Suzuki: ಸದ್ದಿಲ್ಲದೇ ಹೊಸ ಸುಜುಕಿ ಆಕ್ಸೆಸ್ ಇ-ಸ್ಕೂಟರ್ ಬಿಡುಗಡೆ..

ಬಹುನಿರೀಕ್ಷಿತ ಸುಜುಕಿ ಇ ಆಕ್ಸೆಸ್ (Suzuki e Access) ಎಲೆಕ್ಟ್ರಿಕ್ ಸ್ಕೂಟರ್ ಶುಕ್ರವಾರ ಬಿಡುಗಡೆಗೊಂಡಿದೆ. ಇದರ ಬರುವಿಕೆಗಾಗಿ ಗ್ರಾಹಕರು ಕೂಡ ತುದಿಗಾಲಿನಲ್ಲಿ ನಿಂತುಕೊಂಡು ಕಾಯುತ್ತಿದ್ದರು. ಈ ಸ್ಕೂಟರ್, ನೋಡಲು ತುಂಬಾ ಚೆನ್ನಾಗಿದ್ದು, ಹತ್ತಾರು ಹೊಸತಗಳಿಗೂ ಸಾಕ್ಷಿಯಾಗಿದೆ. ಬನ್ನಿ, ನೂತನ 'ಇ ಆಕ್ಸೆಸ್'ನ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

TATA: ಬಿಡುಗಡೆಗೂ ಮುನ್ನವೇ ಡೀಲರ್‌ಶಿಪ್‌ಗೆ ಬಂದೇ ಬಿಡ್ತು ಹೊಸ ಟಾಟಾ..

ಇದೇ ಮಂಗಳವಾರ (ಜ.13) ಹೊಚ್ಚ ಹೊಸ ಟಾಟಾ ಪಂಚ್ ಫೇಸ್‌ಲಿಫ್ಟ್ (Tata Punch Facelift) ಮೈಕ್ರೋ ಎಸ್‌ಯುವಿ ಅದ್ದೂರಿಯಾಗಿ ಬಿಡುಗಡೆಗೊಳ್ಳಲಿದೆ. ಈ ಕಾರು ನವೀನವಾದ ವಿನ್ಯಾಸ ಹೊಂದಿದ್ದು, ಹತ್ತಾರು ಆಕರ್ಷಕ ವೈಶಿಷ್ಟ್ಯಗಳಿಗೂ ಸಾಕ್ಷಿಯಾಗಿದೆ. ಸದ್ಯ ದೇಶಾದ್ಯಂತ ಡೀಲರ್‌ಶಿಪ್‌ಗೆ ನೂತನ 'ಪಂಚ್'ನ್ನು ತಲುಪಿಸುವ ಕಾರ್ಯಕ್ಕೆ ಕಂಪನಿಯು ಚಾಲನೆ ನೀಡಿದೆ. ಅದಕ್ಕೆ ಸಂಬಂಧಿಸಿದ ಫೋಟೋಗಳು ಆನ್‌ಲೈನ್‌ನಲ್ಲಿಯೂ ಸೋರಿಕೆಯಾಗಿವೆ. ಈಗಾಗಲೇ 'ಟಾಟಾ ಪಂಚ್ ಫೇಸ್‌ಲಿಫ್ಟ್' ಎಸ್‌ಯುವಿ ಕುರಿತಂತೆ ಕಂಪನಿ ಸಹ ಹಲವು ಪ್ರಮುಖ ವಿವರಗಳನ್ನು ಬಹಿರಂಗಪಡಿಸುತ್ತಿದೆ. ವಿಶೇಷವಾಗಿ ಬಣ್ಣಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಗುರುವಾರವಷ್ಟೇ ಹಂಚಿಕೊಂಡಿದೆ. ಹೊಸ 'ಪಂಚ್' ಸೆಂಟಿಫಿಕ್ ಬ್ಲ್ಯೂ, ಕೂರ್ಗ್ ಕ್ಲೌಡ್ಸ್ (ಸಿಲ್ವರ್), ಬೆಂಗಾಲ್ ರೂಜ್ (ರೆಡ್), ಕ್ಯಾರಮೆಲ್, ಡೇಟೋನಾ ಗ್ರೇ ಹಾಗೂ ಪ್ರಿಸ್ಟೀನ್ ವೈಟ್ ಎಂಬ 6 ಅತ್ಯಾಧುನಿಕವಾದ ಬಣ್ಣಗಳೊಂದಿಗೆ ಲಭ್ಯವಾಗುತ್ತದೆ ಎಂದು ಹೇಳಿದೆ.

Tata: ಟಾಟಾ ಹ್ಯಾರಿಯರ್ ಪೆಟ್ರೋಲ್ ಎಸ್‌ಯುವಿ ವಿಶೇಷತೆಗಳು!

ಟಾಟಾ ಮೋಟಾರ್ಸ್ (Tata Motors) ಎಸ್‌ಯುವಿ ವಿಭಾಗದಲ್ಲಿ ಧೂಳೆಬ್ಬಿಸುತ್ತಿದೆ, ತನ್ನ ರಗಡ್ ಎಸ್‌ಯುವಿಗಳ ಮೂಲಕ ಭಾರತದಲ್ಲಿ ಪ್ರತಿಸ್ಪರ್ಧಿಗಳಿಗೆ ನಡುಕ ಹುಟ್ಟಿಸುತ್ತಿದೆ. 2019ರಲ್ಲಿ ಟಾಟಾ ಹ್ಯಾರಿಯರ್ (Tata Harrier) ಡೀಸೆಲ್ ಅನ್ನು ದೇಶೀಯ ಮಾರುಕಟ್ಟೆಯಲ್ಲಿ ಪರಿಚಯಿಸಲಾಯಿತು. ಅಂದಿನಿಂದ ಇಂದಿನವರೆಗೆ ಈ ಎಸ್‌ಯುವಿ ತನ್ನ ವಿಭಾಗದಲ್ಲಿ ಉತ್ತಮವಾಗಿ ಮಾರಾಟ ಕಾಣುತ್ತಿದೆ. ಈ ಕಾರನ್ನು ಮೊನ್ನೆ 'ಪೆಟ್ರೋಲ್' ಎಂಜಿನ್‌‌ನೊಂದಿಗೆ ಬಿಡುಗಡೆ ಮಾಡಿದೆ. ಹೊಸ ಟಾಟಾ ಹ್ಯಾರಿಯರ್ ಬೆಲೆ, ಫೀಚರ್ಸ್, ಎಂಜಿನ್ ವಿಶೇಷತೆಗಳನ್ನು ಇಲ್ಲಿ ನೋಡೋಣ.

