285 Km ಓಡುತ್ತೆ: 13.89 ಲಕ್ಷ.. ನಿನ್ನೆ ಬಿಡುಗಡೆ, ಹೊಸ 'ಮಹೀಂದ್ರಾ..

ನಿನ್ನೆಯಷ್ಟೇ ಹೊಚ್ಚ ಹೊಸ ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್ಒ (Mahindra XUV 3XO EV) ಅದ್ದೂರಿಯಾಗಿ ಬಿಡುಗಡೆಗೊಂಡಿದೆ. ಇದೊಂದು ಎಲೆಕ್ಟ್ರಿಕ್ ಎಸ್‌ಯುವಿಯಾಗಿದೆ. ಕನಿಷ್ಠ ರೂ.13.89 ಲಕ್ಷ ಹಾಗೂ ಗರಿಷ್ಠ ರೂ.14.96 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಒಳಗೊಂಡಿದೆ. ಡೀಪ್ ಫಾರೆಸ್ಟ್, ಎವರೆಸ್ಟ್ ವೈಟ್, ಗ್ಯಾಲಕ್ಸಿ ಗ್ರೇ, ನೆಬುಲಾ ಬ್ಲ್ಯೂ, ಸ್ಟೆಲ್ತ್ ಬ್ಲ್ಯಾಕ್ ಹಾಗೂ ಟ್ಯಾಂಗೋ ರೆಡ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ. 190 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಮತ್ತು 2,600 ಮಿ.ಮೀ ವೀಲ್‌ಬೇಸ್‌ನ್ನು ಒಳಗೊಂಡಿದೆ.

Hyundai: ಕಮ್ಮಿ ಬೆಲೆಯ ಈ ಕಾರಿಗೆ ಫುಲ್ ಡಿಮ್ಯಾಂಡ್

ನಗರ ಚಾಲನೆಗೆ ಬಹುಮುಖ, ಪರಿಣಾಮಕಾರಿ ಮತ್ತು ಆರಾಮದಾಯಕವಾದ ವಾಹನದ ಅಗತ್ಯವಿದೆ. ಹೊಸ ಹುಂಡೈ ವೆನ್ಯೂ (Hyundai VENUE) ನಗರ ಸ್ನೇಹಿ SUV ಆಗಿದ್ದು ದಿಟ್ಟ ವಿನ್ಯಾಸ, ಸುಧಾರಿತ ತಂತ್ರಜ್ಞಾನ ಮತ್ತು ಪ್ರಾಯೋಗಿಕ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಯಾಣಿಕರು ಮತ್ತು ಸಾಮಾನು ಸರಂಜಾಮುಗಳಿಗೆ ವಿಶಾಲವಾದ ಕ್ಯಾಬಿನ್‌ನೊಂದಿಗೆ, ಇದು ಡಿಸೈನ್, ಅನುಕೂಲತೆ ಮತ್ತು ಪರ್ಫಾಮೆನ್ಸ್‌ಗೆ ಸರಿಯಾದ ಸಂಯೋಜನೆಯನ್ನು ನೀಡುತ್ತದೆ. ಇದರ ಸುಗಮ ಕಾರ್ಯಕ್ಷಮತೆ, ಆಕರ್ಷಕ ಒಳಾಂಗಣ ಮತ್ತು ಸ್ಮಾರ್ಟ್ ಫೀಚರ್‌ಗಳು ದೈನಂದಿನ ಪ್ರಯಾಣ, ವಾರಾಂತ್ಯದ ಪ್ರವಾಸಗಳು ಮತ್ತು ಸಾಂದರ್ಭಿಕ ಲಾಂಗ್‌ ಡ್ರೈವ್‌ಗಳಿಗೆ ಬೆಸ್ಟ್‌ ಆಯ್ಕೆಯಾಗಿದೆ.

ಆಫೀಸ್‌ಗೆ ಹೋಗಲು ಬೆಸ್ಟ್ ಸ್ಕೂಟರ್‌ಯಿದು.. ಫುಲ್ ಟ್ಯಾಂಕ್..

ಟಿವಿಎಸ್ ಜೂಪಿಟರ್ 125 (TVS Jupiter 125) ಜನಪ್ರಿಯ ಸ್ಕೂಟರ್ ಎಂದೇ ಹೆಸರುವಾಸಿಯಾಗಿದೆ. ಪ್ರತಿದಿನ ಆಫೀಸ್‌ಗೆ ಹೋಗುವವರಿಗೆ ಬೆಸ್ಟ್ ಚಾಯ್ಸ್ ಆಗಿದೆ. ಪುರುಷ ಹಾಗೂ ಮಹಿಳೆಯರು ಕೂಡ ಸುಲಭವಾಗಿ ಬಳಕೆ ಮಾಡಬಹುದು. ನೀವು ಹೊಚ್ಚ ಹೊಸ ಸ್ಕೂಟರ್‌ವೊಂದನ್ನು ಖರೀದಿಸಲು ಆಲೋಚಿಸಿದ್ದೀರಾ.. ಹಾಗಾದರೆ ಇದೇ 'ಜೂಪಿಟರ್'ನ್ನು ಮನೆಗೆ ತರಬಹುದಾಗಿದೆ. ಬನ್ನಿ, ಈ ಸ್ಕೂಟರ್‌ನ ಬೆಲೆ ಹಾಗೂ ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

ಹೊಸ ಮಹೀಂದ್ರಾ ಎಕ್ಸ್‌ಯುವಿ 7ಎಕ್ಸ್ಒ vs ಟೊಯೊಟಾ..

