ಅಗ್ಗದ ಕಾರಿದು.. 3.49 ಲಕ್ಷ ರೂಪಾಯಿ.. 33 Km ಮೈಲೇಜ್..

ಮಾರುತಿ ಸುಜುಕಿ ಎಸ್-ಪ್ರೆಸ್ಸೊ (Maruti Suzuki S-Presso) ಎಂಟ್ರಿ ಲೆವೆಲ್ ಹ್ಯಾಚ್‌ಬ್ಯಾಕ್ ಆಗಿದೆ. ಇದು ತುಂಬಾ ಸರಳವಾಗಿದ್ದು, ನಾನಾ ಬಗೆಯ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಪ್ರತಿ ತಿಂಗಳು ಸ್ಪರ್ಧಾತ್ಮಕ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಖರೀದಿಸುತ್ತಿದ್ದಾರೆ. ಸದ್ಯ ದೇಶೀಯ ಮಾರುಕಟ್ಟೆಯಲ್ಲಿ ಈ ಕಾರಿನ ಮಾರಾಟದಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

Hyundai: 28.40 ಕಿ.ಮೀ ಮೈಲೇಜ್... ಹ್ಯುಂಡೈ ಟ್ಯಾಕ್ಸಿ ಕಾರು ಬಿಡುಗಡೆ

ಹ್ಯುಂಡೈ (Hyundai) ಕಂಪನಿಯು ವಾಣಿಜ್ಯ ವಾಹನ ವಿಭಾಗಕ್ಕೆ ಎರಡು ಸೆಡಾನ್‌ಗಳನ್ನು ಪರಿಚಯಿಸುವ ಮೂಲಕ ಟ್ಯಾಕ್ಸಿ ರಂಗಕ್ಕೆ ಎಂಟ್ರಿ ಕೊಟ್ಟಿದೆ. ಹೊಸ ಕೈಗೆಟುಕುವ ಕಾರುಗಳು ಟ್ಯಾಕ್ಸಿ ನಿರ್ವಾಹಕರಿಗೆ ತಮ್ಮ ಕಾರ್ಯಾಚರಣೆ ಮತ್ತು ಆದಾಯವನ್ನು ಹೆಚ್ಚಿಸಲಿವೆ. ನಂಬಿಕೆ, ವಿಶ್ವಾಸಾರ್ಹತೆ, ಕಡಿಮೆ ಮಾಲೀಕತ್ವದ ವೆಚ್ಚ ಮತ್ತು ಬಲವಾದ ಗಳಿಕೆಯ ಸಾಮರ್ಥ್ಯದೊಂದಿಗೆ ಉತ್ತಮ ಸೌಕರ್ಯವನ್ನು ನೀಡುತ್ತವೆ ಎಂದು ಹ್ಯುಂಡೈ ಹೇಳಿದೆ. ಇತ್ತೀಚೆಗೆ ಬಿಡುಗಡೆಯಾಗಿರುವ ( 30 ಡಿಸೆಂಬರ್ 2025) ಹ್ಯುಂಡೈ ಪ್ರೈಮ್ HB (ಹ್ಯಾಚ್‌ಬ್ಯಾಕ್) ಮತ್ತು ಪ್ರೈಮ್ SD (ಸೆಡಾನ್) ಟ್ಯಾಕ್ಸಿ ಕಾರುಗಳ ಮುಖ್ಯಾಂಶಗಳು ಇಲ್ಲಿವೆ.

ಮಾರುತಿಯ ಗತ್ತು ಹೆಚ್ಚಿಸಿದ ಕಾರಿದು.. 33 Km ಮೈಲೇಜ್, 6 ಲಕ್ಷ..

ಮಾರುತಿ ಸುಜುಕಿ ಡಿಜೈರ್ (Maruti Suzuki Dzire) ಜಗದ್ವಿಖ್ಯಾತ ಸೆಡಾನ್ ಎಂದೇ ಮನೆ ಮಾತಾಗಿದೆ. ಈ ಕಾರಿಗೆ ಗ್ರಾಹಕರು ಸಹ ಮನಸೋತಿದ್ದು, ಭಾರೀ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ಕಳೆದ ತಿಂಗಳು (2025 - ಡಿಸೆಂಬರ್) ಅದು ಮುಂದುವರಿದಿದೆ. ಒಟ್ಟು 19,100 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಣೆ ಮಾಡಲಾಗಿದೆ. ಹಾಗೆಯೇ ನವೆಂಬರ್‌ನಲ್ಲಿ 21,082 ಯುನಿಟ್, ಅಕ್ಟೋಬರ್‌ನಲ್ಲಿ 20,791 ಯುನಿಟ್, ಸೆಪ್ಟೆಂಬರ್‌ನಲ್ಲಿ 20,038 ಯುನಿಟ್ ಹಾಗೂ ಆಗಸ್ಟ್‌ನಲ್ಲಿ 16,509 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು.

Tata: ಇದೇ 13ಕ್ಕೆ ಹೊಸ ಟಾಟಾ ಕಾರು ಬಿಡುಗಡೆ.. 27 Km ಮೈಲೇಜ್!

