Tata: 7-ಸೀಟರ್.. ಅತಿ ಶೀಘ್ರದಲ್ಲೇ ಗಟ್ಟಿಮುಟ್ಟಾದ ಟಾಟಾ ಸಫಾರಿ..

ಟಾಟಾ ಸಫಾರಿ ಪೆಟ್ರೋಲ್ (Tata Safari Petrol) ಎಸ್‌ಯುವಿ, ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಅತಿ ಶೀಘ್ರದಲ್ಲೇ ಈ ಕಾರು ಮಾರಾಟಕ್ಕೂ ಬರಲಿದೆ. ರೂ.16 ಲಕ್ಷದಿಂದ ರೂ.23.13 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿರಬಹುದು ಎಂದು ಅಂದಾಜಿಸಲಾಗಿದೆ. ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಒಳಗೊಂಡಿದೆ. ಉತ್ತಮವಾಗಿರುವ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗ‌ಳು, 'ಸಫಾರಿ' ಬ್ಯಾಡ್ಜಿಂಗ್, ಫಾಗ್ ಲೈಟ್‌ಗಳು ಎಲ್ಇಡಿ ಟೈಲ್‌ ಲ್ಯಾಂಪ್‌ಗಳನ್ನು ಹೊಂದಿದೆ. 205 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2,741 ಮಿ.ಮೀ ವೀಲ್‌ಬೇಸ್‌ನ್ನು ಪಡೆದಿದೆ.

ಭಾರತ್ ಸೆಲ್ ಚಾಲಿತ ರೋಡ್‌ಸ್ಟರ್ X+ ಬೈಕ್‌ಗೆ ಸರ್ಕಾರಿ ಪ್ರಮಾಣೀಕರಣ

ಓಲಾ ಎಲೆಕ್ಟ್ರಿಕ್ (Ola Electric) ಇಂದು ತನ್ನ ಪ್ರಮುಖ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಆಗಿರುವ 'ರೋಡ್‌ಸ್ಟರ್ X+' (9.1 kWh ಬ್ಯಾಟರಿ), ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ 4680 ಭಾರತ್ ಸೆಲ್ ಬ್ಯಾಟರಿ ಪ್ಯಾಕ್‌ ಅನ್ನು ಒಳಗೊಂಡಿದೆ. ಇದನ್ನು 1989 ರ ಕೇಂದ್ರ ಮೋಟಾರ್ ವಾಹನ ನಿಯಮಗಳ (CMVR) ಅಡಿಯಲ್ಲಿ ಸರ್ಕಾರಿ ಪರೀಕ್ಷಾ ಸಂಸ್ಥೆಯಾದ ಮಾನೇಸರ್‌ನ ಇಂಟರ್ ‌ನ್ಯಾಷನಲ್ ಸೆಂಟರ್ ಫಾರ್ ಆಟೋಮೋಟಿವ್ ಟೆಕ್ನಾಲಜಿ (iCAT) ಅನುಮೋದಿಸಿದೆ ಎಂದು ಓಲಾ ಎಲೆಕ್ಟ್ರಿಕ್ ಘೋಷಿಸಿದೆ. ಈ ಪ್ರಮಾಣೀಕರಣದೊಂದಿಗೆ, ಓಲಾ ಎಲೆಕ್ಟ್ರಿಕ್ ಈಗ ರೋಡ್‌ಸ್ಟರ್ X+ (9.1kWh) ವಿತರಣೆಯನ್ನು ಪ್ರಾರಂಭಿಸುತ್ತದೆ.

ಕಮ್ಮಿ ಸ್ಯಾಲರಿ ಇದ್ರು ಈ ಬೈಕ್ ತೆಗೆದುಕೊಳ್ಳಬಹುದು.. ರೂ.1.11 ಲಕ್ಷ..

ಹೋಂಡಾ ಯುನಿಕಾರ್ನ್ (Honda Unicorn) ಜನಪ್ರಿಯ ಬೈಕ್ ಎಂದೇ ಹೆಸರುವಾಸಿಯಾಗಿದ್ದು, ಕಡಿಮೆ ಸಂಬಳವಿದ್ದರೂ ಸುಲಭವಾಗಿ ಕೊಂಡುಕೊಳ್ಳಬಹುದು. ನೀವು ಡೈಲಿ ಯೂಸ್‌ಗೆ ಹೊಚ್ಚ ಹೊಸ ಮೋಟಾರ್‌ಸೈಕಲ್‌ವೊಂದನ್ನು ಮನೆಗೆ ತರಲು ಪ್ಲ್ಯಾನ್ ಮಾಡಿದ್ದೀರಾ.. ಹಾಗಾದರೆ ಇದೇ 'ಯೂನಿಕಾರ್ನ್' ಬೆಸ್ಟ್ ಚಾಯ್ಸ್ ಆಗಲಿದೆ. ಬನ್ನಿ, ಈ ಬೈಕ್‌ನ ಬೆಲೆ ಎಷ್ಟು.. ಹೇಗೆ ಕಾರ್ಯನಿರ್ವಹಿಸುತ್ತದೆ.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