ನಿನ್ನೆಯಷ್ಟೇ ಹೊಸ ಮಹೀಂದ್ರಾ ಎಕ್ಸ್‌ಯುವಿ 7ಎಕ್ಸ್ಒ (Mahindra XUV 7XO) ಎಸ್‌ಯುವಿಯನ್ನು ಬಿಡುಗಡೆಗೊಳಿಸಲಾಗಿದೆ. ಇದಕ್ಕೆ ಟೊಯೊಟಾ ಇನ್ನೋವಾ ಹೈಕ್ರಾಸ್ (Toyota Innova Hycross) ಎಂಪಿವಿಯು ಪ್ರಬಲವಾದ ಪ್ರತಿಸ್ಪರ್ಧಿವಾಗಿದೆ. ಇವೆರೆಡು ಕಾರುಗಳು ತುಂಬಾ ಚೆನ್ನಾಗಿರುವ ವಿನ್ಯಾಸ ಹೊಂದಿದ್ದು, ಹತ್ತಾರು ಹೊಸತನಗಳಿಗೆ ಸಾಕ್ಷಿಯಾಗಿವೆ. ನಾವಿಲ್ಲಿ ಈ ಕಾರುಗಳ ಬೆಲೆ, ಕಾರ್ಯಕ್ಷಮತೆ ಹಾಗೂ ವೈಶಿಷ್ಟ್ಯಗಳ ಕುರಿತು ಹೋಲಿಕೆ ಮಾಡಿದ್ದೇವೆ.
Advertisement

Mahindra: ಸದ್ದಿಲ್ಲದೆ ಹೊಸ ಎಸ್‌ಯುವಿ ಬಿಡುಗಡೆ: ಮಹೀಂದ್ರಾ ಆಟ ಶುರು

ಭಾರತದ ಪ್ರಮುಖ SUV ತಯಾರಕರಾದ ಮಹೀಂದ್ರಾ, ಇಂದು ರೂ. 13.89 ಲಕ್ಷ (ಎಕ್ಸ್‌ ಶೊರೂಂ) ಆರಂಭಿಕ ಬೆಲೆಯಲ್ಲಿ 'ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒ ಇವಿ' (Mahindra XUV 3XO EV) ಎಲೆಕ್ಟ್ರಿಕ್ ಎಸ್‌ಯುವಿಯನ್ನು ಬಿಡುಗಡೆ ಮಾಡಿದೆ. ಗ್ರಾಹಕರ ಆಕಾಂಕ್ಷೆಗಳು ಮತ್ತು ಅಗತ್ಯಗಳನ್ನು ಪೂರೈಸಲು ವಿನ್ಯಾಸಗೊಳಿಸಲಾದ XUV 3XO EV, ನಗರ ವಿನ್ಯಾಸ, ಕಾರ್ಯಕ್ಷಮತೆ, ಸುರಕ್ಷತೆ ಮತ್ತು ಆಧುನಿಕ ತಂತ್ರಜ್ಞಾನವನ್ನು ಹೊಂದಿದೆ. ಇಂಟೀರಿಯರ್‌ನಲ್ಲಿ ಪ್ರೀಮಿಯಂ ವಾತಾವರಣದೊಂದಿಗೆ ಪ್ರತಿ ಪ್ರಯಾಣದಲ್ಲೂ ಸೌಕರ್ಯವನ್ನು ನೀಡುವಂತಹ ಕ್ಯಾಬಿನ್ ರೂಪಿಸಲಾಗಿದೆ. ಇದರ ಸೊಗಸಾದ ಡಿಸೈನ್‌ ಜೊತೆಗೆ ಪ್ರಾಯೋಗಿಕತೆಯನ್ನು ಬಯಸುವ ಗ್ರಾಹಕರಿಗೆ ಬೆಸ್ಟ್ ಆಯ್ಕೆಯಾಗಿದೆ ಎಂದು ಮಹೀಂದ್ರ ಭರವಸೆ ನೀಡಿದೆ.

Top 5 Best New Suvs: ನೀವು ಕಾರು ತೆಗೆದುಕೊಳ್ಳಬೇಕೇ..

ಹೊಸದೊಂದು ಕಾರು ಖರೀದಿಸಬೇಕೆಂಬುದು ಹಲವರ ಕನಸಾಗಿರುತ್ತದೆ. ಆದರೆ, ಯಾವ ಕಾರನ್ನು ತೆಗೆದುಕೊಳ್ಳಬೇಕು ಎಂಬ ಗೊಂದಲ ಬಹುತೇಕರಲ್ಲಿ ಇರುತ್ತದೆ. ಅಂತಹವರಿಗೆ 'ಎಸ್‌ಯುವಿಗಳು' ಬೆಸ್ಟ್ ಚಾಯ್ಸ್ ಆಗಲಿವೆ. ದೇಶೀಯ ಮಾರುಕಟ್ಟೆಯಲ್ಲಿಯೂ ಕೆಲವೇ ತಿಂಗಳ ಅಂತರದಲ್ಲಿ 5 ನೂತನ ಎಸ್‌ಯುವಿಗಳು ಅದ್ದೂರಿಯಾಗಿ ಬಿಡುಗಡೆಗೊಂಡಿವೆ. ಬನ್ನಿ.. ಇವುಗಳ ಬೆಲೆ ಎಷ್ಟು, ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಕ್ಷಿಪ್ತವಾದ ವಿವರಗಳನ್ನು ತಿಳಿಯೋಣ.

Mahindra: ನಿನ್ನೆ ಬಿಡುಗಡೆಯಾಗಿದೆ ಮಹೀಂದ್ರಾದ ಹೊಸ ಬ್ರಹ್ಮಾಸ್ತ್ರ

ಭಾರತದ ಪ್ರಮುಖ SUV ತಯಾರಕರಾದ ಮಹೀಂದ್ರಾ (Mahindra), ನಿನ್ನೆಯಷ್ಟೆ ಇತ್ತೀಚಿನ ಟ್ರೆಂಡ್ ‌ಸೆಟರ್ ಆಗಿರುವ ಹೊಸ XUV 7XO ಎಸ್‌ಯುವಿಯನ್ನು ಬಿಡುಗಡೆ ಮಾಡಿದೆ. ಇದರ ಬೇಸ್ ವೇರಿಯೆಂಟ್ ಬೆಲೆಯು ರೂ. 13.66 ಲಕ್ಷ (ಎಕ್ಸ್-ಶೋರೂಂ) ಹಾಗೂ ಟಾಪ್ ವೇರಿಯೆಂಟ್ ರೂ. 24.11 ಲಕ್ಷ (ಎಕ್ಸ್-ಶೋರೂಂ) ಇದೆ. ಅಂದಹಾಗೆ ಈ ಹೊಸ XUV 7XO ಎಸ್‌ಯುವಿ ಮಹೀಂದ್ರಾದ ಹಳೆಯ XUV 700 ಎಸ್‌ಯುವಿಯ ಅಪ್‌ಡೇಟೆಡ್ ಮಾಡಲ್ ಆಗಿದೆ. ಅತ್ಯಾಧುನಿಕ ತಂತ್ರಜ್ಞಾನ ಮತ್ತು ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ ಹೊಸ ಎಸ್‌ಯುವಿಯನ್ನು ಬಿಡುಗಡೆ ಮಾಡಲಾಗಿದೆ.

