ಕಡಿಮೆ ಬೆಲೆಯ ಹೊಸ 7 - ಸೀಟರ್ ಶೀಘ್ರದಲ್ಲೆ ಬಿಡುಗಡೆ: ಜೋರು ಪರೀಕ್ಷೆ

ನಿಸ್ಸಾನ್ ಇಂಡಿಯಾ ತನ್ನ ಹೊಸ ಸಬ್-4 ಮೀಟರ್ MPV ಅನ್ನು ಡಿಸೆಂಬರ್ 18, 2025 ರಂದು ಜಾಗತಿಕ ವರ್ಚುವಲ್ ಈವೆಂಟ್ ಮೂಲಕ ಅನಾವರಣಗೊಳಿಸಲು ಯೋಜಿಸಿದೆ. ಇದು ಮ್ಯಾಗ್ನೈಟ್ SUV ಮತ್ತು X-ಟ್ರಯಲ್ ನಂತರ ಬ್ರ್ಯಾಂಡ್‌ನ ಮೂರನೇ ಮಾಡಲ್ ಆಗಿದೆ, ಈ ಕಾರನ್ನು ಸ್ಪರ್ಧಾತ್ಮಕ ಆರಂಭಿಕ ಹಂತದ ವಿಭಾಗದಲ್ಲಿ ಕುಟುಂಬ ಖರೀದಿದಾರರನ್ನು ಗುರಿಯಾಗಿಸಿಕೊಂಡು ಬಿಡುಗಡೆ ಮಾಡಲು ಸಜ್ಜಾಗಿದೆ. ದೇಶಾದ್ಯಂತ ಈಗಾಗಲೇ ಇತ್ತೀಚಿನ ಪರೀಕ್ಷೆ ಮಾಡುವಾಗ ಹಲವು ಬಾರಿ ಈ ಕಾರನ್ನು ಗುರುತಿಸಲಾಗಿದೆ. ಈ 7 - ಸೀಟರ್ ಕಾರಿನ ವಿನ್ಯಾಸ ಸೇರಿದಂತೆ ಹಲವು ವಿಶೇಷತೆಗಳು ಇಲ್ಲಿವೆ.

Tata Sierra: ಪವರ್ ತೋರಿಸಲು ಟಾಟಾ ಸಿದ್ಧ.. ಶೋರೂಂಗೆ ಬಂದೆ ಬಿಡ್ತು..

ಈಚೆಗೆ ಹೊಸ ಟಾಟಾ ಸಿಯೆರಾ (Tata Sierra) ಕಾರನ್ನು ಬಿಡುಗಡೆಗೊಳಿಸಲಾಯಿತು. ಇದೊಂದು ಎಸ್‌ಯುವಿಯಾಗಿದೆ. ಸಖತ್ ಸ್ಟೈಲಿಶ್ ಆಗಿದ್ದು, ನಾನಾ ಬಗೆಯ ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಕೆಲವೇ ದಿನಗಳಲ್ಲಿ ಬುಕ್ಕಿಂಗ್ ಶುರುವಾಗಲಿದ್ದು, 2026ರ ಜನವರಿ 15ರಿಂದ ವಿತರಣಾ ಕಾರ್ಯಕ್ಕೂ ಚಾಲನೆ ನೀಡಲಾಗುತ್ತದೆ. ಸದ್ಯ, ದೇಶಾದ್ಯಂತ ಶೋರೂಂಗಳಿಗೆ ಈ ಕಾರನ್ನು ತಲುಪಿಸುವುದಕ್ಕೂ ಕಂಪನಿಯು ಆರಂಭಿಸಿದೆ. ಬನ್ನಿ, ನೂತನ 'ಸಿಯೆರಾ'ದ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

ಕೇವಲ 7 ಲಕ್ಷ ಬೆಲೆ... 28.51 ಕಿ.ಮೀ ಮೈಲೇಜ್: ಫುಲ್ ಡಿಮ್ಯಾಂಡ್

ಏಪ್ರಿಲ್ 2023 ರಲ್ಲಿ ಬಿಡುಗಡೆಯಾಗಿ ಕೇವಲ 32 ತಿಂಗಳಲ್ಲಿ 4,00,000 ದೇಶೀಯ ಮಾರಾಟವನ್ನು ಮೀರಿದ ಮೊದಲ ನೆಕ್ಸಾ ಎಸ್‌ಯುವಿ ಎಂಬ ಹೆಗ್ಗಳಿಕೆಗೆ 'ಮಾರುತಿ ಸುಜುಕಿ ಫ್ರಾಂಕ್ಸ್' ಪಾತ್ರವಾಗಿದೆ. ಇದುವರೆಗೆ ಮಾರಾಟದಲ್ಲಿ ದಾಖಲೆ ನಿರ್ಮಿಸಿದ್ದ ಬಲೆನೊ ಮತ್ತು ಗ್ರ್ಯಾಂಡ್ ವಿಟಾರಾದಂತಹ ಮಾಡಲ್‌ಗಳನ್ನು ಮೀರಿಸಿದೆ. ಬಿಡುಗಡೆಯಾದಾಗಿನಿಂದ 2025 ರ ನವೆಂಬರ್ ಅಂತ್ಯದವರೆಗೆ, ಫ್ರಾಂಕ್ಸ್ ಒಟ್ಟು 4,09,817 ಯುನಿಟ್‌ ಕಾರುಗಳನ್ನು ಮಾರಾಟ ಮಾಡಿದೆ ಎಂದು ಪ್ರಮುಖ ಆಟೋ ಸುದ್ದಿಸಂಸ್ಥೆ 'ಆಟೋ ಕಾರ್ ಪ್ರೊಫೆಷನಲ್' ವರದಿ ಮಾಡಿದೆ.