ಟಾಟಾ ಪಂಚ್ ಫೇಸ್‌ಲಿಫ್ಟ್ (Tata Punch Facelift) ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಈ ನೂತನ ಕಾರಿನ ಬರುವಿಕೆಗಾಗಿ ಗ್ರಾಹಕರು ಕೂಡ ತುದಿಗಾಲಿನಲ್ಲಿ ನಿಂತುಕೊಂಡು ಕಾಯುತ್ತಿದ್ದಾರೆ. ಇದೊಂದು ಮೈಕ್ರೋ ಎಸ್‌ಯುವಿಯಾಗಿದ್ದು, ವಿನ್ಯಾಸದಲ್ಲಿ ಹಲವು ಬದಲಾವಣೆಗಳನ್ನು ಪಡೆದುಕೊಂಡಿರಲಿದೆ. ನಾನಾ ಬಗೆಯ ವೈಶಿಷ್ಟ್ಯಗಳಿಗೂ ಸಾಕ್ಷಿಯಾಗಿರಲಿದೆ. ಕೈಗೆಟುಕುವ ಬೆಲೆಯಲ್ಲಿಯೂ ಮಾರಾಟಕ್ಕೆ ಬರುವ ನಿರೀಕ್ಷೆಯಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.
Advertisement

ಬಜಾಜ್ ಪ್ಲಾಟಿನಾ 100 vs ಹೋಂಡಾ ಶೈನ್ 100: ಇವೆರೆಡು ಬಡವರ ಬಂಡಿಗಳು..

ಬಜಾಜ್ ಪ್ಲಾಟಿನಾ 100 (Bajaj Platina 100) ಹಾಗೂ ಹೋಂಡಾ ಶೈನ್ 100 (Honda Shine 100) ವಿಶ್ವಾಸಾರ್ಹ ಪ್ರಯಾಣಿಕ ಬೈಕ್‌ಗಳಾಗಿ ಹೊರಹೊಮ್ಮಿವೆ. ತುಂಬಾ ಸರಳವಾದ ವಿನ್ಯಾಸ ಹೊಂದಿದ್ದು, ಹಲವು ಆಕರ್ಷಕ ವೈಶಿಷ್ಟ್ಯಗಳಿಗೂ ಸಾಕ್ಷಿಯಾಗಿವೆ. ಜೊತೆಗೆ ಕೈಗೆಟುಕುವ ಬೆಲೆಯಲ್ಲಿಯೂ ಲಭ್ಯವಿದ್ದು, ಬಡ ಹಾಗೂ ಮಧ್ಯಮ ವರ್ಗದ ಗ್ರಾಹಕರಿಗೆ ಹೇಳಿ ಮಾಡಿಸಿದ ರೀತಿಯಲ್ಲಿವೆ. ನಾವಿಲ್ಲಿ ಈ ಮೋಟಾರ್‌ಸೈಕಲ್‌ಗಳ ಬೆಲೆ, ಕಾರ್ಯಕ್ಷಮತೆ ಮತ್ತು ವಿಶೇಷತೆಗಳ ಕುರಿತು ಹೋಲಿಕೆ ಮಾಡಿದ್ದೇವೆ.

ಸದ್ದಿಲ್ಲದೇ ನಂ.1 ಆಯ್ತು ಈ ಜನಪ್ರಿಯ ಮಾರುತಿ ಕಾರು.. ಬೈಕ್‌ನಂತೆ..

ಮಾರುತಿ ಸುಜುಕಿ ಬಲೆನೊ (Maruti Suzuki Baleno) ಜನಪ್ರಿಯ ಹ್ಯಾಚ್‌ಬ್ಯಾಕ್ ಎಂದೇ ಹೆಸರುವಾಸಿಯಾಗಿದೆ. ಈ ಕಾರು ಪ್ರತಿ ತಿಂಗಳು ಸ್ಪರ್ಧಾತ್ಮಕ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಆದರೀಗ 2025ರ ಡಿಸೆಂಬರ್‌ನಲ್ಲಿ 'ಬಲೆನೊ' ಮಾರಾಟದಲ್ಲಿ ಹೊಸದೊಂದು ಇತಿಹಾಸ ಸೃಷ್ಟಿಯಾಗಿದೆ. ಒಟ್ಟು 22,100 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಿಸಲಾಗಿದೆ. ಇದರೊಂದಿಗೆ ಮಾರುತಿ ಫ್ರಾಂಕ್ಸ್, ಟಾಟಾ ನೆಕ್ಸಾನ್‌ ಹಾಗೂ ಮಾರುತಿ ಡಿಜೈರ್‌ನಂತಹ ಘಟಾನುಘಟಿ ಕಾರುಗಳನ್ನು ಹಿಂದಿಕ್ಕಿ, ನಂಬರ್ 1 ಸ್ಥಾನಕ್ಕೇರಿದೆ.

Kia: 10.99 ಲಕ್ಷ ರೂಪಾಯಿ.. 2026ರ ಹೊಸ ಕಿಯಾ SUVಗೆ 5 ಬದಲಿ..

ಇತ್ತೀಚೆಗೆ ಹೊಸ ತಲೆಮಾರಿನ ಕಿಯಾ ಸೆಲ್ಟೋಸ್ (New Gen Kia Seltos) ಎಸ್‌ಯುವಿಯನ್ನು ಮಾರಾಟಕ್ಕೆ ತರಲಾಯಿತು. ಇದು ರೂ.10,99 ಲಕ್ಷದಿಂದ ರೂ.19,99 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಒಳಗೊಂಡಿದೆ. ಮಾರ್ನಿಂಗ್ ಹೇಸ್, ಮ್ಯಾಗ್ಮಾ ರೆಡ್, ಫ್ರಾಸ್ಟ್ ಬ್ಲೂ, ಐವರಿ ಸಿಲ್ವರ್ ಗ್ಲೋಸ್, ಪ್ಯೂಟರ್ ಆಲಿವ್, ಇಂಪೀರಿಯಲ್ ಬ್ಲೂ ಹಾಗೂ ಅರೋರಾ ಬ್ಲ್ಯಾಕ್ ಪರ್ಲ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ. 190 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಮತ್ತು 2,690 ಮಿ.ಮೀ ವೀಲ್‌ಬೇಸ್‌ನ್ನು ಒಳಗೊಂಡಿದೆ.