ಕಮ್ಮಿ ಬೆಲೆಯ 5 ಬೆಸ್ಟ್ ಹ್ಯಾಚ್‌ಬ್ಯಾಕ್‌ಗಳಿವು.. ಮೈಲೇಜ್‌ನಲ್ಲಿ..

ದೇಶೀಯವಾಗಿ ಮಾರಾಟವಾಗುವ ಹ್ಯಾಚ್‌ಬ್ಯಾಕ್‌ಗಳಿಗೆ ಪ್ರತೇಕವಾದ ಅಭಿಮಾನಿ ಬಗಳವಿದೆ. ಇವು ಸಣ್ಣ ಗಾತ್ರದ ಕಾರುಗಳಿದ್ದರೂ ಆಕರ್ಷಕವಾದ ವಿನ್ಯಾಸ ಹಾಗೂ ನಾನಾ ಬಗೆಯ ವೈಶಿಷ್ಟ್ಯಗಳಿಗೂ ಸಾಕ್ಷಿಯಾಗಿವೆ. ನೀವು ಹೊಚ್ಚ ಹೊಸ ಹ್ಯಾಚ್‌ಬ್ಯಾಕ್‌ವೊಂದನ್ನು ಖರೀದಿಸಲು ಪ್ಲ್ಯಾನ್ ಮಾಡಿದ್ದೀರಾ.. ಹಾಗಾದರೆ ಮಾರುತಿ ಸುಜುಕಿ ಸ್ವಿಫ್ಟ್, ಮಾರುತಿ ಸುಜುಕಿ ಬಲೆನೊ, ಟಾಟಾ ಟಿಯಾಗೊ, ಮಾರುತಿ ಸುಜುಕಿ ವ್ಯಾಗನ್ಆರ್ ಹಾಗೂ ಟೊಯೊಟಾ ಗ್ಲಾನ್ಜಾಗಳು ಬೆಸ್ಟ್ ಚಾಯ್ಸ್ ಆಗಲಿವೆ. ಬನ್ನಿ, ಇವುಗಳ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಕ್ಷಿಪ್ತವಾದ ವಿವರಗಳನ್ನು ತಿಳಿಯೋಣ.
Advertisement

Hero: ಕಾರಿನ ಸೇಫ್ಟಿ ಫೀಚರ್ಸ್ ದ್ವಿಚಕ್ರ ವಾಹನಗಳಲ್ಲಿ: ARAS ಸಿದ್ಧ!

ವ್ಯಾಲಿಯೊ (Valeo) ಮತ್ತು ಹೀರೋ ಮೋಟೋಕಾರ್ಪ್ (Hero MotoCorp) ದ್ವಿಚಕ್ರ ವಾಹನ ಸವಾರರಿಗೆ ಅಡ್ವಾನ್ಸ್ಡ್ ರೈಡರ್ ಅಸಿಸ್ಟೆನ್ಸ್ ಸಿಸ್ಟಮ್ಸ್ (ARAS) ಅನ್ನು ಅಭಿವೃದ್ಧಿಪಡಿಸಲು ಪಾಲುದಾರಿಕೆಯನ್ನು ಪ್ರಕಟಿಸಿವೆ. ಆಟೋಮೋಟಿವ್ ತಂತ್ರಜ್ಞಾನದಲ್ಲಿ ಜಾಗತಿಕ ನಾಯಕ ವ್ಯಾಲಿಯೊ ಮತ್ತು ವಿಶ್ವದ ಅತಿದೊಡ್ಡ ಮೋಟಾರ್ ಸೈಕಲ್‌ ಮತ್ತು ಸ್ಕೂಟರ್‌ಗಳ ತಯಾರಕರಾದ ಹೀರೋ ಮೋಟೋಕಾರ್ಪ್, ಇಂದು ಅಡ್ವಾನ್ಸ್ಡ್ ರೈಡರ್ ಅಸಿಸ್ಟೆನ್ಸ್ ಸಿಸ್ಟಮ್ಸ್ (ARAS) ಕುರಿತು ತಿಳುವಳಿಕೆ ಪತ್ರಕ್ಕೆ (MoU) ಸಹಿ ಹಾಕುವ ಮೂಲಕ ತಮ್ಮ ಪಾಲುದಾರಿಕೆಯನ್ನು ಘೋಷಿಸಿವೆ.

ಬಡವರ ಬೈಕ್‌ಯಿದು.. ಇದೇ ಹೀರೋ ಸ್ಪ್ಲೆಂಡರ್‌ನ ಪ್ರತಿಸ್ಪರ್ಧಿ..