Maruti: 10.50 ಲಕ್ಷದಿಂದ ಶುರು, 29 Km ಮೈಲೇಜ್.. ಮಾರುತಿಗೆ..

ಮಾರುತಿ ಸುಜುಕಿ ವಿಕ್ಟೋರಿಸ್ (Maruti Suzuki Victoris), ಜನಪ್ರಿಯ ಎಸ್‌ಯುವಿಯಾಗಿ ಹೊರಹೊಮ್ಮುತ್ತಿದೆ. ಇದು ಕಣ್ಣು ಕುಕ್ಕುವಂತಹ ವಿನ್ಯಾಸ ಹೊಂದಿದ್ದು, ನಾನಾ ಬಗೆಯ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಸ್ಪರ್ಧಾತ್ಮಕ ಬೆಲೆಯಲ್ಲಿಯೂ ಖರೀದಿ ಲಭ್ಯವಿದೆ. ಭಾರೀ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಕೊಂಡುಕೊಳ್ಳುತ್ತಿದ್ದಾರೆ. ಸದ್ಯ, ಇದೇ ಕಾರು ಕಂಪನಿಗೆ ವರವಾಗಿದ್ದು, ಅದೃಷ್ಟದ ಬಾಗಿಲನ್ನು ತೆರೆದಿದೆ.
Advertisement

ಇತ್ತೀಚೆಗೆ ಬಿಡುಗಡೆಯಾದ ಹಾರ್ಲೇ ಡೇವಿಡ್‌ಸನ್ X440 T ಬೈಕ್ ರಿವ್ಯೂ

Harley-Davidson X440 T ವಿಮರ್ಶೆ: ವಿನ್ಯಾಸ, ವೈಶಿಷ್ಟ್ಯಗಳು, ವಿಶೇಷಣಗಳು ಮತ್ತು ರಸ್ತೆಯಲ್ಲಿನ ಕಾರ್ಯಕ್ಷಮತೆಯ ಬಗ್ಗೆ ತಿಳಿಯಿರಿ. ಇದು ದೈನಂದಿನ ಪ್ರಯಾಣಕ್ಕೆ ಸೂಕ್ತವೇ? | Harley-Davidson X440 T Sameekshe: Vinyasa, Vaishtyagalu, Visheshnagalu Mattu Rasteyallina Karyakshamate Bagge Tilidirali. Idu Dainandina Prayanakke Sootavade?

ಬೆಂಗಳೂರು ಬ್ರ್ಯಾಂಡ್‌ನ ಜೋರು.. ಹೆಚ್ಚಾಯ್ತು ಡಿಮ್ಯಾಂಡ್..

ಬೆಂಗಳೂರು ಮೂಲದ ಎಥರ್ ಎನರ್ಜಿ, ಜನಪ್ರಿಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ 'ರಿಜ್ಟಾ' ಇ-ಸ್ಕೂಟರ್‌ನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಇದು ತುಂಬಾ ಅಚ್ಚುಕಟ್ಟಾದ ವಿನ್ಯಾಸ ಹೊಂದಿದ್ದು, ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಸದ್ಯ, ಈ ಸ್ಕೂಟರ್‌ನ ಮಾರಾಟದಲ್ಲಿ ಕಂಪನಿಯು ಹೊಸದೊಂದು ಇತಿಹಾಸ ಬರೆದಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಮಾರುತಿ ಬ್ರೆಝಾ ಫೇಸ್‌ಲಿಫ್ಟ್ ಮೇಲೆ ಏನೆಲ್ಲಾ ನಿರೀಕ್ಷೆಗಳಿವೆ?

ಮಾರುತಿ ಸುಜುಕಿ ತನ್ನ ಜನಪ್ರಿಯ ಎಸ್‌ಯುವಿ ಬ್ರೆಝಾದ ಫೇಸ್‌ಲಿಫ್ಟ್ ಆವೃತ್ತಿಯಲ್ಲಿ ಕೆಲಸ ಮಾಡುತ್ತಿದ್ದು, 2022 ರಲ್ಲಿ ಬಿಡುಗಡೆಯಾದ ಪ್ರಸ್ತುತ ಮಾದರಿಯ ನಂತರ ಮಾರುತಿ ಸುಜುಕಿ ಬ್ರೆಝಾ ತನ್ನ ಮೊದಲ ಪ್ರಮುಖ ನವೀಕರಣವನ್ನು ಪಡೆಯುತ್ತಿದೆ. ಈ ಫೇಸ್‌ಲಿಫ್ಟ್ ಸಣ್ಣ ಸ್ಟೈಲಿಂಗ್ ಬದಲಾವಣೆಗಳು, ಇಂಟೀರಿಯರ್ ಸುಧಾರಣೆಗಳು ಮತ್ತು ಕಾಂಪ್ಯಾಕ್ಟ್ SUV ವಿಭಾಗದಲ್ಲಿ ಸ್ಪರ್ಧಾತ್ಮಕವಾಗಿಡಲು ಬಹುಶಃ ಹೆಚ್ಚಿನ ಸುರಕ್ಷತಾ ವೈಶಿಷ್ಟ್ಯಗಳನ್ನು ತರುವ ಸಾಧ್ಯತೆಯಿದೆ. 2026 ರಲ್ಲಿ ಬಿಡುಗಡೆಯಾಗಲಿರುವ ಮಾರುತಿ ಸುಜುಕಿ ಬ್ರೆಝಾ ಫೇಸ್‌ಲಿಫ್ಟ್ ಅನ್ನು ಈಗಾಗಲೇ ಹಲವು ಬಾರಿ ರಸ್ತೆಯಲ್ಲಿ ಪರೀಕ್ಷಿಸುತ್ತಿರುವುದನ್ನು (ರೋಡ್ ಟೆಸ್ಟಿಂಗ್) ಗುರುತಿಸಲಾಗಿದೆ.

