ಈ ಬಡವರ ಬಂಡಿಗೆ 5 ಬದಲಿ ಬೈಕ್‌ಗಳಿವು.. ಫುಲ್ ಟ್ಯಾಂಕ್ ಮಾಡಿಸಿದ್ರೆ..

ಹೋಂಡಾ ಶೈನ್ 125 (Honda Shine 125) ಪ್ರಖ್ಯಾತ ಮೋಟಾರ್‌ಸೈಕಲ್‌ ಎಂದೇ ಮನೆ ಮಾತಾಗಿದೆ. ಅಗ್ಗದ ನಿರ್ವಹಣಾ ವೆಚ್ಚ ಹೊಂದಿದ್ದು, ಉತ್ತಮ ಇಂಧನ ದಕ್ಷತೆಗೂ ಹೆಸರುವಾಸಿಯಾಗಿದೆ. ರೂ.80,852 ರಿಂದ ರೂ.85,211 (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಒಳಗೊಂಡಿದೆ. ಪರ್ಲ್ ಇಗ್ನಿಯಸ್ ಬ್ಲ್ಯಾಕ್, ರೆಬೆಲ್ ರೆಡ್ ಮೆಟಾಲಿಕ್, ಡೀಸೆಂಟ್ ಬ್ಲೂ ಮೆಟಾಲಿಕ್ ಮತ್ತು ಪರ್ಲ್ ಸೈರನ್ ಬ್ಲೂ ಎಂಬ ಬಣ್ಣಗಳೊಂದಿಗೂ ಲಭ್ಯವಿದೆ. 162 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 1,285 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ.

Maruti Suzuki: 23 Km ಮೈಲೇಜ್.. 8-ಸೀಟರ್.. ಈ ಜನಪ್ರಿಯ ಮಾರುತಿ..

ಮಾರುತಿ ಸುಜುಕಿ ಇನ್ವಿಕ್ಟೋ (Maruti Suzuki Invicto) ಪ್ರಖ್ಯಾತ ಎಂಪಿವಿಯಾಗಿ ಹೊರಹೊಮ್ಮಿದೆ. ಇದು ಅಧಿಕ ಸಂಖ್ಯೆಯ ಆಸನಗಳನ್ನು ಒಳಗೊಂಡಿದ್ದು, ತುಂಬು ಕುಟುಂಬಗಳಿಗೆ ಫರ್ಪೆಕ್ಟ್ ಆಗಿದೆ. ಒಂದಷ್ಟು ಗ್ರಾಹಕರು ಸಹ ಇಷ್ಟಪಟ್ಟು ಕೊಳುತ್ತಿದ್ದಾರೆ. ನೀವು ಹೊಚ್ಚ ಹೊಸ ಕಾರೊಂದನ್ನು ಖರೀದಿಸಲು ಆಲೋಚಿಸಿದ್ದೀರಾ.. ಹಾಗಾದರೆ ಇದೇ 'ಇನ್ವಿಕ್ಟೋ' ಬೆಸ್ಟ್ ಚಾಯ್ಸ್ ಆಗಲಿದೆ. ಬನ್ನಿ, ಈ ಎಂಪಿವಿಯ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

Maruti: ಬೈಕ್ ಬೆಲೆಗೆ ಸಿಗುತ್ತೆ ಈ ಮಾರುತಿ ಕಾರು.. 33 Km ಮೈಲೇಜ್..

ಮಾರುತಿ ಸುಜುಕಿ ಎಸ್-ಪ್ರೆಸ್ಸೊ (Maruti Suzuki S-Presso) ಪ್ರಮುಖ ಹ್ಯಾಚ್‌ಬ್ಯಾಕ್ ಆಗಿ ಹೊರಹೊಮ್ಮಿದೆ. ಇದನ್ನು ಮಧ್ಯಮ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ಕೊಂಡುಕೊಳ್ಳುತ್ತಿದ್ದಾರೆ. ಆದರೂ ಈ 2026ರ ಜನವರಿಯಲ್ಲಿ 'ಎಸ್-ಪ್ರೆಸ್ಸೊ' ಮಾರಾಟವು ಇಳಿಕೆಯಾಗಿದೆ. ಬರೀ 1,954 ಯುನಿಟ್‌ಗಳನ್ನು ಗ್ರಾಹಕರಿಗೆ ವಿತರಿಸಲಾಗಿದೆ. 2025ರ ಇದೇ ಅವಧಿಯಲ್ಲಿ 2,895 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ - ಅಂಶವನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ -32.50% ಕುಸಿತವಾಗಿದೆ.

ವ್ಯಾಟಿಕನ್ ಸರ್ಕಾರಕ್ಕೆ 2 ಐಕ್ಯೂಬ್ ಸ್ಕೂಟರ್‌ಗಳನ್ನು ವಿತರಿಸಿದ TVS

ಪ್ರಮುಖ ದ್ವಿಚಕ್ರ ವಾಹನ ತಯಾರಕರಾದ ಟಿವಿಎಸ್ ಮೋಟಾರ್ ಕಂಪನಿ ಮತ್ತು ಎಕ್ಸೆಲೆಂಟಿಯಾ, ವ್ಯಾಟಿಕನ್ ಸಿಟಿ ಸ್ಟೇಟ್ ಗವರ್ನರೇಟ್‌ಗೆ ಎರಡು ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಡೆಲಿವರಿ ನೀಡಿದೆ. ಫೆಬ್ರವರಿ 5 ರಂದು ನಡೆದ ಅಧಿಕೃತ ಡೆಲಿವರಿಯು ವ್ಯಾಟಿಕನ್ ಮತ್ತು ಎಕ್ಸೆಲೆಂಟಿಯಾ ನಡುವಿನ ಏಕೀಕೃತ ಸಹಯೋಗದ ಭಾಗವಾಗಿದೆ ಎಂದು ಟಿವಿಎಸ್ ತಿಳಿಸಿದೆ. ಟಿವಿಎಸ್ ಮೋಟಾರ್ ಇಟಾಲಿಯಾ ಪಾಲುದಾರಿಕೆಯಲ್ಲಿ ಎಕ್ಸೆಲೆಂಟಿಯಾ ಮಾಡಿದ ಈ ಡೆಲಿವರಿಯು ವ್ಯಾಟಿಕನ್ ಸಿಟಿ ಸ್ಟೇಟ್ ಗವರ್ನರೇಟ್ ಈಗಾಗಲೇ ಕೈಗೊಂಡಿರುವ ಪರಿಸರ ಪರಿವರ್ತನೆಯ ಪ್ರಕ್ರಿಯೆಯನ್ನು ಮತ್ತಷ್ಟು ಬಲಪಡಿಸುವ ಹೆಜ್ಜೆಯಾಗಿದೆ ಎಂದು ಹೇಳಿದೆ.
Advertisement

ಪೈಪೋಟಿಗೆ ಸಿದ್ಧ: ಬೆಲೆ ಇಷ್ಟೇನಾ.. ಅತಿ ಶೀಘ್ರದಲ್ಲೇ 5 ಹೊಸ..

ಭಾರತವು ವಿಶ್ವದಲ್ಲೇ ಅತಿದೊಡ್ಡ ಕಾರು ಮಾರುಕಟ್ಟೆಯನ್ನು ಹೊಂದಿದೆ. '2026' ವಾಹನ ತಯಾರಕ ಕಂಪನಿಗಳಿಗೆ ಮಹತ್ವದ ವರ್ಷವಾಗಿದೆ. ಅತಿ ಶೀಘ್ರದಲ್ಲೇ ಟಾಟಾ ಪಂಚ್ ಇವಿ ಫೇಸ್‌ಲಿಫ್ಟ್, ಮಾರುತಿ ಸುಜುಕಿ ಇ-ವಿಟಾರಾ, ಟಾಟಾ ಸಿಯೆರಾ ಇವಿ, ಟೊಯೊಟಾ ಅರ್ಬನ್ ಕ್ರೂಸರ್ ಎಬೆಲ್ಲಾ ಹಾಗೂ ಕಿಯಾ ಸೈರಸ್ ಇವಿಗಳು ಆದ್ದೂರಿಯಾಗಿ ಮಾರಾಟಕ್ಕೂ ಬರಲಿವೆ. ಬನ್ನಿ, ಇವುಗಳ ನಿರೀಕ್ಷಿತ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಕ್ಷಿಪ್ತವಾದ ವಿವರಗಳನ್ನು ತಿಳಿಯೋಣ.

Maruti: ಬಡವರ ಐಷಾರಾಮಿ ಕಾರಿದು: ಫುಲ್ ಡಿಮ್ಯಾಂಡ್, 32 ಕಿ.ಮೀ ಮೈಲೇಜ್

ಭಾರತದಲ್ಲಿ ಮಿಡ್‌ಸೈಜ್ ಹ್ಯಾಚ್‌ಬ್ಯಾಕ್ ವಿಭಾಗವು ತುಂಬಾ ಬೇಡಿಕೆ ಪಡೆದುಕೊಂಡಿದೆ, ಅದರಲ್ಲೂ ಮಾರುತಿ ಸುಜುಕಿ ಸ್ವಿಫ್ಟ್ (Maruti Suzuki Swift) ಮೊದಲ ಸಾಲಿನಲ್ಲಿ ನಿಲ್ಲುತ್ತದೆ. ತನ್ನ ಸ್ಟೈಲಿಷ್ ಲುಕ್ ಮತ್ತು ಆಕರ್ಷಕ ಡಿಸೈನ್ ಮಧ್ಯಮ ವರ್ಗದವರಿಗೆ ಫೆವರೆಟ್ ಆಯ್ಕೆಯಾಗಿದೆ. ಈ ಕಾರು ಪ್ರತಿ ತಿಂಗಳಲ್ಲಿ ದಾಖಲೆಯ ಮಟ್ಟದಲ್ಲಿ ಮಾರಾಟ ಕಾಣುತ್ತದೆ, ಇದರ ಹೆಚ್ಚಿನ ಮೈಲೇಜ್ ಹಾಗೂ ಕಡಿಮೆ ಮೇಂಟೆನನ್ಸ್ ಖರ್ಚು ಮಧ್ಯಮ ವರ್ಗದ ಗ್ರಾಹಕರಿಗೆ ಹೇಳಿ ಮಾಡಿಸಿದಂತಿರುತ್ತದೆ. ಹಾಗಾದ್ರೆ ಪ್ರಸ್ತುತ ಭಾರತದಲ್ಲಿ ಈ ಕಾರಿನ ಬೆಲೆ, ಫೀಚರ್ಸ್, ಮೈಲೇಜ್ ಹಾಗೂ ಎಂಜಿನ್ ವಿಶೇಷತೆಗಳನ್ನು ಇಲ್ಲಿ ನೋಡೋಣ.

ಒಂದು ರಗಡ್.. ಮತ್ತೊಂದು ಸ್ಟೈಲಿಶ್.. ಅದ್ಭುತ ಎಸ್‌ಯುವಿಗಳಿವು..