ಹೊಸ ಕವಾಸಕಿ MY26 Z650RS ಬೈಕ್ ಬಿಡುಗಡೆ: ರಗಡ್ ಲುಕ್

ಇಂಡಿಯಾ ಕವಾಸಕಿ ಮೋಟಾರ್ಸ್ ಪ್ರೈ. ಲಿಮಿಟೆಡ್ (ಐಕೆಎಂ) ಹೊಸ MY26 Z650RS ಬೈಕ್ ಬಿಡುಗಡೆ ಮಾಡಿದೆ. ಹೊಸ MY26 Z650RS ಬೈಕ್ ಹೆಚ್ಚು ತೀಕ್ಷ್ಣವಾದ, ಅಗಲವಾದ ಮತ್ತು ಮಸ್ಕುಲರ್ ಕೂಡಿದ ಸುಗೋಮಿ-ಪ್ರೇರಿತ ಡಿಸೈನ್‌ನೊಂದಿಗೆ ಬರುತ್ತದೆ. Z ಸ್ಟೈಲಿಂಗ್, ವರ್ಧಿತ ದಕ್ಷತಾಶಾಸ್ತ್ರ, ಸುಧಾರಿತ ತಂತ್ರಜ್ಞಾನ ಮತ್ತು ಸಾಬೀತಾಗಿರುವ 649cc ಪ್ಯಾರಲೆಲ್-ಟ್ವಿನ್ ಎಂಜಿನ್‌ನೊಂದಿಗೆ ಈ ಬೈಕ್ ಎದ್ದು ಕಾಣುತ್ತದೆ. ಪ್ರತಿಯೊಂದು ಬೀದಿಯನ್ನು ತಮ್ಮ ಆಟದ ಮೈದಾನವನ್ನಾಗಿ ಮಾಡಲು ಬಯಸುವ ಸವಾರರಿಗಾಗಿ MY26 Z650RS ವಿನ್ಯಾಸಗೊಳಿಸಲಾಗಿದೆ ಎಂದು ಕವಾಸಕಿ ಹೇಳಿದೆ.
Advertisement

ಹೊಸ ಕವಾಸಕಿ MY26 ವಲ್ಕನ್ S ಕ್ರೂಸರ್ ಬಿಡುಗಡೆ: ಬೆಲೆ ಕೇಳಿದ್ರೆ ಶಾಕ್

ಇಂಡಿಯಾ ಕವಾಸಕಿ ಮೋಟಾರ್ಸ್ ಪ್ರೈ. ಲಿಮಿಟೆಡ್ (ಐಕೆಎಂ) ಹೊಸ MY26 ವಲ್ಕನ್ ಎಸ್ (MY26 Vulcan S) ಮೋಟಾರ್‌ಸೈಕಲ್ ಅನ್ನು ಬಿಡುಗಡೆ ಮಾಡಿದೆ. ಹೊಸ MY26 ವಲ್ಕನ್ ಎಸ್ ಕ್ರೂಸರ್ ಆಗಿದ್ದು, ಇದು ತನ್ನ ಸ್ಪೋರ್ಟಿ ಲುಕ್, ಹಗುರ ಮತ್ತು ರೈಡರ್-ಕೇಂದ್ರಿತ ಡಿಸೈನ್‌ನೊಂದಿಗೆ ಆಕ್ರಮಣಕಾರಿ ಡಿಸೈನ್ ಹೊಂದಿದೆ. ಇದು 649 ಸಿಸಿ ಪ್ಯಾರಲಲ್-ಟ್ವಿನ್ ಎಂಜಿನ್‌ನಿಂದ ನಡೆಸಲ್ಪಡುವ ವಲ್ಕನ್ ಎಸ್ ಸ್ಪೋರ್ಟಿ ಪರ್ಫಾಮೆನ್ಸ್ ಮತ್ತು ದೈನಂದಿನ ಬಳಕೆಯ ವಿಶಿಷ್ಟ ಮಿಶ್ರಣವನ್ನು ನೀಡುತ್ತದೆ ಎಂದು ಕವಾಸಕಿ ಕಂಪನಿ ತಿಳಿಸಿದೆ.

ವಿಸ್ತೃತ ಖಚಿತ ಬೈ ಬ್ಯಾಕ್ ಪ್ರೋಗ್ರಾಂ ಘೋಷಿಸಿದ ಎಂಜಿ ಮೋಟಾರ್

ಜೆಎಸ್‌ಡಬ್ಲ್ಯೂ ಎಂಜಿ ಮೋಟಾರ್ ಇಂಡಿಯಾ ಇಂದು ತನ್ನ ಗ್ರಾಹಕರಿಗೆ ಎಲೆಕ್ಟ್ರಿಕ್ ವಾಹನ ಮಾಲೀಕತ್ವವನ್ನು ಸುಲಭ ಮತ್ತು ಸುಗಮಗೊಳಿಸುವ ಗುರಿಯನ್ನು ಹೊಂದಿರುವ ಉಪಕ್ರಮವನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಜೆಎಸ್‌ಡಬ್ಲ್ಯೂ ಎಂಜಿ ಮೋಟಾರ್, ಅಸ್ತಿತ್ವದಲ್ಲಿರುವ 3 ವರ್ಷಗಳಿಂದ 5 ವರ್ಷಗಳವರೆಗೆ ಇವಿಗಳಿಗೆ ಖಚಿತವಾದ ಬೈ ಬ್ಯಾಕ್ ಅನ್ನು ನೀಡುವುದಾಗಿ ಹೇಳಿದೆ. ಈ ಕಾರ್ಯಕ್ರಮವು ನಿರ್ದಿಷ್ಟ ಅವಧಿಗಳ ಕೊನೆಯಲ್ಲಿ ಸ್ಥಿರ ಮರುಮಾರಾಟ ಮೌಲ್ಯವನ್ನು ಖಾತರಿಪಡಿಸುವ ಮೂಲಕ ಇವಿ ಬಳಕೆದಾರರ ವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದು ಕಂಪನಿ ತಿಳಿಸಿದೆ.

