TVS: 80 ಕಿ.ಮೀ ಮೈಲೇಜ್ ನೀಡಬಲ್ಲ ಸ್ಕೂಟರ್ ಬಿಡುಗಡೆಗೆ ಸಿದ್ಧ..

ಹೋಂಡಾ ಆಕ್ಟಿವಾ (Honda Aativa) ಜನಮೆಚ್ಚಿದ ಸ್ಕೂಟರ್ ಎಂದೇ ಹೆಸರುವಾಸಿಯಾಗಿದೆ. ಇದಕ್ಕೆ ಟಿವಿಎಸ್ ಜುಪಿಟರ್ (TVS Jupiter) ಪ್ರಬಲವಾದ ಪ್ರತಿಸ್ಪರ್ಧಿಯಾಗಿದೆ. ಈ ಸ್ಕೂಟರ್‌ಗಳು ಜಿದ್ದಿಗೆ ಬಿದ್ದ ರೀತಿಯಲ್ಲಿ ಮಾರಾಟವಾಗುತ್ತಿವೆ. ಸದ್ಯ, ಇದೇ 'ಜುಪಿಟರ್'ನ್ನು ಹೊಸ ರೂಪದಲ್ಲಿ ಪರಿಚಯಿಸಲಾಗುತ್ತದೆ. ಎಲ್ಲವು ಅಂದುಕೊಂಡಂತೆ ಜರುಗಿದರೆ, ಈ ವರ್ಷವೇ 'ಸಿಎನ್‌ಜಿ' ಚಾಲಿತ ಮಾಡೆಲ್ ಸಹ ಬಿಡುಗಡೆಯಾಗಲಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಟಾಟಾ ಸವಾಲ್‌ಗೆ ಸಿದ್ಧ: ಮಹೀಂದ್ರಾ ಹೊಸ SUV ಬಿಡುಗಡೆಗೆ ಸಜ್ಜು

ಭಾರತದ ಪ್ರಮುಖ ವಾಹನ ತಯಾರಕ ಕಂಪನಿಯಾಗಿರುವ ಮಹೀಂದ್ರಾ (Mahindra), ಎಲೆಕ್ಟ್ರಿಕ್ ಕಾರು ವಿಭಾಗದಲ್ಲಿ XEV 9e, BE 6 ಮತ್ತು XEV 9S ಎಂಬ ಹೊಸ ಮಾಡಲ್‌ಗಳೊಂದಿಗೆ ಮುನ್ನುಗ್ಗುತ್ತಿದೆ. ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅಂತರಾಷ್ಟ್ರೀಯ ಗುಣಮಟ್ಟದ ದೇಶೀಯ ಕಾರುಗಳನ್ನು ಮೆಚ್ಚಿಕೊಂಡಿದ್ದಾರೆ. ಗ್ರಾಹಕರಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚುತ್ತಿರುವ ಬೇಡಿಕೆಗೆ ಅನುಗುಣವಾಗಿ ಮಹೀಂದ್ರಾ ಈಗ ತನ್ನ ಮುಂಬರುವ ಎಲೆಕ್ಟ್ರಿಕ್ ವಾಹನದ ಬಿಡುಗಡೆ ಸಮಯವನ್ನು ಬಹಿರಂಗಪಡಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

ಸ್ವದೇಶಿ ಬ್ರ್ಯಾಂಡ್‌ನ್ನು ಕೈಬಿಡದ ಜನ: ಎಂಜಿ & ಮಹೀಂದ್ರಾ..

ಟಾಟಾ ಮೋಟಾರ್ಸ್ (Tata Motors) ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಅಗ್ರ ಸ್ಥಾನದಲ್ಲಿದೆ. ಈ 2026ರ ಜನವರಿಯಲ್ಲಿ ಒಟ್ಟು 8,616 ಯುನಿಟ್‌ಗಳನ್ನು ಮಾರಾಟಗೊಳಿಸಿದ್ದು, ಶೇಕಡ 52.4% ಮಾರುಕಟ್ಟೆ ಪಾಲನ್ನು ಹೊಂದಿದೆ. ದ್ವಿತೀಯ ಸ್ಥಾನದಲ್ಲಿ ಎಂಜಿ ಮೋಟಾರ್ ಇದ್ದು, 3,731 ಯುನಿಟ್‌ಗಳನ್ನು ಮಾರಿದೆ. ತೃತೀಯ ಸ್ಥಾನದಲ್ಲಿರುವ ಮಹೀಂದ್ರಾ ಕಂಪನಿಯು 3,660 ಯುನಿಟ್‌ಗಳನ್ನು ಮಾರಾಟ ಮಾಡಿದೆ. ನಂತರದ ಸ್ಥಾನದಲ್ಲಿ ಹ್ಯುಂಡೈ (247ಯುನಿಟ್) ಹಾಗೂ ಕಿಯಾ (178 ಯುನಿಟ್) ಕಂಪನಿಗಳಿವೆ.

Honda Activa: ಇದೇ ನಂ.1 ಹೋಂಡಾ ಆಕ್ಟಿವಾದ ಪವರ್.. ಬೆಚ್ಚಿಬಿದ್ದ..

