ಬಡವರ ಬಂಡಿಯಿದು.. 67,885 ರೂಪಾಯಿ, ಫುಲ್ ಟ್ಯಾಂಕ್ ಮಾಡಿಸಿದ್ರೆ 770..

ಬಜಾಜ್ ಸಿಟಿ 110ಎಕ್ಸ್ (Bajaj CT 110X) ಜನಪ್ರಿಯ ಬೈಕ್ ಎಂದೇ ಹೆಸರುವಾಸಿಯಾಗಿದೆ. ಇದನ್ನು ನಗರ ಹಾಗೂ ಗ್ರಾಮೀಣ ಪ್ರದೇಶದ ದುಡಿಯುವ ವರ್ಗದ ಜನರು ಮೆಚ್ಚಿಕೊಂಡಿದ್ದಾರೆ. ನೀವು ಹೊಚ್ಚ ಹೊಸ ಮೋಟಾರ್‌ಸೈಕಲ್‌ವೊಂದನ್ನು ಖರೀದಿಸಲು ಆಲೋಚಿದ್ದೀರಾ.. ಹಾಗಾದರೆ 'ಸಿಟಿ 110ಎಕ್ಸ್' ಬೆಸ್ಟ್ ಚಾಯ್ಸ್ ಆಗಲಿದೆ. ಬನ್ನಿ, ಈ ಬೈಕ್‌ನ ಬೆಲೆ ಎಷ್ಟು, ಹೇಗೆ ಕಾರ್ಯ ನಿರ್ವಹಿಸುತ್ತದೆ ಹಾಗೂ ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

ಪವರ್‌ಫುಲ್ ಎಲೆಕ್ಟ್ರಿಕ್ ಎಸ್‌ಯುವಿಗಳು ಬಿಡುಗಡೆಗೆ ಸಜ್ಜು

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳು ಮೊದಲಿನಂತಲ್ಲದೆ ಈಗ ಜನರಲ್ಲಿ ವಿಶ್ವಾಸ ಗಳಿಸಿವೆ. ಕಡಿಮೆ ಮೇಂಟನೆನ್ಸ್ ಹಾಗೂ ಚಾಲನಾ ವೆಚ್ಚವಿಲ್ಲದೆ ಪ್ರಯಾಣ ಮಾಡುವ ಕಾರಣದಿಂದ ಭಾರತದಲ್ಲಿ ಇವಿಗಳ ಮಾರಾಟ ಹೆಚ್ಚಾಗಿದೆ. ಜೊತೆಗೆ ಪ್ರಮುಖ ಬ್ರಾಂಡ್‌ಗಳು ಈಗ ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸಲು ಮುಂದಾಗುತ್ತಿದ್ದಾರೆ. ಈಗ 2026 ರಲ್ಲಿ ಭಾರತೀಯ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆ ಗಮನಾರ್ಹ ಬೆಳವಣಿಗೆಯನ್ನು ಕಾಣುವ ನಿರೀಕ್ಷೆಯಿದೆ. ಟಾಟಾ, ಮಾರುತಿ ಸುಜುಕಿ, ಟೊಯೋಟಾದಂತಹ ಪ್ರಮುಖ ಬ್ರ್ಯಾಂಡ್‌ಗಳು ಹೊಸ ಎಲೆಕ್ಟ್ರಿಕ್ ಕಾರುಗಳು ಮತ್ತು SUV ಗಳನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿವೆ.

ಹೊಸ ಮಹೀಂದ್ರಾ ಕಾರು ಶೋರೂಂಗೆ ಬಂದೇ ಬಿಡ್ತು.. ಅತಿ ಶೀಘ್ರದಲ್ಲೇ..

ಇದೇ ಜನವರಿ 5 ರಂದು ನೂತನ ಮಹೀಂದ್ರಾ ಎಕ್ಸ್‌ಯುವಿ 7ಎಕ್ಸ್ಒ (Mahindra XUV 7XO) ಕಾರನ್ನು ಮಾರಾಟಕ್ಕೆ ತರಲಾಗಿದೆ. ಇದೊಂದು ಫ್ಯಾಮಿಲಿ ಎಸ್‌ಯುವಿಯಾಗಿದೆ. ಜನವರಿ 14 ರಿಂದ ಬುಕ್ಕಿಂಗ್ ಶುರುವಾಗಲಿದೆ. ಆಸಕ್ತರು ರೂ.21,000 ಮುಂಗಡ ಹಣ ಪಾವತಿಸಿ, ಆರ್ಡರ್ ಮಾಡಬಹುದು. ಆ ದಿನದಂದೇ ಪ್ರಿ-ಬುಕ್ಕಿಂಗ್ ಮಾಡಿದ ಖರೀದಿದಾರರಿಗೆ ಗರಿಷ್ಠ ಶ್ರೇಣಿ ರೂಪಾಂತರಗಳನ್ನು ವಿತರಿಸಲಾಗಿದೆ. ಏಪ್ರಿಲ್‌ನಿಂದ ಆರಂಭಿಕ ಶ್ರೇಣಿ ರೂಪಾಂತರಗಳ ಡಿಲೆವರಿಯನ್ನು ಪ್ರಾರಂಭಿಸಲಾಗುತ್ತದೆ. ಸದ್ಯ, ದೇಶಾದ್ಯಂತ ಶೋರೂಂಗಳಿಗೆ ಹೊಸ 'ಎಕ್ಸ್‌ಯುವಿ 7ಎಕ್ಸ್ಒ' ಎಸ್‌ಯುವಿಗಳನ್ನು ತಲುಪಿಸುವ ಕಾರ್ಯಕ್ಕೂ ಕಂಪನಿಯು ಚಾಲನೆ ನೀಡಿದೆ.

