Hyundai: 7.89 ಲಕ್ಷ.. ಹೊಸ ಹ್ಯುಂಡೈ ಎಸ್‌ಯುವಿಗೆ ಹೆಚ್ಚಾಯ್ತು..

ನವೆಂಬರ್ 4 ರಂದು ಎರಡನೇ ತಲೆಮಾರಿನ ಹ್ಯುಂಡೈ ವೆನ್ಯೂ (Hyundai Venue) ಕಾರನ್ನು ಬಿಡುಗಡೆಗೊಳಿಸಲಾಗಿತ್ತು. ಇದೊಂದು ಎಸ್‌ಯುವಿಯಾಗಿದೆ. ಗ್ರಾಹಕರು ನಾ ಮುಂದು - ತಾ ಮುಂದು ಎಂಬಂತೆ ಕೊಂಡುಕೊಳ್ಳುತ್ತಿದ್ದಾರೆ. ಈ ಕಾರು ಮಾರಾಟಕ್ಕೆ ಬಂದ 1 ತಿಂಗಳಲ್ಲಿ 11,645 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಿಸಲಾಗಿದೆ. 2024ರ ಇದೇ ಅವಧಿಯಲ್ಲಿ 9,754 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿಸಂಖ್ಯೆಯನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 19% ಪ್ರಗತಿಯಾಗಿದೆ.

ಜನವರಿಯಲ್ಲಿ 500 ಮಾರುತಿ ಎಲೆಕ್ಟ್ರಿಕ್ ಕಾರುಗಳು ಶೋರೂಂಗಳಿಗೆ ರವಾನೆ

ಮಾರುತಿ ಸುಜುಕಿಯ ಮೊದಲ ಎಲೆಕ್ಟ್ರಿಕ್ ಕಾರಾದ ಇ-ವಿಟಾರಾ ಟೆಸ್ಟ್‌ ಡ್ರೈವ್‌ಗಳು ಜನವರಿ 2026 ರಲ್ಲಿ ಆರಂಭವಾಗಲಿದೆ. 500 ನೆಕ್ಸಾ ಶೋ ರೂಂಗಳಿಗೆ ಕಾರುಗಳು ರವಾನೆಯಾಗುತ್ತಿವೆ ಎಂದು ವರದಿಯಾಗಿದೆ. ಈ ತಿಂಗಳು ಡೀಲರ್ ರವಾನೆಗಳು ಪ್ರಾರಂಭವಾಗುತ್ತವೆ, ಡಿಸೆಂಬರ್‌ನಲ್ಲಿ 350 ಔಟ್‌ಲೆಟ್‌ಗಳಿಗೆ ಮತ್ತು ಜನವರಿಯಲ್ಲಿ 150 ಕ್ಕೂ ಹೆಚ್ಚು ಔಟ್‌ಲೆಟ್‌ಗಳಿಗೆ ಆರಂಭಿಕ ಹಂಚಿಕೆ ನಡೆಯಲಿದೆ ಎಂದು ಕಂಪನಿಯ ಮಾರ್ಕೆಟಿಂಗ್ ಮತ್ತು ಮಾರಾಟದ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಪಾರ್ಥೋ ಬ್ಯಾನರ್ಜಿ ಪ್ರಮುಖ ಮಾಧ್ಯಮ ಸಭೆಯಲ್ಲಿ ತಿಳಿಸಿದ್ದಾರೆ.

ಬಡವರ ಬಂಡಿಯಿದು: ಫುಲ್ ಟ್ಯಾಂಕ್ ಮಾಡಿಸಿದ್ರೆ 825 Km ಮೈಲೇಜ್..

ದೇಶದಲ್ಲಿ ಬಜಾಜ್ ಪ್ಲಾಟಿನಾ 100 (Bajaj Platina 100), ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವ ಪ್ರಯಾಣಿಕ ಮೋಟಾರ್‌ಸೈಕಲ್‌ ಆಗಿದೆ. ಇದು ಉತ್ತಮ ಇಂಧನ ದಕ್ಷತೆಗೂ ಹೆಸರುವಾಸಿಯಾಗಿದೆ. ಕಡಿಮೆ ನಿರ್ವಹಣಾ ವೆಚ್ಚವನ್ನು ಹೊಂದಿದೆ. ನೀವು ಹೊಚ್ಚ ಹೊಸ ಬೈಕ್‌ವೊಂದನ್ನು ಖರೀದಿಸಲು ಆಲೋಚಿಸಿದ್ದೀರಾ.. ಹಾಗಾದರೆ ಇದೇ 'ಪ್ಲಾಟಿನಾ 100' ಅತ್ಯುತ್ತಮ ಆಯ್ಕೆಯಾಗಲಿದೆ. ಬನ್ನಿ.. ಈ ಮೋಟಾರ್‌ಸೈಕಲ್‌ನ ಬೆಲೆ ಎಷ್ಟು, ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