ಹೋಂಡಾ ಆಕ್ಟಿವಾ (Honda Activa) ನಂಬರ್ 1 ಪ್ರಯಾಣಿಕ ಸ್ಕೂಟರ್ ಆಗಿ ಹೊರಹೊಮ್ಮಿದೆ. ದೇಶಾದ್ಯಂತ ವಿಪರೀತವಾದ ಬೇಡಿಕೆಯನ್ನು ಹೊಂದಿದೆ. ಗ್ರಾಹಕರು ಸಹ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಅದಕ್ಕೆ ತಕ್ಕಂತೆ ಪ್ರತಿ ತಿಂಗಳು ಭಾರೀ ಸಂಖ್ಯೆಯಲ್ಲಿಯೂ ಮಾರಾಟಗೊಳ್ಳುತ್ತಿದೆ. ಸದ್ಯ, ಮಹಾರಾಷ್ಟ್ರದಲ್ಲಿ ಇದೇ 'ಆಕ್ಟಿವಾ' ಮಾರಾಟದಲ್ಲಿ ದೊಡ್ಡ ಇತಿಹಾಸವೊಂದನ್ನು ಬರೆಯಲಾಗಿದೆ. ಬನ್ನಿ.. ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.
Advertisement

ಭಾರತದಲ್ಲಿ ಕೊರಿಯಾ ಬ್ರ್ಯಾಂಡ್ ಜೋರು: EV ಬಿಡುಗಡೆಗೆ ಸರ್ವಸಿದ್ಧ

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ನಿಧಾನವಾಗಿ ಬೇಡಿಕೆ ಹೆಚ್ಚಾಗುತ್ತಿದೆ, ಖರೀದಿದಾರರ ಸಂಖ್ಯೆ ದಾಖಲೆ ಮಟ್ಟದಲ್ಲಿ ಬೆಳಯುತ್ತಿದೆ. ಇದನ್ನರಿತಿರುವ ಟೊಯೋಟಾ ಹಾಗೂ ಮಾರುತಿ ಬ್ರ್ಯಾಂಡ್‌ಗಳು ಕೂಡ ತಮ್ಮ ಮೊದಲ ಎಲೆಕ್ಟ್ರಿಕ್ ಕಾರುಗಳನ್ನು ಇತ್ತೀಚೆಗಷ್ಟೆ ಮಾರುಕಟ್ಟೆಯಲ್ಲಿ ಪರಿಚಯಿಸಿವೆ. ಈಗ ಕಿಯಾ ಕೂಡ ಮತ್ತೊಂದು ಕೈಗೆಟುಕುವ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಈಗಾಗಲೇ ಕಿಯಾ ಕಂಪನಿಯು EV6, ಕಾರೆನ್ಸ್ ಕ್ಲಾವಿಸ್ ಇವಿ ಹಾಗೂ ಕಿಯಾ ಇವಿ9 ಎಂಬ ಮೂರು ಎಲೆಕ್ಟ್ರಿಕ್ ಕಾರುಗಳನ್ನು ಹೊಂದಿದೆಯಾದರೂ, ಮಧ್ಯಮ ವರ್ದವರಿಗಾಗಿ ಕಮ್ಮಿ ಬೆಲೆಯ ಯಾವುದೇ ಎಲೆಕ್ಟ್ರಿಕ್ ಕಾರನ್ನು ನೀಡುತ್ತಿಲ್ಲ.

ಬಡವರ ಪಾಲಿನ ಅಂಬಾರಿ.. ಬರೀ 4.99 ಲಕ್ಷ ರೂಪಾಯಿಗೆ ಸಿಗುತ್ತೆ..

ಮಾರುತಿ ಸುಜುಕಿ ವ್ಯಾಗನ್ಆರ್ (Maruti Suzuki WagonR) ಪ್ರಮುಖ ಹ್ಯಾಚ್‌ಬ್ಯಾಕ್ ಆಗಿ ಹೊರಹೊಮ್ಮಿದೆ. ಈ ಕಾರನ್ನು ದೇಶೀಯ ಮಾರುಕಟ್ಟೆಯಲ್ಲಿ 1999ರಲ್ಲಿ ಮೊದಲ ಬಾರಿಗೆ ಬಿಡುಗಡೆಗೊಳಿಸಲಾಯಿತು. ಅಂದಿನಿಂದ ಇಂದಿನವರೆಗೆ ಬಾರೀ ಬೇಡಿಕೆಯನ್ನು ಹೊಂದಿದೆ. ಗ್ರಾಹಕರು ಸಹ ಇಷ್ಟಪಟ್ಟು ಕೊಳ್ಳುತ್ತಿದ್ದಾರೆ. ನೀವು ಹೊಚ್ಚ ಹೊಸ ಕಾರೊಂದನ್ನು ಖರೀದಿಸಲು ಪ್ಲ್ಯಾನ್ ಮಾಡಿದ್ದೀರಾ.. ಹಾಗಾದರೆ, ಇದೇ 'ವ್ಯಾಗನ್ಆರ್' ಬೆಸ್ಟ್ ಚಾಯ್ಸ್ ಆಗಲಿದೆ. ಬನ್ನಿ, ಈ ಕಾರಿನ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಪ್ರತಿಯೊಂದು ವಿವರಗಳನ್ನು ತಿಳಿಯೋಣ.

ಭೂಲೋಕದ ಅರಮನೆಯಂತಿರುವ ದೈತ್ಯ MG M9 ಕಾರು ಖರೀದಿಸಿದ ಉದ್ಯಮಿ: ಯಾರು?