Tata Punch: ನಾಳೆ ಹೊಸ ಟಾಟಾ ಎಸ್‌ಯುವಿ ಬಿಡುಗಡೆ: ಕಮ್ಮಿ ಬೆಲೆ

ಟಾಟಾ ಮೋಟಾರ್ಸ್ ನೀಡುವ ಜನಪ್ರಿಯ ಎಸ್‌ಯುವಿಗಳಲ್ಲಿ 'ಟಾಟಾ ಪಂಚ್' ಕಾಂಪ್ಯಾಕ್ಟ್ ಎಸ್‌ಯುವಿ ಕೂಡ ಒಂದಾಗಿದ್ದು, ದೇಶದಲ್ಲಿ ಭಾರೀ ಬೇಡಿಕೆ ಪಡೆದುಕೊಂಡಿದೆ. ಈ ಎಸ್‌ಯುವಿಯನ್ನು ಈಗ ಫೇಸ್‌ಲಿಫ್ಟ್‌ನೊಂದಿಗೆ ನಾಳೆ ಬಿಡುಗಡೆ ಮಾಡಲು ಟಾಟಾ ಮೋಟಾರ್ಸ್ ಸಜ್ಜಾಗಿದೆ. ಈಗಾಗಲೇ ಹೊಸ 2026 ಟಾಟಾ ಪಂಚ್ ಫೆಸ್‌ಲಿಫ್ಟ್ ಎಸ್‌ಯುವಿ ಕುರಿತ ಹಲವು ಟೀಸರ್ ವಿಡಿಯೋಗಳು ಹೊರಬಂದಿದ್ದು, ಇವುಗಳ ಆಧಾರದ ಮೇಲೆ ಕಂಡುಕೊಳ್ಳಲಾದ ದೊಡ್ಡ ಅಪ್‌ಡೇಟ್‌ಗಳು ಹಾಗೂ ಐದು ಬಹುತೇಕ ಖಚಿತವಾಗಿರುವ ಬದಲಾವಣೆಗಳನ್ನು ಇಲ್ಲಿ ನೋಡೋಣ.
Advertisement

Toyota: ಇದು ಗಟ್ಟಿಮುಟ್ಟದ ಕಾರಿದು.. 28 Km ಮೈಲೇಜ್, ಬರೀ 10.95..

ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ (Toyota Urban Cruiser Hyryder) ಜನಪ್ರಿಯ ಎಸ್‌ಯುವಿ ಎಂದೇ ಮನೆ ಮಾತಾಗಿದೆ. ಈ ಕಾರಿಗೆ ಫುಲ್ ಡಿಮ್ಯಾಂಡ್ ಇದ್ದು, ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಕಳೆದ ತಿಂಗಳು (ಡಿಸೆಂಬರ್ - 2025) ಸಹ 'ಅರ್ಬನ್ ಕ್ರೂಸರ್ ಹೈರೈಡರ್' ಭಾರೀ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಒಟ್ಟು 7022 ಯುನಿಟ್‌ಗಳನ್ನು ಗ್ರಾಹಕರಿಗೆ ವಿತರಿಸಲಾಗಿದೆ. 2024ರ ಇದೇ ಅವಧಿಯಲ್ಲಿ 4770 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿಅಂಶವನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 47.21% ಪ್ರಗತಿಯಾಗಿದೆ.

Vinfast: ಮಾರಾಟ ಫುಲ್ ಜೋರು: ಜನರಿಗೆ ಫುಲ್ ಇಷ್ಟವಾಗಿವೆ ಎಸ್‌ಯುವಿಗಳು

ವಿಯೆಟ್ನಾಂ ಮೂಲದ ಜನಪ್ರಿಯ ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿಯಾಗಿರುವ 'ವಿನ್‌ಫಾಸ್ಟ್' (Vinfast), ತ್ವರಿತ ಬೆಳವಣಿಗೆ ಮತ್ತು ಭಾರತೀಯ ಗ್ರಾಹಕರಲ್ಲಿ ಬಲವಾದ ಸ್ವೀಕಾರವನ್ನು ಕಾಣುತ್ತಿದೆ. 2025 ರ ಆರಂಭದಲ್ಲಿ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದ ಈ ಕಂಪನಿಯು, VF6 ಮತ್ತು VF7 ಎಂಬ ಎರಡು ಎಲೆಕ್ಟ್ರಿಕ್ ಎಸ್‌ಯುವಿ ಮಾಡಲ್‌ಗಳನ್ನು ಭಾರತದಲ್ಲಿ ಪರಿಚಯಿಸಿದೆ. ತಡವಾಗಿ ಕಾರುಗಳನ್ನು ಬಿಡುಗಡೆ ಮಾಡಿದರು ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ವಿನ್‌ಫಾಸ್ಟ್ ದೇಶದಲ್ಲಿ ಕೈಗೆಟುಕುವ ಪ್ರೀಮಿಯಂ ಎಲೆಕ್ಟ್ರಿಕ್ ಕಾರುಗಳನ್ನು ನೀಡುವ ಪ್ರಮುಖ ಕಂಪನಿಯಾಗಿ ಹೊರಹೊಮ್ಮುತ್ತಿದೆ.

TATA: ನಾಳೆ ಹೊಸ ಟಾಟಾ ಕಾರು ಬಿಡುಗಡೆ.. ಬೆಲೆ ಎಷ್ಟು, ವಿಶೇಷತೆಗಳೇನು?

