗೊಂಡಿದೆ. ಐಸ್ ಕೂಲ್ ವೈಟ್, ಔಟ್‌ಬ್ಯಾಕ್ ಬ್ರೊನ್ ಮತ್ತು ಮೂನ್‌ಲೈಟ್ ಸಿಲ್ವರ್ ಸೇರಿದಂತೆ ಹಲವು ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ. 5 ಆಸನಗಳನ್ನು ಒಳಗೊಂಡಿದ್ದು, ಪ್ರಯಾಣಿಕರು ಸುಲಭವಾಗಿ ಓಡಾಟ ನಡೆಸಬಹುದು. ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 279 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಪಡೆದಿದೆ.