ಡಿಸೆಂಬರ್ 31ರ ಮುನ್ನವೇ ಟ್ರಯಂಫ್ ಬೈಕ್‌ಗಳನ್ನು ಖರೀದಿಸಲು ಕಂಪನಿ ಸಲಹೆ
ಆಟೋಮೊಬೈಲ್ಸ್
- 8 month, 17 days ago
ಜಾಗತಿಕ ಮೋಟಾರ್‌ಸೈಕಲ್ ಬ್ರ್ಯಾಂಡ್ ಆಗಿರುವ 'ಟ್ರಯಂಫ್ ಮೋಟಾರ್‌ಸೈಕಲ್ಸ್' (Triumph Motorcycles), ಭಾರತದಲ್ಲಿ ಮಾರಾಟವಾಗುವ ತನ್ನ ಎಲ್ಲಾ ಬೈಕ್‌ಗಳ ಪ್ರಸ್ತುತ ಎಕ್ಸ್-ಶೋರೂಂ ಬೆಲೆಗಳು ಡಿಸೆಂಬರ್ 31, 2025 ರವರೆಗೆ ಮಾತ್ರ ಮಾನ್ಯವಾಗಿರುತ್ತವೆ. ಜನವರಿ 1, 2026 ರಿಂದ ಟ್ರಯಂಫ್ ಮೋಟಾರ್‌ಸೈಕಲ್‌ಗಳ ಎಲ್ಲಾ ಮಾಡಲ್‌ಗಳಲ್ಲಿ ಬೆಲೆ ಪರಿಷ್ಕರಣೆ ಜಾರಿಗೆ ಬರಲಿದೆ ಎಂದು ಘೋಷಿಸಿದೆ. ಈ ಬೆಲೆ ಏರಿಕೆ ಎಷ್ಟಿರಲಿದೆ ಎಂಬುದರ ಬಗ್ಗೆ ಮಾಹಿತಿ ಹಂಚಿಕೊಂಡಿಲ್ಲವಾದರೂ, ಕಚ್ಚಾ ವಸ್ತುಗಳ ಬೆಲೆ ಏರಿಕೆ ಹಾಗೂ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ ಕುಸಿತವು ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.