ಬ್ರೋ: 69 ಕಿಲೋಮೀಟರ್‌ವರೆಗೆ ಮೈಲೇಜ್, ನೋಡಲು ಬಲು ಸುಂದರ..

ಹೊಸ ಬೈಕ್‌ವೊಂದನ್ನು ಖರೀದಿ ಮಾಡಬೇಕೆಂದು ಪ್ರತಿಯೊಬ್ಬ ಯುವಕರ ಕನಸಾಗಿರುತ್ತದೆ. ಆದರೆ ಯಾವುದನ್ನು ತೆಗೆದುಕೊಂಡಿದರೆ, ಹೆಚ್ಚು ಒಳಿತು ಎಂಬ ಗೊಂದಲದಲ್ಲಿರುತ್ತಾರೆ. ಅಂತಹವರಿಗೆ ಈ ಜನಪ್ರಿಯ ಮೋಟಾರ್‌ಸೈಕಲ್‌ಗಳಾದ ಬಜಾಜ್ ಪಲ್ಸರ್ 125, ಹೀರೋ ಎಕ್ಸ್‌ಟ್ರೀಮ್ 125ಆರ್, ಹೋಂಡಾ ಎಸ್‌ಪಿ 125, ಹೀರೋ ಸ್ಪ್ಲೆಂಡರ್ ಪ್ಲಸ್ ಎಕ್ಸ್‌ಟೆಕ್ ಹಾಗೂ ಹೀರೋ ಗ್ಲಾಮರ್‌ಗಳು ಬೆಸ್ಟ್ ಚಾಯ್ಸ್ ಆಗಲಿವೆ. ಬನ್ನಿ, ಇವುಗಳ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಕ್ಷಿಪ್ತವಾದ ವಿವರಗಳನ್ನು ತಿಳಿಯೋಣ.
Advertisement

ನಿನ್ನೆಯಷ್ಟೆ ಅನಾವರಣಗೊಂಡ 2026 ಕಿಯಾ ಸೆಲ್ಟೋಸ್

ಪ್ರಮುಖ ಕೊರಿಯಾ ಕಾರು ತಯಾರಕರಾದ 'ಕಿಯಾ ಮೋಟಾರ್ಸ್', ನಿನ್ನೆಯಷ್ಟೆ ತನ್ನ ಹೊಸ ಪೀಳಿಗೆಯ ಕಿಯಾ ಸೆಲ್ಟೋಸ್ ಅನ್ನು ಅನಾವರಣಗೊಳಸಿದೆ. ದೇಶಾದ್ಯಂತ ಬುಕಿಂಗ್‌ಗಳು ಈಗಾಗಲೇ ಪ್ರಾರಂಭವಾಗಿವೆ, ಗ್ರಾಹಕರು ತಮ್ಮ ನೆಚ್ಚಿನ SUV ಅನ್ನು ರೂ. 25,000 ಆರಂಭಿಕ ಮೊತ್ತದೊಂದಿಗೆ ಬುಕ್ ಮಾಡಬಹುದು. ಕಿಯಾ ಇಂಡಿಯಾ 2026 ರ ಜನವರಿ 2 ರಂದು ಹೊಸ ಸೆಲ್ಟೋಸ್‌ನ ಬೆಲೆಗಳನ್ನು ಅಧಿಕೃತವಾಗಿ ಘೋಷಿಸುವುದಾಗಿ ತಿಳಿಸಿದೆ. ಈ ಕಾರಿನ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಸಂಪೂರ್ಣ ಎಲ್ಲಾ ಮಾಹಿತಿ ಇಲ್ಲಿದೆ.

Maruti Suzuki: 33 ಕಿ.ಮೀ ಮೈಲೇಜ್.. 5.79 ಲಕ್ಷ, ಈ ಪ್ರಖ್ಯಾತ..

