ಜನವರಿ 1 ರಿಂದ ವಾಹನಗಳ ಬೆಲೆ ಏರಿಕೆ ಘೋಷಿಸಿದ ಬಿಎಂಡಬ್ಲ್ಯು
ಆಟೋಮೊಬೈಲ್ಸ್
- 8 month, 24 days ago
ಬಿಎಂಡಬ್ಲ್ಯು ಮೋಟರ್‌ರಾಡ್ (BMW Motorrad) ಇಂಡಿಯಾ ಜನವರಿ 1, 2026 ರಿಂದ ಜಾರಿಗೆ ಬರುವಂತೆ ಎಲ್ಲಾ ಮಾಡಲ್‌ಗಳ ಮೇಲೆ ಶೇ. 6 ರಷ್ಟು ಬೆಲೆ ಏರಿಕೆಯನ್ನು ಘೋಷಿಸಿದೆ. ಇತ್ತೀಚಿನ ತಿಂಗಳುಗಳಲ್ಲಿ ಅಮೆರಿಕನ್ ಡಾಲರ್ ಮತ್ತು ಯುರೋ ವಿರುದ್ಧ ಭಾರತೀಯ ರೂಪಾಯಿ ತೀವ್ರವಾಗಿ ಕುಸಿದಿರುವುದರಿಂದ ವಿದೇಶಿ ವಿನಿಮಯ ದರಗಳ ಮೇಲಿನ ನಿರಂತರ ಒತ್ತಡದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕಚ್ಚಾ ವಸ್ತುಗಳು ಮತ್ತು ಲಾಜಿಸ್ಟಿಕ್ಸ್‌ಗಾಗಿ ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚಗಳು ಲಾಭದಾಯಕತೆಯ ಮೇಲೆ ಹೆಚ್ಚಿನ ಪರಿಣಾಮ ಬೀರಿವೆ, ಹಾಗಾಗಿ ಬೆಲೆ ಏರಿಕೆ ಘೋಷಿಸಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.