ವರ್ಷ ಮುಗಿಯಲು ಕೇವಲ ಎರಡೇ ದಿನ ಬಾಕಿ: 2025ರಲ್ಲಿ ಯಾವ ಬ್ರಾಂಡ್‌ ನಂ.1

ಭಾರತೀಯ ಕಾರು ಉದ್ಯಮವು ವೇಗವಾಗಿ ಬೆಳೆಯುತ್ತಿದ್ದು, ಸ್ವದೇಶಿ ಬ್ರಾಂಡ್‌ಗಳು ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಭಾರತದಲ್ಲೂ ಕಾರು ಖರೀದಿಸುವವರ ಸಂಖ್ಯೆ ಭಾರೀ ಸಂಖ್ಯೆಯಲ್ಲಿ ಹೆಚ್ಚಾಗಿದೆ. ವಾಹನ್ ರಿಜಿಸ್ಟ್ರೇಷನ್ ಡೇಟಾ ಪ್ರಕಾರ, ಡಿಸೆಂಬರ್ ನಾಲ್ಕನೇ ವಾರದವರೆಗೆ ಅಂಕಿಅಂಶಗಳ ಪ್ರಕಾರ 2025 ರಲ್ಲಿ ಸ್ವದೇಶಿ ಬ್ರಾಂಡ್ ಆಗಿರುವ ಮಹೀಂದ್ರಾ 2ನೇ ಸ್ಥಾನ ದಕ್ಕಿಸಿಕೊಂಡು ವರ್ಷವನ್ನು ಮುಗಿಸುತ್ತಿದೆ. ಇದೇ ಮೊದಲ ಬಾರಿಗೆ ಟಾಟಾ ಹಾಗೂ ಹ್ಯುಂಡೈ ಬ್ರಾಂಡ್‌ಗಳನ್ನು ಹಿಂದಿಕ್ಕಿ ಮಹೀಂದ್ರಾ ಮೇಲಕ್ಕೇರಿದೆ ಎಂದು ವರದಿಯಾಗಿದೆ. ಪ್ರತಿ ವರ್ಷದಂತೆ ಮೊದಲ ಸ್ಥಾನದಲ್ಲಿ ಮಾರುತಿ ಸುಜುಕಿ ಇದೆ.

Maruti Suzuki: 26.11 ಕಿ.ಮೀ ಮೈಲೇಜ್ ನೀಡುವ ಬೆಸ್ಟ್ 7-ಸೀಟರ್

ಮಾರುತಿ ಸುಜುಕಿ ಎರ್ಟಿಗಾ (Maruti Suzuki Ertiga) ಭಾರತದಲ್ಲಿ ನಂ.1 7-ಸೀಟರ್ ಎಂಪಿವಿ ಆಗಿದ್ದು, ಬೆಲೆಗೆ ತಕ್ಕ ಮೌಲ್ಯವನ್ನು ನೀಡುವ ಕಾರಾಗಿದೆ. ಈ ಕಾರು ಹೆಚ್ಚಾಗಿ ದೊಡ್ಡ ಕುಟುಂಬಗಳ ಫೇವರೆಟ್ ಆಯ್ಕೆಯಾಗಿದ್ದು, ವಿಶ್ವಾಸಾರ್ಹತೆಗೆ ಹೆಸರುವಾಸಿಯಾಗಿದೆ. ಈ ಎಂಪಿವಿ ಅತಿ ಕಡಿಮೆ ಬೆಲೆಯಲ್ಲಿಯೂ ಲಭ್ಯವಿದ್ದು, ಇದರ ಬೆಲೆಗೆ ತಕ್ಕಂತೆ ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಹೊಂದಿದೆ. 7 ಆಸನಗಳ ಈ ಕಾರಿನಲ್ಲಿ ಪ್ರಯಾಣಿಕರು ಆರಾಮದಾಯಕವಾಗಿ ಪ್ರಯಾಣ ಮಾಡಬಹುದು. ಹೊಸ ಮಾರುತಿ ಎರ್ಟಿಗಾ ಬೆಲೆ, ಫೀಚರ್ಸ್, ಎಂಜಿನ್, ಮೈಲೇಜ್ ಕುರಿತ ಮಾಹಿತಿ ಇಲ್ಲಿದೆ. ಮಾರುತಿ ಎರ್ಟಿಗಾ MPV ಕಾರು ಸಾಕಷ್ಟು ಸ್ಥಳಾವಕಾಶ, ಹಗುರವಾದ ಸ್ಟೀರಿಂಗ್, ಮೂರು-ಸಾಲುಗಳ ಸಂರಚನೆ ಮತ್ತು 550-ಲೀಟರ್ ಬೂಟ್ ಸ್ಥಳಾವಕಾಶದಿಂದಾಗಿ ಜನಪ್ರಿಯತೆ ಗಳಿಸಿದೆ. ಇವೆಲ್ಲವೂ ಲಾಭದಾಯಕ ಆರಂಭಿಕ ಬೆಲೆ ರೂ. 8.80-ಲಕ್ಷ (ಎಕ್ಸ್-ಶೋರೂಂ) ಬೆಲೆಯಲ್ಲಿ ಸಿಗುತ್ತವೆ. ಹೌದು, ಬೇಸ್‌ ವೇರಿಯೆಂಟ್ ಈಗ ಕೇವಲ 8.80 ಲಕ್ಷಕ್ಕೆ (ಎಕ್ಸ್‌ ಶೋರೂಂ) ಸಿಗುತ್ತದೆ. ಟಾಪ್ ವೇರಿಯೆಂಟ್ 12.94 (ಎಕ್ಸ್‌ ಶೋರೂಂ) ಲಕ್ಷ ಬೆಲೆಯಿದೆ.
Advertisement

ಬಡವರ ಬಂಡಿಯಿದು.. ಬಿಸಿ ಜಿಲೇಜಿಯಂತೆ ಸೇಲ್ಸ್! ಈ ಜನಪ್ರಿಯ ಬೈಕ್‌ಗೆ..

ಹೋಂಡಾ ಶೈನ್ 100 (Honda Shine) ನಂಬಿಕಾರ್ಹ ಮೋಟಾರ್‌ಸೈಕಲ್‌ ಆಗಿದ್ದು, ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಖರೀದಿಸುತ್ತಿದ್ದಾರೆ. ಅದು ಈ ನವೆಂಬರ್ ತಿಂಗಳಲ್ಲೂ ಮುಂದುವರಿದಿದೆ. ಒಟ್ಟು 1,86,490 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಿಸಲಾಗಿದೆ. 2024ರ ಇದೇ ಅವಧಿಯಲ್ಲಿ 1,45,530 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿಸಂಖ್ಯೆಯನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 28.15% ಪ್ರಗತಿಯಾಗಿದೆ.