ಮಾರುತಿ ಸುಜುಕಿ ಪ್ರತಿಷ್ಠೆ ಈ ಕಾರುಗಳ ಕೈಯಲ್ಲಿ! ಎರ್ಟಿಗಾ EV

ಮಾರುತಿ ಸುಜುಕಿಗೆ 2026 ಬಿಡುವಿಲ್ಲದ ವರ್ಷವಾಗಲಿದೆ, ಮೂಲಗಳ ಪ್ರಕಾರ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ನಾಲ್ಕು ಹೊಸ ಅಥವಾ ನವೀಕರಿಸಿದ ಮಾಡಲ್‌ಗಳು ಸದ್ದಿಲ್ಲದೆ ಹೊರಬರಲು ಸಜ್ಜಾಗುತ್ತಿವೆ. ಹೌದು, ಮಾರುತಿ ಸುಜುಕಿ 2026 ರಲ್ಲಿ ನಾಲ್ಕು ಪ್ರಮುಖ ಕಾರುಗಳನ್ನು ಬಿಡುಗಡೆ ಮಾಡಲು ಯೋಜಿಸಿದೆ, ಇದರಲ್ಲಿ ಎಲೆಕ್ಟ್ರಿಕ್ ವಾಹನಗಳು ಮತ್ತು ಪರ್ಯಾಯ ಇಂಧನ ಚಾಲಿತ ಕಾರುಗಳಿಗೆ ಒತ್ತು ನೀಡಲಾಗಿದೆ. ಇವುಗಳಲ್ಲಿ ಇ ವಿಟಾರಾ, ಫ್ರಾಂಕ್ಸ್ ಫ್ಲೆಕ್ಸ್ ಫ್ಯೂಯಲ್, ಎಲೆಕ್ಟ್ರಿಕ್ ಎಂಪಿವಿ ಮತ್ತು ಬ್ರೆಝಾ ಫೇಸ್‌ಲಿಫ್ಟ್ ಸೇರಿವೆ.
Advertisement

Tata: ಹೊಸ ಟಾಟಾ ಸಿಯೆರಾ ಕಾರಿನ ಟಾಪ್ ಎಂಡ್ ವೇರಿಯೆಂಟ್‌ಗಳ..

ಇತ್ತೀಚೆಗೆ ಟಾಟಾ ಸಿಯೆರಾ (Tata Sierra) ಕಾರನ್ನು ಬಿಡುಗಡೆಗೊಳಿಸಲಾಗಿತ್ತು. ಇದೊಂದು ಎಸ್‌ಯುವಿಯಾಗಿದೆ. ಕೆಲವೇ ದಿನಗಳ ಹಿಂದೆ, ಈ ಕಾರಿನ ಸ್ಮಾರ್ಟ್ ಪ್ಲಸ್, ಪ್ಯೂರ್, ಪ್ಯೂರ್ ಪ್ಲಸ್, ಅಡ್ವೆಂಚರ್ ಹಾಗೂ ಅಡ್ವೆಂಚರ್ ಪ್ಲಸ್ ರೂಪಾಂತರಗಳ (ವೇರಿಯೆಂಟ್) ಬೆಲೆಯನ್ನು ಪ್ರಕಟಿಸಲಾಗಿತ್ತು. ಇವುಗಳು ರೂ.1.49 ಲಕ್ಷದಿಂದ ರೂ.17.19 ಲಕ್ಷ ದರವನ್ನು ಪಡೆದಿವೆ. ಸದ್ಯ ಗರಿಷ್ಠ ಶ್ರೇಣಿ ರೂಪಾಂತರಗಳಾದ (ಟಾಪ್ ಎಂಡ್ ವೇರಿಯೆಂಟ್) ಅಕಾಂಪ್ಲಿಶ್ಡ್ ಹಾಗೂ ಅಕಾಂಪ್ಲಿಶ್ಡ್ ಪ್ಲಸ್ ಎಂಬ ರೂಪಾಂತರಗಳ ಬೆಲೆಯನ್ನು ಘೋಷಣೆ ಮಾಡಲಾಗಿದೆ.

ನಾಳೆ ಹೊಸ ಮಹೀಂದ್ರಾ XUV 7XO ಎಸ್‌ಯುವಿಯ ಪ್ರೀ-ಬುಕಿಂಗ್ ಪ್ರಾರಂಭ

ಮಹೀಂದ್ರಾ XUV 7XO ಭಾರತೀಯ ಪ್ರಯಾಣಿಕ ವಾಹನ ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಅಂದಹಾಗೆ ಈ ಕಾರು ಮಹೀಂದ್ರಾ ಕಂಪನಿಯ ಪ್ರಮುಖ ಎಸ್‌ಯುವಿಯಾಗಿರುವ XUV700 ಆಗಿದ್ದು, ಇದನ್ನೇ XUV 7XO ಎಂದು ನಾಮಕರಣ ಮಾಡಲಾಗಿದೆ. ಈ ಕಾರನ್ನು ಜನವರಿ 5 ರಂದು ಕಂಪನಿ ಬಿಡುಗಡೆ ಮಾಡಲು ಸಜ್ಜಾಗಿದ್ದು, ಅದಕ್ಕೂ ಮುನ್ನ XUV 7XO ಗಾಗಿ ಪ್ರೀ-ಬುಕಿಂಗ್‌ಗಳು ನಾಳೆಯಿಂದ (ಡಿಸೆಂಬರ್ 15) ಪ್ರಾರಂಭವಾಗಲಿವೆ. ನೀವು ಮುಂಬರುವ ಮಹೀಂದ್ರಾ XUV 7XO ಎಸ್‌ಯುವಿ ಖರೀದಿಸಲು ಪ್ಲಾನ್ ಇದ್ದರೆ, ಈ SUV ಬಗ್ಗೆ ಕೆಲವು ಪ್ರಮುಖ ಸಂಗತಿಗಳು ಇಲ್ಲಿವೆ.

33 ಕಿ.ಮೀ ಮೈಲೇಜ್.. ಕೇವಲ 3.50 ಲಕ್ಷ, ಆದರೂ ಈ ಜನಪ್ರಿಯ ಮಾರುತಿ..