ಮಾರುತಿಗೆ ತಾಕತ್ತು ಹೆಚ್ಚಿಸಿದ ಕಾರಿದು.. 26 Km ಮೈಲೇಜ್..

ಮಾರುತಿ ಸುಜುಕಿ ಎರ್ಟಿಗಾ (Maruti Suzuki Ertiga) ಜನಪ್ರಿಯ ಫ್ಯಾಮಿಲಿ ಎಂಪಿವಿ ಎಂದೇ ಮನೆ ಮಾತಾಗಿದೆ. ಈ ಕಾರಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಗ್ರಾಹಕರು ಕೂಡ ಮುಗಿಬಿದ್ದು ಕೊಂಡುಕೊಳ್ಳುತ್ತಿದ್ದಾರೆ. ಕಳೆದ ತಿಂಗಳು (ಡಿಸೆಂಬರ್ - 2025) ಸಹ ಅದು ಮುಂದುವರಿದೆ. ಒಟ್ಟು 16,300 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಿಸಲಾಗಿದೆ. ಹಾಗೆಯೇ ನವೆಂಬರ್‌ನಲ್ಲಿ 16,197 ಯುನಿಟ್, ಅಕ್ಟೋಬರ್‌ನಲ್ಲಿ 20,087 ಯುನಿಟ್, ಸೆಪ್ಟೆಂಬರ್‌ನಲ್ಲಿ 12,115 ಯುನಿಟ್ ಮತ್ತು ಆಗಸ್ಟ್‌ನಲ್ಲಿ 18,445 ಯುನಿಟ್‌ಗಳನ್ನು ಮಾರಲಾಗಿದೆ. ಈ ಅಂಕಿಅಂಶವನ್ನು ಲೆಕ್ಕಹಾಕಿದಾಗ ಪ್ರತಿ ತಿಂಗಳು ಸರಾಸರಿ 16,628 ಯುನಿಟ್ 'ಎರ್ಟಿಗಾ' ಎಂಪಿವಿಗಳು ಮಾರಾಟಗೊಂಡಿವೆ.
Advertisement

KTM: 10 ಸಾವಿರ ಮೌಲ್ಯದ ಅಕ್ಸೆಸೊರಿಗಳು ಫ್ರೀ

ಕೆಟಿಎಂ (KTM) ಕಂಪನಿಯು ಭಾರತದಲ್ಲಿ ಮಧ್ಯಮ ಹೈ - ಪರ್ಫಾಮೆನ್ಸ್ ಮೋಟಾರ್‌ಸೈಕಲ್‌ ವಿಭಾಗದಲ್ಲಿ ಖ್ಯಾತಿಯನ್ನು ಗಳಿಸಿದೆ. ತನ್ನ 390ಸಿಸಿ ವಿಭಾಗವು ಯುವಕರ ಹಾಟ್‌ ಫೇವರೆಟ್ ಆಗಿದ್ದು, ಪ್ರಮುಖ ನಗರಗಳಲ್ಲಿ ಹೆಚ್ಚಾಗಿ ಮಾರಾಟ ಕಾಣುತ್ತವೆ. ಕೆಟಿಎಂ ಕಂಪನಿಯು ಆಸ್ಟ್ರಿಯನ್ ಮೋಟಾರ್‌ಸೈಕಲ್ ಬ್ರಾಂಡ್‌ ಆಗಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ಆದರೂ ಭಾರತದಲ್ಲಿ ಗ್ರಾಹಕರ ಆದ್ಯತೆಗಳಿಗೆ ತಕ್ಕಂತೆ ವಾಹನಗಳನ್ನು ನಿರ್ಮಿಸಿ ಸ್ಪರ್ಧಾತ್ಮಕ ಬೆಲೆಯಲ್ಲಿ ಮೋಟಾರ್‌ಸೈಕಲ್‌ಗಳನ್ನು ನೀಡುತ್ತಾ ಟಾಪ್ ಪರ್ಫಾಮೆನ್ಸ್ ಮೋಟಾರ್‌ಸೈಕಲ್‌ ಬ್ರಾಂಡ್‌ಗಳಲ್ಲಿ ಒಂದಾಗಿ ಜನಪ್ರಿಯತೆ ಪಡೆದುಕೊಂಡಿದೆ.

ನೂತನ 'ಮಹೀಂದ್ರಾ XUV 7XO' ರಗಡ್ ಎಸ್‌ಯುವಿಗೆ 3 ಪರ್ಯಾಯ ಕಾರುಗಳಿವು..