ಸ್ವದೇಶಿ ಬ್ರಾಂಡ್‌ಗೆ ಭರ್ಜರಿ ಲಾಭ ತಂದುಕೊಟ್ಟ ಜನ

2025-26ನೇ ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಟಿವಿಎಸ್ ಮೋಟಾರ್ ಕಂಪನಿಯು 15.44 ಲಕ್ಷ ಯುನಿಟ್‌ ವಾಹನಗಳ ತ್ರೈಮಾಸಿಕ ಮಾರಾಟವನ್ನು ದಾಖಲಿಸಿದ್ದು, ಇದುವರೆಗಿನ ಅತ್ಯಧಿಕ ತ್ರೈಮಾಸಿಕ ಮಾರಾಟವಾಗಿದೆ. ಕಂಪನಿಯ ದ್ವಿಚಕ್ರ ವಾಹನ ಮಾರಟವು ಶೇ25 ರಷ್ಟು ಬೆಳವಣಿಗೆಯನ್ನು ದಾಖಲಿಸಿದ್ದು, Q3FY25 ರಲ್ಲಿ 11.83 ಲಕ್ಷ ಯುನಿಟ್‌ ವಾಹನಗಳಿಂದ Q3FY26 ರಲ್ಲಿ 14.84 ಲಕ್ಷ ಯುನಿಟ್‌ ವಾಹನಗಳಿಗೆ ಏರಿಕೆಯಾಗಿದೆ. ಕಂಪನಿಯ ತ್ರಿಚಕ್ರ ವಾಹನ ಮಾರಾಟವು ಶೇ106 ರಷ್ಟು ಬೆಳವಣಿಗೆಯನ್ನು ದಾಖಲಿಸಿದ್ದು, Q3FY25 ರಲ್ಲಿ 0.29 ಲಕ್ಷ ಯುನಿಟ್‌ಗಳಿಂದ Q3FY26 ರಲ್ಲಿ 0.60 ಲಕ್ಷ ಯುನಿಟ್‌ಗಳಿಗೆ ಏರಿಕೆಯಾಗಿದೆ.
Advertisement

ವೈದ್ಯರು & ಎಂಜಿನಿಯರ್‌ಗಳ ನೆಚ್ಚಿನ ಕಾರಿದು! 34 Km ಮೈಲೇಜ್..

ಮಾರುತಿ ಸುಜುಕಿ ವ್ಯಾಗನ್ಆರ್ (Maruti Suzuki WagonR) ಪ್ರಖ್ಯಾತ ಹ್ಯಾಚ್‌ಬ್ಯಾಕ್ ಆಗಿ ಹೊರಹೊಮ್ಮಿದೆ. ವೈದ್ಯರು ಹಾಗೂ ಎಂಜಿನಿಯರ್‌ಗಳು ಸೇರಿದಂತೆ ಎಲ್ಲ ವರ್ಗದ ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಇಷ್ಟಪಟ್ಟು ತೆಗೆದುಕೊಳ್ಳುತ್ತಿದ್ದಾರೆ. ಅದು ಕಳೆದ ತಿಂಗಳು (ಡಿಸೆಂಬರ್-2025) ಮುಂದುವರಿದಿದೆ. ಒಟ್ಟು 14,600 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಿಸಲಾಗಿದೆ. ನವೆಂಬರ್‌ನಲ್ಲಿ 14,619 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಇದೇ 'ವ್ಯಾಗನ್ಆರ್' ಕಾರಿಗೆ ದಶಕಗಳಿದಲ್ಲೂ ಬೇಡಿಕೆಯಿದ್ದು, 1999ರಲ್ಲಿ ಬಿಡುಗಡೆಗೊಳಿಸಲಾಯಿತು. ಈವರೆಗೆ ಸರಿ ಸುಮಾರು 34 ಲಕ್ಷ ಯುನಿಟ್‌ಗಳನ್ನು ಮಾರಲಾಗಿದೆ.

Kia: 10.99 ಲಕ್ಷ.. 5-ಸೀಟರ್, ಹೊಸ ಕಿಯಾ ಸೆಲ್ಟೋಸ್..

ಈಚೆಗೆ ಹೊಸ ತಲೆಮಾರಿನ ಕಿಯಾ ಸೆಲ್ಟೋಸ್ (New-Gen Kia Seltos) ಎಸ್‌ಯುವಿಯನ್ನು ಬಿಡುಗಡೆಗೊಳಿಸಲಾಯಿತು. ಇದು ರೂ.10.99 ಲಕ್ಷದಿಂದ ರೂ.19.99 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ನೀವು ಹೊಚ್ಚ ಹೊಸ ಕಾರೊಂದನ್ನು ಖರೀದಿಸಲು ಆಲೋಚಿಸಿದ್ದೀರಾ.. ಹಾಗಾದರೆ ಈ 'ಸೆಲ್ಟೋಸ್' ಎಸ್‌ಯುವಿಯು ಅತ್ಯುತ್ತಮವಾದ ಆಯ್ಕೆಯಾಗಲಿದೆ. ನಾವಿಲ್ಲಿ ಈ ನೂತನ ಕಾರಿನ ಆನ್-ರೋಡ್ ದರ (On-Road Price) ಹಾಗೂ ಇಎಂಐ (EMI) ಆಯ್ಕೆಯ ಕುರಿತಂತೆ ಸಂಕ್ಷಿಪ್ತವಾಗಿ ತಿಳಿಸಿಕೊಟ್ಟಿದ್ದೇವೆ.