ಕಾರುಗಳ ಮೇಲಿನ ಉತ್ಸಾಹ ಮತ್ತು ಪ್ರಾಯೋಗಿಕ ಐಷಾರಾಮಿ ಆದ್ಯತೆಗೆ ಹೆಸರುವಾಸಿಯಾದ ಉದ್ಯಮಿ ಮತ್ತು ಹೂಡಿಕೆದಾರ ಅಶ್ನೀರ್ ಗ್ರೋವರ್, MG M9 - ಪ್ರೆಸಿಡೆನ್ಶಿಯಲ್ ಲಿಮೋಸಿನ್ ಎಂಬ ದೈತ್ಯ ಕಾರನ್ನು ಖರೀದಿಸಿ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ಸೌಕರ್ಯಯುತವಾದ ದೂರದ ಕುಟುಂಬ ಪ್ರಯಾಣಕ್ಕಾಗಿ ವಿನ್ಯಾಸಗೊಳಿಸಲಾದ MG M9, ಐಷಾರಾಮಿ ದೈನಂದಿನ ಬಳಕೆಗೂ ಬಳಸಬಹುದಾಗಿದೆ. ರಸ್ತೆಯಲ್ಲಿ ರಾಜಿಯಾಗದ ಅತ್ಯಾಧುನಿಕ ಹಾಗೂ ಐಷಾರಾಮಿಯನ್ನು ಬಯಸುವ ಭಾರತದ ಉನ್ನತ ವ್ಯಕ್ತಿಗಳಲ್ಲಿ ಈ ವಾಹನಕ್ಕೆ ಹೆಚ್ಚುತ್ತಿರುವ ಆಕರ್ಷಣೆಯನ್ನು ಇದು ಒತ್ತಿಹೇಳುತ್ತದೆ.
Advertisement

Acer Faster Awards 2026: ಹತ್ತಾರು ಪ್ರಶಸ್ತಿ ಘೋಷಣೆ..

ದೇಶದ ಆಟೋಮೋಟಿವ್ ಮಾಧ್ಯಮಗಳ ಒಕ್ಕೂಟವಾಗಿ 'ಫಾಸ್ಟರ್' ಗುರುತಿಸಿಕೊಂಡಿದೆ. ಗುರುಗ್ರಾಮದಲ್ಲಿ ಬುಧವಾರ ಪ್ರಖ್ಯಾತ ಕಾರು ಹಾಗೂ ದ್ವಿಚಕ್ರ ವಾಹನಗಳಿಗೆ ಕೊಡಲಾಗುವ 5ನೇ ಆವೃತ್ತಿ ಫಾಸ್ಟರ್ ಪ್ರಶಸ್ತಿ (Faster Awards - 2026) ಸಮಾರಂಭಕ್ಕೆ ಅದ್ದೂರಿಯಾಗಿ ತೆರೆ ಬಿದ್ದಿದೆ. ಜನಪ್ರಿಯ ಎಸ್‌ಯುವಿ ಮಹೀಂದ್ರಾ ಎಕ್ಸ್ಇವಿ 9ಇ (Mahindra XEV 9E) ವರ್ಷದ ಕಾರೆಂಬ ಪ್ರಶಸ್ತಿಯನ್ನು ಪಡೆದಿದೆ. ಟಿವಿಎಸ್ ಅಪಾಚೆ ಆರ್‌ಟಿಎಕ್ಸ್ (TVS Apache RTX) ವರ್ಷದ ಮೋಟಾರ್‌ಸೈಕಲ್ ಎಂಬ ಗೌರವಕ್ಕೆ ಪಾತ್ರವಾಗಿದೆ. ಸುಜುಕಿ ಆಕ್ಸೆಸ್ (Suzuki Access) ವರ್ಷದ ಸ್ಕೂಟರ್ ಆಗಿ ಹೊರಹೊಮ್ಮಿದೆ.

TVS: ಪ್ರತಿದಿನ 1180 ಸ್ಕೂಟರ್‌ಗಳು ಸೇಲ್ಸ್.. ಜನ ಮುಗಿಬಿದ್ದು..

ಟಿವಿಎಸ್ ಎನ್‌ಟಾರ್ಕ್‌ (TVS Ntorq) ಸ್ಟೈಲಿಶ್ ಸ್ಕೂಟರ್‌ ಆಗಿದ್ದು, ದಿನದಿಂದ ದಿನಕ್ಕೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಕಳೆದ ತಿಂಗಳು (ಜನವರಿ - 2026) ಭಾರೀ ಸಂಖ್ಯೆಯಲ್ಲಿಯೇ ಮಾರಾಟಗೊಂಡಿದೆ. ಒಟ್ಟು 36,596 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಿಸಲಾಗಿದೆ. ಅಂದರೆ ಪ್ರತಿದಿನ 1,180 'ಎನ್‌ಟಾರ್ಕ್‌' ಸ್ಕೂಟರ್‌ಗಳು ಮಾರಾಟವಾಗಿವೆ. 2025ರ ಇದೇ ಅವಧಿಯಲ್ಲಿ 23,795 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ-ಅಂಶವನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 53.80% ಬೆಳವಣಿಗೆಯಾಗಿದೆ.