ಮಾರುತಿ ಸುಜುಕಿ ಎಸ್-ಪ್ರೆಸ್ಸೊ (Maruti Suzuki S-Presso) ಪ್ರಮುಖ ಹ್ಯಾಚ್‌ಬ್ಯಾಕ್ ಆಗಿದೆ. ಇದು ನೋಡಲು ತುಂಬಾ ಸರಳವಾಗಿದ್ದು, ನಾನಾ ಬಗೆಯ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಆದರೂ ಈ ಕಾರಿನ ಮಾರಾಟ ಸಂಖ್ಯೆ ದಿನದಿಂದ ದಿನಕ್ಕೆ ಕುಸಿತವಾಗುತ್ತಿದೆ. ಈ ನವೆಂಬರ್ ತಿಂಗಳಲ್ಲೂ ಅದು ಮುಂದಿವರಿದಿದೆ. ಒಟ್ಟು 1,747 ಯುನಿಟ್‌ಗಳನ್ನು ಗ್ರಾಹಕರಿಗೆ ವಿತರಿಸಲಾಗಿದೆ. 2024ರ ಇದೇ ಅವಧಿಯಲ್ಲಿ 2,283 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ - ಸಂಖ್ಯೆಯಲ್ಲಿ ಲೆಕ್ಕಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ -23.48 ಕುಸಿತವಾಗಿದೆ.

4680 ಭಾರತ್ ಸೆಲ್ ವಾಹನಗಳ ಹೈಪರ್ ಡೆಲಿವರಿ ಪ್ರಾರಂಭಿಸಿದ ಓಲಾ

ಓಲಾ ಎಲೆಕ್ಟ್ರಿಕ್ ಇಂದು ಹೈಪರ್ ಡೆಲಿವರಿ ಆರಂಭಿಸಿರುವುದಾಗಿ ಘೋಷಿಸಿದ್ದು, ಬೆಂಗಳೂರಿನಲ್ಲಿ ತನ್ನ 4680 ಭಾರತ್ ಸೆಲ್ ಚಾಲಿತ ವಾಹನಗಳಿಗೆ ಒಂದೇ ದಿನದ ನೋಂದಣಿ ಮತ್ತು ವಾಹನಗಳ ವಿತರಣೆಯನ್ನು ನೀಡುತ್ತಿದೆ. ಈ ಆಫರ್ ಪಾರದರ್ಶಕ, ಅನುಕೂಲಕರ ಮತ್ತು ಗ್ರಾಹಕ-ಮೊದಲ ಸೇವಾ ಅನುಭವವನ್ನು ನೀಡುವ ಕಂಪನಿಯ ಹೈಪರ್ ಸರ್ವಿಸ್ ಉಪಕ್ರಮದ ಒಂದು ಭಾಗವಾಗಿದೆ. ಹೈಪರ್ ಡೆಲಿವರಿ ಅಡಿಯಲ್ಲಿ ಗ್ರಾಹಕರು ಈಗ ತಮ್ಮ ಖರೀದಿಯನ್ನು ಆನ್‌ಲೈನ್‌ನಲ್ಲಿ ಅಥವಾ ಓಲಾ ಎಲೆಕ್ಟ್ರಿಕ್ ಅಂಗಡಿಯಲ್ಲಿ ಮಾಡಬಹುದು. ಅದೇ ದಿನ ತಮ್ಮ ಸಂಪೂರ್ಣ ನೋಂದಾಯಿತ ವಾಹನಗಳಲ್ಲಿ ಮನೆಗೆ ಹೋಗಬಹುದು ಎಂದು ಓಲಾ ತಿಳಿಸಿದೆ.
Advertisement

ಮೊನ್ನೆಯಷ್ಟೆ ಬಿಡುಗಡೆಯಾದ ಹೊಸ ಮಿನಿ ಕನ್ವರ್ಟಿಬಲ್ ಕಾರಿನ ವಿಶೇಷತೆ

ಹೊಸ ಮಿನಿ (MINI) ಕನ್ವರ್ಟಿಬಲ್ ಕಾರನ್ನು ಇತ್ತೀಚೆಗಷ್ಟೆ (ಡಿಸೆಂಬರ್ 11, 2025) ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ, ಇದರ ಎಕ್ಸ್-ಶೋರೂಂ ಬೆಲೆ ರೂ.58.50 ಲಕ್ಷವಿದೆ. ಇದು ಸಂಪೂರ್ಣವಾಗಿ ಬಿಲ್ಟ್-ಅಪ್ ಯೂನಿಟ್ (CBU) ಆಗಿ ಲಭ್ಯವಿರಲಿದ್ದು, ಇತ್ತೀಚಿನ ಮಿನಿ ಟ್ವಿನ್‌ಪವರ್ ಟರ್ಬೊ ತಂತ್ರಜ್ಞಾನದಿಂದ ಚಾಲಿತವಾಗ ಪೆಟ್ರೋಲ್ ಎಂಜಿನ್ ಅನ್ನು ಒಳಗೊಂಡಿದೆ. ಹೊಸ ಮಿನಿ ಕನ್ವರ್ಟಿಬಲ್‌ನ ಬಾಹ್ಯ ವಿನ್ಯಾಸವು ಕ್ಲಾಸಿಕ್ ಮಿನಿನಂತೆಯೇ ಇರುತ್ತದೆ. ಈ ಕಾರಿನ ಬಗ್ಗೆ ಪ್ರಮುಖ ವಿವರಗಳು ಇಲ್ಲಿವೆ.