ಮಾರುತಿ ಸುಜುಕಿ ಸ್ವಿಫ್ಟ್ (Maruti Suzuki Swift), ಪ್ರಮುಖ ಹ್ಯಾಚ್‌ಬ್ಯಾಕ್‌ ಆಗಿದೆ. 2005ರಲ್ಲಿ ಬಿಡುಗಡೆಗೊಂಡ ಈ ಕಾರು, 2025ರಲ್ಲೂ ಉತ್ತಮವಾಗಿ ಮಾರಾಟವಾಗುತ್ತಿದೆ. ಆದರೂ ಇದೇ ವರ್ಷ 'ಸ್ವಿಫ್ಟ್' ಮಾರಾಟದಲ್ಲಿ ಹಲವು ಏಳುಬೀಳುಗಳನ್ನು ಕಾಣಲಾಗಿದೆ. ಇದಕ್ಕೆ ಅಪವಾದವೆಂಬಂತೆ ನವೆಂಬರ್ ತಿಂಗಳು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಖರೀದಿ ಮಾಡಿದ್ದಾರೆ. ಒಟ್ಟು 19,733 ಯುನಿಟ್‌ಗಳನ್ನು ವಿತರಿಸಲಾಗಿದೆ. 2024ರ ಇದೇ ಅವಧಿಯಲ್ಲಿ 14,737 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿಅಂಶಕ್ಕೆ ಹೋಲಿಕೆ ಮಾಡಿದರೆ, ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 34% ಪ್ರಗತಿಯಾಗಿದೆ.

ಹೊಸ XUV 7XO ರಗಡ್ ಎಸ್‌ಯುವಿ ಬಿಡುಗಡೆಗೆ ಸಜ್ಜಾಗಿದೆ ಮಹೀಂದ್ರಾ

ಮಹೀಂದ್ರಾ ಕಂಪನಿಯು ತನ್ನ ಪ್ರಮುಖ ಎಸ್‌ಯುವಿಯಾಗಿರುವ XUV700 ಕಾರನ್ನು XUV 7XO ಎಂದು ನಾಮಕರಣ ಮಾಡಿದೆ. ಕೇವಲ ನಾಮಕರಣ ಮಾತ್ರವಲ್ಲ ಕಾರಿನ ಬಹುತೇಕ ಬಾಹ್ಯ ವಿನ್ಯಾಸ ಹಾಗೂ ಇಂಟೀರಿಯರ್ ಡಿಸೈನ್ ಅನ್ನು ಬದಲಾಯಿಸಿ ಬಿಡುಗಡೆ ಮಾಡುವುದಾಗಿ ಅಧಿಕೃತವಾಗಿ ದೃಢಪಡಿಸಿದೆ. ಪ್ರೀಮಿಯಂ SUV ವಿಭಾಗದಲ್ಲಿ ಮಹೀಂದ್ರಾದ ನಾಯಕತ್ವವನ್ನು ಬಲಪಡಿಸಲು ವಿನ್ಯಾಸಗೊಳಿಸಲಾದ XUV 7XO, ನಾಳಿನ SUV ಗಳಿಗೆ ಮತ್ತೆ ದಾರಿ ತೋರಿಸಲು ಸಜ್ಜಾಗಿದೆ ಎಂದು ಕಂಪನಿ ಹೇಳಿದೆ.

Kia: ನಿನ್ನೆಯಷ್ಟೇ ಪರಿಚಯ.. ಕೊರಿಯಾ ಪವರ್ ತೋರಿಸಿದ ಕಿಯಾ..

ನಿನ್ನೆ ಹೊಸ ತಲೆಮಾರಿನ 2026ರ ಕಿಯಾ ಸೆಲ್ಟೋಸ್ (Kia Seltos) ಎಸ್‌ಯುವಿಯನ್ನು ಪರಿಚಯಿಸಲಾಗಿದೆ. ಈ ಕಾರು ಅತ್ಯಾಧುನಿಕವಾದ ವಿನ್ಯಾಸವನ್ನು ಹೊಂದಿದ್ದು, ನಾನಾ ಬಗೆಯ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಇಂದಿನಿಂದ ಬುಕ್ಕಿಂಗ್ ಶುರುವಾಗಿದೆ. ಆಸಕ್ತ ಗ್ರಾಹಕರು ರೂ.25,000 ಮುಂಗಡ ಹಣವನ್ನು ಪಾವತಿಸಿ, ಆರ್ಡರ್ ಮಾಡಬಹುದು. ನಾವಿಲ್ಲಿ ಈ ಎಸ್‌ಯುವಿಯ ನಿರೀಕ್ಷಿತ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಪ್ರಮುಖಾಂಶಗಳು ಏನೆಂಬುದನ್ನು ತಿಳಿಸಿಕೊಟ್ಟಿದ್ದೇವೆ.
Advertisement

Kia Seltos: ಇಂದೇ ಅನಾವರಣ.. ಹೊಸ ಕಿಯಾ ಸೆಲ್ಟೋಸ್‌ಗೆ 3 ಪರ್ಯಾಯ..

ಇಂದು 2026ರ ಹೊಸ ತಲೆಮಾರಿನ ಕಿಯಾ ಸೆಲ್ಟೋಸ್ (Kia Seltos) ಎಸ್‌ಯುವಿಯನ್ನು ಅನಾವರಣಗೊಳಿಲಾಗಿದೆ. ಜನವರಿ 2ರಂದು ಬೆಲೆಯನ್ನು ಘೋಷಣೆ ಮಾಡಲಾಗುತ್ತದೆ. ಈ ಕಾರು ಕನಿಷ್ಠ ರೂ.10.99 ಲಕ್ಷ ಹಾಗೂ ಗರಿಷ್ಠ ರೂ.20 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದುಕೊಂಡಿರುವ ನಿರೀಕ್ಷೆಯಿದೆ. ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಹೊಂದಿದೆ. ಮಾರ್ನಿಂಗ್ ಹೇಸ್, ಮ್ಯಾಗ್ಮಾ ರೆಡ್, ಫ್ರಾಸ್ಟ್ ಬ್ಲೂ ಮತ್ತು ಐವರಿ ಸಿಲ್ವರ್ ಗ್ಲೋಸ್, ಪ್ಯೂಟರ್ ಆಲಿವ್, ಇಂಪೀರಿಯಲ್ ಬ್ಲೂ, ಗ್ರಾವಿಟಿ ಗ್ರೇ, ಅರೋರಾ ಬ್ಲ್ಯಾಕ್ ಪರ್ಲ್ ಹಾಗೂ ಗ್ಲೇಸಿಯರ್ ವೈಟ್ ಪರ್ಲ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ.