ಈಚೆಗೆ 2026ರ ಹೊಸ ತಲೆಮಾರಿನ ರೆನಾಲ್ಟ್ ಡಸ್ಟರ್ (Renault Duster) ಎಸ್‌ಯುವಿಯನ್ನು ಅನಾವರಣಗೊಳಿಸಲಾಯಿತು. ಇದಕ್ಕೆ ಮಾರುತಿ ಸುಜುಕಿ ವಿಕ್ಟೋರಿಸ್ (Maruti Suzuki Victoris) ನೇರವಾದ ಎದುರಾಳಿಯಾಗಿದೆ. ಇವೆರೆಡು ಕಾರುಗಳು ನೋಡಲು ತುಂಬಾ ಚೆನ್ನಾಗಿದ್ದು, ಹಲವು ಹೊಸತನಗಳಿಗೂ ಸಾಕ್ಷಿಯಾಗಿವೆ. ನಾವಿಲ್ಲಿ ಈ ಎಸ್‌ಯುವಿಗಳ ಬೆಲೆ, ಕಾರ್ಯಕ್ಷಮತೆ ಹಾಗೂ ವೈಶಿಷ್ಟ್ಯಗಳ ಕುರಿತು ಹೋಲಿಕೆ ಮಾಡಿದ್ದೇವೆ. ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಮುಂದಿನ ಪೀಳಿಗೆಯ ಕಾರುಗಳಿಗಾಗಿ ಮೊಬೈಲ್‌ಐ ಸೂಪರ್‌ವಿಷನ್ ಆಯ್ಕೆ

ಮೊಬೈಲ್‌ಐ ಗ್ಲೋಬಲ್ ಇಂಕ್. (Mobileye Global Inc.) ಇಂದು ತನ್ನ ಸೂಪರ್‌ವಿಷನ್ ಮತ್ತು ಸರೌಂಡ್ ADAS ಹ್ಯಾಂಡ್ಸ್ - ಫ್ರೀ, ಐ - ಆನ್ ಅಡ್ವಾನ್ಸ್‌ಡ್ ಡ್ರೈವಿಂಗ್ ಅಸಿಸ್ಟೆನ್ಸ್ ಸಿಸ್ಟಮ್‌ಗಳನ್ನು, ಮಹೀಂದ್ರಾ (Mahindra) ಕಂಪನಿಯು ತನ್ನ ಮುಂಬರುವ ಕನಿಷ್ಠ ಆರು ಕಾರು ಮಾಡಲ್‌ಗಳಿಗೆ ಆಯ್ಕೆ ಮಾಡಿದೆ ಎಂದು ಘೋಷಿಸಿದೆ. ಇದರ ಉತ್ಪಾದನೆಯು 2027 ರಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದ್ದು, ಎರಡೂ ಪರಿಹಾರಗಳನ್ನು ಮೊಬೈಲ್‌ಐನ ಐಕ್ಯೂ6 ಹೈ ಸಿಸ್ಟಮ್- ಆನ್ -ಚಿಪ್‌ನಿಂದ ನಿಯಂತ್ರಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
Advertisement

TATA: 7-ಸೀಟರ್‌ನ ಜನಪ್ರಿಯ ಟಾಟಾ ಕಾರಿದು.. ಬಿಸಿ ದೋಸೆಯಂತೆ ಸೇಲ್ಸ್..

ಟಾಟಾ ಸಫಾರಿ (Tata Safari) ಜನಮೆಚ್ಚಿದ ಎಸ್‌ಯುವಿಯಾಗಿದೆ. ಈ ಕಾರಿಗೆ ದಿನದಿಂದ ದಿನಕ್ಕೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಗ್ರಾಹಕರು ಸಹ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಕಳೆದ ತಿಂಗಳು (ಜನವರಿ - 2026) ಭಾರೀ ಸಂಖ್ಯೆಯೇ ಮಾರಾಟಗೊಂಡಿದೆ. ಒಟ್ಟು 2,375 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಿಸಲಾಗಿದೆ. 2024ರ ಇದೇ ಅವಧಿಯಲ್ಲಿ 1,548 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ - ಅಂಶವನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 53.42% ಬೆಳವಣಿಗೆಯಾಗಿದೆ.

Toyota: ಟೊಯೋಟಾ ಮೊದಲ EV: ಅರ್ಬನ್ ಕ್ರೂಸರ್ ಎಬೆಲ್ಲಾ ರಿವ್ಯೂ

ಟೊಯೋಟಾ ಅರ್ಬನ್ ಕ್ರೂಸರ್ ಎಬೆಲ್ಲಾ ವಿಮರ್ಶೆಯನ್ನು ಅನ್ವೇಷಿಸಿ. ಇದರ 543 ಕಿಮೀ ಶ್ರೇಣಿ, ಲೆವೆಲ್ 2 ADAS ಮತ್ತು ಪ್ರೀಮಿಯಂ ಒಳಾಂಗಣದ ಬಗ್ಗೆ ತಿಳಿಯಿರಿ. ನಿರೀಕ್ಷಿತ ಬೆಲೆ ಮತ್ತು ರೂಪಾಂತರಗಳನ್ನು ಇಲ್ಲಿ ನೋಡಿ.

ಪ್ರಖ್ಯಾತ ಟಿವಿಎಸ್ ಜುಪಿಟರ್‌ಗೆ 5 ಬದಲಿ ಸ್ಕೂಟರ್‌ಗಳಿವು..