ನಾಳೆ (ಡಿ.12) ಹೊಸ ಟಾಟಾ ಪಂಚ್ ಫೇಸ್‌ಲಿಫ್ಟ್ (Tata Punch Facelift) ಎಸ್‌ಯುವಿ ಅದ್ದೂರಿಯಾಗಿ ಬಿಡುಗಡೆಗೊಳ್ಳಲಿದೆ. ಈ ಕಾರಿನ ಬರುವಿಕೆಗಾಗಿ ಗ್ರಾಹಕರು ಕೂಡ ತುದಿಗಾಲಿನಲ್ಲಿ ನಿಂತುಕೊಂಡು ಕಾಯುತ್ತಿದ್ದಾರೆ. ಈಗಾಗಲೇ, ನೂತನ ಎಸ್‌ಯುವಿ ಕುರಿತಂತೆ ಬಹುತೇಕ ಎಲ್ಲ ವಿವರಗಳನ್ನು ಕಂಪನಿಯು ಬಹಿರಂಗಪಡಿಸಿದೆ. ಈ ಕಾರು ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಹೊಂದಿದ್ದು, ನಾನಾ ಬಗೆಯ ಹೊಸತನಗಳಿಗೂ ಸಾಕ್ಷಿಯಾಗಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

Mileage cars: ಬರೀ 5 ಲಕ್ಷದೊಳಗೆ ಸಿಗುತ್ತವೆ... 30 ಕಿ.ಮೀ ಮೈಲೇಜ್

ಉತ್ತಮ ಮೈಲೇಜ್, ಕಡಿಮೆ ನಿರ್ವಹಣೆ ಮತ್ತು ಆಧುನಿಕ ವೈಶಿಷ್ಟ್ಯಗಳನ್ನು ನೀಡುವ ಕಡಿಮೆ ಬೆಲೆಯ ಕಾರುಗಳನ್ನು ಹುಡುಕುತ್ತಿರುವವರಿಗೆ ಈ ಲೇಖನ ಸಹಕರಿಸಬಹುದು. ಭಾರತದಲ್ಲಿ ಕಡಿಮೆ ಬೆಲೆಯಲ್ಲಿ ಕಾರು ಖರೀದಿಸಲು ಬಯಸುವವರಿಗೆ, ಟಾಟಾ, ಮಾರುತಿ, ರೆನಾಲ್ಟ್ ಕಂಪನಿಯ ಕಾರುಗಳು ನಿಮ್ಮ ಬಜೆಟ್‌ಗೆ ಅನುಗುಣವಾಗಿ ಬೆಸ್ಟ್ ಕಾರುಗಳನ್ನು ನೀಡುತ್ತಿವೆ. ಇವು ಸಿಟಿ ಪ್ರಯಾಣ ಹಾಗೂ ಲಾಂಗ್‌ ಡ್ರೈವ್‌ ಎರಡಕ್ಕೂ ಹೊಂದಿಕೊಳ್ಳುವ ಕಾರುಗಳಾಗಿದ್ದು, ಐದು ಮಂದಿಗೆ ಆರಾಮದಾಯಕ ಪ್ರಯಾಣ ಅನುಭವ ನೀಡುವ ಅತ್ಯುತ್ತಮ ಮೈಲೇಜ್ ಕಾರು (Best Mileage cars) ಗಳಾಗಿವೆ.
Advertisement

Honda Amaze: ಬೆಸ್ಟ್ ಸೆಡಾನ್ ಕಾರು... 5-ಸ್ಟಾರ್ ಸುರಕ್ಷತೆ

ಭಾರತದ ಪ್ರಮುಖ ಕಾರುಗಳ ತಯಾರಕರಾದ ಹೋಂಡಾ (Honda), ಇತ್ತೀಚಿನ 3ನೇ ತಲೆಮಾರಿನ ಹೋಂಡಾ ಅಮೇಜ್ (Honda Amaze)‌ ಗೆ ಭಾರತ್ ಹೊಸ ಕಾರು ಮೌಲ್ಯಮಾಪನ ಕಾರ್ಯಕ್ರಮದಲ್ಲಿ (ಭಾರತ್ NCAP) ವಯಸ್ಕ ಪ್ರಯಾಣಿಕರ ರಕ್ಷಣೆಯಲ್ಲಿ 5-ಸ್ಟಾರ್ ಸುರಕ್ಷತಾ ರೇಟಿಂಗ್ ಮತ್ತು ಮಕ್ಕಳ ಪ್ರಯಾಣಿಕರ ರಕ್ಷಣೆಯಲ್ಲಿ 4-ಸ್ಟಾರ್ ಸುರಕ್ಷತಾ ರೇಟಿಂಗ್ ನೀಡಲಾಗಿದೆ. ಇದರ ಬೆಲೆಯು ರೂ. 8.19 ಲಕ್ಷ (ಎಕ್ಸ್-ಶೋರೂಂ) ದಿಂದ ಆರಂಭವಾಗುತ್ತದೆ. ಇದು ಲೆವೆಲ್ 2 ADAS, 8-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, E20 ಇಂಧನ ಕಂಪ್ಲೈಂಟ್ ನಂತಹ ಹಲವು ವಿಶೇಷತೆಗಳನ್ನು ಒಳಗೊಂಡಿದೆ.