ತನ್ನ ವಿಭಾಗದಲ್ಲಿಯೇ ದೊಡ್ಡದು... ಅನಾವರಣಗೊಂಡ ಹೊಸ ಕಿಯಾ ಸೆಲ್ಟೋಸ್

ದೊಡ್ಡ ಆಯಾಮಗಳು, ವರ್ಧಿತ ಸುರಕ್ಷತೆ ಮತ್ತು ಅತ್ಯಾಧುನಿಕ ನಾವೀನ್ಯತೆಯೊಂದಿಗೆ ಕಿಯಾ ಇಂಡಿಯಾ ಇಂದು ಹೊಸ ಪೀಳಿಗೆಯ ಕಿಯಾ ಸೆಲ್ಟೋಸ್ (New gen Kia Seltos) ಅನ್ನು ಅನಾವರಣಗೊಳಸಿದೆ. ಹೊಸ ಸ್ಟೈಲಿಂಗ್, ಪ್ರೀಮಿಯಂ ಒಳಾಂಗಣದ ಜೊತೆಗೆ ವೈವಿಧ್ಯಮಯ ಗ್ರಾಹಕರ ಅಗತ್ಯಗಳಿಗೆ ಸರಿಹೊಂದುವಂತೆ ಹಲವು ಟ್ರಿಮ್‌ಗಳು ಮತ್ತು ಪವರ್‌ಟ್ರೇನ್‌ಗಳನ್ನು ಒಳಗೊಂಡಿದೆ. ಡಿಸೆಂಬರ್ 11 ರಂದು ದೇಶಾದ್ಯಂತ ಬುಕಿಂಗ್‌ಗಳು ಪ್ರಾರಂಭವಾಗಲಿದ್ದು, ಗ್ರಾಹಕರು ಹೊಸ ಕಿಯಾ ಸೆಲ್ಟೋಸ್ SUV ಅನ್ನು ರೂ. 25,000 ಆರಂಭಿಕ ಮೊತ್ತದೊಂದಿಗೆ ಬುಕ್ ಮಾಡಬಹುದು ಎಂದು ಕಿಯಾ ಹೇಳಿದೆ.

ಅಂಬಾಸಿಡರ್‌ಗೆ ಪುನರ್ಜನ್ಮ: ಬೈಕ್‌ನಂತೆ 33 ಕಿ.ಮೀ ಮೈಲೇಜ್..

ಭಾರತದಲ್ಲಿ ದಶಕಗಳ ಹಿಂದೆ 'ಸೆಡಾನ್' ಕಾರುಗಳಿಗೆ ವಿಪರೀತವಾದ ಬೇಡಿಕೆಯಿತ್ತು. ಅದರಲ್ಲೂ ಈ ವಿಭಾಗದಲ್ಲಿ ಹಿಂದೂಸ್ತಾನ್ ಅಂಬಾಸಿಡರ್ (Hindustan Ambassador) ಪಾರುಪತ್ಯ ಸಾಧಿಸಿತ್ತು. 1957 ರಿಂದ 2014 ವರೆಗೆ ಭಾರೀ ಸಂಖ್ಯೆಯಲ್ಲಿ ಮಾರಾಟವಾಗುತ್ತಿತ್ತು. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಖರೀದಿ ಮಾಡುತ್ತಿದ್ದರು. ಆದರೆ, ಇತ್ತೀಚಿನ ವರ್ಷಗಳಲ್ಲಿ ಎಸ್‌ಯುವಿಗಳ ಆರ್ಭಟದಿಂದಾಗಿ ಸೆಡಾನ್‌ಗಳನ್ನು ಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಿದೆ.
Advertisement

ಟಾಟಾ ಗತ್ತೇ ಬೇರೆ... ಪೈಪೋಟಿ ಕೊಟ್ಟರೆ ಮಕಾಡೆ ಮಲಗಿಸುತ್ತೆ!