ಕರ್ನಾಟಕಕ್ಕೆ 4 ಪ್ರಶಸ್ತಿಗಳು: ಸಚಿವ ನಿತಿನ್ ಗಡ್ಕರಿ ಮೆಚ್ಚುಗೆ

ನವದೆಹಲಿಯಲ್ಲಿ ಮೋಟಾರಿಂಗ್ ವರ್ಲ್ಡ್ ಗ್ರೀನ್ ಮೊಬಿಲಿಟಿ ಅವಾರ್ಡ್ಸ್ - 2025 ನ್ನು ಮೋಟಾರಿಂಗ್ ವರ್ಲ್ಡ್ ಮ್ಯಾಗಜಿನ್ ಆಫ್ ಡೆಲ್ಲಿ ಪ್ರೆಸ್ ಗ್ರೂಪ್ ರವರು ಆಯೋಜಿಸಿದ್ದು, ಈ ಪ್ರಶಸ್ತಿ ಸಮಾರಂಭದ ಮುಖ್ಯ ಅತಿಥಿಯಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಭಾಗವಹಿಸಿದ್ದರು. ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಹವಾಮಾನ ನೀತಿ ತಜ್ಞರಿಂದ ಪ್ರಶಸ್ತಿಗಳನ್ನು ಆಯ್ಕೆ ಮಾಡಿದ್ದು, ಪ್ರಶಸ್ತಿ ಸಮಾರಂಭದಲ್ಲಿ ಕರ್ನಾಟಕ ರಾಜ್ಯವು ಒಟ್ಟು ನಾಲ್ಕು (4) ಪ್ರಶಸ್ತಿಗಳನ್ನು ಪಡೆದುಕೊಂಡಿದೆ ಎಂದು ಕೆಎಸ್‌ಆರ್‌ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಶಸ್ತಿಗಳ ವಿವರವು ಕೆಳಕಂಡಂತಿದೆ.

ಹೊಸ ಮಾರುತಿ ಸುಜುಕಿ ಬ್ರೆಝಾ ಫೇಸ್‌ಲಿಫ್ಟ್ ಬಿಡುಗಡೆಗೆ ಸಜ್ಜು

ಮಾರುತಿ ಸುಜುಕಿ ಬ್ರೆಝಾ ಫೇಸ್‌ಲಿಫ್ಟ್ (Maruti Suzuki Brezza Facelift) ಕಾರನ್ನು ಹೊಸ ಅಪ್‌ಡೇಟ್‌ಗಳೊಂದಿಗೆ 2026 ರ ಆರಂಭದಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. 2026 ರ ಮಾರುತಿ ಸುಜುಕಿ ಬ್ರೆಝಾ ಫೇಸ್‌ಲಿಫ್ಟ್ ಕಾರು ಇತ್ತೀಚೆಗೆ ಬಿಡುಗಡೆಯಾದ ಮಾರುತಿ ಸುಜುಕಿ ವಿಕ್ಟೋರಿಸ್‌ನಂತೆಯೇ ಅಂಡರ್‌ಬಾಡಿ ಸಿಎನ್‌ಜಿ ಟ್ಯಾಂಕ್ ಜೊತೆಗೆ ಹಲವಾರು ವಿನ್ಯಾಸ ಬದಲಾವಣೆಗಳನ್ನು ಒಳಗೊಂಡಿರುವ ನಿರೀಕ್ಷೆಯಿದೆ. ಮುಂಬರುವ ಮಾರುತಿ ಸುಜುಕಿ ಬ್ರೆಝಾ ಫೇಸ್‌ಲಿಫ್ಟ್‌ನ ನಿರೀಕ್ಷಿತ ವಿನ್ಯಾಸ, ವೈಶಿಷ್ಟ್ಯಗಳು ಮತ್ತು ಎಂಜಿನ್ ವಿಶೇಷಣಗಳನ್ನು ನೋಡೋಣ ಬನ್ನಿ.

ಜನ ಮನಸೋತಿರುವ 5 ಕಾಂಪ್ಯಾಕ್ಟ್ ಎಸ್‌ಯುವಿಗಳಿವು.. ಕಾಸು ಕೂಡಿಡಿ..

ಮೈಕ್ರೋ ಎಸ್‌ಯುವಿಗಳು ಸಣ್ಣ ಗಾತ್ರದಲ್ಲಿರುತ್ತವೆ. ಇವುಗಳಲ್ಲಿ ದೂರದ ಊರುಗಳಿಗೆ ಪ್ರಯಾಣಿಸುವುದು ಕೊಂಚ ಮಟ್ಟಿಗೆ ಕಷ್ಟ ಸಾಧ್ಯ.. ಪುಲ್-ಸೈಜ್ ಎಸ್‌ಯುವಿಗಳು ಬಹಳಷ್ಟು ದೊಡ್ಡದಾಗಿರುತ್ತವೆ. ಜೊತೆಗೆ ದುಬಾರಿ ಬೆಲೆಯನ್ನು ಹೊಂದಿರುತ್ತವೆ. ಇದರಿಂದಾಗಿ ಹಲವು ಖರೀದಿದಾರರು ಕಾಂಪ್ಯಾಕ್ಟ್ ಎಸ್‌ಯುವಿಗಳ ಮೊರೆ ಹೋಗುತ್ತಾರೆ. ಈ ಕಾರುಗಳು ಸ್ವಲ್ಪ ವಿಶಾಲವಾಗಿರಲಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ದೂರದ ಊರುಗಳಿಗೆ ಓಡಾಟ ನಡೆಸಬಹುದಾಗಿದೆ. ಅದಕ್ಕೆ ತಕ್ಕಂತೆ ಸ್ಪರ್ಧಾತ್ಮಕ ಬೆಲೆಯಲ್ಲಿಯೂ ಲಭ್ಯವಾಗಲಿವೆ.
Advertisement