Suzuki: ಬಡವರ ಬಂಡಿ, 50 ಕಿ.ಮೀ ಮೈಲೇಜ್: ಬೆಲೆ ತೀರಾ ಕಡಿಮೆ

ಸುಜುಕಿ ಆಕ್ಸೆಸ್ 125 (Suzuki Access 125), ಭಾರತದ 125 ಸಿಸಿ ಸ್ಕೂಟರ್ ವಿಭಾಗದಲ್ಲಿ ಹಲವಾರು ಮಾಡಲ್‌ಗಳೊಂದಿಗೆ ಸ್ಪರ್ಧಿಸುತ್ತಿದೆ. ಅದರಲ್ಲೂ ಮುಖ್ಯವಾಗಿ ಆಕ್ಟಿವಾ 125 ಹಾಗೂ ಜುಪಿಟರ್ 125 ಸ್ಕೂಟರ್‌ಗಳು ನೇರ ಪ್ರತಿಸ್ಪರ್ಧಿಗಳಾಗಿವೆ. ಆದರೆ ಪರ್ಫಾಮೆನ್ಸ್, ಮೈಲೇಜ್ ಮತ್ತು ಉಪಯುಕ್ತತೆಯಂತಹ ವಿಷಯಗಳಲ್ಲಿ ಸುಜುಕಿ ಆಕ್ಸೆಸ್ 125 ಸ್ಕೂಟರ್ ಅನ್ನು ಹಿಂದಿಕ್ಕುವ ಮಾಡಲ್ ಇನ್ನೂ ಬಂದಿಲ್ಲ. ಹಲವು ಬ್ರ್ಯಾಂಡ್‌ಗಳು ಆಧುನಿಕ ತಂತ್ರಜ್ಞಾನ, ಫ್ಯೂಚರಿಸ್ಟಿಕ್ ವಿನ್ಯಾಸದೊಂದಿಗೆ ಬಿಡುಗಡೆಯಾಗುತ್ತಿವೆಯಾದರೂ ಸುಜುಕಿ ಆಕ್ಸೆಸ್ 125 ತನ್ನ ಪವರ್‌ಫುಲ್ ಎಂಜಿನ್ ಮತ್ತು ಸವಾರಿಯ ಸುಲಭತೆಯ ವಿಷಯದಲ್ಲಿ ಮಾರುಕಟ್ಟೆಯನ್ನು ಮುನ್ನಡೆಸುತ್ತಿದೆ.

ಟಾಟಾ & ಮಹೀಂದ್ರಾ ಬಳಿಕ, ಅಬ್ಬರಿಸಲು ಹೊಸ ಸ್ವದೇಶಿ ಕಂಪನಿ ಸಿದ್ಧ..

ಜೆಎಸ್‌ಡಬ್ಲ್ಯೂ ಗ್ರೂಪ್ (JSW Group) ಹಾಗೂ ಎಂಜಿ ಮೋಟಾರ್ (Mg Motor) ಕಂಪನಿಗಳು ವ್ಯಾಪಾರ ಸಹಭಾಗಿತ್ವ ಹೊಂದಿವೆ. ಇವೆರಡರ ಪಾಲುದಾರಿಕೆಯಲ್ಲಿ ಕಾಮೆಟ್ ಇವಿ ಹಾಗೂ ವಿಂಡ್ಸರ್ ಇವಿ ಸೇರಿದಂತೆ ವಿವಿಧ ಕಾರುಗಳನ್ನು ಮಾರಾಟಗೊಳಿಸಲಾಗುತ್ತಿದೆ. ಸದ್ಯ, ಜೆಎಸ್‌ಡಬ್ಲ್ಯೂ ಗ್ರೂಪ್‌ನ ಅಂಗಸಂಸ್ಥೆಯಾಗಿರುವ ಜೆಎಸ್‌ಡಬ್ಲ್ಯೂ ಮೋಟಾರ್ಸ್ (JSW Motors), ಭಾರತದ ವಾಹನೋದ್ಯಮಕ್ಕೆ ಸ್ವತಂತ್ರವಾಗಿ ಪ್ರವೇಶಿಸಲು ಎಲ್ಲ ರೀತಿಯಲ್ಲೂ ತಯಾರಾಗುತ್ತಿದೆ. ಅತಿ ಶೀಘ್ರದಲ್ಲೇ ನೂತನ ಎಸ್‌ಯುವಿಯೊಂದನ್ನು ಮಾರಾಟಕ್ಕೂ ತರಲಿದೆ. ಅದು ಜಾಗತಿಕ ಮಾರುಕಟ್ಟೆಯಲ್ಲಿ ಲಭ್ಯವಿರುವ ಚೀನಾದ 'ಚೆರಿ ಆಟೋಮೊಬೈಲ್'ನ 'ಜೆಟೂರ್ ಟಿ2' ಕಾರಿನ ರೀ-ಬ್ಯಾಡ್ಜ್ ಮಾಡೆಲ್ ಆಗಿರಲಿದೆ ಎಂದು ಹೇಳಲಾಗಿದೆ. ಬನ್ನಿ, ಈ ಎಸ್‌ಯುವಿಯ ನಿರೀಕ್ಷಿತ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.
Advertisement

Bajaj: ಇತ್ತೀಚೆಗೆ ಬಿಡುಗಡೆಯಾಗಿರುವ ಬಜಾಜ್ ಪಲ್ಸರ್ 150 ವಿಶೇಷತೆಗಳು

ಭಾರತದ ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿರುವ ಬಜಾಜ್ (Bajaj), ಇತ್ತೀಚೆಗೆ ತನ್ನ ಪಲ್ಸರ್ 150 ಅನ್ನು ಹೊಸ ನವೀಕರಣಗಳೊಂದಿಗೆ ಬಿಡುಗಡೆ ಮಾಡಿದೆ. ನವೀಕರಿಸಿದ ಹೊಸ ಪಲ್ಸರ್ 150 ಶ್ರೇಣಿಯನ್ನು ರೂ. 1,08,772 ರಿಂದ ಪ್ರಾರಂಭವಾಗುವ ಎಕ್ಸ್-ಶೋರೂಂ ಬೆಲೆಯಲ್ಲಿ ನೀಡಲಾಗುತ್ತಿದೆ. ಹೊಸ ಎಲ್‌ಇಡಿ ಲೈಟ್ ಸೆಟಪ್, ಆಕರ್ಷಕ ಫೀಚರ್ ಅಪ್‌ಡೇಟ್ ಸೇರಿದಂತೆ ಕೆಲವೊಂದು ಸಣ್ಣ ಬದಲಾವಣೆಗಳನ್ನು ಮಾಡಿದೆ. ಏನೆಲ್ಲಾ ವಿಶೇಷತೆಗಳನ್ನು ಪಡೆದಿದೆ ಎಂಬುದರ ಬಗ್ಗೆ ವಿವರವಾಗಿ ನೋಡೋಣ.