ನಿನ್ನೆ ಹೊಸ ಮಹೀಂದ್ರಾ ಎಕ್ಸ್‌ಯುವಿ 7ಎಕ್ಸ್ಒ (Mahindra XUV 7XO) ಎಸ್‌ಯುವಿಯನ್ನು ಬಿಡುಗಡೆಗೊಳಿಸಲಾಗಿದೆ. ಇದು ತುಂಬಾ ಚೆನ್ನಾಗಿರುವ ವಿನ್ಯಾಸವನ್ನು ಹೊಂದಿದೆ. ಎವರೆಸ್ಟ್ ವೈಟ್, ನೆಬುಲಾ ಬ್ಲ್ಯೂ, ಡಸರ್ಟ್ ಮಿಸ್ಟ್, ಮಿಡ್‌ನೈಟ್ ಬ್ಲ್ಯಾಕ್ ಹಾಗೂ ರೂಬಿ ವೆಲ್ವೆಟ್ ಸೇರಿದಂತೆ ವಿವಿಧ ಆಕರ್ಷಕ ಬಣ್ಣಗಳೊಂದಿಗೂ ಲಭ್ಯವಿದೆ. 4,695 ಎಂಎಂ ಉದ್ದ, 1,890 ಎಂಎಂ ಅಗಲ ಹಾಗೂ 1755 ಮಿ.ಮೀ ಎತ್ತರವಿದೆ. ಜೊತೆಗೆ 6/ 7 ಆಸನಗಳನ್ನು ಹೊಂದಿದ್ದು, ಆರಾಮದಾಯಕವಾದ ಪ್ರಯಾಣವನ್ನು ಒದಗಿಸಬಲ್ಲದು.

Triumph: ಕೇವಲ 1.95 ಲಕ್ಷಕ್ಕೆ ಅಂತರಾಷ್ಟ್ರೀಯ ಬ್ರಾಂಡ್‌ನ ಬೈಕ್

120 ವರ್ಷಗಳಿಗೂ ಹೆಚ್ಚು ಮೋಟಾರ್‌ಸೈಕ್ಲಿಂಗ್ ಪರಂಪರೆಯನ್ನು ಹೊಂದಿರುವ ಜಾಗತಿಕ ಬ್ರಾಂಡ್ ಟ್ರಯಂಫ್ ಮೋಟಾರ್‌ಸೈಕಲ್ಸ್ (Triumph Motorcycles), ಭಾರತದಲ್ಲಿ ತನ್ನ 400 ಸಿಸಿ ಮೋಟಾರ್‌ಸೈಕಲ್‌ ವಿಭಾಗದಲ್ಲಿ ಉತ್ತಮ ಲಾಭ ಕಾಣುತ್ತಿದೆ. ಹೆಸರಿಗೆ ಅಂತರಾಷ್ಟ್ರೀಯ ಬ್ರಾಂಡ್ ಆಗಿದ್ದರೂ ಭಾರತೀಯರ ಆದ್ಯತೆಗಳಿಗೆ ಅನುಗುಣವಾಗಿ 400 ಸಿಸಿ ಪರ್ಫಾಮೆನ್ಸ್ ಮೋಟಾರ್‌ಸೈಕಲ್‌ಗಳನ್ನು ನೀಡುವ ಮೂಲಕ ಇಲ್ಲಿನ ಪ್ರಮುಖ ಬ್ರಾಂಡ್‌ಗಳಿಗೆ ಪೈಪೋಟಿ ನೀಡುತ್ತಿದೆ. ಸದ್ಯ ಗ್ರಾಹಕರನ್ನು ಇನ್ನಷ್ಟು ಸೆಳೆಯಲು ತನ್ನ ಬೈಕ್‌ಗಳ ಮೇಲೆ ಹೊಸ ಆಫರ್‌ಗಳನ್ನು ಘೋಷಿಸಿದೆ.

Mahindra: ನಿನ್ನೆಯಷ್ಟೇ ಬಿಡುಗಡೆ.. 13.66 ಲಕ್ಷ, 7-ಸೀಟರ್..

ನಿನ್ನೆಯಷ್ಟೇ ಹೊಚ್ಚ ಹೊಸ ಮಹೀಂದ್ರಾ ಎಕ್ಸ್‌ಯುವಿ 7ಎಕ್ಸ್ಒ (Mahindra XUV 7XO) ಎಸ್‌ಯುವಿಯನ್ನು ಮಾರಾಟಕ್ಕೆ ತರಲಾಗಿದೆ. ಇದು 'ಎಕ್ಸ್‌ಯುವಿ700'ನ ಫೇಸ್‌ಲಿಫ್ಟ್ ಮಾಡೆಲ್ ಆಗಿದೆ. ಅತ್ಯಾಧುನಿಕವಾದ ವಿನ್ಯಾಸವನ್ನು ಹೊಂದಿದ್ದು, ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ನೀವು ನೂತನ ಕಾರೊಂದನ್ನು ಖರೀದಿಸಲು ಪ್ಲ್ಯಾನ್ ಮಾಡಿದ್ದೀರಾ.. ಹಾಗಾದರೆ ಇದೇ 'ಎಕ್ಸ್‌ಯುವಿ 7ಎಕ್ಸ್ಒ' ಬೆಸ್ಚ್ ಚಾಯ್ಸ್ ಆಗಲಿದೆ. ಬನ್ನಿ, ಈ ಕಾರಿನ ಬೆಲೆ ಹಾಗೂ ವಿಶೇಷತೆಗಳ ಕುರಿತ ಪ್ರಮುಖಾಂಶಗಳು ಏನೆಂಬುದನ್ನು ತಿಳಿಯೋಣ.
Advertisement