4680 ಭಾರತ್ ಸೆಲ್ ಚಾಲಿತ ವಾಹನಗಳ ಡೆಲಿವರಿ ವೇಗ ಹೆಚ್ಚಿಸಿದ ಓಲಾ

ಓಲಾ ಎಲೆಕ್ಟ್ರಿಕ್ ಇಂದು ತಮಿಳುನಾಡು, ಕೇರಳ, ತೆಲಂಗಾಣ ಮತ್ತು ಕರ್ನಾಟಕದಾದ್ಯಂತ ತನ್ನ 4680 ಭಾರತ್ ಸೆಲ್ ಚಾಲಿತ S1 Pro+ (5.2 kWh) ಎಲೆಕ್ಟ್ರಿಕ್ ವಾಹನಗಳ ಡೆಲಿವರಿಯನ್ನು ಘೋಷಿಸಿದೆ. ಕಂಪನಿಯು ಇಂದು ಕೊಯಮತ್ತೂರು, ಕೊಚ್ಚಿ ಮತ್ತು ಹೈದರಾಬಾದ್‌ಗಳಲ್ಲಿ ಡೆಲಿವರಿ ಪ್ರಾರಂಭಿಸಿದೆ, ಜೊತೆಗೆ ಬೆಂಗಳೂರಿನಲ್ಲಿ ನಿರಂತರ ರ್ಯಾಂಪ್-ಅಪ್ ಅನ್ನು ಪ್ರಾರಂಭಿಸಿದೆ. S1 Pro+ (5.2 kWh) ಕಂಪನಿಯು ಸ್ಥಳೀಯವಾಗಿ ತಯಾರಿಸಿದ 4680 ಭಾರತ್ ಸೆಲ್ ಬ್ಯಾಟರಿ ಪ್ಯಾಕ್‌ನಿಂದ ನಡೆಸಲ್ಪಡುವ ಮೊದಲ ವಾಹನವಾಗಿದ್ದು, ಹೆಚ್ಚಿನ ರೇಂಜ್, ಹೆಚ್ಚಿನ ಪರ್ಫಾಮೆನ್ಸ್ ಮತ್ತು ವರ್ಧಿತ ಸುರಕ್ಷತೆಯನ್ನು ನೀಡುತ್ತದೆ.

Bajaj: 1.08 ಲಕ್ಷ ರೂಪಾಯಿ.. ಹೊಸ ಬಜಾಜ್ ಪಲ್ಸರ್‌ಗೆ 3 ಪರ್ಯಾಯ..

ಇತ್ತೀಚೆಗೆ 2026ರ ಬಜಾಜ್ ಪಲ್ಸರ್ 150 (Bajaj Pulsar 150) ಮೋಟಾರ್‌ಸೈಕಲ್‌ನ್ನು ಮಾರಾಟಕ್ಕೆ ತರಲಾಯಿತು. ಇದು ರೂ.1.08 ಲಕ್ಷದಿಂದ ರೂ.1.15 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಒಳಗೊಂಡಿದ್ದು, ನೋಡುಗರ ಕಣ್ಣು ಕುಕ್ಕುವಂತಿದೆ. ಸ್ಪಾರ್ಕ್ಲಿ ಬ್ಲ್ಯಾಕ್ ರೆಡ್, ಸ್ಪಾರ್ಕ್ಲಿ ಬ್ಲ್ಯಾಕ್ ಬ್ಲೂ ಮತ್ತು ಸ್ಪಾರ್ಕ್ಲಿ ಬ್ಲ್ಯಾಕ್ ಸಿಲ್ವರ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ. 165 ಮೀ.ಮೀ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 1,345 ಮಿಮೀ ವೀಲ್‌ಬೇಸ್‌ನ್ನು ಪಡೆದಿದೆ.

ಕಮ್ಮಿ ಬೆಲೆ... ಇತ್ತೀಚೆಗೆ ಬಿಡುಗಡೆಯಾದ ಹೊಸ ಬಜಾಜ್ ಪಲ್ಸರ್ 150

ಪ್ರಮುಖ ದ್ವಿಚಕ್ರ ವಾಹನ ತಯಾರಕರಾದ ಬಜಾಜ್ (Bajaj), ನವೀಕರಿಸಿದ ಬಜಾಜ್ ಪಲ್ಸರ್ 2025 ಅನ್ನು ಇತ್ತೀಚೆಗೆ ಭಾರತದಲ್ಲಿ ಬಿಡುಗಡೆ ಮಾಡಿದೆ. ಇದರ ಬೆಲೆ ರೂ. 1.09 ಲಕ್ಷ (ಎಕ್ಸ್-ಶೋರೂಂ) ದಿಂದ ಪ್ರಾರಂಭವಾಗುತ್ತದೆ. ಈ ಬೈಕ್ ತನ್ನ ಎದುರಾಳಿಗಳಿಗಿಂತ ತುಸು ಹಿಂದುಳಿದಿದೆ ಎಂಬ ಕಾರಣಕ್ಕೆ ಈ ಬಾರಿ ರಗಡ್ ಗ್ರಾಫಿಕ್‌ ಲುಕ್‌ನೊಂದಿಗೆ ಪರಿಚಯಿಸಲಾಗಿದೆ. ಈ ಬೈಕ್ ವಿನ್ಯಾಸದ ವಿಷಯದಲ್ಲಿ ಕೆಲವು ಪ್ರಮುಖ ಬದಲಾವಣೆಗಳಿಗೆ ಒಳಗಾಗಿದೆ. ಪ್ರಮುಖ ಅಪ್‌ಡೇಟ್‌ಗಳಿಲ್ಲದೆ ಕೇವಲ ಆಧುನೀಕರಿಸುವ ಮೂಲಕ ಅದರ ಮಸ್ಕುಲರ್ ಲುಕ್‌ ಜೊತೆಗೆ ಹೊಸ ನವೀಕರಣಗಳನ್ನು ಪರಿಚಯಿಸಲಾಗಿದೆ. ಹಾಗಾದ್ರೆ ಏನೆಲ್ಲಾ ಬದಲಾಗಿದೆ ಎಂಬುದರ ವಿವರವಾದ ವಿವರ ಇಲ್ಲಿದೆ.

30 ಕಿ.ಮೀಗೂ ಹೆಚ್ಚು ಮೈಲೇಜ್ ನೀಡುವ 5 ಜನಪ್ರಿಯ ಕಾರುಗಳಿವು..

