ಹೊಸ ಕಾಂಪ್ಯಾಕ್ಸ್ ಮಿನಿ ಕಾಂಪ್ಯಾಕ್ಟರ್ ಅನಾವರಣಗೊಳಿಸಿದ ಮಹೀಂದ್ರಾ

ಬೆಂಗಳೂರಿನ BIEC ನಲ್ಲಿ ಇಂದು ನಡೆದ CII ಆಯೋಜಿಸಿದ EXCON ಪ್ರದರ್ಶನದಲ್ಲಿ ಮಹೀಂದ್ರಾದ ನಿರ್ಮಾಣ ಸಲಕರಣೆ ವ್ಯವಹಾರ (MCE), ರಸ್ತೆ ನಿರ್ಮಾಣ ಉದ್ಯಮಕ್ಕಾಗಿ ತನ್ನ ಹೊಸ ಮಹೀಂದ್ರಾ COMPACTOR ಅನ್ನು ಅನಾವರಣಗೊಳಿಸಿತು. MCE ಹೆಚ್ಚುವರಿಯಾಗಿ ತನ್ನ ಸುಧಾರಿತ CEV-V ಶ್ರೇಣಿಯ ಯಂತ್ರಗಳನ್ನು ಪ್ರದರ್ಶಿಸಿತು, ಇವು ಆಯಾ ವಿಭಾಗಗಳಲ್ಲಿನ ಮಾನದಂಡಗಳನ್ನು ಮರು ವ್ಯಾಖ್ಯಾನಿಸಲು ಸಿದ್ಧವಾಗಿವೆ. ಸುಧಾರಿತ ವೈಶಿಷ್ಟ್ಯಗಳು, ಹೆಚ್ಚಿನ ಸೌಕರ್ಯ, ಹೆಚ್ಚಿನ ಉತ್ಪಾದಕತೆ ಮತ್ತು ಕಾರ್ಯಕ್ಷಮತೆಯನ್ನು ನೀಡುತ್ತವೆ, ಇದು ಗ್ರಾಹಕರಿಗೆ ಹೆಚ್ಚಿನ ಗಳಿಕೆ ನೀಡುತ್ತದೆ ಎಂದು ಮಹೀಂದ್ರಾ ಹೇಳಿದೆ.

48 ಕಿ.ಮೀವರೆಗೆ ಮೈಲೇಜ್: 1.09 ಲಕ್ಷದಿಂದ ಶುರು.. ಗಜ ಗಾತ್ರದ 3..

ಭಾರತದಲ್ಲಿ ದ್ವಿಚಕ್ರ ವಾಹನಗಳಿಗೆ ವಿಪರೀತ ಬೇಡಿಕೆಯಿದೆ. ಅದರಲ್ಲೂ 110 ಹಾಗೂ 125 ಸಿಸಿ ಸ್ಕೂಟರ್‌ಗಳು ಭಾರೀ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ. ಸದ್ಯ 150 ಸಿಸಿ ಸ್ಕೂಟರ್‌ಗಳ ಅಬ್ಬರ ಶುರುವಾಗಿದೆ. ಇವು ದೊಡ್ಡ ಗಾತ್ರದಲ್ಲಿದ್ದು, ಖರೀದಿದಾರರು ಕೂಡ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ನೀವು ಹೊಚ್ಚ ಹೊಸ 150 ಸಿಸಿ ಸ್ಕೂಟರ್‌ವೊಂದನ್ನು ಮನೆಗೆ ತರಲು ಆಲೋಚಿಸಿದ್ದೀರಾ.. ಹಾಗದರೆ, ಟಿವಿಎಸ್ ಎನ್‌ಟಾರ್ಕ್ 150, ಹೀರೋ ಜೂಮ್ 160 ಹಾಗೂ ಯಮಹಾ ಏರೋಕ್ಸ್ 155ಗಳು ಬೆಸ್ಟ್ ಚಾಯ್ಸ್ ಆಗಲಿವೆ. ಬನ್ನಿ, ಈ ಸ್ಕೂಟರ್‌ಗಳ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಕ್ಷಿಪ್ತವಾದ ವಿವರಗಳನ್ನು ತಿಳಿಯೋಣ.

2025 ರಲ್ಲಿ ಬಿಡುಗಡೆಯಾದ 5 ಅತ್ಯುತ್ತಮ ಪವರ್‌ಫುಲ್ ಬೈಕ್‌ಗಳು

ಭಾರತವು ವಿಶ್ವದ ಅತಿ ದೊಡ್ಡ ದ್ವಿಚಕ್ರ ವಾಹನ ಮಾರುಕಟ್ಟೆಯನ್ನು ಹೊಂದಿರುವ ದೇಶವಾಗಿದೆ. ದೇಶದಲ್ಲಿ ಬಹುತೇಕರು ಬೈಕ್ ಹಾಗೂ ಸ್ಕೂಟರ್‌ಗಳ ಮೇಲೆ ಅವಲಂಭಿತರಾಗಿದ್ದಾರೆ, ಪ್ರತಿ ತಿಂಗಳು ಲಕ್ಷಾಂತರ ದ್ವಿಚಕ್ರ ವಾಹನಗಳು ಮಾರಾಟವಾಗುತ್ತವೆ. ಆದರೆ ಹಲವರಿಗೆ ದೇಶದಲ್ಲಿ ಯಾವುದು ಬೆಸ್ಟ್ ಬೈಕ್ ಅಥವಾ ಸ್ಕೂಟರ್ ಎಂಬ ಅರಿವಿಲ್ಲದೆಯೇ ಖರೀದಿಸುವವರಿದ್ದಾರೆ. ಹಾಗಾಗಿ ಭಾರತದ ಮೋಟಾರ್‌ಸೈಕಲ್ ಪ್ರಿಯರಿಗಾಗಿ ಅಡ್ವೆಂಚರ್ ಬೈಕ್‌ಗಳು, ಸ್ಟ್ರೀಟ್ ‌ಫೈಟರ್‌ಗಳು ಅಥವಾ ಪ್ರೀಮಿಯಂ ಕ್ರೂಸರ್‌ಗಳ ಪಟ್ಟಿ ಇಲ್ಲಿದೆ, ಇವು 2025 ರಲ್ಲಿ ಬಿಡುಗಡೆಯಾದ 5 ಅತ್ಯುತ್ತಮ ಬೈಕ್‌ಗಳಾಗಿವೆ.