ಭಾರತೀಯ ರಸ್ತೆಗಳಲ್ಲಿ 5 ಲಕ್ಷ ಸಂಪರ್ಕಿತ ಕಾರುಗಳನ್ನು ದಾಟಿದ ಕಿಯಾ

ಪ್ರಮುಖ ಕಾರು ತಯಾರಕ ಕಂಪನಿ ಕಿಯಾ, ಭಾರತದಲ್ಲಿ 5,00,000 ಸಂಪರ್ಕಿತ ಕಾರು (connected cars)ಗಳನ್ನು ಮೀರಿಸುವ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ ಎಂದು ಘೋಷಿಸಿದೆ. ಕನೆಕ್ಟೆಡ್ ಕಾರ್ ವೇರಿಯೆಂಟ್‌ಗಳು ಈಗ ಕಂಪನಿಯ ದೇಶೀಯ ಮಾರಾಟದಲ್ಲಿ ಶೇ40 ಕೊಡುಗೆ ನೀಡುತ್ತವೆ. ಕಿಯಾ ಸೆಲ್ಟೋಸ್ ಈ ಮೈಲಿಗಲ್ಲಿಗೆ ಪ್ರಾಥಮಿಕ ಕೊಡುಗೆ ನೀಡುತ್ತಾ ಮುಂದುವರೆದಿದೆ, ಕಿಯಾ ಒಟ್ಟು ಸಂಪರ್ಕಿತ ಕಾರು ಮಾರಾಟದಲ್ಲಿ ಶೇ70 ನಷ್ಟಿದೆ. ಸೋನೆಟ್ ಮತ್ತು ಕ್ಯಾರೆನ್ಸ್ ಸಹ ಈ ಮೈಲಿಗಲ್ಲಿನಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ಕಿಯಾ ಇಂಡಿಯಾದ ಪೋರ್ಟ್‌ಫೋಲಿಯೊದಾದ್ಯಂತ ಸಂಪರ್ಕಿತ ವೈಶಿಷ್ಟ್ಯಗಳಿಗೆ ವ್ಯಾಪಕವಾದ ಬೇಡಿಕೆಯನ್ನು ಎತ್ತಿ ತೋರಿಸುತ್ತವೆ.

ಸಿಂಪಲ್ ಎನರ್ಜಿ ಜನ್-2 ಮಾಡಲ್‌ ವಿಶೇಷತೆಗಳು

ಬೆಂಗಳೂರು ಮೂಲದ ಸ್ಟಾರ್ಟ್ಅಪ್ ಸಿಂಪಲ್ ಎನರ್ಜಿ, ಸಿಂಪಲ್ ಒನ್ ಜೆನ್ 2 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆ ಮಾಡಿದೆ. ಕೋರ್ ಆರ್ಕಿಟೆಕ್ಚರ್ ಅನ್ನು ಬದಲಾಯಿಸದೆ ಅದರ ಸ್ಟೈಲಿಂಗ್, ಚಾಲನಾ ಡೈನಾಮಿಕ್ಸ್ ಮತ್ತು ಡಿಜಿಟಲ್ ಅನುಭವವನ್ನು ಹೆಚ್ಚಿಸಲಾಗಿದೆ. ಜೊತೆಗೆ ಸಿಂಪಲ್ ಅಲ್ಟ್ರಾ (Simple Ultra) ಎಂಬ ಹೈ-ಸ್ಪೀಡ್ ಸ್ಕೂಟರ್‌ನ್ನು ಅನಾವರಣಗೊಳಿಸಲಾಗಿದೆ. ಈ ಸಿಂಪಲ್ ಅಲ್ಟ್ರಾ ವಿಶೇಷತೆ ಏನೆಂದರೆ ಒಮ್ಮೆ ಚಾರ್ಜ್ ಮಾಡಿ 400 ಕಿ.ಮೀ ಓಡಿಸಬಹುದು, ಇದನ್ನು ಶೀಘ್ರದಲ್ಲೆ ಬಿಡುಗಡೆ ಮಾಡುವುದಾಗಿ ಕಂಪನಿ ಹೇಳಿದೆ.

ಎಥರ್ ರಿಜ್ಟಾ VS ಸುಜುಕಿ ಇ-ಆಕ್ಸೆಸ್: ಖರೀದಿ ಗೊಂದಲವೇ?

ಭಾರತದಲ್ಲಿ ದ್ವಿಚಕ್ರ ವಾಹನ ವಿಭಾಗವು ವೇಗವಾಗಿ ಬೆಳೆಯುತ್ತಿದೆ, ಇಂಧನ ಬೆಲೆಗಳ ಏರಿಕೆಯು ಗ್ರಾಹಕರನ್ನು ಎಲೆಲಕ್ಟ್ರಿಕ್ ವಾಹನಗಳತ್ತ ಮುಖ ಮಾಡುವಂತೆ ಮಾಡಿದೆ. ಮೇಂಟೆನನ್ಸ್ ಖರ್ಚು ಕೂಡ ತೀರಾ ಕಡಿಮೆ ಇರುವುದರಿಂದ ಖರೀದಿದಾರರು ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚಾಗಿ ಖರೀದಿಸುತ್ತಿದ್ದಾರೆ. ಇದನ್ನು ಅರಿತಿರುವ ದೊಡ್ಡ ಬ್ರಾಂಡ್‌ಗಳು ಈಗ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಹೆಚ್ಚಾಗಿ ಬಿಡುಗಡೆ ಮಾಡುತ್ತಿದ್ದಾರೆ. ಮೊನ್ನೆಯಷ್ಟೆ ಸುಜುಕಿ ತನ್ನ ಜನಪ್ರಿಯ ಮಾಡಲ್ ಆಕ್ಸಿಸ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಈ ಸ್ಕೂಟರ್ ಅನ್ನು ಪ್ರಸ್ತುತ ಹೆಚ್ಚು ಮಾರಾಟ ಕಾಣುತ್ತಿರುವ ಅಗ್ಗದ ಬೆಲೆಯ ಎಥರ್ ರಿಜ್ಟಾಗೆ ಹೋಲಿಕೆ ಮಾಡಿ ಯಾವುದು ಬೆಸ್ಟ್ ಎಂಬುದನ್ನು ತಿಳಿಯೋಣ.
Advertisement

ಬೈಕ್‌ನಂತೆ 27 Km ಮೈಲೇಜ್.. 10.77 ಲಕ್ಷ ರೂಪಾಯಿ, 5-ಸೀಟರ್..

ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ (Maruti Suzuki Grand Vitara) ಪ್ರಖ್ಯಾತ ಎಸ್‌ಯುವಿ ಎಂದೇ ಮನೆ ಮಾತಾಗಿದೆ. ಈ ಕಾರಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಖರೀದಿಸುತ್ತಿದ್ದಾರೆ. ಕಳೆದು ತಿಂಗಳು (ಡಿಸೆಂಬರ್ - 2025) ಸಹ ಗ್ರ್ಯಾಂಡ್ ವಿಟಾರಾ ಕಾರು ಭಾರೀ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಒಟ್ಟು 8,597 ಯುನಿಟ್‌ಗಳನ್ನು ಗ್ರಾಹಕರಿಗೆ ವಿತರಣೆ ಮಾಡಲಾಗಿದೆ. 2024ರ ಇದೇ ಅವಧಿಯಲ್ಲಿ 7,093 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿಅಂಶವನ್ನು ಲೆಕ್ಕಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 21.20% ಪ್ರಗತಿಯಾಗಿದೆ.

Tesla: ಬೆಂಗಳೂರಿಗೆ ಟೆಸ್ಲಾ ಲಗ್ಗೆ.. ಅತಿ ಶೀಘ್ರದಲ್ಲೇ ಹೊಸ ಶೋರೂಂ..

ವಿಶ್ವದ ನಂಬರ್ 1 ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ (Elon Musk) ಮಾಲೀಕತ್ವದ ಟೆಸ್ಲಾ (Tesla) ಪ್ರಮುಖ ಕಾರು ತಯಾರಕ ಕಂಪನಿಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಮಾಡೆಲ್ ವೈ, ಮಾಡೆಲ್ 3 ಹಾಗೂ ಮಾಡೆಲ್ ಎಸ್ ಸೇರಿದಂತೆ ವಿವಿಧ ಕಾರುಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. 2025ರ ಜುಲೈನಲ್ಲಿ ಭಾರತದ ವಾಹನ ಮಾರುಕಟ್ಟೆಗೆ ಪಾದಾರ್ಪಣೆ ಮಾಡಿತ್ತು. ವಾಣಿಜ್ಯ ನಗರಿ ಮುಂಬೈನಲ್ಲಿ ಮೊದಲ ಶೋರೂಂನ್ನು ತೆರೆದಿತ್ತು. ಆ ಬಳಿಕ, ನವದೆಹಲಿ ಹಾಗೂ ಗುರುಗ್ರಾಮಕ್ಕೂ ಲಗ್ಗೆ ಇಟ್ಟಿತ್ತು.

Simple One: 265 Km ಓಡುತ್ತೆ.. ಬೆಲೆ ಇಷ್ಟೇನಾ.. ಬೆಂಗಳೂರಿನ ಹೊಸ..

Simple Energy launches updated electric scooter series Simple One Gen 2. Check review, features, price, range, specifications, performance. | ಸಿಂಪಲ್ ಎನರ್ಜಿ ನವೀಕರಿಸಿದ ಎಲೆಕ್ಟ್ರಿಕ್ ಸ್ಕೂಟರ್ ಸರಣಿ ಸಿಂಪಲ್ ಒನ್ ಜೆನ್ 2 ಅನ್ನು ಬಿಡುಗಡೆ ಮಾಡಿದೆ. ವಿಮರ್ಶೆ, ವೈಶಿಷ್ಟ್ಯಗಳು, ಬೆಲೆ, ಶ್ರೇಣಿ, ವಿಶೇಷಣಗಳು, ಕಾರ್ಯಕ್ಷಮತೆಯನ್ನು ಪರಿಶೀಲಿಸಿ.

ಸುಧಾರಿತ ಹೈಬ್ರಿಡ್ ತಂತ್ರಜ್ಞಾನ ಪ್ರದರ್ಶಿಸಿದ ಟೊಯೋಟಾ

ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ 'ಅಡ್ವಾಂಟೇಜ್ ಮಹಾರಾಷ್ಟ್ರ ಎಕ್ಸ್‌ಪೋ 2026' ರಲ್ಲಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (TKM) ಭಾಗವಹಿಸುವ ಮೂಲಕ ಫ್ಲೆಕ್ಸ್ - ಇಂಧನ ಸ್ಟ್ರಾಂಗ್ ಹೈಬ್ರಿಡ್ ಎಲೆಕ್ಟ್ರಿಕ್ ವೆಹಿಕಲ್ (SHEV) ತಂತ್ರಜ್ಞಾನದ ಸಾಮರ್ಥ್ಯವನ್ನು ಎತ್ತಿ ತೋರಿಸಿದೆ. ಭಾರತದ ಇಂಧನ ಪರಿವರ್ತನೆಯ ಗುರಿಗಳೊಂದಿಗೆ ಹೊಂದಿಕೊಂಡಿರುವ ಕೈಗಾರಿಕಾ ಸಹಯೋಗ ಮತ್ತು ತಂತ್ರಜ್ಞಾನ ಜಾಗೃತಿಯ ಕಡೆಗೆ ಟೊಯೋಟಾದ ಕೇಂದ್ರೀಕೃತ ವಿಧಾನವನ್ನು ಇಲ್ಲಿ ತೋರಿಸಲಾಗಿದೆ. ಈ ಬಗ್ಗೆ ಹೆಚ್ಚಿನ ವಿವರಗಳು ಇಲ್ಲಿವೆ.
Advertisement

Vinfast: ಸೈಲೆಂಟ್ ಆಗಿ ಹೊಸ ಬ್ರ್ಯಾಂಡ್‌ನಿಂದ ಗ್ರಾಹಕರಿಗೆ ಶಾಕ್..