ಹೊಸ ಕಾರು ಖರೀದಿಸುವವರೂ ಮೈಲೇಜ್‌ಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಇದರಿಂದಾಗಿ ದೊಡ್ಡ ಮಟ್ಟದಲ್ಲಿ ಹಣ ಉಳಿಸಲು ಸಾಧ್ಯವಾಗಲಿದೆ. ನೀವು ಗರಿಷ್ಠ ಮೈಲೇಜ್ ನೀಡಬಲ್ಲ ಹೊಚ್ಚ ಹೊಸ ಕಾರೊಂದನ್ನು ಕೊಂಡುಕೊಳ್ಳಲು ಆಲೋಚಿಸಿದ್ದೀರಾ.. ಹಾಗಾದರೆ ಮಾರುತಿ ಸುಜುಕಿ ಆಲ್ಟೊ ಕೆ10, ಮಾರುತಿ ಸುಜುಕಿ ಸೆಲೆರಿಯೊ, ಮಾರುತಿ ಸುಜುಕಿ ಸ್ವಿಫ್ಟ್, ಟೊಯೊಟಾ ಗ್ಲಾನ್ಜಾ ಹಾಗೂ ಮಾರುತಿ ಸುಜುಕಿ ಡಿಜೈರ್‌ಗಳು ಅತ್ಯುತ್ತಮವಾದ ಆಯ್ಕೆಯಾಗಲಿವೆ. ಬನ್ನಿ, ಇವುಗಳ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಕ್ಷಿಪ್ತವಾದ ವಿವರಗಳನ್ನು ತಿಳಿಯೋಣ.
Advertisement

ಕೇವಲ 5.49 ಲಕ್ಷ ಬೆಲೆಯ ಪ್ರೀಮಿಯಂ ಕಾರು... 27.1 ಕಿ.ಮೀ ಮೈಲೇಜ್

ಹುಂಡೈ ಎಕ್ಸ್‌ಟರ್ (Hyundai Exter) ಒಂದು ಸಣ್ಣ ಕ್ರಾಸ್‌ಒವರ್ ಆಗಿದ್ದು, ಹ್ಯಾಚ್‌ಬ್ಯಾಕ್‌ನ ಬೆಲೆಗೆ ಎಸ್‌ಯುವಿಯ ಡಿಸೈನ್ ಒಳಗೊಂಡಿದೆ. ಇದರ ಎತ್ತರದ ಬಾಕ್ಸಿ ವಿನ್ಯಾಸವು ವಿಶಾಲವಾದ ಕ್ಯಾಬಿನ್ ಮತ್ತು ಬೂಟ್ ಸ್ಪೇಸ್ ಅನ್ನು ನೀಡುತ್ತದೆದೆ. 8 - ಇಂಚಿನ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇ ಮತ್ತು ಸನ್‌ರೂಫ್ ಅನ್ನು ಒಳಗೊಂಡಿರುವುದು ಇದರ ಹೈಲೆಟ್ ಆಗಿದೆ. ಇದರ ಬೆಲೆಯು ರೂ. 5.49 ಲಕ್ಷದಿಂದ ಪ್ರಾರಂಭವಾಗಿ ಟಾಪ್ ಮಾಡೆಲ್ ರೂ. 9.61 ಲಕ್ಷದವರೆಗೆ (ಎಕ್ಸ್‌ ಶೋರೂಂ ಬೆಲೆಗಳು) ಇದೆ.

ಫ್ರಾಂಕ್ಸ್‌ಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ರೀ-ಕಾಲ್ ಘೋಷಣೆ

ಭಾರತದಲ್ಲಿ ನಿರ್ಮಾಣವಾಗಿರುವ ಸುಜುಕಿ ಫ್ರಾಂಕ್ಸ್ ಕಾರನ್ನು ವಿಶ್ವದ ಹಲವು ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಇದರಲ್ಲಿ ನ್ಯೂಜಿಲೆಂಡ್ ಕೂಡ ಒಂದು, ಇತ್ತೀಚೆಗೆ ಆಸ್ಟ್ರೇಲಿಯನ್ ನ್ಯೂ ಕಾರ್ ಅಸೆಸ್ಮೆಂಟ್ ಪ್ರೋಗ್ರಾಂ (ANCAP) ನಡೆಸಿದ ಕ್ರ್ಯಾಶ್ ಪರೀಕ್ಷೆಯಲ್ಲಿ ಹಿಂಭಾಗದ ಸೀಟ್ ಬೆಲ್ಟ್ ಅಳವಡಿಕೆಯು ವಿಫಲವಾದ ನಂತರ, ಭಾರತದಲ್ಲಿ ತಯಾರಿಸಿದ ಸುಜುಕಿ ಫ್ರಾಂಕ್ಸ್ ಅನ್ನು ಗ್ರಾಹಕರಿಂದ ಹಿಂಪಡೆಯಲಾಗಿದೆ. ಜೊತೆಗೆ ಸುಜುಕಿ ಈ ಫ್ರಾಂಕ್ಸ್ ಮಾರಾಟವನ್ನು ಸದ್ಯಕ್ಕೆ ನಿಲ್ಲಿಸಲಾಗಿದೆ ಎಂದು ವರದಿಯಾಗಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

ಆಫೀಸ್‌ಗೆ ಹೋಗುವವರಿಗೆ ಬೆಸ್ಟ್.. ಬರೀ ರೂ.100 ಪೆಟ್ರೋಲ್‌ಗೆ 65 Km..

ಹೋಂಡಾ ಎಸ್‌ಪಿ 125 (Honda SP 125) ಜನಪ್ರಿಯ ಬೈಕ್ ಎಂದೇ ಹೆಸರುವಾಸಿಯಾಗಿದೆ. ಇದು ದಿನಬಳಕೆಗೆ ಹೆಚ್ಚು ಸೂಕ್ತವಾಗಿದೆ. ಆಫೀಸ್‌ಗೆ ಹೋಗುವವರಿಗೆ ನೆಚ್ಚಿನ ವಾಹನವಾಗಿದೆ. ನೀವು ಹೊಚ್ಚ ಹೊಸ ಮೋಟಾರ್‌ಸೈಕಲ್‌ವೊಂದನ್ನು ಖರೀದಿಸಲು ಪ್ಲ್ಯಾನ್ ಮಾಡಿದ್ದೀರಾ.. ಹಾಗಾದರೆ 'ಎಸ್‌ಪಿ 125' ಬೆಸ್ಟ್ ಚಾಯ್ಸ್ ಆಗಲಿದೆ. ಬನ್ನಿ.. ಈ ಬೈಕ್‌ನ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