ಹ್ಯುಂಡೈ ಬ್ರಹ್ಮಾಸ್ತ್ರವಿದು... ರಣ ಹದ್ದಿನಂತಹ ಎಸ್‌ಯುವಿ

ಭಾರತೀಯ ಕಾರು ಮಾರುಕಟ್ಟೆಯು ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುತ್ತಿದೆ, ಜಗತ್ತಿನ ಬಹುತೇಕ ಬ್ರಾಂಡ್‌ಗಳು ಭಾರತದಲ್ಲಿ ಉತ್ತಮ ಲಾಭವನ್ನು ಗಳಿಸುತ್ತಿವೆ. ದೇಶೀಯ ಬ್ರಾಂಡ್‌ಗಳಾದ ಟಾಟಾ, ಮಹೀಂದ್ರಾ ಬ್ರಾಂಡ್‌ಗಳಿಗೆ ಸಮನಾಗಿ ವಿದೇಶಿ ಬ್ರಾಂಡ್‌ಗಳ ಹ್ಯುಂಡೈ, ಕಿಯಾದಂತಹ ಕಂಪನಿಗಳು ಭಾರತದಲ್ಲಿ ಹೆಚ್ಚಿನ ಕಾರುಗಳನ್ನು ಮಾರಾಟ ಮಾಡುವ ಮೂಲಕ ಮುನ್ನುಗ್ಗುತ್ತಿವೆ. ಹ್ಯುಂಡೈಗೆ ಮೊದಲಿನಿಂದಲೂ ಬ್ರಹ್ಮಾಸ್ತ್ರದಂತೆ ಕೈ ಹಿಡಿದಿರುವ ಮಿಡ್‌ಸೈಜ್ ಎಸ್‌ಯುವಿ 'ಕ್ರೆಟಾ' ನವೆಂಬರ್‌ನಲ್ಲಿ ದಾಖಲೆಯ ಮಾರಾಟವನ್ನು ಕಂಡಿದೆ. ದೇಶದಲ್ಲಿ ಅತ್ಯುತ್ತಮ ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

ಹೊಸ ಟಾಟಾ ಸಿಯೆರಾ VS ಕಿಯಾ ಸೆಲ್ಟೋಸ್ 2026: ಯಾವುದು ಬೆಸ್ಟ್?

ಭಾರತದಲ್ಲಿ ಮಿಡ್‌ಸೈಜ್ ಎಸ್‌ಯುವಿಗಳ ಅಬ್ಬರ ಜೋರಾಗಿದೆ, ಇತ್ತೀಚೆಗೆ ಟಾಟಾ ಮೋಟಾರ್ಸ್ ಸಿಯೆರಾ ಎಸ್‌ಯುವಿ ಬಿಡುಗಡೆ ಮಾಡಿದ ಬೆನ್ನಲ್ಲೇ ಕಿಯಾ ಇಂಡಿಯಾ ಹೊಸ ತಲೆಮಾರಿನ ಕಿಯಾ ಸೆಲ್ಟೋಸ್ ಅನ್ನು ಅನಾವರಣಗೊಳಿಸಿದೆ. ಹೊಸ ಸೆಲ್ಟೋಸ್ ರೂ.25,000 ಟೋಕನ್ ಮೊತ್ತಕ್ಕೆ ಬುಕಿಂಗ್ ಆರಂಭವಾಗಿದ್ದು, ಜನವರಿ 2, 2026 ರಂದು ಬೆಲೆ ಘೋಷಣೆಯಾಗಲಿದೆ. ನೀವು ಶೀಘ್ರದಲ್ಲೇ SUV ಖರೀದಿಸಲು ಯೋಜಿಸುತ್ತಿದ್ದರೆ, ಈ ಎರಡು ಮಾಡಲ್‌ಗಳನ್ನು ಅನ್ವೇಷಿಸುತ್ತಿದ್ದರೆ, ಹೊಸ ತಲೆಮಾರಿನ 2026 ಕಿಯಾ ಸೆಲ್ಟೋಸ್ ಮತ್ತು ಟಾಟಾ ಸಿಯೆರಾದ ಪ್ರಮುಖ ವಿಶೇಷಣಗಳ ಹೋಲಿಕೆ ಇಲ್ಲಿದೆ.

TATA: 24 Km ಮೈಲೇಜ್.. 7 ಲಕ್ಷ.. ಈ ಟಾಟಾ SUVಗೆ ಭಾರೀ ರಿಯಾಯಿತಿ!

ಟಾಟಾ ನೆಕ್ಸಾನ್ (Tata Nexon) ನಂಬರ್ 1 ಕಾಂಪ್ಯಾಕ್ಟ್ ಎಸ್‌ಯುವಿಯಾಗಿದೆ. ಪ್ರತಿ ತಿಂಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಈ ನವೆಂಬರ್ ತಿಂಗಳಲ್ಲೂ ಅದು ಮುಂದುವರಿದಿದೆ. ಒಟ್ಟು 22,434 ಯುನಿಟ್‌ಗಳನ್ನು ಗ್ರಾಹಕರಿಗೆ ವಿತರಿಸಲಾಗಿದೆ. 2024ರ ಇದೇ ಅವಧಿಯಲ್ಲಿ 15,329 ಯುನಿಟ್‌ಗಳನ್ನು ಮಾರಲಾಗಿದೆ. ಈ ಅಂಕಿ - ಸಂಖ್ಯೆಯನ್ನು ಲೆಕ್ಕಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ (YoY) ಶೇಕಡ 46% ಪ್ರಗತಿಯಾಗಿದೆ.
Advertisement

ಬಡವರ ಕಾರಿದು: 34 ಕಿ.ಮೀ ಮೈಲೇಜ್.. 3.70 ಲಕ್ಷ, ಪುಟ್ಟ ಮಾರುತಿ..