ಟಿವಿಎಸ್ ರೇಡಿಯನ್ (Tvs Radeon) ಜನಪ್ರಿಯ ಪ್ರಯಾಣಿಕ ಮೋಟಾರ್‌ಸೈಕಲ್‌ ಆಗಿದೆ. ಇದು 'ಹೀರೋ ಸ್ಪ್ಲೆಂಡರ್‌'ನ ಪ್ರತಿಸ್ಪರ್ಧಿ ಎಂದೇ ಹೆಸರುವಾಸಿಯಾಗಿದ್ದು, ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸುಲಭವಾಗಿ ಬಳಕೆ ಮಾಡಬಹುದು. ನೀವು ಹೊಚ್ಚ ಹೊಸ ಬೈಕ್‌ವೊಂದನ್ನು ಖರೀದಿಸಲು ಆಲೋಚಿಸಿದ್ದೀರಾ.. ಹಾಗಾದರೆ ಇದೇ 'ರೇಡಿಯನ್' ಬೆಸ್ಟ್ ಚಾಯ್ಸ್ ಆಗಲಿದೆ. ಬನ್ನಿ, ಈ ಮೋಟಾರ್‌ಸೈಕಲ್‌ನ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

Suzuki: ಜಪಾನ್ ಬ್ರಾಂಡ್‌ಗೆ ಭಾರತದಲ್ಲಿ ಇಷ್ಟೊಂದು ಬೇಡಿಕೆಯೇ?

ಜಪಾನ್‌ನ ಸುಜುಕಿ ಮೋಟಾರ್ ಕಾರ್ಪೊರೇಷನ್‌ನ ದ್ವಿಚಕ್ರ ವಾಹನ ಅಂಗಸಂಸ್ಥೆಯಾದ ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (SMIPL), ಇಂದು ತನ್ನ ಗುರುಗ್ರಾಮ್ (ಭಾರತ) ಸ್ಥಾವರದಿಂದ 10 ಮಿಲಿಯನ್ (1 ಕೋಟಿ)ನ ದ್ವಿಚಕ್ರ ವಾಹನವನ್ನು ಹೊರ ತರುವ ಮೂಲಕ ತನ್ನ ವಾಹನ ಉತ್ಪಾದನಾ ಪ್ರಯಾಣದಲ್ಲಿ ಪ್ರಮುಖ ಮೈಲಿಗಲ್ಲನ್ನು ದಾಟಿದೆ. ಈ ಸಾಧನೆಯು ದೇಶಾದ್ಯಂತ ಗ್ರಾಹಕರ ನಂಬಿಕೆ ಮತ್ತು ವಿಶ್ವಾಸದ ಮೇಲೆ ನಿರ್ಮಿಸಲಾದ ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಸುಜುಕಿಯ ಸ್ಥಿರ ಬೆಳವಣಿಗೆ ಮತ್ತು ಉಪಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ.

ಎಥೆರ್ ವಾಹನ ಸವಾರರಿಗೆ ಗುಡ್ ನ್ಯೂಸ್: 5000 ಫಾಸ್ಟ್ ಚಾರ್ಜರ್!

ಭಾರತದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕರಲ್ಲಿ ಒಂದಾದ ಎಥರ್ ಎನರ್ಜಿ, ಎಥರ್ ಸವಾರರು ಈಗ LECCS (ಲೈಟ್ ಎಲೆಕ್ಟ್ರಿಕ್ ಕಂಬೈನ್ಡ್ ಚಾರ್ಜಿಂಗ್ ಸಿಸ್ಟಮ್) ಕನೆಕ್ಟರ್ ಹೊಂದಿರುವ 5000 ಕ್ಕೂ ಹೆಚ್ಚು ಸಾರ್ವಜನಿಕ ಫಾಸ್ಟ್ ಚಾರ್ಜರ್ (public fast chargers) ‌ಗಳಿಗೆ ಪ್ರವೇಶಿಸಬಹುದು ಎಂದು ಘೋಷಿಸಿದೆ. ಈ ನೆಟ್‌ವರ್ಕ್ 395 ಕ್ಕೂ ಹೆಚ್ಚಿನ ನಗರಗಳಲ್ಲಿ ವ್ಯಾಪಿಸಿದೆ, ಎಥರ್ ಎನರ್ಜಿಯಿಂದ ನೇರವಾಗಿ ನಿರ್ವಹಿಸಲ್ಪಡುವ 3,675 ಕ್ಕೂ ಹೆಚ್ಚಿನ ಫಾಸ್ಟ್ ಚಾರ್ಜರ್‌ಗಳನ್ನು ಒಳಗೊಂಡಿದೆ, ಪಾಲುದಾರ ನೆಟ್‌ವರ್ಕ್‌ಗಳ ಮೂಲಕ 1400 ಕ್ಕೂ ಹೆಚ್ಚು ಚಾರ್ಜರ್‌ಗಳಿಂದ ಪೂರಕವಾಗಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
Advertisement

ಜಿದ್ದಿಗೆ ಬಿದ್ದಿವೆ ಟಾಟಾ Vs ಮಹೀಂದ್ರಾ: ಇವೇ 2 ಹೊಸ ಎಸ್‌ಯುವಿಗಳು..

ಕೆಲವೇ ದಿನಗಳ ಅಂತರದಲ್ಲಿ ಟಾಟಾ ಸಫಾರಿ ಪೆಟ್ರೋಲ್ (Tata Safari Petrol) ಮತ್ತು ಮಹೀಂದ್ರಾ ಎಕ್ಸ್‌ಯುವಿ 7ಎಕ್ಸ್ಒ (Mahindra XUV 7XO) ಕಾರುಗಳು ಬಿಡುಗಡೆಗೊಂಡಿವೆ. ಇವೆರೆಡು ಫ್ಯಾಮಿಲಿ ಎಸ್‌ಯುವಿಗಳಾಗಿವೆ. ತುಂಬಾ ಚೆನ್ನಾಗಿರುವ ವಿನ್ಯಾಸ ಹೊಂದಿದ್ದು, ನಾನಾ ಬಗೆಯ ಹೊಸತನಗಳಿಗೆ ಸಾಕ್ಷಿಯಾಗಿವೆ. ನಾವಿಲ್ಲಿ ಈ ಕಾರುಗಳ ಬೆಲೆ, ಕಾರ್ಯಕ್ಷಮತೆ ಮತ್ತು ವೈಶಿಷ್ಟ್ಯಗಳ ಕುರಿತು ಸಂಪೂರ್ಣವಾದ ಹೋಲಿಕೆ ಮಾಡಿದ್ದೇವೆ.