EV ಮೂಲಸೌಕರ್ಯದಲ್ಲಿ ಪ್ರಮುಖ ಮೈಲಿಗಲ್ಲು

2025 ರ ಅಂತ್ಯದ ವೇಳೆಗೆ ದೇಶಾದ್ಯಂತ ಪೆಟ್ರೋಲ್ ಪಂಪ್‌ಗಳಲ್ಲಿ 27,432 EV ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸುವ ಮೂಲಕ ಭಾರತವು ಎಲೆಕ್ಟ್ರಿಕ್ ವಾಹನ ಮೂಲಸೌಕರ್ಯದಲ್ಲಿ ಪ್ರಮುಖ ಮೈಲಿಗಲ್ಲು ಸಾಧಿಸಿದೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ವರ್ಷಾಂತ್ಯದ ಪತ್ರಿಕಾ ಪ್ರಕಟಣೆಯ ಪ್ರಕಾರ, FAME-II ಸರ್ಕಾರಿ ಯೋಜನೆಯಡಿಯಲ್ಲಿ ರೀಟೇಲ್ ಔಟ್‌ಲೆಟ್‌ಗಳಲ್ಲಿ 8,932 ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ತೈಲ ಮಾರುಕಟ್ಟೆ ಕಂಪನಿಗಳು ತಮ್ಮ ಸ್ವಂತ ಹಣವನ್ನು ಬಳಸಿಕೊಂಡು 18,500 ಕ್ಕೂ ಹೆಚ್ಚು ಚಾರ್ಜಿಂಗ್ ಕೇಂದ್ರಗಳನ್ನು ನಿರ್ಮಿಸಿವೆ, ಇದು ದೇಶಾದ್ಯಂತ ಒಟ್ಟು 27,432 ಚಾರ್ಜಿಂಗ್ ಕೇಂದ್ರಗಳಿಗೆ ತಲುಪಿದೆ.
Advertisement

ಕೈಗೆಟುಕುವ ಬೆಲೆಯಲ್ಲಿ ADAS ಹೊಂದಿರುವ ಕಾರು ಹುಡುಕುತ್ತಿದ್ದೀರಾ?

ಇತ್ತೀಚಿನ ವರ್ಷಗಳಲ್ಲಿ ಸುರಕ್ಷಿತ ಕಾರುಗಳಿಗೆ ಬೇಡಿಕೆ ಹೆಚ್ಚಾಗಿದೆ. ನೀವು ಕೂಡ ಹೊಸ ಕಾರು ಖರೀದಿಸುವ ಬಗ್ಗೆ ಮತ್ತು ADAS (Advanced Driver Assistance Systems) ಹೊಂದಿರುವ ಅತ್ಯಂತ ಕೈಗೆಟುಕುವ ಕಾರುಗಳನ್ನು ಹುಡುಕುತ್ತಿದ್ದರೇ 15 ಲಕ್ಷ ರೂ.ಗಿಂತ ಕಡಿಮೆ ಬೆಲೆಯ ಅತ್ಯುತ್ತಮ ಕಾರುಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಸದ್ಯ ಭಾರತದಲ್ಲಿ ADAS ಹೊಂದಿರುವ 5 ಕೈಗೆಟುಕುವ ಕಾರುಗಳ ಪಟ್ಟಿಯನ್ನು ಸಂಗ್ರಹಿಸಿದ್ದೇವೆ. ಹೆಚ್ಚುವರಿಯಾಗಿ, ಈ ಎಲ್ಲಾ ಕಾರುಗಳು 15 ಲಕ್ಷ ರೂ.ಗಿಂತ ಕಡಿಮೆ ಎಕ್ಸ್-ಶೋರೂಂ ಬೆಲೆಯನ್ನು ಹೊಂದಿವೆ.

Maruti: 17 Km ಮೈಲೇಜ್.. 12 ಲಕ್ಷ, ರಣಬೇಟೆಗಾರ ಮಾರುತಿ ಜಿಮ್ನಿ..

ಮಾರುತಿ ಸುಜುಕಿ ಜಿಮ್ನಿ (Maruti Suzuki Jimny) ಪ್ರಮುಖ ಆಫ್-ರೋಡ್ ಎಸ್‌ಯುವಿಯಾಗಿದೆ. ರೂ.12.31 ಲಕ್ಷದಿಂದ ರೂ.14.45 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ತುಂಬಾ ಚೆನ್ನಾಗಿರುವ ವಿನ್ಯಾಸವನ್ನು ಒಳಗೊಂಡಿದೆ. ನೆಕ್ಸಾ ಬ್ಲ್ಯೂ, ಗ್ರಾನೈಟ್ ಗ್ರೇ, ಬ್ಲ್ಯೂಯಿಸ್ ಬ್ಲ್ಯಾಕ್, ಸಿಜ್ಲಿಂಗ್ ರೆಡ್ ಹಾಗೂ ಪರ್ಲ್ ಆರ್ಕ್ಟಿಕ್ ವೈಟ್ ಎಂಬ ಬಣ್ಣಗಳೊಂದಿಗೂ ಸಿಗುತ್ತದೆ. 210 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಮತ್ತು 2,590 ಮಿ.ಮೀ ವೀಲ್‌ಬೇಸ್‌ನ್ನು ಹೊಂದಿದೆ.