Tata: ಕೊಳ್ಳೆ ಹೊಡೆಯಲು ಬಿಡದಂತೆ ಗಟ್ಟಿಯಾಗಿ ನಿಂತಿದೆ ಬಲಿಷ್ಟ SUV

ಭಾರತದಲ್ಲಿ ಟಾಟಾ ಮೋಟಾರ್ಸ್ (Tata Motors) ನೀಡುವ ಬಲಿಷ್ಠ ಕಾರುಗಳಲ್ಲಿ ನೆಕ್ಸಾನ್ ಕೂಡ ಒಂದು. ಇದರ ಬಾಕ್ಸಿ ವಿನ್ಯಾಸ, ಗರಿಷ್ಟ ಗುಣಮಟ್ಟ, ಅತ್ಯುತ್ತಮ ಫೀಚರ್ಸ್ ಹಾಗೂ ಸ್ಪೋರ್ಟಿ ಪರ್ಫಾಮೆನ್ಸ್‌ನಿಂದಾಗಿ ಭಾರತದಲ್ಲಿ ಅತ್ಯಧಿಕ ಜನ ಮುಗಿಬಿದ್ದು ಈ ಕಾರನ್ನು ಖರೀದಿಸುತ್ತಿದ್ದಾರೆ. ಟಾಟಾ ನೆಕ್ಸಾನ್ (Tata Nexon) 2025 ಡಿಸೆಂಬರ್ ತಿಂಗಳಲ್ಲಿಯೂ ಬಲವಾದ ಮಾರಾಟ ಕಾರ್ಯಕ್ಷಮತೆಯನ್ನು ಸಾಧಿಸಿದೆ. ಹಬ್ಬದ ಬೇಡಿಕೆ ಮತ್ತು GST 2.0 ಸುಧಾರಣೆಗಳ ನಡುವೆಯೂ ಟಾಟಾ ಮೋಟಾರ್ಸ್‌ನ SUV ಪೋರ್ಟ್‌ಫೋಲಿಯೊವನ್ನು ಸ್ಥಿರವಾಗಿ ಮುನ್ನಡೆಸಿದೆ.

ಜನರ ವಿಶ್ವಾಸ ಗಳಿಸಿ ಮತ್ತೊಮ್ಮೆ ಭಾರತದ ನಂ.1 ಬ್ರಾಂಡ್ ಆದ...

ಮಾರುತಿ ಸುಜುಕಿ (Maruti Suzuki) 2025 ರಲ್ಲಿ 22.55 ಲಕ್ಷ ಯೂನಿಟ್‌ ಕಾರುಗಳನ್ನು ಉತ್ಪಾದಿಸಿದೆ. ಇದು ಇದುವರೆಗಿನ ಅತ್ಯಧಿಕ ಕಾರು ಉತ್ಪಾದನೆಯಾಗಿದೆ. ಕಂಪನಿಯು ವಾರ್ಷಿಕ ಉತ್ಪಾದನೆಯಲ್ಲಿ 20 ಲಕ್ಷ ಯೂನಿಟ್‌ ಕಾರುಗಳನ್ನು ಮೀರಿದ ಸತತ ಎರಡನೇ ವರ್ಷ ಇದಾಗಿದೆ. ಈ ಉತ್ಪಾದನೆಯಲ್ಲಿ ದೇಶೀಯ ಮಾರಾಟ, ರಫ್ತು ಮತ್ತು ಪ್ರಮುಖ ಕಂಪನಿಗಳಿಗೆ ಪೂರೈಕೆ ಮಾಡಿರುವ ವಾಹನಗಳು ಸೇರಿವೆ. ವರ್ಷದಲ್ಲಿ ಉತ್ಪಾದನಾ ಪರಿಮಾಣದ ಪ್ರಕಾರ ಅಗ್ರ ಐದು ಮಾಡಲ್‌ಗಳು ಫ್ರಾಂಕ್ಸ್, ಬಲೆನೊ, ಸ್ವಿಫ್ಟ್, ಡಿಜೈರ್ ಮತ್ತು ಎರ್ಟಿಗಾ ಆಗಿವೆ ಎಂದು ಮಾರುತಿ ಸುಜುಕಿ ತಿಳಿಸಿದೆ.
Advertisement

Maruti Suzuki: ಇಷ್ಟು ಕಡಿಮೆ ಬೆಲೆನಾ? ಡೀಲರ್‌ಗಳ ಫೆವರೆಟ್ ಕಾರು

ಮಾರುತಿ ಸುಜುಕಿ (Maruti Suzuki) ಪ್ರಸ್ತುತ ದೇಶದ ನಂ.1 ಕಾರು ತಯಾರಕರಾಗಿದ್ದು, ಮಾರಾಟದಲ್ಲಿ ಪ್ರತಿ ತಿಂಗಳಿನಂತೆ ಈ ಬಾರಿಯು ಉತ್ತಮ ಲಾಭ ಕಂಡಿದೆ. ಡಿಸೆಂಬರ್ 2025 ರಲ್ಲಿ, ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಒಟ್ಟು 2,17,854 ಯೂನಿಟ್‌ ಕಾರುಗಳನ್ನು ಮಾರಾಟ ಮಾಡಿದೆ. ಇದರಲ್ಲಿ ದೇಶೀಯ ಮಾರಾಟವು ಸಾರ್ವಕಾಲಿಕ ಗರಿಷ್ಠ 1,82,165 ಯೂನಿಟ್‌ ಕಾರುಗಳನ್ನು ತಲುಪಿದೆ. ಇತರ ಕಂಪನಿಗಳಿಗೆ ಮಾರಾಟವು 9,950 ಯೂನಿಟ್‌ ಕಾರುಗಳಾಗಿದ್ದು, ರಫ್ತುಗಳು 25,739 ಯೂನಿಟ್‌ ಕಾರುಗಳಾಗಿವೆ. ಈ ಮೂಲಕ ಡಿಸೆಂಬರ್‌ನಲ್ಲಿ ಮಾರುತಿ ಮತ್ತೊಮ್ಮೆ ತನ್ನ ಅಗ್ರ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.