Mahindra XUV 7XO: ಹೊಸ ಮಹೀಂದ್ರಾ ಎಕ್ಸ್‌ಯುವಿ 7ಎಕ್ಸ್ಒ ರಿವ್ಯೂ..

ಇದೇ ಸೋಮವಾರ ಹೊಸ ಮಹೀಂದ್ರಾ ಎಕ್ಸ್‌ಯುವಿ 7ಎಕ್ಸ್ಒ (Mahindra XUV 7XO) ಎಸ್‌ಯುವಿಯನ್ನು ಪರಿಚಯಿಸಲಾಗಿದೆ. ರೂ.13.66 ಲಕ್ಷದಿಂದ ರೂ.24.92 ಲಕ್ಷ (ಎಕ್ಸ್-ಶೋರೂಂ - ಬೆಂಗಳೂರು) ಬೆಲೆಯನ್ನು ಒಳಗೊಂಡಿದೆ. ಎಎಕ್ಸ್, ಎಎಕ್ಸ್3, ಎಎಕ್ಸ್5, ಎಎಕ್ಸ್7, ಎಎಕ್ಸ್7 ಟಿ ಮತ್ತು ಎಎಕ್ಸ್7 ಎಲ್ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಸಿಗುತ್ತದೆ. ಜನವರಿ 14 ರಿಂದ ಬುಕ್ಕಿಂಗ್‌ ಶುರುವಾಗಲಿದೆ. ಆಸಕ್ತ ಗ್ರಾಹಕರು, ಸಮೀಪದ ಡೀಲರ್‌ಶಿಪ್‌ ಅಥವಾ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ರೂ.21,000 ಮುಂಗಡ ಹಣ ಪಾವತಿಸಿ, ಆರ್ಡರ್ ಮಾಡಬಹುದು.

ಎರಡೂ ಸ್ವದೇಶಿ ಕಾರುಗಳೇ: ಒಂದು ಬಲಿಷ್ಟ ಮತ್ತೊಂದು ದೈತ್ಯ

ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಧಿಡೀರ್ ಬೇಡಿಕೆ ಹೆಚ್ಚಾಗಿದೆ, ಬಹುತೇಕ ಬ್ರಾಂಡ್‌ಗಳು ಇವಿಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಮೊನ್ನೆಯಷ್ಟೆ ಸದ್ದಿಲ್ಲದೆ ಮಹೀಂದ್ರಾ ತನ್ನ XUV 3XO EV ಎಸ್‌ಯುವಿಯನ್ನು ಬಿಡುಗಡೆ ಮಾಡಿದೆ, ಈ ಕಾರಿನ ಮೇಲೆ ಈಗ ನಿರೀಕ್ಷೆಗಳು ಹೆಚ್ಚಾಗಿದ್ದು, ಗ್ರಾಹಕರಲ್ಲಿ ಖರೀದಿಸುವ ಬಗ್ಗೆ ಕೆಲ ಗೊಂದಲಗಳಿವೆ. ಬೆಲೆ, ಫೀಚರ್ಸ್, ರೇಂಜ್ ಹೇಗಿದೆ? ಈ ಕಾರಿಗಿಂತ ನೆಕ್ಸಾನ್ ಇವಿ ಚೆನ್ನಾಗಿರಬಹುದೇ ಎಂಬೆಲ್ಲಾ ಗೊಂದಲಗಳು ಖರೀದಿದಾರರಲ್ಲಿವೆ. ಹಾಗಾಗಿ ಹೊಸ ಮಹೀಂದ್ರಾ ತನ್ನ XUV 3XO EV ಹಾಗೂ ಟಾಟಾ ನೆಕ್ಸಾನ್ ಇವಿ ಕಾರುಗಳನ್ನು ಹೋಲಿಕೆ ಮಾಡಿದ್ದೇವೆ.

Tata: ರೂ.12.89 ಲಕ್ಷ.. 5-ಸೀಟರ್, ಗಟ್ಟಿಮುಟ್ಟಾದ ಟಾಟಾ..

ನಿನ್ನೆಯಷ್ಟೇ ಹೊಸ ಟಾಟಾ ಹ್ಯಾರಿಯರ್ ಪೆಟ್ರೋಲ್ (Tata Harrier Petrol) ಎಸ್‌ಯುವಿ ಬಿಡುಗಡೆಗೊಂಡಿದೆ. ಇದು ಕನಿಷ್ಠ ರೂ.12.89 ಲಕ್ಷ ಮತ್ತು ಗರಿಷ್ಠ ರೂ.24.68 ಲಕ್ಷ ( ಎಕ್ಸ್-ಶೋರೂಂ) ದರವನ್ನು ಪಡೆದಿದೆ. ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಹೊಂದಿದೆ. ಡೇಟೋನಾ ಗ್ರೇ, ಪ್ಯೂರ್ ಗ್ರೇ, ಪ್ರಿಸ್ಟೈನ್ ವೈಟ್, ಕಾರ್ಬನ್ ಬ್ಲ್ಯಾಕ್ ಹಾಗೂ ಸ್ಟೆಲ್ತ್ ಬ್ಲ್ಯಾಕ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಲಭ್ಯವಿದೆ. 205 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2741 ಮಿ.ಮೀ ವೀಲ್‌ಬೇಸ್‌ನ್ನು ಒಳಗೊಂಡಿದೆ. 5 ಆಸನಗಳನ್ನು ಪಡೆದಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಸಂಚರಿಸಬಹುದು.
Advertisement