ಕೊರಿಯಾ ಶಕ್ತಿ ಪ್ರದರ್ಶನಕ್ಕೆ ಕಿಯಾ ತಯಾರಿ.. ನಾಳೆ ಹೊಸ ಕಾರು..

ದಕ್ಷಿಣ ಕೊರಿಯಾಗೆ ಸೇರಿರುವ ಕಿಯಾ ಮೋಟಾರ್ಸ್ (Kia Motors), ಜನಪ್ರಿಯ ಕಾರು ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ವಿವಿಧ ಕಾರುಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಆಂಧ್ರ ಪ್ರದೇಶದ ಪೆನುಗೊಂಡದಲ್ಲಿ ಬೃಹತ್ ಉತ್ಪಾದನಾ ಘಟಕವನ್ನು ಹೊಂದಿದೆ. ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಹೆಚ್ಚು ಪ್ರಖ್ಯಾತಿ ಗಳಿಸಿರುವ 'ಸೆಲ್ಟೋಸ್'ನ್ನು ಹೊಸ ರೂಪದಲ್ಲಿ ಬಿಡುಗಡೆಗೊಳಿಸಲು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ. ನಾಳೆ (ಡಿ.10) ಅಂತರರಾಷ್ಟ್ರೀಯ ಮಟ್ಟದಲ್ಲಿ ಇದೇ ಕಾರಿನ 2ನೇ ತಲೆಮಾರಿನ ಮಾಡೆಲ್‌ನ್ನು ಅದ್ದೂರಿಯಾಗಿ ಅನಾವರಣಗೊಳಿಸಲಾಗುತ್ತದೆ. ಬನ್ನಿ, ಈ ಕಾರಿನ ನಿರೀಕ್ಷಿತ ಬೆಲೆ ಎಷ್ಟು.. ಯಾವೆಲ್ಲ ವಿಶೇಷತೆಗಳಿಗೆ ಸಾಕ್ಷಿಯಾಗಿದೆ ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.
Advertisement

ಡಿ.15 ರಂದು ಬಲಿಷ್ಠ ಎಸ್‌ಯುವಿ ಅನಾವರಣಕ್ಕೆ ಸರ್ವಸಿದ್ಧ

JSW MG ಮೋಟಾರ್ ಇಂಡಿಯಾ ಮುಂಬರುವ ಹೊಸ MG ಹೆಕ್ಟರ್‌ನ ಮೊದಲ ಅಧಿಕೃತ ಟೀಸರ್ ಅನ್ನು ಹೊರಬಿಟ್ಟಿದ್ದು, ವಿಡಿಯೋದಲ್ಲಿ SUV ಯ ವಿಕಸಿತ ಮತ್ತು ಹೆಚ್ಚು ಕ್ರಿಯಾತ್ಮಕ ಶೈಲಿಯ ಬಗ್ಗೆ ಒಂದು ರೋಮಾಂಚಕಾರಿ ನೋಟವನ್ನು ನೀಡಿದೆ. ಹೆಚ್ಚು ದೃಢವಾದ ಮತ್ತು ಅಥ್ಲೆಟಿಕ್ ಬಾಹ್ಯ ವಿನ್ಯಾಸವನ್ನು ತೋರಿಸಲಾಗಿದೆ. ತೀಕ್ಷ್ಣವಾದ ಲೈನ್‌ಗಳು, ದೃಢವಾದ ನಿಲುವು ಮತ್ತು ಕಮಾಂಡಿಂಗ್ ರಸ್ತೆ ಉಪಸ್ಥಿತಿಯನ್ನು ಪ್ರದರ್ಶಿಸಲಾಗಿದೆ. ನಿಖರತೆ ಮತ್ತು ಅತ್ಯಾಧುನಿಕತೆಯನ್ನು ಸಂಕೇತಿಸುವ ಹೊಸ ಗ್ರಿಲ್ SUV ಯ ಪ್ರಬಲ ದೃಶ್ಯ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸಿದೆ.

Nissan: 20 ಕಿ.ಮೀ ಮೈಲೇಜ್.. ಬರೀ 5.62 ಲಕ್ಷ, ಈ ಜನಪ್ರಿಯ ಕಾರಿಗೆ..