ಟಿವಿಎಸ್ ಜುಪಿಟರ್ 125 (TVS Jupiter 125) ಜನಮೆಚ್ಚಿದ ಸ್ಕೂಟರ್ ಆಗಿದೆ. ಕಡಿಮೆ ನಿರ್ವಹಣಾ ವೆಚ್ಚ ಹೊಂದಿದ್ದು, ಉತ್ತಮ ಇಂಧನ ದಕ್ಷತೆಗೂ ಹೆಸರುವಾಸಿಯಾಗಿದೆ. ರೂ. 83,500 ರಿಂದ ರೂ.92,460 (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಒಳಗೊಂಡಿದೆ. ಐವರಿ ಬ್ರೌನ್, ಇಂಡಿಬ್ಲೂ, ಟೈಟಾನಿಯಂ ಗ್ರೇ, ಪ್ರಿಸ್ಟೈನ್ ವೈಟ್, ಡಾನ್ ಆರೆಂಜ್, ಸ್ಪಾರ್ಕ್ಲಿಂಗ್ ಬ್ಲ್ಯಾಕ್, ಎಲೈಟ್ ಗ್ರೀನ್ ಮತ್ತು ಮ್ಯಾಟ್ ಕಾಪರ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ. ಸಾಕಷ್ಟು ವಿಶಾಲವಾಗಿದ್ದು, 163 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 1,275 ಎಂಎಂ ವೀಲ್‌ಬೇಸ್‌ನ್ನು ಪಡೆದಿದೆ.

Renault Duster: ಎದುರಾಳಿಗಳ ಎದೆಯಲ್ಲಿ ಭಯ ಶುರು: ಬೆಲೆಯೆಷ್ಟು?

ಭಾರತದಲ್ಲಿ ಒಂದು ಕಾಲದಲ್ಲಿ ಧೂಳೆಬ್ಬಿಸಿದ್ದ ಎಸ್‌ಯುವಿಗಳು ಮತ್ತೆ ಹೊಸ ಲುಕ್‌ನಲ್ಲಿ ಬಿಡುಗಡೆಯಾಗುವ ಟ್ರೆಂಡ್ ಆರಂಭವಾಗಿದೆ. ಇತ್ತೀಚೆಗೆ ಟಾಟಾ ಮೋಟಾರ್ಸ್ ತನ್ನ ಸಿಯೆರಾವನ್ನು ಬಿಡುಗಡೆ ಮಾಡುವ ಮೂಲಕ ಈ ಟ್ರೆಂಡ್ ಆರಂಭಿಸಿದ್ದು, ಈಗ ರೆನಾಲ್ಟ್ ತನ್ನ ಡಸ್ಟರ್ (Renault Duster) ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಸುಮಾರು ನಾಲ್ಕು ವರ್ಷಗಳ ವಿರಾಮದ ನಂತರ, ರೆನಾಲ್ಟ್ ಡಸ್ಟರ್ ಅನ್ನು ಭಾರತೀಯ ಮಾರುಕಟ್ಟೆಗೆ ಮತ್ತೆ ತರಲಾಗುತ್ತಿದೆ. ಹೊಸ ಡಿಸೈನ್, ಸಂಪೂರ್ಣ ನವೀಕರಿಸಿದ ಕ್ಯಾಬಿನ್ ಮತ್ತು ಹೊಸ ಪವರ್‌ಟ್ರೇನ್ ಆಯ್ಕೆಗಳೊಂದಿಗೆ ನೀಡುಲಾಗುತ್ತಿದೆ. ಈ ಮುಂಬರುವ ರೆನಾಲ್ಟ್ ಡಸ್ಟರ್ ಬಗ್ಗೆ ತಿಳಿದುಕೊಳ್ಳಬೇಕಾದ ಐದು ಪ್ರಮುಖ ವಿಷಯಗಳು ಇಲ್ಲಿವೆ.
Advertisement

MG: ನಾಳೆ ಹೊಸ ಎಂಜಿ ಕಾರು ಬಿಡುಗಡೆ.. ಬೆಲೆ ಎಷ್ಟು, ವಿಶೇಷತೆಗಳೇನು?

ನಾಳೆ (ಫೆಬ್ರವರಿ 12) ಜೆ‌ಎಸ್‌ಡಬ್ಲ್ಯೂ ಎಂಜಿ ಮೋಟಾರ್ ಇಂಡಿಯಾ (JSW MG Motor India) ಹೊಚ್ಚ ಹೊಸ ಕಾರೊಂದನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಲಿದೆ. ಅದಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. 2025ರ ಭಾರತ್ ಮೊಬಿಲಿಟಿ ಎಕ್ಸ್‌ಪೋದಲ್ಲಿ ಅನಾವರಣಗೊಂಡಿದ್ದ ದೊಡ್ಡ ಗಾತ್ರದ ಫ್ಯಾಮಿಲಿ ಎಸ್‌ಯುವಿ 'ಮೆಜೆಸ್ಟರ್'ನ್ನು ಮಾರಾಟಕ್ಕೆ ತರಲಿದೆ. ಬನ್ನಿ, ನೂತನ ಕಾರಿನ ನಿರೀಕ್ಷಿತ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

Citroen: 320 ಕಿ.ಮೀ ರೇಂಜ್.. ಕೈಗೆಟುಕುವ ಬೆಲೆಯ ಈ ಸಿಟ್ರನ್ ಕಾರಿನ..