ಪಲ್ಸರ್ ಸೆಲೆಬ್ರೇಷನ್ ಆಫರ್: ಮತ್ತೆ ಸಿಗೋದಿಲ್ಲ ಬ್ರದರ್

ಭಾರತದ ಪ್ರಮುಖ ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ತಯಾರಕರಾದ ಬಜಾಜ್ ಆಟೋ ಲಿಮಿಟೆಡ್ (Bajaj Auto Ltd), 25 ವರ್ಷಗಳ ಪಲ್ಸರ್ ಸೆಲೆಬ್ರೇಷನ್ ಆಫರ್ (Pulsar Celebration Offer) ಘೋಷಿಸಿದೆ. ಇಂದಿನಿಂದ ಸೀಮಿತ ಅವಧಿಯ ಈ ಗ್ರಾಹಕ ಕೊಡುಗೆಯು ಆಯ್ದ ಪಲ್ಸರ್ ಮಾಡಲ್‌ಗಳ ಮೇಲೆ ರೂ. 7000 ವರೆಗಿನ ಒಟ್ಟು ಪ್ರಯೋಜನಗಳನ್ನು ನೀಡುತ್ತಿದೆ. ಇದು ಪ್ರಮುಖ ಮಾರುಕಟ್ಟೆಗಳಲ್ಲಿ ಯುವ ಸವಾರರಿಗೆ ಪರ್ಫಾಮೆನ್ಸ್ ಬೈಕ್‌ಗಳನ್ನು ಮತ್ತಷ್ಟು ಸುಲಭವಾಗಿ ಖರೀದಿಸುವ ಅತ್ಯುತ್ತಮ ಆಯ್ಕೆಯಾಗಿದೆ.

ಕಮ್ಮಿ ಬೆಲೆಯ ಬೆಸ್ಟ್ ಸ್ಕೂಟರ್‌ಗಳು: ಖರೀದಿಗೆ ಮುಗಿಬಿದ್ದ ಜನ

ಟಿವಿಎಸ್ ಎಲೆಕ್ಟ್ರಿಕ್ (TVS Electric) ವಾಹನಗಳು ಡಿಸೆಂಬರ್ 2025 ರ ಮಾರಾಟದಲ್ಲಿ ಶೇಕಡಾ 77 ರಷ್ಟು ಬೆಳವಣಿಗೆಯನ್ನು ಕಂಡಿವೆ. ಡಿಸೆಂಬರ್ 2024 ರಲ್ಲಿ ಮಾರಾಟವಾಗಿದ್ದ 20,171 ಯುನಿಟ್ ವಾಹನಗಳಿಗೆ ಹೋಲಿಸಿದರೆ ಕಳೆದ ಡಿಸೆಂಬರ್‌ನಲ್ಲಿ ಟಿವಿಎಸ್ 35,605 ಯುನಿಟ್ ವಾಹನಗಳನ್ನು ಮಾರಾಟ ಮಾಡಿದೆ. ಬ್ರ್ಯಾಂಡ್ ನ ಅಸ್ತಿತ್ವದಲ್ಲಿರುವ ಇವಿ ಪೋರ್ಟ್ಫೋಲಿಯೊದಲ್ಲಿ ಟಿವಿಎಸ್ ಎಕ್ಸ್ ಹೈ-ಎಂಡ್ ಸ್ಕೂಟರ್, ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಹೊಸದಾಗಿ ಬಿಡುಗಡೆಯಾದ ಆರ್ಬಿಟರ್ ಎಲೆಕ್ಟ್ರಿಕ್ ಸ್ಕೂಟರ್ ನಂತಹ ಮಾಡಲ್‌ಗಳು ಇವಿ ವಿಭಾಗದಲ್ಲಿ ಮುನ್ನುಗ್ಗುತ್ತಿವೆ.

Toyota: ವರ್ಷಾರಂಭದಲ್ಲಿ ಕಹಿಸುದ್ದಿ.. 2027ರ ವೇಳೆಗೆ ಜನಪ್ರಿಯ..

ಟೊಯೊಟಾ ಇನ್ನೋವಾ ಕ್ರಿಸ್ಟಾ (Toyota Innova Crysta), ಜನಪ್ರಿಯ ಎಂಪಿವಿಯಾಗಿ ಹೊರಹೊಮ್ಮಿದೆ. 2027ರ ವೇಳೆಗೆ ಹಂತ - ಹಂತವಾಗಿ ಈ ಕಾರಿನ ಉತ್ಪಾದನೆಯನ್ನು ನಿಲ್ಲಿಸುವ ಸಾಧ್ಯತೆಯಿದೆ. ಮುಂಬರುವ ಕಠಿಣ ಎಮಿಷನ್ ಮಾನದಂಡಗಳು ಹಾಗೂ ಡೀಸೆಲ್ ವಾಹನಗಳಿಗೆ ಸಂಬಂಧಿಸಿದ ನಿಯಮಗಳು ಹೆಚ್ಚು ಬಿಗಿಯಾಗುತ್ತಿರುವ ಹಿನ್ನೆಲೆ, ಟೊಯೊಟಾ ತನ್ನ ಕಾರ್ಯ ಯೋಜನೆ ಬದಲಾಯಿಸುತ್ತಿದೆ. ಹೀಗಾಗಿ 'ಇನ್ನೋವಾ ಕ್ರಿಸ್ಟಾ' ತಯಾರಿಕೆ ಸ್ಥಗಿತಗೊಳಿಸುವ ಆಲೋಚನೆಯಲ್ಲಿದೆ ಎಂದು 'ಆಟೋಕಾರ್' ಸೇರಿದಂತೆ ವಿವಿಧ ಮಾಧ್ಯಮಗಳು ವರದಿ ಮಾಡಿವೆ. ಆದರೆ, ಈ ಬಗ್ಗೆ ಕಂಪನಿಯು ಅಧಿಕೃತವಾಗಿ ಯಾವುದೇ ಸ್ಪಷ್ಟನೆ ನೀಡಿಲ್ಲ.
Advertisement

ಭಾರತದಲ್ಲಿ ಹೊಸ ಬೈಕ್ ಬಿಡುಗಡೆ: ಹತ್ತು ಕಾರು ಖರೀದಿಸಬಹುದು!