ಅಕ್ಟೋಬರ್‌ನಲ್ಲಿ ಸಾಲು ಸಾಲು ಹಬ್ಬಗಳ ಆಫರ್‌ಗಳು ಹಾಗೂ ಜಿಎಸ್‌ಟಿ ಕಡಿತದಿಂದಾಗಿ ಜನ ಮುಗಿಬಿದ್ದು ಕಾರುಗಳು ಖರೀದಿಸಿದ್ದು, ಆಟೋ ಉದ್ಯಮವು ಭಾರೀ ಲಾಭ ಪಡೆದುಕೊಂಡಿತ್ತು. ಇದೀಗ ಹಬ್ಬದ ನಂತರದ ನಿರೀಕ್ಷಿತ ಮಾರಾಟ ಇಳಿಕೆಯ ಹೊರತಾಗಿಯೂ ನವೆಂಬರ್‌ನಲ್ಲಿ ಭಾರತದ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆ ಸ್ಥಿರವಾಗಿದೆ. ಒಟ್ಟು ಎಲೆಕ್ಟ್ರಿಕ್ ವಾಹನ ಮಾರಾಟವು 14,850 ಯುನಿಟ್‌ಗಳಿಗೆ ತಲುಪಿದೆ. ಕಳೆದ ತಿಂಗಳಿಗೆ ಹೋಲಿಸಿದರೆ ಕೇವಲ ಶೇ17.75 ರಷ್ಟು ಕುಸಿತವಾಗಿದೆ. ಆದರೆ ಕಳೆದ ವರ್ಷ (ನವೆಂಬರ್ 2024) ಮಾರಾಟವಾದ 9,174 ಯುನಿಟ್‌ಗಳಿಗೆ ಹೋಲಿಸಿದರೆ ಭಾರೀ ಏರಿಕೆಯಾಗಿದೆ.

Kia Seltos: ಲಕ್ಷುರಿ ಫೀಚರ್ಸ್.. 5-ಸೀಟರ್! 2026ರ ಹೊಸ ಕಿಯಾ..

ಹೈದರಾಬಾದ್‌ನಲ್ಲಿಂದು ನಡೆದ ಅದ್ದೂರಿ ಸಮಾರಂಭದಲ್ಲಿ ಹೊಸ ತಲೆಮಾರಿನ ಕಿಯಾ ಸೆಲ್ಟೋಸ್ (Kia Seltos) ಕಾರನ್ನು ಅನಾವರಣಗೊಳಿಸಲಾಗಿದೆ. ಇದೊಂದು ಎಸ್‌ಯುವಿಯಾಗಿದೆ. ನೋಡಲು ತುಂಬಾ ಚೆನ್ನಾಗಿದ್ದು, ಹಲವು ನವೀನ ವೈಶಿಷ್ಟ್ಯಗಳಿಗೂ ಸಾಕ್ಷಿಯಾಗದೆ. ಕೈಗೆಟುಕುವ ದರದಲ್ಲಿ ಗ್ರಾಹಕರ ಖರೀದಿಗೆ ದೊರೆಯುವ ಸಾಧ್ಯತೆಯಿದೆ. ಬನ್ನಿ, ಈ ಕಾರಿನ ನಿರೀಕ್ಷಿತ ಬೆಲೆ ಎಷ್ಟಿರಲಿದೆ.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

2025ರ ಮಿನಿ ಕೂಪರ್ ಕನ್ವರ್ಟಿಬಲ್ ರಿವ್ಯೂ

2025ರ ಮಿನಿ ಕೂಪರ್ ಕನ್ವರ್ಟಿಬಲ್‌ನ ವಿಮರ್ಶೆಯನ್ನು ಓದಿ. ಬೆಲೆ, ವಿಶೇಷಣಗಳು, ವೈಶಿಷ್ಟ್ಯಗಳು ಮತ್ತು ಕಾರ್ಯಕ್ಷಮತೆಯ ಬಗ್ಗೆ ತಿಳಿಯಿರಿ. ಇದು ಖರೀದಿಸಲು ಯೋಗ್ಯವಾಗಿದೆಯೇ ಎಂದು ಕಂಡುಕೊಳ್ಳಿ. | Read the review of the 2025 Mini Cooper Convertible. Learn about the price, specs, features, and performance. Find out if it's worth buying.

Maruti: ಇಲ್ಲಿವೆ ನೋಡಿ ಅಗ್ಗದ 5 ಮಾರುತಿ ಕಾರುಗಳು.. 3.50..

ಮಾರುತಿ ಸುಜುಕಿ (Maruti Suzuki) ಜನಪ್ರಿಯ ವಾಹನ ತಯಾರಕ ಕಂಪನಿಯಾಗಿ ಹೊರಹೊಮ್ಮಿದೆ. ಸೆ.22 ರಿಂದ ಜಿಎಸ್‌ಟಿ ಪರಿಷ್ಕರಣೆಗೊಂಡಿದೆ. ಕಂಪನಿಯ ಕಾರುಗಳ ಬೆಲೆಯೂ ಇಳಿಕೆಯಾಗಿದೆ. ನೀವು ಹೊಚ್ಚ ಹೊಸ ಕಾರೊಂದನ್ನು ಖರೀದಿಸಲು ಆಲೋಚಿಸಿದ್ದೀರಾ.. ಹಾಗಾದರೆ, ಎಸ್-ಪ್ರೆಸ್ಸೊ, ಆಲ್ಟೊ ಕೆ10, ವ್ಯಾಗನ್ಆರ್, ಇಕೋ ಹಾಗೂ ಸ್ವಿಫ್ಟ್‌ಗಳು ಅತ್ಯುತ್ತಮವಾದ ಆಯ್ಕೆಯಾಗಲಿವೆ. ಬನ್ನಿ, ಇವುಗಳ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.
Advertisement