ಮಾರುತಿ ಸುಜುಕಿ ಆಲ್ಟೊ ಕೆ10 (Maruti Suzuki Alto K10) ಸಣ್ಣ ಹ್ಯಾಚ್‌ಬ್ಯಾಕ್ ಆಗಿದ್ದು, ಮಧ್ಯಮ ವರ್ಗದ ಜನರ ನೆಚ್ಚಿನ ಕಾರಾಗಿ ಹೊರಹೊಮ್ಮಿದೆ. ಪ್ರತಿ ತಿಂಗಳು ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ಅದು ಈ ನವೆಂಬರ್ ತಿಂಗಳಲ್ಲೂ ಮುಂದುವರಿದಿದೆ. ಒಟ್ಟು 10,600 ಯುನಿಟ್‌ಗಳನ್ನು ಗ್ರಾಹಕರಿಗೆ ವಿತರಣೆ ಮಾಡಲಾಗಿದೆ. 2024ರ ಇದೇ ಅವಧಿಯಲ್ಲಿ 7,467 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿಸಂಖ್ಯೆಯನ್ನು ಲೆಕ್ಕಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 41.96% ಬೆಳವಣಿಗೆಯಾಗಿದೆ.

ಅಣ್ತಮ್ಮಸ್: ಇವೇ 5 ಸ್ಟೈಲಿಶ್ ಬೈಕ್‌ಗಳು.. 1.ಲೀ ಪೆಟ್ರೋಲ್..

ದುಡಿಯುವ ವಯಸ್ಸಿಗೆ ಬಂದ ಗಂಡು ಹೈಕಳಿಗೆ ಸ್ಟೈಲಿಶ್ ಬೈಕ್‌ಗಳ ಮೇಲೆ ಸ್ವಲ್ಪ ಮಟ್ಟಿಗೆ ಹೆಚ್ಚಿನ ಕ್ರೇಜ್ ಇರುತ್ತದೆ. ಆದರೆ, ಯಾವ ಮೋಟಾರ್‌ಸೈಕಲ್‌ ತೆಗೆದುಕೊಳ್ಳಬೇಕೆಂದು ಥಿಂಕ್ ಮಾಡುತ್ತಿರುತ್ತಾರೆ. ಅಂತಹವರಿಗೆ ರಾಯಲ್ ಎನ್‌ಫೀಲ್ಡ್ ಹಂಟರ್ 350, ಯಮಹಾ ಆರ್15 ವಿ4, ಟಿವಿಎಸ್ ಅಪಾಚೆ ಆರ್‌ಟಿಆರ್ 160, ಹಾರ್ಲೆ-ಡೇವಿಡ್ಸನ್ ಎಕ್ಸ್440 ಹಾಗೂ ಕೆಟಿಎಂ 200 ಡ್ಯೂಕ್‌ಗಳು ಬೆಸ್ಟ್ ಚಾಯ್ಸ್ ಆಗಲಿವೆ. ಬನ್ನಿ.. ಇವುಗಳ ಬೆಲೆ ಎಷ್ಟು, ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಕ್ಷಿಪ್ತವಾದ ವಿವರಗಳನ್ನು ತಿಳಿಯೋಣ.

Toyota: 550 ಕಿ.ಮೀ ಓಡುತ್ತೆ! ಮುಂಬರುವ ಟೊಯೊಟಾದ ಮೊದಲ ಇ-SUVಗೆ 3..

ಟೊಯೊಟಾ ಅರ್ಬನ್ ಕ್ರೂಸರ್ ಬಿಇವಿ (Toyota Urban Cruiser BEV), ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಇದೊಂದು ಎಲೆಕ್ಟ್ರಿಕ್ ಎಸ್‌ಯುವಿಯಾಗಿದೆ. 2026ರ ಫೆಬ್ರವರಿಯಲ್ಲಿ ಅದ್ದೂರಿಯಾಗಿಯೂ ಮಾರಾಟಕ್ಕೆ ಬರುವ ನಿರೀಕ್ಷೆಯಿದೆ. ರೂ.18 ಲಕ್ಷದಿಂದ ರೂ.25 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ. ಈಗಾಗಲೇ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲೂ ಪ್ರದರ್ಶನಗೊಂಡಿದೆ. ಅತ್ಯುತ್ತಮವಾದ ವಿನ್ಯಾಸವನ್ನು ಪಡೆದಿದೆ. ಉತ್ತಮವಾದ ಬಣ್ಣಗಳೊಂದಿಗೂ ದೊರೆಯಬಹುದು. 5 ಆಸನಗಳನ್ನು ಒಳಗೊಂಡಿರಲಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಸಂಚಾರ ಮಾಡಬಹುದು. ಹೆಚ್ಚಿನ ಲಗೇಜ್ ತೆಗೆದುಕೊಂಡು ಹೋಗಲು 400 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಹೊಂದಿರವ ಸಾಧ್ಯತೆಯಿದೆ.

Hero Vida: ನಿನ್ನೆಯಷ್ಟೇ ಬಿಡುಗಡೆ.. ಬರೀ 69,990 ಬೆಲೆ.. ನೂತನ..