ಮೂಲೆ ಗುಂಪಾಗಿದ್ದ ಬ್ರಾಂಡ್‌ಗೆ ಜೀವ ತುಂಬಿದ ಭಾರತ

ಭಾರತದಲ್ಲಿ ಕಾರು ಕಂಪನಿಗಳು ಧೀರ್ಘ ಕಾಲ ಉಳಿಯುವುದು ಸಾಮಾನ್ಯ ವಿಷಯವಲ್ಲ. ಜನರ ಆದ್ಯತೆಗಳಿಗೆ ತಕ್ಕಂತೆ ಕಾರನ್ನು ನಿರ್ಮಿಸಿ ಬೆಲೆಗೆ ತಕ್ಕ ಮೌಲ್ಯವನ್ನು ನೀಡುವುದಾದರೆ ಇಲ್ಲಿನ ಜನ ಆದರಿಸುತ್ತಾರೆ. ಇಲ್ಲವಾದರೆ ಕಂಪನಿ ಮೂಲೆ ಗುಂಪಾಗುತ್ತದೆ, ಈಗಾಗಲೇ ಪ್ರಮುಖ ಕಾರು ತಯಾರಕ ಫೋರ್ಡ್ ಭಾರತವನ್ನು ನಿರ್ಗಮಿಸಿರುವ ವಿಷಯ ಎಲ್ಲರಿಗೂ ತಿಳಿದಿದೆ. ಇದನ್ನು ಮನಗಂಡು ನಿಸ್ಸಾನ್ ಕೂಡ ಭಾರತೀಯ ಗ್ರಾಹಕರ ಆದ್ಯತೆಗಳನ್ನು ಅರಿತುಕೊಂಡು ಇದೀಗ ಪುಟಿದೆದ್ದಿದೆ. ಕಂಪನಿಯ ಪ್ರಮುಖ ಮಾಡಲ್‌ ಆಗಿರುವ ನಿಸ್ಸಾನ್ ಮ್ಯಾಗ್ನೈಟ್ ಭಾರತದಲ್ಲಿ ಹೆಚ್ಚಾಗಿ ಮಾರಾಟವಾಗುತ್ತಿದ್ದು, ಕಂಪನಿಗೆ ಭಾರತದಲ್ಲಿ ಭರವಸೆಯ ಬೆಳಕಾಗಿದೆ.

ಶೋರೂಂಗೆ ಬರುವ ಜನರಿಗೆ ಈ ಕಾರೇ ಬೇಕಂತೆ.. ಬೈಕ್‌ನಂತೆ 25 ಕಿಲೋಮೀಟರ್..

ಮಾರುತಿ ಸುಜುಕಿ ಬ್ರೆಝಾ (Maruti Suzuki Brezza) ಜನಮೆಚ್ಚಿದ ಕಾಂಪ್ಯಾಕ್ಟ್ ಎಸ್‌ಯುವಿ ಎಂದೇ ಮನೆ ಮಾತಾಗಿದೆ. ಈ ಕಾರಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಕಳೆದ ತಿಂಗಳು (ಡಿಸೆಂಬರ್ - 2025) ಸಹ ಭಾರೀ ಸಂಖ್ಯೆಯಲ್ಲಿ ಮಾರಾಟವಾಗಿದೆ. ಒಟ್ಟು 17,700 ಯುನಿಟ್‌ಗಳನ್ನು ಖರೀದಿದಾರರಿಗೆ ಯಶಸ್ವಿಯಾಗಿ ವಿತರಿಸಲಾಗಿದೆ. ಹಾಗೆಯೇ ನವೆಂಬರ್‌ನಲ್ಲಿ 13,947 ಯುನಿಟ್, ಅಕ್ಟೋಬರ್‌ನಲ್ಲಿ 12,072 ಯುನಿಟ್, ಸೆಪ್ಟೆಂಬರ್‌ನಲ್ಲಿ 10,173 ಯುನಿಟ್, ಆಗಸ್ಟ್‌ನಲ್ಲಿ 13,620 ಯುನಿಟ್ ಹಾಗೂ 14,065 ಯುನಿಟ್‌ಗಳನ್ನು ಮಾರಲಾಗಿದೆ.

ಬಹುನಿರೀಕ್ಷಿತ ಮಹೀಂದ್ರಾ ಎಕ್ಸ್‌ಯುವಿ 7ಎಕ್ಸ್ಒ SUV ಬಿಡುಗಡೆ..

ನೂತನ ಮಹೀಂದ್ರಾ ಎಕ್ಸ್‌ಯುವಿ 7ಎಕ್ಸ್ಒ (Mahindra XUV 7XO) ಎಸ್‌ಯುವಿ ಸೋಮವಾರ ಅದ್ದೂರಿಯಾಗಿ ಬಿಡುಗಡೆಗೊಂಡಿದೆ. ಇದು 'ಎಕ್ಸ್‌ಯುವಿ700'ನ ಫೇಸ್‌ಲಿಫ್ಟ್ ಮಾಡೆಲ್ ಆಗಿದೆ. ಈ ಕಾರಿನ ವಿನ್ಯಾಸದಲ್ಲಿ ಹಲವು ಬದಲಾವಣೆಗಳಿದ್ದು, ನಾನಾ ಬಗೆಯ ಹೊಸತನಗಳಿಗೂ ಸಾಕ್ಷಿಯಾಗಿದೆ. ಶಕ್ತಿಶಾಲಿಯಾದ ಪವರ್‌ಟ್ರೇನ್‌ನ್ನು ಹೊಂದಿದೆ. ಬನ್ನಿ.. ನೂತನ 'ಎಕ್ಸ್‌ಯುವಿ 7ಎಕ್ಸ್ಒ'ನ ಬೆಲೆ ಎಷ್ಟು, ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

ಹೊಸ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿದ ಬೆಂಗಳೂರಿನ ಸಿಂಪಲ್ ಎನರ್ಜಿ

ಬೆಂಗಳೂರು ಮೂಲದ ಎಲೆಕ್ಟ್ರಿಕ್ ಸ್ಕೂಟರ್ ಕಂಪನಿಯಾದ ಸಿಂಪಲ್ ಎನರ್ಜಿ, ತನ್ನ ಜನ್-2 ಮಾಡಲ್‌ಗಳಾದ 'ಸಿಂಪಲ್ ಒನ್' (Simple One), 'ಸಿಂಪಲ್ ಒನ್‌ಎಸ್' (Simple OneS) ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿದೆ. ಜೊತೆಗೆ ಸಿಂಪಲ್ ಅಲ್ಟ್ರಾ (Simple Ultra) ಎಂಬ ಹೈ-ಸ್ಪೀಡ್ ಸ್ಕೂಟರ್‌ನ್ನು ಬಿಡುಗಡೆ ಮಾಡಿದೆ. ಈ ಸಿಂಪಲ್ ಅಲ್ಟ್ರಾ ವಿಶೇಷತೆ ಏನೆಂದರೆ ಒಮ್ಮೆ ಚಾರ್ಜ್ ಮಾಡಿ 400 ಕಿ.ಮೀ ಓಡಿಸಬಹುದು, ಇದು ಭಾರತದ ಅತಿ ಹೆಚ್ಚು ರೇಂಜ್ ನೀಡುವ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಜೊತೆಗೆ ಭಾರತದ ಎರಡನೇ ಅತಿ ವೇಗದ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ ಎಂದು ಕಂಪನಿ ತಿಳಿಸಿದೆ.
Advertisement