ಎರಡು ದೈತ್ಯ ಕಂಪನಿಗಳು ಒಂದಾಗಿ ಬಿಡುಗಡೆ ಮಾಡಿವೆ ಹೊಸ ಬೈಕ್

ಇತ್ತೀಚೆಗೆ ಭಾರತದಲ್ಲಿ ಬಿಡುಗಡೆಯಾಗಿರುವ ಹೊಸ ಹಾರ್ಲೆ - ಡೇವಿಡ್ಸನ್ H-D X440 T, ಹೊಸ ಅಪ್‌ಡೇಟ್‌ಗಳೊಂದಿಗೆ ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಭಾರತದಲ್ಲಿ ಹಾರ್ಲೆ - ಡೇವಿಡ್ಸನ್ ಮತ್ತು ಹೀರೋ ಪ್ರೀಮಿಯಾ ಡೀಲರ್ ನೆಟ್‌ವರ್ಕ್‌ನಲ್ಲಿ ಈಗಾಗಲೇ ಬುಕಿಂಗ್ ‌ಗಳನ್ನು ಸ್ವೀಕರಿಸಲಾಗುತ್ತಿದೆ. ಇದು ಆಧುನಿಕ ಭಾರತೀಯ ಸವಾರರ ವಿಕಸನಗೊಳ್ಳುತ್ತಿರುವ ಆದ್ಯತೆಗಳೊಂದಿಗೆ ಹೊಂದಿಕೆಯಾಗುವ ಮಹತ್ವಾಕಾಂಕ್ಷೆಯ, ಉತ್ತಮ - ಗುಣಮಟ್ಟದ ವಾಹನವಾಗಿದೆ ಎಂದು ಕಂಪನಿ ತಿಳಿಸಿದೆ. ಈ ಬೈಕ್ ಕುರಿತ ಹೆಚ್ಚಿನ ವಿಶೆಷತೆಗಳನ್ನು ಈ ಲೇಖನದಲ್ಲಿ ತಿಳಿಯೋಣ.

Tata Sierra: ಹೊಸ ಟಾಟಾ ಸಿಯೆರಾ ಕಾರಿಗೆ ಪ್ರಿ-ಬುಕ್ಕಿಂಗ್ ಶುರು..

ಇತ್ತೀಚೆಗೆ ಟಾಟಾ ಸಿಯೆರಾ (Tata Sierra) ಎಸ್‌ಯುವಿಯನ್ನು ಮಾರಾಟಕ್ಕೆ ತರಲಾಯಿತು. ಇದು ತುಂಬಾ ಅಚ್ಚುಕಟ್ಟಾದ ವಿನ್ಯಾಸ ಹೊಂದಿದ್ದು, ಹತ್ತಾರು ನವೀನ ವೈಶಿಷ್ಟ್ಯಗಳನ್ನು ಪಡೆದಿದೆ. ಈಗಾಗಲೇ ಬೆಲೆಯನ್ನು ಘೋಷಣೆ ಮಾಡಲಾಗಿದೆ. ರೂ.11.49 ಲಕ್ಷದಿಂದ ರೂ.18.49 ಲಕ್ಷ (ಎಕ್ಸ್-ಶೋರೂಂ) ದರವನ್ನು ಒಳಗೊಂಡಿದೆ. ಡಿಸೆಂಬರ್ 15ರಂದು ಅಧಿಕೃತವಾಗಿ ಬುಕ್ಕಿಂಗ್ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತದೆ. ಅದರ ಹೊರತಾಗಿಯೂ ಈ ಕಾರಿಗಾಗಿ ಕಂಪನಿಯ ಆಯ್ದ ಡೀಲರ್‌ಶಿಪ್‌ಗಳು ರೂ.21,000 ಟೋಕನ್ ಮೊತ್ತಕ್ಕೆ ಆರ್ಡರ್‌ನ್ನು ತೆಗೆದುಕೊಳ್ಳುವುದಕ್ಕೆ ಪ್ರಾರಂಭಿಸಿವೆ.

ಕೊರಿಯಾ ಪವರ್ ತೋರಿಸಲು ಕಿಯಾ ಸಿದ್ಧ: ಇಂದು 2026 ಸೆಲ್ಟೋಸ್ ಪಾದಾರ್ಪಣೆ

ಕಿಯಾ ಇಂಡಿಯಾ ಮುಂದಿನ ಪೀಳಿಗೆಯ ಕಿಯಾ ಸೆಲ್ಟೋಸ್ ಎಸ್‌ಯುವಿಯನ್ನು ಇಂದು (ಡಿಸೆಂಬರ್ 10, 2025) ಭಾರತೀಯ ಮಾರುಕಟ್ಟೆಯಲ್ಲಿ ಜಾಗತಿಕವಾಗಿ ಪಾದಾರ್ಪಣೆ ಮಾಡಲಿದೆ. ಪ್ರಸ್ತುತ SUV 2019 ರಲ್ಲಿ ಮೊದಲ ಬಾರಿಗೆ ಬಿಡುಗಡೆಯಾದ ನಂತರ ಇದು ಭಾರತಕ್ಕೆ ಬರುತ್ತಿರುವ ಎರಡನೇ ಪೀಳಿಗೆಯ ಸೆಲ್ಟೋಸ್ (2nd Gen Kia Seltos) ಆಗಿದೆ. ಈ ಎಸ್‌ಯುವಿ ಹೊಸ ವಿನ್ಯಾಸ, ಸಂಪೂರ್ಣವಾಗಿ ಮರುವಿನ್ಯಾಸಗೊಳಿಸಲಾದ ಒಳಾಂಗಣ, ಹೆಚ್ಚುವರಿ ವೈಶಿಷ್ಟ್ಯಗಳು, ಸುಧಾರಿತ ಸುರಕ್ಷತೆ ಸೇರಿದಂತೆ ಹೆಚ್ಚಿನ ಫೀಚರ್ಸ್ ಒಳಗೊಂಡಿರಲಿದೆ. ಅಧಿಕೃತ ಅನಾವರಣಕ್ಕೂ ಮುನ್ನ ಕಾರಿನ ಬಗ್ಗೆ ನಮಗೆ ಲಭ್ಯವಿರುವ ಮಾಹಿತಿ ಇಲ್ಲಿ ಹಂಚಿಕೊಳ್ಳಲಾಗಿದೆ.