ಐಷಾರಾಮಿ ಮೋಟಾರ್‌ಸೈಕಲ್ ಬ್ರಾಂಡ್ ಆಗಿರುವ ಡುಕಾಟಿ ಇಂದು ಭಾರತದಲ್ಲಿ ಹೊಸ ಪ್ಯಾನಿಗೇಲ್ V4 R ಅನ್ನು ಬಿಡುಗಡೆ ಮಾಡಿದೆ. ಖರೀದಿಸುವ ಪ್ರತಿಯೊಂದು ಪ್ಯಾನಿಗೇಲ್ V4 R ಬೈಕ್‌ನ್ನು ಸಂಖ್ಯೆಯ ಸರಣಿಯಲ್ಲಿ ಉತ್ಪಾದಿಸಲಾಗುತ್ತದೆ, ಮಾಡಲ್ ಹೆಸರು ಮತ್ತು ಸರಣಿ ಸಂಖ್ಯೆಯನ್ನು ಅದರ ಮೇಲೆ ಪ್ರದರ್ಶಿಸಲಾಗುತ್ತದೆ. ವಿಶ್ವ ಸೂಪರ್‌ಬೈಕ್ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಲು ನಿರ್ಮಿಸಲಾದ ಪ್ಯಾನಿಗೇಲ್ V4 R, ಉತ್ಸಾಹಿಗಳಿಗೆ ಸ್ಪೋರ್ಟಿ ಬೈಕಿಂಗ್‌ನ ಉತ್ತುಂಗವನ್ನು ನೀಡುತ್ತದೆ. ರೇಸಿಂಗ್ ಪ್ರಪಂಚದಿಂದ ನೇರವಾಗಿ ಪಡೆದ ವಿಶಿಷ್ಟ ಫೀಚರ್‌ಗಳನ್ನು ಒಳಗೊಂಡಿದ್ದು, ಈ ಫೀಚರ್‌ಗಳು ಸಾಮಾನ್ಯ ಮೋಟಾರ್‌ಸೈಕಲ್‌ಗಳಲ್ಲಿ ಎಂದಿಗೂ ಕಾಣಿಸಿಕೊಂಡಿಲ್ಲ ಎಂದು ಡುಕಾಟಿ ತಿಳಿಸಿದೆ.

ಭಾರತದಲ್ಲಿ ಹೊಸ ಕಂಪನಿಯ ಅಬ್ಬರ.. ಪ್ರತಿಷ್ಠಿತ ಬ್ರ್ಯಾಂಡ್‌ಗಳೇ..

ವಿಯೆಟ್ನಾಂಗೆ ಸೇರಿರುವ ವಿನ್‌ಫಾಸ್ಟ್‌ (VinFast), ಜಾಗತಿಕ ಎಲೆಕ್ಟ್ರಿಕ್ ವಾಹನೋದ್ಯಮದಲ್ಲಿ ತನ್ನದೆಯಾದ ಛಾಪನ್ನು ಮೂಡಿಸಿದೆ. ಭಾರತದಲ್ಲೂ ವಿಎಫ್6 ಮತ್ತು ವಿಎಫ್7 ಎಲೆಕ್ಟ್ರಿಕ್ ಎಸ್‌ಯುವಿಗಳನ್ನು ಮಾರಾಟ ಮಾಡುತ್ತಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. 2025ರ ಡಿಸೆಂಬರ್‌ನಲ್ಲಿಯೂ ದೇಶೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಾರುಗಳನ್ನು ಮಾರಾಟಗೊಳಿಸಿದೆ. ಈ ಮೂಲಕ ಪ್ರತಿಷ್ಠಿತ ಕಾರು ತಯಾರಕ ಕಂಪನಿಗಳಾದ ಕಿಯಾ ಹಾಗೂ ಹುಂಡೈಗಳನ್ನು ಹಿಂದಿಕ್ಕಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಹ್ಯುಂಡೈ ಕಾರಿಗೆ ಫುಲ್ ಡಿಮ್ಯಾಂಡ್: 50,000 ಕ್ಕೂ ಹೆಚ್ಚು ಬುಕಿಂಗ್

ಹುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (HMIL), ಇತ್ತೀಚೆಗೆ ಬಿಡುಗಡೆಯಾದ 9,99,900 ರೂ. (ಎಕ್ಸ್-ಶೋರೂಂ) ಬೆಲೆಯ ಹೊಸ ಹುಂಡೈ ವೆನ್ಯೂ (Hyundai Venue) ಎಸ್‌ಯುವಿನಲ್ಲಿ ಹೊಸ HX5+ ವೇರಿಯೆಂಟ್ ಅನ್ನು ಇಂದು ಪರಿಚಯಿಸಿದೆ. ಹೊಸದಾಗಿ ಪರಿಚಯಿಸಲಾದ HX5+ ವೇರಿಯೆಂಟ್ ಕಪ್ಪಾ 1.2L ಪೆಟ್ರೋಲ್ ಎಂಜಿನ್ - MT ಗೇರ್‌ ಬಾಕ್ಸ್‌ನೊಂದಿಗೆ ಬರುತ್ತದೆ. ಈ ಮೂಲಕ ಹೊಸ ವೇರಿಯೆಂಟ್ ಹೊಸ ಹುಂಡೈ ವೆನ್ಯೂ ಪೋರ್ಟ್ಫೋಲಿಯೊವನ್ನು ಮತ್ತಷ್ಟು ಬಲಪಡಿಸಲಿದೆ, ಗ್ರಾಹಕರ ಆಯ್ಕೆ ಮತ್ತು ಮೌಲ್ಯವನ್ನು ಹೆಚ್ಚಿಸಲಿದೆ ಎಂದು ಕಂಪನಿ ಹೇಳಿದೆ.