ನಿಸ್ಸಾನ್ ಮೋಟಾರ್ ಇಂಡಿಯಾ (Nissan Motor India), ಪ್ರಮುಖ ಕಾರು ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ 'ಮ್ಯಾಗ್ನೈಟ್' ಎಸ್‌ಯುವಿಯನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಇದು ನೋಡಲು ತುಂಬಾ ಚೆನ್ನಾಗಿದ್ದು, ಹಲವು ಹೊಸತನಗಳಿಗೂ ಸಾಕ್ಷಿಯಾಗಿದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಸದ್ಯ, ಇದೇ ಕಾರಿಗೆ ಕರ್ನಾಟಕವು ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ದೊಡ್ಡ ಮಟ್ಟದಲ್ಲಿ ಹಣಕಾಸಿನ ಪ್ರಯೋಜನಗಳನ್ನು ಘೋಷಣೆ ಮಾಡಲಾಗಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

TVS: 'ರೋನಿನ್ ಅಗೊಂಡಾ' ಸ್ಪೆಷಲ್ ಎಡಿಷನ್ ವಿಶೇಷತೆಗಳು

ಪ್ರಮುಖ ದ್ವಿಚಕ್ರ ವಾಹನ ತಯಾರಕರಾದ ಟಿವಿಎಸ್ ಮೋಟಾರ್ ಕಂಪನಿಯು ಇತ್ತೀಚೆಗೆ ತನ್ನ ಐದನೇ ವರ್ಷದ 'ಟಿವಿಎಸ್ ಮೋಟೋಸೌಲ್' ಈವೆಂಟ್‌ನಲ್ಲಿ 'ರೋನಿನ್ ಅಗೊಂಡಾ' ಎಂಬ ಬೈಕ್ ಬಿಡುಗಡೆ ಮಾಡಿದೆ. ಇದು ಸ್ಟ್ಯಾಂಡರ್ಡ್ ರೋನಿನ್‌ನ ಸ್ಪೆಷಲ್ ಎಡಿಷನ್ ಆಗಿದ್ದು, ಹೆಚ್ಚುವರಿ ಗ್ರಾಫಿಕ್ಸ್ ಹಾಗೂ ಸ್ಪೋರ್ಟಿ ಡಿಸೈನ್ ಹೊಂದಿದೆ. ವಾರಾಂತ್ಯದಲ್ಲಿ ನಿಧಾನವಾದ ಕರಾವಳಿ ಅಥವಾ ಕೆಫೆ ಸವಾರಿಗಳನ್ನು ಬಯಸುವ ಅನೇಕ ನಗರ ಸವಾರರಿಗೆ ರೋನಿನ್ ಅಗೊಂಡಾದ ವಿನ್ಯಾಸವು ಹೇಳಿಮಾಡಿಸಿದಂತಿರುತ್ತದೆ ಎಂದು ಟಿವಿಎಸ್ ಹೇಳಿದೆ.

Safest Cars In India: ಭಯಪಡುವ ಅಗತ್ಯವಿಲ್ಲ.. ಇವು ದೇಶದ 5 ಅತಿ..

ಭಾರತದ ವಾಹನ ಮಾರುಕಟ್ಟೆ ವಿಶಾಲವಾಗಿದೆ. ಹೊಸ ಕಾರನ್ನು ಕೊಳ್ಳುವವರು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಗರಿಷ್ಠ ರಕ್ಷಣಾತ್ಮಕ ಮಾನದಂಡಗಳನ್ನು ಪೂರೈಸಿರುವ ಕಾರೊಂದನ್ನು ಖರೀದಿಸಲು ಹುಡುಕಾಟ ನಡೆಸುತ್ತಿರುತ್ತಾರೆ. ಅಂತಹವರಿಗೆ ಟಾಟಾ ಪಂಚ್ ಇವಿ, ಮಹೀಂದ್ರಾ ಎಕ್ಸ್ಇವಿ 9ಇ, ಟಾಟಾ ಹ್ಯಾರಿಯರ್ ಇವಿ, ಮಾರುತಿ ಸುಜುಕಿ ವಿಕ್ಟೋರಿಸ್ ಹಾಗೂ ಮಹೀಂದ್ರಾ ಥಾರ್ ರಾಕ್ಸ್‌ಗಳು ಅತ್ಯುತ್ತಮವಾದ ಆಯ್ಕೆಯಾಗಲಿವೆ. ಈ ಕಾರುಗಳಿಗೆ ದೇಶದ ವಾಹನಗಳಿಗೆ ಸುರಕ್ಷತಾ ಪರೀಕ್ಷೆ ನಡೆಸುವ 'ಭಾರತ್ ಎನ್‌ಸಿಎಪಿ'ಯು 5-ಸ್ಟಾರ್ ಸೇಫ್ಟಿ ರೇಟಿಂಗ್‌ನ್ನು ನೀಡಿದೆ.
Advertisement

ಕಾಲೇಜು ಯುವತಿಯರಿಗಾಗಿ ಟಾಪ್-5 ಬೆಸ್ಟ್ ಸ್ಕೂಟರ್‌ಗಳು

ಕಾಲೇಜು ಯುವತಿಯರು ಹಾಗೂ ಆಫೀಸ್ ತೆರಳುವ ಮಹಿಳೆಯರಿಗಾಗಿ ಹಗುರವಾದ ವಿನ್ಯಾಸ, ಕಡಿಮೆ ಸೀಟ್ ಎತ್ತರ, ಸೊಗಸಾದ ಡಿಸೈನ್, ಉತ್ತಮ ಮೈಲೇಜ್ ಮತ್ತು ಕೈಗೆಟುಕುವ ಬೆಲೆಯಲ್ಲಿ ಸಿಗುವ ಬೆಸ್ಟ್ ಸ್ಕೂಟರ್‌ಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ಮಹಿಳೆಯರು ಮತ್ತು ವಿದ್ಯಾರ್ಥಿಗಳು ಸುಲಭವಾಗಿ ಓಡಿಸಲು ಇಷ್ಟಪಡುವ ಜನಪ್ರಿಯ ಮಾಡಲ್‌ಗಳನ್ನು ಆಯ್ಕೆ ಮಾಡಲಾಗಿದೆ. ಹೋಂಡಾ ಆಕ್ಟಿವಾದಿಂದ ಹಿಡಿದು ಹೀರೋ ಪ್ಲೆಷರ್ ಪ್ಲಸ್ ಎಕ್ಸ್‌ಟೆಕ್ ನಂತಹ ಬಜೆಟ್ ಸ್ನೇಹಿ, ವಿಶ್ವಾಸಾರ್ಹ ದ್ವಿಚಕ್ರ ವಾಹನಗಳವರೆಗೆ ಜನಪ್ರಿಯ ಮಾಡಲ್‌ಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

Mahindra: 21 Km ಮೈಲೇಜ್.. 7.28 ಲಕ್ಷ, ಹೊಸ ಮಹೀಂದ್ರಾ..

ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್ಒ (Mahindra XUV 3XO) ಪ್ರಮುಖ ಎಸ್‌ಯುವಿ ಎಂದೇ ಹೆಸರುವಾಸಿಯಾಗಿದೆ. ರೂ.7.28 ಲಕ್ಷದಿಂದ ರೂ.14.40 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಒಳಗೊಂಡಿದೆ. ಸಿಟ್ರಿನ್ ಯೆಲ್ಲೋ, ಡೀಪ್ ಫಾರೆಸ್ಟ್, ಎವರೆಸ್ಟ್ ವೈಟ್, ಗ್ಯಾಲಕ್ಸಿ ಗ್ರೇ, ನೆಬ್ಯುಲಾ ಬ್ಲೂ, ಸ್ಟೆಲ್ತ್ ಬ್ಲ್ಯಾಕ್ ಮತ್ತು ಟ್ಯಾಂಗೋ ರೆಡ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಲಭ್ಯವಿದೆ. 201 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2,600 ಮಿ.ಮೀ ವೀಲ್‌ಬೇಸ್‌ನ್ನು ಪಡೆದಿದೆ.

Honda: 7.41 ಲಕ್ಷ.. 19 Km ಮೈಲೇಜ್, 5-ಸ್ಟಾರ್ ಹೋಂಡಾ ಕಾರಿನ..

ಹೋಂಡಾ ಅಮೇಜ್ (Honda Amaze) ಪ್ರಮುಖ ಸೆಡಾನ್ ಆಗಿದೆ. ಇದು ನೋಡಲು ತುಂಬಾ ಚೆನ್ನಾಗಿದೆ. ಪ್ರತಿ ತಿಂಗಳು ಸ್ಪರ್ಧಾತ್ಮಕ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ನೀವು ಹೊಚ್ಚ ಹೊಸ ಕಾರೊಂದನ್ನು ಮನೆಗೆ ತರಲು ಆಲೋಚಿಸಿದ್ದೀರಾ.. ಹಾಗಾದರೆ ಇದೇ 'ಅಮೇಜ್' ಸೆಡಾನ್ ಬೆಸ್ಟ್ ಚಾಯ್ಸ್ ಆಗಲಿದೆ. ಬನ್ನಿ, ಈ ಕಾರಿನ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಾದ ಪ್ರಮುಖಾಂಶಗಳನ್ನು ತಿಳಿಯೋಣ.

ಭಾರತದಲ್ಲಿ 10 ಲಕ್ಷಕ್ಕಿಂತ ಕಡಿಮೆ ಬೆಲೆಯ ಬೆಸ್ಟ್‌ ಎಸ್‌ಯುವಿಗಳು

2025ರಲ್ಲಿ ಭಾರತದಲ್ಲಿ ರೂ. 10 ಲಕ್ಷಕ್ಕಿಂತ ಕಡಿಮೆ ಬೆಲೆಯ SUV ವಿಭಾಗದಲ್ಲಿ ಅತ್ಯುತ್ತಮ ಮಾರಾಟ ಕಂಡ ಟಾಪ್ ಕಾರುಗಳು ಇಲ್ಲಿವೆ. ಇವು ಉದಾರವಾದ ಕ್ಯಾಬಿನ್, ಹೆಚ್ಚಿನ ಬೂಟ್ ಸ್ಪೇಸ್‌, ಅತ್ಯುತ್ತಮ ಸುರಕ್ಷತೆ ಮತ್ತು ಬೆಸ್ಟ್ ಮೈಲೇಜ್ ನೀಡುವ ದಕ್ಷ ಎಂಜಿನ್‌ಗಳನ್ನು ಹೊಂದಿವೆ. ದೈನಂದಿನ ಪ್ರಯಾಣ ಮತ್ತು ವಾರಾಂತ್ಯದ ಲಾಂಗ್‌ ಡ್ರೈವ್‌ಗಳಿಗೂ ಉತ್ಸಾಹಭರಿತ ಪರ್ಫಾಮೆನ್ಸ್‌ಗೂ ಜನಪ್ರಿಯವಾಗಿವೆ. ಪ್ರಾಯೋಗಿಕತೆಗೆ ಆದ್ಯತೆ ನೀಡುವ ಬಜೆಟ್ - ಪ್ರಜ್ಞೆಯ ಕುಟುಂಬಗಳಿಗೆ ಬೆಸ್ಟ್ ಆಯ್ಕೆಯಾಗಿವೆ. ಬನ್ನಿ ವಿವರವಾಗಿ ನೋಡೋಣ.
Advertisement

ಮಾರುಕಟ್ಟೆ ಶೇಕ್ ಮಾಡಲು ಹೊಸ ರಗಡ್ SUV ಬಿಡುಗಡೆಗೆ ಸಜ್ಜು!