ವಿಯೆಟ್ನಾಂ ಮೂಲದ ವಿನ್‌ಫಾಸ್ಟ್‌ (VinFast) ಪ್ರಮುಖ ಕಾರು ತಯಾಕರ ಕಂಪನಿಯಾಗಿ ಹೊರಹೊಮ್ಮಿದೆ. 2025ರ ಸೆಪ್ಟೆಂಬರ್‌ನಲ್ಲಿ ಹೊಚ್ಚ ಹೊಸ ವಿಎಫ್6 ಮತ್ತು ವಿಎಫ್7 ಎಲೆಕ್ಟ್ರಿಕ್ ಎಸ್‌ಯುವಿಯನ್ನು ಮಾರಾಟಕ್ಕೆ ತಂದಿತ್ತು. ಸದ್ಯ ಗ್ರಾಹಕರ ಜೇಬಿಗೆ ಕತ್ತರಿ ಹಾಕಿದ್ದು, ಇವೆರೆಡು ಕಾರುಗಳ ಬೆಲೆಯನ್ನು ಹೆಚ್ಚಿಸಿದೆ. ರೂಪಾಂತರಗಳಿಗೆ (ವೇರಿಯೆಂಟ್) ಅನುಗುಣವಾಗಿ ರೂ.80,000 ರಿಂದ ರೂ.1.30 ಲಕ್ಷವರೆಗೆ ಅಧಿಕಗೊಳಿಸಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

Suzuki e Access: 1.88 ಲಕ್ಷ.. 95 Km ರೇಂಜ್, ಹೊಸ ಸುಜುಕಿ..

ನಿನ್ನೆಯಷ್ಟೇ ಹೊಚ್ಚ ಹೊಸ ಸುಜುಕಿ ಇ ಆಕ್ಸೆಸ್ (Suzuki e Access) ಎಲೆಕ್ಟ್ರಿಕ್ ಸ್ಕೂಟರ್‌ನ್ನು ಮಾರಾಟಕ್ಕೆ ತರಲಾಗಿದೆ. ಇದು ರೂ.1.88 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ತುಂಬಾ ಚೆನ್ನಾಗಿರುವ ವಿನ್ಯಾಸವನ್ನು ಒಳಗೊಂಡಿದೆ ಮೆಟಾಲಿಕ್ ಮ್ಯಾಟ್ ಸ್ಟೆಲ್ಲಾರ್ ಬ್ಲೂ ಹಾಗೂ ಮೆಟಾಲಿಕ್ ಮ್ಯಾಟ್ ಫೈಬ್ರೊಯಿನ್ ಗ್ರೇ ಸೇರಿದಂತೆ ವಿವಿಧ ಬಣ್ಣಗಳೊಂದಿಗೂ ಸಿಗುತ್ತದೆ. 165 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 1,305 ಎಂಎಂ ವೀಲ್‌ಬೇಸ್‌ನ್ನು ಹೊಂದಿದೆ.

Toyota: ಟೊಯೊಟಾದ ಜನಪ್ರಿಯ ಕಾರುಗಳ ಬೆಲೆ ಏರಿಕೆ..

ಟೊಯೊಟಾ ಇಂಡಿಯಾ (Toyota India) ಪ್ರಮುಖ ವಾಹನ ತಯಾರಕ ಕಂಪನಿಯಾಗಿದೆ. ಇನ್ನೋವಾ ಕ್ರಿಸ್ಟಾ, ಇನ್ನೋವಾ ಹೈಕ್ರಾಸ್ ಹಾಗೂ ಫಾರ್ಚೂನರ್ ಬೆಲೆಗಳನ್ನು ರೂ.74,000 ವರೆಗೆ ಹೆಚ್ಚಿಸಿದೆ. ಆದರೆ ಅರ್ಬನ್ ಕ್ರೂಸರ್ ಟೈಸರ್, ಅರ್ಬನ್ ಕ್ರೂಸರ್ ಹೈರೈಡರ್, ರೂಮಿಯನ್, ಹಿಲಕ್ಸ್, ಕ್ಯಾಮ್ರಿ, ವೆಲ್‌ಫೈರ್ ಮತ್ತು ಲ್ಯಾಂಡ್ ಕ್ರೂಸರ್ 300 ಕಾರುಗಳ ದರವನ್ನು ಏರಿಕೆ ಮಾಡದೇ ಯಥಾಸ್ಥಿತಿಯಲ್ಲಿ ಮುಂದುವರಿಸಲಾಗಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

Suzuki e-ACCESS: ಎಲೆಕ್ಟ್ರಿಕ್ ಆಕ್ಸಿಸ್ ಬಿಡುಗಡೆ: ರಿವರ್ಸ್‌ ಗೇರ್‌

ಪ್ರಮುಖ ದ್ವಿಚಕ್ರ ವಾಹನ ತಯಾರಕರಾದ ಸುಜುಕಿ (Suzuki), ಇಂದು ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಆಗಿರುವ 'ಸುಜುಕಿ ಇ-ಅಕ್ಸೆಸ್' (Suzuki e-ACCESS) ಬಿಡುಗಡೆ ಮಾಡಿದೆ. ಸುಜುಕಿ ಇ-ಅಕ್ಸೆಸ್ ಬೆಲೆ ರೂ. 1,88,490 (ಎಕ್ಸ್-ಶೋರೂಂ) ನಿಂದ ಪ್ರಾರಂಭವಾಗುತ್ತದೆ. ಭಾರತದಲ್ಲಿ ಎಲ್ಲಾ ಅಧಿಕೃತ ಸುಜುಕಿ ಡೀಲರ್ ಶಿಪ್‌ಗಳಲ್ಲಿ ಬುಕಿಂಗ್ ಮಾಡಬಹುದು. ಹೆಚ್ಚುವರಿಯಾಗಿ ಸುಜುಕಿ ಇ-ಅಕ್ಸೆಸ್ ಮಾರಾಟ ಪ್ರಾರಂಭವಾದ ನಂತರ ಫ್ಲಿಪ್ ಕಾರ್ಟ್ ಮೂಲಕವೂ ಖರೀದಿಗೆ ಲಭ್ಯವಾಗಲಿದೆ ಎಂದು ಸುಜುಕಿ ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
Advertisement