KTM ಕನಸು ಕಾಣುವ ಯುವಕರಿಗೆ ಗುಡ್ ನ್ಯೂಸ್: ತೀರಾ ಕಮ್ಮಿ ಬೆಲೆ

ಜಾಗತಿಕ ಮೋಟಾರ್‌ಸೈಕಲ್ ಬ್ರಾಂಡ್ ಆಗಿರುವ ಕೆಟಿಎಂ (KTM), ಇಂದು ತನ್ನ RC ಪೋರ್ಟ್‌ಫೋಲಿಯೊವನ್ನು ವಿಸ್ತರಿಸುವ ಮೂಲಕ ಹೊಸ ಕೆಟಿಎಂ ಆರ್‌ಸಿ 160 (KTM RC 160) ಬಿಡುಗಡೆ ಮಾಡಿದೆ. ಇದರ ಪರಿಚಯದೊಂದಿಗೆ, ಕೆಟಿಎಂ ತನ್ನ ಫ್ಯಾಕ್ಟರಿ ರೇಸಿಂಗ್ ಡಿಎನ್‌ಎಯನ್ನು ಎಲ್ಲಾ ಗ್ರಾಹಕರಿಗೆ ಸಿಗುವಂತೆ ಮಾಡಿದೆ. ಟ್ರ್ಯಾಕ್ - ಕೇಂದ್ರಿತ ಪರ್ಫಾಮೆನ್ಸ್ ಹೊಂದಿರುವ ಈ ಬೈಕ್ ಎಲ್ಲರಿಗೂ ಕೈಗೆಟುಕವ ಬೆಲೆಯಲ್ಲಿ ಸಿಗುತ್ತಿದೆ. ಕೆಟಿಎಂ RC 160 ದೇಶಾದ್ಯಂತ ಕೆಟಿಎಂ ಡೀಲರ್‌ಶಿಪ್‌ಗಳಲ್ಲಿ ಈಗ ರೂ. 1,85,000 (ಎಕ್ಸ್-ಶೋರೂಂ) ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.

TATA: ಕಲ್ಲು ಬಂಡೆಯಂತಹ ಕಾರಿದು.. 7-ಸೀಟರ್, 13.29 ಲಕ್ಷ..

ನಿನ್ನೆಯಷ್ಟೇ ಹೊಚ್ಚ ಹೊಸ ಟಾಟಾ ಸಫಾರಿ ಪೆಟ್ರೋಲ್ (Tata Safari Petrol) ಎಸ್‌ಯುವಿಯನ್ನು ಮಾರಾಟಕ್ಕೆ ತರಲಾಗಿದೆ. ಈ ಕಾರು ನೋಡಲು ತುಂಬಾ ಚೆನ್ನಾಗಿದ್ದು, ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದಿದೆ. ನೀವು ನೂತನ ಕಾರೊಂದನ್ನು ಮನೆಗೆ ತರಲು ಆಲೋಚಿಸಿದ್ದೀರಾ.. ಹಾಗಾದರೆ, ಇದೇ 'ಸಫಾರಿ ಪೆಟ್ರೋಲ್' ಬೆಸ್ಟ್ ಚಾಯ್ಸ್ ಆಗಲಿದೆ. ಬನ್ನಿ.. ಈ ಎಸ್‌ಯುವಿಯ ಬೆಲೆ ಹಾಗೂ ವಿಶೇಷತೆಗಳ ಕುರಿತಾದ ಪ್ರಮುಖಾಂಶಗಳು ಏನೆಂಬುದನ್ನು ತಿಳಿಯೋಣ.

ಬದಲಾಗಲಿದೆ ಭಾರತ! ಎರಡು ದೈತ್ಯ ಕಂಪನಿಗಳು ಒಂದಾಗಿವೆ

ಭಾರತದ ಪ್ರಮುಖ ಬ್ಯಾಟರಿ-ಆಸ್-ಎ-ಸರ್ವಿಸ್ (BaaS) ಕಂಪನಿಯಾದ ಯುಮಾ ಎನರ್ಜಿ, ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ತಯಾರಕ ಕಂಪನಿಯಾದ ಮೋಟೋವೋಲ್ಟ್ ಮೊಬಿಲಿಟಿಯೊಂದಿಗೆ ಪಾಲುದಾರಿಕೆ ಘೋಷಿಸಿದೆ. ಈ ಪಾಲುದಾರಿಕೆಯಡಿಯಲ್ಲಿ, ಮೋಟೋವೋಲ್ಟ್‌ನ ಪ್ರಮುಖ ಬಹು-ಉಪಯುಕ್ತ ಎಲೆಕ್ಟ್ರಿಕ್ ಸ್ಕೂಟರ್ M7, ಯುಮಾ ಎನರ್ಜಿಯ ತಡೆರಹಿತ ಬ್ಯಾಟರಿ ವಿನಿಮಯ ತಂತ್ರಜ್ಞಾನವನ್ನು ಪಡೆದುಕೊಳ್ಳಲಿದೆ. ಇದು ರೇಂಜ್ ಆತಂಕ, ಬ್ಯಾಟರಿ-ಸಂಬಂಧಿತ ಕಾಳಜಿಗಳು ಮತ್ತು ಹೆಚ್ಚಿನ ಮಾಲೀಕತ್ವದ ವೆಚ್ಚಗಳನ್ನು ಪರಿಹರಿಸುತ್ತದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

Tata: ಬಿಡುಗಡೆಯೇ ಆಗಿಲ್ಲ.. ಹೊಸ ಅಗ್ಗದ ಟಾಟಾ ಎಸ್‌ಯುವಿ..