ಭಾರತದ ಪ್ರಮುಖ SUV ತಯಾರಕರಾದ ಮಹೀಂದ್ರಾ, ಇಂದು ಪ್ರೀಮಿಯಂ SUV ವಿಭಾಗದಲ್ಲಿ ತನ್ನ ಮುಂದಿನ ಪ್ರಮುಖ ಎಸ್‌ಯುವಿಯಾದ XUV 7XO ಹೆಸರನ್ನು ಘೋಷಿಸಿದೆ. ನವೀಕರಿಸಿದ XUV700 ಅನ್ನು ಮಹೀಂದ್ರಾ XUV 7XO ಎಂದು ಕರೆಯಲಾಗುವುದು ಎಂದು ಮಹೀಂದ್ರಾ ಈಗ ಅಧಿಕೃತವಾಗಿ ದೃಢಪಡಿಸಿದೆ. ಕೇವಲ ನಾಲ್ಕು ವರ್ಷಗಳಲ್ಲಿ 3,00,000 ಕ್ಕೂ ಹೆಚ್ಚು ಹೆಮ್ಮೆಯ ಮಾಲೀಕರೊಂದಿಗೆ ಭಾರತದಲ್ಲಿ SUV ವಿಭಾಗವನ್ನು ವಿಕಸನಗೊಳಿಸಿದ XUV700 ಪರಂಪರೆಯ ಮೇಲೆ ನಿರ್ಮಿಸಲಾದ XUV 7XO ಎಸ್‌ಯುವಿ ಮಾರುಕಟ್ಡೆಯಲ್ಲಿ ಗೇಮ್ ಚೇಂಚರ್ ಆಗಲಿದೆ ಎಂದು ಕಂಪನಿ ಹೇಳಿದೆ.

6 & 7-ಸೀಟರ್‌ನ 5 ಜನಪ್ರಿಯ ಕಾರುಗಳಿವು: 12 ರಿಂದ 26 ಕಿ.ಮೀವರೆಗೆ..

ಭಾರತವು ವಿಶಾಲವಾದ ಕಾರು ಮಾರುಕಟ್ಟೆಯನ್ನು ಹೊಂದಿದೆ. ಇಲ್ಲಿ ಹತ್ತಾರು ಕಾರುಗಳು ಗ್ರಾಹಕರ ಖರೀದಿಗೆ ಲಭ್ಯವಿವೆ. ಆದರಲ್ಲೂ ಫ್ಯಾಮಿಲಿ ಕಾರುಗಳಿಗೆ ವಿಶೇಷವಾದ ಬೇಡಿಕೆಯಿದೆ. ನೀವು 7 ಆಸನಗಳನ್ನು ಹೊಂದಿರುವ ಹೊಚ್ಚ ಹೊಸ ಕಾರೊಂದನ್ನು ಕೊಂಡುಕೊಳ್ಳಲು ಪ್ಲ್ಯಾನ್ ಮಾಡಿದ್ದೀರಾ.. ಹಾಗಾದರೆ ಕಿಯಾ ಕ್ಯಾರೆನ್ಸ್ ಕ್ಲಾವಿಸ್, ಮಾರುತಿ ಸುಜುಕಿ ಎಕ್ಸ್ಎಲ್6, ಮಹೀಂದ್ರಾ ಸ್ಕಾರ್ಪಿಯೋ ಎನ್, ಟಾಟಾ ಸಫಾರಿ ಹಾಗೂ ಟೊಯೊಟಾ ಇನ್ನೋವಾ ಹೈಕ್ರಾಸ್‌ಗಳು ಅತ್ಯುತ್ತಮವಾದ ಆಯ್ಕೆಯಾಗಲಿವೆ. ಬನ್ನಿ.. ಇವುಗಳ ಬೆಲೆ ಎಷ್ಟು, ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

ಅರಮನೆಯಂತಹ ಐಷಾರಾಮಿ ಕಾರು ಖರೀದಿಸಿದ ನಟ

ಐಷಾರಾಮಿ ಕಾರು ತಯಾರಕ ಕಂಪನಿಯಾಗಿರುವ 'ಲೆಕ್ಸಸ್' ತನ್ನ LM 350h ಅಲ್ಟ್ರಾ ಲಕ್ಸುರಿ MPV ಮೂಲಕ ಭಾರತದಲ್ಲಿ ಶ್ರೀಮಂತರನ್ನು ತನ್ನೆಡೆಗೆ ಸೆಳೆಯುತ್ತಿದೆ. ಅದರಲ್ಲೂ ಬಾಲಿವುಡ್ ಸೆಲೆಬ್ರಿಟಿಗಳಲ್ಲಿ ಬೇಗನೆ ಅಚ್ಚುಮೆಚ್ಚಿನ ಕಾರಾಗಿ ಗುರ್ತಿಸಿಕೊಳ್ಳುತ್ತಿದೆ. ಈ ಕಾರು ತನ್ನ ಹೆಚ್ಚುತ್ತಿರುವ ಜನಪ್ರಿಯತೆಯನ್ನು ಪ್ರತಿಬಿಂಬಿಸುತ್ತದೆ. ಇದರ ಎಕ್ಸ್-ಶೋರೂಂ ಬೆಲೆ ರೂ. 2.70 ಕೋಟಿ, ಆನ್-ರೋಡ್ ಬೆಲೆ ಸುಮಾರು ರೂ. 3.20 ಕೋಟಿ ದಾಟಬಹುದು. ಇತ್ತೀಚೆಗೆ ಬಾಲಿವುಡ್ ನಟ ವಿಕ್ಕಿ ಕೌಶಲ್ ಲೆಕ್ಸಸ್ LM 350h 4-ಸೀಟರ್ ಅಲ್ಟ್ರಾ ಲಕ್ಸರಿ MPV ಯನ್ನು ಖರೀದಿಸಿದ್ದಾರೆ.