Duster: ಶೋರೂಂ ಮುಂದೆ ಜನ ಸೇರೋದು ಪಕ್ಕಾ! ಹೊಸ ಡಸ್ಟರ್ ಬಿಡುಗಡೆಗೆ..

ಜನವರಿ 26ರಂದು ಹೊಸ ತಲೆಮಾರಿನ ರೆನಾಲ್ಟ್ ಡಸ್ಟರ್ (Renault Duster) ಎಸ್‌ಯುವಿ ಅದ್ದೂರಿಯಾಗಿ ಅನಾವರಣಗೊಳಿಸಲಾಯಿತು. ಈ ಕಾರು ನೋಡುವುದಕ್ಕೆ ಸ್ಟೈಲಿಶ್ ಆಗಿದ್ದು, ಹತ್ತಾರು ನವೀನತೆಗಳಿಗೂ ಸಾಕ್ಷಿಯಾಗಿದೆ. ಇದೇ 'ಡಸ್ಟರ್'ನ್ನು ಖರೀದಿಸಲು ಗ್ರಾಹಕರು ಕೂಡ ತುದಿಗಾಲಿನಲ್ಲಿ ನಿಂತಿದ್ದಾರೆ. ಸದ್ಯ, ಕಂಪನಿಯು ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದ್ದು, ಕೆಲವೇ ದಿನಗಳಲ್ಲಿ ಈ ನೂತನ ಎಸ್‌ಯುವಿಯು ಗ್ರಾಹಕರ ಮನೆಗಳನ್ನು ತಲುಪಲಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

JSW: ಕಾರು ಮಾರುಕಟ್ಟೆ ಶೇಕ್.. ಮತ್ತೊಂದು ಭಾರತದ ಬ್ರ್ಯಾಂಡ್..

ಭಾರತದ ಉಕ್ಕು ಮತ್ತು ಸಿಮೆಂಟ್ ಉದ್ಯಮದಲ್ಲಿ ಜೆಎಸ್‌ಡಬ್ಲ್ಯೂ ಗ್ರೂಪ್ (JSW Group) ದೊಡ್ಡ ಹೆಸರನ್ನು ಮಾಡಿದೆ. ಸದ್ಯ ತನ್ನದೇ ಅಂಗಸಂಸ್ಥೆ ಜೆಎಸ್‌ಡಬ್ಲ್ಯೂ ಮೋಟಾರ್ಸ್ (JSW Motors) ಮೂಲಕ ದೇಶೀಯ ವಾಹನೋದ್ಯಮಕ್ಕೆ ಸ್ವತಂತ್ರವಾಗಿ ಪ್ರವೇಶಿಸಲು ಹಣಿಯಾಗುತ್ತಿದೆ. ಹೊಚ್ಚ ಹೊಸ ಎಸ್‌ಯುವಿಯೊಂದನ್ನು ಬಿಡುಗಡೆಗೊಳಿಸಲು ಸಿದ್ದವಾಗಿದೆ. ಈ ನೂತನ ಕಾರು, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗ್ರಾಹಕರ ಖರೀದಿಗೆ 'ಜೆಟೂರ್ ಟಿ2'ನ್ನು ರೀ-ಬ್ಯಾಡ್ಜ್ ಮಾಡೆಲ್ ಆಗಿರಲಿದೆ ಎಂದು ಹೇಳಲಾಗಿದೆ. ಇದು ಚೀನಾದ 'ಚೆರಿ ಆಟೋಮೊಬೈಲ್' ಒಡೆತನದಲ್ಲಿದೆ.

ಪವರ್‌ಫುಲ್ ಟೊಯೋಟಾ ಕಾರಿನೊಂದಿಗೆ ಭಾರತೀಯ ಸಶಸ್ತ್ರ ಪಡೆ: ರಣಭೂಮಿ ದರ್ಶ

ಭಾರತ್ ರಣಭೂಮಿ ದರ್ಶನ್ ಮತ್ತು ಭಾರತೀಯ ಸಶಸ್ತ್ರ ಪಡೆಗಳ ಅಧಿಕೃತ ಪಾಲುದಾರ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (TKM), ಭಾರತದ ಶ್ರೀಮಂತ ಮಿಲಿಟರಿ ಪರಂಪರೆ, ಶೌರ್ಯ ಮತ್ತು ನಿರಂತರ ಏಕತೆಯ ಮನೋಭಾವಕ್ಕೆ ಗೌರವ ಸಲ್ಲಿಸುವ ಮೂಲಕ ರಾಷ್ಟ್ರವ್ಯಾಪಿ ದಂಡಯಾತ್ರೆಯನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿದೆ. ಟೊಯೋಟಾ ಹಿಲಕ್ಸ್ (Toyota Hilux) ವಾಹನ ನೇತೃತ್ವದ ದಂಡಯಾತ್ರೆ ನವದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಮುಕ್ತಾಯಗೊಂಡಿತು, ಇದು ಧೈರ್ಯ ಮತ್ತು ಸ್ಥಿತಿಸ್ಥಾಪಕತ್ವವನ್ನು ಗೌರವಿಸುವ ಪ್ರಯಾಣಕ್ಕೆ ಹೃದಯಸ್ಪರ್ಶಿ ಅಂತ್ಯವನ್ನು ಸೂಚಿಸಿತು ಎಂದು ಟೊಯೋಟಾ ಪ್ರಕಟಣೆಯಲ್ಲಿ ತಿಳಿಸಿದೆ.
Advertisement

ಬಡವರ ಕಾರುಗಳಿವು.. ಬೈಕ್‌ನಂತೆ ಮೈಲೇಜ್, ರೂ.4 ಲಕ್ಷಕ್ಕಿಂತ ಅಗ್ಗ..