ಟಾಟಾ ಪಂಚ್ ಫೇಸ್‌ಲಿಫ್ಟ್ (Tata Punch Facelift) ಬಿಡುಗಡೆಗೊಳ್ಳುವುದಕ್ಕೆ 6 ದಿನ ಬಾಕಿಯಿದೆ. ಇದೊಂದು ಮೈಕ್ರೋ ಎಸ್‌ಯುವಿಯಾಗಿದ್ದು, ಜನವರಿ 13ರಂದು ಅದ್ದೂರಿಯಾಗಿ ಮಾರಾಟಕ್ಕೆ ಬರಲಿದೆ. ಸದ್ಯ, ಈ ಕಾರು ಸ್ಮಾರ್ಟ್, ಪ್ಯೂರ್, ಪ್ಯೂರ್ ಪ್ಲಸ್, ಅಡ್ವೆಂಚರ್, ಅಕಾಂಪ್ಲಿಶ್ಡ್ ಮತ್ತು ಅಕಾಂಪ್ಲಿಶ್ಡ್ ಪ್ಲಸ್ ಎಸ್ ಎಂಬ 6 ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿ ಲಭ್ಯವಾಗಲಿದೆ ಎಂದು ಕಂಪನಿಯು ಘೋಷಣೆ ಮಾಡಿದೆ. ಇವುಗಳು ಹೊಂದಿರುವ ವೈಶಿಷ್ಟ್ಯಗಳ ಬಗ್ಗೆಯೂ ಸಂಕ್ಷಿಪ್ತವಾದ ವಿವರಗಳನ್ನು ಬಹಿರಂಗಪಡಿಸಿದೆ.
Advertisement

Tata: ಹೊಸ ಎಸ್‌ಯುವಿ ಬಿಡುಗಡೆ ಮಾಡಿದ ಟಾಟಾ: ಸರಿಯಾಗಿದೆ ಬಿಡಿ

ಭಾರತದ ಪ್ರಮುಖ SUV ತಯಾರಕರಾದ ಟಾಟಾ ಮೋಟಾರ್ಸ್ (Tata Motors), ಇಂದು 1.5L ಹೈಪರಿಯನ್ ಟರ್ಬೊ-GDi ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾದ ಬಹುನಿರೀಕ್ಷಿತ ಹ್ಯಾರಿಯರ್ ಕಾರಿನ ಬೆಲೆಗಳನ್ನು ಪ್ರಕಟಿಸಿದೆ. ಈ ವಿಭಾಗದಲ್ಲಿ ಸ್ಪರ್ಧಾತ್ಮಕವಾಗಿ ಬೆಲೆ ನಿಗದಿಪಡಿಸಲಾಗಿರುವ ಹ್ಯಾರಿಯರ್ ಪೆಟ್ರೋಲ್ ಆವೃತ್ತಿಯ ಬೆಲೆಯು ರೂ. 12.89 ಲಕ್ಷದಿಂದ (ಎಕ್ಸ್-ಶೋರೂಂ) ಪ್ರಾರಂಭವಾಗುತ್ತದೆ. ಈಗ ಹೈಪರಿಯನ್ ಪೆಟ್ರೋಲ್ ಎಂಜಿನ್‌ನಿಂದ ನಡೆಸಲ್ಪಡುವ ಟಾಟಾ ಹ್ಯಾರಿಯರ್ ಪರಿಪೂರ್ಣ 5-ಸ್ಟಾರ್ ಭಾರತ್ NCAP ಸುರಕ್ಷತಾ ರೇಟಿಂಗ್ ಅನ್ನು ಸಾಧಿಸಿದೆ ಎಂದು ಟಾಟಾ ಮೋಟಾರ್ಸ್ ತಿಳಿಸಿದೆ.

TATA: 7-ಸೀಟರ್.. ಸದ್ದಿಲ್ಲದೇ ಆನೆ ಗಾತ್ರದ ಟಾಟಾ ಸಫಾರಿ ಪೆಟ್ರೋಲ್..

ಬಹುನಿರೀಕ್ಷಿತ ಟಾಟಾ ಸಫಾರಿ ಪೆಟ್ರೋಲ್ (Tata Safari Petrol) ಎಸ್‌ಯುವಿ, ಬುಧವಾರ ಅದ್ದೂರಿಯಾಗಿ ಬಿಡುಗಡೆಗೊಂಡಿದೆ. ಈವರೆಗೆ ಕೆಲವೇ ಡೀಸೆಲ್ ಪವರ್‌ಟ್ರೇನ್‌ ಆಯ್ಕೆಯಲ್ಲಿ ಮಾತ್ರ ಗ್ರಾಹಕರ ದೊರೆಯುತ್ತಿತ್ತು. ನೂತನ ಕಾರು ಅತ್ಯುತ್ತಮವಾದ ವಿನ್ಯಾಸ ಹೊಂದಿದ್ದು, ನಾನಾ ಬಗೆಯ ವೈಶಿಷ್ಟ್ಯಗಳಿಗೂ ಸಾಕ್ಷಿಯಾಗಿದೆ . ಬನ್ನಿ, ಹೊಸ 'ಸಫಾರಿ' ಕಾರಿನ ಬೆಲೆ ಎಷ್ಟು.. ಏನೆಲ್ಲಾ ವಿಶೇಷತೆಗಳಿವೆ ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

Toyota: 500 Km ರೇಂಜ್.. ಬೆಲೆ ಇಷ್ಟೇನಾ? ಟೊಯೊಟಾದ ಮೊದಲ..

ಹೊಚ್ಚ ಹೊಸ ಟೊಯೊಟಾ ಅರ್ಬನ್ ಕ್ರೂಸರ್ ಇವಿ (Toyota Urban Cruiser EV) ಬಿಡುಗಡೆಗೆ ಸಿದ್ದಗೊಂಡಿದೆ. ಇದೊಂದು ಎಲೆಕ್ಟ್ರಿಕ್ ಎಸ್‌ಯುವಿಯಾಗಿದೆ. ಈ ಕಾರಿನ ಬರುವಿಕೆಗಾಗಿ ಗ್ರಾಹಕರು ಕೂಡ ತುದಿಗಾಲಿನಲ್ಲಿ ನಿಂತುಕೊಂಡು ಕಾಯುತ್ತಿದ್ದಾರೆ. ಸದ್ಯ 'ಟೊಯೊಟಾ ಇಂಡಿಯಾ' ಇದೇ ಕಾರಿನ ಪ್ರಪ್ರಥಮ ಟೀಸರ್ ವಿಡಿಯೋವನ್ನು ಹೊರತಂದಿದ್ದು, ಅತಿ ಶೀಘ್ರದಲ್ಲೇ ಮಾರಾಟಕ್ಕೆ ಬರಲಿದೆ ಎಂಬ ಸುಳಿವನ್ನು ನೀಡಿದೆ. ಈ ಟೀಸರ್‌ನಲ್ಲಿ ನೂತನ 'ಅರ್ಬನ್ ಕ್ರೂಸರ್ ಇವಿ' ಅತ್ಯಾಧುನಿಕವಾದ ಮೊನೊಪಾಡ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳು ಹಾಗೂ ಎಲ್ಇಡಿ ಡಿಆರ್‌ಎಲ್‌ಗಳನ್ನು ಹೊಂದಿರುವುದನ್ನು ಸ್ಪಷ್ಟವಾಗಿ ಗುರುತಿಸಬಹುದು.