Toyota EV: ಟೊಯೋಟಾ ಎಲೆಕ್ಟ್ರಿಕ್ SUV ಬಿಡುಗಡೆಗೆ ದಿನಗಣನೆ

ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗಳು ಹೆಚ್ಚಾಗಿವೆ, ಟಾಟಾದಿಂದ ಹಿಡಿದು ಮಹೀಂದ್ರಾವರೆಗೆ ನಮ್ಮ ಸ್ವದೇಶಿ ಬ್ರಾಂಡ್‌ಗಳು ಎಲೆಕ್ಟ್ರಿಕ್ ವಾಹನ ವಿಭಾಗವನ್ನು ಆಳುತ್ತಿವೆ. ಮತ್ತೊಂದೆಡೆ ಮಾರುತಿ ಸುಜುಕಿ ಹಾಗೂ ಟೊಯೋಟಾ ಬ್ರಾಂಡ್‌ಗಳು ತಮ್ಮ ಮೊದಲ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಲು ತುಸು ಸಮಯ ತೆಗೆದುಕೊಂಡರೂ ಅದ್ದೂರಿಯಾಗಿ ಬಿಡುಗಡೆ ಮಾಡಲು ನೋಡುತ್ತಿವೆ. ಬಹಳ ನಿರೀಕ್ಷೆಗಳ ನಂತರ, ಟೊಯೋಟಾ ಜನವರಿ 19 ರಂದು ತನ್ನ ಮೊದಲ ಎಲೆಕ್ಟ್ರಿಕ್ ಎಸ್‌ಯುವಿಯಾದ ಅರ್ಬನ್ ಕ್ರೂಸರ್ ಇವಿ (Toyota EV) ಬಿಡುಗಡೆ ಮಾಡುವ ನಿರೀಕ್ಷೆಯಿದೆ.

Tata: ಬಲಿಷ್ಠ ಕಾರಿದು.. 13.29 ಲಕ್ಷ, ಹೊಸ ಟಾಟಾ ಸಫಾರಿಗೆ 5..

ಇತ್ತೀಚೆಗೆ ಹೊಸ ಟಾಟಾ ಸಫಾರಿ ಪೆಟ್ರೋಲ್ (Tata Safari Petrol) ಎಸ್‌ಯುವಿಯನ್ನು ಪರಿಚಯಿಸಲಾಗಿದೆ. ಈ ಕಾರು ರೂ.13.29 ಲಕ್ಷದಿಂದ ರೂ.25.19 ಲಕ್ಷ (ಎಕ್ಸ್-ಶೋರೂಂ - ನವದೆಹಲಿ) ಬೆಲೆಯಲ್ಲಿ ಗ್ರಾಹಕರ ಖರೀದಿಗೆ ಲಭ್ಯವಿದೆ. ತುಂಬಾ ಚೆನ್ನಾಗಿರುವ ವಿನ್ಯಾಸವನ್ನು ಒಳಗೊಂಡಿದೆ. ಕಾಸ್ಮಿಕ್ ಗೋಲ್ಡ್, ಫ್ರಾಸ್ಟ್ ವೈಟ್, ರಾಯಲ್ ಬ್ಲೂ, ಡೇಟೋನಾ ಗ್ರೇ, ಕಾರ್ಬನ್ ಬ್ಲ್ಯಾಕ್ ಮತ್ತು ಸ್ಟೆಲ್ತ್ ಬ್ಲ್ಯಾಕ್ ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿಯೂ ಲಭ್ಯವಿದೆ. 205 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಮತ್ತು 2,741 ಮಿ.ಮೀ ವೀಲ್‌ಬೇಸ್‌ನ್ನು ಪಡೆದಿದೆ. 6/ 7 ಆಸನಗಳನ್ನು ಹೊಂದಿದ್ದು, ಎರಡು ಕುಟುಂಬ ಆರಾಮದಾಯಕವಾಗಿ ಪ್ರಯಾಣ ಮಾಡಬಹುದು.