ಮಾರುತಿ ಸುಜುಕಿ ಆಲ್ಟೊ ಕೆ10 (Maruti Suzuki Alto K10) ಹಾಗೂ ಮಾರುತಿ ಸುಜುಕಿ ಎಸ್-ಪ್ರೆಸ್ಸೊ (Maruti Suzuki S-Presso) ಜನಮೆಚ್ಚಿದ ಹ್ಯಾಚ್‌ಬ್ಯಾಕ್ ಎಂದೇ ಮನೆ ಮಾತಾಗಿವೆ. ಇವುಗಳು ಒಂದಕ್ಕಿಂದ ಒಂದು ಅದ್ಭುತವಾಗಿದ್ದು, ಮಧ್ಯಮ ವರ್ಗದ ಜನರಿಗೆ ಹೇಳಿ ಮಾಡಿಸಿದ ರೀತಿಯಲ್ಲಿವೆ. ಕಡಿಮೆ ನಿರ್ವಹಣಾ ವೆಚ್ಚ ಹೊಂದಿದ್ದು, ಉತ್ತಮ ಇಂಧನ ದಕ್ಷತೆಗೂ ಹೆಸರುವಾಸಿಯಾಗಿವೆ. ದೀರ್ಘಕಾಲ ಬಳಕೆಯೂ ಬರುತ್ತವೆ. ನಾವಿಲ್ಲಿ ಈ ಕಾರುಗಳ ಬೆಲೆ, ಕಾರ್ಯಕ್ಷಮತೆ ಮತ್ತು ವೈಶಿಷ್ಟ್ಯಗಳ ಕುರಿತು ಹೋಲಿಕೆ ಮಾಡಿದ್ದೇವೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಹೈಬ್ರಿಡ್ ಕಾರು ಸೇರಿ ಮಾರುತಿಯ 3 ಹೊಸ ಕಾರುಗಳು ಬಿಡುಗಡೆಗೆ ಸಜ್ಜು

ಮಾರುತಿ ಸುಜುಕಿ ಪ್ರಸ್ತುತ ಕಾರು ಮಾರಾಟದಲ್ಲಿ ಭಾರತದಲ್ಲಿ ನಂ.1 ಬ್ರ್ಯಾಂಡ್ ಆಗಿ ಮುಂದುವರಿಯುತ್ತಿದೆ. ದೇಶದಲ್ಲಿ ಪ್ರತಿ ವರ್ಷ ಇತರ ಬ್ರಾಂಡ್‌ಗಳಿಂದ ಪೈಪೋಟಿ ಎದುರಾದರು ಮಾರುತಿ ಮಾರಾಟದಲ್ಲಿ ಕುಸಿತವನ್ನು ಕಾಣುವುದಿಲ್ಲ. ಕೆಲವೊಮ್ಮೆ ಮಾಡಲ್‌ಗಳು ಹಳೆಯದಾದಂತೆ ಅವುಗಳಿಗೆ ಹೊಸ ಅಪ್‌ಡೇಟ್‌ಗಳನ್ನು ನೀಡಿ ಫೇಸ್‌ಲಿಫ್ಟ್ ಮಾಡಲ್‌ಗಳನ್ನು ಬಿಡುಗಡೆ ಮಾಡಲಾಗುತ್ತದೆ. ಅದರಂತೆ ಮಾರುತಿ ಸುಜುಕಿ ಈಗ ಎರಡು ಕಾರುಗಳಿಗೆ ಅಪ್‌ಡೇಟ್‌ ಸೇರಿದಂತೆ ಒಂದು ಹೊಚ್ಚ ಹೊಸ ಮಾಡಲ್‌ ಅನ್ನು 2026 - 2027 ನಡುವೆ ಬಿಡುಗಡೆ ಮಾಡಲು ಸಜ್ಜಾಗುತ್ತಿದೆ.

Suzuki e Access: ಹೊಸ ಸುಜುಕಿ ಇ-ಸ್ಕೂಟರ್‌ಗೆ ದೊಡ್ಡ ಆಫರ್ ಘೋಷಣೆ..

ಜನವರಿ 9ರಂದು ನೂತನ ಸುಜುಕಿ ಇ ಆಕ್ಸೆಸ್ (Suzuki e Access) ಎಲೆಕ್ಟ್ರಿಕ್ ಸ್ಕೂಟರ್‌ನ್ನು ಪರಿಚಯಿಸಲಾಗಿದೆ. ದಿನದಿಂದ ದಿನಕ್ಕೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಮೊದಲ ತಿಂಗಳೇ 201 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಿಸಲಾಗಿದೆ. ಸದ್ಯ, ಇದೇ 'ಇ ಆಕ್ಸೆಸ್' ಸ್ಕೂಟರ್‌ ಮಾರಾಟ ಸಂಖ್ಯೆಯನ್ನು ಅಧಿಕಗೊಳಿಸಲು ಕಂಪನಿಯು ಮುಂದಾಗಿದ್ದು, ವಿವಿಧ ಹಣಕಾಸಿನ ಪ್ರಯೋಜನಗಳನ್ನು ಘೋಷಣೆ ಮಾಡಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