Renault Duster: ಜನವರಿ 26ಕ್ಕೆ ಅನಾವರಣ

ಪ್ರಮುಖ ಫ್ರೆಂಚ್ ಕಾರು ತಯಾರಕ ಕಂಪನಿಯಾದ ರೆನಾಲ್ಟ್ ಗ್ರೂಪ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ 'ರೆನಾಲ್ಟ್ ಇಂಡಿಯಾ', ಇಂದು ತನ್ನ ಬಹುನಿರೀಕ್ಷಿತ ಮತ್ತು ಐಕಾನಿಕ್ SUV 'ರೆನಾಲ್ಟ್ ಡಸ್ಟರ್' (Renault Duster)ನ ಪ್ರಮುಖ ಪರೀಕ್ಷಾ ಮೈಲಿಗಲ್ಲನ್ನು ಘೋಷಿಸಿದೆ. ಮುಂಬರುವ ಹೊಸ ಡಸ್ಟರ್ ಕಾರನ್ನು ವಿಶ್ವದ ಮೂರು ಖಂಡಗಳಲ್ಲಿ -23°C ನಿಂದ 55°C ನಡುವೆ 1 ಮಿಲಿಯನ್ (10 ಲಕ್ಷ) ಕಿಲೋಮೀಟರ್ ಓಡಿಸಿ, ವೈವಿಧ್ಯಮಯ ರಸ್ತೆ ಪರಿಸ್ಥಿತಿಗಳಲ್ಲಿಯೂ ಈ ಕಾರು ಹೊಂದಿಕೊಳ್ಳಬಲ್ಲದು ಎಂದು ಖಚಿತಪಡಿಸುವ ಕಠಿಣ ಜಾಗತಿಕ ಪರೀಕ್ಷೆಯನ್ನು ಪೂರ್ಣಗೊಳಿಸಿರುವುದಾಗಿ ರೆನಾಲ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.
Advertisement

ಬೆಂಗಳೂರು: ಸಂಚಾರಿ ನಿಯಮ ಉಲ್ಲಂಘನೆ ಪತ್ತೆಗೆ AI ಚಾಲಿತ ಸ್ಮಾರ್ಟ್..

ಬೆಂಗಳೂರಿನಲ್ಲಿ 'ಟ್ರಾಫಿಕ್' ಎಂಬುದು ವಾಹನ ಸವಾರರಿಗೆ ದೊಡ್ಡ ತಲೆನೋವಾಗಿದೆ. ಅದಕ್ಕೆ ತಕ್ಕಂತೆ ಕೆಲವರು ಸಂಚಾರಿ ನಿಯಮಗಳನ್ನು ಕೂಡ ಪಾಲಿಸುವುದಿಲ್ಲ. ಇದು ಅಪಘಾತಕ್ಕೂ ಕಾರಣವಾಗಬಹುದು. ಸದ್ಯ, ಈ ರೀತಿಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಟೆಕ್ಕಿಯೊಬ್ಬರು ಯತ್ನಿಸಿದ್ದು, ಕೃತಕ ಬುದ್ಧಿಮತ್ತೆ (AI) ಆಧಾರಿತ ವಿಶಿಷ್ಟವಾದ 'ಸ್ಮಾರ್ಟ್ ಹೆಲ್ಮೆಟ್'ನ್ನು ಸಿದ್ದಪಡಿಸಿದ್ದಾರೆ. ಈ ಕುರಿತ ಪೋಸ್ಟ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಎಥರ್ 450X ಸ್ಕೂಟರ್ ಮಾಲೀಕರಿಗೆ ಗುಡ್ ನ್ಯೂಸ್: ಹೊಸ ಅಪ್‌ಡೇಟ್ ಬಂದಿದೆ

ಭಾರತದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕರಲ್ಲಿ ಒಂದಾದ ಎಥರ್ ಎನರ್ಜಿ (Ather energy), ಇಂದು ಎಥರ್ 450X ಸ್ಕೂಟರ್‌ನಲ್ಲಿ ಇನ್ಫೈನೈಟ್ ಕ್ರೂಸ್ (Infinite Cruise) ಫೀಚರ್‌ನ್ನು ಬಿಡುಗಡೆ ಮಾಡಿದೆ. ಇದು ತನ್ನ ಸ್ಕೂಟರ್ ಶ್ರೇಣಿಯಾದ್ಯಂತ ಸಾಫ್ಟ್‌ವೇರ್-ನೇತೃತ್ವದ ಫೀಚರ್‌ಗಳನ್ನು ಮತ್ತಷ್ಟು ವಿಸ್ತರಿಸುತ್ತದೆ. ಈ ಫೀಚರ್‌ನ್ನು OTA (ಓವರ್-ದಿ-ಏರ್) ಅಪ್‌ಡೇಟ್ ಮೂಲಕ ಸಕ್ರಿಯಗೊಳಿಸಲಾಗುತ್ತಿದ್ದು, ಸ್ಟ್ಯಾಂಡರ್ಡ್ ಫೀಚರ್ ಆಗಿ ಲಭ್ಯವಿರುತ್ತದೆ. ಈ ಅಪ್‌ಡೇಟ್ ಅನ್ನು ಸವಾರರಿಗೆ ಅವರ ಸ್ಕೂಟರ್ ಡ್ಯಾಶ್‌ಬೋರ್ಡ್‌ನಲ್ಲಿ ಆನ್-ಸ್ಕ್ರೀನ್ ನೋಟಿಫಿಕೇಷನ್ ಮೂಲಕ ತಿಳಿಸಲಾಗುತ್ತದೆ ಎಂದು ಎಥರ್ ತಿಳಿಸಿದೆ.