ಹೀರೋ ಮೋಟೋಕಾರ್ಪ್‌ (Hero MotoCorp) ನಂಬಿಕಾರ್ಹ ದ್ವಿಚಕ್ರ ವಾಹನ (Two Wheeler) ತಯಾರಕ ಕಂಪನಿಯಾಗಿದೆ. 'ವಿಡಾ' ಎಲೆಕ್ಟ್ರಿಕ್ ಮೊಬಿಲಿಟಿ ಬ್ರ್ಯಾಂಡ್‌ನಲ್ಲಿ ವಿಡಾ ವಿ2 ಹಾಗೂ 'ವಿಡಾ ವಿಎಕ್ಸ್2 ಹೆಸರಿನ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟಗೊಳಿಸುತ್ತಿದೆ. ಶುಕ್ರವಾರವಷ್ಟೇ ಕಂಪನಿಯು ನೂತನ 'ಡರ್ಟ್.ಇ ಕೆ3' ಹೆಸರಿನ ಇ-ಬೈಕ್‌ನ್ನು ಪರಿಚಯಿಸಿದೆ. ಇದು ನೋಡಲು ತುಂಬಾ ಚೆನ್ನಾಗಿದ್ದು, ಹಲವು ಹೊಸತನಗಳಿಗೂ ಸಾಕ್ಷಿಯಾಗಿದೆ. ಬನ್ನಿ, ಈ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಪ್ರಮುಖಾಂಶಗಳು ಏನೆಂಬುದನ್ನು ತಿಳಿಯೋಣ.
Advertisement

ತುಸು ದುಬಾರಿಯಾದರು ಕಣ್ಮುಚ್ಚಿ ಖರೀದಿಸಬಹುದಾದ ಬೆಸ್ಟ್ 7-ಸೀಟರ್ ಕಾರು

ಸದ್ಯಕ್ಕೆ ಭಾರತೀಯ ಮಾರುಕಟ್ಟೆಯಲ್ಲಿ ಸಾಲು ಸಾಲು 7-ಸೀಟರ್ ಕಾರುಗಳು ಖರೀದಿಗೆ ಖರೀದಿಗೆ ಲಭ್ಯವಿದೆ. ಹೆಚ್ಚಿನ ಲಗೇಜ್ ಕೊಂಡೊಯ್ಯಲು ಮತ್ತು ಕುಟುಂಬ ಸದಸ್ಯರು ಸೇರಿದಂತೆ ಎಲ್ಲರಿಗೂ ಆರಾಮವಾಗಿ ಹೊಂದಿಕೊಳ್ಳುವ ದೊಡ್ಡ ಕಾರನ್ನು ಹುಡುಕುವುದು ಸ್ವಲ್ಪ ಗೊಂದಲಮಯವಾಗಬಹುದು. ಹಾಗಾಗಿ ನಿಮಗೆ ತಂತ್ರಜ್ಞಾನದ ಬಗ್ಗೆ ಅರಿವಿದ್ದು, ಆರಾಮದಾಯಕವಾದ 7 - ಸೀಟರ್ ಕಾರನ್ನು ಹುಡುಕುತ್ತಿದ್ದರೆ 20 ಲಕ್ಷ ರೂ.ಗಿಂತ ಕಡಿಮೆ ಬೆಲೆಯಲ್ಲಿ ನೀವು ಖರೀದಿಸಬಹುದಾದ 5 ಆಯ್ಕೆಗಳು ಇಲ್ಲಿವೆ.

Toyota: ಕಲ್ಲು ಬಂಡೆಯಂತಹ ಕಾರಿದು.. 28 Km ಮೈಲೇಜ್, 10.95 ಲಕ್ಷ..

ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ (Toyota Urban Cruiser Hyryder) ಪ್ರಮುಖ ಎಸ್‌ಯುವಿಯಾಗಿ ಹೊರ ಹೊಮ್ಮಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಪ್ರತಿ ತಿಂಗಳು ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದ್ದು, ಅದು ಈ ನವೆಂಬರ್ ತಿಂಗಳಲ್ಲೂ ಮುಂದಿವರಿದಿದೆ. ಒಟ್ಟು 7,393 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಿಸಲಾಗಿದೆ. 2024ರ ಇದೇ ಅವಧಿಯಲ್ಲಿ 4,857 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿಸಂಖ್ಯೆಯನ್ನು ಲೆಕ್ಕಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ (YoY) ಶೇಕಡ 52% ಪ್ರಗತಿಯಾಯಾಗಿದೆ.

ಇದೇ ಡಿಸೆಂಬರ್‌ನಲ್ಲಿ ಒಂದು ಜನವರಿಯಲ್ಲಿ ಎರಡು ಎಸ್‌ಯುವಿಗಳು ಬಿಡುಗಡೆ

ನವೀಕರಿಸಿದ ವೈಶಿಷ್ಟ್ಯಗಳು ಮತ್ತು ಪವರ್‌ಟ್ರೇನ್‌ಗಳಿಗೆ ಹೆಚ್ಚುತ್ತಿರುವ ಬೇಡಿಕೆಯ ನಡುವೆ ಸ್ಪರ್ಧಾತ್ಮಕ ಮಧ್ಯಮ ಗಾತ್ರದ ಎಸ್‌ಯುವಿ ವಿಭಾಗವು ಹೊಸ ಕಾರುಗಳ ಬಿಡುಗಡೆಗಳೊಂದಿಗೆ ಮುನ್ನುಗ್ಗುತ್ತಿದೆ. ಟಾಟಾ ಸಿಯೆರಾ, ಹೊಸ ತಲೆಮಾರಿನ ಕಿಯಾ ಸೆಲ್ಟೋಸ್, ಮಹೀಂದ್ರಾ XEV 9S ಈಗಾಗಲೇ ದೇಶದಲ್ಲಿ ಪಾದಾರ್ಪಣೆ ಮಾಡಿದ್ದರೂ, ಮುಂದಿನ ಕೆಲವು ವಾರಗಳಲ್ಲಿ ಇನ್ನೂ ಕೆಲವು ಹೊಸ ಕಾರುಗಳು ಎಂಟ್ರಿಕೊಡಲಿವೆ. ಜನವರಿ 2026 ರ ವೇಳೆಗೆ ಭಾರತೀಯ ಮಾರುಕಟ್ಟೆಗೆ ಬರಲಿರುವ ಕೆಲವು ರೋಮಾಂಚಕಾರಿ ಕಾರುಗಳಲ್ಲಿ MG ಹೆಕ್ಟರ್ ಫೇಸ್‌ಲಿಫ್ಟ್, ಮಹೀಂದ್ರಾ XUV 7XO ಮತ್ತು ರೆನಾಲ್ಟ್ ಡಸ್ಟರ್ ಸೇರಿವೆ.