Skoda: ಶೀಘ್ರದಲ್ಲೆ ಹೊಸ 'ಕುಶಾಕ್' ಡೆಲಿವರಿಗಳು: ಉತ್ಪಾದನೆ ಪ್ರಾರಂಭ

ಪ್ರಮುಖ ಕಾರು ತಯಾರಕ ಕಂಪನಿಯಾಗಿರುವ ಸ್ಕೋಡಾ (Skoda), ಪುಣೆಯಲ್ಲಿರುವ ತನ್ನ ವಿಶ್ವ ದರ್ಜೆಯ ಚಕನ್ ಕಾರು ಉತ್ಪದನಾ ಸ್ಥಾವರದಲ್ಲಿ ಹೊಸ ಕುಶಾಕ್ (Skoda Kushaq) ಉತ್ಪಾದನೆಯನ್ನು ಪ್ರಾರಂಭಿಸುವುದರೊಂದಿಗೆ ಭಾರತದಲ್ಲಿ ಒಂದು ಪ್ರಮುಖ ಮೈಲಿಗಲ್ಲನ್ನು ಗುರುತಿಸಿದೆ. ಬ್ರ್ಯಾಂಡ್‌ನ 'ಮೇಕ್ ಇನ್ ಇಂಡಿಯಾ, ಫಾರ್ ಇಂಡಿಯಾ ಮತ್ತು ದಿ ವರ್ಲ್ಡ್' ದೃಷ್ಟಿಕೋನದ ಮೇಲೆ ನಿರ್ಮಿಸಲಾದ ಈ SUV, ಭಾರತದಲ್ಲಿನ ಗ್ರಾಹಕರು ಮತ್ತು ಪ್ರಪಂಚದಾದ್ಯಂತದ ಮಾರುಕಟ್ಟೆಗಳ ವಿಕಸನಗೊಳ್ಳುತ್ತಿರುವ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತದೆ ಎಂದು ಸ್ಕೋಡಾ ಹೇಳಿದೆ.
Advertisement

Maruti Suzuki: ಮಾರುತಿ ಸುಜುಕಿಯ ಮೊದಲ ಎಲೆಕ್ಟ್ರಿಕ್ ಕಾರಿನ ಅಬ್ಬರ..

ಇತ್ತೀಚೆಗೆ ನೂತನ ಮಾರುತಿ ಸುಜುಕಿ ಇ-ವಿಟಾರಾ (Maruti Suzuki e Vitara) ಕಾರನ್ನು ಮಾರಾಟಕ್ಕೆ ತರಲಾಯಿತು. ಇದೊಂದು ಎಲೆಕ್ಟ್ರಿಕ್ ಎಸ್‌ಯುವಿಯಾಗಿದೆ. ಹೆಚ್ಚು ಅತ್ಯಾಧುನಿಕವಾಗಿದ್ದು, ನಾನಾ ಬಗೆಯ ಹೊಸತನಗಳಿಗೂ ಸಾಕ್ಷಿಯಾಗಿದೆ. ಕೈಗೆಟುಕುವ ಬೆಲೆಯಲ್ಲಿಯೂ ಸಿಗುತ್ತದೆ. ಸದ್ಯ, ಇದೇ 'ಇ-ವಿಟಾರಾ'ದ ಕಾಯುವಿಕೆ ಅವಧಿ (waiting period) ಕುರಿತಂತೆ ಒಂದಷ್ಟು ವಿವರಗಳು ಬಹಿರಂಗಗೊಂಡಿವೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

Toyota: ಬೆಸ್ಟ್ 7-ಸೀಟರ್: ಡೀಲರ್‌ಗಳ ಫೇವರೆಟ್ ಕಾರು, ಇನ್ನೋವಾ ಅಲ್ಲ!

ಟೊಯೊಟಾ ರುಮಿಯಾನ್ (Toyota Rumion) ಎಂಪಿವಿ ಕಾರು, ಮಾರುತಿ ಸುಜುಕಿ ಎರ್ಟಿಗಾದ ರೀಬ್ಯಾಡ್ಜ್ ಆವೃತ್ತಿಯಾಗಿದ್ದು, ಒಟ್ಟಾರೆ ವಿನ್ಯಾಸ ಮತ್ತು ಇಂಟೀರಿಯರ್ ಡಿಜೈನ್‌ವರೆಗೆ ಕ್ಯಾಬಿನ್ ಒಂದೇ ಆಗಿರುತ್ತದೆ. ಈ ಟೊಯೊಟಾ ರುಮಿಯಾನ್ ಭಾರತದಲ್ಲಿ ಖರೀದಿಗೆ ಸಿಗುವ ಬೆಸ್ಟ್ 7-ಸೀಟರ್ ಕಾರುಗಳಲ್ಲಿ ಒಂದಾಗಿ ಇತ್ತೀಚೆಗೆ ಭಾರೀ ಸದ್ದು ಮಾಡುತ್ತಿದೆ. ಟೊಯೋಟಾ ಇನ್ನೋವಾವನ್ನು ಖರೀದಿಸಲು ಸಾಧ್ಯವಾಗದ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಮಿಡಿಲ್‌ಕ್ಲಾಸ್ ಫ್ಯಾಮಿಲಿ ಕಾರಾಗಿದೆ. ಈ ಎಂಪಿವಿಯ ಮೈಲೇಜ್, ಬೆಲೆ, ಫೀಚರ್ಸ್ ಸೇರಿದಂತೆ ಹಲವು ವಿಶೇಷತೆಗಳನ್ನು ಇಲ್ಲಿ ನೋಡೋಣ.

