ಪಕ್ಕ ಉ.ಕರ್ನಾಟಕ ಹುಡ್ಗ.. ದುಬಾರಿ ಬೆಲೆಯ ಸ್ವದೇಶಿ 'Thar Roxx'..
ಆಟೋಮೊಬೈಲ್ಸ್
- 1 year, 5 month, 19 days ago
ಬಾಳು ಬೆಳಗುಂದಿ (Balu Belagundi) ಪಕ್ಕ ಉತ್ತರ ಕರ್ನಾಟಕ ಪ್ರತಿಭೆಯಾಗಿದ್ದು, ಮೂಲತಃ ಹಾವೇರಿ ಜಿಲ್ಲೆಯವರು. ತಮ್ಮದೇ ಶೈಲಿಯಲ್ಲಿ ಹಾಡುಗಳನ್ನು ಬರೆದು ಹಾಡುವ ಅವರಿಗೆ ಯೂಟ್ಯೂಬ್ನಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಫಾಲೋವರ್ಗಳನ್ನು ಹೊಂದಿದ್ದಾರೆ. ಜೀ ಕನ್ನಡದಲ್ಲಿ ಪ್ರಸಾರವಾಗುವ ಸರಿಗಮಪ (Sa Re Ga Ma Pa) ಶೋನಲ್ಲೂ ಬಾಳು ಬೆಳಗುಂದಿ ಸ್ಪರ್ಧಿಯಾಗಿದ್ದು, ಭರವಸೆಯ ಗಾಯಕರಾಗಿ ಹೊರಹೊಮ್ಮುತ್ತಿದ್ದಾರೆ. ಈಗಾಗಲೇ, ಶಶಾಂಕ್ ಆಕ್ಷನ್ ಕಟ್ ಹೇಳಿ, ಡಾರ್ಲಿಂಗ್ ಕೃಷ್ಣ ನಾಯಕ ನಟನಾಗಿ ನಟಿಸುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ 'ಬ್ರ್ಯಾಟ್'ನಲ್ಲಿಯು ಹಾಡೊಂದನ್ನು ಹಾಡುವ ಅವಕಾಶ ಸಿಕ್ಕಿದೆ. ಈ ಚಾನ್ಸ್ನ್ನು ಸರಿಗಮಪ ಶೋನ ತೀರ್ಪುಗಾರರಾದ ಅರ್ಜುನ್ ಜನ್ಯ ಅವರು ನೀಡಿದ್ದಾರೆ.