ಸಿಟ್ರನ್ ಇಸಿ3 (Citroen eC3) ಪ್ರಮುಖ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಆಗಿದೆ. ಪ್ರತಿ ತಿಂಗಳು ಸ್ಪರ್ಧಾತ್ಮಕ ಸಂಖ್ಯೆಯೂ ಮಾರಾಟವಾಗುತ್ತಿದೆ. ಇದು ನೋಡಲು ತುಂಬಾ ಚೆನ್ನಾಗಿದ್ದು, ಹಲವು ಹೊಸತನಗಳಿಗೂ ಸಾಕ್ಷಿಯಾಗಿದೆ. ನೀವು ಹೊಚ್ಚ ಹೊಸ ಕಾರೊಂದನ್ನು ಖರೀದಿಸಲು ಪ್ಲ್ಯಾನ್ ಮಾಡಿದ್ದೀರಾ.. ಹಾಗಾದರೆ ಇದೇ 'ಇಸಿ3' ಬೆಸ್ಟ್ ಚಾಯ್ಸ್ ಆಗಲಿದೆ. ನಾವಿಲ್ಲಿ ಈ ಕಾರಿನ ಬೆಲೆ, ಕಾರ್ಯಕ್ಷಮತೆ ಹಾಗೂ ವಿಶೇಷತೆಗಳ ಕುರಿತಂತೆ ಪ್ರಮುಖಾಂಶಗಳು ಏನೆಂಬುದನ್ನು ತಿಳಿಸಿಕೊಟ್ಟಿದ್ದೇವೆ.

Activa VS Access: ಧೀರ್ಘ ಕಾಲದ ಪ್ರತಿಸ್ಪರ್ಧಿಗಳು: ಬೆಸ್ಟ್ ಯಾವುದು?

ಭಾರತದಲ್ಲಿ 125 ಸಿಸಿ ಸ್ಕೂಟರ್ ಕ್ಷೇತ್ರವು ಅತ್ಯಂತ ಸ್ಪರ್ಧಾತ್ಮಕ ದ್ವಿಚಕ್ರ ವಾಹನ ವಿಭಾಗಗಳಲ್ಲಿ ಒಂದಾಗಿದೆ. ಈ ವಿಭಾಗದಲ್ಲಿ ಎಷ್ಟೇ ಸ್ಕೂಟರ್‌ಗಳು ಬಿಡುಗಡೆಯಾದರೂ ಸುಜುಕಿ ಆಕ್ಸೆಸ್ 125 (Suzuki Access 125) ಮತ್ತು ಹೋಂಡಾ ಆಕ್ಟಿವಾ 125 (Honda Activa 125) ಮಾತ್ರ ಧೀರ್ಘ ಕಾಲದ ಪ್ರತಿಸ್ಪರ್ಧಿಗಳಾಗಿ ಉಳಿದಿವೆ. ಪ್ರಸ್ತುತ ಎರಡೂ ಸ್ಕೂಟರ್‌ಗಳು ಬಿಡುಗಡೆಯಾದಾಗಿನಿಂದ ಇಲ್ಲಿಯವರೆಗೆ ಪೈಪೋಟಿಯೊಂದಿಗೆ ಅಪ್‌ಡೇಟ್‌ಗಳನ್ನು ಪಡೆದುಕೊಂಡು ಗ್ರಾಹಕರನ್ನು ಸೆಳೆದಿವೆ. ಇದೀಗ ಸುಜುಕಿ ಇತ್ತೀಚೆಗೆ ಆಕ್ಸೆಸ್ 125 ನವೀಕರಿಸಿದ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಈ ಸ್ಕೂಟರ್ ಅನ್ನು ಆಕ್ಟಿವಾ 125 ಗೆ ಹೋಲಿಕೆ ಮಾಡಿದ್ದೇವೆ.

Hyundai: ನಿರೀಕ್ಷೆ ಮೀರಿ ಹೋಗುತ್ತಿವೆ ಬುಕಿಂಗ್ಸ್.. ಈ ಅಗ್ಗದ..

2025ರ ನವೆಂಬರ್ 4ರಂದು ಎರಡನೇ ತಲೆಮಾರಿನ ನೂತನ ಹ್ಯುಂಡೈ ವೆನ್ಯೂ (Hyundai Venue) ಎಸ್‌ಯುವಿಯನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಲಾಯಿತು. ಇದು ನೋಡಲು ತುಂಬಾ ಚೆನ್ನಾಗಿದ್ದು, ನಾನಾ ಬಗೆಯ ವೈಶಿಷ್ಟ್ಯಗಳಿಗೂ ಸಾಕ್ಷಿಯಾಗಿದೆ. ಈ ಕಾರಿಗೆ ಅಂದಿನಿಂದಲೇ ಭಾರೀ ಬೇಡಿಕೆ ಸೃಷ್ಟಿಯಾಗಿದ್ದು, ಖರೀದಿದಾರರು ಸಹ ಮುಗಿಬಿದ್ದು ಕೊಂಡುಕೊಳ್ಳುತ್ತಿದ್ದಾರೆ. ಸದ್ಯ, ಇದೇ 'ವೆನ್ಯೂ' ಬುಕ್ಕಿಂಗ್‌ನಲ್ಲಿ ಹೊಸದೊಂದು ಇತಿಹಾಸ ನಿರ್ಮಾಣಗೊಂಡಿದೆ. ಬನ್ನಿ.. ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.
Advertisement

SUZUKI: ಸುಜುಕಿ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಬಹುದೇ?