ಫುಲ್ ಟ್ಯಾಂಕ್ ಮಾಡಿಸಿದ್ರೆ 600 Km ಮೈಲೇಜ್.. 1.13 ಲಕ್ಷ ರೂಪಾಯಿ..

ಹೋಂಡಾ ಎಸ್‌ಪಿ 160 (Honda SP 160) ಜಗಮೆಚ್ಚಿದ ಬೈಕ್ ಆಗಿದೆ. ಇದು ನೋಡಲು ತುಂಬಾ ಚೆನ್ನಾಗಿದ್ದು, ಪ್ರೀಮಿಯಂ ಲುಕ್‌ನ್ನು ಹೊಂದಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ನೀವು ಹೊಚ್ಚ ಹೊಸ ಮೋಟಾರ್‌ಸೈಕಲ್‌ವೊಂದನ್ನು ಮನೆತರಲು ಪ್ಲಾನ್ ಮಾಡಿದ್ದೀರಾ.. ಹಾಗಾದರೆ ಇದೇ 'ಎಸ್‌ಪಿ 160' ಬೆಸ್ಟ್ ಚಾಯ್ಸ್ ಆಗಲಿದೆ. ಬನ್ನಿ, ಈ ಬೈಕ್‌ನ ಬೆಲೆ ಎಷ್ಟು.. ಹೇಗೆ ಕಾರ್ಯನಿರ್ವಹಿಸುತ್ತದೆ ಹಾಗೂ ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರವನ್ನು ತಿಳಿಯೋಣ.
Advertisement

Kia Seltos: ಕಿಯಾ ಸೆಲ್ಟೋಸ್ ಬೆಲೆ ಕೊನೆಗೂ ಬಹಿರಂಗ

ಕಿಯಾ ಇಂಡಿಯಾ ಇಂದು ಹೊಸ ಕಿಯಾ ಸೆಲ್ಟೋಸ್‌ನ (Kia Seltos) ಬೆಲೆಗಳನ್ನು ಘೋಷಿಸಿದ್ದು, ಮಿಡ್‌-ಸೈಜ್ ಎಸ್‌ಯುವಿ ವಿಭಾಗದಲ್ಲಿ ಬಲವಾದ ಬೇಡಿಕೆ ಪಡೆದುಕೊಳ್ಳುವುದು ಖಚಿತ ಎನ್ನಲಾಗಿದೆ. ಬೆಲೆ ವಿಷಯಕ್ಕೆ ಬಂದರೆ ಈ ಕಾರು ರೂ. 10.99 ಲಕ್ಷದಿಂದ (ಎಕ್ಸ್-ಶೋರೂಂ) ಪ್ರಾರಂಭವಾಗುತ್ತದೆ. ಹಾಗೆಯೇ ಟಾಪ್ ವೇರಿಯೆಂಟ್ ಬೆಲೆಯು ರೂ. 19,99 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಈ ಬಾರಿಯ ಹೊಸ ಕಿಯಾ ಸೆಲ್ಟೋಸ್ ಆಧುನಿಕ ಭಾರತೀಯ ಕುಟುಂಬಗಳು ಮತ್ತು ಎಸ್‌ಯುವಿ ಖರೀದಿದಾರರಿಗೆ ಅತ್ಯಂತ ಆಕರ್ಷಕ ಆಯ್ಕೆಗಳಲ್ಲಿ ಒಂದಾಗಿದ್ದು, ಅತ್ಯಾಧುನಿಕತೆ, ಸುರಕ್ಷತೆ ಮತ್ತು ತಂತ್ರಜ್ಞಾನದ ಪರಿಪೂರ್ಣ ಮಿಶ್ರಣವನ್ನು ನೀಡುತ್ತದೆ ಎಂದು ಕಿಯಾ ಹೇಳಿದೆ.

ಬೈಕ್‌ನಂತೆ ಮೈಲೇಜ್.. 6 ಜನ ತಿರುಗಾಡಬಹುದು..

ಮಾರುತಿ ಸುಜುಕಿ ಇಂಡಿಯಾ (Maruti Suzuki India) ಜನಮೆಚ್ಚಿದ ವಾಹನ ತಯಾರಕ ಕಂಪನಿಯಾಗಿ ಹೊರಹೊಮ್ಮಿದೆ. ಪ್ರತಿ ತಿಂಗಳು ಕಂಪನಿಯ ಕಾರುಗಳು ಉತ್ತಮ ಸಂಖ್ಯೆಯಲ್ಲಿ ಮಾರಾಟವಾಗುತ್ತವೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಕೊಂಡುಕೊಳ್ಳುತ್ತಿದ್ದಾರೆ. 2025ರ ಡಿಸೆಂಬರ್‌ನಲ್ಲೂ ಅದು ಮುಂದುವರಿದಿದೆ. ಒಟ್ಟು 2,17,854 ಯುನಿಟ್‌ಗಳನ್ನು ಗ್ರಾಹಕರಿಗೆ ವಿತರಿಸಲಾಗಿದೆ. 2024ರ ಇದೇ ಅವಧಿಯಲ್ಲಿಯೂ 1,78,248 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿಸಂಖ್ಯೆಯನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 22.21% ಪ್ರಗತಿಯಾಗಿದೆ.