ಒಂದೊಳ್ಳೆ ಫ್ಯಾಮಿಲಿ ಕಾರು ಖರೀದಿಸಲು ಗೊಂದಲವೇ? ತುಂಬಾ ಸಿಂಪಲ್

ಭಾರತದಲ್ಲಿ ಅತ್ಯುತ್ತಮ ಫ್ಯಾಮಿಲಿ ಕಾರನ್ನು ಹುಡುಕುವುದು ಕಷ್ಟವೇನಲ್ಲ, ಎಲ್ಲಾ ಪ್ರಯಾಣಿಕರು ಮತ್ತು ಸರಕು - ಸಾಮಾನುಗಳನ್ನು ಸಾಗಿಸಲು ಸಾಕಷ್ಟು ಸ್ಥಳಾವಕಾಶ, ಪ್ರತಿ ಪ್ರಯಾಣವನ್ನು ಆನಂದದಾಯಕವಾಗಿಸುವ ಅನುಕೂಲಕರ ವೈಶಿಷ್ಟ್ಯಗಳನ್ನು ಒದಗಿಸುವ ಕಾರುಗಳು ಭಾರತದಲ್ಲಿ ತುಂಬಾನೇ ಇವೆ. ದೊಡ್ಡ ಕುಟುಂಬಗಳಿಗೆ 7 - ಸೀಟರ್ ಆಯ್ಕೆಗಳು, ಚಾಲನಾ ವೆಚ್ಚವನ್ನು ನಿರ್ವಹಿಸಲು ಇಂಧನ ದಕ್ಷತೆ, ಸೌಕರ್ಯ, ಮನರಂಜನೆಯನ್ನು ಹೆಚ್ಚಿಸುವ ಇತ್ತೀಚಿನ ಕಾರುಗಳನ್ನು ಹುಡುಕುಬೇಕಷ್ಟೆ. ನಿಮ್ಮ ಅಗತ್ಯೆಗಳಿಗೆ ತಕ್ಕ ಕಾರನ್ನು ಹುಡುಕುವ ಮುನ್ನ ಏನೆಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂಬುದನ್ನು ನೋಡೋಣ.

Suzuki: ಸದ್ದಿಲ್ಲದೇ ಹೊಸ ಸುಜುಕಿ ಆಕ್ಸೆಸ್ ಇ-ಸ್ಕೂಟರ್ ಬಿಡುಗಡೆ..

ಬಹುನಿರೀಕ್ಷಿತ ಸುಜುಕಿ ಇ ಆಕ್ಸೆಸ್ (Suzuki e Access) ಎಲೆಕ್ಟ್ರಿಕ್ ಸ್ಕೂಟರ್ ಶುಕ್ರವಾರ ಬಿಡುಗಡೆಗೊಂಡಿದೆ. ಇದರ ಬರುವಿಕೆಗಾಗಿ ಗ್ರಾಹಕರು ಕೂಡ ತುದಿಗಾಲಿನಲ್ಲಿ ನಿಂತುಕೊಂಡು ಕಾಯುತ್ತಿದ್ದರು. ಈ ಸ್ಕೂಟರ್, ನೋಡಲು ತುಂಬಾ ಚೆನ್ನಾಗಿದ್ದು, ಹತ್ತಾರು ಹೊಸತಗಳಿಗೂ ಸಾಕ್ಷಿಯಾಗಿದೆ. ಬನ್ನಿ, ನೂತನ 'ಇ ಆಕ್ಸೆಸ್'ನ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.
Advertisement

TATA: ಬಿಡುಗಡೆಗೂ ಮುನ್ನವೇ ಡೀಲರ್‌ಶಿಪ್‌ಗೆ ಬಂದೇ ಬಿಡ್ತು ಹೊಸ ಟಾಟಾ..

ಇದೇ ಮಂಗಳವಾರ (ಜ.13) ಹೊಚ್ಚ ಹೊಸ ಟಾಟಾ ಪಂಚ್ ಫೇಸ್‌ಲಿಫ್ಟ್ (Tata Punch Facelift) ಮೈಕ್ರೋ ಎಸ್‌ಯುವಿ ಅದ್ದೂರಿಯಾಗಿ ಬಿಡುಗಡೆಗೊಳ್ಳಲಿದೆ. ಈ ಕಾರು ನವೀನವಾದ ವಿನ್ಯಾಸ ಹೊಂದಿದ್ದು, ಹತ್ತಾರು ಆಕರ್ಷಕ ವೈಶಿಷ್ಟ್ಯಗಳಿಗೂ ಸಾಕ್ಷಿಯಾಗಿದೆ. ಸದ್ಯ ದೇಶಾದ್ಯಂತ ಡೀಲರ್‌ಶಿಪ್‌ಗೆ ನೂತನ 'ಪಂಚ್'ನ್ನು ತಲುಪಿಸುವ ಕಾರ್ಯಕ್ಕೆ ಕಂಪನಿಯು ಚಾಲನೆ ನೀಡಿದೆ. ಅದಕ್ಕೆ ಸಂಬಂಧಿಸಿದ ಫೋಟೋಗಳು ಆನ್‌ಲೈನ್‌ನಲ್ಲಿಯೂ ಸೋರಿಕೆಯಾಗಿವೆ. ಈಗಾಗಲೇ 'ಟಾಟಾ ಪಂಚ್ ಫೇಸ್‌ಲಿಫ್ಟ್' ಎಸ್‌ಯುವಿ ಕುರಿತಂತೆ ಕಂಪನಿ ಸಹ ಹಲವು ಪ್ರಮುಖ ವಿವರಗಳನ್ನು ಬಹಿರಂಗಪಡಿಸುತ್ತಿದೆ. ವಿಶೇಷವಾಗಿ ಬಣ್ಣಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಗುರುವಾರವಷ್ಟೇ ಹಂಚಿಕೊಂಡಿದೆ. ಹೊಸ 'ಪಂಚ್' ಸೆಂಟಿಫಿಕ್ ಬ್ಲ್ಯೂ, ಕೂರ್ಗ್ ಕ್ಲೌಡ್ಸ್ (ಸಿಲ್ವರ್), ಬೆಂಗಾಲ್ ರೂಜ್ (ರೆಡ್), ಕ್ಯಾರಮೆಲ್, ಡೇಟೋನಾ ಗ್ರೇ ಹಾಗೂ ಪ್ರಿಸ್ಟೀನ್ ವೈಟ್ ಎಂಬ 6 ಅತ್ಯಾಧುನಿಕವಾದ ಬಣ್ಣಗಳೊಂದಿಗೆ ಲಭ್ಯವಾಗುತ್ತದೆ ಎಂದು ಹೇಳಿದೆ.