Vida: ಸದ್ದಿಲ್ಲದೇ ಹೊಸ ಹೀರೋ ವಿಡಾ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಹೀರೋ ಮೋಟೋಕಾರ್ಪ್‌ನ ಎಲೆಕ್ಟ್ರಿಕ್ ಮೊಬಿಲಿಟಿ ಬ್ರ್ಯಾಂಡ್ ಆಗಿ 'ವಿಡಾ' ಜನಪ್ರಿಯತೆ ಗಳಿಸಿದೆ. ದೇಶೀಯ ಮಾರುಕಟ್ಟೆಯಲ್ಲಿಂದು ಹೊಚ್ಚ ಹೊಸ 'ಡರ್ಟ್.ಇ ಕೆ3' ಹೆಸರಿನ ಇ-ಬೈಕ್‌ನ್ನು ಬಿಡುಗಡೆಗೊಳಿಸಿದೆ. ವಿಶೇಷವಾಗಿ ಈ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ನ್ನು 4 ರಿಂದ 10 ವರ್ಷದ ವಯೋಮಾನದ ಮಕ್ಕಳಿಗಾಗಿ ಸಿದ್ದಪಡಿಸಲಾಗಿದೆ. ಅವರು, ಡರ್ಟ್‌ ರೇಸ್‌ ಅಥವಾ ಆಫ್-ರೋಡ್ ಚಾಲನೆಯನ್ನು ಕಲಿಯಲು ಬಳಕೆ ಮಾಡಲು ಸಾಧ್ಯವಾಗಲಿದೆ. ಬನ್ನಿ, ಈ ಬೈಕ್‌ನ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರವನ್ನು ತಿಳಿಯೋಣ.
Advertisement

ಭಾರತದಲ್ಲಿ ಹೊಸ MINI ಕನ್ವರ್ಟಿಬಲ್ ಬಿಡುಗಡೆ: ಬೆಲೆ ಅರ್ಧ ಕೋಟಿ!

ಹೊಸ MINI ಕನ್ವರ್ಟಿಬಲ್ ಅನ್ನು ಇಂದು ಭಾರತದಲ್ಲಿ ಬಿಡುಗಡೆ ಮಾಡಲಾಯಿತು. ಈ ಕಾರು ದೇಶದಲ್ಲಿ ಸಂಪೂರ್ಣವಾಗಿ ಬಿಲ್ಟ್-ಅಪ್ ಯೂನಿಟ್ (CBU) ಆಗಿ ಲಭ್ಯವಿರಲಿದ್ದು, MINI ಇಂಡಿಯಾದ ಎಲ್ಲಾ ಅಧಿಕೃತ ಡೀಲರ್‌ಶಿಪ್‌ಗಳಲ್ಲಿ ಬುಕ್ ಮಾಡಬಹುದು. ಡೆಲಿವರಿಗಳು ತಕ್ಷಣವೇ ಪ್ರಾರಂಭವಾಗುತ್ತವೆ. ಎಕ್ಸ್-ಶೋರೂಂ ಬೆಲೆಯು ರೂ. 58,50,000 ಇದೆ, ಬ್ರಿಟಿಷ್ ರೇಸಿಂಗ್ ಗ್ರೀನ್, ಚಿಲ್ಲಿ ರೆಡ್, ಸನ್ನಿ ಸೈಡ್ ಯೆಲ್ಲೋ ಮತ್ತು ಓಷನ್ ವೇವ್ ಗ್ರೀನ್ ಎಂಬ ನಾಲ್ಕು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ. ಇದಕ್ಕೆ ಹೊಂದಿಕೆಯಾಗುವಂತೆ, ಮಿರರ್ ಕ್ಯಾಪ್‌ಗಳು ಬ್ಲಾಕ್ ಮತ್ತು ಬಿಳಿ ಸಂಯೋಜನೆಯಲ್ಲಿ ಲಭ್ಯವಿದೆ.

7-ಸೀಟರ್! ಬಿಡುಗಡೆಗೂ ಮೊದಲೇ ಡಿ.15 ರಿಂದ ಹೊಸ ಮಹೀಂದ್ರಾ XUV 7XOಗೆ..

ಮಹೀಂದ್ರಾ ಎಕ್ಸ್‌ಯುವಿ700 (Mahindra XUV700) ಪ್ರಮುಖ ಎಸ್‍ಯುವಿಯಾಗಿ ಹೊರಹೊಮ್ಮಿದೆ. ಪ್ರತಿ ತಿಂಗಳು ಉತ್ತಮ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಗ್ರಾಹಕರು ಕೂಡ ಇಷ್ಟಪಟ್ಟು ತೆಗೆದುಕೊಳ್ಳುತ್ತಿದ್ದಾರೆ. ಈ ಕಾರಿನ ಫೇಸ್‌ಲಿಫ್ಟ್ ಮಾಡೆಲ್‌ನ್ನು 'ಎಕ್ಸ್‌ಯುವಿ 7ಎಕ್ಸ್ಒ' ಹೆಸರಿನಲ್ಲಿ ಪರಿಚಸಲು ಕಂಪನಿಯು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ನೂತನ ಎಸ್‍ಯುವಿಯನ್ನು ಜನವರಿ 5 ರಂದು ಅದ್ದೂರಿಯಾಗಿಯೂ ಮಾರಾಟಕ್ಕೆ ತರಲಿದೆ.