ಎಲೆಕ್ಟ್ರಿಕ್ ಸ್ಕೂಟರ್ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾದ SUZUKI e-Technology (ಸುಜುಕಿ ಇ-ತಂತ್ರಜ್ಞಾನ), ಕೇವಲ ವಿದ್ಯುದೀಕರಣದ ಬಗ್ಗೆ ಅಲ್ಲ - ಇದು ಬಾಳಿಕೆ ಬರುವ ಮತ್ತು ವಿಶ್ವಾಸಾರ್ಹ ತಂತ್ರಜ್ಞಾನವನ್ನು ತಲುಪಿಸುವ ಬಗ್ಗೆಯಾಗಿದೆ. ಸುಜುಕಿ ಎಲೆಕ್ಟ್ರಿಕ್ ವಾಹನವು ಕಠಿಣ ಪರೀಕ್ಷೆಗಳನ್ನು ಪೂರ್ಣಗೊಳಿಸಿದ್ದು, ಬ್ಯಾಟರಿ ಪ್ಯಾಕ್‌ನಿಂದ ಡ್ರೈವ್ ಸಿಸ್ಟಮ್‌ವರೆಗಿನ ಪ್ರತಿಯೊಂದು ಘಟಕವು ಬ್ರ್ಯಾಂಡ್‌ನ ಗುಣಮಟ್ಟ ಮತ್ತು ಬಾಳಿಕೆಯ ನಿಖರವಾದ ಮಾನದಂಡಗಳನ್ನು ಪೂರೈಸುತ್ತದೆ. ಈ ಸಂಪೂರ್ಣ ಎಂಜಿನಿಯರಿಂಗ್ ಪ್ರಯತ್ನವು ಸವಾರರಿಗೆ ಸುರಕ್ಷಿತ ವಾಹನವನ್ನು ನೀಡುವ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಸುಜುಕಿ ಹೇಳಿದೆ.

ಕಮ್ಮಿ ಬೆಲೆ.. 28 ಕಿ.ಮೀ ಮೈಲೇಜ್‌ನ ಟೊಯೊಟಾ ಕಾರಿದು.. ಮನಸೋತ ಜನ!

ಟೊಯೊಟಾ ಅರ್ಬನ್ ಕ್ರೂಸರ್ ಟೈಸರ್ (Toyota Urban Cruiser Taisor) ಜನಮೆಚ್ಚಿದ ಎಸ್‌ಯುವಿಯಾಗಿ ಹೊರಹೊಮ್ಮಿದೆ. ಪ್ರತಿ ತಿಂಗಳು ಸ್ಪರ್ಧಾತ್ಮಕ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಈ 2026ರ ಜನವರಿಯಲ್ಲಿಯೂ ಉತ್ತಮವಾಗಿಯೇ ಮಾರಾಟಗೊಂಡಿದೆ. ಒಟ್ಟು 2,521 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಣೆ ಮಾಡಲಾಗಿದೆ. 2025ರ ಇದೇ ಅವಧಿಯಲ್ಲಿ 2,470 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ - ಅಂಶವನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 2% ಪ್ರಗತಿಯಾಗಿದೆ.

20 ವರ್ಷ ಪೂರೈಸಿದ ಟಾಟಾ-ಸ್ಟೆಲಾಂಟಿಸ್ ಜಂಟಿ ಉದ್ಯಮ: ಹೊಸ ಒಪ್ಪಂದ

ಪ್ರಮುಖ ಜಾಗತಿಕ ವಾಹನ ತಯಾರಕ ಕಂಪನಿಯಾದ ಸ್ಟೆಲ್ಲಾಂಟಿಸ್ ಮತ್ತು ಭಾರತದ ಕಾರುಗಳು ಮತ್ತು SUV ಗಳ ಪ್ರಮುಖ ತಯಾರಕರಾದ ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್, ತಮ್ಮ 50:50 ಜಂಟಿ ಉದ್ಯಮವಾದ ಫಿಯೆಟ್ ಇಂಡಿಯಾ ಆಟೋಮೊಬೈಲ್ಸ್ ಪ್ರೈವೇಟ್ ಲಿಮಿಟೆಡ್ (FIAPL) ಮೂಲಕ 20 ವರ್ಷಗಳ ಯಶಸ್ವಿ ಪಾಲುದಾರಿಕೆಯನ್ನು ಸ್ಮರಿಸಿಕೊಂಡವೆ. ಈ ಸಂದರ್ಭವನ್ನು ಗುರುತಿಸಲು, ಎರಡೂ ಕಂಪನಿಗಳು ಇಂದು ಭಾರತ ಮತ್ತು ವಿದೇಶಗಳಲ್ಲಿ ಉತ್ಪಾದನೆ, ಎಂಜಿನಿಯರಿಂಗ್ ಮತ್ತು ಪೂರೈಕೆ ಸರಪಳಿಯಲ್ಲಿ ಸಹಯೋಗಕ್ಕಾಗಿ ಹೆಚ್ಚಿನ ಅವಕಾಶಗಳನ್ನು ಅನ್ವೇಷಿಸಲು ತಿಳುವಳಿಕೆ ಒಪ್ಪಂದಕ್ಕೆ (MoU) ಸಹಿ ಹಾಕಿದವು.

ಈ ಜನಪ್ರಿಯ ಬಜಾಜ್ ಬಂಡಿಗೆ 5 ಪರ್ಯಾಯ ಬೈಕ್‌ಗಳಿವು.. ಬರೀ 65,897..