Toyota: ಸಿದ್ಧರಾಗಿ.. 2026ರಲ್ಲಿ 3 ಗಟ್ಟಿಮುಟ್ಟಾದ ಹೊಸ ಟೊಯೊಟಾ..

ಟೊಯೊಟಾ (Toyota) ಕಂಪನಿಗೆ '2026' ಮಹತ್ವದ ವರ್ಷವಾಗಿದೆ. ವಿವಿಧ ಹೊಚ್ಚ ಹೊಸ ಕಾರುಗಳನ್ನು ಬಿಡುಗಡೆಗೊಳಿಸಲು ತಯಾರಿ ಮಾಡಿಕೊಳ್ಳುತ್ತಿದೆ. ಬಹುಮುಖ್ಯವಾಗಿ ಅರ್ಬನ್ ಕ್ರೂಸರ್ ಬಿಇವಿ, 9ನೇ ತಲೆಮಾರಿನ ಹಾಗೂ ನವೀಕರಣಗೊಂಡ ಅರ್ಬನ್ ಕ್ರೂಸರ್ ಹೈರೈಡರ್ ಕಾರುಗಳು ಅದ್ದೂರಿಯಾಗಿ ಮಾರಾಟಕ್ಕೆ ಬರಲಿವೆ. ಇವುಗಳು ತುಂಬಾ ಚೆನ್ನಾಗಿರುವ ವಿನ್ಯಾಸ ಹೊಂದಿರಲಿದ್ದು, ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದಿರಲಿವೆ. ಜೊತೆಗೆ ಸ್ಪರ್ಧಾತ್ಮಕ ಬೆಲೆಯಲ್ಲಿಯೂ ಗ್ರಾಹಕರ ಖರೀದಿಗೆ ಲಭ್ಯವಾಗುವ ನಿರೀಕ್ಷೆಯಿದೆ.
Advertisement

ಮಾರುಕಟ್ಟೆ ವಶಪಡಿಸಿಕೊಳ್ಳಲು ಒಂದಾದ 2 ದೈತ್ಯ ಕಂಪನಿಗಳು

ಹೀರೋ ಮೋಟೋಕಾರ್ಪ್ ಮತ್ತು ಹಾರ್ಲೆ-ಡೇವಿಡ್ಸನ್ ಪಾಲುದಾರಿಕೆಯಲ್ಲಿ ಅಭಿವೃದ್ಧಿಪಡಿಸಿದ ಪ್ರೀಮಿಯಂ ಮೋಟಾರ್‌ಸೈಕಲ್ ಶ್ರೇಣಿಗೆ ಹೊಸ ಸೇರ್ಪಡೆಯನ್ನು ಘೋಷಿಸಿವೆ. ಹೊಚ್ಚ ಹೊಸ ಹಾರ್ಲೆ - ಡೇವಿಡ್ಸನ್ H-D X440 T ಬೈಕ್ ಅನ್ನು ಹೊಸ ಅಪ್‌ಡೇಟ್‌ಗಳೊಂದಿಗೆ ಬಿಡುಗಡೆ ಮಾಡಲಾಗಿದೆ. ಈ ಬೈಕ್ ಹೈ- ಪರ್ಫಾಮೆನ್ಸ್ ಹಾಗೂ ಆಧುನಿಕ ವಿನ್ಯಾಸವನ್ನು ಹೊಂದಿದ್ದು, ಸವಾರರಿಗೆ ಉತ್ತಮ ಸವಾರಿ ಅನುಭವ ನೀಡುತ್ತದೆ. ಹೊಸ ಮಾಡಲ್ ಪರಿಚಯಿಸುತ್ತಲೇ ಸವಾರರಿಗೆ ಇತ್ತೀಚಿನ ಆಧುನಿಕ ಫೀಚರ್ ‌ಗಳನ್ನು ಸೇರಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

Tata Sierra Suv Review: ಹೊಸ ಟಾಟಾ ಸಿಯೆರಾ ರಿವ್ಯೂ!

ಟಾಟಾ ಸಿಯೆರಾ ವಿಮರ್ಶೆ: ಬೆಲೆ, ವಿಶೇಷಣಗಳು, ವೈಶಿಷ್ಟ್ಯಗಳು ಮತ್ತು ಕಾರ್ಯಕ್ಷಮತೆಯ ಬಗ್ಗೆ ತಿಳಿಯಿರಿ. ಇದು ಮಾರುಕಟ್ಟೆಯಲ್ಲಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಕಂಡುಕೊಳ್ಳಿ.

4680 ಭಾರತ್ ಸೆಲ್ ಸ್ಕೂಟರ್‌ಗಳ ಸಾಮೂಹಿಕ ವಿತರಣೆ ಪ್ರಾರಂಭಿಸಿದ ಓಲಾ

ಓಲಾ ಎಲೆಕ್ಟ್ರಿಕ್ ತನ್ನ 4680 ಭಾರತ್ ಸೆಲ್ ಪವರ್ ವಾಹನಗಳ ಸಾಮೂಹಿಕ ವಿತರಣೆ ಪ್ರಾರಂಭಿಸಿರುವುದಾಗಿ ಘೋಷಿಸಿದೆ. ಕಂಪನಿಯು ಸ್ಥಳೀಯವಾಗಿ ತಯಾರಿಸಿದ 4680 ಭಾರತ್ ಸೆಲ್ ಬ್ಯಾಟರಿ ಪ್ಯಾಕ್‌ ಅನ್ನು ಹೊಂದಿರುವ ಮೊದಲ ವಾಹನ ಓಲಾ S1 Pro+ (5.2kWh) ಆಗಿದ್ದು, ಇದು ಹೆಚ್ಚಿನ ರೇಂಜ್, ಉತ್ತಮ ಕಾರ್ಯಕ್ಷಮತೆ ಮತ್ತು ವರ್ಧಿತ ಸುರಕ್ಷತೆಯನ್ನು ನೀಡುತ್ತದೆ. ವಾಹನಗಳಲ್ಲಿ ತನ್ನದೇ ಆದ ಬ್ಯಾಟರಿ ಪ್ಯಾಕ್‌ಗಳೊಂದಿಗೆ, ಓಲಾ ಎಲೆಕ್ಟ್ರಿಕ್ ಈಗ ಬ್ಯಾಟರಿ ಪ್ಯಾಕ್ ಮತ್ತು ಸೆಲ್ ಉತ್ಪಾದನಾ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಸ್ವಂತವಾಗಿ ಹೊಂದಿರುವ ಭಾರತದ ಮೊದಲ ಕಂಪನಿಯಾಗಿದೆ ಎಂದು ಕಂಪನಿ ತಿಳಿಸಿದೆ.