TATA: ಟಾಟಾದಿಂದ 1.85 ಲಕ್ಷವರೆಗೆ ರಿಯಾಯಿತಿ ಘೋಷಣೆ..

ದೇಶದ ಅತಿ ದೊಡ್ಡ ವಾಹನ ತಯಾರಕ ಕಂಪನಿಯಾಗಿ ಟಾಟಾ ಮೋಟಾರ್ಸ್ (Tata Motors) ಹೊರಹೊಮ್ಮಿದೆ. ಟಿಯಾಗೊ, ಟಿಗೂರ್, ಆಲ್ಟ್ರೋಜ್, ಪಂಚ್, ನೆಕ್ಸಾನ್‌, ಕರ್ವ್, ಹ್ಯಾರಿಯರ್ ಹಾಗೂ ಸಫಾರಿ ಕಾರುಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಇವುಗಳನ್ನು ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಕೊಂಡುಕೊಳ್ಳುತ್ತಿದ್ದಾರೆ. ಸದ್ಯ ಕಂಪನಿಯು ಮತ್ತಷ್ಟು ಜನರಿಗೆ ಹತ್ತಿರವಾಗಲು ಬಯಸಿದೆ. ಅದಕ್ಕಾಗಿ ಈ ಡಿಸೆಂಬರ್‌ನಲ್ಲಿ ಎಲ್ಲ ಕಾರುಗಳ ಖರೀದಿ ಮೇಲೆ ದೊಡ್ಡ ಮಟ್ಟದಲ್ಲಿ ಹಣಕಾಸಿನ ಪ್ರಯೋಜನಗಳನ್ನು ಘೋಷಣೆ ಮಾಡಿದೆ.

2026 ಕಿಯಾ ಸೆಲ್ಟೋಸ್ VS ಹುಂಡೈ ಕ್ರೆಟಾ: ಯಾವುದು ಬೆಸ್ಟ್?

2026 ಕಿಯಾ ಸೆಲ್ಟೋಸ್ (Kia Seltos 2026) ದೊಡ್ಡ ಘಾತ್ರ ಮತ್ತು ಸಂಸ್ಕರಿಸಿದ ವೈಶಿಷ್ಟ್ಯಗಳನ್ನು ಪಡೆದುಕೊಂಡು ಬಿಡುಗಡೆಯಾಗಲು ಸಜ್ಜಾಗಿದೆ. ಮೊನ್ನೆಯಷ್ಟೆ ಹೊಸ ಪೀಳಿಗೆಯ 2026 ಕಿಯಾ ಸೆಲ್ಟೋಸ್ ಅನ್ನು ಅನಾವರಣಗೊಳಿಸಲಾಗಿದೆ. ಇದು ಭಾರತದ ಕಾಂಪ್ಯಾಕ್ಟ್ SUV ವಿಭಾಗದಲ್ಲಿ ಪ್ರಸ್ತುತ ಹುಂಡೈ ಕ್ರೆಟಾ (hyundai Creta) ವಿರುದ್ಧ ಬಲವಾಗಿ ಪೈಪೋಟಿ ನೀಡಲಿದೆ. ಎರಡೂ ಒಂದೇ ರೀತಿಯ ಪವರ್‌ಟ್ರೇನ್‌ಗಳನ್ನು ಹೊಂದಿವೆ, ಆದರೆ ಸುರಕ್ಷತಾ ತಂತ್ರಜ್ಞಾನ ಮತ್ತು ಪ್ರೀಮಿಯಂ ಫೀಚರ್ಸ್ ವಿಷಯದಲ್ಲಿ ಭಿನ್ನವಾಗಿವೆ.
Advertisement

ಅಬ್ಬರಿಸಿದ ಮಾರುತಿ ಕಾರು.. ಹೆಚ್ಚಾಯ್ತು ಕ್ರೇಜ್, ಮುಗಿಬಿದ್ದ..

ಮಾರುತಿ ಸುಜುಕಿ ವ್ಯಾಗನ್ಆರ್ (Maruti Suzuki WagonR) ಪ್ರಮುಖ ಹ್ಯಾಚ್‌ಬ್ಯಾಕ್ ಎಂದೇ ಹೆಸರುವಾಸಿಯಾಗಿದೆ. ದಶಕಗಳಿಂದ ಅಭಿಮಾನಿ ಬಳಗವನ್ನು ಹೊಂದಿದೆ. ಈಗಲೂ ಉತ್ತಮ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಈ ನವೆಂಬರ್ ತಿಂಗಳು 'ವ್ಯಾಗನ್ಆರ್' ಮಾರಾಟವು ತುಂಬಾ ಚೆನ್ನಾಗಿದೆ. ಒಟ್ಟು 14,619 ಯುನಿಟ್‌ಗಳನ್ನು ವಿತರಣೆ ಮಾಡಲಾಗಿದೆ. 2024ರ ಇದೇ ಅವಧಿಯಲ್ಲಿ 13,982 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿಅಂಶವನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 5% ಅಧಿಕಗೊಂಡಿದೆ.