Tata: ಸ್ವದೇಶಿ ಬ್ರಾಂಡ್‌ನ್ನು ಬಿಟ್ಟುಕೊಡದ ಜನ

ದೇಶದ ಪ್ರತಿಷ್ಠಿತ ವಾಹನ ತಯಾರಕ ಕಂಪನಿಯಾಗಿರುವ ಟಾಟಾ ಮೋಟಾರ್ಸ್ (Tata Motors) ಭರ್ಜರಿ ಲಾಭವನ್ನು ಕಂಡಿದೆ. ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ 2025 ರ ಮೂರನೇ ಹಣಕಾಸು ವರ್ಷದಲ್ಲಿ 1,39,829 ಯುನಿಟ್‌ ಕಾರುಗಳ ಮಾರಾಟವಾಗಿದ್ದರೆ, 2026 ರ ಮೂರನೇ ಹಣಕಾಸು ವರ್ಷದಲ್ಲಿ (Q3 FY26) 1,71,013 ಯುನಿಟ್‌ ಕಾರುಗಳ ಮಾರಾಟವಾಗಿವೆ. ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿಮಿಟೆಡ್‌ನ ಅಂಗಸಂಸ್ಥೆಯಾದ ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್‌ನ ಮಾರಾಟವೂ ಇದರಲ್ಲಿ ಸೇರಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Kia Seltos: ಇಂದೇ ಬಿಡುಗಡೆ.. ನೂತನ ಕಿಯಾ ಸೆಲ್ಟೋಸ್ ಕಾರಿನ..

ಇಂದು 2026ರ ಹೊಸ ಕಿಯಾ ಸೆಲ್ಟೋಸ್ (Kia Seltos) ಎಸ್‌ಯುವಿ ಮಾರಾಟಕ್ಕೆ ಬಂದಿದೆ. ಈ ಕಾರು ರೂ.10,99 ಲಕ್ಷದಿಂದ ರೂ.19,99 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಹೆಚ್‌ಟಿಇ, ಹೆಚ್‌ಟಿಇ (ಒ), ಹೆಚ್‌ಟಿಕೆ, ಹೆಚ್‌ಟಿಎಕ್ಸ್, ಹೆಚ್‌ಟಿಎಕ್ಸ್ (ಎ) ಹಾಗೂ ಜಿಟಿಎಕ್ಸ್ (ಎ) ಸೇರಿದಂತೆ ವಿವಿಧ ರೂಪಾಂತರಗಳೊಂದಿಗೂ ಲಭ್ಯವಿದೆ. ಡಿಸೆಂಬರ್ 11ರಿಂದಲೇ ಬುಕ್ಕಿಂಗ್ ಪ್ರಕ್ರಿಯೆಯೂ ಶುರುವಾಗಿದೆ. ಆಸಕ್ತರು ರೂ.25,000 ಮುಂಗಡ ಹಣ ಪಾವತಿಸಿ, ಸಮೀಪದ ಶೋರೂಂ ಅಥವಾ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ಕಾಯ್ದಿರಬಹುದು. ಇಲ್ಲಿ ನೂತನ 'ಸೆಲ್ಟೋಸ್' ಕಾರಿನ ವೇರಿಯೆಂಟ್‌ವಾರು ದರದ ಕುರಿತಂತೆ ಸಂಪೂರ್ಣವಾಗಿ ವಿವರಿಸಿದ್ದೇವೆ.
Advertisement

ಹೀರೋ ವಾಹನಗಳಿಗೆ ಫುಲ್ ಡಿಮ್ಯಾಂಡ್: ಶೇ.40 ರಷ್ಟು ಬೆಳವಣಿಗೆ

ಮೋಟಾರ್ ಸೈಕಲ್‌ಗಳು ಮತ್ತು ಸ್ಕೂಟರ್‌ಗಳ ತಯಾರಕರಾದ ಹೀರೋ ಮೋಟೋಕಾರ್ಪ್, ಡಿಸೆಂಬರ್ 2025 ರಲ್ಲಿ ಶೇ40 ರಷ್ಟು ಬಲವಾದ ರವಾನೆ ಬೆಳವಣಿಗೆಯನ್ನು ದಾಖಲಿಸಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 3,24,906 ಯುನಿಟ್‌ ವಾಹನಗಳಿಗೆ ಹೋಲಿಸಿದರೆ ಈ ತಿಂಗಳು 2,91,732 ವಾಹನ ನೋಂದಣಿಗಳನ್ನು ದಾಖಲಿಸಿದೆ. ಇದು ICE ಮತ್ತು EV ಸ್ಕೂಟರ್ ಪೋರ್ಟ್‌ಫೋಲಿಯೊ ಎರಡರಲ್ಲೂ ಬಲವಾದ ಬೇಡಿಕೆಯನ್ನು ತೋರಿಸಿದೆ. ಈ ತಿಂಗಳು ಜಾಗತಿಕ ವ್ಯವಹಾರದಲ್ಲಿ ಬಲವಾದ ನಿರಂತರ ಬೇಡಿಕೆಯನ್ನು ಕಂಡಿತು, ಪ್ರಮುಖ ಮಾರುಕಟ್ಟೆಗಳಲ್ಲಿ ಒಟ್ಟಾರೆ ಬೆಳವಣಿಗೆಗೆ ಕೊಡುಗೆ ನೀಡಿರುವುದಾಗಿ ಹೀರೋ ಪ್ರಕಟಣೆಯಲ್ಲಿ ತಿಳಿಸಿದೆ.