MG Windsor: ವಿಮಾನದಂತಹ ಸೌಕರ್ಯ: ಚೀನಾ ಬ್ರಾಂಡ್‌ಗೆ ಮನಸೋತ ಜನ

2025 ರಲ್ಲಿ ಭಾರತದ ನಂಬರ್.1 ಮಾರಾಟದ ಇವಿ ಆಗುವ ಮೂಲಕ ಎಂಜಿ ವಿಂಡ್ಸರ್ (MG Windsor) ಗಮನಾರ್ಹ ಮೈಲಿಗಲ್ಲು ಸಾಧಿಸಿದೆ ಎಂದು ಜೆಎಸ್‌ಡಬ್ಲ್ಯೂ ಎಂಜಿ ಮೋಟಾರ್ ಇಂಡಿಯಾ (MG Motor) ಇಂದು ಘೋಷಿಸಿದೆ. ಎಂಜಿ ವಿಂಡ್ಸರ್ ತನ್ನ ಬೆಲೆಗೆ ತಕ್ಕ ಮೌಲ್ಯ ನೀಡುವ ಎಲೆಕ್ಟ್ರಿಕ್ ಕಾರಾಗಿ ಉದ್ಯಮವನ್ನು ಭರದಿಂದ ಕೊಂಡೊಯ್ದಿದೆ. ಇವಿ ಮಾರುಕಟ್ಟೆ ನಾಯಕನಾಗಿ ತನ್ನನ್ನು ತಾನು ಸ್ಥಾಪಿಸಿಕೊಂಡಿದೆ. 2025 ರಲ್ಲಿ ಬರೋಬ್ಬರಿ 46,735 ಯುನಿಟ್‌ ಕಾರುಗಳನ್ನು ಮಾರಾಟ ಮಾಡುವ ಮೂಲಕ, ಎಂಜಿ ವಿಂಡ್ಸರ್ ಭಾರತದ 4W (ಫೋರ್-ವೀಲರ್) ಇವಿ ಮಾರುಕಟ್ಟೆಯಲ್ಲಿ ಯಾವುದೇ ಇತರ ಕಂಪನಿ ಸಾಧಿಸದ ದಾಖಲೆ ಸ್ಥಾಪಿಸಿರುವುದಾಗಿ ಪ್ರಕಟಣೆಯಲ್ಲಿ ಹೇಳಿದೆ.

Yamaha: ಗುಡ್‌ನ್ಯೂಸ್.. ಈ ನೂತನ ಯಮಹಾ ಮೋಟಾರ್‌ಸೈಕಲ್‌ ಬೆಲೆ..

ಯಮಹಾ ಆರ್15 (Yamaha R15) ಜನಪ್ರಿಯ ಬೈಕ್ ಎಂದೇ ಹೆಸರುವಾಸಿಯಾಗಿದೆ. ಇದು ನೋಡಲು ಚೆನ್ನಾಗಿದ್ದು, ಹಲವು ಹೊಸತನಗಳಿಗೂ ಸಾಕ್ಷಿಯಾಗಿದೆ. ಸ್ಪರ್ಧಾತ್ಮಕ ಬೆಲೆಯಲ್ಲಿಯೂ ಸಿಗುತ್ತದೆ. ಯುವ ಗ್ರಾಹಕರು ಕೂಡ ಮೆಚ್ಚಿಕೊಂಡಿದ್ದಾರೆ. ಸದ್ಯ, 'ಯಮಹಾ ಮೋಟಾರ್' 70ನೇ ವಾರ್ಷಿಕೋತ್ಸವ ಪ್ರಯುಕ್ತ ತನ್ನ ಗ್ರಾಹಕರಿಗೆ ಸಿಹಿಸುದ್ದಿ ನೀಡಿದೆ. ಇದೇ 'ಆರ್15' ರೂಪಾಂತರಗಳ (ವೇರಿಯೆಂಟ್) ಬೆಲೆಯನ್ನು ರೂ.5,000 ವರೆಗೆ ಇಳಿಕೆ ಮಾಡಿದೆ. ಜನವರಿ 5 ರಿಂದ ನೂತನ ದರಗಳು ಜಾರಿಗೆ ಬರಲಿವೆ.

Kia: ವಿಷ್ಣು ದಾದಾರ ಕೊಟಿಕೊಬ್ಬ ನೆನಪಿಸುತ್ತೆ ಕಿಯಾ

ಕಿಯಾ (Kia) ಕಂಪನಿಯು ಭಾರತಕ್ಕೆ ಲಗ್ಗೆಯಿಟ್ಟ ಕೆಲವೇ ವರ್ಷಗಳಲ್ಲಿ ಪ್ರಮುಖ ಕಾರು ತಯಾರಕ ಬ್ರಾಂಡ್‌ಗಳಲ್ಲಿ ಒಂದಾಗಿ ಹೊರಹೊಮ್ಮಿತು. ಈ ಕಿಯಾ ಕಂಪನಿ ಎಲ್ಲರಿಗೂ ಗೊತ್ತಿರುವ ಹಾಗೆ ಕೊರಿಯಾ ಮೂಲದ ಬ್ರಾಂಡ್‌ ಆಗಿದ್ದು, ಕೇವಲ ಭಾರತ ಮಾತ್ರವಲ್ಲದೆ ಜಾಗತಿಕವಾಗಿ ಹಲವು ದೇಶಗಳಲ್ಲಿ ತನ್ನ ಕಾರುಗಳನ್ನು ಮಾರಾಟ ಮಾಡುತ್ತಿದೆ. 2025 ರಲ್ಲಿ ಹೊಸ ವಾರ್ಷಿಕ ಜಾಗತಿಕ ಮಾರಾಟ ದಾಖಲೆಯನ್ನು ದಾಖಲಿಸಿದೆ. ಕಿಯಾ ಕಾರ್ಪೊರೇಷನ್ 2025 ರಲ್ಲಿ ಜಾಗತಿಕವಾಗಿ (ಜನವರಿ-ಡಿಸೆಂಬರ್) ಬರೋಬ್ಬರಿ 31,35,803 ವಾಹನಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಇದು ಶೇ2 ರಷ್ಟು ಬೆಳವಣಿಗೆಯಾಗಿದೆ ಎಂದು ಕಿಯಾ ತಿಳಿಸಿದೆ.