ಈ 2025ರಲ್ಲಿ ಮಾರಾಟಕ್ಕೆ ಬಂದ ಪ್ರಮುಖ ಕಾರುಗಳಿವು.. ಜನ ಮುಗಿಬಿದ್ದು..

'2025' ವಾಹನ ತಯಾರಕ ಕಂಪನಿಗಳಿಗೆ ಮಹತ್ವದ ವರ್ಷವಾಗಿದೆ. ಹಲವು ಕಾರುಗಳು ಅದ್ದೂರಿಯಾಗಿ ಬಿಡುಗಡೆಗೊಂಡಿವೆ. ಬಹುಮುಖ್ಯವಾಗಿ ಜನಪ್ರಿಯ ಎಸ್‌ಯುವಿಗಳಾದ ರೆನಾಲ್ಟ್ ಕೈಗರ್ ಫೇಸ್‌ಲಿಫ್ಟ್, ವಿನ್‌ಫಾಸ್ಟ್ ವಿಎಫ್6 ಹಾಗೂ ಮಹೀಂದ್ರಾ ಬೊಲೆರೊ ಫೇಸ್‌ಲಿಫ್ಟ್‌ಗಳನ್ನು ಮಾರಾಟಕ್ಕೆ ತರಲಾಗಿತ್ತು. ಇವು ಆಕರ್ಷಕವಾದ ವಿನ್ಯಾಸ ಹೊಂದಿದ್ದು, ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿವೆ. ಬನ್ನಿ, ಈ ಕಾರುಗಳ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.
Advertisement

Tata: 11.49 ಲಕ್ಷ.. ಹೊಸ ಟಾಟಾ ಸಿಯೆರಾ ಕಾರಿನ ಆನ್-ರೋಡ್..

ಈಚೆಗೆ ಟಾಟಾ ಸಿಯೆರಾ (Tata Sierra) ಎಸ್‌ಯುವಿಯನ್ನು ಬಿಡುಗಡೆಗೊಳಿಸಲಾಯಿತು. ಇದು ಹೆಚ್ಚು ಅತ್ಯಾಧುನಿಕವಾಗಿದ್ದು, ನಾನಾ ಬಗೆಯ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ರೂ.11.49 ಲಕ್ಷದಿಂದ ರೂ.18.49 ಲಕ್ಷ (ಎಕ್ಸ್-ಶೋರೂಂ) ದರವನ್ನು ಹೊಂದಿದೆ. ನೀವು ಹೊಚ್ಚ ಹೊಸ ಕಾರೊಂದನ್ನು ಖರೀದಿಸಲು ಆಲೋಚಿಸಿದ್ದೀರಾ.. ಹಾಗಾದರೆ 'ಸಿಯೆರಾ' ಬೆಸ್ಟ್ ಚಾಯ್ಸ್ ಆಗಲಿದೆ. ನಾವಿಲ್ಲಿ ಈ ಕಾರಿನ ಆನ್-ರೋಡ್ ದರ (On Road Price) ಹಾಗೂ ಇಎಂಐ (EMI) ಕುರಿತಂತೆ ಸಂಕ್ಷಿಪ್ತ ವಿವರಗಳನ್ನು ತಿಳಿಸಿಕೊಟ್ಟಿದ್ದೇವೆ.

ಬಡವರು ತೆಗೆದುಕೊಳ್ಳಬಹುದು: ಇವೇ 5 ಜನಪ್ರಿಯ 125 ಸಿಸಿ ಸ್ಕೂಟರ್‌ಗಳು..

ದೇಶದಲ್ಲಿ ಸ್ಕೂಟರ್‌ಗಳಿಗೆ ಹೆಚ್ಚಿನ ಬೇಡಿಕೆಯಿದೆ. ಇವು ದಿನಬಳಕೆಗೆ ಹೆಚ್ಚು ಸೂಕ್ತವಾಗಿದ್ದು, ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ನೀವು ಹೊಚ್ಚ ಹೊಸ 125 ಸಿಸಿ ಸ್ಕೂಟರ್‌ವೊಂದನ್ನು ಖರೀದಿ ಮಾಡಲು ಆಲೋಚಿಸಿದ್ದೀರಾ.. ಹಾಗಾದರೆ, ಹೋಂಡಾ ಆಕ್ಟಿವಾ 125, ಟಿವಿಎಸ್ ಎನ್‌ಟಾರ್ಕ್ 125, ಸುಜುಕಿ ಆಕ್ಸೆಸ್ 125, ಹೀರೋ ಡೆಸ್ಟಿನಿ 125 ಹಾಗೂ ಟಿವಿಎಸ್ ಜುಪಿಟರ್ 125ಗಳು ಅತ್ಯುತ್ತಮ ಆಯ್ಕೆಯಾಗಲಿವೆ. ಬನ್ನಿ, ಈ ಸ್ಕೂಟರ್‌ಗಳ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

kia: ಕೊರಿಯಾ ಪವರ್ ತೋರಿಸಲು ಕಿಯಾ ಸಿದ್ಧತೆ.. ಶೀಘ್ರ ಹೊಸ ಕಾರು..