Nissan: ಸದ್ದಿಲ್ಲದೇ ಡೀಲರ್‌ಶಿಪ್‌ಗೆ ಬಂದೇ ಬಿಡ್ತು ಹೊಸ ಎಂವಿಪಿ..

ಈಚೆಗೆ ನೂತನ ನಿಸ್ಸಾನ್ ಗ್ರಾವೈಟ್ (Nissan Gravite) ಎಂಪಿವಿಯನ್ನು ಬಿಡುಗಡೆಗೊಳಿಸಲಾಗಿದೆ. ಇದು ನೋಡಲು ತುಂಬಾ ಚೆನ್ನಾಗಿದ್ದು, ಹಲವು ಹೊಸತನಗಳಿಗೂ ಸಾಕ್ಷಿಯಾಗಿದೆ. ಬುಕ್ಕಿಂಗ್‌ನ್ನು ಶುರು ಮಾಡಲಾಗಿದೆ. ಆಸಕ್ತರು ರೂ.11,000 ಮುಂಗಡ ಹಣವನ್ನು ಪಾವತಿಸಿ, ಆರ್ಡರ್ ಮಾಡಬಹುದು. ಸದ್ಯ ದೇಶಾದ್ಯಂತ ವಿವಿಧ ಡೀಲರ್‌ಶಿಪ್‌ಗಳಿಗೆ ಇದೇ 'ಗ್ರಾವೈಟ್'ನ್ನು ತಲುಪಿಸುವ ಕಾರ್ಯಕ್ಕೆ ಕಂಪನಿಯು ಚಾಲನೆ ನೀಡಿದೆ. ಅತಿ ಶೀಘ್ರದಲ್ಲೇ ವಿತರಣೆಗಳು ಪ್ರಾರಂಭವಾಗಲಿದೆ.

ಭಾರತದಲ್ಲಿ ಕಮ್ಮಿ ಬೆಲೆಯ ಬೆಸ್ಟ್ ಟರ್ಬೊ-ಪೆಟ್ರೋಲ್ ಎಸ್‌ಯವಿಗಳು

ಜಾಗತಿಕವಾಗಿ ವೇಗವಾಗಿ ಬೆಳೆಯುತ್ತಿರುವ ಆಟೋಮೋಟೋಟಿವ್ ಉದ್ಯಮಗಳನ್ನು ಒಳಗೊಂಡೊರಿವ ದೇಶಗಳಲ್ಲಿ ಭಾರತವು ಒಂದು. ಇಲ್ಲಿ ಎಲ್ಲಾ ಐಷರಾಮಿಯಿಂದ ಹಿಡಿದು ಬಜೆಟ್ ಬೆಲೆಗೆ ಎಲ್ಲಾ ರೀತಿಯ ಕಾರುಗಳು ಸಿಗುತ್ತವೆ. ನೀವು ಟರ್ಬೊ-ಪೆಟ್ರೋಲ್ ಎಂಜಿನ್ ಹೊಂದಿರುವ ಕಾಂಪ್ಯಾಕ್ಟ್ SUV ಖರೀದಿಸಲು ಪ್ಲಾನ್ ಮಾಡುತ್ತಿದ್ದರೆ, ಅದು ಕೂಡ ನಿಮ್ಮ ಬಜೆಟ್ 9 ಲಕ್ಷವಾಗಿದ್ದರೆ ಹಲವಾರು ಆಯ್ಕೆಗಳಿವೆ. ಜನಪ್ರಿಯ ನೆಕ್ಸಾನ್‌ನಿಂದ ಕೈಲಾಕ್ ಮತ್ತು ಮ್ಯಾಗ್ನೈಟ್‌ವರೆಗೆ, ಪ್ರತಿಯೊಂದು ರೀತಿಯ ಖರೀದಿದಾರರಿಗೂ ಹೊಂದಿಕೊಳ್ಳುವ ಕಾರುಗಳು ಮಾರಾಟದಲ್ಲಿವೆ. ಟರ್ಬೊ-ಪೆಟ್ರೋಲ್ ಎಂಜಿನ್‌ ಹೊಂದಿರುವ ಕೈಗೆಟುಕುವ ಕಾಂಪ್ಯಾಕ್ಟ್ SUV ಗಳ ಪಟ್ಟಿ ಇಲ್ಲಿದೆ.
Advertisement

Ather: ಜನಪ್ರಿಯ ಎಥರ್ ರಿಜ್ಟಾಗೆ ಫುಲ್ ಡಿಮ್ಯಾಂಡ್.. ಮುಗಿಬಿದ್ದ ಜನ..

ಎಥರ್ ರಿಜ್ಟಾ (Ather Rizta) ಜನಮೆಚ್ಚಿದ ಎಲೆಕ್ಟ್ರಿಕ್ ಸ್ಕೂಟರ್ ಎಂದೇ ಮನೆ ಮಾತಾಗಿದೆ. ಇದಕ್ಕೂ ಸಹ ಗ್ರಾಹಕರು ಮನಸೊತ್ತಿದ್ದಾರೆ. ಈ 2026ರ ಜನವರಿಯಲ್ಲಿಯೂ ಭಾರೀ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಒಟ್ಟು 20,155 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಿಸಲಾಗಿದೆ. 2025ರ ಇದೇ ಅವಧಿಯಲ್ಲಿ 11,978 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಈ ಅಂಕಿ-ಅಂಶವನ್ನು ಲೆಕ್ಕ ಹಾಕಿದಾಗ, ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 68.27% ಪ್ರಗತಿಯಾಗಿದೆ.