Maruti Suzuki: ಹೊಸ ಕಾರಿನ ಅಬ್ಬರ.. ಥಂಡಾ ಹೊಡೆದ ಪ್ರತಿಸ್ಪರ್ಧಿ..

ಮಾರುತಿ ಸುಜುಕಿ ವಿಕ್ಟೋರಿಸ್ (Maruti Suzuki Victoris) ಪ್ರಮುಖ ಎಸ್‌ಯುವಿಯಾಗಿ ಹೊರಹೊಮ್ಮಿದೆ. ಈ ಕಾರಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಕಳೆದ ತಿಂಗಳು (ಡಿಸೆಂಬರ್ - 2025) ಸಹ ಭಾರೀ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಒಟ್ಟು 14,000ಕ್ಕೂ ಅಧಿಕ ಯುನಿಟ್‌ಗಳನ್ನು ಗ್ರಾಹಕರಿಗೆ ವಿತರಿಸಲಾಗಿದೆ. ನೂತನ 'ವಿಕ್ಟೋರಿಸ್'ನ್ನು ಸೆಪ್ಟೆಂಬರ್ 16 ರಂದು ಅದ್ದೂರಿಯಾಗಿ ಬಿಡುಗಡೆಗೊಳಿಸಲಾಯಿತು. ಅದೇ ತಿಂಗಳು 4,261 ಯುನಿಟ್‌ಗಳನ್ನು ಮಾರಲಾಗಿತ್ತು. ಅಕ್ಟೋಬರ್‌ನಲ್ಲಿ 13,496 ಯುನಿಟ್‌ಗಳು ಹಾಗೂ ನವೆಂಬರ್‌ನಲ್ಲಿ 12,300 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು.
Advertisement

Jawa Yezdi: ಅಮೇಜಾನ್, ಫ್ಲಿಪ್‌ಕಾರ್ಟ್‌ನಲ್ಲಿ ಯೆಜ್ಡಿ ಬೈಕ್‌ಗಳು

ಪ್ರಮುಖ ಮೋಟಾರ್‌ಸೈಕಲ್ ತಯಾರಕ ಕಂಪನಿಯಾದ ಜಾವಾ ಯೆಜ್ಡಿ ಮೋಟಾರ್‌ಸೈಕಲ್ಸ್ (Jawa Yezdi Motorcycles), ತನ್ನ ಹೊಚ್ಚ ಹೊಸ ಮಾಡಲ್‌ಗಳಾದ 2025 ಯೆಜ್ಡಿ ಅಡ್ವೆಂಚರ್ ಮತ್ತು 2025 ಯೆಜ್ಡಿ ರೋಡ್‌ಸ್ಟರ್ ಇಲ್ಲಿಯವರೆಗೆ ಶೋರೂಂಗಳಲ್ಲಿ ಮಾತ್ರ ಲಭ್ಯವಿತ್ತು, ಈಗ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ಗೆ ತರಲಾಗುತ್ತಿದೆ. ಭಾರತದ ಅತಿದೊಡ್ಡ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಕೇವಲ ಒಂದು ಕ್ಲಿಕ್ ಮಾಡುವ ಮೂಲಕ ಬೈಕ್‌ನ್ನು ಖರೀದಿಸಬಹುದು. ಇದು ಸವಾರರೊಂದಿಗೆ ಬ್ರ್ಯಾಂಡ್‌ನ ಸಂಪರ್ಕವನ್ನು ಬಲಪಡಿಸುತ್ತದೆ ಎಂದು ಜಾವಾ ಯೆಜ್ಡಿ ಮೋಟಾರ್‌ಸೈಕಲ್ಸ್ ಪ್ರಕಟಣೆಯಲ್ಲಿ ಹೇಳಿದೆ.

ಸ್ಟೈಲಿಶ್ ಲುಕ್: ರೂ.92,000ಕ್ಕೆ ಸಿಗುತ್ತೆ.. 600 Km ಮೈಲೇಜ್..

ಬಜಾಜ್ ಪಲ್ಸರ್ ಎನ್ಎಸ್ 125 (Bajaj Pulsar NS 125) ಜನಪ್ರಿಯ ಬೈಕ್ ಆಗಿದೆ. ಇದರ ಸ್ಟೈಲಿಶ್ ಲುಕ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಯುವ ಗ್ರಾಹಕರೇ ಮನಸೊತ್ತಿದ್ದಾರೆ. ಈ ಮೋಟಾರ್‌ಸೈಕಲ್‌ ಉತ್ತಮ ಇಂಧನ ದಕ್ಷತೆ ಹಾಗೂ ಕಡಿಮೆ ನಿರ್ವಹಣಾ ವೆಚ್ಚಕ್ಕೂ ಹೆಸರುವಾಸಿಯಾಗಿದೆ. ನೀವು ದಿನಬಳಕೆಗಾಗಿ ಹೊಚ್ಚ ಹೊಸ ಬೈಕ್‌ವೊಂದನ್ನು ಖರೀದಿಸಲು ಆಲೋಚಿಸಿದ್ದೀರಾ.. ಹಾಗಾದರೆ 'ಪಲ್ಸರ್ ಎನ್ಎಸ್ 125' ಬೆಸ್ಟ್ ಚಾಯ್ಸ್ ಆಗಲಿದೆ. ಬನ್ನಿ, ಈ ಮೋಟಾರ್‌ಸೈಕಲ್‌ನ ಬೆಲೆ ಎಷ್ಟು, ಹೇಗೆ ಕಾರ್ಯ ನಿರ್ವಹಿಸುತ್ತದೆ ಹಾಗೂ ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