ಬಜಾಜ್ ಪ್ಲಾಟಿನಾ 100 (Bajaj Platina 100) ಬಡವರ ಬಂಡಿ ಮನೆ ಮಾತಾಗಿದೆ. ಅಗ್ಗದ ನಿರ್ವಹಣಾ ವೆಚ್ಚ ಹೊಂದಿದ್ದು, ಉತ್ತಮ ಇಂಧನ ದಕ್ಷತೆಯಿಂದಲೂ ಹೆಚ್ಚು ಜನಪ್ರಿಯವಾಗಿದೆ. ರೂ.65,897 (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ತುಂಬಾ ಸರಳವಾದ ವಿನ್ಯಾಸವನ್ನು ಒಳಗೊಂಡಿದೆ. ಬ್ಲ್ಯಾಕ್ - ರೆಡ್, ಬ್ಲ್ಯಾಕ್ - ಸಿಲ್ವರ್, ಬ್ಲ್ಯಾಕ್ - ಗೋಲ್ಡ್ ಮತ್ತು ಬ್ಲ್ಯಾಕ್ - ಬ್ಲ್ಯೂ ಎಂಬ ಬಣ್ಣದ ಆಯ್ಕೆಯಲ್ಲಿಯೂ ಲಭ್ಯವಿದೆ. 200 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 1,255 ಎಂಎಂ ವೀಲ್‌ಬೇಸ್‌ನ್ನು ಪಡೆದಿದೆ.
Advertisement

Hyundai: ಪೈಪೋಟಿ ಹೆಚ್ಚಾಯ್ತು: ತೀರಾ ಕಮ್ಮಿ ಬೆಲೆಗೆ i20 ಘೋಷಣೆ

ಜನಪ್ರಿಯ ಹ್ಯುಂಡೈ ಹ್ಯಾಚ್‌ಬ್ಯಾಕ್ ಆಗಿರುವ i20 (Hyundai i20) ಕಾರಿನ ಆಯ್ದ ವೇರಿಯೆಂಟ್‌ಗಳನ್ನು ಈಗ ಸುಲಭವಾಗಿ ಖರೀದಿಸಬಹುದಾಗಿದ್ದು, ಹೊಸ ಬೆಲೆಗಳನ್ನು ಕೈಗೆಟುಕುವಂತೆ ಮಾಡಲಾಗಿದೆ. ಈಗ ಕೇವಲ ರೂ. 5,99,000 (ಎಕ್ಸ್‌ ಶೋರೂಂ) ಕ್ಕೆ ಹೊಸ ಆರಂಭಿಕ ಬೆಲೆಯೊಂದಿಗೆ i20 ಕಾರನ್ನು ಖರೀದಿಸಬಹುದಾಗಿದೆ. ಇದು ಹುಂಡೈನ ಗುಣಮಟ್ಟ, ನಾವೀನ್ಯತೆ ಮತ್ತು ಗ್ರಾಹಕರ ಸಂತೋಷದ ಭರವಸೆಯನ್ನು ಎತ್ತಿಹಿಡಿಯುತ್ತದೆ ಎಂದು ಹ್ಯುಂಡೈ ಮಾರಾಟ ಮುಖ್ಯಸ್ಥ ಸುನಿಲ್ ಮೂಲಚಂದಾನಿ ಹೇಳಿದ್ದಾರೆ. ಹೊಸ ಹ್ಯುಂಡೈ i20 ಕುರಿತು ನೀವು ತಿಳಿದುಕೊಳ್ಳಬೇಕಾದ ಪ್ರಮುಖ ವಿಷಯಗಳು ಇಲ್ಲಿವೆ.

Maruti: ಮಾರುತಿಯ ಹೈಬ್ರಿಡ್ ಕಾರಿದು.. 10.76 ಲಕ್ಷ, ಬೈಕ್‌ನಂತೆ..

ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ (Maruti Suzuki Grand Vitara) ಜನಮೆಚ್ಚಿದ ಎಸ್‌ಯುವಿಯಾಗಿ ಹೊರಹೊಮ್ಮಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಆದರೂ ಈ ಕಾರಿನ ಮಾರಾಟ ಸಂಖ್ಯೆ ಮಾತ್ರ ಇಳಿಮುಖವಾಗುತ್ತಿದೆ. ಕಳೆದ ತಿಂಗಳು (ಜನವರಿ-2026) ಅದು ಮುಂದುವರಿದಿದೆ. ಒಟ್ಟು 7,030 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಿಸಲಾಗಿದೆ. 2025ರ ಜನವರಿಯಲ್ಲಿ 15,784 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿಅಂಶವನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 55.46% ಕುಸಿತವಾಗಿದೆ.