TVS: ಭಾರತದ ಮೊದಲ ಹೈಪರ್ ಸ್ಪೋರ್ಟ್ ಸ್ಕೂಟರ್

ಭಾರತದ ಮೊದಲ 150 ಸಿಸಿ ಹೈಪರ್ ಸ್ಪೋರ್ಟ್ ಸ್ಕೂಟರ್ ಆಗಿರುವ ಟಿವಿಎಸ್ ಎನ್‌ಟಾರ್ಕ್ 150 (TVS NTORQ 150)ನ ಹೊಸ ಜಾಹೀರಾತನ್ನು ಟಿವಿಎಸ್ ಮೋಟಾರ್ ಕಂಪನಿ ಅನಾವರಣಗೊಳಿಸಿದೆ. ಇದರಲ್ಲಿ ಟಿವಿಎಸ್ ಎನ್‌ಟಾರ್ಕ್ 150, ಪ್ರತಿ ರೈಡ್‌ನಲ್ಲೂ ರೇಸ್‌ಟ್ರಾಕ್‌ನ ಅನುಭವ ನೀಡುತ್ತದೆ ಎಂಬುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ಟಿವಿಎಸ್ ಮೋಟಾರ್ ಪರಂಪರೆಯಿಂದ ಹೊರಬಂದ ಈ ಸ್ಕೂಟರ್ ತನ್ನ ವಿಭಾಗದಲ್ಲಿ ಹೊಸ ಅಲೆ ಎಬ್ಬಿಸಲಿದೆ. ಎಲ್ಲಾ ಸ್ಕೂಟರ್‌ಗಳಿಗಿಂತ ವಿಭಿನ್ನ ರೈಡಿಂಗ್ ಅನುಭವ ನೀಡಲಿದೆ ಎಂದು ಟಿವಿಎಸ್ ಹೇಳಿದೆ.

Mahindra: ಹೊಸ ಮಹೀಂದ್ರಾ ಕಾರಿನ ವೇರಿಯೆಂಟ್‌ವಾರು ಫೀಚರ್ಸ್‌ಗಳಿವು..

ಮೊನ್ನೆಯಷ್ಟೇ ನೂತನ ಮಹೀಂದ್ರಾ ಎಕ್ಸ್‌ಯುವಿ 7ಎಕ್ಸ್ಒ (Mahindra XUV 7XO) ಎಸ್‌ಯುವಿಯನ್ನು ಬಿಡುಗಡೆಗೊಳಿಸಲಾಗಿದೆ. ಇದು ರೂ.13.66 ಲಕ್ಷದಿಂದ ರೂ.24.92 ಲಕ್ಷ (ಎಕ್ಸ್-ಶೋರೂಂ) ದರವನ್ನು ಹೊಂದಿದೆ. 6/ 7 ಆಸನಗಳನ್ನು ಒಳಗೊಂಡಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಸಂಚರಿಸಬಹುದು. ಎಎಕ್ಸ್, ಎಎಕ್ಸ್3, ಎಎಕ್ಸ್5, ಎಎಕ್ಸ್7, ಎಎಕ್ಸ್7 ಟಿ ಮತ್ತು ಎಎಕ್ಸ್7 ಎಲ್ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಸಿಗುತ್ತದೆ. ನಾವಿಲ್ಲಿ ಈ ಕಾರಿನ ಪ್ರತಿಯೊಂದು ರೂಪಾಂತರಗಳು ಯಾವೆಲ್ಲ ವೈಶಿಷ್ಟ್ಯಗಳನ್ನು ಪಡೆದಿವೆ ಎಂಬುದರ ಕುರಿತಂತೆ ಸಂಕ್ಷಿಪ್ತವಾಗಿ ತಿಳಿಸಿಕೊಟ್ಟಿದ್ದೇವೆ.
Advertisement

Mahindra: ಸೈಲೆಂಟ್ ಆಗಿ ಬಿಡುಗಡೆಯಾಗಿದೆ ಮಹೀಂದ್ರಾ XUV 3XO EV

ಜನಪ್ರಿಯ ಕಾರು ತಯಾರಕರಾದ ಮಹೀಂದ್ರಾ, ನಿನ್ನೆ (6 ಜನವರಿ) ಹೊಸ ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒ ಇವಿ' (Mahindra XUV 3XO EV) ಎಲೆಕ್ಟ್ರಿಕ್ ಎಸ್‌ಯುವಿಯನ್ನು ಬಿಡುಗಡೆ ಮಾಡಿದೆ. ಈ ಕಾರು ಏಪ್ರಿಲ್ 2024 ರಲ್ಲಿ ಬಿಡುಗಡೆಯಾದ ಇಂಧನ ಚಾಲಿತ XUV 3XO ನ ಎಲೆಕ್ಟ್ರಿಕ್ ಆವೃತ್ತಿಯಾಗಿದೆ. ನಗರ ವಿನ್ಯಾಸ, ಕಾರ್ಯಕ್ಷಮತೆ, ಸುರಕ್ಷತೆ ಮತ್ತು ಆಧುನಿಕ ತಂತ್ರಜ್ಞಾನವನ್ನು ಹೊಂದಿದ್ದು, ಸ್ಪೋರ್ಟಿ ಡಿಸೈನ್‌ ಜೊತೆಗೆ ಪ್ರಾಯೋಗಿಕತೆಯನ್ನು ಬಯಸುವ ಗ್ರಾಹಕರಿಗಾಗಿ ಈ ಕಾರನ್ನು ಬಿಡುಗಡೆ ಮಾಡಲಾಗಿದೆ ಎಂದು ಮಹೀಂದ್ರಾ ತಿಳಿಸಿದೆ.