ದಕ್ಷಿಣ ಕೊರಿಯಾ ಮೂಲದ ಕಿಯಾ ಮೋಟಾರ್ಸ್ (kia motors), ಪ್ರಮುಖ ವಾಹನ ತಯಾರಕ ಕಂಪನಿಯಾಗಿದೆ. ಭಾರತದ ಮಾರುಕಟ್ಟೆಯಲ್ಲಿ 'ಸೆಲ್ಟೋಸ್' ಎಸ್‌ಯುವಿಯನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಸದ್ಯ, ಇದೇ ಕಾರನ್ನು ಹೊಸ ರೂಪದಲ್ಲಿ ಬಿಡುಗಡೆಗೊಳಿಸಲು ಕಂಪನಿಯು ತಯಾರಿ ಮಾಡಿಕೊಳ್ಳುತ್ತಿದೆ. 2ನೇ ತಲೆಮಾರಿನ 'ಸೆಲ್ಟೋಸ್'ನ್ನು ಬುಧವಾರ (ಡಿ.10) ಅಂತರರಾಷ್ಟ್ರೀಯ ಮಟ್ಟದಲ್ಲಿ ಅನಾವರಣಗೊಳಿಸಲಾಗುತ್ತದೆ. ಬನ್ನಿ.. ಈ ಕಾರಿನ ನಿರೀಕ್ಷಿತ ಬೆಲೆ ಎಷ್ಟು, ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

Mahindra: 7-ಸೀಟರ್.. 17 ಕಿ.ಮೀ ಮೈಲೇಜ್, 13.66 ಲಕ್ಷ..

ಮಹೀಂದ್ರಾ ಎಕ್ಸ್‌ಯುವಿ700 (Mahindra XUV700) ಪ್ರಮುಖ ಫ್ಯಾಮಿಲಿ ಎಸ್‍ಯುವಿ ಎಂದೇ ಹೆಸರುವಾಸಿಯಾಗಿದೆ. ಇದು ತುಂಬಾ ಅಚ್ಚುಕಟ್ಟಾದ ವಿನ್ಯಾಸ ಹೊಂದಿದ್ದು, ಹತ್ತಾರು ನವೀನ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ನೀವು ಹೊಚ್ಚ ಹೊಸ ಕಾರೊಂದನ್ನು ಕೊಂಡುಕೊಳ್ಳಲು ಪ್ಲ್ಯಾನ್ ಮಾಡಿದ್ದೀರಾ.. ಹಾಗಾದರೆ 'ಎಕ್ಸ್‌ಯುವಿ700' ಬೆಸ್ಟ್ ಚಾಯ್ಸ್ ಆಗಲಿದೆ. ಬನ್ನಿ.. ಈ ಎಸ್‌ಯುವಿಯ ಬೆಲೆ ಎಷ್ಟು, ವಿಶೇಷತೆಗಳೇನು ಕುರಿತಂತೆ ಪ್ರಮುಖಾಂಶಗಳು ಏನೆಂಬುದನ್ನು ತಿಳಿಯೋಣ.
Advertisement

ಮಾರುತಿಯ ಮೊದಲ ಎಲೆಕ್ಟ್ರಿಕ್ ಕಾರು ಶೀಘ್ರದಲ್ಲೆ ಬಿಡುಗಡೆ

ಮಾರುತಿ ಸುಜುಕಿ ತನ್ನ ಮೊದಲ ಎಲೆಕ್ಟ್ರಿಕ್ SUV ಇ-ವಿಟಾರಾ (e VITARA) ವನ್ನು ಭಾರತದಲ್ಲಿ ಶೀಘ್ರದಲ್ಲೆ ಬಿಡುಗಡೆ ಮಾಡಲಿದೆ. ಅದಕ್ಕೂ ಮುನ್ನ ಮಾರುತಿ ಭಾರತದಾದ್ಯಂತ 1,500 ವಿದ್ಯುತ್ ವಾಹನ-ಸಿದ್ಧ ಸೇವಾ ಕಾರ್ಯಾಗಾರಗಳನ್ನು ಸಿದ್ಧಪಡಿಸಿದೆ. 2030ರ ವೇಳೆಗೆ, ವಿಶಾಲವಾದ, ರಾಷ್ಟ್ರವ್ಯಾಪಿ ಚಾರ್ಜಿಂಗ್ ನೆಟ್‌ವರ್ಕ್ ಮೂಲಕ ಗ್ರಾಹಕರಿಗೆ ಅನುಕೂಲಕರವಾಗಿಸುವ ಗುರಿಯನ್ನು ಮಾರುತಿ ಹೊಂದಿದೆ. ಅಲ್ಲದೆ ಎಲಕ್ಟ್ರಿಕ್ ವಾಹನಗಳ ಮಾಲೀಕತ್ವವನ್ನು ಸರಳಗೊಳಿಸಲು ಎಲ್ಲಾ ಮುಂಜಾಗ್ರತೆ ವಹಿಸುತ್ತಿದೆ. ಮಾರುತಿಯ ಮೊದಲ ಎಲೆಕ್ಟ್ರಿಕ್ SUV ಬಗ್ಗೆ ನಮಗೆ ಲಭ್ಯವಿರುವ ಪ್ರಮುಖ ಅಂಶಗಳು ಇಲ್ಲಿವೆ.