Tata: ಟಾಟಾ ಗ್ರೀನ್‌ಫೀಲ್ಡ್ ಪ್ಲಾಂಟ್ ಉದ್ಘಾಟನೆ: 9,000 ಕೋಟಿ ಹೂಡಿಕೆ

ಭಾರತದ ಪ್ರಮುಖ ಕಾರು ಮತ್ತು ಎಸ್‌ಯುವಿ ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ (Tata Motors) ಮತ್ತು ಅದರ ಅಂಗಸಂಸ್ಥೆಯಾದ ಜಾಗ್ವಾರ್ ಲ್ಯಾಂಡ್ ರೋವರ್ (Jaguar Land Rover), ತಮಿಳುನಾಡಿನ ರಾಣಿಪೇಟೆ ಜಿಲ್ಲೆಯ ಪನಪಾಕ್ಕಂನಲ್ಲಿರುವ ತಮ್ಮ ಹೊಸ ಉತ್ಪಾದನಾ ಘಟಕವನ್ನು ಕಾರ್ಯಾರಂಭ ಮಾಡಿದೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮತ್ತು ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್‌ನ ಅಧ್ಯಕ್ಷ ಎನ್. ಚಂದ್ರಶೇಖರನ್ ಅವರು ಈ ಬೃಹತ್ ಉತ್ಪಾದನಾ ಘಟಕವನ್ನು ಉದ್ಘಾಟಿಸಿದರು. ಈ ಪ್ರಸ್ತುತ ಘಟಕವು ಟಾಟಾ ಮೋಟಾರ್ಸ್ ಮತ್ತು ಜಾಗ್ವಾರ್ ಲ್ಯಾಂಡ್ ರೋವರ್ ಎರಡೂ ಬ್ರ್ಯಾಂಡ್‌ಗಳ ಎಲೆಕ್ಟ್ರಿಕ್ ವಾಹನಗಳು ಸೇರಿದಂತೆ ಮುಂದಿನ ಪೀಳಿಗೆಯ ವಾಹನಗಳನ್ನು ತಯಾರಿಸಲು ಅಭಿವೃದ್ಧಿಪಡಿಸಲಾದ ಗ್ರೀನ್‌ಫೀಲ್ಡ್ ಪ್ಲಾಂಟ್‌ನ ಮೊದಲ ಹಂತವಾಗಿದ್ದು, ಸ್ಥಳೀಯವಾಗಿ ತಯಾರಾದ ಮೊದಲ ವಾಹನವಾಗಿ ಜೆಎಲ್‌ಆರ್‌ನ ರೇಂಜ್ ರೋವರ್ ಇವೋಕ್ ಮೂಡಿಬಂದಿದೆ. ಈ ಮಾಡಲ್ ತನ್ನ ಐಷಾರಾಮಿತನ ಮತ್ತು ಅಸಾಧಾರಣ ಕುಶಲತೆಗೆ ಜಾಗತಿಕವಾಗಿ ಹೆಸರುವಾಸಿಯಾಗಿದೆ.

ಇವೇ 5 ಪವರ್‌ಫುಲ್‌ 150 ಸಿಸಿ ಸ್ಕೂಟರ್‌ಗಳು.. ಸಾಮಾನ್ಯ ಜನರು..

ಭಾರತದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಸ್ಕೂಟರ್‌ಗಳಿಗೆ ವಿಪರೀತ ಬೇಡಿಕೆಯಿದೆ. ಇವು ದಿನಬಳಕೆಗೆ ಹೆಚ್ಚು ಸೂಕ್ತವಾಗಿದ್ದು, ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ನೀವು ಹೊಚ್ಚ ಹೊಸ ಸ್ಕೂಟರ್‌ವೊಂದನ್ನು ಕೊಂಡುಕೊಳ್ಳಲು ಪ್ಲ್ಯಾನ್ ಮಾಡಿದ್ದೀರಾ.. ಹಾಗಾದರೆ 150 ಸಿಸಿ ವಿಭಾಗದ ಟಿವಿಎಸ್ ಎನ್‌ಟಾರ್ಕ್, ಹೀರೋ ಜೂಮ್, ಯಮಹಾ ಏರೋಕ್ಸ್, ಏಪ್ರಿಲಿಯಾ ಎಸ್ಎಕ್ಸ್ಆರ್ ಹಾಗೂ ಏಪ್ರಿಲಿಯಾ ಎಸ್‌ಆರ್‌ಗಳು ಬೆಸ್ಟ್ ಚಾಯ್ಸ್ ಆಗಲಿವೆ. ಬನ್ನಿ, ಈ ನೂತನ ಸ್ಕೂಟರ್‌ಗಳ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಕ್ಷಿಪ್ತವಾದ ವಿವರಗಳನ್ನು ತಿಳಿಯೋಣ.
Advertisement

Toyota: ಟೊಯೋಟಾ ಹೈಬ್ರಿಡ್ ಕಾರು: 27+ ಕಿ.ಮೀ ಮೈಲೇಜ್: ಬೆಲೆಯೆಷ್ಟು?

ಜನಪ್ರಿಯ ಕಾರು ತಯಾರಕ ಕಂಪನಿಯಾದ ಟೊಯೋಟಾ (Toyota), ಭಾರತದಲ್ಲಿ ತನ್ನ ಹಲವು ಜನಪ್ರಿಯ ಮಾಡಲ್‌ಗಳಿಂದ ಖ್ಯಾತಿ ಪಡೆದಿದೆ. ಅದರಲ್ಲಿ ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್ (Toyota Urban Cruiser Hyryder) ಕೂಡ ಒಂದು. 2022 ರಲ್ಲಿ ಬಿಡುಗಡೆಯಾದಾಗಿನಿಂದ, ಅರ್ಬನ್ ಕ್ರೂಸರ್ ಹೈರೈಡರ್ ಭಾರತದಾದ್ಯಂತ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಹೈಬ್ರಿಡ್ ಎಂಜಿನ್, ಆಕರ್ಷಕ ಫೀಚರ್ಸ್, ಅತ್ಯುತ್ತಮ ಡಿಸೈನ್‌ನೊಂದಿಗೆ ಮಾರುಕಟ್ಟೆಯಲ್ಲಿ ಉತ್ತಮವಾಗಿ ಮಾರಾಟ ಕಾಣುವ ಬೆಸ್ಟ್ ಎಸ್‌ಯುವಿಯಾಗಿ ಮುಂದುವರಿಯುತ್ತಿದೆ. ಈ ಎಸ್‌ಯುವಿಯ ವಿಶೇಷತೆಗಳನ್ನು ನೋಡೋಣ.