Nissan: 20 Km ಮೈಲೇಜ್, 5.62 ಲಕ್ಷ.. 'ನಿಸ್ಸಾನ್ ಮ್ಯಾಗ್ನೈಟ್'ಗೆ..

ನಿಸ್ಸಾನ್ ಮ್ಯಾಗ್ನೈಟ್ (Nissan Magnite) ಪ್ರಮುಖ ಎಸ್‌ಯುವಿಯಾಗಿದೆ. ರೂ.5.62 ಲಕ್ಷದಿಂದ ರೂ.10.76 ಲಕ್ಷ (ಎಕ್ಸ್-ಶೋರೂಂ) ದರವನ್ನು ಹೊಂದಿದೆ. ಅತ್ಯುತ್ತಮವಾದ ವಿನ್ಯಾಸವನ್ನು ಒಳಗೊಂಡಿದೆ. ಓನಿಕ್ಸ್ ಬ್ಲ್ಯಾಕ್, ಸ್ಟಾರ್ಮ್ ವೈಟ್, ಬ್ಲೇಡ್ ಸಿಲ್ವರ್, ಸನ್‌ರೈಸ್ ಕಾಪರ್ ಆರೆಂಜ್, ಫ್ಲೇರ್ ಗಾರ್ನೆಟ್ ರೆಡ್, ವಿವಿಡ್ ಬ್ಲೂ ಮತ್ತು ಮೆಟಾಲಿಕ್ ಗ್ರೇ ಎಂಬ ಬಣ್ಣಗಳೊಂದಿಗೂ ಲಭ್ಯವಿದೆ. 205 ಎಂಎಂ ಗ್ರೌಂಡ್ ಕಿಯರೆನ್ಸ್ ಹಾಗೂ 2,500 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ. 5 ಆಸನಗಳನ್ನು ಪಡೆದಿದೆ. ಪ್ರಯಾಣಿಕರು ಆರಾಮದಾಯಕವಾಗಿ ಸಂಚಾರ ಮಾಡಬಹುದು.
Advertisement

ಬೃಹತ್ ಹೂಡಿಕೆಗೆ ಸಹಿ ಹಾಕಿದ ವಿಯೆಟ್ನಾಂನ ದೈತ್ಯ ಕಂಪನಿ

ತೆಲಂಗಾಣ ರೈಸಿಂಗ್ ಗ್ಲೋಬಲ್ ಶೃಂಗಸಭೆಯಲ್ಲಿ ತೆಲಂಗಾಣ ಸರ್ಕಾರದೊಂದಿಗೆ 3 ಬಿಲಿಯನ್ ಯುಎಸ್ ಡಾಲರ್ ಹೂಡಿಕೆ ಒಪ್ಪಂದಕ್ಕೆ ಸಹಿ ಹಾಕುವುದಾಗಿ ವಿಂಗ್‌ಗ್ರೂಪ್ ಘೋಷಿಸಿದೆ. ಈ ಒಪ್ಪಂದದಡಿಯಲ್ಲಿ, ಎರಡೂ ಪಕ್ಷಗಳು ಸ್ಮಾರ್ಟ್ ನಗರ ಅಭಿವೃದ್ಧಿ, ಎಲೆಕ್ಟ್ರಿಕ್ ವಾಹನ ಪರಿಹಾರಗಳು, ಆರೋಗ್ಯ ರಕ್ಷಣೆ, ಶಿಕ್ಷಣ, ಪ್ರವಾಸೋದ್ಯಮ, ನವೀಕರಿಸಬಹುದಾದ ಇಂಧನ, ತೆಲಂಗಾಣದಲ್ಲಿ ಸುಮಾರು 2,500 ಹೆಕ್ಟೇರ್‌ಗಳಲ್ಲಿ ಚಾರ್ಜಿಂಗ್ ಮೂಲಸೌಕರ್ಯ, ಹಾಗೆಯೇ ಎಲೆಕ್ಟ್ರಿಕ್ ಟ್ಯಾಕ್ಸಿ ಸೇವೆಗಳಂತಹ ಪ್ರಮುಖ ವಲಯಗಳಲ್ಲಿ ಕಾರ್ಯತಂತ್ರದ ಅವಕಾಶಗಳನ್ನು ಅನ್ವೇಷಿಸಲು ಸಹಕರಿಸುವುದಾಗಿ ಪ್ರಕಟಣೆಯಲ್ಲಿ ವಿಂಗ್‌ಗ್ರೂಪ್ ತಿಳಿಸಿದೆ.