Maruti Suzuki: ಕಮ್ಮಿ ಬೆಲೆಯ ಸ್ಟೈಲಿಷ್ ಕಾರು... ಡೀಲರ್‌ಗಳ ಫೇವರೆಟ್

ಮಾರುತಿ ಸುಜುಕಿ (Maruti Suzuki) ಕಂಪನಿಯು ಸದ್ಯ ಭಾರತದಲ್ಲಿ ನಂ.1 ಬ್ರಾಂಡ್ ಆಗಿ ಮುಂದುವರಿಯುತ್ತಿದೆ. ತನ್ನ ಅಗ್ಗದ ಕಾರುಗಳಿಂದ ಹಿಡಿದು ಪ್ರೀಮಿಯಂ ಕಾರುಗಳವರೆಗೆ ಎಲ್ಲಾ ವಿಭಾಗದ ಜನರನ್ನು ತನ್ನತ್ತ ಸೆಳೆದಿದೆ. ಪ್ರತಿ ತಿಂಗಳು ದಾಖಲೆಯ ಸಂಖ್ಯೆಯಲ್ಲಿ ಮಾರಾಟವಾಗುವ ಮಾರುತಿ ಸುಜುಕಿ ಕಾರುಗಳಲ್ಲಿ ಅತಿ ಮುಖ್ಯವಾಗಿ 'ಸ್ವಿಫ್ಟ್' ಬಗ್ಗೆ ಹೇಳಲೇಬೇಕು, ಈ ಕಾರು ಮಧ್ಯಮ ವರ್ಗದವರ ಫೆವರೆಟ್ ಆಗಿದೆ. ಡಿಸೈನ್‌ನಿಂದ ಹಿಡಿದು ಫೀಚರ್ಸ್, ಆರಾಮ, ಮೈಲೇಜ್, ಪರ್ಫಾಮೆನ್ಸ್ ಹಾಗೂ ಇದರ ಕಡಿಮೆ ಬೆಲೆಯು ಖರೀದಿದಾರರಿಗೆ ಈ ಕಾರನ್ನು ಫೇವರೆಟ್ ಆಯ್ಕೆಯನ್ನಾಗಿಸಿದೆ.

ಅಗ್ಗದ ಕಾರಿದು.. 3.49 ಲಕ್ಷ ರೂಪಾಯಿ.. 33 Km ಮೈಲೇಜ್..

ಮಾರುತಿ ಸುಜುಕಿ ಎಸ್-ಪ್ರೆಸ್ಸೊ (Maruti Suzuki S-Presso) ಎಂಟ್ರಿ ಲೆವೆಲ್ ಹ್ಯಾಚ್‌ಬ್ಯಾಕ್ ಆಗಿದೆ. ಇದು ತುಂಬಾ ಸರಳವಾಗಿದ್ದು, ನಾನಾ ಬಗೆಯ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಪ್ರತಿ ತಿಂಗಳು ಸ್ಪರ್ಧಾತ್ಮಕ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಖರೀದಿಸುತ್ತಿದ್ದಾರೆ. ಸದ್ಯ ದೇಶೀಯ ಮಾರುಕಟ್ಟೆಯಲ್ಲಿ ಈ ಕಾರಿನ ಮಾರಾಟದಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.
Advertisement

Hyundai: 28.40 ಕಿ.ಮೀ ಮೈಲೇಜ್... ಹ್ಯುಂಡೈ ಟ್ಯಾಕ್ಸಿ ಕಾರು ಬಿಡುಗಡೆ

ಹ್ಯುಂಡೈ (Hyundai) ಕಂಪನಿಯು ವಾಣಿಜ್ಯ ವಾಹನ ವಿಭಾಗಕ್ಕೆ ಎರಡು ಸೆಡಾನ್‌ಗಳನ್ನು ಪರಿಚಯಿಸುವ ಮೂಲಕ ಟ್ಯಾಕ್ಸಿ ರಂಗಕ್ಕೆ ಎಂಟ್ರಿ ಕೊಟ್ಟಿದೆ. ಹೊಸ ಕೈಗೆಟುಕುವ ಕಾರುಗಳು ಟ್ಯಾಕ್ಸಿ ನಿರ್ವಾಹಕರಿಗೆ ತಮ್ಮ ಕಾರ್ಯಾಚರಣೆ ಮತ್ತು ಆದಾಯವನ್ನು ಹೆಚ್ಚಿಸಲಿವೆ. ನಂಬಿಕೆ, ವಿಶ್ವಾಸಾರ್ಹತೆ, ಕಡಿಮೆ ಮಾಲೀಕತ್ವದ ವೆಚ್ಚ ಮತ್ತು ಬಲವಾದ ಗಳಿಕೆಯ ಸಾಮರ್ಥ್ಯದೊಂದಿಗೆ ಉತ್ತಮ ಸೌಕರ್ಯವನ್ನು ನೀಡುತ್ತವೆ ಎಂದು ಹ್ಯುಂಡೈ ಹೇಳಿದೆ. ಇತ್ತೀಚೆಗೆ ಬಿಡುಗಡೆಯಾಗಿರುವ ( 30 ಡಿಸೆಂಬರ್ 2025) ಹ್ಯುಂಡೈ ಪ್ರೈಮ್ HB (ಹ್ಯಾಚ್‌ಬ್ಯಾಕ್) ಮತ್ತು ಪ್ರೈಮ್ SD (ಸೆಡಾನ್) ಟ್ಯಾಕ್ಸಿ ಕಾರುಗಳ ಮುಖ್ಯಾಂಶಗಳು ಇಲ್ಲಿವೆ.