ಹೊಸ ಪಲ್ಸರ್ 150 ಬಿಡುಗಡೆ: ಪೈಪೋಟಿಗೆ ನಾನು ಸಿದ್ಧವೆಂದ ಅಪಾಚೆ 160

ಪ್ರಮುಖ ದ್ವಿಚಕ್ರ ವಾಹನ ತಯಾರಕರಾದ ಬಜಾಜ್ ಆಟೋ ಲಿಮಿಟೆಡ್, ಮೊನ್ನೆಯಷ್ಟೆ ಹೊಸ ಪಲ್ಸರ್ 150 ಬೈಕ್ ಅನ್ನು ಹೊಸ ನವೀಕರಣಗಳೊಂದಿಗೆ ಬಿಡುಗಡೆ ಮಾಡಿದೆ. ಇದು ಭಾರತದ ನೆಚ್ಚಿನ 150ಸಿಸಿ ಪರ್ಫಾಮೆನ್ಸ್ ಮೋಟಾರ್‌ಸೈಕಲ್ ಆಗಿದ್ದು, ಈ ಬಾರಿ ಹೊಸ ಬಣ್ಣ ಆಯ್ಕೆಗಳು ಮತ್ತು ರಿಫ್ರೆಶ್ಡ್ ಗ್ರಾಫಿಕ್ಸ್‌ ನೊಂದಿಗೆ ತನ್ನ ಕ್ಲಾಸಿಕ್ ಮಸ್ಕುಲರ್ ಲುಕ್‌ ಉಳಿಸಿಕೊಂಡಿದೆ. ಹೊಸ LED ಹೆಡ್‌ಲ್ಯಾಂಪ್ ಮತ್ತು LED ಬ್ಲಿಂಕರ್‌ಗಳ ಜೊತೆಗೆ ಪಲ್ಸರ್ 150 ಆಕರ್ಷಣೆಯನ್ನು ಪಡೆದುಕೊಂಡಿದೆ. ಈ ಬೈಕ್‌ಗೆ ನೇರ ಪ್ರತಿಸ್ಪರ್ಧಿಯಾಗಿರುವ ಟಿವಿಎಸ್ ಅಪಾಚೆ RTR 160 ಬೈಕ್ ಅನ್ನು ಹೋಲಿಕೆ ಮಾಡಿದ್ದೇವೆ. ಯಾವುದು ಬೆಸ್ಟ್ ನೋಡೋಣ.

Bajaj: ರೂಪ ಬದಲಾಗದೇ ಹೊಸ ನವೀಕರಣ ಪಡೆದು ಯುವಕರ ಮನಗೆದ್ದ ಪಲ್ಸರ್ 150

ಭಾರತೀಯ ದ್ವಿಚಕ್ರ ವಾಹನ ವಿಭಾಗದಲ್ಲಿ ಪ್ರಾಬಲ್ಯವನ್ನು ಹೊಂದಿರುವ ಪ್ರಮುಖ ವಾಹನ ತಯಾರಕ ಬಜಾಜ್ (Bajaj), ಇತ್ತೀಚೆಗೆ ತನ್ನ ಪಲ್ಸರ್ 150 ಅನ್ನು ಹೊಸ ನವೀಕರಣಗಳೊಂದಿಗೆ ಬಿಡುಗಡೆ ಮಾಡಿದೆ. ಈ ಬೈಕ್ ತನ್ನ ಎದುರಾಳಿಗಳಿಗಿಂತ ತುಸು ಹಿಂದುಳಿದಿದೆ ಎಂಬ ಕಾರಣಕ್ಕೆ ಈ ಬಾರಿ ರಗಡ್ ಗ್ರಾಫಿಕ್‌ ಲುಕ್‌ನೊಂದಿಗೆ ಪರಿಚಯಿಸಲಾಗಿದೆ ಎಂದು ಹೇಳಲಾಗಿದೆ. ಹೊಸ ಎಲ್‌ಇಡಿ ಲೈಟ್ ಸೆಟಪ್, ಆಕರ್ಷಕ ಫೀಚರ್ ಅಪ್‌ಡೇಟ್ ಸೇರಿದಂತೆ ಕೆಲವೊಂದು ಸಣ್ಣ ಬದಲಾವಣೆಗಳನ್ನು ಮಾಡಿದೆ. ಇಷ್ಟೆಲ್ಲಾ ಮಾಡಿದ ಮೇಲೆ ಬೆಲೆ ಕೂಡ ತುಸು ಬದಲಾಗಿದ್ದು, ಬೈಕ್ ಈಗ ಆಕರ್ಷಕ ಬೆಲೆಯಲ್ಲಿ ಹಲವು ನವೀಕರಣಗಳೊಂದಿಗೆ ಖರೀದಿಗೆ ಲಭ್ಯವಿದೆ.
Advertisement

ಡಿಸೆಂಬರ್ 31ರ ಮುನ್ನವೇ ಟ್ರಯಂಫ್ ಬೈಕ್‌ಗಳನ್ನು ಖರೀದಿಸಲು ಕಂಪನಿ ಸಲಹೆ

ಜಾಗತಿಕ ಮೋಟಾರ್‌ಸೈಕಲ್ ಬ್ರ್ಯಾಂಡ್ ಆಗಿರುವ 'ಟ್ರಯಂಫ್ ಮೋಟಾರ್‌ಸೈಕಲ್ಸ್' (Triumph Motorcycles), ಭಾರತದಲ್ಲಿ ಮಾರಾಟವಾಗುವ ತನ್ನ ಎಲ್ಲಾ ಬೈಕ್‌ಗಳ ಪ್ರಸ್ತುತ ಎಕ್ಸ್-ಶೋರೂಂ ಬೆಲೆಗಳು ಡಿಸೆಂಬರ್ 31, 2025 ರವರೆಗೆ ಮಾತ್ರ ಮಾನ್ಯವಾಗಿರುತ್ತವೆ. ಜನವರಿ 1, 2026 ರಿಂದ ಟ್ರಯಂಫ್ ಮೋಟಾರ್‌ಸೈಕಲ್‌ಗಳ ಎಲ್ಲಾ ಮಾಡಲ್‌ಗಳಲ್ಲಿ ಬೆಲೆ ಪರಿಷ್ಕರಣೆ ಜಾರಿಗೆ ಬರಲಿದೆ ಎಂದು ಘೋಷಿಸಿದೆ. ಈ ಬೆಲೆ ಏರಿಕೆ ಎಷ್ಟಿರಲಿದೆ ಎಂಬುದರ ಬಗ್ಗೆ ಮಾಹಿತಿ ಹಂಚಿಕೊಂಡಿಲ್ಲವಾದರೂ, ಕಚ್ಚಾ ವಸ್ತುಗಳ ಬೆಲೆ ಏರಿಕೆ ಹಾಗೂ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ ಕುಸಿತವು ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.